Difference between revisions of "Geogebra/C3/Mensuration/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- |00:00 | ನಮಸ್ಕಾರ. '''Mensuration in Geogebra''' (ಮೆನ್ಸುರೇಶನ್ ಇನ್ ಜಿಯೊಜಿಬ್...") |
Sandhya.np14 (Talk | contribs) |
||
Line 390: | Line 390: | ||
|- | |- | ||
|11:06 | |11:06 | ||
− | | | + | |IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- . |
− | + | ||
ವಂದನೆಗಳು. | ವಂದನೆಗಳು. |
Revision as of 12:41, 24 April 2015
Time | Narration |
00:00 | ನಮಸ್ಕಾರ. Mensuration in Geogebra (ಮೆನ್ಸುರೇಶನ್ ಇನ್ ಜಿಯೊಜಿಬ್ರಾ) ಎನ್ನುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | * ವಜ್ರಾಕೃತಿಯ ವಿಸ್ತೀರ್ಣ ಹಾಗೂ ಸುತ್ತಳತೆ |
00:12 | * ಗೋಳ ಮತ್ತು ಶಂಕುವಿನ ಮೇಲ್ಮೈ ವಿಸ್ತೀರ್ಣ |
00:15 | * ಗೋಳ ಮತ್ತು ಶಂಕುವಿನ ಘನ ಅಳತೆ, ಇವುಗಳನ್ನು ಕಂಡುಹಿಡಿಯಲು ಕಲಿಯುವೆವು. |
00:20 | ನಿಮಗೆ ಜಿಯೊಜಿಬ್ರಾದೊಂದಿಗೆ ಕೆಲಸ ಮಾಡಿ ಅಭ್ಯಾಸವಿದೆ ಎಂದು ನಾವು ಭಾವಿಸುತ್ತೇವೆ. |
00:24 | Geogebra ಗೆ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, |
00:27 | ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:31 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು |
00:33 | Ubuntu Linux OS Version 11.10 (ಉಬಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ವರ್ಷನ್ 11.10) ಹಾಗೂ |
00:38 | Geogebra Version 3.2.47.0 (ಜಿಯೊಜಿಬ್ರಾ ವರ್ಷನ್ 3.2.47.0) ಗಳನ್ನು ಬಳಸುತ್ತಿದ್ದೇನೆ. |
00:42 | ಈ ಕೆಳಗಿನ ಜಿಯೊಜಿಬ್ರಾ ಟೂಲ್ಗಳನ್ನು ನಾವು ಬಳಸುವೆವು. |
00:46 | * Segment between two points (ಸೆಗ್ಮೆಂಟ್ ಬಿಟವೀನ್ ಟು ಪಾಯಿಂಟ್ಸ್) |
00:48 | * Circle with center and radius (ಸರ್ಕಲ್ ವಿತ್ ಸೆಂಟರ್ ಆಂಡ್ ರೇಡಿಯಸ್) |
00:51 | * Ellipse ( ಎಲಿಪ್ಸ್) |
00:52 | * Polygon ( ಪಾಲಿಗಾನ್) |
00:54 | * New point ( ನ್ಯೂ ಪಾಯಿಂಟ್) ಮತ್ತು |
00:56 | * Insert Text (ಇನ್ಸರ್ಟ್ ಟೆಕ್ಸ್ಟ್) |
00:57 | ನಾವು ಒಂದು ಹೊಸ Geogebra (ಜಿಯೊಜಿಬ್ರಾ) ವಿಂಡೋವನ್ನು ತೆರೆಯೋಣ. |
01:00 | ಕ್ರಮವಾಗಿ Dash home >> Media Apps ಗಳ ಮೇಲೆ ಕ್ಲಿಕ್ ಮಾಡಿ. Type ನ ಅಡಿಯಲ್ಲಿ , Education >> ಮತ್ತು Geogebra ಗಳನ್ನು ಆರಿಸಿಕೊಳ್ಳಿ. |
01:13 | ನಾವು rhombus ನ (ವಜ್ರಾಕೃತಿಯ) ವಿಸ್ತೀರ್ಣವನ್ನು ಕಂಡುಹಿಡಿಯೋಣ. |
01:15 | ನಾವು ಹಿಂದಿನ ಟ್ಯುಟೋರಿಯಲ್ ನ 'quadrilateral.ggb' (ಕ್ವಾಡ್ರಿಲ್ಯಾಟರಲ್ ಡಾಟ್ ಜಿ ಜಿ ಬಿ) ಎನ್ನುವ ಫೈಲನ್ನು ಉಪಯೋಗಿಸೋಣ. |
01:20 | ಕ್ರಮವಾಗಿ File, Open ಗಳ ಮೇಲೆ ಕ್ಲಿಕ್ ಮಾಡಿ, 'quadrilateral.ggb' ಯ ಮೇಲೆ ಕ್ಲಿಕ್ ಮಾಡಿ. |
01:27 | Open ನ ಮೇಲೆ ಕ್ಲಿಕ್ ಮಾಡಿ. |
01:29 | Area of the Rhombus =1/2 * product of diagonals (ವಜ್ರಾಕೃತಿಯ ವಿಸ್ತೀರ್ಣ = 1/2 * ಕರ್ಣಗಳ ಗುಣಲಬ್ಧ) |
01:34 | ಇದನ್ನು ಮಾಡಿ ತೋರಿಸಲು, |
01:36 | Insert Text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
01:39 | ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. ಒಂದು ಟೆಕ್ಸ್ಟ್-ಬಾಕ್ಸ್ ತೆರೆದುಕೊಳ್ಳುತ್ತದೆ. |
01:44 | ಡಬಲ್ ಕೋಟ್ಸ್ ನಲ್ಲಿ “Area of the rhombus =” ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ಅನ್ನು ಮುಚ್ಚಿ. ಮುಂದಿನ ಭಾಗವನ್ನು ಜೋಡಿಸಲು '+' ಚಿನ್ಹೆಯನ್ನು ಟೈಪ್ ಮಾಡಿ. ಬ್ರಾಕೆಟ್ ನಲ್ಲಿ 1/2 <ಸ್ಪೇಸ್> f < ಸ್ಪೇಸ್ > g ಎಂದು ಟೈಪ್ ಮಾಡಿ ಬ್ರಾಕೆಟ್ ಅನ್ನು ಮುಚ್ಚಿ. 'f' ಹಾಗೂ 'g' ಗಳು ವಜ್ರಾಕೃತಿಯ ಕರ್ಣಗಳಾಗಿವೆ. |
02:09 | OK ಯ ಮೇಲೆ ಕ್ಲಿಕ್ ಮಾಡಿ. |
02:11 | ವಜ್ರಾಕೃತಿಯ ವಿಸ್ತೀರ್ಣವನ್ನು, (Area of the rhombus) ‘ಡ್ರಾಯಿಂಗ್ ಪ್ಯಾಡ್’ನ ಮೇಲೆ, ಇಲ್ಲಿ, ತೋರಿಸಲಾಗಿದೆ. |
02:14 | ನಂತರ, ನಾವು ಸುತ್ತಳತೆಯನ್ನು (ಪೆರಿಮೀಟರ್) ಕಂಡುಹಿಡಿಯೋಣ. |
02:17 | Insert text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
02:19 | ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. ಒಂದು ಟೆಕ್ಸ್ಟ್-ಬಾಕ್ಸ್ ತೆರೆದುಕೊಳ್ಳುತ್ತದೆ. |
02:22 | ಡಬಲ್ ಕೋಟ್ಸ್ ನಲ್ಲಿ “Perimeter of the rhombus =” ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ಅನ್ನು ಮುಚ್ಚಿ. '+' ಚಿನ್ಹೆಯನ್ನು ಟೈಪ್ ಮಾಡಿ. ಬ್ರಾಕೆಟ್ ನಲ್ಲಿ 4 <ಸ್ಪೇಸ್> 'a' ಎಂದು ಟೈಪ್ ಮಾಡಿ ಬ್ರಾಕೆಟ್ ಅನ್ನು ಮುಚ್ಚಿ. 'a', ವಜ್ರಾಕೃತಿಯ (rhombus) ಒಂದು ಭುಜವಾಗಿದೆ. |
02:44 | OK ಯ ಮೇಲೆ ಕ್ಲಿಕ್ ಮಾಡಿ. |
02:46 | ವಜ್ರಾಕೃತಿಯು ಸುತ್ತಳತೆಯನ್ನು ಇಲ್ಲಿ, ‘ಡ್ರಾಯಿಂಗ್ ಪ್ಯಾಡ್’ನ ಮೇಲೆ, ತೋರಿಸಲಾಗಿದೆ. |
02:50 | ಈಗ ನಾವು ಫೈಲ್ ಅನ್ನು ಸೇವ್ ಮಾಡೋಣ. |
02:53 | ಕ್ರಮವಾಗಿ File , Save As ಗಳ ಮೇಲೆ ಕ್ಲಿಕ್ ಮಾಡಿ. |
02:55 | ನಾನು ಫೈಲ್ ನ ಹೆಸರನ್ನು 'rhombus-area-perimeter' ಎಂದು ಟೈಪ್ ಮಾಡುವೆನು. |
03:12 | Save ನ ಮೇಲೆ ಕ್ಲಿಕ್ ಮಾಡಿ. |
03:17 | ಒಂದು ಅಸೈನ್ಮೆಂಟ್ ಎಂದು, ನೀವು ವಿಷಮ ಚತುರ್ಭುಜದ (trapezium) ವಿಸ್ತೀರ್ಣ ಹಾಗೂ ಸುತ್ತಳತೆಯನ್ನು ಕಂಡುಹಿಡಿಯಿರಿ. |
03:22 | 'cons-trapezium.ggb' (ಕಾನ್ಸ್- ಟ್ರೆಪೀಝಿಯಂ ಡಾಟ್ ಜಿ ಜಿ ಬಿ) ಎನ್ನುವ ಫೈಲ್ ನ ಔಟ್ಪುಟ್ ಅನ್ನು ಬಳಸಿರಿ. |
03:27 | ಆಬ್ಜೆಕ್ಟ್ ‘g’ ಯನ್ನು ‘b’ ಎಂದು ರಿ-ನೇಮ್ ಮಾಡಿ. |
03:30 | ಏರಿಯಾ ಗಾಗಿ ಸೂತ್ರ, ವಿಸ್ತೀರ್ಣ= (ಸಮಾನಂತರ ಭುಜಗಳ ಮೊತ್ತದ ಅರ್ಧ)*(ಎತ್ತರ)= (a+b)/2* h. (area = (half sum of parallel sides) * (vertical height)) |
03:40 | ಸುತ್ತಳತೆಗಾಗಿ ಸೂತ್ರ, ಸುತ್ತಳತೆ = ಭುಜಗಳ ಮೊತ್ತ = (a+b+c+d) |
03:49 | ಅಸೈನ್ಮೆಂಟ್ ನ ಔಟ್ಪುಟ್ ಹೀಗೆ ಕಾಣಿಸಬೇಕು. |
03:54 | ಗೋಳವನ್ನು ರಚಿಸಲು ನಾವು ಹೊಸದೊಂದು Geogebra ವಿಂಡೋವನ್ನು ತೆರೆಯೋಣ. |
03:58 | ಕ್ರಮವಾಗಿ File , New ಗಳ ಮೇಲೆ ಕ್ಲಿಕ್ ಮಾಡಿ. |
04:01 | ಟೂಲ್-ಬಾರ್ ನಲ್ಲಿಯ Circle with Center and Radius ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:06 | ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. A ಬಿಂದು ಗುರುತಿಸಲ್ಪಟ್ಟಿದೆ. ಒಂದು ಟೆಕ್ಸ್ಟ್-ಬಾಕ್ಸ್ ತೆರೆದುಕೊಳ್ಳುತ್ತದೆ. |
04:11 | ತ್ರಿಜ್ಯಕ್ಕಾಗಿ (radius) 2 ಎಂದು ನಮೂದಿಸಿ. |
04:13 | OK ಯ ಮೇಲೆ ಕ್ಲಿಕ್ ಮಾಡಿ. |
04:15 | A, ಮಧ್ಯಬಿಂದು ಇರುವ ಹಾಗೂ 2cm ತ್ರಿಜ್ಯದ ಒಂದು ವರ್ತುಲವು ರಚಿಸಲ್ಪಟ್ಟಿದೆ. |
04:19 | ಟೂಲ್-ಬಾರ್ ನಿಂದ New point ಎನ್ನುವ ಟೂಲನ್ನು ಆಯ್ಕೆಮಾಡಿ. ವರ್ತುಲದ ಪರಿಧಿಯ ಮೇಲೆ B ಬಿಂದುವನ್ನು ಗುರುತಿಸಿ. |
04:26 | Segment between two points ಎನ್ನುವ ಟೂಲನ್ನು ಆಯ್ಕೆಮಾಡಿ. |
04:29 | A ಹಾಗೂ B ಬಿಂದುಗಳನ್ನು ವರ್ತುಲದ ತ್ರಿಜ್ಯದಂತೆ ಸೇರಿಸಿ. |
04:34 | ವರ್ತುಲದ ಪರಿಧಿಯನ್ನು ಸ್ಪರ್ಶಿಸಲು, ನಾವು ಒಂದು ಅಡ್ಡವಾದ (horizontal) ಎಲಿಪ್ಸ್ CDE ಅನ್ನು ರಚಿಸೋಣ. |
04:42 | Ellipse ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:45 | ಪರಿಧಿಯ ಮೇಲೆ, C ಹಾಗೂ D ಬಿಂದುಗಳನ್ನು ಒಂದಕ್ಕೊಂದು ಅಭಿಮುಖವಾಗಿ ಹಾಗೂ ಮೂರನೆಯ ಬಿಂದು E ಯನ್ನು ವರ್ತುಲದ ಒಳಗಡೆ, ಗುರುತಿಸಿ. |
04:56 | ಇಲ್ಲಿ, ಒಂದು ಗೋಳವನ್ನು ರಚಿಸಲಾಗಿದೆ. |
04:59 | ಈಗ ನಾವು ಗೋಳದ ಮೇಲ್ಮೈ ವಿಸ್ತೀರ್ಣವನ್ನು ಕಂಡುಹಿಡಿಯೋಣ. |
05:03 | Insert Text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
05:05 | ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. ಒಂದು ಟೆಕ್ಸ್ಟ್-ಬಾಕ್ಸ್ ತೆರೆದುಕೊಳ್ಳುತ್ತದೆ. |
05:08 | ವಿಷೇಶ ಅಕ್ಷರಗಳನ್ನು ದಯವಿಟ್ಟು ಟೆಕ್ಸ್ಟ್ ಬಾಕ್ಸ್ ನಲ್ಲಿಯ ಡ್ರಾಪ್-ಡೌನ್ ಲಿಸ್ಟ್ ನಲ್ಲಿ ಹುಡುಕಿ. ‘π’ (ಪೈ) ಯನ್ನು ಹುಡುಕಲು ಕೆಳಗೆ ಸ್ಕ್ರೋಲ್ ಮಾಡಿ. |
05:17 | ಡಬಲ್ ಕೋಟ್ಸ್ ನಲ್ಲಿ “Surface area of the sphere =” ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ಅನ್ನು ಮುಚ್ಚಿ. '+' ಚಿನ್ಹೆಯನ್ನು ಟೈಪ್ ಮಾಡಿ. ಬ್ರಾಕೆಟ್ ನಲ್ಲಿ 4 <ಸ್ಪೇಸ್> π ಯನ್ನು ಲಿಸ್ಟ್ ನಿಂದ ಆಯ್ದುಕೊಳ್ಳಿ <ಸ್ಪೇಸ್> 'a' ಲಿಸ್ಟ್ ನಿಂದ ‘ಸ್ಕ್ವೇರ್’ ಅನ್ನು ಆಯ್ದುಕೊಳ್ಳಿ , ಬ್ರಾಕೆಟ್ ಅನ್ನು ಮುಚ್ಚಿ. |
05:45 | OK ಯ ಮೇಲೆ ಕ್ಲಿಕ್ ಮಾಡಿ. |
05:47 | ಗೋಳದ ಮೇಲ್ಮೈ ವಿಸ್ತೀರ್ಣವನ್ನು ಇಲ್ಲಿ ತೋರಿಸಲಾಗಿದೆ. |
05:52 | ನಾನು ಇದರ ಮೇಲೆ ಕ್ಲಿಕ್ ಮಾಡಿ, ಇದನ್ನು ಎಳೆದು ಕೆಳಗೆ ಇಡುತ್ತೇನೆ. |
05:56 | ನಂತರ, ನಾವು ಘನ ಅಳತೆಯನ್ನು (volume) ಕಂಡುಹಿಡಿಯೋಣ. |
05:59 | Insert text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:00 | ‘ಡ್ರಾಯಿಂಗ್ ಪ್ಯಾಡ್’ನ ಮೇಲೆ ಕ್ಲಿಕ್ ಮಾಡಿ. ಒಂದು ಟೆಕ್ಸ್ಟ್-ಬಾಕ್ಸ್ ತೆರೆದುಕೊಳ್ಳುತ್ತದೆ. |
06:03 |
ಡಬಲ್ ಕೋಟ್ಸ್ ನಲ್ಲಿ “Volume of the sphere =” ಎಂದು ಟೈಪ್ ಮಾಡಿ ಡಬಲ್ ಕೋಟ್ಸ್ ಅನ್ನು ಮುಚ್ಚಿ. '+' ಚಿನ್ಹೆಯನ್ನು ಟೈಪ್ ಮಾಡಿ. ಬ್ರಾಕೆಟ್ ನಲ್ಲಿ 4/3 <ಸ್ಪೇಸ್> π ಯನ್ನು ಲಿಸ್ಟ್ ನಿಂದ ಆಯ್ದುಕೊಳ್ಳಿ <ಸ್ಪೇಸ್> 'a' , ಲಿಸ್ಟ್ ನಿಂದ ‘ಕ್ಯೂಬ್’ ಅನ್ನು ಆಯ್ದುಕೊಳ್ಳಿ , ಬ್ರಾಕೆಟ್ ಅನ್ನು ಮುಚ್ಚಿ. |
06:31 | OK ಯ ಮೇಲೆ ಕ್ಲಿಕ್ ಮಾಡಿ. |
06:34 | ಗೋಳದ ಘನ ಅಳತೆಯನ್ನು ಇಲ್ಲಿ ತೋರಿಸಲಾಗಿದೆ. |
06:36 | ನಾನು ಇದರ ಮೇಲೆ ಕ್ಲಿಕ್ ಮಾಡಿ, ಕೆಳಗೆ ಇಡಲು ಇದನ್ನು ಎಳೆಯುತ್ತೇನೆ. |
06:40 | ನಂತರ, ನಾವು ಒಂದು ಶಂಕುವನ್ನು ರಚಿಸೋಣ. |
06:43 | Polygon ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
06:45 | 'C' , 'D' ಬಿಂದುಗಳ ಮೇಲೆ ಹಾಗೂ ಹೊರಗಿನ ಒಂದು ಬಿಂದು ‘F’ ನ ಮೇಲೆ ಕ್ಲಿಕ್ ಮಾಡಿ, ಮತ್ತೊಮ್ಮೆ 'C' ಮೇಲೆ ಕ್ಲಿಕ್ ಮಾಡಿ. |
06:53 | Segments between two points ಎನ್ನುವ ಟೂಲನ್ನು ಆಯ್ದುಕೊಳ್ಳಿ. ‘F’ ಹಾಗೂ ‘A’ ಬಿಂದುಗಳನ್ನು ಸೇರಿಸಿ. |
06:59 | ನಮಗೆ ಶಂಕುವಿನ ಎತ್ತರವು ಸಿಗುತ್ತದೆ. |
07:03 | ನಾನು ಆಬ್ಜೆಕ್ಟ್ ‘b’ ಯನ್ನು ‘h’ ಎಂದು ರಿ-ನೇಮ್ ಮಾಡುತ್ತೇನೆ, ಇದು ಶಂಕುವಿನ ಎತ್ತರವನ್ನು ಸೂಚಿಸುತ್ತದೆ. |
07:08 | ಆಬ್ಜೆಕ್ಟ್ ‘b’ ಯ ಮೇಲೆ ರೈಟ್-ಕ್ಲಿಕ್ ಮಾಡಿ. |
07:09 | Rename ಎನ್ನುವುದರ ಮೇಲೆ ಕ್ಲಿಕ್ ಮಾಡಿ. |
07:11 | ‘b’ ಅನ್ನು ‘h’ ನಿಂದ ಬದಲಾಯಿಸಿ. OK ಯ ಮೇಲೆ ಕ್ಲಿಕ್ ಮಾಡಿ. |
07:15 | ನಾನು ಆಬ್ಜೆಕ್ಟ್ 'c_1' ಅನ್ನು ಸಹ ‘s’ ಎಂದು ರಿ-ನೇಮ್ ಮಾಡುತ್ತೇನೆ. ಇದು ಶಂಕುವಿನ ಓರೆ ಎತ್ತರವನ್ನು (slant height) ಸೂಚಿಸುತ್ತದೆ. |
07:21 | ಆಬ್ಜೆಕ್ಟ್ 'c_1' ದ ಮೇಲೆ ರೈಟ್-ಕ್ಲಿಕ್ ಮಾಡಿ. |
07:23 | Rename ದ ಮೇಲೆ ಕ್ಲಿಕ್ ಮಾಡಿ. |
07:24 | 'c_1' ಅನ್ನು ‘s’ ನಿಂದ ಬದಲಾಯಿಸಿ. |
07:26 | OK ಯ ಮೇಲೆ ಕ್ಲಿಕ್ ಮಾಡಿ. |
07:28 | ಈಗ ನಾವು ಶಂಕುವಿನ ಮೇಲ್ಮೈ ವಿಸ್ತೀರ್ಣ ಹಾಗೂ ಘನ ಅಳತೆಯನ್ನು ಕಂಡುಹಿಡಿಯೋಣ. |
07:33 | ನಾವು ಟೂಲ್-ಬಾರ್ ನಲ್ಲಿಯ Insert text ಟೂಲನ್ನು ಅಥವಾ Input (ಇನ್ಪುಟ್) ಬಾರನ್ನು ಬಳಸಬಹುದು. ನಾನು Input ಬಾರ್ ಅನ್ನು ಬಳಸುತ್ತೇನೆ. |
07:40 | ವಿಶಿಷ್ಟ ಅಕ್ಷರಗಳನ್ನು (special characters) ದಯವಿಟ್ಟು Input ಬಾರ್ ನ ಡ್ರಾಪ್-ಡೌನ್ ಲಿಸ್ಟ್ ನಲ್ಲಿ ಹುಡುಕಿ. |
07:44 | ‘π’ (ಪೈ) ಅನ್ನು ಹುಡುಕಲು ಕೆಳಗೆ ಸ್ಕ್ರೋಲ್ ಮಾಡಿ. |
07:48 | Input (ಇನ್ಪುಟ್) ಬಾರ್ ನಲ್ಲಿ ಟೈಪ್ ಮಾಡಿ.
Surfacearea = ಬ್ರಾಕೆಟ್ ನಲ್ಲಿ ‘π’ ಯನ್ನು ಲಿಸ್ಟ್ ನಿಂದ ಆಯ್ದುಕೊಳ್ಳಿ <ಸ್ಪೇಸ್> ‘a' <ಸ್ಪೇಸ್> ‘s’ ಪ್ಲಸ್ (+) ‘π’ ಯನ್ನು ಲಿಸ್ಟ್ ನಿಂದ ಆಯ್ದುಕೊಳ್ಳಿ <ಸ್ಪೇಸ್> ‘a' , ಲಿಸ್ಟ್ ನಿಂದ ‘ಸ್ಕ್ವೇರ್’ ಅನ್ನು ಆಯ್ದುಕೊಳ್ಳಿ, ಬ್ರಾಕೆಟ್ ಅನ್ನು ಮುಚ್ಚಿ. Enter ಅನ್ನು ಒತ್ತಿ. |
08:15 | ಶಂಕುವಿನ ಮೇಲ್ಮೈ ವಿಸ್ತೀರ್ಣವನ್ನು, Algebra view ನಲ್ಲಿ ತೋರಿಸಲಾಗಿದೆ. |
08:20 | ನಾವು Input ಬಾರ್ ಅನ್ನು ಬಳಸಿದಾಗ, ಉತ್ತರವು Algebra view ನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ದಯವಿಟ್ಟು ಗಮನಿಸಿ. |
08:26 | ನಾವು ಘನ ಅಳತೆಯನ್ನು ಕಂಡುಹಿಡಿಯೋಣ. |
08:29 | Volume = ಬ್ರಾಕೆಟ್ ನಲ್ಲಿ, 1/3 <ಸ್ಪೇಸ್> ‘π’ ಯನ್ನು ಲಿಸ್ಟ್ ನಿಂದ ಆಯ್ದುಕೊಳ್ಳಿ <ಸ್ಪೇಸ್> ‘a', ಲಿಸ್ಟ್ ನಿಂದ ‘ಸ್ಕ್ವೇರ್’ ಅನ್ನು ಆಯ್ದುಕೊಳ್ಳಿ, <ಸ್ಪೇಸ್> 'h', ಬ್ರಾಕೆಟ್ ಅನ್ನು ಮುಚ್ಚಿ. Enter ಅನ್ನು ಒತ್ತಿ. |
08:50 | ಶಂಕುವಿನ ಘನ ಅಳತೆಯನ್ನು ಇಲ್ಲಿ, Algebra view ನಲ್ಲಿ, ತೋರಿಸಲಾಗಿದೆ. |
08:55 | ಈಗ ನಾವು ಫೈಲ್ ಅನ್ನು ಸೇವ್ ಮಾಡೋಣ. ಕ್ರಮವಾಗಿ File , Save As ಗಳ ಮೇಲೆ ಕ್ಲಿಕ್ ಮಾಡಿ. ನಾನು ಫೈಲ್ ನ ಹೆಸರನ್ನು 'Sphere-cone' ಎಂದು ಟೈಪ್ ಮಾಡುವೆನು. |
09:08 | Save ನ ಮೇಲೆ ಕ್ಲಿಕ್ ಮಾಡಿ. |
09:10 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ. |
09:14 | ಸಂಕ್ಷಿಪ್ತವಾಗಿ, |
09:18 | ಈ ಟ್ಯುಟೋರಿಯಲ್ ನಲ್ಲಿ, ನಾವು |
09:20 | * ವಜ್ರಾಕೃತಿಯು ವಿಸ್ತೀರ್ಣ ಹಾಗೂ ಸುತ್ತಳತೆ |
09:24 | * ಗೋಳ ಮತ್ತು ಶಂಕುವಿನ ಮೇಲ್ಮೈ ವಿಸ್ತೀರ್ಣ |
09:27 | * ಗೋಳ ಮತ್ತು ಶಂಕುವಿನ ಘನ ಅಳತೆ, ಇವುಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ. |
09:30 | ನಾವು ಗೋಳ ಮತ್ತು ಶಂಕುವನ್ನು ರಚಿಸಲು ಸಹ ಕಲಿತಿದ್ದೇವೆ. |
09:36 | ಒಂದು ಅಸೈನ್ಮೆಂಟ್ ಎಂದು, ನೀವು ಸಿಲಿಂಡರ್ ನ ಮೇಲ್ಮೈ ವಿಸ್ತೀರ್ಣ ಹಾಗೂ ಘನಅಳತೆಯನ್ನು ಕಂಡುಹಿಡಿಯಿರಿ. |
09:43 | ಒಂದರ ಕೆಳಗೆ ಇನ್ನೊಂದರಂತೆ, ಒಂದೇ ಅಳತೆಯ ಎರಡು ಎಲಿಪ್ಸ್ ಗಳನ್ನು (ದೀರ್ಘವೃತ್ತ) ರಚಿಸಿ. |
09:47 | ಎಲಿಪ್ಸ್ ಗಳ ಅಂಚುಗಳನ್ನು ಜೋಡಿಸಿ. |
09:50 | Center ಟೂಲನ್ನು ಬಳಸಿ, ಒಂದು ಎಲಿಪ್ಸ್ ನ ಕೇಂದ್ರವನ್ನು ಕಂಡುಹಿಡಿಯಿರಿ. |
09:54 | ಕೇಂದ್ರಬಿಂದು ಮತ್ತು ಅಂಚನ್ನು ಸೇರಿಸಿ. |
09:56 | ಆಬ್ಜೆಕ್ಟ್ ‘b' ಅನ್ನು ‘h’ ಎಂದು, ‘e' ಯನ್ನು ‘r' ಎಂದು ರಿ-ನೇಮ್ ಮಾಡಿ. |
10:01 | Surface area = 2 π r(r + h) (ಮೇಲ್ಮೈ ವಿಸ್ತೀರ್ಣ = 2 π r(r + h)) |
10:07 | Volume = π r^2 h (ಘನ ಅಳತೆ = π r^2 h) |
10:13 | ಅಸೈನ್ಮೆಂಟ್ ನ ಔಟ್ಪುಟ್ ಹೀಗೆ ಕಾಣಿಸಬೇಕು. |
10:19 | ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
10:23 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
10:26 | ನಿಮಗೆಒಳ್ಳೆಯ ‘‘ಬ್ಯಾಂಡ್ವಿಡ್ತ್’’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:31 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
10:33 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:36 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:40 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
10:48 | “ ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಎನ್ನುವ ಪ್ರಕಲ್ಪದ ಒಂದು ಭಾಗವಾಗಿದೆ. |
10:52 | ಇದು ICT, MHRD ಮೂಲಕ ಭಾರತ ಸರ್ಕಾರದ ರಾಷ್ಟ್ರೀಯ ಸಾಕ್ಷರತಾ ಮಿಷನ್ ನ ಆಧಾರವನ್ನು ಪಡೆದಿದೆ. |
10:59 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
11:06 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ---------- .
ವಂದನೆಗಳು. |