Difference between revisions of "Ruby/C2/Arithmetic-and-Relational-Operators/Kannada"

From Script | Spoken-Tutorial
Jump to: navigation, search
Line 367: Line 367:
 
|-
 
|-
 
| 08:34
 
| 08:34
| ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಒಂದು ಉದಾಹರಣೆಯೊಂದಿಗೆ ನಾವು ನೋಡೋಣ.
+
| ಒಂದು ಉದಾಹರಣೆಯೊಂದಿಗೆ ನಾವು ನೋಡೋಣ.
 
|-
 
|-
 
| 08:36
 
| 08:36
Line 483: Line 483:
 
|-
 
|-
 
| 10:57
 
| 10:57
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ -------- .
+
| IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . ವಂದನೆಗಳು.
ವಂದನೆಗಳು.
+
 
|}
 
|}

Revision as of 19:06, 1 October 2016

Time Narration
00:01 Rubyಯಲ್ಲಿ Arithmetic & Relational Operators (ಅರ್ಥ್ಮೆಟಿಕ್ ಆಂಡ್ ರಿಲೇಶನಲ್ ಆಪರೇಟರ್ಸ್) ಎಂಬ Spoken Tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು:
00:08 * ಅಂಕಗಣಿತದ (arithmetic) ಆಪರೇಟರ್ ಗಳು
00:10 * ಆಪರೇಟರ್ ಗಳ ’ಪ್ರಿಸಿಡೆನ್ಸ್’ (ಆದ್ಯತೆ)
00:12 * 'ರಿಲೇಶನಲ್ ಆಪರೇಟರ್'ಗಳು ಇವುಗಳ ಬಗ್ಗೆ ಕಲಿಯುವೆವು.
00:14 ಇಲ್ಲಿ ನಾವು:
  • Ubuntu Linux ಆವೃತ್ತಿ 12.04
  • Ruby 1.9.3 ಇವುಗಳನ್ನು ಬಳಸುತ್ತಿದ್ದೇವೆ.
00:23 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, 'Linux' ನಲ್ಲಿ ‘ಟರ್ಮಿನಲ್’ ಮತ್ತು ’ಟೆಕ್ಸ್ಟ್ ಎಡಿಟರ್’ಗಳನ್ನು ಉಪಯೋಗಿಸುವುದನ್ನು ನೀವು ತಿಳಿದಿರಬೇಕು.
00:28 ನೀವು 'irb' ಯನ್ನು ಸಹ ತಿಳಿದಿರಬೇಕು.
00:31 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೆಟ್ಟಿಕೊಡಿ.
00:34 ಈಗ, ನಾವು ಅಂಕಗಣಿತದ ಆಪರೇಟರ್ ಗಳ ಬಗ್ಗೆ ತಿಳಿಯೋಣ.
00:38 'Ruby' (ರೂಬಿ), ಈ ಕೆಳಗಿನ ಅಂಕಗಣಿತದ ಆಪರೇಟರ್ ಗಳನ್ನು ಹೊಂದಿದೆ.
00:42 * '+' ಸಂಕಲನ, ಉದಾ: a+b.
00:45 * '-' ವ್ಯವಕಲನ, ಉದಾ: a-b.
00:48 * '/' ಭಾಗಾಕಾರ, ಉದಾ: a/b.
00:51 * '*' ಗುಣಾಕಾರ, ಉದಾ: a*b.
00:55 * '%' ಮಾಡ್ಯುಲಸ್, ಉದಾ: a%b.
00:59 * '**' ಘಾತಾಂಕ (ಎಕ್ಸ್ಪೋನೆಂಟ್), ಉದಾ: a**b.
01:04 'irb' (ಐ-ಆರ್-ಬಿ) ಯನ್ನು ಬಳಸಿ, ನಾವು ಈ ಅಂಕಗಣಿತದ ಆಪರೇಟರ್ ಗಳನ್ನು ತಿಳಿಯಲು ಪ್ರಯತ್ನಿಸೋಣ.
01:08 'Ctrl, Alt' ಮತ್ತು 'T' ಕೀಗಳನ್ನು ಒಟ್ಟಿಗೇ ಒತ್ತಿ ಟರ್ಮಿನಲ್ ಅನ್ನು ಓಪನ್ ಮಾಡಿ.
01:14 ನಿಮ್ಮ ಸ್ಕ್ರೀನ್ ನ ಮೇಲೆ ಒಂದು ’ಟರ್ಮಿನಲ್ ವಿಂಡೋ’ ಕಾಣಿಸಿಕೊಳ್ಳುತ್ತದೆ.
01:17 'Interactive Ruby' (ಇಂಟರ್ಯಾಕ್ಟಿವ್ ರೂಬಿ) ಯನ್ನು ಲಾಂಚ್ ಮಾಡಲು, 'irb' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
01:21 ಹೀಗೆ ಟೈಪ್ ಮಾಡಿ: '10 plus 20' ಮತ್ತು 'Enter' ಅನ್ನು ಒತ್ತಿ.
01:25 ಸಂಕಲನದ ಕ್ರಿಯೆಯು ಮಾಡಲ್ಪಡುತ್ತದೆ ಮತ್ತು ಉತ್ತರವನ್ನು 30 ಎಂದು ತೋರಿಸಲಾಗುತ್ತದೆ.
01:31 ಹೀಗೆಯೇ, ವ್ಯವಕಲನ ಹಾಗೂ ಗುಣಾಕಾರದ ಕ್ರಿಯೆಗಳನ್ನು ಮಾಡಬಹುದು.
01:35 ನಾವು ಭಾಗಾಕಾರದ ಆಪರೇಟರ್ ಅನ್ನು ಪ್ರಯತ್ನಿಸೋಣ.
01:38 ಹೀಗೆ ಟೈಪ್ ಮಾಡಿ: '10 slash 4'
01:40 ಮತ್ತು 'Enter' ಅನ್ನು ಒತ್ತಿ.
01:42 ಇಲ್ಲಿ, ಫಲಿತಾಂಶವನ್ನು ಹತ್ತಿರದ ಪೂರ್ಣಸಂಖ್ಯೆಯಾದ 2 ಕ್ಕೆ ಮೊಟಕುಗೊಳಿಸಿದ್ದನ್ನು ನೀವು ನೋಡಬಹುದು.
01:47 ಇನ್ನೂ ಹೆಚ್ಚು ನಿಖರವಾದ ಉತ್ತರವನ್ನು ಪಡೆಯಲು, ಒಂದು ಸಂಖ್ಯೆಯನ್ನು 'float' (ಫ್ಲೋಟ್) ಎಂದು ನಾವು ವ್ಯಕ್ತಪಡಿಸುವುದು ಅವಶ್ಯವಾಗಿದೆ.
01:52 ಹೀಗೆ ಟೈಪ್ ಮಾಡಿ: '10.0 slash 4'
01:56 ಮತ್ತು 'Enter' ಅನ್ನು ಒತ್ತಿ.
01:58 ಈಗ ನಾವು ಉತ್ತರವನ್ನು 2.5 ಎಂದು ಪಡೆಯುತ್ತೇವೆ.
02:01 ನಾವು ಈಗ 'ಮಾಡ್ಯೂಲಸ್' (modulus) ಆಪರೇಟರ್ ಅನ್ನು ಪ್ರಯತ್ನಿಸೋಣ.
02:05 'ಮಾಡ್ಯೂಲಸ್' ಆಪರೇಟರ್, ಶೇಷವನ್ನು ಔಟ್ಪುಟ್ ಎಂದು ಹಿಂದಿರುಗಿಸುತ್ತದೆ (return).
02:09 ಹೀಗೆ ಟೈಪ್ ಮಾಡಿ: '12 percentage sign 5' ಮತ್ತು 'Enter' ಅನ್ನು ಒತ್ತಿ.
02:15 ಇಲ್ಲಿ, 12 (ಹನ್ನೆರಡು), 5 (ಐದು) ರಿಂದ ಭಾಗಿಸಲ್ಪಡುತ್ತದೆ ಮತ್ತು ಶೇಷ 2 ಹಿಂದಿರುಗಿಸಲ್ಪಡುತ್ತದೆ.
02:21 ಈಗ, ನಾವು 'ಎಕ್ಸ್ಪೋನೆಂಟ್' (exponent) ಆಪರೇಟರ್ ಅನ್ನು ಪ್ರಯತ್ನಿಸೋಣ.
02.24 ಹೀಗೆ ಟೈಪ್ ಮಾಡಿ: '2' ನಂತರ ಎರಡು ಸಲ ಆಸ್ಟೆರಿಸ್ಕ್ ಚಿಹ್ನೆಗಳು ಮತ್ತು ಆನಂತರ '5' (2**5) ಮತ್ತು 'Enter' ಅನ್ನು ಒತ್ತಿ.
02:32 ಇದರ ಅರ್ಥವೇನೆಂದರೆ 2 ರ ಘಾತ 5.
02:36 ಹೀಗಾಗಿ, ನಮಗೆ ಔಟ್ಪುಟ್ 32 ಎಂದು ಸಿಗುತ್ತದೆ.
02:39 ನಂತರ, ನಾವು ಆಪರೇಟರ್ ಗಳ ’ಪ್ರಿಸಿಡೆನ್ಸ್’ನ (ಆದ್ಯತೆ) ಬಗ್ಗೆ ತಿಳಿಯೋಣ.
02:44 ಗಣಿತದ ಒಂದು ಎಕ್ಸ್ಪ್ರೆಶನ್ ನಲ್ಲಿ ಹಲವಾರು ಕಾರ್ಯಾಚರಣೆಗಳು ಇದ್ದಾಗ,
02:47 ಪ್ರತಿಯೊಂದು ಭಾಗವನ್ನು ಪರೀಕ್ಷಿಸಲಾಗುತ್ತದೆ
02:50 ಮತ್ತು 'ಆಪರೇಟರ್ ಪ್ರಿಸಿಡೆನ್ಸ್' ಎಂಬ ಪೂರ್ವನಿರ್ಧರಿತ ಕ್ರಮದಲ್ಲಿ ಇದನ್ನು ನಿರ್ವಹಿಸಲಾಗುತ್ತದೆ.
02:56 ಎಂದರೆ, ಅತಿ ಹೆಚ್ಚಿನ ಆದ್ಯತೆಯನ್ನು ಹೊಂದಿರುವ ಆಪರೇಟರ್ ಅನ್ನು ಮೊದಲು ಎಕ್ಸಿಕ್ಯೂಟ್ ಮಾಡಲಾಗುವುದು.
03:01 ನಂತರ, ಇದನ್ನು ಆದ್ಯತೆಯ ಕ್ರಮದಲ್ಲಿ ಮುಂದಿನ ಆಪರೇಟರ್, ಅನುಸರಿಸುತ್ತದೆ. ಹೀಗೆಯೇ ಇದು ಮುಂದುವರಿಯುತ್ತದೆ.
03:07 ಈ ಸ್ಲೈಡ್, ಅತಿ ಹೆಚ್ಚು ಆದ್ಯತೆಯಿಂದ (precedence) ಅತಿ ಕಡಿಮೆ ಆದ್ಯತೆಯನ್ನು ಹೊಂದಿದ ಎಲ್ಲ ಆಪರೇಟರ್ ಗಳನ್ನು ಪಟ್ಟಿ ಮಾಡುತ್ತದೆ.
03:13 ಉದಾಹರಣೆಗೆ- '3 + 4 * 5 ' ಇದು 23 (ಇಪ್ಪತ್ಮ್ಮೂರು)ಅನ್ನು ಹಿಂದಿರುಗಿಸುತ್ತದೆ, 35 (ಮೂವತ್ತೈದು)ಅನ್ನು ಅಲ್ಲ.
03:23 ಗುಣಾಕಾರದ ಆಪರೇಟರ್ (*), ಸಂಕಲನದ ಆಪರೇಟರ್ ಗಿಂತ (+) ಹೆಚ್ಚಿನ ’ಪ್ರಿಸಿಡೆನ್ಸ್’ಅನ್ನು (ಆದ್ಯತೆ) ಹೊಂದಿದೆ.
03:29 ಹೀಗಾಗಿ, ಮೊದಲು ಇದನ್ನು ನಿರ್ವಹಿಸಲಾಗುತ್ತದೆ.
03:32 ಆದ್ದರಿಂದ, ನಾಲ್ಕರ ಐದುಪಟ್ಟು ಇಪ್ಪತ್ತು ಎಂದಾಗುತ್ತದೆ ಮತ್ತು ಆಮೇಲೆ ಮೂರನ್ನು 20 ಕ್ಕೆ (ಇಪ್ಪತ್ತಕ್ಕೆ) ಸೇರಿಸಲಾಗುತ್ತದೆ ಹಾಗೂ 23 ಎಂಬ ಔಟ್ಪುಟ್ ಅನ್ನು ಕೊಡುತ್ತದೆ.
03:42 ’ಆಪರೇಟರ್ ಪ್ರಿಸಿಡೆನ್ಸ್’ಅನ್ನು ಆಧರಿಸಿದ ಇನ್ನೂ ಕೆಲವು ಉದಾಹರಣೆಗಳನ್ನು ನಾವು ನೋಡೋಣ.
03:47 ನಾವು ಟರ್ಮಿನಲ್ ಗೆ ಹಿಂದಿರುಗೋಣ.
03:50 'irb' ಕನ್ಸೋಲ್ ಅನ್ನು ತೆರವು ಮಾಡಲು, 'Crtl, L' ಕೀಗಳನ್ನು ಒಟ್ಟಿಗೇ ಒತ್ತಿ.
03:56 ಈಗ, ಹೀಗೆ ಟೈಪ್ ಮಾಡಿ: “7 minus 2 multiply by 3”
04:03 ಮತ್ತು 'Enter' ಅನ್ನು ಒತ್ತಿ.
04:05 ನಾವು 1 ಅನ್ನು ಉತ್ತರವಾಗಿ ಪಡೆಯುತ್ತೇವೆ.
04:08 ಇಲ್ಲಿ, ಆಸ್ಟೆರಿಸ್ಕ್ ಚಿಹ್ನೆಯು ಉಣಾ ಚಿಹ್ನೆಗಿಂತ ಹೆಚ್ಚಿನ ’ಪ್ರಿಸಿಡೆನ್ಸ್’ಅನ್ನು ಹೊಂದಿದೆ.
04:13 ಹೀಗಾಗಿ, ಗುಣಾಕಾರದ ಕ್ರಿಯೆಯು ಮೊದಲು ಮಾಡಲ್ಪಡುತ್ತದೆ ಮತ್ತು ಆನಂತರ ವ್ಯವಕಲನವು ಮಾಡಲ್ಪಡುತ್ತದೆ.
04:20 ನಾವು ಇನ್ನೊಂದು ಉದಾಹರಣೆಯನ್ನು ನೋಡೋಣ.
04:22 ಹೀಗೆ ಟೈಪ್ ಮಾಡಿ: ಬ್ರಾಕೆಟ್ ಗಳಲ್ಲಿ '10 plus 2 slash 4'
04:29 ಮತ್ತು 'Enter' ಅನ್ನು ಒತ್ತಿ.
04:30 ನಾವು ಉತ್ತರವನ್ನು 3 ಎಂದು ಪಡೆಯುತ್ತೇವೆ.
04:33 ಈ ಸಂದರ್ಭದಲ್ಲಿ, ಬ್ರಾಕೆಟ್(), ಭಾಗಾಕಾರಕ್ಕಿಂತ (/) ಹೆಚ್ಚಿನ ಆದ್ಯತೆಯನ್ನು ಪಡೆದಿದೆ.
04:39 ಹೀಗಾಗಿ ಬ್ರಾಕೆಟ್ ನ ಒಳಗಿರುವ, ಅರ್ಥಾತ್ ಸಂಕಲನವು ಮೊದಲು ಮಾಡಲ್ಪಡುವುದು.
04:44 ನಂತರ ಭಾಗಾಕಾರವು ಮಾಡಲ್ಪಡುವುದು.
04:47 ಈಗ, 'ರಿಲೇಶನಲ್ ಆಪರೇಟರ್'ಗಳ ಬಗ್ಗೆ ನಾವು ಕಲಿಯೋಣ.
04:51 ನಾವು ಸ್ಲೈಡ್ ಗಳಿಗೆ ಬದಲಾಯಿಸೋಣ.
04:54 'ರಿಲೇಶನಲ್ ಆಪರೇಟರ್'ಗಳು, 'ಕಂಪ್ಯಾರಿಸನ್ ಆಪರೇಟರ್ಸ್' ಎಂದು ಸಹ ಪರಿಚಿತವಾಗಿವೆ.
04:59 'ರಿಲೇಶನಲ್ ಆಪರೇಟರ್'ಗಳನ್ನು ಬಳಸುವ ಎಕ್ಸ್ಪ್ರೆಶನ್ ಗಳು, ಬೂಲಿಯನ್ ವ್ಯಾಲ್ಯೂಗಳನ್ನು ಹಿಂದಿರುಗಿಸುತ್ತವೆ (return).
05:04 'Ruby'ಯಲ್ಲಿ, 'ರಿಲೇಶನಲ್ ಆಪರೇಟರ್'ಗಳು ಹೀಗಿವೆ -
05:07 * '==' 'ಇಕ್ವಲ್ ಟು', ಉದಾ: 'a==b '
05:14 * 'dot eql question mark', ಉದಾ: 'a.eql?b '
05:21 * '!=' 'ನಾಟ್ ಇಕ್ವಲ್ ಟು', ಉದಾ: 'a exclamation equals b'
05:28 * '<' 'ಲೆಸ್ ದ್ಯಾನ್', ಉದಾ: a < b
05:32 * '>' 'ಗ್ರೇಟರ್ ದ್ಯಾನ್', ಉದಾ: a > b
05:37 * '<=' 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಲೆಸ್ ದ್ಯಾನ್ ಆರೋ ಇಕ್ವಲ್ಸ್ b'
05:44 * '>=' 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಉದಾ: 'a ಗ್ರೇಟರ್ ದ್ಯಾನ್ ಆರೋ ಇಕ್ವಲ್ಸ್ b'
05:49 * '<=>' 'ಕಂಬೈನ್ಡ್ ಕಂಪ್ಯಾರಿಸನ್' ಉದಾ: 'a ಲೆಸ್ ದ್ಯಾನ್ ಆರೋ ಇಕ್ವಲ್ ಗ್ರೇಟರ್ ದ್ಯಾನ್ ಆರೋ b'.
05:56 ಈಗ, ಇವುಗಳಲ್ಲಿ ಕೆಲವು ಆಪರೇಟರ್ ಗಳನ್ನು ನಾವು ಪ್ರಯತ್ನಿಸೋಣ.
06:00 ಟರ್ಮಿನಲ್ ಗೆ ಹೋಗಿ.
06:02 'irb' ಕನ್ಸೋಲನ್ನು ತೆರವುಗೊಳಿಸಲು 'ctrl, L' ಕೀಗಳನ್ನು ಒಟ್ಟಿಗೇ ಒತ್ತಿ.
06:09 ನಾವು 'ಇಕ್ವಲ್ಸ್ ಟು' ಆಪರೇಟರ್ ಅನ್ನು ಪ್ರಯತ್ನಿಸೋಣ.
06:11 ಆದ್ದರಿಂದ ಹೀಗೆ ಟೈಪ್ ಮಾಡಿ: '10 ಇಕ್ವಲ್ಸ್ ಇಕ್ವಲ್ಸ್ 10'
06:16 ಮತ್ತು 'Enter' ಅನ್ನು ಒತ್ತಿ.
06:17 ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ.
06:20 '.eql?' (ಡಾಟ್ e-q-l) ಆಪರೇಟರ್, 'ಇಕ್ವಲ್ಸ್ ಟು' ಆಪರೇಟರ್ ನಂತೆಯೇ ಆಗಿದೆ.
06:24 ನಾವು ಇದನ್ನು ಪ್ರಯತ್ನಿಸೋಣ.
06:25 ಈಗ, ಹೀಗೆ ಟೈಪ್ ಮಾಡಿ: '10 .eql?10' ಮತ್ತು 'Enter' ಅನ್ನು ಒತ್ತಿ.
06:33 ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ.
06:35 ಈಗ, 'ನಾಟ್ ಇಕ್ವಲ್ ಟು' ಆಪರೇಟರ್ ಅನ್ನು ನಾವು ಪ್ರಯತ್ನಿಸೋಣ.
06:39 ಹೀಗೆ ಟೈಪ್ ಮಾಡಿ: '10 not equal 10'
06:44 ಮತ್ತು 'Enter' ಅನ್ನು ಒತ್ತಿ.
06:46 ನಾವು 'false' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ.
06:48 ಏಕೆಂದರೆ, ಈ ಎರಡೂ ಸಂಖ್ಯೆಗಳು ಸಮನಾಗಿವೆ.
06:51 'ctrl, L' ಗಳನ್ನು ಒಟ್ಟಿಗೇ ಒತ್ತಿ 'irb' ಕನ್ಸೋಲನ್ನು ತೆರವುಗೊಳಿಸಿ.
06:56 ಈಗ, ನಾವು 'ಲೆಸ್ ದ್ಯಾನ್' ಆಪರೇಟರ್ ಅನ್ನು ಪ್ರಯತ್ನಿಸೋಣ.
07:00 ಹೀಗೆ ಟೈಪ್ ಮಾಡಿ: '10 less than 5' ಮತ್ತು 'Enter' ಅನ್ನು ಒತ್ತಿ.
07:05 ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು 'true' ಎಂದು ರಿಟರ್ನ್ ಮಾಡುವುದು (ಹಿಂದಿರುಗಿಸುವುದು).
07:10 ಇಲ್ಲದಿದ್ದರೆ, ಇದು 'false' ಅನ್ನು ರಿಟರ್ನ್ ಮಾಡುವುದು.
07:14 ನಾವು 'false' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 10(ಹತ್ತು), 5 (ಐದು)ಕ್ಕಿಂತ ಚಿಕ್ಕದಾಗಿಲ್ಲ.
07:19 ಈಗ, ನಾವು 'ಗ್ರೇಟರ್ ದ್ಯಾನ್' ಆಪರೇಟರ್ ಅನ್ನು ಪ್ರಯತ್ನಿಸುವೆವು.
07:22 ಹೀಗೆ ಟೈಪ್ ಮಾಡಿ: '5 greater than 2'.
07:26 ಇಲ್ಲಿ, ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುವುದು (ಹಿಂದಿರುಗಿಸುವುದು).
07:31 ಇಲ್ಲದಿದ್ದರೆ ಇದು 'false' ಅನ್ನು ರಿಟರ್ನ್ ಮಾಡುವುದು.
07:34 'Enter' ಅನ್ನು ಒತ್ತಿ.
07:36 ಈ ಸಂದರ್ಭದಲ್ಲಿ, ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 5 (ಐದು), ನಿಜವಾಗಿಯೂ 2 ಕ್ಕಿಂತ (ಎರಡು) ಹೆಚ್ಚಾಗಿದೆ.
07:42 'ctrl, L' ಕೀಗಳನ್ನು ಒಟ್ಟಿಗೇ ಒತ್ತಿ 'irb' ಕನ್ಸೋಲನ್ನು ತೆರವುಗೊಳಿಸಿ.
07:47 ಈಗ, ನಾವು 'ಲೆಸ್ಸರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸುವೆವು.
07:51 ಹೀಗೆ ಟೈಪ್ ಮಾಡಿ: '12 less than equal 12'
07:56 ಮತ್ತು 'Enter' ಅನ್ನು ಒತ್ತಿ.
07:59 ಇಲ್ಲಿ, ಮೊದಲನೆಯ ಆಪರಾಂಡ್, (operand) ಎರಡನೆಯದಕ್ಕಿಂತ ಕಡಿಮೆಯಿದ್ದರೆ ಅಥವಾ ಅದಕ್ಕೆ ಸಮವಾಗಿದ್ದರೆ, ಆಗ ಇದು 'true' ಅನ್ನು ರಿಟರ್ನ್ ಮಾಡುತ್ತದೆ.
08:04 ಇಲ್ಲದಿದ್ದರೆ ಇದು 'false' ಅನ್ನು ರಿಟರ್ನ್ ಮಾಡುತ್ತದೆ.
08:07 ನಾವು 'true' ಎಂಬ ಔಟ್ಪುಟ್ ಅನ್ನು ಪಡೆಯುತ್ತೇವೆ ಏಕೆಂದರೆ 12 (ಹನ್ನೆರಡು), 12 ಕ್ಕೆ ಸಮನಾಗಿದೆ.
08:11 ಹೀಗೆಯೇ, ನೀವು 'ಗ್ರೇಟರ್ ದ್ಯಾನ್ ಆರ್ ಇಕ್ವಲ್ ಟು' ಆಪರೇಟರ್ ಅನ್ನು ಪ್ರಯತ್ನಿಸಬಹುದು.
08:15 ಈಗ, ನಾವು 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್ ಅನ್ನು ಪ್ರಯತ್ನಿಸೋಣ.
08:19 'ಕಂಬೈನ್ಡ್ ಕಂಪ್ಯಾರಿಸನ್' ಆಪರೇಟರ್:
08:21 * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕೆ ಸಮವಾಗಿದ್ದರೆ, ಆಗ ಇದು '0'ಯನ್ನು (ಸೊನ್ನೆ) ಹಿಂದಿರುಗಿಸುತ್ತದೆ (Return).
08:24 * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಹೆಚ್ಚು ಇದ್ದರೆ, ಆಗ ಇದು '1' (ಒಂದು)ಅನ್ನು ಹಿಂದಿರುಗಿಸುತ್ತದೆ (Return) ಮತ್ತು
08:29 * ಮೊದಲನೆಯ ಆಪರಾಂಡ್ (operand) ಎರಡನೆಯದಕ್ಕಿಂತ ಕಡಿಮೆ ಇದ್ದರೆ, ಆಗ ಇದು '-1' (ಮೈನಸ್ ಒಂದು) ಅನ್ನು ಹಿಂದಿರುಗಿಸುತ್ತದೆ (Return).
08:34 ಒಂದು ಉದಾಹರಣೆಯೊಂದಿಗೆ ನಾವು ನೋಡೋಣ.
08:36 ಹೀಗೆ ಟೈಪ್ ಮಾಡಿ: '3 less than equals greater than 3 '
08:41 ಮತ್ತು 'Enter' ಅನ್ನು ಒತ್ತಿ.
08:43 ನಾವು '0' (ಸೊನ್ನೆಯನ್ನು) ಔಟ್ಪುಟ್ ಆಗಿ ಪಡೆಯುತ್ತೇವೆ.
08:45 ಏಕೆಂದರೆ, ಎರಡೂ ಆಪರಾಂಡ್ ಗಳು ಸಮವಾಗಿವೆ ಅರ್ಥಾತ್ ಎರಡೂ 3 ಎಂದು ಆಗಿವೆ.
08:50 ಈಗ, ಎರಡರಲ್ಲಿ ಒಂದು ಆಪರಾಂಡ್ ಅನ್ನು ನಾವು 4 (ನಾಲ್ಕು) ಎಂದು ಬದಲಾಯಿಸೋಣ.
08:53 ಹೀಗೆ ಟೈಪ್ ಮಾಡಿ: '4 less than equals greater than 3'
08:58 ಮತ್ತು 'Enter ' ಅನ್ನು ಒತ್ತಿ.
08:59 4 (ನಾಲ್ಕು), 3ಕ್ಕಿಂತ ಹೆಚ್ಚು ಇರುವುದರಿಂದ
09:01 ನಾವು 1(ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
09:04 ಈಗ, ನಾವು ಈ ಉದಾಹರಣೆಯನ್ನು ಮತ್ತೊಮ್ಮೆ ಬದಲಾಯಿಸೋಣ.
09:07 ಹೀಗೆ ಟೈಪ್ ಮಾಡಿ: '4 less than equals greater than 7'
09:11 ಮತ್ತು 'Enter ' ಅನ್ನು ಒತ್ತಿ.
09:13 4(ನಾಲ್ಕು), 7 ಕ್ಕಿಂತ ಕಡಿಮೆ ಇರುವುದರಿಂದ
09:14 ನಾವು -1(ಮೈನಸ್ ಒಂದು) ಅನ್ನು ಔಟ್ಪುಟ್ ಆಗಿ ಪಡೆಯುತ್ತೇವೆ.
09:17 ಒಂದು ಅಸೈನ್ಮೆಂಟ್-
09:19 'irb' ಯನ್ನು ಬಳಸಿ ಕೆಳಗಿನ ಉದಾಹರಣೆಗಳ ಉತ್ತರಗಳನ್ನು ಕಂಡುಹಿಡಿಯಿರಿ ಮತ್ತು ಔಟ್ಪುಟ್ ಅನ್ನು ಪರೀಕ್ಷಿಸಿ.
09:24 * '10 + ಬ್ರಾಕೆಟ್ 2 ಆಸ್ಟೆರಿಸ್ಕ್ 5 ಬ್ರಾಕೆಟ್ 8 ಸ್ಲ್ಯಾಶ್ 2 '
09:32 * ' 4 ಅಸ್ಟೆರಿಸ್ಕ್ 5 ಸ್ಲ್ಯಾಶ್ 2 ಪ್ಲಸ್ 7 '
09:37 * ಅಲ್ಲದೇ, ಮೆಥಡ್ ಗಳನ್ನು ಬಳಸಿ ಅಂಕಗಣಿತದ ಆಪರೇಟರ್ ಗಳನ್ನು ಪ್ರಯತ್ನಿಸಿ.
09:42 ಇದರೊಂದಿಗೆ ನಾವು ಈ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
09:45 ಸಂಕ್ಷಿಪ್ತವಾಗಿ,
09:47 ಈ ಟ್ಯುಟೋರಿಯಲ್ ನಲ್ಲಿ ನಾವು:
09:49 * ಅನೇಕ ಉದಾಹರಣೆಗಳನ್ನು ಬಳಸಿ, ಅಂಕಗಣಿತದ ಆಪರೇಟರ್ಸ್ - ಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳಿಗಾಗಿ ಪ್ಲಸ್ (ಅಧಿಕ ಚಿಹ್ನೆ), ಮೈನಸ್ (ಋಣ ಚಿಹ್ನೆ), ಅಸ್ಟೆರಿಸ್ಕ್, ಸ್ಲ್ಯಾಶ್
09:59 * ಆಪರೇಟರ್ ಪ್ರಿಸಿಡೆನ್ಸ್ (ಆಪರೇಟರ್ ಗಳ ಆದ್ಯತೆ)
10:01 * ರಿಲೇಶನಲ್ ಆಪರೇಟರ್ಸ್
10:04 ಇವುಗಳನ್ನು ಕಲಿತಿದ್ದೇವೆ.
10:06 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
10:10 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:14 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
10:18 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
10:20 * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:23 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:26 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

10:32 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:36 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:43 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

10:51 ಈ ಸ್ಕ್ರಿಪ್ಟ್, IIT Bombay ಯ "ಸ್ಪೋಕನ್ ಟ್ಯೂಟೋರಿಯಲ್" ತಂಡದವರ ಕೊಡುಗೆಯಾಗಿದೆ.
10:57 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ ಭಟ್ಟ ಉಪ್ಪಿನಪಟ್ಟಣ . ವಂದನೆಗಳು.

Contributors and Content Editors

NaveenBhat, Pratik kamble, Sandhya.np14