Health-and-Nutrition/C2/Nipple-conditions/Kannada

From Script | Spoken-Tutorial
Jump to: navigation, search
Time
Narration
00:01 Nipple conditions in lactating mothers ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು - ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳು ಮತ್ತು
00:11 ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟುಗಳು ಇವುಗಳ ಬಗ್ಗೆ ಕಲಿಯುವೆವು.
00:15 ಮೊದಲನೆಯ ಮೊಲೆತೊಟ್ಟಿನ ಸ್ಥಿತಿ - ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳು.
00:20 ಈ ಸ್ಥಿತಿಯಲ್ಲಿ, ತಾಯಿಯ ಮೊಲೆತೊಟ್ಟುಗಳು ಬಿರುಕುಬಿಟ್ಟು, ರಕ್ತ ಜಿನುಗಲು ಆರಂಭವಾಗುತ್ತದೆ.
00:26 ಇದು ತಾಯಿಯ ಮೊಲೆತೊಟ್ಟುಗಳಲ್ಲಿ ಶುಷ್ಕತೆ ಮತ್ತು ಕೆರೆತವನ್ನು ಉಂಟುಮಾಡುತ್ತದೆ.
00:30 ಈಗ, ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳು ಉಂಟಾಗುವ ವಿವಿಧ ಕಾರಣಗಳನ್ನು ನಾವು ಚರ್ಚಿಸೋಣ. ಅವುಗಳು ಹೀಗಿವೆ -
00:36 ಮೊಲೆತೊಟ್ಟಿನಿಂದ ಹಾಲುಣಿಸುವುದು,
00:38 ಫಂಗಲ್ ಅಥವಾ ಬ್ಯಾಕ್ಟೀರಿಯಲ್ ಸೋಂಕು,
00:41 ಪ್ರತಿಸಲ ಹಾಲುಣಿಸಿದ ನಂತರ ಮೊಲೆತೊಟ್ಟುಗಳನ್ನು ಸ್ವಚ್ಛಗೊಳಿಸುವ ಅಭ್ಯಾಸ ಮತ್ತು
00:45 ಅಂಟಿಕೊಂಡ ನಾಲಿಗೆ (tongue tie) ಇರುವ ಮಗು.
00:47 ನಿಪ್ಪಲ್ ಫೀಡಿಂಗ್ ನೊಂದಿಗೆ ನಾವು ಆರಂಭಿಸೋಣ.
00:50 ನಿಪ್ಪಲ್ ಫೀಡಿಂಗ್, ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳು ಉಂಟಾಗಲು ಮುಖ್ಯ ಕಾರಣವಾಗಿದೆ.
00:56 ನಿಪ್ಪಲ್ ಫೀಡಿಂಗ್ ಮಾಡುವಾಗ, ಮೊಲೆತೊಟ್ಟು ಮಗುವಿನ ಬಾಯಿಯ ಗಟ್ಟಿಯಾದ ಅಂಗಳದ ಮೇಲೆ ಉಜ್ಜುತ್ತದೆ.
01:03 ಮಗು ಈ ಮೊಲೆತೊಟ್ಟನ್ನು ಗಟ್ಟಿಯಾದ ಅಂಗಳ ಮತ್ತು ನಾಲಿಗೆಯ ನಡುವೆ ಹಿಸುಕುತ್ತದೆ.
01:08 ಈ ಹಿಸುಕುವಿಕೆಯಿಂದ, ಹಾಲುಣಿಸುವಾಗ ನೋವಾಗುತ್ತದೆ. ಮತ್ತು, ಹುಣ್ಣು ಅಥವಾ ಸೀಳಿದ ಮೊಲೆತೊಟ್ಟಾಗಿ ಪರಿಣಮಿಸುತ್ತದೆ.
01:17 ಸರಿಯಾದ ಲ್ಯಾಚಿಂಗ್ ಇರದಿದ್ದಾಗ, ನಿಪ್ಪಲ್ ಫೀಡಿಂಗ್ ಪರಿಣಮಿಸುತ್ತದೆ.
01:20 ಆದ್ದರಿಂದ, ಸರಿಯಾದ ಲ್ಯಾಚಿಂಗ್, ನಿಪ್ಪಲ್ ಫೀಡಿಂಗ್ ನಿಂದ ಉಂಟಾದ ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳನ್ನು ತಡೆಗಟ್ಟುವಲ್ಲಿ, ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.
01:29 ಗಮನಿಸಿ- ನಾವು ಸರಿಯಾದ ಲ್ಯಾಚಿಂಗ್ ತಂತ್ರದ ಬಗ್ಗೆ, ಇದೇ ಸರಣಿಯ ಇನ್ನೊಂದು ಟ್ಯುಟೋರಿಯಲ್ ನಲ್ಲಿ ಚರ್ಚಿಸಿದ್ದೇವೆ.
01:37 ನೆನಪಿಡಿ, ಸರಿಯಾದ ಲ್ಯಾಚಿಂಗ್ ಮಾಡುವಾಗ ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳು ನೋಯುತ್ತವೆ.
01:43 ತಾಯಿಯು ಸರಿಯಾದ ಲ್ಯಾಚಿಂಗ್ ತಂತ್ರದೊಂದಿಗೆ ಮುಂದುವರೆದರೆ, ನೋವಾಗುವುದು ನಿಧಾನವಾಗಿ ಮತ್ತು ಕ್ರಮೇಣವಾಗಿ ಕಡಿಮೆಯಾಗುತ್ತದೆ.
01:51 ಮುಂದಿನದು ಫಂಗಲ್ ಅಥವಾ ಬ್ಯಾಕ್ಟೀರಿಯಲ್ ಸೋಂಕಿನ ಬಗ್ಗೆ ಆಗಿದೆ.
01:56 ತಾಯಿಗೆ ಒಂದುವೇಳೆ ಫಂಗಲ್ ಅಥವಾ ಬ್ಯಾಕ್ಟೀರಿಯಲ್ ಸೋಂಕು ತಗಲಿದ್ದರೆ, ಅವಳು ವೈದ್ಯರನ್ನು ಸಂಪರ್ಕಿಸಬೇಕು.
02:03 ಕೆಲವು ತಾಯಂದಿರು ಪ್ರತಿಸಲ ಹಾಲುಣಿಸುವ ಮೊದಲು ಮೊಲೆತೊಟ್ಟುಗಳನ್ನು ಸ್ವಚ್ಛಗೊಳಿಸುವ ಅಭ್ಯಾಸವನ್ನು ಹೊಂದಿರುತ್ತಾರೆ.
02:09 ಇದು ಮೊಲೆತೊಟ್ಟುಗಳಲ್ಲಿ ಶುಷ್ಕತೆಯನ್ನು ಉಂಟುಮಾಡುತ್ತದೆ.
02:13 ಆದ್ದರಿಂದ ಈ ಅಭ್ಯಾಸವನ್ನು ಬಿಡಬೇಕು.
02:16 ನೆನಪಿಡಿ, ತಾಯಿಯು ಸ್ನಾನ ಮಾಡುವಾಗ ಒಮ್ಮೆ ಮೊಲೆತೊಟ್ಟುಗಳನ್ನು ಸ್ವಚ್ಛಗೊಳಿಸಬಹುದು.
02:21 ಆದಾಗ್ಯೂ, ಒಮ್ಮೆ ಮೊಲೆತೊಟ್ಟು ಬಿರುಕುಬಿಟ್ಟರೆ, ತಾಯಿಯು ಪ್ರತಿಸಲ ಹಾಲುಣಿಸಿದ ಮೇಲೆ ಅದನ್ನು ಸ್ವಚ್ಛಗೊಳಿಸಬೇಕು.
02:28 ಸ್ವಚ್ಛಗೊಳಿಸಿದ ನಂತರ, ತಾಯಿಯು ಗಾಯದ ಮೇಲೆ ತನ್ನ ಹೈಂಡ್-ಮಿಲ್ಕ್ ಅನ್ನು ಹಚ್ಚಬೇಕು.
02:32 ಹೈಂಡ್-ಮಿಲ್ಕ್, ಸೋಂಕಿನೊಂದಿಗೆ ಹೋರಾಡಿ ಅದನ್ನು ಗುಣಪಡಿಸುವ ಪದಾರ್ಥಗಳನ್ನು ಹೊಂದಿದೆ.
02:39 ಹೀಗೆ, ಮಗುವಿನ ಬಾಯಿಯಿಂದ ಜೀವಾಣುಗಳು ಮೊಲೆತೊಟ್ಟಿನ ಬಿರುಕಿನಲ್ಲಿ ಸೇರಿಕೊಳ್ಳುವುದನ್ನು ತಡೆಗಟ್ಟುತ್ತದೆ.
02:46 ಮುಂದಿನದು, ಅಂಟಿಕೊಂಡ ನಾಲಿಗೆಯಿರುವ (tongue tie) ಮಗು ಆಗಿದೆ.
02:50 “ಟಂಗ್ ಟೈ”- ಈ ಸ್ಥಿತಿಯಲ್ಲಿ, ಮಗುವಿನ ನಾಲಿಗೆಯ ತುದಿಯು ಬಾಯಿಯ ಕೆಳಭಾಗದಲ್ಲಿ ಒಳಗೆ ಅಂಟಿಕೊಂಡಿರುತ್ತದೆ.
02:58 ಇದು ಅತಿ ವಿರಳವಾದ ಒಂದು ಸ್ಥಿತಿ ಆಗಿದೆ.
03:01 “ಟಂಗ್ ಟೈ” ಯನ್ನು ಹೊಂದಿರುವ ಮಗುವಿನಲ್ಲಿ, ಸಾಮಾನ್ಯವಾಗಿ ನಿಪ್ಪಲ್ ಫೀಡಿಂಗ್ ಕಂಡುಬರುತ್ತದೆ.
03:06 ಒಂದುವೇಳೆ ಮಗು “ಟಂಗ್ ಟೈ” ಯನ್ನು ಹೊಂದಿದ್ದರೆ, ಆಗ ಕೇವಲ ಸರಿಯಾದ ಲ್ಯಾಚಿಂಗ್ ಸಾಕಾಗುವುದಿಲ್ಲ. ಶಸ್ತ್ರಚಿಕಿತ್ಸೆಯ ಅಗತ್ಯವಿದೆ.
03:16 ಇಂತಹ ಸಂದರ್ಭಗಳಲ್ಲಿ, ತಾಯಿಯು ಯಾವಾಗಲೂ ವೈದ್ಯರನ್ನು ಸಂಪರ್ಕಿಸಬೇಕು.
03:22 ಈಗ, ನಾವು ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳ ಚಿಕಿತ್ಸೆಯ ಬಗ್ಗೆ ಚರ್ಚಿಸೋಣ.
03:27 ತಾಯಿಯು ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳನ್ನು ಹೊಂದಿದ್ದರೆ, ಆಗ ಆರೋಗ್ಯ ಕಾರ್ಯಕರ್ತಳು ತಾಯಿಯ ಮೊಲೆ ಹಾಗೂ ಮೊಲೆತೊಟ್ಟನ್ನು ಪರೀಕ್ಷಿಸಬೇಕು.
03:37 ಹಾಲುಣಿಸುವ ಮೊದಲು ತನ್ನ ಕೈಯಿಂದ ಸ್ವಲ್ಪ ಎದೆಹಾಲನ್ನು ಹೊರಗೆ ತೆಗೆಯಲು ತಾಯಿಗೆ ಹೇಳಬೇಕು.
03:42 ಇದು ಸ್ತನವನ್ನು ಮೃದುವಾಗಿಸುವುದು ಮತ್ತು ಮಗು ಸುಲಭವಾಗಿ ತಾಯಿಯ ಸ್ತನಕ್ಕೆ ಜೋಡಿಸಿಕೊಳ್ಳುವುದು.
03:47 ಇವುಗಳ ಹೊರತಾಗಿ, ಹಾಲನ್ನು ಹೊರತೆಗೆಯುವುದು ಸೋಂಕಿನ, 'ನಿಪ್ಪಲ್ ಫಿಶರ್' ಮತ್ತು 'ಮೆಸ್ಟೈಟಿಸ್' ಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
03:55 ನಂತರ, ಮಗುವನ್ನು ಸರಿಯಾಗಿ ತನ್ನ ಸ್ತನಕ್ಕೆ ಜೋಡಿಸಿಕೊಳ್ಳಲು ತಾಯಿಗೆ ಮಾರ್ಗದರ್ಶನ ಮಾಡಬೇಕು.
04:01 ನೆನಪಿಡಿ, ಹಾಲುಣಿಸುವ ಆವರ್ತನವು ಎದೆಹಾಲಿನ ಪೂರೈಕೆಯನ್ನು ನಿರ್ಧರಿಸುವ ಅಂಶಗಳಲ್ಲಿ ಒಂದಾಗಿದೆ.
04:09 ಆದ್ದರಿಂದ, ತಾಯಿಯು ಹಾಲುಣಿಸುವುದನ್ನು ನಿಲ್ಲಿಸಬಾರದು.
04:13 ಹಾಲುಣಿಸುವ ಅವಧಿಯಲ್ಲಿ- ಅವಳು ಕಡಿಮೆ ನೋವಾಗುವ ಬದಿಯಿಂದ ಹಾಲುಣಿಸಲು ಆರಂಭಿಸಬೇಕು.
04:20 ಹಾಲುಣಿಸುವಾಗ ಇನ್ನೂ ನೋವಾಗುತ್ತಿದ್ದರೆ, ಅಗ ಅವಳು ತನ್ನ ಕೈಯಿಂದ ಹಾಲನ್ನು ಹೊರತೆಗೆದು ಒಂದು ಚಮಚ ಅಥವಾ ಲೋಟದಿಂದ ಮಗುವಿಗೆ ಕುಡಿಸಬೇಕು.
04:32 ಅಲ್ಲದೇ, ಮೊದಲೇ ವಿವರಿಸಿದಂತೆ, ಪ್ರತಿಸಲ ಹಾಲುಣಿಸಿದ ನಂತರ ಕೆಲವು ಹನಿಗಳಷ್ಟು ಹೈಂಡ್-ಮಿಲ್ಕ್ ಅನ್ನು ಬಾಧಿತ ಜಾಗದ ಮೇಲೆ ಲೇಪಿಸಬೇಕು.
04:42 ನೆನಪಿಡಿ, ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳ ಮೇಲೆ ಮತ್ತು ಆರೋಗ್ಯವಂತ ಮೊಲೆತೊಟ್ಟುಗಳ ಮೇಲೆ ಸಹ
04:49 ಸಾಬೂನು, ಎಣ್ಣೆ, ಲೋಶನ್, ಮುಲಾಮುಗಳು ಮತ್ತು ಸುಗಂಧ ದ್ರವ್ಯಗಳನ್ನು ಬಳಸಬೇಡಿ.
04:54 ಅವುಗಳು ಕಿರಿಕಿರಿಯನ್ನು ಉಂಟುಮಾಡಬಹುದು.
04:57 ತಾಯಿಯು ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳನ್ನು ಹೊಂದಿದ್ದರೆ, ಅದು ಪರಿಸ್ಥಿತಿಯನ್ನು ಇನ್ನೂ ಕೆಡಿಸುತ್ತದೆ.
05:03 ತೀವ್ರ ಪರಿಸ್ಥಿತಿಯಲ್ಲಿ, ತಾಯಿಯು ವೈದ್ಯರನ್ನು ಅಥವಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಬೇಕು.
05:09 ಹುಣ್ಣಾದ ಅಥವಾ ಸೀಳಿದ ಮೊಲೆತೊಟ್ಟುಗಳನ್ನು ತಡೆಗಟ್ಟಲು, ಮಗುವಿನ ಜನನದ ನಂತರ ತಾಯಿಯು ಶೀಘ್ರವಾಗಿ ಹಾಲುಣಿಸಲು ಆರಂಭಿಸಬೇಕು.
05:15 ಯಾವಾಗಲೂ ಹಾಲುಣಿಸುವಾಗ ಮಗು ಆಳವಾಗಿ ಲ್ಯಾಚ್ ಮಾಡಿಕೊಂಡಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
05:22 ನಂತರ ನಾವು, ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟಿನ ಸ್ಥಿತಿಯ ಬಗ್ಗೆ ಚರ್ಚಿಸುತ್ತೇವೆ.
05:28 ಚಪ್ಪಟೆಯಾದ ಮೊಲೆತೊಟ್ಟುಗಳು, ಅರಿಯೋಲಾದ ಮಟ್ಟದಿಂದ ಹೊರಗೆ ಚಾಚಿರುವುದಿಲ್ಲ.
05:33 ಆದರೆ, ಇನ್ವರ್ಟೆಡ್ (inverted) ಮೊಲೆತೊಟ್ಟುಗಳು ಸಾಮಾನ್ಯವಾಗಿ ಒಳಮುಖವಾಗಿ ಚಾಚಿಕೊಂಡಿರುತ್ತವೆ.
05:38 ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟಿನಿಂದ ಹಾಲುಣಿಸಲು ತೊಂದರೆ ಆಗುವುದಿಲ್ಲ ಎಂಬ ಅಂಶವನ್ನು ತಾಯಿಯು ತಿಳಿದುಕೊಳ್ಳುವುದು ಅತೀ ಮುಖ್ಯವಾಗಿದೆ.
05:48 ಏಕೆಂದರೆ, ಸರಿಯಾದ ಲ್ಯಾಚಿಂಗ್ ನಲ್ಲಿ, ಮಗು ಅರಿಯೋಲಾ ಗೆ ಲ್ಯಾಚ್ ಮಾಡುತ್ತದೆ ಮತ್ತು ಮೊಲೆತೊಟ್ಟಿನ ಮೇಲೆ ಅಲ್ಲ.
05:56 ಗಮನಿಸಿ- ತಾಯಿಗೆ ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟುಗಳಿದ್ದರೆ, ಹೆರಿಗೆಯ ನಂತರದ ಒಂದು ವಾರ ಅವಳಿಗೆ ಸಹಾಯದ ಅಗತ್ಯವಿದೆ.
06:03 ಈ ಅವಧಿಯಲ್ಲಿ, ಆರೋಗ್ಯ ಕಾರ್ಯಕರ್ತೆಯು ತಾಯಿಗೆ ಸರಿಯಾದ ಲ್ಯಾಚಿಂಗ್ ಬಗ್ಗೆ ಮಾರ್ಗದರ್ಶನ ಮಾಡಬೇಕು.
06:08 ಇದು ಅವಳ ಆತ್ಮವಿಶ್ವಾಸವನ್ನು ಹೆಚ್ಚಿಸುವುದು.
06:11 ನೆನಪಿಡಿ, ಒಂದುವೇಳೆ ತಾಯಿಯು ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟುಗಳನ್ನು ಹೊಂದಿದ್ದರೆ, ಆಗ
06:22 “ಕ್ರಾಸ್ ಕ್ರೇಡಲ್ ಹೋಲ್ಡ್, ಫುಟ್-ಬಾಲ್ ಹೋಲ್ಡ್” ಮತ್ತು ಅರ್ಧ ಒರಗಿಕೊಂಡ ಸ್ಥಿತಿ ಇವುಗಳು ಅತ್ಯುತ್ತಮ ಹಿಡಿತಗಳಾಗಿವೆ.
06:26 ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿರುವಂತೆ, ಯಾವುದೇ ಹಿಡಿತದಲ್ಲಿ, ಮಗುವಿನ ತುಟಿಗಳು ಮತ್ತು ತಾಯಿಯ ಬೆರಳುಗಳು ಒಂದೇ ದಿಕ್ಕಿನಲ್ಲಿ ಇರುವಂತೆ,
06:37 ತಾಯಿಯು ಸ್ತನವನ್ನು ಸರಿಯಾದ ರೀತಿಯಲ್ಲಿ ಹಿಡಿದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
06:42 ತಪ್ಪಾದ ಲ್ಯಾಚಿಂಗ್, ನಿಪ್ಪಲ್ ಹುಣ್ಣುಗಳಾಗಿ ಪರಿಣಮಿಸುತ್ತದೆ ಎಂಬುದನ್ನು ಗಮನದಲ್ಲಿಡಿ.
06:47 ನೆನಪಿನಲ್ಲಿಡಿ – ಹಾಲು ಕುಡಿಸಲು ಬಾಟಲಿಗಳನ್ನು ಮತ್ತು ನಿಪ್ಪಲ್ ಶೀಲ್ಡ್ ಗಳನ್ನು ಬಳಸಬಾರದು.
06:52 ಚಪ್ಪಟೆಯಾದ ಅಥವಾ ಒಳಮುಖವಾಗಿರುವ ಮೊಲೆತೊಟ್ಟುಗಳಿರುವ ಸ್ತನಗಳಿಂದ ಹಾಲುಕುಡಿಯಲು ಮಗುವಿಗೆ ಕಷ್ಟವಾಗುತ್ತದೆ.
07:00 ತಾಯಿಯು ಮಗುವಿಗೆ ಸಾಕಷ್ಟು ಪರಸ್ಪರ ಚರ್ಮದ ಸ್ಪರ್ಶವನ್ನು ಒದಗಿಸಬೇಕು.
07:04 ಇದು ತಾಯಿಯಲ್ಲಿ 'ಆಕ್ಸಿಟೋಸಿನ್ ರಿಫ್ಲೆಕ್ಸ್' ಅನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಎದೆಹಾಲು ಸುಲಭವಾಗಿ ಹೊರಬರುತ್ತದೆ.
07:12 ಯಾವಾಗಲೂ ನೆನಪಿನಲ್ಲಿಡಿ - ಇವುಗಳಲ್ಲಿ ಹೆಚ್ಚಿನ ಮೊಲೆತೊಟ್ಟಿನ ಪರಿಸ್ಥಿತಿಗಳನ್ನು ಎದುರಿಸಲು, ಸರಿಯಾದ ಲ್ಯಾಚಿಂಗ್ ಅತೀ ಮುಖ್ಯವಾಗಿದೆ.
07:20 ಇದರೊಂದಿಗೆ, ನಾವು Nipple conditions in lactating mothers ಎಂಬ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
07:26 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಧ್ವನಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Debosmita, Sandhya.np14