Difference between revisions of "Health-and-Nutrition/C2/Nipple-conditions/Kannada"
From Script | Spoken-Tutorial
Sandhya.np14 (Talk | contribs) (Created page with "{|border=1 | <center> '''Time'''</center> | <center> '''Narration'''</center> |- | 00:01 | '''Nipple conditions in lactating mothers''' ಎಂಬ ಸ್ಪೋಕನ್ ಟ್...") |
Sandhya.np14 (Talk | contribs) |
||
Line 26: | Line 26: | ||
|- | |- | ||
| 00:36 | | 00:36 | ||
− | | ಮೊಲೆತೊಟ್ಟಿನಿಂದ | + | | ಮೊಲೆತೊಟ್ಟಿನಿಂದ ಹಾಲುಣಿಸುವುದು, |
|- | |- | ||
| 00:38 | | 00:38 | ||
Line 32: | Line 32: | ||
|- | |- | ||
| 00:41 | | 00:41 | ||
− | | ಪ್ರತಿಸಲ | + | | ಪ್ರತಿಸಲ ಹಾಲುಣಿಸಿದ ನಂತರ ಮೊಲೆತೊಟ್ಟುಗಳನ್ನು ಸ್ವಚ್ಛಗೊಳಿಸುವ ಅಭ್ಯಾಸ ಮತ್ತು |
|- | |- | ||
| 00:45 | | 00:45 | ||
Line 50: | Line 50: | ||
|- | |- | ||
| 01:08 | | 01:08 | ||
− | | ಈ ಹಿಸುಕುವಿಕೆಯಿಂದ, | + | | ಈ ಹಿಸುಕುವಿಕೆಯಿಂದ, ಹಾಲುಣಿಸುವಾಗ ನೋವಾಗುತ್ತದೆ. ಮತ್ತು, ಹುಣ್ಣು ಅಥವಾ ಸೀಳಿದ ಮೊಲೆತೊಟ್ಟಾಗಿ ಪರಿಣಮಿಸುತ್ತದೆ. |
|- | |- | ||
| 01:17 | | 01:17 | ||
Line 74: | Line 74: | ||
|- | |- | ||
| 02:03 | | 02:03 | ||
− | | ಕೆಲವು ತಾಯಂದಿರು ಪ್ರತಿಸಲ | + | | ಕೆಲವು ತಾಯಂದಿರು ಪ್ರತಿಸಲ ಹಾಲುಣಿಸುವ ಮೊದಲು ಮೊಲೆತೊಟ್ಟುಗಳನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. |
|- | |- | ||
| 02:09 | | 02:09 | ||
Line 86: | Line 86: | ||
|- | |- | ||
| 02:21 | | 02:21 | ||
− | | ಆದಾಗ್ಯೂ, ಒಮ್ಮೆ ಮೊಲೆತೊಟ್ಟು ಬಿರುಕುಬಿಟ್ಟರೆ, ತಾಯಿಯು ಪ್ರತಿಸಲ | + | | ಆದಾಗ್ಯೂ, ಒಮ್ಮೆ ಮೊಲೆತೊಟ್ಟು ಬಿರುಕುಬಿಟ್ಟರೆ, ತಾಯಿಯು ಪ್ರತಿಸಲ ಹಾಲುಣಿಸಿದ ಮೇಲೆ ಅದನ್ನು ಸ್ವಚ್ಛಗೊಳಿಸಬೇಕು. |
|- | |- | ||
| 02:28 | | 02:28 | ||
Line 146: | Line 146: | ||
|- | |- | ||
| 04:32 | | 04:32 | ||
− | | ಅಲ್ಲದೇ, ಮೊದಲೇ ವಿವರಿಸಿದಂತೆ, ಪ್ರತಿಸಲ | + | | ಅಲ್ಲದೇ, ಮೊದಲೇ ವಿವರಿಸಿದಂತೆ, ಪ್ರತಿಸಲ ಹಾಲುಣಿಸಿದ ನಂತರ ಕೆಲವು ಹನಿಗಳಷ್ಟು ಹೈಂಡ್-ಮಿಲ್ಕ್ ಅನ್ನು ಬಾಧಿತ ಜಾಗದ ಮೇಲೆ ಲೇಪಿಸಬೇಕು. |
|- | |- | ||
| 04:42 | | 04:42 | ||
Line 179: | Line 179: | ||
|- | |- | ||
| 05:38 | | 05:38 | ||
− | | ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟಿನಿಂದ | + | | ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟಿನಿಂದ ಹಾಲುಣಿಸಲು ತೊಂದರೆ ಆಗುವುದಿಲ್ಲ ಎಂಬ ಅಂಶವನ್ನು ತಾಯಿಯು ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ. |
|- | |- | ||
| 05:48 | | 05:48 |
Revision as of 11:49, 25 January 2019
|
|
00:01 | Nipple conditions in lactating mothers ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು - ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳು ಮತ್ತು |
00:11 | ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟುಗಳು ಇವುಗಳ ಬಗ್ಗೆ ಕಲಿಯುವೆವು. |
00:15 | ಮೊದಲನೆಯ ಮೊಲೆತೊಟ್ಟಿನ ಸ್ಥಿತಿ - ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳು. |
00:20 | ಈ ಸ್ಥಿತಿಯಲ್ಲಿ, ತಾಯಿಯ ಮೊಲೆತೊಟ್ಟುಗಳು ಬಿರುಕುಬಿಟ್ಟು, ರಕ್ತ ಜಿನುಗಲು ಆರಂಭವಾಗುತ್ತದೆ. |
00:26 | ಇದು ತಾಯಿಯ ಮೊಲೆತೊಟ್ಟುಗಳಲ್ಲಿ ಶುಷ್ಕತೆ ಮತ್ತು ಕೆರೆತವನ್ನು ಉಂಟುಮಾಡುತ್ತದೆ. |
00:30 | ಈಗ, ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳು ಉಂಟಾಗುವ ವಿವಿಧ ಕಾರಣಗಳನ್ನು ನಾವು ಚರ್ಚಿಸೋಣ. ಅವುಗಳು ಹೀಗಿವೆ - |
00:36 | ಮೊಲೆತೊಟ್ಟಿನಿಂದ ಹಾಲುಣಿಸುವುದು, |
00:38 | ಫಂಗಲ್ ಅಥವಾ ಬ್ಯಾಕ್ಟೀರಿಯಲ್ ಸೋಂಕು, |
00:41 | ಪ್ರತಿಸಲ ಹಾಲುಣಿಸಿದ ನಂತರ ಮೊಲೆತೊಟ್ಟುಗಳನ್ನು ಸ್ವಚ್ಛಗೊಳಿಸುವ ಅಭ್ಯಾಸ ಮತ್ತು |
00:45 | ಅಂಟಿಕೊಂಡ ನಾಲಿಗೆ (tongue tie) ಇರುವ ಮಗು. |
00:47 | ನಿಪ್ಪಲ್ ಫೀಡಿಂಗ್ ನೊಂದಿಗೆ ನಾವು ಆರಂಭಿಸೋಣ. |
00:50 | ನಿಪ್ಪಲ್ ಫೀಡಿಂಗ್, ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳು ಉಂಟಾಗಲು ಮುಖ್ಯ ಕಾರಣವಾಗಿದೆ. |
00:56 | ನಿಪ್ಪಲ್ ಫೀಡಿಂಗ್ ಮಾಡುವಾಗ, ಮೊಲೆತೊಟ್ಟು ಮಗುವಿನ ಬಾಯಿಯ ಗಟ್ಟಿಯಾದ ಅಂಗಳದ ಮೇಲೆ ಉಜ್ಜುತ್ತದೆ. |
01:03 | ಮಗು ಈ ಮೊಲೆತೊಟ್ಟನ್ನು ಗಟ್ಟಿಯಾದ ಅಂಗಳ ಮತ್ತು ನಾಲಿಗೆಯ ನಡುವೆ ಹಿಸುಕುತ್ತದೆ. |
01:08 | ಈ ಹಿಸುಕುವಿಕೆಯಿಂದ, ಹಾಲುಣಿಸುವಾಗ ನೋವಾಗುತ್ತದೆ. ಮತ್ತು, ಹುಣ್ಣು ಅಥವಾ ಸೀಳಿದ ಮೊಲೆತೊಟ್ಟಾಗಿ ಪರಿಣಮಿಸುತ್ತದೆ. |
01:17 | ಸರಿಯಾದ ಲ್ಯಾಚಿಂಗ್ ಇರದಿದ್ದಾಗ, ನಿಪ್ಪಲ್ ಫೀಡಿಂಗ್ ಪರಿಣಮಿಸುತ್ತದೆ. |
01:20 | ಆದ್ದರಿಂದ, ಸರಿಯಾದ ಲ್ಯಾಚಿಂಗ್, ನಿಪ್ಪಲ್ ಫೀಡಿಂಗ್ ನಿಂದ ಉಂಟಾದ ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳನ್ನು ತಡೆಗಟ್ಟುವಲ್ಲಿ, ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. |
01:29 | ಗಮನಿಸಿ- ನಾವು ಸರಿಯಾದ ಲ್ಯಾಚಿಂಗ್ ತಂತ್ರದ ಬಗ್ಗೆ, ಇದೇ ಸರಣಿಯ ಇನ್ನೊಂದು ಟ್ಯುಟೋರಿಯಲ್ ನಲ್ಲಿ ಚರ್ಚಿಸಿದ್ದೇವೆ. |
01:37 | ನೆನಪಿಡಿ, ಸರಿಯಾದ ಲ್ಯಾಚಿಂಗ್ ಮಾಡುವಾಗ ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳು ನೋಯುತ್ತವೆ. |
01:43 | ತಾಯಿಯು ಸರಿಯಾದ ಲ್ಯಾಚಿಂಗ್ ತಂತ್ರದೊಂದಿಗೆ ಮುಂದುವರೆದರೆ, ನೋವಾಗುವುದು ನಿಧಾನವಾಗಿ ಮತ್ತು ಕ್ರಮೇಣವಾಗಿ ಕಡಿಮೆಯಾಗುತ್ತದೆ. |
01:51 | ಮುಂದಿನದು ಫಂಗಲ್ ಅಥವಾ ಬ್ಯಾಕ್ಟೀರಿಯಲ್ ಸೋಂಕಿನ ಬಗ್ಗೆ ಆಗಿದೆ. |
01:56 | ತಾಯಿಗೆ ಒಂದುವೇಳೆ ಫಂಗಲ್ ಅಥವಾ ಬ್ಯಾಕ್ಟೀರಿಯಲ್ ಸೋಂಕು ತಗಲಿದ್ದರೆ, ಅವಳು ವೈದ್ಯರನ್ನು ಸಂಪರ್ಕಿಸಬೇಕು. |
02:03 | ಕೆಲವು ತಾಯಂದಿರು ಪ್ರತಿಸಲ ಹಾಲುಣಿಸುವ ಮೊದಲು ಮೊಲೆತೊಟ್ಟುಗಳನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. |
02:09 | ಇದು ಮೊಲೆತೊಟ್ಟುಗಳಲ್ಲಿ ಶುಷ್ಕತೆಯನ್ನು ಉಂಟುಮಾಡುತ್ತದೆ. |
02:13 | ಆದ್ದರಿಂದ ಈ ಅಭ್ಯಾಸವನ್ನು ಬಿಡಬೇಕು. |
02:16 | ನೆನಪಿಡಿ, ತಾಯಿಯು ಸ್ನಾನ ಮಾಡುವಾಗ ಒಮ್ಮೆ ಮೊಲೆತೊಟ್ಟುಗಳನ್ನು ಸ್ವಚ್ಛಗೊಳಿಸಬಹುದು. |
02:21 | ಆದಾಗ್ಯೂ, ಒಮ್ಮೆ ಮೊಲೆತೊಟ್ಟು ಬಿರುಕುಬಿಟ್ಟರೆ, ತಾಯಿಯು ಪ್ರತಿಸಲ ಹಾಲುಣಿಸಿದ ಮೇಲೆ ಅದನ್ನು ಸ್ವಚ್ಛಗೊಳಿಸಬೇಕು. |
02:28 | ಸ್ವಚ್ಛಗೊಳಿಸಿದ ನಂತರ, ತಾಯಿಯು ಗಾಯದ ಮೇಲೆ ತನ್ನ ಹೈಂಡ್-ಮಿಲ್ಕ್ ಅನ್ನು ಹಚ್ಚಬೇಕು. |
02:32 | ಹೈಂಡ್-ಮಿಲ್ಕ್, ಸೋಂಕಿನೊಂದಿಗೆ ಹೋರಾಡಿ ಅದನ್ನು ಗುಣಪಡಿಸುವ ಪದಾರ್ಥಗಳನ್ನು ಹೊಂದಿದೆ. |
02:39 | ಹೀಗೆ, ಮಗುವಿನ ಬಾಯಿಯಿಂದ ಜೀವಾಣುಗಳು ಮೊಲೆತೊಟ್ಟಿನ ಬಿರುಕಿನಲ್ಲಿ ಸೇರಿಕೊಳ್ಳುವುದನ್ನು ತಡೆಗಟ್ಟುತ್ತದೆ. |
02:46 | ಮುಂದಿನದು, ಅಂಟಿಕೊಂಡ ನಾಲಿಗೆಯಿರುವ (tongue tie) ಮಗು ಆಗಿದೆ. |
02:50 | “ಟಂಗ್ ಟೈ”- ಈ ಸ್ಥಿತಿಯಲ್ಲಿ, ಮಗುವಿನ ನಾಲಿಗೆಯ ತುದಿಯು ಬಾಯಿಯ ಕೆಳಭಾಗದಲ್ಲಿ ಒಳಗೆ ಅಂಟಿಕೊಂಡಿರುತ್ತದೆ. |
02:58 | ಇದು ಅತಿ ವಿರಳವಾದ ಒಂದು ಸ್ಥಿತಿ ಆಗಿದೆ. |
03:01 | “ಟಂಗ್ ಟೈ” ಯನ್ನು ಹೊಂದಿರುವ ಮಗುವಿನಲ್ಲಿ, ಸಾಮಾನ್ಯವಾಗಿ ನಿಪ್ಪಲ್ ಫೀಡಿಂಗ್ ಕಂಡುಬರುತ್ತದೆ. |
03:06 | ಒಂದುವೇಳೆ ಮಗು “ಟಂಗ್ ಟೈ” ಯನ್ನು ಹೊಂದಿದ್ದರೆ, ಆಗ ಕೇವಲ ಸರಿಯಾದ ಲ್ಯಾಚಿಂಗ್ ಸಾಕಾಗುವುದಿಲ್ಲ. ಶಸ್ತ್ರಚಿಕಿತ್ಸೆಯ ಅಗತ್ಯವಿದೆ. |
03:16 | ಇಂತಹ ಸಂದರ್ಭಗಳಲ್ಲಿ, ತಾಯಿಯು ಯಾವಾಗಲೂ ವೈದ್ಯರನ್ನು ಸಂಪರ್ಕಿಸಬೇಕು. |
03:22 | ಈಗ, ನಾವು ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳ ಚಿಕಿತ್ಸೆಯ ಬಗ್ಗೆ ಚರ್ಚಿಸೋಣ. |
03:27 | ತಾಯಿಯು ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳನ್ನು ಹೊಂದಿದ್ದರೆ, ಆಗ ಆರೋಗ್ಯ ಕಾರ್ಯಕರ್ತಳು ತಾಯಿಯ ಮೊಲೆ ಹಾಗೂ ಮೊಲೆತೊಟ್ಟನ್ನು ಪರೀಕ್ಷಿಸಬೇಕು. |
03:37 | ಹಾಲುಣಿಸುವ ಮೊದಲು ತನ್ನ ಕೈಯಿಂದ ಸ್ವಲ್ಪ ಎದೆಹಾಲನ್ನು ಹೊರಗೆ ತೆಗೆಯಲು ತಾಯಿಗೆ ಹೇಳಬೇಕು. |
03:42 | ಇದು ಸ್ತನವನ್ನು ಮೃದುವಾಗಿಸುವುದು ಮತ್ತು ಮಗು ಸುಲಭವಾಗಿ ತಾಯಿಯ ಸ್ತನಕ್ಕೆ ಜೋಡಿಸಿಕೊಳ್ಳುವುದು. |
03:47 | ಇವುಗಳ ಹೊರತಾಗಿ, ಹಾಲನ್ನು ಹೊರತೆಗೆಯುವುದು ಸೋಂಕಿನ, 'ನಿಪ್ಪಲ್ ಫಿಶರ್' ಮತ್ತು 'ಮೆಸ್ಟೈಟಿಸ್' ಗಳ ಅಪಾಯವನ್ನು ಕಡಿಮೆ ಮಾಡುತ್ತದೆ. |
03:55 | ನಂತರ, ಮಗುವನ್ನು ಸರಿಯಾಗಿ ತನ್ನ ಸ್ತನಕ್ಕೆ ಜೋಡಿಸಿಕೊಳ್ಳಲು ತಾಯಿಗೆ ಮಾರ್ಗದರ್ಶನ ಮಾಡಬೇಕು. |
04:01 | ನೆನಪಿಡಿ, ಹಾಲುಣಿಸುವ ಆವರ್ತನವು ಎದೆಹಾಲಿನ ಪೂರೈಕೆಯನ್ನು ನಿರ್ಧರಿಸುವ ಅಂಶಗಳಲ್ಲಿ ಒಂದಾಗಿದೆ. |
04:09 | ಆದ್ದರಿಂದ, ತಾಯಿಯು ಹಾಲುಣಿಸುವುದನ್ನು ನಿಲ್ಲಿಸಬಾರದು. |
04:13 | ಹಾಲುಣಿಸುವ ಅವಧಿಯಲ್ಲಿ- ಅವಳು ಕಡಿಮೆ ನೋವಾಗುವ ಬದಿಯಿಂದ ಹಾಲುಣಿಸಲು ಆರಂಭಿಸಬೇಕು. |
04:20 | ಹಾಲುಣಿಸುವಾಗ ಇನ್ನೂ ನೋವಾಗುತ್ತಿದ್ದರೆ, ಅಗ ಅವಳು ತನ್ನ ಕೈಯಿಂದ ಹಾಲನ್ನು ಹೊರತೆಗೆದು ಒಂದು ಚಮಚ ಅಥವಾ ಲೋಟದಿಂದ ಮಗುವಿಗೆ ಕುಡಿಸಬೇಕು. |
04:32 | ಅಲ್ಲದೇ, ಮೊದಲೇ ವಿವರಿಸಿದಂತೆ, ಪ್ರತಿಸಲ ಹಾಲುಣಿಸಿದ ನಂತರ ಕೆಲವು ಹನಿಗಳಷ್ಟು ಹೈಂಡ್-ಮಿಲ್ಕ್ ಅನ್ನು ಬಾಧಿತ ಜಾಗದ ಮೇಲೆ ಲೇಪಿಸಬೇಕು. |
04:42 | ನೆನಪಿಡಿ, ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳ ಮೇಲೆ ಮತ್ತು ಆರೋಗ್ಯವಂತ ಮೊಲೆತೊಟ್ಟುಗಳ ಮೇಲೆ ಸಹ |
04:49 | ಸಾಬೂನು, ಎಣ್ಣೆ, ಲೋಶನ್, ಮುಲಾಮುಗಳು ಮತ್ತು ಸುಗಂಧ ದ್ರವ್ಯಗಳನ್ನು ಬಳಸಬೇಡಿ. |
04:54 | ಅವುಗಳು ಕಿರಿಕಿರಿಯನ್ನು ಉಂಟುಮಾಡಬಹುದು. |
04:57 | ತಾಯಿಯು ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳನ್ನು ಹೊಂದಿದ್ದರೆ, ಅದು ಪರಿಸ್ಥಿತಿಯನ್ನು ಇನ್ನೂ ಕೆಡಿಸುತ್ತದೆ. |
05:03 | ತೀವ್ರ ಪರಿಸ್ಥಿತಿಯಲ್ಲಿ, ತಾಯಿಯು ವೈದ್ಯರನ್ನು ಅಥವಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು. |
05:09 | ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳನ್ನು ತಡೆಗಟ್ಟಲು, ಮಗುವಿನ ಜನನದ ನಂತರ ತಾಯಿಯು ಶೀಘ್ರವಾಗಿ ಹಾಲುಣಿಸಲು ಆರಂಭಿಸಬೇಕು. |
05:15 | ಯಾವಾಗಲೂ ಹಾಲುಣಿಸುವಾಗ ಮಗು ಆಳವಾಗಿ ಲ್ಯಾಚ್ ಮಾಡಿಕೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. |
05:22 | ನಂತರ ನಾವು, ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟಿನ ಸ್ಥಿತಿಯ ಬಗ್ಗೆ ಚರ್ಚಿಸುತ್ತೇವೆ. |
05:28 | ಚಪ್ಪಟೆಯಾದ ಮೊಲೆತೊಟ್ಟುಗಳು, ಅರಿಯೋಲಾದ ಮಟ್ಟದಿಂದ ಹೊರಗೆ ಚಾಚಿರುವುದಿಲ್ಲ. |
05:33 | ಆದರೆ, ಇನ್ವರ್ಟೆಡ್ (inverted) ಮೊಲೆತೊಟ್ಟುಗಳು ಸಾಮಾನ್ಯವಾಗಿ ಒಳಮುಖವಾಗಿ ಚಾಚಿಕೊಂಡಿರುತ್ತವೆ. |
05:38 | ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟಿನಿಂದ ಹಾಲುಣಿಸಲು ತೊಂದರೆ ಆಗುವುದಿಲ್ಲ ಎಂಬ ಅಂಶವನ್ನು ತಾಯಿಯು ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ. |
05:48 | ಏಕೆಂದರೆ, ಸರಿಯಾದ ಲ್ಯಾಚಿಂಗ್ ನಲ್ಲಿ, ಮಗು ಅರಿಯೋಲಾ ಗೆ ಲ್ಯಾಚ್ ಮಾಡುತ್ತದೆ ಮತ್ತು ಮೊಲೆತೊಟ್ಟಿನ ಮೇಲೆ ಅಲ್ಲ. |
05:56 | ಗಮನಿಸಿ- ತಾಯಿಗೆ ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟುಗಳಿದ್ದರೆ, ಹೆರಿಗೆಯ ನಂತರದ ಒಂದು ವಾರ ಅವಳಿಗೆ ಸಹಾಯದ ಅಗತ್ಯವಿದೆ. |
06:03 | ಈ ಅವಧಿಯಲ್ಲಿ, ಆರೋಗ್ಯ ಕಾರ್ಯಕರ್ತೆಯು ತಾಯಿಗೆ ಸರಿಯಾದ ಲ್ಯಾಚಿಂಗ್ ಬಗ್ಗೆ ಮಾರ್ಗದರ್ಶನ ಮಾಡಬೇಕು. |
06:08 | ಇದು ಅವಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. |
06:11 | ನೆನಪಿಡಿ, ಒಂದುವೇಳೆ ತಾಯಿಯು ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟುಗಳನ್ನು ಹೊಂದಿದ್ದರೆ, ಆಗ |
06:22 | “ಕ್ರಾಸ್ ಕ್ರೇಡಲ್ ಹೋಲ್ಡ್, ಫುಟ್-ಬಾಲ್ ಹೋಲ್ಡ್” ಮತ್ತು ಅರ್ಧ ಒರಗಿಕೊಂಡ ಸ್ಥಿತಿ ಇವುಗಳು ಅತ್ಯುತ್ತಮ ಹಿಡಿತಗಳಾಗಿವೆ. |
06:26 | ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿರುವಂತೆ, ಯಾವುದೇ ಹಿಡಿತದಲ್ಲಿ, ಮಗುವಿನ ತುಟಿಗಳು ಮತ್ತು ತಾಯಿಯ ಬೆರಳುಗಳು ಒಂದೇ ದಿಕ್ಕಿನಲ್ಲಿ ಇರುವಂತೆ, |
06:37 | ತಾಯಿಯು ಸ್ತನವನ್ನು ಸರಿಯಾದ ರೀತಿಯಲ್ಲಿ ಹಿಡಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. |
06:42 | ತಪ್ಪಾದ ಲ್ಯಾಚಿಂಗ್, ನಿಪ್ಪಲ್ ಹುಣ್ಣುಗಳಾಗಿ ಪರಿಣಮಿಸುತ್ತದೆ ಎಂಬುದನ್ನು ಗಮನದಲ್ಲಿಡಿ. |
06:47 | ನೆನಪಿನಲ್ಲಿಡಿ – ಹಾಲು ಕುಡಿಸಲು ಬಾಟಲಿಗಳನ್ನು ಮತ್ತು ನಿಪ್ಪಲ್ ಶೀಲ್ಡ್ ಗಳನ್ನು ಬಳಸಬಾರದು. |
06:52 | ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟುಗಳಿರುವ ಸ್ತನಗಳಿಂದ ಹಾಲುಕುಡಿಯಲು ಮಗುವಿಗೆ ಕಷ್ಟವಾಗುತ್ತದೆ. |
07:00 | ತಾಯಿಯು ಮಗುವಿಗೆ ಸಾಕಷ್ಟು ಪರಸ್ಪರ ಚರ್ಮದ ಸ್ಪರ್ಶವನ್ನು ಒದಗಿಸಬೇಕು. |
07:04 | ಇದು ತಾಯಿಯಲ್ಲಿ 'ಆಕ್ಸಿಟೋಸಿನ್ ರಿಫ್ಲೆಕ್ಸ್' ಅನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಎದೆಹಾಲು ಸುಲಭವಾಗಿ ಹೊರಬರುತ್ತದೆ. |
07:12 | ಯಾವಾಗಲೂ ನೆನಪಿನಲ್ಲಿಡಿ - ಇವುಗಳಲ್ಲಿ ಹೆಚ್ಚಿನ ಮೊಲೆತೊಟ್ಟಿನ ಪರಿಸ್ಥಿತಿಗಳನ್ನು ಎದುರಿಸಲು, ಸರಿಯಾದ ಲ್ಯಾಚಿಂಗ್ ಅತೀ ಮುಖ್ಯವಾಗಿದೆ. |
07:19 | ಇದರೊಂದಿಗೆ, ನಾವು Nipple conditions in lactating mothers ಎಂಬ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
07:26 | ಈ ಟ್ಯುಟೋರಿಯಲ್ ನಲ್ಲಿ ನಾವು - ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳು ಮತ್ತು |
07:31 | ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟುಗಳು ಇವುಗಳ ಬಗ್ಗೆ ಕಲಿತಿದ್ದೇವೆ. |
07:34 | ಈ ಟ್ಯುಟೋರಿಯಲ್, Spoken Tutorial Project, IIT Bombay ಇವರ ಕೊಡುಗೆಯಾಗಿದೆ. |
07:40 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD ಮೂಲಕ ಭಾರತ ಸರಕಾರದ ಅನುದಾನವನ್ನು ಪಡೆದಿದೆ. |
07:47 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
07:52 | ಈ ಟ್ಯುಟೋರಿಯಲ್, WHEELS Global Foundation ನ ಉದಾರ ಕೊಡುಗೆಯಿಂದ ಭಾಗಶಃ ಅನುದಾನವನ್ನು ಪಡೆದಿದ್ದು, |
07:59 | Maa aur Shishu Poshan (ಮಾ ಔರ್ ಶಿಶು ಪೋಷಣ್) ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
08:04 | ಈ ಟ್ಯುಟೋರಿಯಲ್ ನ ಡೊಮೇನ್ ರಿವ್ಯೂ ಮಾಡಿದವರು, Dr. ರೂಪಲ್ ದಲಾಲ್, MD ಪೀಡಿಯಾಟ್ರಿಕ್ಸ್ ಮತ್ತು Dr. ತರು ಜಿಂದಾಲ್, MS. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು.
ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ. ಧನ್ಯವಾದಗಳು. |