Difference between revisions of "PHP-and-MySQL/C4/File-Upload-Part-1/Kannada"

From Script | Spoken-Tutorial
Jump to: navigation, search
(Created page with "{|Border=1 |'''Time''' |'''Narration''' |- |00:00 |ನಮಸ್ಕಾರ. ಈ ಟ್ಯುಟೋರಿಯಲ್ ನಲ್ಲಿ ನಾನು ಸರಳವಾದ ಪಿ.ಎಚ...")
 
 
Line 64: Line 64:
 
|-
 
|-
 
|02:40
 
|02:40
| ಇಲ್ಲಿ ನಾವು ಟೈಪ್ ಅನ್ನು ಹೊಂದಿದ್ದೇವೆ ಮತ್ತು ಇದನ್ನು ಕೂಡ ನಾವು ಎನ್ಕೋಡ್ ಮಾಡುವೆವು. ಸರಿ ಇಲ್ಲಿ ನಮ್ಮ ಫಾರ್ಮ್  '''form''' ಮುಗಿಯುತ್ತದೆ.  
+
| ಇಲ್ಲಿ ನಾವು ಟೈಪ್ ಅನ್ನು ಹೊಂದಿದ್ದೇವೆ ಮತ್ತು ಇದನ್ನು ಕೂಡ ನಾವು ಎನ್ಕೋಡ್ ಮಾಡುವೆವು. ಸರಿ ಇಲ್ಲಿ ನಮ್ಮ '''form''' ಮುಗಿಯುತ್ತದೆ.  
 
|-
 
|-
 
|02:50
 
|02:50
Line 76: Line 76:
 
|-
 
|-
 
|03:12
 
|03:12
| ಈಗ ಇದನ್ನು ಪ್ರಿವಿವ್ಯೂ ಮಾಡೋಣ. ಈಗ ಇದನ್ನು ಮುಚ್ಚೋಣ.
+
| ಈಗ ಇದನ್ನು ಪ್ರಿವ್ಯೂ ಮಾಡೋಣ. ಈಗ ಇದನ್ನು ಮುಚ್ಚೋಣ.
 
  |-
 
  |-
 
|03:18
 
|03:18

Latest revision as of 11:36, 18 May 2020

Time Narration
00:00 ನಮಸ್ಕಾರ. ಈ ಟ್ಯುಟೋರಿಯಲ್ ನಲ್ಲಿ ನಾನು ಸರಳವಾದ ಪಿ.ಎಚ್.ಪಿ. ಅಪ್ಲೋಡ್ ಸ್ಕ್ರಿಪ್ಟ್ ಅನ್ನು ಹೇಗೆ ತಯಾರಿಸುವುದು ಎಂದು ತೋರಿಸುವೆನು.
00:05 'upload dot php' ಫೈಲ್ ನಲ್ಲಿ ಸ್ವಲ್ಪ ಸುಧಾರಿತವಾದ ಪ್ರೋಗ್ರಾಂ ಇದೆ.
00:10 ಹಾಗಾಗಿ ನಮ್ಮ 'index dot php' ಅನ್ನು ಬಳಸುವೆವು. ನಾವು ಎಚ್.ಟಿ.ಎಂ.ಎಲ್ ಕೋಡ್ ಅನ್ನು ಬಳಸಿ ಈ ನಿರ್ದಿಷ್ಟವಾದ ಫೈಲ್ ಅನ್ನು ಸಬ್ಮಿಟ್ ಮಾಡಲು, ಒಂದು ಫಾರ್ಮ್ ಅನ್ನು ಕೊಡುವೆವು.
00:20 'upload dot php' ಯಲ್ಲಿ, ನಾವು ಈ ಫೈಲ್ ಅನ್ನು ಪ್ರೊಸೆಸ್ ಮಾಡಿ, ಫೈಲ್ ನ ಕುರಿತಾದ ಮಾಹಿತಿ ಅಂದರೆ ಅದರ ಹೆಸರು, ವಿಧ, ಅಳತೆ, ತಾತ್ಕಾಲಿಕವಾಗಿ ಸ್ಟೋರ್ ಮಾಡಿದ ಹೆಸರು ಮತ್ತು ಯಾವುದಾದರೂ ಎರರ್ ಮೆಸೇಜ್ ಇದ್ದರೆ ಅದು ಮುಂತಾದ ಮಾಹಿತಿಗಳನ್ನು ಪಡೆಯುವೆವು.
00:33 ನೀವು ಎರರ್ ಮೆಸೇಜ್ ಅನ್ನು ಎರರ್ ಬಂದಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸಲು ಬಳಸಬಹುದು.
00:38 ನಂತರ ನಾವು ಈ ಫೈಲ್ ಅನ್ನು ಪ್ರೊಸೆಸ್ ಮಾಡಿ, ಅದನ್ನು ನಮ್ಮ ವೆಬ್ ಸರ್ವರ್ ನ ನಿರ್ದಿಷ್ಟವಾದ ಡೈರಕ್ಟರಿಯಲ್ಲಿ ಸೇವ್ ಮಾಡುವೆವು.
00:45 ಈ ಟ್ಯುಟೋರಿಯಲ್ ನ ಎರಡನೇ ಭಾಗದಲ್ಲಿ ನಾನು ನಿರ್ದಿಷ್ಟವಾದ ಫೈಲ್ ನ ವಿಧವನ್ನು ಪರೀಕ್ಷಿಸಲು ಹೇಳಿಕೊಡುತ್ತೇನೆ. ಆಗ ನೀವು ಫೈಲ್ ಟೈಪ್ ಗಳಿಂದ ರಕ್ಷಿಸಿಕೊಳ್ಳಬಹುದು.
00:54 ನಾವು ಫೈಲ್ ನ ಅಳತೆಯನ್ನು ಸಹ ನೋಡಲು ಕಲಿಯುವೆವು, ಹಾಗಾಗಿ ನೀವು ಗರಿಷ್ಟ ಅಥವಾ ಕನಿಷ್ಟ ಫೈಲ್ ಸೈಜ್ ಅನ್ನು ಹೊಂದಿರಬಹುದಾಗಿದೆ.
01:04 ನಾನು ಇಲ್ಲಿ 'uploaded' ಎಂಬ ಫೋಲ್ಡರ್ ಅನ್ನು ರಚಿಸಿದ್ದೇನೆ ಮತ್ತು ಅದರಲ್ಲಿ ನಾನು ನನ್ನ 'index' ಮತ್ತು 'upload dot php' ಫೈಲ್ ಗಳನ್ನು ರಚಿಸಿರುವೆನು.
01:13 ಮತ್ತು ಇಲ್ಲಿಯೇ ನನ್ನ ಫೈಲ್ ಗಳು ಅಪ್ಲೋಡ್ ಆದ ಮೇಲೂ ಸ್ಟೋರ್ ಆಗಿರುತ್ತದೆ.
01:17 ಆರಂಭದಲ್ಲಿ ಫೈಲ್ ಗಳನ್ನು ಅಪ್ಲೋಡ್ ಮಾಡಿದಾಗ, ಅವು ವೆಬ್ ಸರ್ವರ್ ನ ಟೆಂಪರರಿ ಏರಿಯಾ(ತಾತ್ಕಾಲಿಕ ಸ್ಥಾನ) ಕ್ಕೆ ಹೋಗುತ್ತವೆಯೇ ಹೊರತು ಈ ಫೋಲ್ಡರ್ ಗೆ ಹೋಗುವುದಿಲ್ಲ.
01:25 ಎಚ್.ಟಿ.ಎಂ.ಎಲ್ ಗೆ - ನಾವು form ಅನ್ನು ರಚಿಸಬೇಕು. ಇದನ್ನು ಮಾಡಲು ನಾವು form action ಅನ್ನು ಹೊಂದಿರಬೇಕು, ಮತ್ತು ಇದಕ್ಕೆ ನಾವು ಇಲ್ಲಿ ಈಗಾಗಲೇ ರಚಿಸಿದ 'upload dot php' ಎಂಬ ಫೈಲ್ ಇದೆ.
01:38 method ಅನ್ನು POST ಎಂದು ಸೆಟ್ ಮಾಡಬೇಕು. ಇದಕ್ಕೆ ಕಾರಣವೇನೆಂದರೆ ನಾವು ಇದನ್ನುGET ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಬೇಕಾಗಿಲ್ಲ.
01:45 ಯಾಕೆ? ಏಕೆಂದರೆ ಭದ್ರತೆಯ ಕಾರಣಕ್ಕಾಗಿ ವೆಬ್ಸೈಟ್ ನಲ್ಲಿ ಹರಿದಾಡುವ ಬೈನರಿ ಡಾಟಾವನ್ನು ಬಳಕೆದಾರರು ನೋಡುವುದು ಬೇಕಾಗಿಲ್ಲ.
01:53 ಮತ್ತು GET ವೇರಿಯೇಬಲ್ ಗೆ ನೂರು ಅಕ್ಷರಗಳ ಪರಿಮಿತಿ ಕೂಡ ಇದೆ.
01:58 ಹಾಗಾಗಿ ನೂರು ಬಿಟ್ ಡಾಟಾಗಳನ್ನು ಹೊಂದಿದ್ದರೆ ನೀವು ತುಂಬಾ ಚಿಕ್ಕ ಫೈಲ್ ಅನ್ನು ಹೊಂದಿರಬೇಕಾಗುತ್ತದೆ.
02:04 ನೀವು ಇದುವರೆಗೂ ಕೇಳಿರದ ಒಂದು ಪ್ಯಾರಾಮೀಟರ್ ಅನ್ನು ನಾವು ಇಲ್ಲಿ ಹೊಂದಿದ್ದೇವೆ.
02:11 ಇದು enctype ಎಂದಾಗಿದೆ. ಎನ್ಕೋಡಿಂಗ್ ಟೈಪ್ ಅಂದರೆ ನಾವು ಇದನ್ನು ಹೇಗೆ ಎನ್ಕೋಡ್ ಮಾಡುವೆವು ಎಂದಾಗಿದೆ.
02:20 ಇದು multi-part ನಂತರ ಒಂದು ಫಾರ್ವಾರ್ಡ್ ಸ್ಲ್ಯಾಶ್ ಮತ್ತು ನಂತರ form-data ಎಂದು ಹೊಂದಿರುತ್ತದೆ.
02:28 ಇದರ ಅರ್ಥ – ನಾವು ಫಾರ್ಮ್ ಅನ್ನು ಡಾಟಾ ದ ಮಾದರಿ – ಅಂದರೆ ಬೈನರಿ ಡಾಟಾ- ನಾನು ಮೊದಲೇ ಹೇಳಿದಂತೆ ಸೊನ್ನೆ ಮತ್ತು ಒಂದು – ಮಾದರಿಯಲ್ಲಿ ಸಬ್ಮಿಟ್ ಮಾಡುತ್ತಿದ್ದೇವೆ.
02:40 ಇಲ್ಲಿ ನಾವು ಟೈಪ್ ಅನ್ನು ಹೊಂದಿದ್ದೇವೆ ಮತ್ತು ಇದನ್ನು ಕೂಡ ನಾವು ಎನ್ಕೋಡ್ ಮಾಡುವೆವು. ಸರಿ ಇಲ್ಲಿ ನಮ್ಮ form ಮುಗಿಯುತ್ತದೆ.
02:50 ಇಲ್ಲಿ ಇದರಲ್ಲಿ ನಾವು ಕೆಲವು, ಉದಾಹರಣೆಗೆ ನಮ್ಮ ಫೈಲ್ ಗೆ input ನಂತಹ ಎಲಿಮೆಂಟ್ ಗಳನ್ನು ಹೊಂದಿದ್ದೇವೆ.
02:57 ಇದರ type ಅನ್ನು 'file' ಎಂದು ಸೆಟ್ ಮಾಡೋಣ, ಇನ್ನೂ ನಿರ್ದಿಷ್ಟವಾಗಿ ಇದನ್ನು 'myfile' ಎಂದು ಹೇಳೋಣ.
03:04 ಇಲ್ಲಿ paragraph break ಅನ್ನು ಹಾಕೋಣ ಮತ್ತು ನಂತರ ನಮಗೆ submit ಬಟನ್ ಅನ್ನು ಹಾಕೋಣ.
03:12 ಈಗ ಇದನ್ನು ಪ್ರಿವ್ಯೂ ಮಾಡೋಣ. ಈಗ ಇದನ್ನು ಮುಚ್ಚೋಣ.
03:18 fileupload ಅನ್ನು ಕ್ಲಿಕ್ ಮಾಡೋಣ. ಓಹ್ ಹಿಂದಿರುಗೋಣ. . ನಾನು ಇಲ್ಲಿ ಎರಡು 'u' ಗಳನ್ನು ಟೈಪ್ ಮಾಡಿದ್ದೇನೆ.
03:27 ಹಿಂದಿರುಗೋಣ. ನಾವು ಇಲ್ಲಿ ಇನ್ಪುಟ್ ಅನ್ನು ಪಡೆದಿರುವುದನ್ನು ನೀವು ನೋಡಬಹುದು.
03:31 ನಾನು ಇದನ್ನು Browse ಮಾಡಬಹುದು. ಇಲ್ಲಿ ನಾವು ಅಪ್ಲೋಡ್ ಮಾಡಬಹುದಾದ ಫೈಲ್ ಗಳ ಆಯ್ಕೆಯನ್ನು ನೋಡಬಹುದು.
03:36 ಇದನ್ನು ನನಗೂ ಮತ್ತು ನಿಮಗೂ ಇನ್ನೂ ಸುಲಭವಾಗಿರುವಂತೆ ರೂಪಿಸೋಣ.
03:45 "Upload a file" ಎಂದಿರಲಿ. ಈಗ ಇದನ್ನು ರಿಫ್ರೆಶ್ ಮಾಡೋಣ. ಸರಿ ನಾವು ಒಂದು ಉತ್ತಮವಾದ ಪೇಜ್ ಅನ್ನು ಹೊಂದಿದ್ದೇವೆ.
03:50 ನಾವು ಒಂದು header ಅನ್ನು ಹೊಂದಿದ್ದೇವೆ ಮತ್ತು ಇಲ್ಲಿ ಒಂದು ಫೈಲ್ ಅನ್ನು ಅಪ್ಲೋಡ್ ಮಾಡಲು ಅವಕಾಶವಿದೆ. ನಾವು ಅಗತ್ಯವಿದ್ದರೆ ಇಲ್ಲಿ ನಾವೇ ಟೈಪ್ ಮಾಡಬಹುದು.
03:58 ಮತ್ತು ಇಲ್ಲಿ ನಾವು Upload ಬಟನ್ ಅನ್ನು ಹೊಂದಿದ್ದೇವೆ, ಇದು 'upload dot php' ಗೆ ಸಬ್ಮಿಟ್ ಮಾಡುತ್ತದೆ.
04:04 ಹಾಗಾಗಿ ನಮ್ಮ ಫಾರ್ಮ್ ನಿಂದ ಸಬ್ಮಿಟ್ ಆದ ಈ ಫೈಲ್ ಅನ್ನು 'upload dot php' ಯಲ್ಲಿ ಪ್ರೊಸೆಸ್ ಮಾಡಲು ಒಂದು ವಿಧಾನವನ್ನು ಹೊಂದಿರಬೇಕು.
04:13 ಇದನ್ನು ಮಾಡುವ ವಿಧಾನವೆಂದರೆ, 'dollar underscore FILES' ಅನ್ನು ಬಳಸಬೇಕು. ಇದು ನಿಜವಾಗಿಯೂ ಸರಿಯಾದದ್ದಲ್ಲ.
04:19 ಇದರ ಒಂದು ಇನ್ಸ್ಟೆನ್ಸ್ ಅನ್ನು ಎಕೋ ಮಾಡುವುದು ಸರಿಯಾದ ಮಾರ್ಗವಲ್ಲ ಎಂದು ಹೇಳಬಹುದು.
04:27 ಈಗ ಮಾಡುವಾಗ ನಾನು Upload ಅನ್ನು ಕ್ಲಿಕ್ ಮಾಡುವೆನು. ನಾವು ಒಂದು ಅರೇ ಅನ್ನು ಪಡೆಯುವೆವು. ಏಕೆಂದರೆ ಇದೊಂದು ಅರೇ ಆಗಿದೆ.
04:33 ಇದು ಮಲ್ಟಿಡೈಮೆನ್ಷನಲ್ ಅರೇ ಆಗಿರುವುದರಿಂದ, ನಾವು ಮೊದಲ ಸೆಟ್ ಬ್ರ್ಯಾಕೆಟ್ಸ್ ಗಳಲ್ಲಿ ನಾವು ಅಪ್ಲೋಡ್ ಮಾಡಿದ ಫೈಲ್ ಗಳ ಹೆಸರನ್ನು ಮತ್ತು ಇದು ಬಂದ ಇನ್ಪುಟ್ ಬಾಕ್ಸ್ ನ ಹೆಸರನ್ನು ಅಂದರೆ ಇಲ್ಲಿ 'myfile' ಅನ್ನೂ ಟೈಪ್ ಮಾಡುವೆವು.
04:49 ಹಾಗಾಗಿ ನಾವು ಇಲ್ಲಿ "myfile" ಅನ್ನು ಬಳಸುವೆವು. ಮತ್ತು ಎರಡನೆಯದರಲ್ಲಿ, ನಾವು ಅನೇಕ ಪ್ರಾಪರ್ಟಿ ಗಳನ್ನು ಹೊಂದಬಹುದು, ಅವುಗಳಲ್ಲಿ ತುಂಬ ಸರಳವಾದ ಮತ್ತು ಸುಲಭವಾದದ್ದು ಎಂದರೆ ಫೈಲ್ ನ name ಆಗಿದೆ.
04:59 ಈಗ 'upload form' ಗೆ ಹಿಂದಿರುಗೋಣ ಮತ್ತು ಇಲ್ಲಿ 'intro dot avi' ಅನ್ನು ಆಯ್ಕೆ ಮಾಡಿಕೊಳ್ಳೋಣ. ಇದು ಇಲ್ಲಿ ಕಾಣಿಸುತ್ತದೆ.
05:06 ಈಗ Upload ಅನ್ನು ಕ್ಲಿಕ್ ಮಾಡೋಣ ಮತ್ತು ಮುಂದಿನ ಪೇಜ್ ನಲ್ಲಿ ನಾವು 'intro dot avi' ಅನ್ನು ನೋಡುವೆವು.
05:11 ನೆನಪಿಡಿ ಇದು ನಮ್ಮ 'upload dot php' ಫಾರ್ಮ್ ನಲ್ಲಿ ಕ್ಷಮಿಸಿ, ಫೈಲ್ ನಲ್ಲಿದೆ.
05:16 ಸರಿ ಈಗ ನಾನು ಇದನ್ನು ಒಂದು ವೇರಿಯೇಬಲ್ ನಲ್ಲಿ, save ಮಾಡುವೆನು.
05:22 ಮುಂದೆ ನಾವು ನೋಡುವುದು ಫೈಲ್ ನ ವಿಧ, ಅದನ್ನು ನಾನು ಇಲ್ಲಿ ಟೈಪ್ ಮಾಡುವೆನು.
05:30 ಹಾಗಾಗಿ ಇದು, 'dollar underscore FILES' ಮತ್ತು ಇಲ್ಲಿ ನಾವು "myname" ರೆಫರೆನ್ಸ್ ಅನ್ನು ಬಳಸೋಣ.
05:38 ಮತ್ತು ಇದರೊಳಗೆ ನಾವು type ಅನ್ನು ಹೊಂದಿದ್ದೇವೆ. ಇದು ಫೈಲ್ ನ ಟೈಪ್ ಆಗಿದೆ. ನೀವು ಇದನ್ನು ಎಕೋ ಮಾಡಿ ನೋಡಬಹುದು.
05:45 ಮತ್ತು ರಿಫ್ರೆಶ್ ಮಾಡೋಣ. . Re-send ಮಾಡಿ, ಓಹ್ ಇದನ್ನು ನೋಡಿ - "myfile" ಎಂದಾಗಬೇಕು.
05:54 ಸರಿ ಈಗ ಮತ್ತೆ ರಿಸೆಂಡ್ ಮಾಡಿ, ಇಲ್ಲಿ 'video slash avi' ಎಂದು ನೋಡಬಹುದು. ನೀವು ಇದನ್ನು ಎಚ್.ಟಿ.ಎಮ್.ಎಲ್ ನಲ್ಲಿ ಮೊದಲು ನೋಡಿರಬಹುದು.
06:00 ಉದಾಹರಣೆಗೆ ಇದು 'image slash png' ಆಗಿರಬಹುದು ಅಥವಾ 'image slash jpeg', 'image slash bmp' , 'video slash avi' ಮತ್ತು 'video slash mpeg' ಅಥವಾ ಇನ್ಯಾವುದಾದರೂ ಫಾರ್ಮ್ಯಾಟ್ ಕೂಡ ಆಗಿರಬಹುದು.
06:11 ಈಗ ನಾವು ಇಲ್ಲಿ ಇದು ಒಂದು 'avi' ಫೈಲ್ ಎಂದು ನೋಡಬಹುದು, ನಾವು ಇದನ್ನೇ "type" ನಲ್ಲಿ ಪಡೆಯುವೆವು.
06:18 ನಾವು ಇದನ್ನು $type ಇಕ್ವಲ್ ಇವೆಲ್ಲ ಎಂದು ಹೇಳಬಹುದು.
06:22 ನಾನು ಮುಂದೆ size ನ ಕುರಿತು ತೋರಿಸುವೆನು. ಸಮಯವನ್ನು ಉಳಿಸಲು ನಾನು ಈ ಕೋಡ್ ಅನ್ನು ಕಾಪಿ, ಪೇಸ್ಟ್ ಮಾಡುವೆನು. ಮತ್ತು ಈ "type" ಅನ್ನು "size" ಎಂದು ಬದಲಿಸುವೆನು. ಇದನ್ನು echo ಮಾಡುವೆನು.
06:30 ನೀವು ಸಬ್ಮಿಟ್ ಮಾಡಿದ ಫೈಲ್ ನ e-property ಯನ್ನು ಪಡೆಯುವುದು ತುಂಬ ಸರಳವಾಗಿದೆ.
06:35 ನಾನು ರಿಫ್ರೆಶ್ ಮಾಡುವೆನು ಮತ್ತು Resend ಅನ್ನು ಕ್ಲಿಕ್ ಮಾಡುವೆನು. ನಾನು ಈ ಫೈಲ್ ನ ಅಳತೆ(ಸೈಜ್) ಅನ್ನು ಪಡೆಯುವೆನು.
06:40 ಈಗ ಇದರ ಸಮೀಪದ ಬೆಲೆಯನ್ನು ನೋಡೋಣ, ಹೆಚ್ಚು ಕಡಿಮೆ ಒಂದು ಮಿಲಿಯನ್ ಬೈಟ್ ಗಳು,
06:47 ಕ್ಷಮಿಸಿ ಒಂದು ಮಿಲಿಯನ್ ಬಿಟ್ ಗಳು, ಅಂದರೆ ಒಂದು ಮೆಗಾಬೈಟ್, ಹಾಗಾಗಿ "myfile" ಇದು ಒಂದು ಮೆಗಾ ಬೈಟ್ ಇದೆ.
06:54 ಹಾಗಾಗಿ ನಾವು ಒಂದು ಮಿಲಿಯನ್ ಮೆಗಾ ಬೈಟ್ ಡಾಟಾವನ್ನು ಇಲ್ಲಿ ಪಡೆದಿದ್ದೇವೆ.
06:58 ಈಗ ಇದನ್ನು $size ಎಂಬ ವೇರಿಯೇಬಲ್ ನಲ್ಲಿ save ಮಾಡೋಣ. ಅಲ್ಲವೇ?
07:05 ಸರಿ ಹಾಗಾದರೆ, ಮುಂದಿನ ಮುಖ್ಯವಾದ ವಿಷಯವೆಂದರೆ, 'temporary name' ಆಗಿದೆ.
07:09 ಇದನ್ನು ಸ್ವಲ್ಪ ವಿಭಿನ್ನವಾಗಿ "tmp" ಎಂದು ಬರೆಯುವೆವು, ಮತ್ತು ಇದನ್ನು ಹೇಳುವಾಗ 'temp' ಎನ್ನುವೆವು ಅಂಡರ್ಸ್ಕೋರ್ "name" ಎಂದು ಟೈಪ್ ಮಾಡಿ.
07:18 ಇದು ನಮ್ಮ ಆಯ್ಕೆಯ ಫೋಲ್ಡರ್ ಗೆ ವರ್ಗಾಯಿಸುವ ಮೊದಲು, ತಾತ್ಕಾಲಿಕವಾಗಿ ಸ್ಟೋರ್ ಆಗಿರುವ ಡೈರಕ್ಟರಿಯನ್ನು ಕೊಡುತ್ತದೆ.
07:25 ಈಗ ರಿಫ್ರೆಶ್ ಮಾಡೋಣ.
07:27 Resend ಅನ್ನು ಕ್ಲಿಕ್ ಮಾಡಿ, ಮತ್ತು ಇದು xampp ಯಲ್ಲಿ ಸ್ಟೋರ್ ಆಗುವುದು ಏಕೆಂದರೆ ನಾನು ಈ ಅಪ್ಲಿಕೇಷನ್ ಅನ್ನು ಬಳಸುತ್ತಿರುವೆನು.
07:33 ನೀವು apache ಯನ್ನು ಬಳಸುತ್ತಿದ್ದರೆ,ನೀವು ಪಿ.ಎಚ್.ಪಿ. ಯನ್ನು ಸ್ಟೋರ್ ಮಾಡಬಹುದು.
07:37 ಇಲ್ಲಿ ನೀವು apache ಅದಾದ ನಂತರ ನಿಮ್ಮ ಟೆಂಪರರಿ ಫೈಲ್ ನ ಹೆಸರನ್ನು ಹೊಂದುವಿರಿ.
07:41 ಈ ಹೆಸರು ಯಾದೃಚ್ಚಿಕವಾಗಿ (ರ್ಯಾಂ ಡಮ್ ಆಗಿ) ರಚಿತವಾಗಿರುತ್ತದೆ ಮತ್ತು "tmp" ಎಕ್ಸ್ಟೆನ್ಷನ್ ಅನ್ನು ಹೊಂದಿರುತ್ತದೆ.
07:45 ಇದು ನಮಗೆ ಈ ಕ್ಷಣಕ್ಕೆ ಅನುಪಯುಕ್ತವಾಗಿದೆ.
07:48 ನಾವು ಇದನ್ನು '$temp file' ಅಥವಾ '$temp' ಎಂದು ಸೇವ್ ಮಾಡಬಹುದು, ಇದನ್ನು ಚಿಕ್ಕದಾಗಿಡಲು ಇದನ್ನು 'temp' ಎಂದು ಟೈಪ್ ಮಾಡೋಣ.
07:55 ಮತ್ತು ಕೊನೆಯದು 'error' ಆಗಿದೆ. ಇದು ಎಲ್ಲವೂ ಸರಿಯಾಗಿದ್ದರೆ 0 ಎಂದು ಎಕೋ ಮಾಡುತ್ತದೆ.
08:00 ಮತ್ತು ಇದನ್ನು ಕಾಪಿ ಮಾಡಿ ಪೇಸ್ಟ್ ಮಾಡಿ. "error" ಎಂದು ಬದಲಿಸಿ.
08:03 ನಾವು ಈಗ ಸದ್ಯಕ್ಕೆ ಸೊನ್ನೆ ಎಂದು ಪಡೆಯಬೇಕು, ಏಕೆಂದರೆ ನಾವು ಎಲ್ಲವನ್ನೂ ಸರಿಯಾಗಿಯೇ ಬರೆದಿದ್ದೇವೆ.
08:07 ಇದು ಯಾವಾಗಲೂ ಋಣಾತ್ಮಕ(ನೆಗೆಟಿವ್) ವ್ಯಾಲ್ಯು ಆಗಿರುವುದಿಲ್ಲ.
08:12 ಇದು ಸೊನ್ನೆಗಿಂತ ಹೆಚ್ಚಾಗಿದ್ದರೆ, ಇದು ಎರರ್ ಕೋಡ್ ಕೊಡುತ್ತಿದೆ ಎಂದರ್ಥ, ಅಂದರೆ ನೀವು ಎರರ್ ಅನ್ನು ಹೊಂದಿರುವಿರಿ ಎಂದರ್ಥ.
08:21 ಈಗ ಇದನ್ನು $error ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡೋಣ.
08:28 ಸರಿ ಈಗ ಇಲ್ಲಿಗೆ ಮುಗಿಸೋಣ. ಈ ಟ್ಯುಟೋರಿಯಲ್ ನ ಎರಡನೆಯ ಭಾಗದಲ್ಲಿ, ನಾನು ಫೈಲ್ ಅನ್ನು ಟೆಂಪರರಿ ಸ್ಟೋರೇಜ್ ನಿಂದ ನಿಮ್ಮ ಆಯ್ಕೆಯ ನಿರ್ದಿಷ್ಟವಾದ ಲೊಕೇಷನ್ ಗೆ ಅಪ್ಲೋಡ್ ಮಾಡುವುದು ಹೇಗೆ ಎಂದು ತೋರಿಸುವೆನು.
08:39 ಮತ್ತು ನಾವು ಈ '$error' ವೇರಿಯೇಬಲ್ ಅನ್ನು ಎರರ್ ಗಳಿವೆಯೇ ಎಂದು ನೋಡಲು ಬಳಸುವೆವು.
08:45 ಎರರ್ ಗಳಿದ್ದರೆ ನಾವು ಇದನ್ನು echo ಮಾಡುವೆವು ಮತ್ತು ಎರರ್ ಕೋಡ್ ಅನ್ನು ಬಳಸುವೆವು.
08:49 ಇಲ್ಲವಾದಲ್ಲಿ ನಾವು ಈ $temp ಅನ್ನು ಬಳಸಿ, 'move uploaded' ಫೈಲ್ ಎಂಬ ಫಂಕ್ಷನ್ ನ ಮೂಲಕ ನಾವು ಅದನ್ನು ನನ್ನ ವೆಬ್ ಸರ್ವರ್ ನಲ್ಲಿ ರಚಿಸಿದ uploaded ಡೈರೆಕ್ಟರಿಯಲ್ಲಿ ಸ್ಟೋರ್ ಮಾಡುವೆವು.
09:01 ನಂತರ ನಾನು ಕೆಲವು ನಿರ್ದಿಷ್ಟವಾದ ಕಂಡಿಷನ್- ಉದಾಹರಣೆಗೆ ಇದು jpeg ಫೈಲ್ ಆಗಿದೆಯೇ? ಹೌದಾದರೆ 'jpeg' ಇಮೇಜ್ ಅನ್ನು ಅಪ್ಲೋಡ್ ಆಗಲು ಅನುಮತಿ ಕೊಡದಿರುವುದು ಅಥವಾ ನಿರ್ದಿಷ್ಟವಾದ ಫೈಲ್ ಸೈಜ್ ಅನ್ನು ಅನುಮತಿಸದೇ ಇರುವುದು – ಇವುಗಳನ್ನು ತೋರಿಸುವೆನು.
09:10 ಎರಡನೇ ಭಾಗದಲ್ಲಿ ಭೇಟಿಯಾಗೋಣ. ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

NaveenBhat, Sandhya.np14