Difference between revisions of "Inkscape/C3/Create-a-3-fold-brochure/Kannada"

From Script | Spoken-Tutorial
Jump to: navigation, search
(Created page with "{| border=1 | Time | Narration |- | 00:01 | '''Inkscape''' ನಲ್ಲಿ “'''Create a 3-fold brochure'''” ನ ಕುರಿತಾದ ಸ್ಪೋಕನ್ ಟ್ಯು...")
 
Line 229: Line 229:
 
|-
 
|-
 
| 05.10
 
| 05.10
| ಈಗ ಎಲ್ಲ ಚಿತ್ರಗಳು ಸಿದ್ಧವಾಗಿವೆ.
+
| ಎಲ್ಲ ಚಿತ್ರಗಳು ಸಿದ್ಧವಾಗಿವೆ.
 
|-
 
|-
 
| 05.13
 
| 05.13
Line 453: Line 453:
 
|-
 
|-
 
| 09.35
 
| 09.35
| The Spoken Tutorial Project Team  ಇದು  
+
| Spoken Tutorial Project Team  ಇದು  
 
*spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
 
*spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
 
* online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ  
 
* online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ  

Revision as of 14:54, 29 November 2015

Time Narration
00:01 Inkscape ನಲ್ಲಿ “Create a 3-fold brochure” ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು
00.08 * guidelines ಗಳನ್ನು ಉಪಯೋಗಿಸುವುದು ಮತ್ತು ಅವುಗಳನ್ನುಸೆಟ್ ಮಾಡುವುದು,
00:10 * 3-fold brochure ನ ಸೆಟ್ಟಿಂಗ್ ಗಳು,
00:12 * 3-fold brochure ಅನ್ನು ವಿನ್ಯಾಸ ಗೊಳಿಸುವುದರ ಕುರಿತು ಕಲಿಯುತ್ತೇವೆ.
00:15 layer ಗಳ ಉಪಯುಕ್ತತೆಗಳನ್ನು ಕೂಡ ಕಲಿಯುತ್ತೇವೆ.
00:18 ಈ ಟ್ಯುಟೋರಿಯಲ್ ಗಾಗಿ ನಾನು
00:21 * Ubuntu Linux 12.04 ಆಪರೇಟಿಂಗ್ ಸಿಸ್ಟಮ್
00:24 * Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ
00:28 ಇದೊಂದು ಮಾದರಿ 3 fold brochure. ನಾವು ಅದನ್ನು ತೆರೆದ ತಕ್ಷಣ ನಾವು ಮೂರು ಮಡಿಕೆಗಳನ್ನು ಕಾಣುತ್ತೇವೆ.
00:34 ಹಾಗಾಗಿ ಎಲ್ಲವೂ ಸೇರಿ ಆರು ವಿಭಾಗಗಳಿವೆ.
00:37 1, 5 ಮತ್ತು 6 ಇವು ಹೊರಗಿನ ವಿಭಾಗಗಳು.
00:42 ಬ್ರೌಶರ್ ನ ಒಳಭಾಗವು 2, 3 ಮತ್ತು 4 ನೇ ವಿಭಾಗಗಳನ್ನು ಹೊಂದಿರುತ್ತದೆ.
00:46 ಈಗ ಈ ರೀತಿಯ brochure ಅನ್ನು ವಿನ್ಯಾಸಗೊಳಿಸುವುದು ಹೇಗೆಂದು ಕಲಿಯೋಣ.
00:51 Inkscape ಅನ್ನು ತೆರೆಯಿರಿ.
00:53 File ಮೇಲೆ ಕ್ಲಿಕ್ ಮಾಡಿ Document Properties ಗೆ ಹೋಗಿ.
00:56 ಮೊದಲಿಗೆ ಕೆಲವು ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳೋಣ.
00:59 ಅಂದರೆ
01.00 * Default units ಅನ್ನು mm ಗೆ,
01.03 * Page Size ಅನ್ನು A4 ಗೆ
01.05 * Orientation ಅನ್ನು Landscape ಗೆ
01.07 * Custom Size Units ಅನ್ನು mmಗೆ ಬದಲಿಸಿ.
01.11 ನಾವು ಕ್ಯಾನ್ವಾಸ್ ಅನ್ನು ಮೂರು ಮಡಿಕೆಗಳಾಗಿ ವಿಭಜಿಸಿಕೊಳ್ಳಬೇಕು.
01.14 ಕ್ಯಾನ್ವಾಸ್ ನ ಅಗಲವು 297 ಇರುವುದನ್ನು ಗಮನಿಸಿ.
01.18 ಹಾಗಾಗಿ ನಾವು 297 ಅನ್ನು ಮೂರು ಭಾಗಗಳಾಗಿ ಅಂದರೆ ಪ್ರತಿಯೊಂದು ವಿಭಾಗವೂ 99 ಬರುವಂತೆ ವಿಭಜಿಸಬೇಕು.
01.27 ಈಗ Document Properties ಡೈಲಾಗ್ ಬಾಕ್ಸ್ ಅನ್ನು ಮುಚ್ಚಿರಿ.
01.30 ಕ್ಯಾನ್ವಾಸ್ ನ ಮೇಲೆ guideline ಮೇಲೆ ಕ್ಲಿಕ್ ಮಾಡಿ ಎಡಭಾಗದಿಂದ ಎಳೆಯಿರಿ.
01.35 guideline ನ ಮೇಲೆ ಡಬಲ್ ಕ್ಲಿಕ್ ಮಾಡಿ.
01.37 ಒಂದು ಡೈಲಾಗ್ ಬಾಕ್ಸ್ ತೆರೆದು ಕೊಳ್ಳುತ್ತದೆ.
01.41 'X' ನ ಬೆಲೆಯನ್ನು 99 ಕ್ಕೆ ಬದಲಿಸಿ OK ಮೇಲೆ ಕ್ಲಿಕ್ ಮಾಡಿ.
01.45 ಕ್ಯಾನ್ವಾಸ್ ನ ಮೇಲೆ ಇನ್ನೊಂದು guideline ಮೇಲೆ ಕ್ಲಿಕ್ ಮಾಡಿ ಎಡಭಾಗದಿಂದ ಎಳೆಯಿರಿ.
01.50 ಡೈಲಾಗ್ ಬಾಕ್ಸ್ ಅನ್ನು ತೆರೆಯಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
01.53 ಇಲ್ಲಿ 'X' ನ ಬೆಲೆಯನ್ನು198 ಕ್ಕೆ ಬದಲಿಸಿ.
01.56 ಈಗ ನಮ್ಮ ಕ್ಯಾನ್ವಾಸ್ ಮೂರು ಸಮ ಭಾಗಗಳಾಗಿ ವಿಭಜನೆಯಾಗಿದೆ.
02.01 ಈ ಗೈಡ್ ಲೈನ್ ಗಳು ಪ್ರತಿ ಮಡಿಕೆ ಯ ಪ್ರಾರಂಭ ಮತ್ತು ಕೊನೆಯನ್ನು ತೋರಿಸುತ್ತದೆ.
02.06 ಈ ಫೈಲ್ ಅನ್ನು ಎರಡು ಬಾರಿ ಸೇವ್ ಮಾಡೋಣ.
02.08 ಒಂದು ಬ್ರೌಶರ್ ನ ಒಳಭಾಗಕ್ಕಾಗಿ
02.11 ಮತ್ತು ಇನ್ನೊಂದು ಹೊರಭಾಗಕ್ಕಾಗಿ.
02.13 File ಹೋಗಿ Save as ಮೇಲೆ ಕ್ಲಿಕ್ ಮಾಡಿ.
02.16 ನಾನು ನನ್ನ ಫೈಲ್ ಅನ್ನು Desktop ನಲ್ಲಿ Brochure-OUT.svg ಹೆಸರಿನಲ್ಲಿ ಸೇವ್ ಮಾಡುತ್ತೇನೆ.
02.22 ಮತ್ತೊಮ್ಮೆ File ಹೋಗಿ Save as ಮೇಲೆ ಕ್ಲಿಕ್ ಮಾಡಿ.
02.26 ಈ ಬಾರಿ Brochure-IN.svg ಎಂದು ಹೆಸರಿಸಿ Save ಮೇಲೆ ಕ್ಲಿಕ್ ಮಾಡುತ್ತೇನೆ.
02.33 ಹಾಗಾಗಿ ನಾವು ಬ್ರೌಶರ್ ನ ಒಳಭಾಗಕ್ಕಾಗಿ ಒಂದು ಮತ್ತು ಹೊರಭಾಗಕ್ಕಾಗಿ ಒಂದು ಫೈಲ್ ಅನ್ನು ಹೊಂದಿದ್ದೇವೆ.
02.39 Brochure-IN.svg ಇಂದ ಪ್ರಾರಂಭಿಸೋಣ.
02.43 ನಾವು ಬ್ರೌಶರ್ ಅನ್ನು ವಿನ್ಯಾಸ ಗೊಳಿಸುವಾಗ ನಾವು ಬೇರೆ ಬೇರೆ element ಗಳಿಗೆ ಬೇರೆ ಬೇರೆ layer ಗಳನ್ನು ಉಪಯೋಗಿಸುವುದು ಅವಶ್ಯಕ.
02.50 ಹೀಗೆ ಮಾಡುವುದರ ಉಪಯೋಗವನ್ನು ಈ ಟ್ಯುಟೋರಿಯಲ್ ನ ಕೊನೆಯ ಹೊತ್ತಿಗೆ ನೋಡುತ್ತೇವೆ.
02.54 ಈಗ ಮೊದಲಿಗೆ ಬ್ರೌಶರ್ ನ ಒಳಭಾಗವನ್ನು ವಿನ್ಯಾಸ ಮಾಡೋಣ. ಅಂದರೆ 2, 3 ಮತ್ತು 4 ನೇ ವಿಭಾಗಗಳು.
03.00 Bezier tool ಅನ್ನು ಉಪಯೋಗಿಸಿ ಕ್ಯಾನ್ವಾಸ್ ನ ಮಧ್ಯಭಾಗದಲ್ಲಿ ಒಂದು ಚಿತ್ರವನ್ನು ಬರೆಯಿರಿ ಮತ್ತು ಅದಕ್ಕೆ ನೀಲಿ ಬಣ್ಣವನ್ನು ಕೊಡಿ.
03.09 stroke ಅನ್ನು ತೆಗೆದು ಹಾಕಿ.
03.14 ಹೊಸ layer ಅನ್ನು ರಚನೆ ಮಾಡಿ ನಿಮಗೆ ಬೇಕಾದ ಹೆಸರು ಕೊಡಿ.
03.19 150X150 pixels ನ ಒಂದು ವೃತ್ತವನ್ನು ಚಿತ್ರಿಸಿ.
03.26 ಇದಕ್ಕೆ ಹಸಿರು ಬಣ್ಣವನ್ನು ಕೊಡಿ.
03.28 ಆ ವೃತ್ತವನ್ನು ನಕಲು ಮಾಡಿ ಮತ್ತು ಬೇರೆ ಬೇರೆ ಗಾತ್ರದ ಐದು ವೃತ್ತಗಳನ್ನು ರಚನೆ ಮಾಡಿ.
03.36 ಇಲ್ಲಿ ತೋರಿಸಿದಂತೆ ಅವುಗಳನ್ನು ಚಿತ್ರದ ಸುತ್ತ ಇಡಿ.
03.40 ಈ ವೃತ್ತಗಳ ಒಳಗೆ ನಾವು ಕೆಲವು image ಗಳನ್ನು ಇಡುತ್ತೇವೆ.
03.44 ನಾನು ಈಗಾಗಲೆ ಇಮೇಜ್ ಗಳನ್ನು ವೃತ್ತಾಕಾರದಲ್ಲಿ ಎಡಿಟ್ ಮಾಡಿ ,ಅವುಗಳನ್ನು Documents ಫೋಲ್ಡರ್ ನಲ್ಲಿ ಸೇವ್ ಮಾಡಿಟ್ಟಿದ್ದೇನೆ.
03.50 ನಿಮ್ಮ ಅನುಕೂಲಕ್ಕಾಗಿ ಈ ಇಮೇಜ್ ಗಳನ್ನು Code files ಲಿಂಕ್ ನಲ್ಲಿ ಕೊಟ್ಟಿದ್ದೇವೆ.
03.56 ಟ್ಯುಟೋರಿಯಲ್ ಗೆ ವಿರಾಮ ಕೊಟ್ಟು, ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದಲ್ಲಿ ಈ ಇಮೇಜ್ ಗಳನ್ನು ಸೇವ್ ಮಾಡಿಕೊಳ್ಳಿ.
04.02 ಇದಾದ ನಂತರ ಟ್ಯುಟೋರಿಯಲ್ ಅನ್ನು ಪುನರಾರಂಭಿಸಿ.
04.04 File ಗೆ ಹೋಗಿ Import ಮೇಲೆ ಕ್ಲಿಕ್ ಮಾಡಿ Image1 ಮೇಲೆ ಕ್ಲಿಕ್ ಮಾಡಿ.
04.09 ಇದನ್ನು ಮೊದಲ ವೃತ್ತದ ಮೇಲೆ ಇಡಿ.
04.12 ಇದೇ ರೀತಿಯಲ್ಲಿ ಉಳಿದ ಐದು ಇಮೇಜ್ ಗಳಿಗೂ ಈ ಹಂತಗಳನ್ನು ಪುನರಾವರ್ತಿಸಿ.
04.17 Align and Distribute ಆಯ್ಕೆಯನ್ನು ಉಪಯೋಗಿಸಿ ಅವುಗಳನ್ನು ಅಲೈನ್ ಮಾಡಿ.
04.20 ಈಗ ನಿಮ್ಮ ಕ್ಯಾನ್ವಾಸ್ ಈ ರೀತಿಯಾಗಿ ಕಾಣಬೇಕು.
04.25 ನಂತರ ಇನ್ನೊಂದು layer ಅನ್ನು ರಚನೆ ಮಾಡಿ.
04.28 Bezier tool ಅನ್ನುಉಪಯೋಗಿಸಿ ಒಂದು ಬಾಣವನ್ನು ಚಿತ್ರಿಸಿ.
04.34 ಅದಕ್ಕೆ ಬೂದು ಬಣ್ಣವನ್ನುಕೊಡಿ.
04.38 stroke ಅನ್ನು ತೆಗೆದು ಹಾಕಿ.
04.41 Filters ಮೆನ್ಯುಗೆ ಹೋಗಿ Shadows and Glows ಆಯ್ಕೆ ಮಾಡಿಕೊಳ್ಳಿ ಮತ್ತು Drop Shadow ಮೇಲೆ ಕ್ಲಿಕ್ ಮಾಡಿ.
04.47 Preview ಬಾಕ್ಸ್ ಮೇಲೆ ಚೆಕ್ ಮಾಡಿ ಪರಿಣಾಮವನ್ನು ಗಮನಿಸಿ.
04.50 Apply ಕ್ಲಿಕ್ ಮಾಡಿ ಡೈಲಾಗ್ ಬಾಕ್ಸ್ ಅನ್ನು ಮುಚ್ಚಿರಿ.
04.55 ಇದನ್ನು ಇಲ್ಲಿ ತೋರಿಸಿರುವಂತೆ ಮೊದಲನೆಯ ವೃತ್ತದ ಮೇಲೆ ಇಡಿ.
05.01 ಈ ಬಾಣವನ್ನು ನಕಲು ಮಾಡಿ ಇನ್ನೆರಡು ಬಾಣಗಳನ್ನು ಚಿತ್ರಿಸಿ.
05.05 ಅವುಗಳನ್ನು ಎರಡನೇ ಮತ್ತು ಮೂರನೇ ವೃತ್ತಗಳ ಮೇಲೆ ಇಡಿ.
05.10 ಈ ಎಲ್ಲ ಚಿತ್ರಗಳು ಸಿದ್ಧವಾಗಿವೆ.
05.13 ಈಗ ನಾವು ಸಂಬಂಧಿತ ಪಠ್ಯವನ್ನು ಸೇರಿಸಬೇಕು.
05.15 ಹೊಸ ಲೇಯರ್ ನಲ್ಲಿ ಮೊದಲ ಬಾಣದ ಮೇಲೆ “Introduction” ಎಂದು ಟೈಪ್ ಮಾಡಿ
05.20 ಎರಡನೇ ಬಾಣದ ಮೇಲೆ “Features” ಎಂದು ಟೈಪ್ ಮಾಡಿ
05.24 ಮೂರನೇ ಬಾಣದ ಮೇಲೆ “Usage” ಎಂದು ಟೈಪ್ ಮಾಡಿ
05.28 ಈಗ ಪ್ರತಿಯೊಂದು ವಿಭಾಗದಡಿಯಲ್ಲು ಸಂಬಂಧಿತ ಪಠ್ಯವನ್ನು ಸೇರಿಸಬೇಕು.
05.33 ನಾನು ಈಗಾಗಲೇ LibreOffice Writer ನಲ್ಲಿ ಸೇವ್ ಮಾಡಿರುವ ಫೈಲ್ ನಿಂದ ಪಠ್ಯವನ್ನು copy ಮಾಡಿ ಇಲ್ಲಿ paste ಮಾಡುತ್ತೇನೆ.
05.40 ನೀವು ಸೇವ್ ಮಾಡಿದ ಫೋಲ್ಡರ್ ನಲ್ಲಿ ಈ ಫೈಲ್ ಇದೆ.
05.43 ದಯವಿಟ್ಟು ಅದರಿಂದ ನೀವು ಪಠ್ಯವನ್ನು ನಕಲು ಮಾಡಿಕೊಳ್ಳಿ.
05.47 ನಂತರ ಹೊಸ ಲೇಯರ್ ನಲ್ಲಿ ಇಲ್ಲಿ ತೋರಿಸಿದಂತೆ paste ಮಾಡಿ.
05.50 ಫಾಂಟ್ ಸೈಜ್ ಅನ್ನು 15 ಕ್ಕೆ ಇಳಿಸಿ ಮತ್ತು Text and Font ಆಯ್ಕೆಯನ್ನು ಉಪಯೋಗಿಸಿ ಅಲೈನ್ ಮಾಡಿಕೊಳ್ಳಿ.
05.55 ellipse ಟೂಲ್ ಅನ್ನು ಉಪಯೋಗಿಸಿ ಹಸಿರು ಬಣ್ಣದ bullet ಅನ್ನು ತಯಾರಿಸಿಕೊಳ್ಳಿ.
05.59 ಅದನ್ನು ಮೊದಲ ವಾಕ್ಯದ ಬಲಭಾಗದಲ್ಲಿಡಿ.
06.02 ಎಲ್ಲಾ ವಾಕ್ಯಗಳಿಗೂ ಇದನ್ನುಪುನರಾವರ್ತಿಸಿ.
06.05 ಈಗ brochure ನ ಒಳಭಾಗವು ಸಿದ್ಧವಾಗಿದೆ.
06.08 SVG ಫೈಲ್ ಅನ್ನು ಸೇವ್ ಮಾಡಲು CTRL S ಅನ್ನು ಒತ್ತಿ.
06.12 ಈಗ ಬ್ರೌಶರ್ ನಲ್ಲಿ ಬೇಕಾದ ಲೇಯರ್ ಗಳನ್ನು ಅಡಗಿಸಬಹುದು ಅಥವಾ ತೋರಿಸಬಹುದು.
06.18 ಈಗ ಇದೇ ಫೈಲ್ ಅನ್ನು PDF ನಲ್ಲಿ ಸೇವ್ ಮಾಡೋಣ.
06.21 File ಗೆ ಹೋಗಿ Save As ಮೇಲೆ ಕ್ಲಿಕ್ ಮಾಡಿ
06.24 ಫೈಲ್ ಎಕ್ಸ್ಟೆನ್ಷನ್ ಅನ್ನುPDF ಗೆ ಬದಲಾಯಿಸಿ.
06.29 Save ಮೇಲೆ ಕ್ಲಿಕ್ ಮಾಡಿ.
06.31 ಒಂದು ಹೊಸ dialog boxಗೋಚರಿಸುತ್ತದೆ.
06.34 ಪ್ರಿಂಟ್ ಮಾಡಲು ರೆಸೊಲ್ಯುಷನ್ 300 ಆಗಿರಬೇಕು.
06.37 ಅಂತರ್ಜಾಲಕ್ಕಾದರೆ 72 ಆಗಬಹುದು.
06.40 ನಾನು ಇದನ್ನು 300 ಆಗಿಯೇ ಇಡುತ್ತೇನೆ.
06.42 ಈಗ OK ಮೇಲೆ ಕ್ಲಿಕ್ ಮಾಡಿ
06.44 ಈಗ ಬಾಣಗಳ opacity ಯನ್ನು ಬದಲಿಸೋಣ.
06.47 Arrow ಲೇಯರ್ ಗೆ ಹೋಗಿ ಮತ್ತು ಆ ಲೇಯರ್ ನ ಒಪಾಸಿಟಿಯನ್ನು 70 ಕ್ಕೆ ಬದಲಿಸಿ.
06.52 ನಾನು ink-blotಗಳೊಂದಿಗೆ ಹೊಸ layer ಅನ್ನು ಸೇರಿಸುತ್ತೇನೆ.
06.58 ಫೈಲ್ ಅನ್ನು SVG ಮತ್ತು PDF ಫಾರ್ಮ್ಯಾಟ್ ಗಳೆರಡರಲ್ಲೂ ಸೇವ್ ಮಾಡಿ.
07.04 ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಲು ಎರಡೂ 'pdf' ಫೈಲ್ ಗಳನ್ನು ಹೋಲಿಸಿ.
07.08 ಈಗ ಬ್ರೌಶರ್ ನ ಹೊರಭಾಗವನ್ನು ವಿನ್ಯಾಸಗೊಳಿಸೋಣ.
07.12 File ಗೆ ಹೋಗಿ Open ಮೇಲೆ ಕ್ಲಿಕ್ ಮಾಡಿ.
07.14 Brochure-OUT.svg. ಆಯ್ಕೆ ಮಾಡಿ.
07.18 ಈಗ ನಾವು 1ನೇ, 4ನೇ ಮತ್ತು 5ನೇ ವಿಭಾಗಗಳನ್ನು ವಿನ್ಯಾಸಗೊಳಿಸೋಣ.
07.22 ಇನ್ನೊಮ್ಮೆ ನೆನಪಿಡಿ ನಾವು ಬೇರೆ ಬೇರೆ element ಗಳಿಗೆ ಬೇರೆ ಬೇರೆ layer ಗಳನ್ನು ರಚನೆ ಮಾಡಿಕೊಳ್ಳುತ್ತೇವೆ.
07.28 Bezier tool ಅನ್ನುಉಪಯೋಗಿಸಿ ಇಲ್ಲಿ ತೋರಿಸಿದಂತೆ ಮೇಲ್ಭಾಗದ ಎಡಗಡೆಯಲ್ಲಿ ಒಂದು ಚಿತ್ರವನ್ನು ರಚಿಸಿ.
07.33 ನೀಲಿ ಬಣ್ಣವನ್ನುಕೊಡಿ. stroke ಅನ್ನು ತೆಗೆದು ಹಾಕಿ.
07.36 ನಿಮ್ಮ ಫೋಲ್ಡರ್ ನಲ್ಲಿರುವ Spoken Tutorial ಲೋಗೋವನ್ನು ಇಂಪೋರ್ಟ್ ಮಾಡಿ.
07.40 ಗಾತ್ರವನ್ನು ಕುಗ್ಗಿಸಿ ಮತ್ತು ಇದನ್ನು ಮೊದಲನೇ ವಿಭಾಗದ ಮೇಲ್ಭಾಗದ ಎಡ ಮೂಲೆಯಲ್ಲಿ ಇಡಿ.
07.46 “Spoken Tutorial” ಎಂದು ಟೈಪ್ ಮಾಡಿ ಮತ್ತು ಲೋಗೋದ ಬಲಭಾಗದಲ್ಲಿ ಅಲೈನ್ ಮಾಡಿ.
07.51 ಫಾಂಟ್ ಸೈಜ್ ಅನ್ನು 25 ಕ್ಕೆ ಬದಲಿಸಿ.
07.54 ಇದರ ಕೆಳಗೆ ಒಂದು ವೃತ್ತವನ್ನು ಚಿತ್ರಿಸಿ ಹಳದಿ ಬಣ್ಣವನ್ನು ಹಚ್ಚಿ.
07.58 'Inkscape' ಲೋಗೋವನ್ನು Import ಮಾಡಿ.
08.00 ಇದನ್ನು ಹಳದಿ ವೃತ್ತದ ಮೇಲೆ ಇಡಿ.
08.03 ಲೋಗೋ ದ ಕೆಳಗೆ “Inkscape” ಎಂದು ಟೈಪ್ ಮಾಡಿ. ಫಾಂಟ್ ಸೈಜ್ ಅನ್ನು 45 ಕ್ಕೆ ಬದಲಿಸಿ.
08.09 ನಾನು Spoken Tutorial ನ ಕುರಿತು ವಿವರಗಳನ್ನು ಸೇರಿಸಿದ್ದೇನೆ ಮತ್ತು ಸಂಬಂಧಿತ ಲೋಗೋಗಳನ್ನು ಕೂಡ ಸೇರಿಸಿದ್ದೇನೆ.
08.15 ದಯವಿಟ್ಟು ನೀವೂ ಹಾಗೇ ಮಾಡಿ.
08.17 ನಾನು ಎಲ್ಲಾ ಎಲಿಮೆಂಟ್ ಗಳನ್ನು
08.19 Text and font
08.21 ಮತ್ತು Align and Distribute ಆಯ್ಕೆಗಳನ್ನು ಉಪಯೋಗಿಸಿ ಅಲೈನ್ ಮಾಡಿದ್ದೇನೆ.
08.24 ಈಗ ಬ್ರೌಶರ್ ನ ಹೊರಭಾಗವು ಸಿದ್ಧವಾಗಿದೆ.
08.28 File ಗೆ ಹೋಗಿ.
08.29 Save As ಮೇಲೆ ಕ್ಲಿಕ್ ಮಾಡಿ.
08.31 ಫಾರ್ಮ್ಯಾಟ್ ಅನ್ನು SVG ಗೆ ಬದಲಿಸಿ ಮತ್ತು Save ಮೇಲೆ ಕ್ಲಿಕ್ ಮಾಡಿ.
08.37 ಈ ಕ್ರಿಯೆಯನ್ನು ಪುನರಾವರ್ತಿಸಿ.
08.39 ಎಕ್ಸ್ಟೆನ್ಷನ್ ಅನ್ನು PDF ಗೆ ಬದಲಿಸಿ.
08.41 Save ಮೇಲೆ ಕ್ಲಿಕ್ ಮಾಡಿ.
08.43 ಇದು ನಾವು ಸಿದ್ಧಗೊಳಿಸಿದ ಬ್ರೌಶರ್.
08.46 ನೀವು ಬೇರೆ ಬೇರೆ ಎಲಿಮೆಂಟ್ ಗಳಿಗೆ ಬೇರೆ ಬೇರೆ ಲೇಯರ್ ಗಳನ್ನು ಉಪಯೋಗಿಸಿದರೆ ನಾವು ಅದರ ಬಣ್ಣ ಮತ್ತುopacity ಯನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳಬಹುದು.
08.54 ಇವೆರಡು ನಾನು ಇದೇ ಬ್ರೌಶರ್ ಗೆ ಮಾಡಿದ ಬೇರೆ ಬೇರೆ ವರ್ಣವಿನ್ಯಾಸಗಳು.
09.00 ಸಾರಾಂಶವನ್ನು ನೋಡೋಣ.
09.02 ಈ ಟ್ಯುಟೋರಿಯಲ್ ನಲ್ಲಿ ನಾವು
09.04 * guidelines ಗಳನ್ನು ಉಪಯೋಗಿಸುವುದು ಮತ್ತು ಅವುಗಳನ್ನುಸೆಟ್ ಮಾಡುವುದು,
09.07 * 3-fold brochure ನ ಸೆಟ್ಟಿಂಗ್ ಗಳು,
09.09 * 3-fold brochure ಅನ್ನು ವಿನ್ಯಾಸ ಗೊಳಿಸುವುದರ ಕುರಿತು ಕಲಿತಿದ್ದೇವೆ.
09.11 ನಾವು
09.12 layer ಗಳ ಉಪಯುಕ್ತತೆಗಳನ್ನು ಕೂಡ ಕಲಿತಿದ್ದೇವೆ
09.14 ಮತ್ತು ಒಂದು ಬ್ರೌಶರ್ ಅನ್ನು ಬೇರೆ ಬೇರೆ ಬಣ್ಣದ ವಿನ್ಯಾಸಗಳಲ್ಲಿ ಪಡೆಯುವುದನ್ನೂ ಕೂಡ ಕಲಿತಿದ್ದೇವೆ.
09.18 ಸ್ವಂತ ಅಭ್ಯಾಸಕ್ಕಾಗಿ-
09.20 Spoken Tutorial ಪ್ರಾಜೆಕ್ಟ್ ಗೆ ಒಂದು 3-fold brochure ಅನ್ನು ವಿನ್ಯಾಸಗೊಳಿಸಿ.
09.24 ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು.
09.29 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ.
09.35 Spoken Tutorial Project Team ಇದು
  • spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.
  • online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
09.42 ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ.
09.45 Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ
09.50 ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ
09.54 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
09.57 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble