Difference between revisions of "Avogadro/C3/Stereoisomerism/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
{| border=1
 
| <center>Time</center>
 
| <center>Narration</center>
 
  
|-
 
|| 00:01
 
|| '''Stereoisomerism''' (ಸ್ಟೀರಿಯೋಐಸೊಮೆರಿಸಮ್) ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
||00:06
 
|| ಈ ಟ್ಯುಟೋರಿಯಲ್ ನಲ್ಲಿ ನಾವು,  '''Conformational isomerism''' (ಕನಫರ್ಮೇಷನಲ್ ಐಸೊಮೆರಿಸಮ್)
 
'''Geometrical isomerism'''(ಜಾಮೆಟ್ರಿಕಲ್ ಐಸೋಮೆರಿಸಮ್) ಮತ್ತು '''R-S configurations''' (ಆರ್. ಎಸ್ ಕಾನ್ಫಿಗರೇಷನ್ಸ್) ಇವುಗಳ ಕುರಿತು ಉದಾಹರಣೆಗಳೊಂದಿಗೆ ಕಲಿಯುವೆವು.
 
|-
 
||00:18
 
||ಇಲ್ಲಿ ನಾನು , '''Ubuntu Linux OS''', ಆವೃತ್ತಿ 14.04 ಮತ್ತು '''Avogadro''' ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ. 
 
|-
 
||00:28
 
||ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು, '''Avogadro''' ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು.  ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
 
|-
 
||00:39
 
||ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳೆಂದು ಕೊಡಲಾಗಿದೆ. 
 
|-
 
||00:45
 
|| ಈ ಟ್ಯುಟೋರಿಯಲ್ ನಲ್ಲಿ ನಾವು, ಅವೊಗ್ಯಡ್ರೋ ವನ್ನು ಬಳಸಿ, ಸ್ಟಿರಿಯೋಐಸೋಮರ್ ಗಳನ್ನು ರಚಿಸಲು ಕಲಿಯುವೆವು.
 
|-
 
||00:51
 
|| ನಾನು ಸ್ಟಿರಿಯೋಐಸೋಮರಿಸಮ್ ನ ಕುರಿತು ಕಿರು ಪರಿಚಯವನ್ನು ಕೊಡುವೆನು.
 
|-
 
||00:56
 
|| ಪರಮಾಣುಗಳ ಸ್ಥಾನದ ಜೋಡಣೆಯಲ್ಲಿನ ವ್ಯತ್ಯಾಸಗಳಿಂದ  'ಸ್ಟೀರಿಯೋಐಸೊಮೆರಿಸಮ್' ಏರ್ಪಡುತ್ತದೆ.
 
|-
 
||01:03
 
|| ಐಸೋಮರ್ ಗಳು ಒಂದೇ ರಚನೆಯನ್ನು ಹೊಂದಿರುತ್ತವೆ ಮತ್ತು ಅದರಿಂದ ಅವುಗಳ ಗುಣಲಕ್ಷಣದಲ್ಲಿ ಹೆಚ್ಚಿನ ಬದಲಾವಣೆಗಳಿರುವುದಿಲ್ಲ.
 
|-
 
||01:09
 
||ಇಲ್ಲಿ ಐಸೋಮರ್ ಗಳ ವರ್ಗೀಕರಣವನ್ನು ತೋರಿಸುವ ಸ್ಲೈಡ್ ಇದೆ.
 
|-
 
||01:16
 
||ನಾನು '''Conformational isomerism'''(ಕನಫರ್ಮೇಷನಲ್ ಐಸೊಮೆರಿಸಮ್) ನಿಂದ ಪ್ರಾರಂಭಿಸುವೆನು.
 
|-
 
||01:21
 
|| ಇದು ಸ್ಟಿರಿಯೋಐಸೋಮರಿಸಮ್ ನ ಒಂದು ವಿಧವಾಗಿದೆ.
 
|-
 
||01:23
 
||ಈ ವಿಧದಲ್ಲಿ, ಐಸೋಮರ್ ಗಳ ಒಂದು ಬಾಂಡ್ ಅನ್ನು ತಿರುಗಿಸುವುದರಿಂದ ಅವುಗಳನ್ನು ಪರಸ್ಪರ ಪರಿವರ್ತಿಸಬಹುದು.
 
|-
 
||01:30
 
|| ಒಂದು ಬಾಂಡ್ ಅನ್ನು ರೊಟೇಟ್ ಮಾಡುವುದು,  '''rotational energy barrier'''(ರೊಟೇಷನಲ್ ಎನರ್ಜಿ ಬೆರಿಯರ್) ನಿಂದ ನಿರ್ಬಂಧಿತವಾಗಿದೆ.
 
|-
 
|| 01:36
 
||ಈಗ ನಾವು  '1,2-ಡೈಕ್ಲೋರೋಇಥೇನ್' ನ ಕನ್ಫರ್ಮರ್ ನೊಂದಿಗೆ ಪ್ರಾರಂಭಿಸೋಣ.
 
|-
 
|| 01:41
 
|| '1,2-ಡೈಕ್ಲೋರೋಇಥೇನ್'  ಎಕ್ಲಿಪ್ಸ್ಡ್, ಗಾಶ್ ಮತ್ತು ಆಂಟಿ ಎಂಬ  ಮೂರು ಬಹುರೂಪ
 
(ಕನ್ಫರ್ಮರ್)ಗಳಲ್ಲಿ ಅಸ್ತಿತ್ವದಲ್ಲಿರುತ್ತದೆ.
 
|-
 
|| 01:50
 
||ನಾನು ಅವಾಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ.
 
|-
 
|| 01:53
 
|| '''Draw''' ಟೂಲ್ ನ ಮೇಲೆ ಕ್ಲಿಕ್ ಮಾಡಿ.
 
|-
 
|| 01:55
 
|| '''Adjust Hydrogens''' ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
 
|-
 
|| 01:59
 
|| '''Panel''' ನ ಮೇಲೆ ಕ್ಲಿಕ್ ಮಾಡಿ ಮತ್ತು ಎರಡು ಪರಮಾಣುಗಳನ್ನು ಚಿತ್ರಿಸಲು ಡ್ರ್ಯಾಗ್ ಮಾಡಿ.
 
|-
 
||  02:04
 
||'''Element''' ಡ್ರಾಪ್ ಡೌನ್ ನಿಂದ  '''Chlorine''' ಅನ್ನು ಆಯ್ಕೆಮಾಡಿ.
 
|-
 
||  02:08
 
||ಪ್ರತಿ  'ಕಾರ್ಬನ್' ನ ಮೇಲೆ ಒಂದು ಬಾಂಡ್ ಅನ್ನು ರಚಿಸಿ.
 
|-
 
||02:11
 
|| '''Build''' ಮೆನ್ಯು ಗೆ ಹೋಗಿ ಮತ್ತು  '''Add Hydrogens''' ಅನ್ನು ಕ್ಲಿಕ್ ಮಾಡಿ.
 
|-
 
||02:15
 
|| ಪ್ಯಾನಲ್ ನ ಮೇಲೆ  '1,2-ಡೈಕ್ಲೋರೋಇಥೇನ್'  ಚಿತ್ರಿಸಲ್ಪಡುತ್ತದೆ.
 
|-
 
||02:19
 
||ಈಗ ರಚನೆಯನ್ನು ಆಪ್ಟಿಮೈಜ್ ಮಾಡೋಣ.
 
|-
 
||02:22
 
|| '''Auto Optimization''' ಟೂಲ್ ಅನ್ನು ಕ್ಲಿಕ್ ಮಾಡಿ.
 
|-
 
||02:25
 
|| '''Force Field''' ನಲ್ಲಿ,  '''MMFF94''' ಅನ್ನು ಆಯ್ಕೆಮಾಡಿ ಮತ್ತು  '''Start''' ಅನ್ನು ಕ್ಲಿಕ್ ಮಾಡಿ.
 
|-
 
||02:35
 
|| ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು,  '''Stop''' ಅನ್ನು ಕ್ಲಿಕ್ ಮಾಡಿ.
 
|-
 
||02:40
 
||ರಚನೆಯನ್ನು ಸರಿಯಾದ ಕೋನದಲ್ಲಿ ತಿರುಗಿಸಲು , '''Navigation''' ಟೂಲ್ ಅನ್ನು ಕ್ಲಿಕ್ ಮಾಡಿ.
 
|-
 
||02:45
 
||ಪ್ಯಾನಲ್ ನಲ್ಲಿ ನಾವು, 'ಗಾಶ್ ಕನ್ಫರ್ಮರ್' ಅನ್ನು ಹೊಂದಿದ್ದೇವೆ. 
 
|-
 
||02:49
 
||'1,2-ಡೈಕ್ಲೋರೋಇಥೇನ್'  ನ ಕನ್ಫರ್ಮರ್ ಗಳನ್ನು ತೋರಿಸಲು, ನಾನು  ಪರಿಭ್ರಮಣದ ಪ್ಲೇನ್ ಅನ್ನು ಸ್ಥಿರಗೊಳಿಸುವೆನು.
 
|-
 
|| 02:55
 
|| '''Bond Centric Manipulation''' (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್)ಟೂಲ್ ಅನ್ನುಕ್ಲಿಕ್ ಮಾಡಿ.
 
|-
 
||02:59
 
|| ಎರಡು ಕಾರ್ಬನ್ ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
 
|-
 
||03:03
 
||ಎರಡು ಪರಮಾಣುಗಳ ನಡುವಿನ ಪ್ಲೇನ್ ನೀಲಿ ಅಥವ ಹಳದಿ ಬಣ್ಣದಲ್ಲಿ ಕಾಣುತ್ತದೆ.
 
|-
 
||03:08
 
||ಕರ್ಸರ್ ಅನ್ನು ಕ್ಲೋರಿನ್ ಪರಮಾಣುವಿನ ಮೇಲಿಡಿ
 
|-
 
||03:10
 
||ಬಾಂಡ್ ಅನ್ನು ಪ್ರದಕ್ಷಿಣಾಕಾರವಾಗಿ(ಕ್ಲಾಕ್ವೈಸ್) ತಿರುಗಿಸಿ.
 
|-
 
||03:14
 
|| '''Navigation''' ಟೂಲ್ ನ ಮೇಲೆ ಕ್ಲಿಕ್ ಮಾಡಿ, ರಚನೆಯನ್ನು ತಿರುಗಿಸಿ.
 
|-
 
||03:18
 
||ನಾವು ಪ್ಯಾನಲ್ ನಲ್ಲಿ ,  '''Anti conformer''' (ಆಂಟಿ ಕನ್ಫರ್ಮರ್) ಅನ್ನು ಹೊಂದಿದ್ದೇವೆ.
 
|-
 
||03:21
 
||'''C-C bond''' ಗೆ ತಿರುಗಿಸಲು, ಇನ್ನೊಮ್ಮೆ '''Bondcentric Manipulation''' (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ.
 
|-
 
||03:25
 
||ನಾವು ಪ್ಯಾನಲ್ ನಲ್ಲಿ 'ಎಕ್ಲಿಪ್ಸ್ಡ್ ಕನ್ಫರ್ಮರ್' ಅನ್ನು ಹೊಂದಿದ್ದೇವೆ.
 
|-
 
||03:30
 
||ಈಗ ನಾನು ಸೈಕ್ಲೋಹೆಕ್ಸೇನ್ ನ ಅನೇಕ ಕನ್ಫರ್ಮರ್ ಗಳನ್ನು ತೋರಿಸುವೆನು.
 
|-
 
||03:35
 
||ಹೊಸ ವಿಂಡೋ ವನ್ನು ತೆರೆಯಿರಿ.
 
|-
 
||03:38
 
|| '''Draw settings''' ಮೆನ್ಯುವಿನಲ್ಲಿ, ಡಿಫಾಲ್ಟ್ ಆಗಿ,  '''Carbon''' ಆಯ್ಕೆಯಾಗಿರುತ್ತದೆ.
 
|-
 
||03:44
 
|| '''Adjust Hydrogens''' ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
 
|-
 
||03:48
 
|| ಈಗ ಸೈಕ್ಲೋಹೆಕ್ಸೇನ್ ರಚನೆಯನ್ನು ದೋಣಿಯಾಕಾರದಲ್ಲಿ ಚಿತ್ರಿಸೋಣ.
 
|-
 
||03:53
 
||ಪ್ಯಾನಲ್ ನಲ್ಲಿ ಸೈಕ್ಲೋಹೆಕ್ಸೇನ್ ನ ಬೋಟ್ ಕನ್ಫರ್ಮರ್ ಅನ್ನು ಚಿತ್ರಿಸಲು, ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ.
 
|-
 
||04:01
 
|| ಪರಮಾಣುಗಳನ್ನು ಲೇಬಲ್ ಮಾಡಲು, '''Display Types''' ಮೆನ್ಯುವಿನಲ್ಲಿ, '''Label''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
||04:07
 
|| ಗಮನಿಸಿ: ಎಲ್ಲ ಸಮಯದಲ್ಲಿ ಲೇಬಲಿಂಗ್ ಒಂದೇ ರೀತಿಯಾಗಿರುವುದಿಲ್ಲ.
 
|-
 
||04:11
 
|| ಈಗ ನಮ್ಮ ಅಗತ್ಯಕ್ಕೆ ತಕ್ಕಂತೆ ಕನ್ಫರ್ಮರ್ ಗಳನ್ನು ಲೇಬಲ್ ಮಾಡೋಣ.
 
|-
 
||04:16
 
|| '''Selection''' ಟೂಲ್ ಮೇಲೆ ಕ್ಲಿಕ್ ಮಾಡಿ,ನಂತರ ಮೊದಲ ಕಾರ್ಬನ್ ಪರಮಾಣುವಿನ ಮೇಲೆ ರೈಟ್ ಕ್ಲಿಕ್ ಮಾಡಿ.
 
|-
 
||04:21
 
||ಒಂದು ಮೆನ್ಯು ತೆರೆದುಕೊಳ್ಳುತ್ತದೆ. '''Change label''' ಅನ್ನು ಆಯ್ಕೆಮಾಡಿ.
 
|-
 
||04:25
 
||'''Change label of the atom''' ಟೆಕ್ಸ್ಟ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
|-
 
||04:30
 
|| '''New Label''' ಫೀಲ್ಡ್ ನಲ್ಲಿ 1 ಎಂದು ಟೈಪ್ ಮಾಡಿ ಮತ್ತು  '''OK''' ಯನ್ನು ಕ್ಲಿಕ್ ಮಾಡಿ.
 
|-
 
||04:35
 
|| ನಂತರ ಎರಡನೇ ಪರಮಾಣುವಿನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಲೇಬಲ್ ಅನ್ನು 2 ಎಂದು ಬದಲಾಯಿಸಿ.
 
|-
 
||04:41
 
|| ಇದರಂತೆಯೇ, ನಾನು ಪರಮಾಣುಗಳ ಲೇಬಲ್ ಅನ್ನು  3, 4, 5 ಮತ್ತು 6 ಎಂದು ಬದಲಾಯಿಸುವೆನು.
 
|-
 
||04:50
 
||ಈಗ ನಾವು 'ಬೋಟ್ ಕನ್ಫರ್ಮರ್' ಅನ್ನು 'ಟ್ವಿಸ್ಟ್ ಬೋಟ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು.
 
|-
 
||04:54
 
|| '''Manipulation''' ಟೂಲ್ ಅನ್ನು ಕ್ಲಿಕ್ ಮಾಡಿ. 2 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಡ್ರ್ಯಾಗ್ ಮಾಡಿ.
 
|-
 
||04:57
 
|| 5 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಡ್ರ್ಯಾಗ್ ಮಾಡಿ. 3 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಡ್ರ್ಯಾಗ್ ಮಾಡಿ.
 
|-
 
||05:08
 
|| ಈಗ ನಾವು ಪ್ಯಾನಲ್ ನಲ್ಲಿ ಟ್ವಿಸ್ಟ್ ಬೋಟ್ ಅನ್ನು ಹೊಂದಿದ್ದೇವೆ.
 
|-
 
||05:10
 
|| ಈಗ ನಾವು 'ಟ್ವಿಸ್ಟ್ ಬೋಟ್' ಅನ್ನು  'ಹಾಫ್ ಚೇರ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು.
 
|-
 
||05:16
 
|| 2 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ.
 
|-
 
||05:19
 
| 5 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ.
 
|-
 
||05:23
 
|| 4 ಅನ್ನು ಕ್ಲಿಕ್ ಮಾಡಿ, ಮತ್ತು ಅಡ್ಡಡ್ಡವಾಗಿ (ಹಾರಿಝೋಂಟಲ್ ) ಡ್ರ್ಯಾಗ್ ಮಾಡಿ.
 
|-
 
||05:27
 
||ಸರಿಯಾದ ರಚನೆಯನ್ನು ಪಡೆಯಲು ಅಗತ್ಯವಿದ್ದಲ್ಲಿ ಎಲ್ಲಾ ಕಾರ್ಬನ್ ಪರಮಾಣುಗಳ ಸ್ಥಾನವನ್ನು ಹೊಂದಿಸಿ.
 
|-
 
||05:33
 
||ಪ್ಯಾನಲ್ ನಲ್ಲಿ ಹಾಫ್ ಚೇರ್ ಅನ್ನು ಹೊಂದಿದ್ದೇವೆ.
 
|-
 
||05:36
 
||ಈಗ ನಾವು ಹಾಫ್ ಚೇರ್  ಅನ್ನು ಚೇರ್ ಕನ್ಫರ್ಮರ್ ಆಗಿ ಪರಿವರ್ತಿಸುವೆವು.
 
|-
 
||05:41
 
|| 4 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ.
 
 
|-
 
||05:44
 
|| 1 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ.
 
 
|-
 
||05:47
 
|| ಸರಿಯಾದ ರಚನೆಯನ್ನು ಪಡೆಯಲು ಅಗತ್ಯವಿದ್ದಲ್ಲಿ ಎಲ್ಲಾ ಕಾರ್ಬನ್ ಪರಮಾಣುಗಳ ಸ್ಥಾನವನ್ನು ಹೊಂದಿಸಿ.
 
|-
 
||05:53
 
|| ಪ್ಯಾನಲ್ ನಲ್ಲಿ ಚೇರ್ ಕನ್ಫರ್ಮರ್ ಅನ್ನು ಹೊಂದಿದ್ದೇವೆ.
 
|-
 
||05:56
 
||ಅಸೈನ್ಮೆಂಟ್: ಬ್ಯುಟೇನ್ ಮತ್ತು ಸೈಕ್ಲೋಪೆಂಟೇನ್ ಗಳ ವಿವಿಧ ಕನ್ಫರ್ಮರ್ ಗಳನ್ನು ಚಿತ್ರಿಸಿ.
 
|-
 
||06:03
 
|| ಈಗ ನಾನು ಜಾಮೆಟ್ರಿಕಲ್ ಐಸೋಮೆರಿಸಮ್ ಅನ್ನು ತೋರಿಸಲು ಕೆಲವು ರಚನೆಗಳನ್ನು ಬರೆಯುವೆನು.
 
|-
 
||06:09
 
|| ಡಬಲ್ ಬಾಂಡ್ ನ ಸುತ್ತ ಪರಮಾಣುಗಳ ಸ್ಥಾನದ ಜೋಡಣೆಯಲ್ಲಿನ ವ್ಯತ್ಯಾಸಗಳಿಂದ ಜಾಮೆಟ್ರಿಕಲ್ ಐಸೋಮೆರಿಸ್ಮ್ ಉಂಟಾಗುತ್ತದೆ.
 
|-
 
||06:17
 
||ಇಲ್ಲಿ ಡಬಲ್ ಬಾಂಡೆಡ್ ಕಾರ್ಬನ್ ನ ಸುತ್ತ ಪರಮಾಣುಗಳ ಅಥವಾ ಪರಮಾಣು  ಗುಂಪುಗಳ ಪರಿಭ್ರಮಣೆಯನ್ನು ನಿರ್ಬಂಧಿಸಲಾಗುತ್ತದೆ.
 
|-
 
||06:24
 
|| ನಾನು ವಿವರಣೆಗಾಗಿ, 'ಡೈಅಮೈನ್ ಡೈ ಕ್ಲೋರೋ ಪ್ಲ್ಯಾಟಿನಂ (II) ' ರಚನೆಯನ್ನು ಬರೆಯುವೆನು. ಇದನ್ನು 'ಸಿಸ್ಪ್ಲ್ಯಾಟಿನ್' ಎಂದೂ ಕರೆಯುವರು.
 
|-
 
||06:33
 
||ಒಂದು ಹೊಸ ವಿಂಡೋ ವನ್ನು ಓಪನ್ ಮಾಡಿ.
 
|-
 
||06:36
 
|| '''Draw settings''' ಮೆನ್ಯುವಿನಲ್ಲಿ, '''Element''' ಡ್ರಾಪ್ ಡೌನ್ ಅನ್ನುಕ್ಲಿಕ್ ಮಾಡಿ ಮತ್ತು '''Other''' ಅನ್ನು ಆಯ್ಕೆಮಾಡಿ.
 
'''Periodic table''' ತೆರೆದುಕೊಳ್ಳುತ್ತದೆ.
 
|-
 
||06:44
 
||ಟೇಬಲ್ ನಿಂದ '''Platinum(Pt)''' ಅನ್ನು ಆಯ್ಕೆ ಮಾಡಿ.  '''Periodic table''' ವಿಂಡೋವನ್ನು ಕ್ಲೋಸ್ ಮಾಡಿ.
 
|-
 
||06:50
 
||ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
 
|-
 
||06:53
 
|| '''Element''' ಡ್ರಾಪ್ ಡೌನ್ ನಿಂದ '''Chlorine''' ಅನ್ನು ಆಯ್ಕೆ ಮಾಡಿ.
 
|-
 
||06:55
 
||ಪ್ಲ್ಯಾಟಿನಂ ಪರಮಾಣುವಿನ ಒಂದೇ ಬದಿಯಲ್ಲಿ ಎರಡು ಕ್ಲೋರಿನ್ ಬಾಂಡ್ ಗಳನ್ನು ಚಿತ್ರಿಸಿ.
 
|-
 
||07:00
 
||'''Element''' ಡ್ರಾಪ್ ಡೌನ್ ನಿಂದ  '''Nitrogen''' ಅನ್ನು ಆಯ್ಕೆ ಮಾಡಿ. ಮೊದಲಿನಂತೆಯೇ ಎರಡು ನೈಟ್ರೋಜನ್ (ಸಾರಜನಕ) ಬಾಂಡ್ ಅನ್ನು ಚಿತ್ರಿಸಿ.
 
|-
 
||07:07
 
|| ರಚನೆಯನ್ನು ಪೂರ್ಣಗೊಳಿಸಲು, ನಮಗೆ ನೈಟ್ರೋಜನ್(ಸಾರಜನಕ) ಪರಮಾಣುಗಳಿಗೆ ಹೊಂದಿಕೊಂಡ ಮೂರು ಹೈಡ್ರೋಜನ್(ಜಲಜನಕ) ಗಳು ಬೇಕು.
 
|-
 
||07:13
 
||'''Element''' ಡ್ರಾಪ್ ಡೌನ್ ನಿಂದ  '''Hydrogen''' ಅನ್ನು ಆಯ್ಕೆ ಮಾಡಿ.
 
|-
 
|07:16
 
||ಮೂರನೇ ಬಾಂಡ್ ಅನ್ನು ರಚಿಸಲು ಪ್ರತಿ ನೈಟ್ರೋಜನ್ ನ ಮೇಲೆ ಕ್ಲಿಕ್ ಮಾಡಿ.
 
|-
 
||07:21
 
||ಈಗ ರಚನೆಯನ್ನು ಆಪ್ಟಿಮೈಜ್ ಮಾಡೋಣ.
 
|-
 
||07:24
 
|| '''Auto Optimization''' ಟೂಲ್ ನ ಮೇಲೆ ಕ್ಲಿಕ್ ಮಾಡಿ.
 
|-
 
||07:27
 
|| '''Force Field''' ಫೀಲ್ಡ್ ನಲ್ಲಿ,  '''UFF''' ಅನ್ನು ಆಯ್ಕೆ ಮಾಡಿ ಮತ್ತು  '''Start''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
||07:35
 
||ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು  '''Stop''' ಅನ್ನು ಕ್ಲಿಕ್ ಮಾಡಿ.
 
|-
 
||07:39
 
||ವಿವರಣೆಗಾಗಿ ನನಗೆ ಎರಡು ರಚನೆಗಳ ಅವಶ್ಯಕತೆಯಿದೆ.
 
|-
 
||07:43
 
|| ನಾನು ರಚನೆಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡುವೆನು.
 
|-
 
||07:46
 
||ರಚನೆಯನ್ನು ಆಯ್ಕೆ ಮಾಡಲು  '''Selection''' ಟೂಲ್ ಅನ್ನು ಕ್ಲಿಕ್ ಮಾಡಿ.
 
|-
 
||07:50
 
||ಕಾಪಿ ಮಾಡಲು '''CTRL+C''' ಯನ್ನು ಮತ್ತು ಪೇಸ್ಟ್ ಮಾಡಲು '''CTRL+V''' ಯನ್ನು ಒತ್ತಿ.ಪೇಸ್ಟ್ ಮಾಡಿದ ರಚನೆಯನ್ನು ಬಲಕ್ಕೆ ಡ್ರ್ಯಾಗ್ ಮಾಡಿ.
 
|-
 
||07:57
 
|| ಅನುಕೂಲಕ್ಕಾಗಿ ನಾನು ಪರಮಾಣುಗಳನ್ನು ಲೇಬಲ್ ಮಾಡುವೆನು.
 
|-
 
||08:00
 
||'''Display Types''' ಮೆನ್ಯುವಿನಲ್ಲಿ, '''Label''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
|-
 
||08:05
 
|| '''Hydrogen''' ಗಳನ್ನು ತೆಗೆದುಹಾಕಲು, '''Build''' ಮೆನ್ಯುವಿಗೆ ಹೋಗಿ ಮತ್ತು  '''Remove Hydrogens''' ಅನ್ನು ಆಯ್ಕೆಮಾಡಿ.
 
|-
 
||08:11
 
|| ನಾವು ಪ್ಯಾನಲ್ ನಲ್ಲಿ ಸಿಸ್ಪ್ಲ್ಯಾಟಿನ್ ನ ಎರಡು ಐಸೋಮರ್ ಗಳನ್ನು ಹೊಂದಿದ್ದೇವೆ.
 
|-
 
||08:16
 
||ನಾನು ಎರಡನೆಯ ಸಿಸ್ ಐಸೋಮರ್ ಅನ್ನು ಟ್ರಾನ್ಸ್ ಐಸೋಮರ್ ಆಗಿ ಪರಿವರ್ತಿಸುವೆನು.
 
|-
 
||08:21
 
|| '''Manipulation''' ಟೂಲ್ ಅನ್ನು ಕ್ಲಿಕ್ ಮಾಡಿ.
 
|-
 
||08:24
 
|| '''Cl 4''' ಅನ್ನು ಕ್ಲಿಕ್ ಮಾಡಿ ಎಡಕ್ಕೆ ಡ್ರ್ಯಾಗ್ ಮಾಡಿ.  '''N4''' ಅನ್ನು ಕ್ಲಿಕ್ ಮಾಡಿ ಬಲಕ್ಕೆ ಡ್ರ್ಯಾಗ್ ಮಾಡಿ.
 
|-
 
||08:32
 
|| ರಚನೆಯನ್ನು ಸರಿಯಾದ ಕೋನದಲ್ಲಿ ಜೋಡಿಸಲು, ಎಲ್ಲ ಬಾಂಡ್ ಗಳ ಸ್ಥಾನವನ್ನು ಹೊಂದಿಸಿ.
 
|-
 
||08:38
 
|| '''Build''' ಮೆನ್ಯುವಿಗೆ ಹೋಗಿ ಮತ್ತು  '''Add Hydrogens''' ಅನ್ನು ಆಯ್ಕೆಮಾಡಿ.
 
|-
 
||08:43
 
||ಮೊದಲಿನಂತೆ, ನೈಟ್ರೋಜನ್ ಗೆ  ಹೊಂದಿಕೊಂಡ ಎರಡು ಪರಮಾಣುಗಳಿರುತ್ತವೆ.
 
|-
 
||08:48
 
||'''Draw''' ಟೂಲ್ನಲ್ಲಿರುವ '''Hydrogen''' ಅನ್ನು ಬಳಸಿ ಮೂರನೆಯ ಹೈಡ್ರೋಜನ್ ಅನ್ನು  ಸೇರಿಸಿ.
 
|-
 
||08:53
 
||ಈಗ ರಚನೆಯನ್ನು ಆಪ್ಟಿಮೈಜ್ ಮಾಡೋಣ.
 
|-
 
||08:55
 
|| '''Auto Optimization''' ಟೂಲ್ ಅನ್ನು ಕ್ಲಿಕ್ ಮಾಡಿ.
 
|-
 
|| 08:59
 
|| '''Force Field''' ನಲ್ಲಿ,  '''UFF''' ಅನ್ನು ಆಯ್ಕೆಮಾಡಿ ಮತ್ತು  '''Start''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
||09:05
 
||ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು,  '''Stop''' ಬಟನ್ ಅನ್ನು ಒತ್ತಿ.
 
|-
 
||09:09
 
||ಈಗ ಪ್ಯಾನಲ್ ನಲ್ಲಿ ನಾವು ಡೈಅಮೈನ್ ಡೈಕ್ಲೋರೋ ಪ್ಲ್ಯಾಟಿನಮ್ (II) ದ ಎರಡು ಜಾಮೆಟ್ರಿಕಲ್ ಐಸೋಮರ್ ಗಳನ್ನು ಹೊಂದಿದ್ದೇವೆ.
 
|-
 
||09:17
 
||ಇದೇರೀತಿ, 'ಡೈಅಮೈನ್ ಟೆಟ್ರಾಸೈನೋಫರೇಟ್(III)ಅಯಾನ್'  '''[Fe(NH3) 2CN)4]-''' ನ ಜಾಮೆಟ್ರಿಕಲ್ ಐಸೋಮರ್ ಗಳನ್ನು ಹೊಂದಿದ್ದೇವೆ.
 
|-
 
||09:25
 
||ಈಗ ನಾವು  '''R-S configuration'''(ಆರ್-ಎಸ್ ಕಾನ್ಫಿಗರೇಷನ್) ನ ಕುರಿತು ಚರ್ಚಿಸೋಣ.
 
|-
 
||09:29
 
||'ಆರ್ ಎಸ್ ಕಾನ್ಫಿಗರೇಷನ್ ' ಗಳು  '''Chiral centre'''(ಕೈರಲ್ ಸೆಂಟರ್) ನ ಉಪಸ್ಥಿತಿಯಿಂದ ಉಂಟಾಗುತ್ತವೆ.
 
|-
 
||09:35
 
|| '''Chiral centre''' (ಕೈರಲ್ ಸೆಂಟರ್) ಇದು ಒಂದು ಪರಮಾಣುವು ನಾಲ್ಕು ಬೇರೆ ಬೇರೆ  ಅಣುಗಳೊಂದಿಗೆ ಸಂಪರ್ಕ ಹೊಂದಿರುವುದು.
 
|-
 
||09:41
 
||ಕಾನ್ಫಿಗರೇಷನ್ ಗಳು,  ಪರಸ್ಪರ 'ನಾನ್ ಸುಪರ್ ಇಂಪೋಸೇಬಲ್ ಮಿರರ್ ಇಮೇಜ್' ಗಳಾಗಿವೆ.
 
|-
 
||09:47
 
|| ಆರ್ ಎಸ್ ಕಾನ್ಫಿಗರೇಷನ್ ಗಳ ವಿವರಣೆಗಾಗಿ ನಾನು ಅಮಿನೋ ಆಸಿಡ್ –ಅಲನೈನ್ ಅನ್ನು ಬಳಸುವೆನು.
 
|-
 
||09:53
 
||ಹೊಸ ವಿಂಡೋವನ್ನು ತೆರೆಯಿರಿ.
 
|-
 
||09:56
 
|| ನಾನು '''Fragment library''' ಯಿಂದ '''Alanine'''(ಅಲನೈನ್) ರಚನೆಯನ್ನು ಲೋಡ್ ಮಾಡುವೆನು.
 
|-
 
||10:01
 
|| ಫ್ರ್ಯಾಗ್ಮಂಟ್ ಲೈಬ್ರರಿಯಲ್ಲಿರುವ ಎಲ್ಲಾ ಅಮಿನೋ ಆಸಿಡ್ ಗಳೂ ಆಪ್ಟಿಕಲಿ ಆಕ್ಟಿವ್ ಆಗಿರುತ್ತವೆ.
 
|-
 
||10:07
 
|| ನೀವು ನಿಮಗೆ ಬೇಕಾದ ಅಮಿನೋ ಆಸಿಡ್ ಗಳನ್ನು ಲೋಡ್ ಮಾಡಿ,  ನೋಡಿಕೊಳ್ಳಬಹುದು.
 
|-
 
||10:11
 
||ರಚನೆಯನ್ನು ಡಿ-ಸೆಲೆಕ್ಟ್ ಮಾಡಲು  '''CTRL+SHIFT''' ಮತ್ತು '''A''' ಕೀ ಗಳನ್ನು ಒತ್ತಿ.
 
|-
 
||10:15
 
|| ರಚನೆಯನ್ನು ಸರಿಯಾದ ಕೋನದಲ್ಲಿ ತಿರುಗಿಸಲು,  '''Navigation''' ಟೂಲ್ ಅನ್ನು ಬಳಸಿ.
 
|-
 
||10:22
 
||ಮಧ್ಯದ ಕಾರ್ಬನ್ ಪರಮಾಣು, ನಾಲ್ಕು ಬೇರೆ ಬೇರೆ ಗುಂಪುಗಳಿಗೆ ಹೊಂದಿಕೊಂಡಿರುವುದರಿಂಅ ಅದುಅ ಕೈರಲ್ ಆಗಿದೆ.
 
|-
 
||10:26
 
|| ಆರ್ ಎಸ್ ಕಾನ್ಫಿಗರೇಷನ್  ನಲ್ಲಿ ಅಣುಗಳು ಬಲ (ಕ್ಲಾಕ್ವೈಸ್) ಅಥವಾ ಎಡ(ಆಂಟಿಕ್ಲಾಕ್ವೈಸ್)  ಭಾಗದಲ್ಲಿದೆಯೆ ಎನ್ನುವುದರ ಮೇಲೆ ಆದ್ಯತೆಯನ್ನು ಕೊಡಲಾಗುತ್ತದೆ.
 
|-
 
||10:35
 
||ಆದ್ಯತೆಯು ಪರಮಾಣುವಿನ ಸಂಖ್ಯೆಯನ್ನು ಕೂಡ ಅವಲಂಬಿಸಿರುತ್ತದೆ.
 
|-
 
||10:40
 
|| ಹೆಚ್ಚು ಪರಮಾಣು ಸಂಖ್ಯೆ ಹೊಂದಿದ ಅಣುವು ಮೊದಲ ಆದ್ಯತೆಯನ್ನು ಪಡೆದುಕೊಳ್ಳುತ್ತದೆ.
 
|-
 
||10:45
 
||ಈಗ ನಾವು ಪ್ರದಕ್ಷಿಣಾಕಾರವಾಗಿ(ಕ್ಲಾಕ್ವೈಸ್) ಆದ್ಯತೆಯನ್ನು ನೋಡೋಣ.
 
|-
 
||10:49
 
||ಈ ರಚನೆಯಲ್ಲಿ, ನೈಟ್ರೋಜನ್ ಗೆ ಮೊದಲ ಆದ್ಯತೆಯನ್ನು ಕೊಡಲಾಗಿದೆ.
 
|-
 
||10:53
 
|| ಆಕ್ಸಿಜನ್ ಗೆ ಹೊಂದಿಕೊಂದ ಕಾರ್ಬನ್ ಗೆ ಎರಡನೇ ಆದ್ಯತೆ ಮತ್ತು ಮೀಥೈಲ್ ಗೆ ಮೂರನೆ ಆದ್ಯತೆ ಇದೆ.
 
|-
 
||11:02
 
||ರಚನೆಯು '''R configuration''' ಅನ್ನು ಹೊಂದಿದೆ.
 
|-
 
||11:05
 
|| ನಾನು, ಕೈರಲ್ ಕಾರ್ಬನ್ ಗೆ ಹೊಂದಿಕೊಂಡ ಗುಂಪುಗಳ ಸ್ಥಾನವನ್ನು ಬದಲಾಯಿಸುವೆನು.
 
|-
 
||11:10
 
|| '''Build''' ಮೆನ್ಯುವಿಗೆ ಹೋಗಿ,  '''Remove Hydrogens''' ಅನ್ನು ಆಯ್ಕೆಮಾಡಿ.
 
|-
 
||11:15
 
|| '''Manipulation''' ಟೂಲ್ ಅನ್ನು ಕ್ಲಿಕ್ ಮಾಡಿ.
 
|-
 
||11:17
 
||ಕಾರ್ಬನ್ ಅನ್ನು ಬಲಕ್ಕೆ ಚಲಿಸಿ.
 
|-
 
||11:20
 
||ಆಕ್ಸಿಜನ್ ಗೆ ಹೊಂದಿಕೊಂಡ ಕಾರ್ಬನ್ ಅನ್ನು ಚಲಿಸಿ.
 
|-
 
|11:25
 
|| '''Build''' ಮೆನ್ಯುಗೆ ಹೋಗಿ, ಮತ್ತು  '''Add Hydrogens''' ಅನ್ನು ಆಯ್ಕೆಮಾಡಿ.
 
|-
 
||11:29
 
||ಈಗ ನಾವು ಆಂಟಿ-ಕ್ಲಾಕ್ವೈಸ್ ನಲ್ಲಿ ಆದ್ಯತೆಯನ್ನು ನೋಡುವೆವು.
 
|-
 
||11:33
 
|| ನೈಟ್ರೋಜನ್ ಮೊದಲ ಆದ್ಯತೆಯನ್ನು ಹೊಂದಿದೆ.  ಆಕ್ಸಿಜನ್ ಗೆ ಹೊಂದಿಕೊಂಡ ಕಾರ್ಬನ್ ಎರಡನೇ ಆದ್ಯತೆಯನ್ನು ಹೊಂದಿದೆ. ಮತ್ತು ಮೀಥೈಲ್ ಮೂರನೆ ಆದ್ಯತೆಯನ್ನು ಪಡೆದುಕೊಂಡಿದೆ.
 
|-
 
||11:45
 
||ರಚನೆಯು 'ಎಸ್ ಕಾನ್ಫಿಗರೇಷನ್' ಅನ್ನು ಹೊಂದಿದೆ. .
 
|-
 
||11:48
 
|| ಇದೇರೀತಿ ನಾವು ಪ್ಯಾನಲ್ ನಲ್ಲಿ ಗ್ಲಿಸರಾಲ್ಡಿಹೈಡ್ ನ '''R''' (ಆರ್) ಮತ್ತು '''S''' (ಎಸ್)ಕಾನ್ಫಿಗರೇಷನ್ ಗಳನ್ನು ಹೊಂದಿದ್ದೇವೆ.
 
|-
 
||11:55
 
|| ಈಗ ಸಂಕ್ಷಿಪ್ತವಾಗಿ ಸಾರಾಂಶವನ್ನು ನೋಡೋಣ.
 
|-
 
||11:57
 
|| ಈ ಟ್ಯುಟೋರಿಯಲ್ ನಲ್ಲಿ ನಾವು, '1,2-ಡೈಕ್ಲೋರೋ ಇಥೇನ್' ನ ಕನ್ಫರ್ಮೇಷನ್ ಗಳನ್ನು ಬರೆಯಲು,  ಸೈಕ್ಲೋಹೆಕ್ಸೇನ್ ನ ಕನ್ಫರ್ಮೇಷನ್ ಗಳನ್ನು ಬರೆಯಲು,  ಸಿಸ್ಪ್ಲ್ಯಾಟಿನ್ ನ ಜಾಮೆಟ್ರಿಕಲ್ ಐಸೋಮರ್ ಗಳನ್ನು ಬರೆಯಲು, ಅಮಿನೋ ಆಸಿಡ್ ಅಲನೈನ್ ನ ಆರ್ ಎಸ್ ಕಾನ್ಫಿಗರೇಷನ್ ಗಳನ್ನು ಬರೆಯಲು ಕಲಿತಿದ್ದೇವೆ.
 
|-
 
||12:15
 
|| ಅಸೈನ್ ಮೆಂಟ್ :'2-ಬ್ಯುಟೇನ್' ಮತ್ತು'1,2-ಡೈಕ್ಲೋರೋಇಥೇನ್' ಗಳ ಜಾಮೆಟ್ರಿಕಲ್ ಐಸೋಮರ್ ಗಳನ್ನು ಬರೆಯಿರಿ ಮತ್ತು  ಬ್ರೋಮೋಕ್ಲೋರೋಅಯೋಡೋಮಿಥೇನ್ ನ ಆರ್-ಎಸ್ ಕಾನ್ಫಿಗರೇಷನ್ ಗಳನ್ನು ಬರೆಯಿರಿ.
 
|-
 
||12:29
 
|| ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
||12:37
 
|| ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
|-
 
||12:44
 
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
 
  |-
 
||12:51
 
|| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 
ಧನ್ಯವಾದಗಳು
 
|-
 
|}
 

Revision as of 15:50, 23 July 2018

Contributors and Content Editors

Anjana310312, Sandhya.np14