Difference between revisions of "Java/C2/Method-overloading/Kannada"
From Script | Spoken-Tutorial
NaveenBhat (Talk | contribs) (Created page with "{| border=1 || '''Time''' || '''Narration''' |- | 00:01 | ಜಾವಾದಲ್ಲಿ ಮೆಥಡ್ ಓವರ್ಲೋಡಿಂಗ್ ಕುರಿತಾದ ಸ್ಪೋಕ...") |
PoojaMoolya (Talk | contribs) |
||
Line 184: | Line 184: | ||
| ಸೇವ್ ಮಾಡಿ ರನ್ ಮಾಡಿರಿ. | | ಸೇವ್ ಮಾಡಿ ರನ್ ಮಾಡಿರಿ. | ||
|- | |- | ||
− | | | + | | 06:39 |
| ಫಲಿತದಲ್ಲಿ ನಾವು ಮೂರು ಸಂಖ್ಯೆಗಳ ಮೊತ್ತವನ್ನು ಪಡೆಯುತ್ತೇವೆ. ಅದುವೇ '''10''' | | ಫಲಿತದಲ್ಲಿ ನಾವು ಮೂರು ಸಂಖ್ಯೆಗಳ ಮೊತ್ತವನ್ನು ಪಡೆಯುತ್ತೇವೆ. ಅದುವೇ '''10''' | ||
|- | |- | ||
Line 256: | Line 256: | ||
|ಹೀಗೆ ಜಾವಾದಲ್ಲಿ ಮೆಥಡ್ ಒವರ್ ಲೋಡಿಂಗ್ ಮಾಡಲಾಗುವುದು. | |ಹೀಗೆ ಜಾವಾದಲ್ಲಿ ಮೆಥಡ್ ಒವರ್ ಲೋಡಿಂಗ್ ಮಾಡಲಾಗುವುದು. | ||
|- | |- | ||
− | | 09: 16 | + | | 09:16 |
| ಈ ಟ್ಯುಟೋರಿಯಲ್ ನಲ್ಲಿ ನಾವು | | ಈ ಟ್ಯುಟೋರಿಯಲ್ ನಲ್ಲಿ ನಾವು | ||
|- | |- |
Revision as of 17:15, 12 November 2014
Time | Narration |
00:01 | ಜಾವಾದಲ್ಲಿ ಮೆಥಡ್ ಓವರ್ಲೋಡಿಂಗ್ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು |
00:08 | ಮೆಥಡ್ ಓವರ್ಲೋಡಿಂಗ್ ಎಂದರೇನು? ಎಂದು |
00:10 | ಮತ್ತು ಮೆಥಡ್ ಓವರ್ಲೋಡ್ ಮಾಡುವುದು ಹೇಗೆಂದು ಕಲಿಯುತ್ತೇವೆ. |
00:13 | ನಾವು ಇಲ್ಲಿ
|
00:24 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನಾವು |
00:26 | ಮೆಥಡ್ ಗಳನ್ನು ರಚನೆ ಮಾಡಲು ಮತ್ತು |
00:29 | ಜಾವಾದಲ್ಲಿ ಎಕ್ಲಿಪ್ಸ್ ಅನ್ನು ಉಪಯೋಗಿಸಿ ಕನ್ಸ್-ಟ್ರಕ್ಟರ್ ಓವರ್ಲೋಡಿಂಗ್ ಮಾಡಲು ತಿಳಿದಿರಬೇಕು. |
00:32 | ತಿಳಿದಿರದಿದ್ದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಕೆಳಕಂಡ ಅಂತರ್ಜಾಲ ತಾಣವನ್ನು ಭೇಟಿಕೊಡಿ.
(http://www.spoken-tutorial.org) |
00:39 | ಮೆಥಡ್ ಓವರ್ಲೋಡಿಂಗ್ ಎಂದರೇನು? |
00:42 | ಒಂದು ಕ್ಲಾಸ್ ನಲ್ಲಿ ಎರಡು ಅಥವಾ ಹೆಚ್ಚು ಒಂದೇ ಹೆಸರುಳ್ಳ ಮೆಥಡ್ ಗಳನ್ನು ಡಿಫೈನ್ ಮಾಡಿ. |
00:46 | ಅವುಗಳ ಪ್ಯಾರಾಮೀಟರ್ ಗಳ ವಿಧ ಅಥವಾ ಸಂಖ್ಯೆಗಳಲ್ಲಿ ವ್ಯತ್ಯಾಸವಿರಬೇಕು. |
00:50 | ಈ ಮೆಥಡ್ ಗಳನ್ನು ಓವರ್ಲೋಡೆಡ್ ಮೆಥಡ್ ಗಳು ಎನ್ನುತ್ತಾರೆ. |
00:54 | ಈ ಪ್ರಕ್ರಿಯೆಯನ್ನು ಮೆಥಡ್ ಓವರ್ಲೋಡಿಂಗ್ ಎನ್ನುತ್ತಾರೆ. |
00:57 | ಈಗ ಮೆಥಡ್ ಓವರ್ಲೋಡ್ ಮಾಡುವುದು ಹೇಗೆಂದು ನೋಡೋಣ. |
01:00 | ಎಕ್ಲಿಪ್ಸ್ ನಲ್ಲಿ ನಾವು “Addition” ಎಂಬ ಕ್ಲಾಸ್ ಅನ್ನು ಹೊಂದಿದ್ದೇವೆ. |
01:06 | ಈ ಕ್ಲಾಸ್ ನ ಒಳಗೆ ನಾವು ಎರಡು ಇಂಟೀಜರ್ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡೋಣ. |
01:10 | ಹಾಗಾಗಿ int a ಸಮ 10 ಮತ್ತು int b ಸಮ 5; ಎಂದು ಟೈಪ್ ಮಾಡಿ. |
01:19 | ಈ ಎರಡು ಇಂಟೀಜರ್ ಗಳನ್ನು ಕೂಡಲು ಒಂದು ಮೆಥಡ್ ಅನ್ನು ರಚನೆ ಮಾಡೋಣ. |
01:23 | void add ಎಂದು ಟೈಪ್ ಮಾಡಿ ಪೆರಾಂಥಿಸಿಸ್ ಹಾಕಿ. |
01:30 | ಕರ್ಲೀ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಎಂದು ಟೈಪ್ ಮಾಡಿ |
01:40 | ಬ್ರ್ಯಾಕೆಟ್ ನಲ್ಲಿ (a+b) ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
01:44 | ಈ ಮೆಥಡ್ ನಮಗೆ ಎರಡು ಇಂಟೀಜರ್ ವೇರಿಯೇಬಲ್ ನ ಮೊತ್ತವನ್ನು ಕೊಡುತ್ತದೆ. |
01:50 | ಈಗ ನಾವು ಎರಡು ಪ್ಯಾರಾಮೀಟರ್ ಗಳನ್ನು ತೆಗೆದುಕೊಳ್ಳುವ ಇನ್ನೊಂದು ಮೆಥಡ್ ಅನ್ನು ರಚನೆ ಮಾಡೋಣ. |
01:55 | “void addTwoNumbers” ಎಂದು ಟೈಪ್ ಮಾಡಿ, |
02:04 | ಬ್ರ್ಯಾಕೆಟ್ ನಲ್ಲಿ int num1 ಅಲ್ಪವಿರಾಮ int num2 ಎಂದು ಟೈಪ್ ಮಾಡಿ. |
02:14 | ನಂತರ ಕರ್ಲೀ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ( num1+num2); ಎಂದು ಟೈಪ್ ಮಾಡಿ. |
02:35 | ಆದ್ದರಿಂದ ಈ ಮೆಥಡ್ ನಮಗೆ ಆರ್ಗ್ಯುಮೆಂಟ್ ಆಗಿ ಪಾಸ್ ಮಾಡಿದ ಎರಡು ಬೆಲೆಗಳ ಮೊತ್ತವನ್ನು ಕೊಡುತ್ತದೆ. |
02:44 | ಈಗ ನಾವು ಕ್ಲಾಸ್ ನ ಒಂದು ಒಬ್ಜೆಕ್ಟ್ ಅನ್ನು ರಚನೆ ಮಾಡಿ ಮೆಥಡ್ ಅನ್ನು ಕಾಲ್ ಮಾಡೋಣ. |
02:49 | ಹಾಗಾಗಿ Main ಮೆಥಡ್ ನಲ್ಲಿ Addition ಎಂದು ಅರ್ಥಾತ್ ಕ್ಲಾಸ್ ನ ಹೆಸರನ್ನು ಟೈಪ್ ಮಾಡಿ, obj ಸಮ new Addition ಎಂದು ಟೈಪ್ ಮಾಡಿ ಪೆರಾಂಥಿಸಿಸ್ ಸೆಮಿಕೋಲನ್ ಹಾಕಿರಿ. |
03:13 | ನಂತರ Obj.add ಎಂದು ಟೈಪ್ ಮಾಡಿ |
03:18 | ಮತ್ತು Obj.addTwonumbers ಎಂದು ಟೈಪ್ ಮಾಡಿ ಬ್ರ್ಯಾಕೆಟ್ ನಲ್ಲಿ |
03:31 | ನಾವು ಎರಡು ಆರ್ಗ್ಯುಮೆಂಟ್ಸ್ ಗಳನ್ನು ಪಾಸ್ ಮಾಡುತ್ತೇವೆ. |
03:33 | ಒಂದು ವೇಳೆ ನಾವು ದಶಾಂಶವಿರುವ ಬೆಲೆಯನ್ನು ಪಾಸ್ ಮಾಡಿದರೆ |
03:37 | ಉದಾಹರಣೆಗೆ 2.5 ಅಲ್ಪವಿರಾಮ 3. |
03:45 | ನಾವು “ the method addTwoNumbers int ,int of the class Addition is not applicable for the argument double ,int” ಎಂಬ ದೋಷವನ್ನುಕಾಣುತ್ತೇವೆ. |
03:57 | ಹಾಗಾಗಿ ಈ ಮೆಥಡ್ ನಲ್ಲಿ ನಾವು int ಬದಲು double ಬರೆಯೋಣ. |
04:06 | ಹಾಗಾಗಿ int ಅನ್ನು double ಎಂದು ಬದಲಾಯಿಸಿ. ಸೇವ್ ಮಾಡಿ ರನ್ ಮಾಡಿರಿ. |
04:12 | ದೋಷ ಪರಿಹಾರವಾದದ್ದನ್ನು ನೋಡಬಹುದು. |
04:17 | ನಮಗೆ ತಿಳಿದಿರುವಂತೆ ಜಾವಾ int ಅನ್ನು double ಆಗಿ ತಾನೇ ಬದಲಾಯಿಸಿಕೊಳ್ಳುತ್ತದೆ. |
04:24 | ಹಾಗಾಗಿ ನಾವು ಇಂಟೀಜರ್ ಆರ್ಗ್ಯುಮೆಂಟ್ ಅನ್ನು ಕೂಡ ಪಾಸ್ ಮಾಡಬಹುದು. |
04:28 | ಸೇವ್ ಮಾಡಿ ರನ್ ಮಾಡಿರಿ. |
04:32 | ಫಲಿತದಲ್ಲಿ ನಾವು ಎರಡು ಇಂಟೀಜರ್ ವೇರಿಯೇಬಲ್ ಗಳ ಮೊತ್ತವನ್ನು ನೋಡುತ್ತೇವೆ. |
04:37 | ಮತ್ತು ನಾವು ಪಾಸ್ ಮಾಡಿದ ಎರಡು ಸಂಖ್ಯೆಯ ಆರ್ಗ್ಯುಮೆಂಟ್ ಗಳ ಮೊತ್ತವನ್ನು ಸಹ ನೋಡಬಹುದು. |
04:43 | ನಾವು ಇಲ್ಲಿ ಎರಡು ಮೆಥಡ್ ಗಳೂ ಒಂದೇ ಕಾರ್ಯ ನಿರ್ವಹಿಸುವುದನ್ನು ನೋಡಬಹುದು. |
04:50 | ವ್ಯತ್ಯಾಸವೆಂದರೆ ಮೊದಲನೇ ಮೆಥಡ್ ಯಾವುದೇ ಪ್ಯಾರಾಮೀಟರ್ ಅನ್ನು ಹೊಂದಿಲ್ಲ ಆದರೆ ಎರಡನೇ ಮೆಥಡ್ ಎರಡು ಪ್ಯಾರಾಮೀಟರ್ ಗಳನ್ನು ಹೊಂದಿದೆ. |
05:00 | ಹಾಗಾಗಿ ಈ ಸಂದರ್ಭದಲ್ಲಿ ಜಾವಾವು ಮೆಥಡ್ ಓವರ್ಲೋಡಿಂಗ್ ಅನ್ನು ಉಪಯೋಗಿಸುತ್ತದೆ. |
05:05 | ನಾವು ಎರಡೂ ಮೆಥಡ್ ಗಳಿಗೆ ಒಂದೇ ಹೆಸರನ್ನು ಕೊಡೋಣ. |
05:09 | addTwoNumbers ಅನ್ನು add ಎಂದು ಬದಲಿಸಿ ಮತ್ತು ಇಲ್ಲೂ ಕೂಡ ಬದಲಿಸಿ. |
05:29 | ನಾವು ಇದೇ ಕಾರ್ಯ ಮಾಡುವ ಇನ್ನೊಂದು ಮೆಥಡ್ ಅನ್ನು ಡಿಫೈನ್ ಮಾಡೋಣ. |
05:33 | void add ಎಂದು ಟೈಪ್ ಮಾಡಿ |
05:38 | ಮತ್ತು ಬ್ರ್ಯಾಕೆಟ್ ನಲ್ಲಿ (int n1 ,int n2, int n3) ಎಂದು ಟೈಪ್ ಮಾಡಿ. |
05:51 | ಇಲ್ಲಿ ನಾವು ಮೂರು ಪ್ಯಾರಾಮೀಟರ್ ಗಳನ್ನು ಕೊಟ್ಟಿದ್ದೇವೆ. |
05:54 | ಕರ್ಲೀ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println |
06:03 | ಬ್ರ್ಯಾಕೆಟ್ ನಲ್ಲಿ n1+n2+n3 ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
06:11 | ಈ ಮೆಥಡ್ ಮೂರು ಸಂಖ್ಯೆಗಳ ಮೊತ್ತವನ್ನು ಕೊಡುತ್ತದೆ. |
06:17 | ಈ ಮೆಥಡ್ ಅನ್ನು ಕಾಲ್ ಮಾಡೋಣ. |
06:19 | obj ಡಾಟ್ add (1,5,4) ಎಂದು ಟೈಪ್ ಮಾಡಿ. |
06:35 | ಸೇವ್ ಮಾಡಿ ರನ್ ಮಾಡಿರಿ. |
06:39 | ಫಲಿತದಲ್ಲಿ ನಾವು ಮೂರು ಸಂಖ್ಯೆಗಳ ಮೊತ್ತವನ್ನು ಪಡೆಯುತ್ತೇವೆ. ಅದುವೇ 10 |
06:47 | ಹಾಗಾಗಿ ಜಾವಾ ಕಂಪೈಲರ್ ಪ್ಯಾರಾಮೀಟರ್ ಗಳಿಗೆ ಸಂಬಂಧಿಸಿದ ಮೆಥಡ್ ಅನ್ನು ಓವರ್ಲೋಡ್ ಮಾಡುತ್ತದೆ. |
06:52 | ಇದು ಪ್ಯಾರಾಮೀಟರ್ ಗಳ ವಿಧ ಮತ್ತು ಸಂಖ್ಯೆಯನ್ನು ಪರಿಶೀಲಿಸುತ್ತದೆ. |
06:57 | ಹಾಗಾಗಿ ಪ್ರೋಗ್ರಾಮ್ಮರ್ ಗಳು ಮೆಥಡ್ ಗಳ ಹೆಸರಿನ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. |
07:01 | ಮತ್ತು ಪಾಸ್ ಮಾಡಿದ ಆರ್ಗ್ಯುಮೆಂಟ್ ಗಳ ವಿಧ ಮತ್ತು ಸಂಖ್ಯೆಯ ಬಗ್ಗೆಯೂ ಚಿಂತಿಸುವ ಅಗತ್ಯವಿಲ್ಲ. |
07:05 | ಸ್ಟ್ರಿಂಗ್ ಗಳನ್ನು ಜೋಡಿಸುವ ಇನ್ನೊಂದು ಮೆಥಡ್ ಅನ್ನು ಕೂಡ ರಚಿಸಬಹುದು. |
07:11 | ನಾವೀಗ ಇನ್ನೊಂದು ಓವರ್ ಲೋಡ್ ಮೆಥಡ್ ಅನ್ನು ರಚಿಸೋಣ. |
07:15 | void add (String s1,String s2) ಎಂದು ಟೈಪ್ ಮಾಡಿ, |
07:29 | ಕರ್ಲೀ ಬ್ರ್ಯಾಕೆಟ್ ನಲ್ಲಿ System ಡಾಟ್ out ಡಾಟ್ println ಎಂದು ಟೈಪ್ ಮಾಡಿ, |
07:41 | ಬ್ರ್ಯಾಕೆಟ್ ನಲ್ಲಿ (s1+s2) ಎಂದು ಟೈಪ್ ಮಾಡಿ ಸೆಮಿಕೋಲನ್ ಹಾಕಿ. |
07:45 | ಮತ್ತು ನಾವು ಈ ಮೆಥಡ್ ಅನ್ನು ಕಾಲ್ ಮಾಡೋಣ. |
07:50 | obj ಡಾಟ್ add |
07:55 | ಬ್ರ್ಯಾಕೆಟ್ ನಲ್ಲಿ ಡಬಲ್ ಕೋಟ್ಸ್ ನಲ್ಲಿHello ಅಲ್ಪವಿರಾಮ ಮತ್ತೆ ಡಬಲ್ ಕೋಟ್ಸ್ ನಲ್ಲಿ ಸ್ಪೇಸ್ ಕೊಟ್ಟು “World” ಎಂದು ಟೈಪ್ ಮಾಡಿ. |
08:07 | ಸೇವ್ ಮಾಡಿ ರನ್ ಮಾಡಿರಿ. |
08:12 | ಫಲಿತದಲ್ಲಿ ನಾವು Hello ಸ್ಪೇಸ್ World ಎಂದು ನೋಡುತ್ತೇವೆ. |
08:16 | ಎರಡು ಸ್ಟ್ರಿಂಗ್ ಆರ್ಗ್ಯುಮೆಂಟ್ ಅನ್ನು ಹೊಂದಿರುವ add ಮೆಥಡ್ ಅವುಗಳನ್ನು ಜೋಡಿಸುತ್ತದೆ. |
08:21 | ಒಂದು ವೇಳೆ ಈಗ ನಾವು ರಿಟರ್ನ್ ಹೊಂದಿರುವ ಮೆಥಡ್ ಅನ್ನು ಡಿಕ್ಲೇರ್ ಮಾಡಿದರೆ ಎನಾಗುತ್ತದೆಂದು ನೋಡೋಣ. |
08:27 | int add ಬ್ರ್ಯಾಕೆಟ್ ತೆರೆದು ಪ್ಯಾರಾಮೀಟರ್ ಗಳಿಲ್ಲದೆ ಮುಚ್ಚಿ ,ಕರ್ಲೀ ಬ್ರ್ಯಾಕೆಟ್ ಹಾಕಿರಿ. |
08:40 | “duplicate method add() in type addition “ ಎಂಬ ದೋಷವನ್ನು ಪಡೆಯುತ್ತೇವೆ. |
08:48 | ಯಾಕೆಂದರೆ ನಾವು ಈಗಾಗಲೇ add ಎಂಬ ಪ್ಯಾರಾಮೀಟರ್ ಗಳಿಲ್ಲದ ಮೆಥಡ್ ಅನ್ನುರಚಿಸಿದ್ದೇವೆ. |
08:54 | ಹಾಗಾಗಿ ಮೆಥಡ್ ಅನ್ನು ಓವರ್ ಲೋಡ್ ಮಾಡುವಾಗ ಯಾವಾಗಲೂ ಪ್ಯಾರಾಮೀಟರ್ ಗಳಲ್ಲಿ ವ್ಯತ್ಯಾಸವಿರಬೇಕು ಎಂಬುದನ್ನು ನೆನಪಿನಲ್ಲಿಡಿ. |
08:58 | ಕೇವಲ ರಿಟರ್ನ್ ಟೈಪ್ ನಲ್ಲಿ ವ್ಯತ್ಯಾಸವಿದ್ದಾಗ ಮೆಥಡ್ ಅನ್ನು ಓವರ್ ಲೋಡ್ ಮಾಡಲು ಸಾಧ್ಯವಿಲ್ಲ. |
09:03 | ಆದ್ದರಿಂದ ಈ ಮೆಥಡ್ ಅನ್ನು ತೆಗೆದು , ಸೇವ್ ಮಾಡಿ. |
09:09 | ಹೀಗೆ ಜಾವಾದಲ್ಲಿ ಮೆಥಡ್ ಒವರ್ ಲೋಡಿಂಗ್ ಮಾಡಲಾಗುವುದು. |
09:16 | ಈ ಟ್ಯುಟೋರಿಯಲ್ ನಲ್ಲಿ ನಾವು |
09:18 | ಮೆಥಡ್ ಒವರ್ ಲೋಡಿಂಗ್ ನ ಬಗ್ಗೆ |
09:20 | ಮೆಥಡ್ ಒವರ್ ಲೋಡಿಂಗ್ ಮಾಡುವ ವಿಧಾನ |
09:22 | ಮತ್ತು ಮೆಥಡ್ ಒವರ್ ಲೋಡಿಂಗ್ ನ ಉಪಯೋಗವನ್ನು ಕಲಿತಿದ್ದೇವೆ. |
09:25 | ಸ್ವಂತ ಅಭ್ಯಾಸಕ್ಕಾಗಿ , ಸಂಖ್ಯೆಗಳ ವ್ಯವಕಲನ ಮಾಡಲು subtract ಎಂಬ ಮೆಥಡ್ ಅನ್ನು ರಚಿಸಿ ಮತ್ತು |
09:31 | ಅದನ್ನು ಓವರ್ ಲೋಡ್ ಮಾಡಿ. |
09:33 | ಈ ಟ್ಯುಟೋರಿಯಲ್ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, |
09:36 | ಮತ್ತು ವೀಡಿಯೋಗಾಗಿ [1] ಅಂತರ್ಜಾಲ ತಾಣವನ್ನು ಭೇಟಿಕೊಡಿ. |
09:42 | ಇದು ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ವಿವರಣೆಯನ್ನು ನೀಡುತ್ತದೆ. |
09:45 | ನೀವು ಒಳ್ಳೆಯ ಬ್ಯಾಂಡ್ವಿ ಡ್ತ್ ಹೊಂದಿರದಿದ್ದಲ್ಲಿ ವಿಡಿಯೋ ವನ್ನು ಡೌನ್ಲೋ್ಡ್ ಮಾಡಿ ಕೂಡಾ ನೋಡಬಹುದು. |
09:48 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು |
09:50 | ಸ್ಪೋಕನ್ ಟ್ಯುಟೋರಿಯಲ್ ಗಳ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. |
09:52 | ಓನ್ಲೈನನ್ ಪರೀಕ್ಷೆ ಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣವನ್ನು ನೀಡುತ್ತದೆ. |
09:56 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಗೆ ಬರೆಯಿರಿ. |
10:01 | ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. |
10:05 | ಇದು ICT ದ್ವಾರಾ ರಾಷ್ಟ್ರೀಯ ಸಾಕ್ಷರತಾ ಮಿಶನ್ MHRD, ಭಾರತ ಸರ್ಕಾರದಿಂದ ಸಮರ್ಥಿತವಾಗಿದೆ. |
10:11 | ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಅಂತರ್ಜಾಲ ತಾಣವನ್ನು ಭೇಟಿಕೊಡಿ.
http://spoken-tutorial.org/NMEICT-Intro |
10:19 | ನಾವು ಟ್ಯುಟೋರಿಯಲ್ನಿ ಕೊನೆಯನ್ನು ತಲುಪಿದ್ದೇವೆ. |
10:21 | ಧನ್ಯವಾದಗಳು |
10:22 | ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್, ಉಪ್ಪಿನಪಟ್ಟಣ. ನಮಸ್ಕಾರ.. |