Difference between revisions of "Drupal/C2/Content-Management-in-Admin-Interface/Kannada"

From Script | Spoken-Tutorial
Jump to: navigation, search
 
Line 13: Line 13:
 
|-
 
|-
 
| 00:23
 
| 00:23
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು -
+
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು -'''Ubuntu Operating System''', '''Drupal 8''' ಮತ್ತು '''Firefox''' ವೆಬ್-ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ.
'''Ubuntu Operating System'''
+
'''Drupal 8''' ಮತ್ತು
+
'''Firefox''' ವೆಬ್-ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ.
+
 
|-
 
|-
 
|00:34
 
|00:34
Line 49: Line 46:
 
|-
 
|-
 
| 01:40
 
| 01:40
|ನಾವು '''Manage''' ನ ಮೇಲೆ ಕ್ಲಿಕ್ ಮಾಡಿದಾಗ, ಸಬ್ ಮೆನ್ಯುವನ್ನು ಕಾಣುತ್ತೇವೆ. ಇಲ್ಲಿ ನಾವು ''' Content, Structure, Appearance''' ಮುಂತಾದವುಗಳನ್ನು ನೋಡಬಹುದಾಗಿದೆ ಹಾಗೂ ನಾವಿವುಗಳ ಬಗ್ಗೆ ಮುಂದೆ ತಿಳಿಯಲಿದ್ದೇವೆ.
+
|ನಾವು '''Manage''' ನ ಮೇಲೆ ಕ್ಲಿಕ್ ಮಾಡಿದಾಗ, ಸಬ್ ಮೆನ್ಯುವನ್ನು ಕಾಣುತ್ತೇವೆ. ಇಲ್ಲಿ ನಾವು ''' Content, Structure,Appearance''' ಮುಂತಾದವುಗಳನ್ನು ನೋಡಬಹುದಾಗಿದೆ ಹಾಗೂ ನಾವಿವುಗಳ ಬಗ್ಗೆ ಮುಂದೆ ತಿಳಿಯಲಿದ್ದೇವೆ.
 
|-
 
|-
 
| 01:55
 
| 01:55
Line 82: Line 79:
 
|-
 
|-
 
| 03:15
 
| 03:15
|ವಾಸ್ತವವಾಗಿ, ಇದನ್ನು ನಾವು ಡ್ರುಪಲ್ ಸೈಟ್ ನ ಯಾವುದೇ ''' administration screen''' ನಿಂದ ಮಾಡಬಹುದಾಗಿದೆ. '''Shortcuts''' ನ ಸಹಾಯದಿಂದ ನಾವು ಸುಲಭವಾಗಿ ಉಪಯೋಗಿಸಬಹುದು.
+
|ವಾಸ್ತವವಾಗಿ, ಇದನ್ನು ನಾವು ಡ್ರುಪಲ್ ಸೈಟ್ ನ ಯಾವುದೇ ''' administration screen''' ನಿಂದ ಮಾಡಬಹುದಾಗಿದೆ.'''Shortcuts''' ನ ಸಹಾಯದಿಂದ ನಾವು ಸುಲಭವಾಗಿ ಉಪಯೋಗಿಸಬಹುದು.
 
|-
 
|-
 
| 03:25
 
| 03:25
Line 145: Line 142:
 
|-
 
|-
 
| 05:49
 
| 05:49
|"Body" ಎಂಬಲ್ಲಿ ನಾವು ಈ ಕೆಳಗಿನಂತೆ ಟೈಪ್ ಮಾಡೋಣ -  
+
|"Body" ಎಂಬಲ್ಲಿ ನಾವು ಈ ಕೆಳಗಿನಂತೆ ಟೈಪ್ ಮಾಡೋಣ - “Welcome to our site! We are so glad you stopped by!”.
“Welcome to our site! We are so glad you stopped by!”.
+
 
|-
 
|-
 
| 05:57
 
| 05:57
Line 290: Line 286:
 
|-
 
|-
 
|12:15
 
|12:15
|ಅದಲ್ಲದೇ, ಮೆನ್ಯು ಅಂಶಗಳಾದ -
+
|ಅದಲ್ಲದೇ, ಮೆನ್ಯು ಅಂಶಗಳಾದ -'''Content''', '''Structure''' ಹಾಗೂ '''Appearance''' ಗಳ ಬಗ್ಗೆ ಕಲಿತೆವು.
'''Content'''
+
'''Structure''' ಹಾಗೂ
+
'''Appearance''' ಗಳ ಬಗ್ಗೆ ಕಲಿತೆವು.
+
 
|-
 
|-
 
| 12:33
 
| 12:33
Line 305: Line 298:
 
|-
 
|-
 
| 13:02
 
| 13:02
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:  
+
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ
+
NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
+
 
|-
 
|-
 
| 13:17
 
| 13:17
 
| ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.
 
| ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.
 
|}
 
|}

Latest revision as of 17:57, 14 October 2016

Time Narration
00:01 ಡ್ರುಪಲ್ ನಲ್ಲಿ, Content Management in Admin Interface ಎನ್ನುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು 'Drupal ಇಂಟರ್ಫೇಸ್' ನ ಬಗ್ಗೆ ತಿಳಿಯಲಿದ್ದೇವೆ.
00:13 ನಾವು ಕೆಲವು ಮೆನ್ಯುವಿನ ಅಂಶಗಳಾದ Content, Structure ಮತ್ತು Appearance ಇವುಗಳ ಬಗ್ಗೆಯೂ ತಿಳಿಯಲಿದ್ದೇವೆ.
00:23 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು -Ubuntu Operating System, Drupal 8 ಮತ್ತು Firefox ವೆಬ್-ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ.
00:34 ನೀವು ನಿಮಗಿಷ್ಟವಾದ ಯಾವುದೇ ಬ್ರೌಸರ್ ಅನ್ನು ಉಪಯೋಗಿಸಬಹುದಾಗಿದೆ.
00:39 ನಾವೀಗ ಈಗಾಗಲೇ ರಚಿಸಿದ ನಮ್ಮ ವೆಬ್ಸೈಟ್ ಅನ್ನು ತೆರೆಯೋಣ.
00:44 'ಡ್ರುಪಲ್ ಇಂಟರ್ಫೇಸ್' ಅನ್ನು ವಿಸ್ತಾರವಾಗಿ ತಿಳಿಯುವ ಮೊದಲು ಕೆಲವು ಪ್ರಮುಖ ಅಂಶಗಳನ್ನು ನಿಮ್ಮ ಮುಂದಿಡಲಿಚ್ಛಿಸುತ್ತೇನೆ.
00:53 ನೆನಪಿಡಿ, ನಾವು ದ್ರುಪಲ್ ಸೈಟ್ ಅನ್ನು ಸೆಟಪ್ ಮಾಡುವುದರಿಂದ ನಾವು ಯೂಸರ್ ನಂಬರ್ ಒನ್ ಅಥವಾ 'ಸೂಪರ್ ಯೂಸರ್' (super user) ಆಗಿರುತ್ತೇವೆ.
01:02 ದ್ರುಪಲ್ ನಲ್ಲಿ 'ಸೂಪರ್ ಯೂಸರ್' ಎಂಬುವವನು ಉಳಿದೆಲ್ಲಾ ಯೂಸರ್ ಗಿಂತ ಮುಖ್ಯನಾಗಿರುತ್ತಾನೆ. ಅವನು, ಮುಂದೆ, ಎಲ್ಲಾ ಅನುಮತಿಗಳನ್ನು ಹೊಂದಿರುವ ಇನ್ನೂ ಕೆಲವು ಅಡ್ಮಿನಿಸ್ಟ್ರೇಟರ್ ಗಳನ್ನು ಸೆಟ್-ಅಪ್ ಮಾಡಬಹುದು.
01:13 ಆದರೆ, 'ಸೂಪರ್ ಯೂಸರ್' ಆದವನು ಆ ಅನುಮತಿಗಳನ್ನು ಹಿಂಪಡೆಯುವುದಾಗಲಿ ನಿರ್ವಹಿಸುವುದಾಗಲೀ ಮಾಡಬಹುದಾಗಿದೆ.
01:20 'ಸೂಪರ್ ಯೂಸರ್' ನ ಅನುಮತಿಗಳನ್ನು ಯಾವತ್ತೂ ಹಿಂಪಡೆಯಲಾಗುವುದಿಲ್ಲ.
01:24 ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, 'ದ್ರುಪಲ್ ಸೈಟ್'ನ ಪ್ರತಿಯೊಂದು ಕ್ಷೇತ್ರವನ್ನೂ 'ಸೂಪರ್ ಯೂಸರ್' ಆದವನು ಆಕ್ಸೆಸ್ ಮಾಡಬಹುದಾಗಿದೆ.
01:30 ನೆನಪಿಡಿ, ಯಾವುದೇ 'ದ್ರುಪಲ್ ಸೈಟ್'ನ 'ಯೂಸರ್ ನಂಬರ್ ಒನ್' ಆದವನು 'ಸೂಪರ್ ಯೂಸರ್' ಆಗಿರುತ್ತಾನೆ.
01:36 ಇದು administrative ಟೂಲ್ ಬಾರ್ ಆಗಿದೆ.
01:40 ನಾವು Manage ನ ಮೇಲೆ ಕ್ಲಿಕ್ ಮಾಡಿದಾಗ, ಸಬ್ ಮೆನ್ಯುವನ್ನು ಕಾಣುತ್ತೇವೆ. ಇಲ್ಲಿ ನಾವು Content, Structure,Appearance ಮುಂತಾದವುಗಳನ್ನು ನೋಡಬಹುದಾಗಿದೆ ಹಾಗೂ ನಾವಿವುಗಳ ಬಗ್ಗೆ ಮುಂದೆ ತಿಳಿಯಲಿದ್ದೇವೆ.
01:55 ನಾವಿಲ್ಲಿ Shortcuts ಎಂಬುದರ ಮೇಲೆ ಕ್ಲಿಕ್ ಮಾಡಿದಲ್ಲಿ Shortcuts tool bar ಅನ್ನು ಕಾಣಬಹುದು. ಅದರ ಬಗ್ಗೆಯೂ ಮುಂದೆ ತಿಳಿಯಲಿದ್ದೇವೆ.
02:06 ನಾವು admin ನ ಮೇಲೆ ಕ್ಲಿಕ್ ಮಾಡಿದ ಪಕ್ಷದಲ್ಲಿ ನಮ್ಮ profile ನ ಹಾಗೂ Log out ನ ಲಿಂಕ್ ಅನ್ನು ಕಾಣುತ್ತೇವೆ.
02:13 ಟೂಲ್ ಬಾರ್ ನಲ್ಲಿ admin ಎಂದು ಕಾಣಿಸುತ್ತಿದೆ. ಏಕೆಂದರೆ, ನಾನು ಅದನ್ನೇ ನನ್ನ ಯೂಸರ್ ನೇಮ್ ಆಗಿ ಕೊಟ್ಟಿದ್ದೆ. ನಿಮ್ಮದು ಭಿನ್ನವಾಗಿರಬಹುದು.
02:23 ಮತ್ತೊಮ್ಮೆ ಹೇಳುತ್ತೇನೆ, ಇದು administration ಟೂಲ್ ಬಾರ್ ಆಗಿದೆ ಹಾಗೂ ಇದು ನಮ್ಮ ಡ್ರುಪಲ್ administration ನ ಬಹಳ ಪ್ರಮುಖವಾದ ಭಾಗವಾಗಿದೆ.
02:33 Shortcut bar ಗೆ ಎನನ್ನಾದರೂ ಸೇರಿಸುವುದು ಬಹಳ ಸುಲಭ.
02:38 ಉದಾಹರಣೆಗಾಗಿ, ನಾವು ಕ್ರಮವಾಗಿ Manage, Content >> Add Content ನಲ್ಲಿ ಇದ್ದೇವೆ ಅಂದುಕೊಳ್ಳಿ.
02:45 ಹಾಗೂ, ನಾನು ನನ್ನ ವೆಬ್ಸೈಟ್ ನಲ್ಲಿ ಒಂದು ಲೇಖನವನ್ನು ಸೇರಿಸಲಿಚ್ಛಿಸುತ್ತೇನೆ. ಇಲ್ಲಿ ಗಮನಿಸಿ, ಇಲ್ಲಿರುವ ಸ್ಟಾರ್ ಭರ್ತಿಯಾಗಿಲ್ಲ.
02:55 star ನ ಮೇಲೆ ಕ್ಲಿಕ್ ಮಾಡುವುದರಿಂದ ನಾನದನ್ನು Shortcuts ಗೆ ಸೇರಿಸಬಹುದು.
03:01 ಈಗ ನಾವು Shortcuts ನ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ನಮಗೆ Create Article ಎಂಬ ಮೆನ್ಯು ಐಟಮ್ ಕಾಣಸಿಗುತ್ತದೆ.
03:10 ಹಾಗೂ, ಒಮ್ಮೆ ನಾವು ಲೇಖನವನ್ನು ರಚಿಸಿದ ಮೇಲೆ ಅದನ್ನು ಸುಲಭವಾಗಿ ತೆಗೆದುಹಾಕಬಹುದಾಗಿದೆ.
03:15 ವಾಸ್ತವವಾಗಿ, ಇದನ್ನು ನಾವು ಡ್ರುಪಲ್ ಸೈಟ್ ನ ಯಾವುದೇ administration screen ನಿಂದ ಮಾಡಬಹುದಾಗಿದೆ.Shortcuts ನ ಸಹಾಯದಿಂದ ನಾವು ಸುಲಭವಾಗಿ ಉಪಯೋಗಿಸಬಹುದು.
03:25 ಈಗ ನಾವು Appearance ನ ಮೇಲೆ ಕ್ಲಿಕ್ ಮಾಡೋಣ. ಇಲ್ಲಿ ಕೆಲವು ಟ್ಯಾಬ್ ಗಳನ್ನು ಗಮನಿಸಿ. ಈ ತರಹದ ಟ್ಯಾಬ್ ಗಳು ಸೈಟ್ ನ ಎಲ್ಲೆಡೆ ಕಾಣಸಿಗುತ್ತವೆ.
03:36 ಈ ಟ್ಯಾಬ್ ಗಳು ಬಹಳ ಮುಖ್ಯವಾಗಿದ್ದು ಅವುಗಳನ್ನು section tab ಗಳೆಂದು ಕರೆಯುತ್ತೇವೆ.
03:41 ಈ ಟ್ಯಾಬ್ ಗಳು ನಾವು ಯಾವುದೇ ಸ್ಕ್ರೀನ್ ನಲ್ಲಿ ಕೆಲಸ ಮಾಡುತ್ತಿದ್ದರೂ ಆ ಸ್ಕ್ರೀನ್ ನ ವಿಭಿನ್ನ ವಿಭಾಗಗಳಲ್ಲಿ ಕಾಣಸಿಗುತ್ತವೆ.
03:47 ಕೆಲವೊಂದು sections ಇಲ್ಲಿ ಕಾಣಿಸುತ್ತಿರುವಂತೆ sub-section ಬಟನ್ ಗಳನ್ನು ಹೊಂದಿರುತ್ತವೆ.
03:54 Global settings, Bartik (ಬಾರ್ಟಿಕ್), Classy ಮತ್ತು Seven ಇವುಗಳು Settings ಟ್ಯಾಬ್ ನ 'sub-section ಬಟನ್' ಗಳಾಗಿವೆ.
04:02 ಕೊನೆಯದಾಗಿ, ಪ್ರತಿಯೊಂದು Drupal Content ಗಳನ್ನು 'ನೋಡ್' ಗಳೆಂದು ಕರೆಯಲಾಗುತ್ತದೆ.
04:08 ಸದ್ಯಕ್ಕೆ ನಮ್ಮ ಸೈಟ್ ನಲ್ಲಿ ಯಾವುದೇ 'ನೋಡ್'ಗಳು ಅಥವಾ ಯಾವುದೇ content ಗಳು ಇಲ್ಲ.
04:13 ನಾವು ಅವುಗಳನ್ನು ಮುಂಬರುವ ಟ್ಯುಟೋರಿಯಲ್ ಗಳಲ್ಲಿ ರಚಿಸಲಿದ್ದೇವೆ.
04:17 'Administration ಟೂಲ್ ಬಾರ್', ಸಬ್-ಮೆನ್ಯು, section ಟ್ಯಾಬ್ ಗಳು ಹಾಗೂ 'sub-section ಬಟನ್'ಗಳು.
04:23 'ಡ್ರುಪಲ್ ಇಂಟರ್ಫೇಸ್' ನ್ನು ತಿಳಿಯಲು ಈ ಮೇಲಿನ ಅಂಶಗಳನ್ನು ತಿಳಿದಿರುವುದು ಅತ್ಯವಶ್ಯಕವಾಗಿದೆ.
04:30 ನಾವೀಗ ನಮ್ಮ ಟೂಲ್ ಬಾರ್ ನಲ್ಲಿರುವ Content ಲಿಂಕ್ ನ ಬಗ್ಗೆ ತಿಳಿಯೋಣ.
04:35 ನಾವು Content ನ ಮೇಲೆ ಕ್ಲಿಕ್ ಮಾಡಿದಾಗ ಡ್ಯಾಶ್-ಬೋರ್ಡ್ ಗೆ ಹೋಗುತ್ತೇವೆ. ಡ್ಯಾಶ್ ಬೋರ್ಡ್ ನಮಗೆ ಸೈಟ್ ನಲ್ಲಿನ ಎಲ್ಲಾ ವಿಷಯಗಳನ್ನೂ ತೋರಿಸುತ್ತದೆ.
04:45 ನಾವು ಅವುಗಳನ್ನು Published ಹಾಗೂ Unpublished ಎಂದು ಫಿಲ್ಟರ್ ಮಾಡಬಹುದು. ನಾವು Content Type ನ ವಿಧವಾಗಿಯೂ ಫಿಲ್ಟರ್ ಮಾಡಬಹುದು ಅಥವಾ ಯಾವುದೇ Title ಅನ್ನು ಹುಡುಕಬಹುದು ಮತ್ತು ಯಾವುದೇ Language ಅನ್ನು ಆಯ್ಕೆ ಮಾಡಬಹುದು.
04:57 ನಮ್ಮಲ್ಲಿ ಯಾವುದೇ ವಿಷಯಗಳಿಲ್ಲದಿರುವುದರಿಂದ ಈ ಪೇಜ್ ಸ್ವಲ್ಪ ಸೀಮಿತವಾಗಿದೆ.
05:03 ನಾವು ಇಲ್ಲಿನ subtabs ಅನ್ನು ಕ್ಲಿಕ್ ಮಾಡಿದರೆ ಈವರೆಗೂ ಯಾವುದೇ ಕಮೆಂಟ್ ಗಳಿಲ್ಲದಿರುವುದು ತಿಳಿಯುತ್ತದೆ.
05:10 ಮತ್ತು, ನಾವು Files ನ ಮೇಲೆ ಕ್ಲಿಕ್ ಮಾಡಿದರೆ ಅಪ್ಲೋಡ್ ಆದ ಎಲ್ಲಾ ಫೈಲ್ ಗಳ ಸೂಚಿಯನ್ನು ನೋಡಬಹುದು.
05:18 ಇವುಗಳು ಚಿತ್ರಗಳಾಗಿರಬಹುದು ಅಥವಾ ಯಾವುದೇ ತರಹದ ಫೈಲ್ ಗಳಾಗಿರಬಹುದು. ನಾವು ಇದರ ಬಗ್ಗೆ ನಂತರ ಕಲಿಯೋಣ.
05:25 ನಾವೀಗ Add content ನ ಮೇಲೆ ಕ್ಲಿಕ್ ಮಾಡೋಣ ಹಾಗೂ ಸ್ವಾಗತ ಲೇಖನ ವನ್ನು ನಮ್ಮ Home ಪೇಜ್ ಗೆ ಸೇರಿಸೋಣ.
05:32 Article ನ ಮೇಲೆ ಕ್ಲಿಕ್ ಮಾಡಿ ಹಾಗೂ Title ಎಂಬಲ್ಲಿ “Welcome to Drupalville” ಎಂದು ಟೈಪ್ ಮಾಡಿ.
05:40 ನಮ್ಮ ಸೈಟ್ ನ ಹೆಸರು “Drupalville” ಆಗಿದೆ ಹಾಗೂ ಇದು ಡ್ರುಪಲ್ ನ ಬಗೆಗಿನ ಎಲ್ಲಾ ತರಹದ ಮಾಹಿತಿಗಳನ್ನೂ ಕೊಡುತ್ತದೆ.
05:49 "Body" ಎಂಬಲ್ಲಿ ನಾವು ಈ ಕೆಳಗಿನಂತೆ ಟೈಪ್ ಮಾಡೋಣ - “Welcome to our site! We are so glad you stopped by!”.
05:57 ನಾವು ಉಳಿದ ಈ ಸ್ಥಾನಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡೋಣ.
06:06 ಆದರೆ Tags ಎಂಬಲ್ಲಿ, ನಾವು "welcome, Drupal" ಎಂದು ಸೇರಿಸೋಣ.
06:11 tags ಎಂಬುದು ನಾವು ನೀಡಿದ ಎಲ್ಲಾ ಲೇಖನಗಳ ಸೂಚಿಗೆ ಲಿಂಕ್ ಗಳನ್ನು ರಚಿಸುವುದು.
06:18 ನಾವಿಲ್ಲಿ ಚಿತ್ರವನ್ನೂ ಅಪ್ಲೋಡ್ ಮಾಡಬಹುದಾಗಿದೆ.
06:22 ನಾನು ಈಗಾಗಲೇ Drupal 8 ನ ಲೋಗೋವನ್ನು ನನ್ನ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿ ಸೇವ್ ಮಾಡಿದ್ದೇನೆ.
06:29 ನಿಮ್ಮ ಅನುಕೂಲಕ್ಕಾಗಿ Drupal 8 ಲೋಗೋವನ್ನು ಈ ಟ್ಯುಟೋರಿಯಲ್ ನ ವೆಬ್ ಪೇಜ್ ನಲ್ಲಿ Code Files ಲಿಂಕ್ ನಲ್ಲಿ ಕೊಡಲಾಗಿದೆ.
06:39 ದಯವಿಟ್ಟು ಡೌನ್ಲೋಡ್ ಮಾಡಿ ಹಾಗೂ ಬಳಸಿ.
06:41 Browse ಅನ್ನು ಕ್ಲಿಕ್ ಮಾಡಿ ಹಾಗೂ ಸೇವ್ ಆದ ಚಿತ್ರವನ್ನು ಹುಡುಕಿ ಹಾಗೂ ಅಪ್ಲೋಡ್ ಮಾಡಿ. ಗಮನಿಸಿ, ಇದು ಅಪ್ಲೋಡ್ ಆಗುತಿದ್ದಂತೆಯೇ ಡ್ರುಪಲ್ ಒಂದು Alternative text ಗಾಗಿ ಕೇಳುತ್ತದೆ.
06:54 ಅಲ್ಲಿರುವ ಸಣ್ಣ ನಕ್ಷತ್ರವು ಇದು ಕಡ್ಡಾಯವಾಗಿ ಬೇಕೆಂಬುದನ್ನು ಸೂಚಿಸುತ್ತದೆ.
07:00 Alternative text ಅನ್ನು ಸ್ಕ್ರೀನ್ ಅನ್ನು ನೋಡುವವರು ನೋಡುತ್ತಾರೆ, ಕಣ್ಣಿಲ್ಲದವರು ಕೇಳುತ್ತಾರೆ ಹಾಗೂ ಗೂಗಲ್ ನಮ್ಮ ಸೈಟ್ ಅನ್ನು ನೋಡಿದಾಗ ಇದನ್ನೇ ಹುಡುಕುತ್ತದೆ.
07:09 "this is the Drupal 8 logo" ಎಂದು ಟೈಪ್ ಮಾಡಿ. ಈಗ Save and publish ಅನ್ನು ಕ್ಲಿಕ್ ಮಾಡಿ.
07:17 ನಾವು ಇದೀಗ ನಮ್ಮ ಮೊದಲ ನೋಡ್ ಅನ್ನು, ನಮ್ಮ ನೂತನ Drupal ಸೈಟ್ ನಲ್ಲಿ ರಚಿಸಿದ್ದೇವೆ.
07:23 ಈಗ, ನಾವು ಯಾವಾಗ Content ನ ಮೇಲೆ ಕ್ಲಿಕ್ ಮಾಡುತ್ತೇವೆಯೋ ಆಗ node ನ ಪಟ್ಟಿ ತೋರುತ್ತದೆ. ಅಲ್ಲಿ ನಾವು ಅದರ ಶೀರ್ಷಿಕೆ, ಕಂಟೆಂಟ್ ನ ಪ್ರಕಾರ, ಯಾರು ರಚಿಸಿದ್ದು, ನೋಡ್ ನ ಸ್ಥಿತಿ ಹಾಗೂ ಕೊನೆಯ ಅಪ್ಡೇಟ್ ನ ಸಮಯ ಹಾಗೂ
07:37 Edit, Delete ನಂತಹ ಕಾರ್ಯಾಚರಣೆಗಳನ್ನು ನೋಡಬಹುದು. ನಾವು ಇವುಗಳ ಬಗ್ಗೆ ಕಲಿಯಲಿದ್ದೇವೆ.
07:47 ಇದು ನಮ್ಮ administrative ಟೂಲ್ ಬಾರ್ ನಲ್ಲಿಯ content.
07:52 Structure ಎಂಬುದು administrative ಟೂಲ್ ಬಾರ್ ನಲ್ಲಿನ ಎರಡನೆಯ ಲಿಂಕ್ ಆಗಿದೆ. ಅದರ ಮೇಲೆ ಕ್ಲಿಕ್ ಮಾಡೋಣ.
07:58 ಡ್ರುಪಲ್ ನಲ್ಲಿ, Structure ಎಂಬುದರಲ್ಲಿ ನಾವು ನಮ್ಮ ಸೈಟ್ ಅನ್ನು ರಚಿಸುತ್ತೇವೆ. ಇದನ್ನು site building ಎಂದೂ ಕರೆಯುತ್ತೇವೆ.
08:07 ಇಲ್ಲಿ ಹಲವು ವಿಷಯಗಳಿದ್ದಾವೆ - Block layout, Comment types, Contact forms, Content types, Display modes, Menus, Taxonomy (ಟ್ಯಾಕ್ಸೋನೋಮಿ), Views ಇತ್ಯಾದಿ.
08:21 ಇವುಗಳಿಂದ, ನಮ್ಮ ಸೈಟ್ ಎಂಬುದು ಮುಖ್ಯವಾಗಿ ಈ Structure ಹಾಗೂ Content ಎಂಬ ಮೆನ್ಯುಗಳಿಂದಲೇ ರಚಿಸಲ್ಪಡುತ್ತವೆ ಎಂದು ತಿಳಿಯುತ್ತದೆ.
08:30 ಸದ್ಯಕ್ಕೆ, ನಾವು Block layout ನ ಮೇಲೆ ಕ್ಲಿಕ್ ಮಾಡೋಣ.
08:34 ನಾವು block ಗಳನ್ನು ನಮ್ಮ ಥೀಮ್ ಗೆ ಅನುಗುಣವಾಗಿ ಸೈಟ್ ನ ವಿವಿಧ ಜಾಗಗಳಲ್ಲಿ ಇರಿಸಬಹುದು. ನಾವಿದನ್ನು ಇನ್ನೂ ಹೆಚ್ಚಿನ ವಿಷಯಗಳೊಂದಿಗೆ ಮುಂದೆ ನೋಡೋಣ.
08:45 Custom block library ಯ ಮೇಲೆ ಕ್ಲಿಕ್ ಮಾಡಿ ಮತ್ತು ಇಲ್ಲಿ welcome block ಅನ್ನು ಸೇರಿಸೋಣ.
08:50 Add Custom block ನ ಮೇಲೆ ಕ್ಲಿಕ್ ಮಾಡಿ ಮತ್ತು ಇದನ್ನು Welcome to Drupalville ಎಂದು ಹೆಸರಿಸಿ.
08:57 Body ಎಂಬಲ್ಲಿ, "Welcome to Drupalville. This is where you’ll learn all about Drupal!" ಎಂದು ಟೈಪ್ ಮಾಡಿ.
09:06 ದಯವಿಟ್ಟು ಗಮನಿಸಿ, ಇದು ಕಂಟೆಂಟ್ ಅಲ್ಲ. Blocks ಗಳು ಸ್ವಲ್ಪ ಬೇರೆ ವಿಧವಾಗಿದ್ದು sidebars ನಂತೆ ಇರುತ್ತವೆ.
09:15 ಈಗ, Save ನ ಮೇಲೆ ಕ್ಲಿಕ್ ಮಾಡಿ.
09:18 ಈಗ ನಮ್ಮಲ್ಲಿ block ಇದೆ ಹಾಗೂ ನಾವೀಗ ಇದನ್ನು ಎಲ್ಲಿ ಇಡಬೇಕೆಂದು ನಿರ್ಧರಿಸಬಹುದು.
09:22 Block layout ನ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ. ಕೆಳಗೆ Sidebar first ನತ್ತ ಹೊಗಿ ಹಾಗೂ Place block ನ ಮೇಲೆ ಕ್ಲಿಕ್ ಮಾಡಿ.
09:33 ನಮ್ಮ ಡ್ರುಪಲ್ ಸೈಟ್ ನಲ್ಲಿ ಇರಿಸಬೇಕಾದ ಎಲ್ಲಾ ಬ್ಲಾಕ್ಸ್ ಗಳನ್ನು ತೋರಿಸುತ್ತಾ ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
09:41 ಅಲ್ಲಿ, ನಾವು ರಚಿಸಿದ "Welcome to Drupalville" ಎಂಬ Custom ಬ್ಲಾಕ್ ಅನ್ನು ಹುಡುಕಿ. ನಂತರ Place block ನ ಮೇಲೆ ಕ್ಲಿಕ್ ಮಾಡಿ.
09:49 ಇಲ್ಲಿ ಕೆಲವೊಂದು ನಿರ್ಬಂಧಗಳಿವೆ. ಅವುಗಳನ್ನು ನಾವು ಮುಂದೆ ತಿಳಿಯೋಣ. ಈಗ Save block ನ ಮೇಲೆ ಕ್ಲಿಕ್ ಮಾಡಿ.
09:59 ನಾವೀಗ ನಮ್ಮ Home ಪೇಜ್ ಗೆ ಹೋಗೋಣ ಮತ್ತು "Welcome to Drupalville" ಎಂಬುದನ್ನು ನೋಡೋಣ.
10:04 ಇದೀಗ ನಮಗೆ ಬೇಕಾದ ಕ್ರಮದಲ್ಲಿ ಅಥವಾ ಜಾಗದಲ್ಲಿ ಇಲ್ಲದೇ ಇರಬಹುದು, ಆದರೆ ಪರವಾಗಿಲ್ಲ.
10:13 ಇದು Structure ಮೆನ್ಯುವಿನ site building ಪ್ರಕ್ರಿಯೆಯ ಭಾಗವಾಗಿದೆ.
10:19 ನಾವೀಗ ನಮ್ಮ Administration ಟೂಲ್ ಬಾರ್ ನಲ್ಲಿ ನಂತರದ ಮೆನ್ಯುವಾದ Appearance ನ ಮೇಲೆ ಕ್ಲಿಕ್ ಮಾಡೋಣ.
10:26 ಇದು ನಮಗೆ ನಮ್ಮ Drupal site ಗೆ ಸಿಗುವ ಎಲ್ಲಾ ಥೀಮ್ಸ್ ಗಳ ಒಂದು ಸಮೀಕ್ಷೆಯನ್ನು ನೀಡುತ್ತದೆ. ಇದು ನಮಗೆ ಅಪ್ಡೇಟ್ ಹಾಗೂ ಗ್ಲೋಬಲ್ ಸೆಟ್ಟಿಂಗ್ ಮಾಡಲು ಸಾಮರ್ಥ್ಯವನ್ನೂ ನೀಡುತ್ತದೆ.
10:38 ಸದ್ಯಕ್ಕೆ, Bartik (ಬಾರ್ಟಿಕ್) ನ Settings ಅನ್ನು ಕ್ಲಿಕ್ ಮಾಡಿ.
10:44 ಇಲ್ಲಿಯೇ ನಾವು ನಮ್ಮ ಸೈಟ್ ಗಾಗಿ ಆಯ್ಕೆ ಮಾಡಿದ ಥೀಮ್ ಅನ್ನು ಸುಂದರವಾಗಿಸುವಂತೆ ಮಾಡಲಾಗುತ್ತದೆ.
10:52 ನಾವಿಲ್ಲಿ ಬೇರೆ ಬೇರೆ ಬಣ್ಣಗಳನ್ನು ಆಯ್ಕೆ ಮಾಡುವುದರ ಮೂಲಕ ಬಾರ್ಟಿಕ್ ನ ದೃಶ್ಯವನ್ನು ಅಪ್ಡೇಟ್ ಮಾಡಬಹುದು. ಅಥವಾ ನಾವು ಕೈಯಾರೆ ಬಣ್ಣಗಳನ್ನು ಆರಿಸಬಹುದು.
11:03 ಇದು ನಮಗೆ preview ಅನ್ನು ನೀಡುತ್ತದೆ. ನಾವು ಇದರ ಕೆಲವು ದೃಶ್ಯಾವಳಿಗಳನ್ನೂ ಸಹ ಬದಲಿಸಬಹುದು.
11:12 ಮೇಲಕ್ಕೆ ಹೋಗಿ ಹಾಗೂ ಅಲ್ಲಿ Global settings ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ, ನಾವು ಹೊಸ ಪಾಥ್ ಅನ್ನು ಕೊಟ್ಟು ಅಥವಾ ಹೊಸ ಚಿತ್ರವನ್ನು ಅಪ್ಲೋಡ್ ಮಾಡಿ ನಮ್ಮ ಸೈಟ್ ನ ಲೋಗೋವನ್ನು ಬದಲಾಯಿಸಬಹುದು.
11:26 ಹೊಸ ಅಪ್ಲೋಡ್ ಮಾಡದಯೇ ನಾವು Save ಅನ್ನು ಕ್ಲಿಕ್ ಮಾಡಿದರೆ ಏನಾಗುವುದು?
11:31 ನಮ್ಮ ಸೈಟ್ ಗೆ ಹಿಂತಿರುಗಿ ಮತ್ತು ಅಲ್ಲಿ ನೋಡಿ, ನಮ್ಮ ಲೋಗೋ ಕಾಣಿಸುವುದಿಲ್ಲ.
11:36 ಅದನ್ನು ಪುನಃ ಕಾಣುವಂತೆ ಮಾಡಲು, ಕ್ರಮವಾಗಿ Appearance > Settings ಹಾಗೂ Global settings ನ ಮೇಲೆ ಕ್ಲಿಕ್ ಮಾಡಿ. Use the default logo ನ ಮೇಲೆ ಕ್ಲಿಕ್ ಮಾಡಿ ಹಾಗೂ Save configuration ನ ಮೇಲೆ ಕ್ಲಿಕ್ ಮಾಡಿ.
11:50 ಈಗ, ನಮ್ಮ ಸೈಟ್ ನಲ್ಲಿ ಎಷ್ಟೇ ಪೇಜ್ ಗಳಿರಲಿ, ನಮ್ಮ ಲೋಗೋ ಎಲ್ಲಾ ಪೇಜ್ ನಲ್ಲೂ ಕಾಣಿಸುತ್ತದೆ.
11:58 ಹೀಗೆ, ನಾವು ನಮ್ಮ ಡ್ರುಪಲ್ ಸೈಟ್ ನಲ್ಲಿ Appearance ಟ್ಯಾಬ್ ನ ಅಡಿಯಲ್ಲಿ ಥೀಮ್ಸ್ ಅನ್ನು ನಿರ್ವಹಿಸುತ್ತೇವೆ. ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗ ಬಂದಿದ್ದೇವೆ.
12:08 ಒಟ್ಟಿನಲ್ಲಿ, ಈ ಟ್ಯುಟೋರಿಯಲ್ ನಲ್ಲಿ ನಾವು ನಮ್ಮ ಡ್ರುಪಲ್ ನ ಇಂಟರ್ಫೇಸ್ ಅನ್ನು ನಿರ್ವಹಿಸಲು ಕಲಿತೆವು.
12:15 ಅದಲ್ಲದೇ, ಮೆನ್ಯು ಅಂಶಗಳಾದ -Content, Structure ಹಾಗೂ Appearance ಗಳ ಬಗ್ಗೆ ಕಲಿತೆವು.
12:33 ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ.
12:44 ಈ ಕೆಳಗಿನ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ.
12:52 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
13:02 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
13:17 ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.

Contributors and Content Editors

PoojaMoolya, Pratik kamble, Sandhya.np14, Vasudeva ahitanal