Git/C3/Working-with-Remote-Repositories/Kannada

From Script | Spoken-Tutorial
Jump to: navigation, search
Time
Narration
00:01 Working with Remote Repositories ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು 'ರಿಮೋಟ್ ರಿಪಾಸಿಟರಿ' (Remote repository) ಎಂದರೇನು ಮತ್ತು
00:12 'ರಿಮೋಟ್ ರಿಪಾಸಿಟರಿ' ಗೆ ಹೇಗೆ ಡಾಟಾವನ್ನು ಸಿಂಕ್ರೊನೈಝ್ ಮಾಡುವುದು ಎಂದು ಕಲಿಯುತ್ತೇವೆ.
00:16 ಈ ಟ್ಯುಟೋರಿಯಲ್ ಗಾಗಿ ನಾನು, Ubuntu Linux 14.04
00:22 Git 2.3.2
00:25 gedit Text Editor ಮತ್ತು
00:28 Firefox ವೆಬ್-ಬ್ರೌಸರ್ ಗಳನ್ನು ಬಳಸುತ್ತಿದ್ದೇನೆ.
00:30 ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಮತ್ತು ಎಡಿಟರ್ ಗಳನ್ನು ಬಳಸಬಹುದು.
00:36 ಈ ಟ್ಯುಟೋರಿಯಲ್ ಗಾಗಿ, ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರಬೇಕು.
00:41 ಮತ್ತು ನೀವು ಮುಖ್ಯವಾದ Git ಕಮಾಂಡ್ ಗಳನ್ನು ತಿಳಿದಿರಬೇಕು.
00:46 ಇಲ್ಲವಾದಲ್ಲಿ, ಸಂಬಂಧಿತ Git ಟ್ಯುಟೋರಿಯಲ್ ಗಳಿಗಾಗಿ, ಕೆಳಗೆ ತೋರಿಸಿರುವ ಲಿಂಕ್ ಅನ್ನು ಭೇಟಿಮಾಡಿ.
00:52 ಮೊದಲು ನಾವು 'ರಿಮೋಟ್ ರಿಪಾಸಿಟರಿ' ಎಂದರೇನು ಎಂದು ಅರಿತುಕೊಳ್ಳೋಣ.
00:56 ಇಂಟರ್ನೆಟ್ ಅಥವಾ ಬೇರೆ ಯಾವುದೇ ನೆಟ್ವರ್ಕ್ ನಲ್ಲಿ ಇರಿಸಲಾದ ' ರಿಪಾಸಿಟರಿ' ಯನ್ನು 'ರಿಮೋಟ್ ರಿಪಾಸಿಟರಿ' ಎಂದು ಕರೆಯುತ್ತಾರೆ.
01:04 ಈ ಕೇಂದ್ರೀಕೃತ 'ರಿಪಾಸಿಟರಿ' ಯನ್ನು ಉಪಯೋಗಿಸಿ, ಜನರು ಪ್ರಪಂಚದಲ್ಲಿ ಎಲ್ಲಿಂದಾದರೂ, ಯಾವಾಗಲಾದರೂ ಒಂದು ಪ್ರಾಜೆಕ್ಟ್ ನಲ್ಲಿ ಪಾಲ್ಗೊಳ್ಳಬಹುದು.
01:13 ಉದಾಹರಣೆಗೆ, 3 ಬಳಕೆದಾರರು ಒಂದೇ 'ರಿಪಾಸಿಟರಿ' ಯಲ್ಲಿ ಒಟ್ಟಿಗೇ ಕೆಲಸ ಮಾಡಲು ಬಯಸುತ್ತಾರೆ ಎಂದುಕೊಳ್ಳೋಣ.
01:21 Git ಅವರಿಗೆ 'ರಿಮೋಟ್ ರಿಪಾಸಿಟರಿ' ಯ ಕಾಪಿಯನ್ನು ಅವರ ಲೋಕಲ್ ಸಿಸ್ಟಮ್ ನಲ್ಲಿ ತೆಗೆದುಕೊಳ್ಳಲು ಬಿಡುತ್ತದೆ.
01:28 ಇದನ್ನು clone (ಕ್ಲೋನ್) ಕಮಾಂಡ್ ಅನ್ನು ಉಪಯೋಗಿಸಿ ಮಾಡಲಾಗುವುದು.
01:31 ನಂತರ ಅವರು 'ಲೋಕಲ್ ರಿಪಾಸಿಟರಿ' ಯೊಂದಿಗೆ ಆಫ್ಲೈನ್ ನಲ್ಲೂ ಕೆಲಸ ಮಾಡಬಹುದು.
01:36 ಕೆಲಸ ಮುಗಿದ ಮೇಲೆ ಅವರು ಅದನ್ನು 'ಮೇನ್ ರಿಪಾಸಿಟರಿ' ಯೊಂದಿಗೆ ಪುನಃ ಸಿಂಕ್ರೋನೈಜ್ ಮಾಡಬೇಕು.
01:43 ಇದನ್ನು Push ಮತ್ತು pull ಕಮಾಂಡ್ ಗಳನ್ನು ಉಪಯೋಗಿಸಿ ಮಾಡಬಹುದು.
01:48 ಈ ಟ್ಯುಟೋರಿಯಲ್ ನ ಕೊನೆಯಲ್ಲಿ, ಈ ಕ್ರಿಯೆಯು ನಿಮಗೆ ಸಂಪೂರ್ಣವಾಗಿ ಅರ್ಥವಾಗುವುದು.
01:53 ಈಮೊದಲೇ ರಚಿಸಿದ GitHub repository ಯನ್ನು ನಾವು ಈಗ ಓಪನ್ ಮಾಡುವೆವು.
01:59 ಬಲಭಾಗದಲ್ಲಿ ಈ 'ರಿಪಾಸಿಟರಿ' ಯ URL ಅನ್ನು ನೋಡಬಹುದು.
02:05 URL ಅನ್ನು ಕಾಪಿ ಮಾಡೋಣ.
02:08 ಒಂದು ಲೋಕಲ್ 'ರಿಪಾಸಿಟರಿ' ಯನ್ನು ರಚಿಸಲು, URL ಅನ್ನು ಉಪಯೋಗಿಸಿ ಈ 'ರಿಪಾಸಿಟರಿ' ಯ ಕಾಪಿಯನ್ನು ನಾವು ಮಾಡುತ್ತೇವೆ.
02:16 ಈಗ ಟರ್ಮಿನಲ್ ಅನ್ನು ಓಪನ್ ಮಾಡೋಣ.
02:18 ಈಗ ಎರಡು ಬಳಕೆದಾರರು ಒಂದೇ 'ರಿಮೋಟ್ ರಿಪಾಸಿಟರಿ' ಯಲ್ಲಿ ಹೇಗೆ ಕೆಲಸ ಮಾಡಬಹುದು ಎಂದು ನೋಡೋಣ.
02:24 ಇದಕ್ಕಾಗಿ, ನಾನು ನನ್ನ ಡೆಸ್ಕ್ಟಾಪ್ ನಲ್ಲಿ User1 ಮತ್ತು User2 ಎಂಬ ಎರಡು ಡೈರಕ್ಟರಿಗಳನ್ನು ರಚಿಸಿದ್ದೇನೆ.
02:33 ದಯವಿಟ್ಟು ನಿಮ್ಮ ಡೆಸ್ಕ್ಟಾಪ್ ನಲ್ಲಿಯೂ ಇದೇ ರೀತಿ ಮಾಡಿಕೊಳ್ಳಿ.
02:36 ನಾನು ಡೈರಕ್ಟರಿಗಳನ್ನು ಒಂದೇ ಟರ್ಮಿನಲ್ ನಲ್ಲಿ, ಎರಡು ಬೇರೆ ಬೇರೆ ಟ್ಯಾಬ್ ಗಳಲ್ಲಿ ಓಪನ್ ಮಾಡುತ್ತೇನೆ.
02:43 ಮೊದಲನೇ ಟ್ಯಾಬ್ ನಲ್ಲಿ cd space User1 ಎಂದು ಟೈಪ್ ಮಾಡಿ.
02:49 ಎರಡನೇ ಟ್ಯಾಬ್ ಅನ್ನು ಓಪನ್ ಮಾಡಲು, File ಮೆನ್ಯುಅನ್ನು ಕ್ಲಿಕ್ ಮಾಡಿ ಮತ್ತು Open Tab ಅನ್ನು ಆಯ್ಕೆಮಾಡಿ.
02:55 ಎರಡನೇ ಟ್ಯಾಬ್ ನಲ್ಲಿ cd User2 ಎಂದು ಟೈಪ್ ಮಾಡಿ.
03:00 ಈಗ User1 ಟ್ಯಾಬ್ ಗೆ ಹೋಗೋಣ.
03:03 ಈಗ 'ರಿಮೋಟ್ ರಿಪಾಸಿಟರಿ'ಯ ಒಂದು ಕಾಪಿಯನ್ನು ಮಾಡಿಕೊಳ್ಳೋಣ.
03:08 git space clone ಎಂದು ಟೈಪ್ ಮಾಡಿ. ನಂತರ ಕಾಪಿ ಮಾಡಿಕೊಂಡ URL ಅನ್ನು ಪೇಸ್ಟ್ ಮಾಡಿ. ಸ್ಪೇಸ್ ಕೊಟ್ಟು ಈ ಕಮಾಂಡ್ ನ ಕೊನೆಯಲ್ಲಿ ಡಾಟ್ ಅನ್ನು ಟೈಪ್ ಮಾಡಿ.
03:17 ನಾವು ಅದೇ ಡಿರೆಕ್ಟರೀ ಯಲ್ಲಿ, ಅಂದರೆ User1 ನಲ್ಲಿ 'ರಿಪಾಸಿಟರಿ' ಯನ್ನು ಕಾಪಿ ಮಾಡುತ್ತಿದ್ದೇವೆ ಎಂಬುದನ್ನು Dot ಸೂಚಿಸುತ್ತದೆ.
03:25 ಇಲ್ಲವಾದಲ್ಲಿ, ಇದು stories ಎಂಬ ಹೆಸರಿನ 'ರಿಪಾಸಿಟರಿ' ಯೊಂದಿಗೆ ಹೊಸ ಡೈರೆಕ್ಟರಿ ಯನ್ನು ರಚಿಸುತ್ತದೆ.
03:31 ಈಗ Enter ಅನ್ನು ಒತ್ತಿ.
03:33 'ಕ್ಲೋನ್' ಕಮಾಂಡ್ ಸಂಪೂರ್ಣವಾಗಿ ಸೆಂಟ್ರಲ್ ಫೋಲ್ಡರ್ ಅನ್ನು ಕಾಪಿ ಮಾಡುತ್ತದೆ ಮತ್ತು ಅದನ್ನು ಲೋಕಲ್ 'ರಿಪಾಸಿಟರಿ' ಯನ್ನಾಗಿ ಮಾಡುತ್ತದೆ.
03:40 ls ಎಂದು ಟೈಪ್ ಮಾಡಿ, ನೀವು 'ರಿಮೋಟ್ ರಿಪಾಸಿಟರಿ' ಯ ಕಂಟೆಂಟ್ ಇಲ್ಲಿ ಕಾಪಿ ಆಗಿರುವುದನ್ನು ನೋಡಬಹುದು.
03:48 ಈಗ ನಾನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುವಂತೆ, ಈ 'ರಿಪಾಸಿಟರಿ' ಯ user name ಮತ್ತು email id ಗಳನ್ನು ಬದಲಿಸುತ್ತೇನೆ.
03:55 ವಿವರಣೆಗೋಸ್ಕರ, ಈಗಾಗಲೇ ನಾನು priya-spoken1 ಮತ್ತು kaushik-spoken ಎಂಬ ಇನ್ನೂ ಎರಡು GitHub user ಗಳನ್ನು ಕ್ರಿಯೇಟ್ ಮಾಡಿದ್ದೇನೆ.
04:04 ನಾನು ಇಲ್ಲಿ ಅವುಗಳನ್ನು ಬಳಸುತ್ತೇನೆ.
04:14 ಈಗ Git log ಅನ್ನು ಪರೀಕ್ಷಿಸೋಣ.
04:16 ನೀವು 'ರಿಮೋಟ್ ರಿಪಾಸಿಟರಿ' ಯ ಅದೇ 'ಕಮಿಟ್' ಗಳನ್ನು ನೋಡಬಹುದು.
04:21 ಇದೇ ರೀತಿಯಲ್ಲಿ, ನಾನು ಎರಡನೇ ಟ್ಯಾಬ್ ನಲ್ಲಿ,directory User2 ನಲ್ಲಿ, 'ರಿಪಾಸಿಟರಿ' ಯನ್ನು 'ಕ್ಲೋನ್' ಮಾಡುತ್ತೇನೆ.
04:28 User1 ಗೆ ಮಾಡಿದಂತೆ ಇಲ್ಲಿಯೂ ಕೂಡ user name ಮತ್ತು email id ಯನ್ನು ಬದಲಿಸುತ್ತೇನೆ.
04:35 ಈಗ ಈ ಎರಡೂ ಬಳಕೆದಾರರೂ 'ರಿಮೋಟ್ ರಿಪಾಸಿಟರಿ' ಯಲ್ಲಿ ಹೇಗೆ ಕೆಲಸ ಮಾಡುವರು ಎಂದು ಅರ್ಥ ಮಾಡಿಕೊಳ್ಳೋಣ.
04:41 ಈಗ User1, lion-and-mouse.html ಎಂಬ ಫೈಲ್ ನಲ್ಲಿ ಕೆಲಸ ಮಾಡುತ್ತಾರೆ ಎಂದು ಕೊಳ್ಳೋಣ.
04:48 ಆ ಫೈಲ್ ಅನ್ನು ರಚಿಸಲು gedit lion-and-mouse.html ಎಂದು ಟೈಪ್ ಮಾಡಿ.
04:54 ನಾನು ಮೊದಲೇ ಸೇವ್ ಮಾಡಿದ ನನ್ನ Writer document ನಿಂದ ಸ್ವಲ್ಪ ಟೆಕ್ಸ್ಟ್ ಅನ್ನು ಕಾಪಿ ಮಾಡಿ ಈ ಫೈಲ್ ನಲ್ಲಿ ಪೇಸ್ಟ್ ಮಾಡುತ್ತೇನೆ.
05:02 ಇದೇ ರೀತಿಯಲ್ಲಿ, ನಿಮ್ಮ ಫೈಲ್ ನಲ್ಲಿ ವಿಷಯಗಳನ್ನು ಸೇರಿಸಬಹುದು.
05:06 ಈಗ ಫೈಲ್ ಅನ್ನು 'ಸ್ಟೇಜಿಂಗ್ ಏರಿಯಾಗೆ' ಗೆ ಸೇರಿಸೋಣ.
05:11 git add lion-and-mouse.html ಎಂದು ಟೈಪ್ ಮಾಡಿ.
05:17 ಈಗ ಹೊಸದಾಗಿ ಸೇರಿಸಿದ ಫೈಲ್ ಅನ್ನು ಕಮಿಟ್ ಮಾಡೋಣ.
05:21 git commit hyphen m ಎಂದು ಟೈಪ್ ಮಾಡಿ ಕೋಟ್ಸ್ ನಲ್ಲಿ Added lion-and-mouse.html ಎಂದು ಟೈಪ್ ಮಾಡಿ.
05:29 ನಂತರ ಈ ಲೋಕಲ್ 'ರಿಪಾಸಿಟರಿ' ಯನ್ನು ಮೇನ್ 'ರಿಮೋಟ್ ರಿಪಾಸಿಟರಿ' ಯೊಂದಿಗೆ ನಾವು ಸಿಂಕ್ರೋನೈಜ್ ಮಾಡಬೇಕು.
05:35 'ರಿಪಾಸಿಟರಿ' ಯನ್ನು ಸಿಂಕ್ರೋನೈಜ್ ಮಾಡುವ ಮೊದಲು, ನಾವು remotes ಗಳ ಕುರಿತು ತಿಳಿದುಕೊಳ್ಳುವೆವು.
05:40 'ರಿಮೋಟ್ ರಿಪಾಸಿಟರಿ' ಯ URL ಅನ್ನು Remote ಎಂದು ಕರೆಯುತ್ತಾರೆ.
05:45 ನಾವು URL ಗೆ ಉಪನಾಮವನ್ನು (nickname) ಕೊಡಬಹುದು.
05:49 ನಾವು ಅನೇಕ 'ರಿಮೋಟ್ ರಿಪಾಸಿಟರಿ' ಗಳೊಂದಿಗೆ ಕೆಲಸ ಮಾಡುವಾಗ ಇದು ಸಹಾಯಕವಾಗಿದೆ.
05:54 ನಾವು 'ರಿಪಾಸಿಟರಿ' ಯನ್ನು ಸಿಂಕ್ರೋನೈಸ್ ಮಾಡುವಾಗ, ಪೂರ್ಣ URL ಅನ್ನುಟೈಪ್ ಮಾಡುವ ಬದಲು ಈ ಉಪನಾಮವನ್ನು ಉಪಯೋಗಿಸಬಹುದು.
06:01 Remote ನ ಉಪನಾಮ ಡಿಫಾಲ್ಟ್ ಆಗಿ ಯಾವಾಗಲೂ origin ಆಗಿರುತ್ತದೆ.
06:06 ಈಗ Remote ಅನ್ನು ಹೇಗೆ ಸೇರಿಸುವುದು ಎಂದು ನೋಡೋಣ.
06:10 'ಟರ್ಮಿನಲ್' ಗೆ ಹಿಂದಿರುಗಿ.
06:13 git remote ಎಂದು ಟೈಪ್ ಮಾಡಿ. Remote ನ ಡಿಫಾಲ್ಟ್ ನೇಮ್ origin ಎಂದಿರುವುದನ್ನು ಗಮನಿಸಬಹುದು.
06:20 ಈಗ Remote ಗೆ ಉಪನಾಮ ಕೊಡುವುದು ಹೇಗೆ ಎಂದು ಕಲಿಯೋಣ.
06:25 git remote add stories ಎಂದು ಟೈಪ್ ಮಾಡಿ ಮತ್ತು 'ರಿಮೋಟ್ ರಿಪಾಸಿಟರಿ' ಯ URL ಅನ್ನು ಟೈಪ್ ಮಾಡಿ.
06:32 ಇಲ್ಲಿ ನಾನು Remote ಅನ್ನು stories ಎಂದು ಹೆಸರಿಸುತ್ತೇನೆ ಇದು Remote 'ರಿಪಾಸಿಟರಿ' ಯ ಹೆಸರು ಕೂಡ ಆಗಿದೆ.
06:38 ಈಗ Enter ಕೀಲಿಯನ್ನು ಒತ್ತಿ.
06:41 ಈಗ ಮತ್ತೊಮ್ಮೆ Remote ಲಿಸ್ಟ್ ಅನ್ನು ಪರೀಕ್ಷಿಸಲು, git remote ಎಂದು ಟೈಪ್ ಮಾಡಿ.
06:46 ನೀವು ಲಿಸ್ಟ್ ಗೆ Remote ಸೇರ್ಪಡೆಯಾಗಿರುವುದನ್ನು ನೋಡಬಹುದು.
06:50 ಈಗ ನಾವು ಲೋಕಲ್ 'ರಿಪಾಸಿಟರಿ' ಯನ್ನು ಮೇನ್ 'ರಿಮೋಟ್ ರಿಪಾಸಿಟರಿ' ಯೊಂದಿಗೆ ಸಿಂಕ್ರೋನೈಜ್ ಮಾಡೋಣ.
06:55 ಅದನ್ನು ಮಾಡಲು git push stories master ಎಂದು ಟೈಪ್ ಮಾಡಿ.
07:00 ಇಲ್ಲಿ stories ಇದು Remote ನ ಹೆಸರು ಮತ್ತು master ಇದು ನಾವು ಬದಲಾವಣೆಗಳನ್ನು ಅಪ್ಡೇಟ್ ಮಾಡುವ branch ನ ಹೆಸರು ಆಗಿವೆ.
07:07 ಈಗ Enter ಅನ್ನು ಒತ್ತಿ.
07:09 ನಾನು User1username ಅನ್ನು priya-spoken1 ಎಂದು ಟೈಪ್ ಮಾಡಿ, Enter ಅನ್ನು ಒತ್ತುತ್ತೇನೆ.
07:17 User1 ರ ಪಾಸ್ವರ್ಡ್ ಅನ್ನು ನಮೂದಿಸುತ್ತೇನೆ.
07:21 ವಿವರಣೆಗೋಸ್ಕರ ನಾನು ಈ ಯೂಸರ್ ನೇಮ್ ಅನ್ನು ಮೊದಲೇ ರಚಿಸಿದ್ದನ್ನು ನೆನಪಿಸಿಕೊಳ್ಳಿ.
07:27 ದಯವಿಟ್ಟು ಇಲ್ಲಿ ನಿಮ್ಮ ಯೂಸರ್ನೇಮ್ ಮತ್ತು ಪಾಸ್ವರ್ಡ್ ಗಳನ್ನು ಉಪಯೋಗಿಸಿ.
07:31 ಇದು unable to access ಎಂಬ ಎರರ್ ಅನ್ನು ಕೊಡುತ್ತದೆ.
07:35 ಈ ಎರರ್ ಯಾಕೆ ಬಂತು? ಏಕೆಂದರೆ ನಾವು 'ರಿಮೋಟ್ ರಿಪಾಸಿಟರಿ' ಗೆ ಎಕ್ಸೆಸ್ಸ್ (access) ಅನ್ನು ಹೊಂದಿಲ್ಲ.
07:42 ಹಾಗಾಗಿ ಈಗ ಕಾಂಟ್ರಿಬ್ಯೂಟರ್ ಗಳಿಗೆ ಎಕ್ಸೆಸ್ (access) ಪರ್ಮಿಷನ್ ಅನ್ನು ಹೇಗೆ ಕೊಡುವುದು ಎಂದು ನೋಡೋಣ.
07:48 GitHub repository ಗೆ ಹಿಂದಿರುಗಿ.
07:51 ಮೇಲಿನ ಪ್ಯಾನಲ್ ನಲ್ಲಿರುವ ಕೊನೆಯ ಟ್ಯಾಬ್- Settings – ನ ಮೇಲೆ ಕ್ಲಿಕ್ ಮಾಡಿ.
07:55 ಎಡಭಾಗದ ಬಾಕ್ಸ್ ನಲ್ಲಿರುವ Collaborators ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
08:00 ನಿಮ್ಮ GitHub ಅಕೌಂಟ್ ಪಾಸ್ವರ್ಡ್ ಅನ್ನು ಕನ್ಫರ್ಮೇಶನ್ ಗೋಸ್ಕರ ಟೈಪ್ ಮಾಡಿ.
08:04 ಇಲ್ಲಿ ಈ ಟೆಕ್ಸ್ಟ್ ಬಾಕ್ಸ್ ನಲ್ಲಿ ನೀವು ಕೊಲ್ಯಾಬೋರೇಟರ್ ಗಳ ಹೆಸರುಗಳನ್ನು ಸೇರಿಸಬಹುದು.
08:10 GitHub repository ಯನ್ನು ಯಾರು ಬೇಕಾದರೂ 'ಕ್ಲೋನ್' ಮಾಡಬಹುದು.
08:15 ಆದರೆ ನಾವು ಯಾರನ್ನು ಕೊಲ್ಯಾಬೋರೇಟರ್ ಆಗಿ ಸೇರಿಸಿರುತ್ತೇವೋ ಅವರು 'ರಿಪಾಸಿಟರಿ' ಗೆ push ಮಾಡಬಹುದು.
08:21 ಈಗ ನಾನು ಎರಡು ಯೂಸರ್ ಗಳನ್ನು ಅಂದರೆ priya-spoken1 ಮತ್ತು kaushik-spoken ಗಳನ್ನು ಸೇರಿಸುತ್ತೇನೆ.
08:27 ನಾನು ಟೆಕ್ಸ್ಟ್-ಬಾಕ್ಸ್ ನಲ್ಲಿ ಟೈಪ್ ಮಾಡಿದಾಗ ಯೂಸರ್-ನೇಮ್ ಲಿಸ್ಟ್ ನಲ್ಲಿರುವುದನ್ನು ನೋಡಬಹುದು.
08:33 ಯೂಸರ್ ಅನ್ನು ಕೊಲ್ಯಾಬೋರೇಟರ್ ಆಗಿ ಸೇರಿಸಲು, Add Collaborator ಬಟನ್ ನ ಮೇಲೆ ಕ್ಲಿಕ್ ಮಾಡಿ.
08:38 ನಾನು ಇನ್ನೊಂದು ಯೂಸರ್ kaushik-spoken ಅನ್ನು ಕೂಡ ಸೇರಿಸುತ್ತೇನೆ.
08:43 ನೀವು ಇಲ್ಲಿ ಸೇರಿಸಿದ ಹೆಸರುಗಳು ಲಿಸ್ಟ್ ನಲ್ಲಿ ಬಂದಿರುವುದನ್ನು ನೋಡಬಹುದು.
08:47 ನಾವು ಈಗ 'ರಿಮೋಟ್ ರಿಪಾಸಿಟರಿ' ಯಲ್ಲಿ ಪುಶ್ ಮಾಡಲು ಪ್ರಯತ್ನಿಸೋಣ.
08:51 ಟರ್ಮಿನಲ್ ಗೆ ಹಿಂದಿರುಗಿ.
08:54 git push stories master ಎಂದು ಟೈಪ್ ಮಾಡಿ.
08:58 ಈಗ 'ರಿಪಾಸಿಟರಿ' ಗೆ ಎಕ್ಸೆಸ್ ಹೊಂದಿರುವ ಯೂಸರ್ ನ username ಮತ್ತು password ಅನ್ನು ಕೊಡಿ.
09:04 ಈಗ ನಾವು ಇದನ್ನು ಸರಿಯಾಗಿ push ಮಾಡಿರುವುದನ್ನು ನೀವು ನೋಡಬಹುದು.
09:08 ಈಗ ನಾವು ಮಾಡಿದ ಬದಲಾವಣೆಗಳು ಅಪ್ಡೇಟ್ ಆಗಿವೆಯೇ ಎಂದು GitHub repository ಯನ್ನು ಪರೀಕ್ಷಿಸೋಣ.
09:14 GitHub repository ಗೆ ಹಿಂದಿರುಗಿ.
09:17 Code ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
09:20 ಈಗ commit list ಅನ್ನು ಪರೀಕ್ಷಿಸೋಣ.
09:23 ಇಲ್ಲಿ ನೀವು ಕೊಲ್ಯಾಬರೇಟರ್ ನ ಕಮಿಟ್ ಅನ್ನು ಪಟ್ಟಿ ಮಾಡಿರುವುದನ್ನು ನೋಡಬಹುದು.
09:28 ನಂತರ User2 ಹೇಗೆ 'ರಿಮೋಟ್ ರಿಪಾಸಿಟರಿ' ಯೊಂದಿಗೆ ಕೊಲ್ಯಾಬರೇಟ್ ಮಾಡಬಹುದು ಎಂದು ಕಲಿಯೋಣ.
09:34 ಟರ್ಮಿನಲ್ ಗೆ ಹಿಂದಿರುಗೋಣ.
09:37 User2 , friends.html ಎಂಬ ಫೈಲ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದುಕೊಳ್ಳೋಣ.
09:43 ಫೈಲ್ ಅನ್ನು ರಚನೆ ಮಾಡಲು, gedit friends.html ಎಂದು ಟೈಪ್ ಮಾಡೋಣ.
09:49 ನಾನು ನನ್ನ Writer document ನಿಂದ ಸ್ವಲ್ಪ ಟೆಕ್ಸ್ಟ್ ಅನ್ನು ಕಾಪಿ ಮಾಡಿ ಈ ಫೈಲ್ ನಲ್ಲಿ ಪೇಸ್ಟ್ ಮಾಡುತ್ತೇನೆ.
09:54 ಇದೇ ರೀತಿಯಲ್ಲಿ, ನಿಮ್ಮ ಫೈಲ್ ಗೆ ಕಂಟೆಂಟ್ ಅನ್ನು ಸೇರಿಸಿ.
09:59 ಫೈಲ್ ಅನ್ನು 'ಸ್ಟೇಜಿಂಗ್ ಏರಿಯಾ' ಗೆ ಸೇರಿಸೋಣ.
10:03 ಈಗ ಹೊಸದಾಗಿ ಸೇರಿಸಿದ ಫೈಲ್ ಅನ್ನು ಕಮೀಟ್ ಮಾಡೋಣ.
10:07 git commit hyphen m ಎಂದು ಟೈಪ್ ಮಾಡಿ ಕೋಟ್ಸ್ ನಲ್ಲಿ Added friends.html ಎಂದು ಟೈಪ್ ಮಾಡಿ.
10:15 ಈಗ ನಾವು ಲೋಕಲ್ 'ರಿಪಾಸಿಟರಿ' ಯನ್ನು ಮೇಯ್ನ್ 'ರಿಮೋಟ್ ರಿಪಾಸಿಟರಿ' ಯೊಂದಿಗೆ ಸಿಂಕ್ರೋನೈಜ್ ಮಾಡೋಣ.
10:21 git push origin master ಎಂದು ಟೈಪ್ ಮಾಡಿ.
10:25 ನೆನಪಿಡಿ ನಾವು ಈ 'ಲೋಕಲ್ ರಿಪಾಸಿಟರಿ' ಗೆ Remote ಅನ್ನು ಸೇರಿಸಿಲ್ಲ.
10:30 ಹಾಗಾಗಿ ನಾವು ಇಲ್ಲಿ ಡಿಫಾಲ್ಟ್ Remote ಹೆಸರಾದ origin ಅನ್ನು ಉಪಯೋಗಿಸುತ್ತಿದ್ದೇವೆ.
10:34 ಈಗ Enter ಅನ್ನು ಒತ್ತಿ.
10:37 User2GitHub ಯೂಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ.
10:42 ಇದು failed to push ಎಂಬ ಎರರ್ ಅನ್ನು ಕೊಡುತ್ತದೆ.
10:46 ಮತ್ತು ಎರರ್ ಗೆ ಕಾರಣವನ್ನು : the remote contains work that you do not have locally ಎಂದು ಕೊಡುತ್ತದೆ.
10:53 ನೆನಪಿಡಿ, User1 ಕಮಿಟ್ ಅನ್ನು ಈಗಾಗಲೇ ಪುಷ್ ಮಾಡಿರುತ್ತಾರೆ.
10:58 ಆದರೆ, User2 ನ 'ಲೋಕಲ್ ರಿಪಾಸಿಟರಿ' ಯಲ್ಲಿ User1 ಮಾಡಿದ ಕೆಲಸ ಇರುವುದಿಲ್ಲ.
11:04 ಇದು ಎರರ್ ಅನ್ನು ಕಂಡುಹಿಡಿಯಲು git pull ಕಮಾಂಡ್ ಅನ್ನು ರನ್ ಮಾಡಲು ಸಲಹೆ ಕೊಡುತ್ತದೆ.
11:10 ಹಾಗಾಗಿ ನಾವು ಮೊದಲು User1 ಮಾಡಿದ ಕೆಲಸವನ್ನು ಪುಲ್ ಮಾಡಿ, User2 ನ 'ಲೋಕಲ್ ರಿಪಾಸಿಟರಿ' ಯಲ್ಲಿ ಅದು ಬರುವಂತೆ ಮಾಡಬೇಕು. ಈಗ ನಾವು ಅದನ್ನು ಮಾಡೋಣ.
11:21 git pull origin master ಎಂದು ಟೈಪ್ ಮಾಡಿ.
11:25 ಮೊದಲು ಇದು 'ರಿಮೋಟ್ ರಿಪಾಸಿಟರಿ' ಯಿಂದ ಡಾಟಾವನ್ನು ಪಡೆದುಕೊಂಡು ನಂತರ ಅದನ್ನು ' ಲೋಕಲ್ ರಿಪಾಸಿಟರಿ' ಯೊಂದಿಗೆ ಮರ್ಜ್ ಮಾಡುವುದು.
11:32 ಹಾಗಾಗಿ ಇದು merging ಗೆ ಮೆಸ್ಸೇಜ್ ಅನ್ನು ಕೊಡಲು ಎಡಿಟರ್ ಅನ್ನು ಓಪನ್ ಮಾಡುತ್ತದೆ.
11:36 ಈಗ ಆ ಮೆಸೇಜ್ ಅನ್ನು ಹಾಗೆ ಇಟ್ಟು ಎಡಿಟರ್ ಅನ್ನು ಕ್ಲೋಸ್ ಮಾಡಲು Ctrl + X ಅನ್ನು ಒತ್ತಿ.
11:42 ಈಗ ಇನ್ನೊಮ್ಮೆ ಡಾಟಾವನ್ನು ಪುಶ್ ಮಾಡಲು ಪ್ರಯತ್ನಿಸೋಣ. git push origin master ಎಂದು ಟೈಪ್ ಮಾಡಿ.
11:50 User2username ಮತ್ತು password ಅನ್ನು ಕೊಡಿ.
11:54 ಈಗ ನಾವು ಡಾಟಾವನ್ನು ಯಶಸ್ವಿಯಾಗಿ ಪುಷ್ ಮಾಡಬಹುದು.
11:59 ಈಗ ನಾವು ಮಾಡಿದ ಬದಲಾವಣೆಗಳು ಅಪ್ಡೇಟ್ ಆಗಿದೆಯೇ ಎಂದು GitHub repository ಯಲ್ಲಿ ಪರೀಕ್ಷಿಸೋಣ.
12:05 GitHub repository ಗೆ ಹಿಂದಿರುಗಿ.
12:08 ರೆಪೊಸಿಟರಿ ನೇಮ್ Stories ಮೇಲೆ ಕ್ಲಿಕ್ ಮಾಡಿ.
12:12 ಈಗ ನೀವು friends.html ಫೈಲ್ 'ರಿಪಾಸಿಟರಿ' ಗೆ ಸೇರ್ಪಡೆಯಾಗಿರುವುದನ್ನು ನೋಡಬಹುದು.
12:18 ಈಗ commit list ಅನ್ನು ಪರೀಕ್ಷಿಸೋಣ.
12:21 ಇಲ್ಲಿ User2 ನ 'ಕಮಿಟ್' ಕೂಡ ಲಿಸ್ಟ್ ಆಗಿರುವುದನ್ನು ನೋಡಬಹುದು.
12:26 ಇದರೊಂದಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
12:30 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು-
12:35 'ರಿಮೋಟ್ ರಿಪಾಸಿಟರಿ' ಎಂದರೇನು ಮತ್ತು
12:38 'ರಿಮೋಟ್ ರಿಪಾಸಿಟರಿ' ಗೆ ಡಾಟಾವನ್ನು ಹೇಗೆ ಸಿಂಕ್ರೋನೈಜ್ ಮಾಡುವುದು ಎಂದು ಕಲಿತಿದಿದ್ದೇವೆ.
12:42 ಈಗ ಒಂದು ಅಸೈನ್ಮೆಂಟ್: User3 ಎಂಬ ಇನ್ನೊಂದು ಯೂಸರ್ ಅನ್ನು ರಚನೆ ಮಾಡಿ.
12:47 User3 ಗಾಗಿ ಡಾಟಾವನ್ನು 'ಕ್ಲೋನ್' ಮಾಡಿ.
12:50 User3 ಯ 'ಲೋಕಲ್ ರಿಪಾಸಿಟರಿ' ಯಲ್ಲಿ ಕೆಲಸವನ್ನು ಪ್ರಾರಂಭಿಸಿ.
12:54 User3 ಯಿಂದ ಡಾಟಾವನ್ನು push ಮಾಡಲು ಪ್ರಯತ್ನಿಸಿ.
12:58 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ.
13:03 ದಯವಿಟ್ಟು ಡೌನ್-ಲೋಡ್ ಮಾಡಿ ನೋಡಿ.
13:05 ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
13:12 ಹೆಚ್ಚಿನ ವಿವರಗಳಿಗೆ ನಮಗೆ ಬರೆಯಿರಿ.
13:16 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು , NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆಯುತ್ತದೆ.
13:22 ಇದರ ಕುರಿತು ಹೆಚ್ಚಿನ ವಿವರಗಳು ಈ ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತವೆ.
13:27 ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

Anjana310312, Sandhya.np14