Difference between revisions of "Avogadro/C3/Stereoisomerism/Kannada"
From Script | Spoken-Tutorial
Anjana310312 (Talk | contribs) (Created page with "{| border=1 | <center>Time</center> | <center>Narration</center> |- || 00:01 || '''Stereoisomerism''' (ಸ್ಟೀರಿಯೋಐಸೊಮೆರಿಸಮ್) ನ ಕುರ...") |
Anjana310312 (Talk | contribs) |
||
Line 439: | Line 439: | ||
|- | |- | ||
||12:37 | ||12:37 | ||
− | || ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.|- | + | || ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
+ | |- | ||
||12:44 | ||12:44 | ||
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
Revision as of 20:05, 15 July 2018
|
|
00:01 | Stereoisomerism (ಸ್ಟೀರಿಯೋಐಸೊಮೆರಿಸಮ್) ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, Conformational isomerism (ಕನಫರ್ಮೇಷನಲ್ ಐಸೊಮೆರಿಸಮ್)
Geometrical isomerism(ಜಾಮೆಟ್ರಿಕಲ್ ಐಸೋಮೆರಿಸಮ್) ಮತ್ತು R-S configurations (ಆರ್. ಎಸ್ ಕಾನ್ಫಿಗರೇಷನ್ಸ್) ಇವುಗಳ ಕುರಿತು ಉದಾಹರಣೆಗಳೊಂದಿಗೆ ಕಲಿಯುವೆವು. |
00:18 | ಇಲ್ಲಿ ನಾನು , Ubuntu Linux OS, ಆವೃತ್ತಿ 14.04 ಮತ್ತು Avogadro ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ. |
00:28 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು, Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ. |
00:39 | ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳೆಂದು ಕೊಡಲಾಗಿದೆ. |
00:45 | ಈ ಟ್ಯುಟೋರಿಯಲ್ ನಲ್ಲಿ ನಾವು, ಅವೊಗ್ಯಡ್ರೋ ವನ್ನು ಬಳಸಿ, ಸ್ಟಿರಿಯೋಐಸೋಮರ್ ಗಳನ್ನು ರಚಿಸಲು ಕಲಿಯುವೆವು. |
00:51 | ನಾನು ಸ್ಟಿರಿಯೋಐಸೋಮರಿಸಮ್ ನ ಕುರಿತು ಕಿರು ಪರಿಚಯವನ್ನು ಕೊಡುವೆನು. |
00:56 | ಪರಮಾಣುಗಳ ಸ್ಥಾನದ ಜೋಡಣೆಯಲ್ಲಿನ ವ್ಯತ್ಯಾಸಗಳಿಂದ 'ಸ್ಟೀರಿಯೋಐಸೊಮೆರಿಸಮ್' ಏರ್ಪಡುತ್ತದೆ. |
01:03 | ಐಸೋಮರ್ ಗಳು ಒಂದೇ ರಚನೆಯನ್ನು ಹೊಂದಿರುತ್ತವೆ ಮತ್ತು ಅದರಿಂದ ಅವುಗಳ ಗುಣಲಕ್ಷಣದಲ್ಲಿ ಹೆಚ್ಚಿನ ಬದಲಾವಣೆಗಳಿರುವುದಿಲ್ಲ. |
01:09 | ಇಲ್ಲಿ ಐಸೋಮರ್ ಗಳ ವರ್ಗೀಕರಣವನ್ನು ತೋರಿಸುವ ಸ್ಲೈಡ್ ಇದೆ. |
01:16 | ನಾನು Conformational isomerism(ಕನಫರ್ಮೇಷನಲ್ ಐಸೊಮೆರಿಸಮ್) ನಿಂದ ಪ್ರಾರಂಭಿಸುವೆನು. |
01:21 | ಇದು ಸ್ಟಿರಿಯೋಐಸೋಮರಿಸಮ್ ನ ಒಂದು ವಿಧವಾಗಿದೆ. |
01:23 | ಈ ವಿಧದಲ್ಲಿ, ಐಸೋಮರ್ ಗಳ ಒಂದು ಬಾಂಡ್ ಅನ್ನು ತಿರುಗಿಸುವುದರಿಂದ ಅವುಗಳನ್ನು ಪರಸ್ಪರ ಪರಿವರ್ತಿಸಬಹುದು. |
01:30 | ಒಂದು ಬಾಂಡ್ ಅನ್ನು ರೊಟೇಟ್ ಮಾಡುವುದು, rotational energy barrier(ರೊಟೇಷನಲ್ ಎನರ್ಜಿ ಬೆರಿಯರ್) ನಿಂದ ನಿರ್ಬಂಧಿತವಾಗಿದೆ. |
01:36 | ಈಗ ನಾವು '1,2-ಡೈಕ್ಲೋರೋಇಥೇನ್' ನ ಕನ್ಫರ್ಮರ್ ನೊಂದಿಗೆ ಪ್ರಾರಂಭಿಸೋಣ. |
01:41 | '1,2-ಡೈಕ್ಲೋರೋಇಥೇನ್' ಎಕ್ಲಿಪ್ಸ್ಡ್, ಗಾಶ್ ಮತ್ತು ಆಂಟಿ ಎಂಬ ಮೂರು ಬಹುರೂಪ
(ಕನ್ಫರ್ಮರ್)ಗಳಲ್ಲಿ ಅಸ್ತಿತ್ವದಲ್ಲಿರುತ್ತದೆ. |
01:50 | ನಾನು ಅವಾಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ. |
01:53 | Draw ಟೂಲ್ ನ ಮೇಲೆ ಕ್ಲಿಕ್ ಮಾಡಿ. |
01:55 | Adjust Hydrogens ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. |
01:59 | Panel ನ ಮೇಲೆ ಕ್ಲಿಕ್ ಮಾಡಿ ಮತ್ತು ಎರಡು ಪರಮಾಣುಗಳನ್ನು ಚಿತ್ರಿಸಲು ಡ್ರ್ಯಾಗ್ ಮಾಡಿ. |
02:04 | Element ಡ್ರಾಪ್ ಡೌನ್ ನಿಂದ Chlorine ಅನ್ನು ಆಯ್ಕೆಮಾಡಿ. |
02:08 | ಪ್ರತಿ 'ಕಾರ್ಬನ್' ನ ಮೇಲೆ ಒಂದು ಬಾಂಡ್ ಅನ್ನು ರಚಿಸಿ. |
02:11 | Build ಮೆನ್ಯು ಗೆ ಹೋಗಿ ಮತ್ತು Add Hydrogens ಅನ್ನು ಕ್ಲಿಕ್ ಮಾಡಿ. |
02:15 | ಪ್ಯಾನಲ್ ನ ಮೇಲೆ '1,2-ಡೈಕ್ಲೋರೋಇಥೇನ್' ಚಿತ್ರಿಸಲ್ಪಡುತ್ತದೆ. |
02:19 | ಈಗ ರಚನೆಯನ್ನು ಆಪ್ಟಿಮೈಜ್ ಮಾಡೋಣ. |
02:22 | Auto Optimization ಟೂಲ್ ಅನ್ನು ಕ್ಲಿಕ್ ಮಾಡಿ. |
02:25 | Force Field ನಲ್ಲಿ, MMFF94 ಅನ್ನು ಆಯ್ಕೆಮಾಡಿ ಮತ್ತು Start ಅನ್ನು ಕ್ಲಿಕ್ ಮಾಡಿ. |
02:35 | ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು, Stop ಅನ್ನು ಕ್ಲಿಕ್ ಮಾಡಿ. |
02:40 | ರಚನೆಯನ್ನು ಸರಿಯಾದ ಕೋನದಲ್ಲಿ ತಿರುಗಿಸಲು , Navigation ಟೂಲ್ ಅನ್ನು ಕ್ಲಿಕ್ ಮಾಡಿ. |
02:45 | ಪ್ಯಾನಲ್ ನಲ್ಲಿ ನಾವು, 'ಗಾಶ್ ಕನ್ಫರ್ಮರ್' ಅನ್ನು ಹೊಂದಿದ್ದೇವೆ. |
02:49 | '1,2-ಡೈಕ್ಲೋರೋಇಥೇನ್' ನ ಕನ್ಫರ್ಮರ್ ಗಳನ್ನು ತೋರಿಸಲು, ನಾನು ಪರಿಭ್ರಮಣದ ಪ್ಲೇನ್ ಅನ್ನು ಸ್ಥಿರಗೊಳಿಸುವೆನು. |
02:55 | Bond Centric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್)ಟೂಲ್ ಅನ್ನುಕ್ಲಿಕ್ ಮಾಡಿ. |
02:59 | ಎರಡು ಕಾರ್ಬನ್ ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
03:03 | ಎರಡು ಪರಮಾಣುಗಳ ನಡುವಿನ ಪ್ಲೇನ್ ನೀಲಿ ಅಥವ ಹಳದಿ ಬಣ್ಣದಲ್ಲಿ ಕಾಣುತ್ತದೆ. |
03:08 | ಕರ್ಸರ್ ಅನ್ನು ಕ್ಲೋರಿನ್ ಪರಮಾಣುವಿನ ಮೇಲಿಡಿ |
03:10 | ಬಾಂಡ್ ಅನ್ನು ಪ್ರದಕ್ಷಿಣಾಕಾರವಾಗಿ(ಕ್ಲಾಕ್ವೈಸ್) ತಿರುಗಿಸಿ. |
03:14 | Navigation ಟೂಲ್ ನ ಮೇಲೆ ಕ್ಲಿಕ್ ಮಾಡಿ, ರಚನೆಯನ್ನು ತಿರುಗಿಸಿ. |
03:18 | ನಾವು ಪ್ಯಾನಲ್ ನಲ್ಲಿ , Anti conformer (ಆಂಟಿ ಕನ್ಫರ್ಮರ್) ಅನ್ನು ಹೊಂದಿದ್ದೇವೆ. |
03:21 | C-C bond ಗೆ ತಿರುಗಿಸಲು, ಇನ್ನೊಮ್ಮೆ Bondcentric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ. |
03:25 | ನಾವು ಪ್ಯಾನಲ್ ನಲ್ಲಿ 'ಎಕ್ಲಿಪ್ಸ್ಡ್ ಕನ್ಫರ್ಮರ್' ಅನ್ನು ಹೊಂದಿದ್ದೇವೆ. |
03:30 | ಈಗ ನಾನು ಸೈಕ್ಲೋಹೆಕ್ಸೇನ್ ನ ಅನೇಕ ಕನ್ಫರ್ಮರ್ ಗಳನ್ನು ತೋರಿಸುವೆನು. |
03:35 | ಹೊಸ ವಿಂಡೋ ವನ್ನು ತೆರೆಯಿರಿ. |
03:38 | Draw settings ಮೆನ್ಯುವಿನಲ್ಲಿ, ಡಿಫಾಲ್ಟ್ ಆಗಿ, Carbon ಆಯ್ಕೆಯಾಗಿರುತ್ತದೆ. |
03:44 | Adjust Hydrogens ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ. |
03:48 | ಈಗ ಸೈಕ್ಲೋಹೆಕ್ಸೇನ್ ರಚನೆಯನ್ನು ದೋಣಿಯಾಕಾರದಲ್ಲಿ ಚಿತ್ರಿಸೋಣ. |
03:53 | ಪ್ಯಾನಲ್ ನಲ್ಲಿ ಸೈಕ್ಲೋಹೆಕ್ಸೇನ್ ನ ಬೋಟ್ ಕನ್ಫರ್ಮರ್ ಅನ್ನು ಚಿತ್ರಿಸಲು, ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ. |
04:01 | ಪರಮಾಣುಗಳನ್ನು ಲೇಬಲ್ ಮಾಡಲು, Display Types ಮೆನ್ಯುವಿನಲ್ಲಿ, Label ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
04:07 | ಗಮನಿಸಿ: ಎಲ್ಲ ಸಮಯದಲ್ಲಿ ಲೇಬಲಿಂಗ್ ಒಂದೇ ರೀತಿಯಾಗಿರುವುದಿಲ್ಲ. |
04:11 | ಈಗ ನಮ್ಮ ಅಗತ್ಯಕ್ಕೆ ತಕ್ಕಂತೆ ಕನ್ಫರ್ಮರ್ ಗಳನ್ನು ಲೇಬಲ್ ಮಾಡೋಣ. |
04:16 | Selection ಟೂಲ್ ಮೇಲೆ ಕ್ಲಿಕ್ ಮಾಡಿ,ನಂತರ ಮೊದಲ ಕಾರ್ಬನ್ ಪರಮಾಣುವಿನ ಮೇಲೆ ರೈಟ್ ಕ್ಲಿಕ್ ಮಾಡಿ. |
04:21 | ಒಂದು ಮೆನ್ಯು ತೆರೆದುಕೊಳ್ಳುತ್ತದೆ. Change label ಅನ್ನು ಆಯ್ಕೆಮಾಡಿ. |
04:25 | Change label of the atom ಟೆಕ್ಸ್ಟ್ ಬಾಕ್ಸ್ ತೆರೆದುಕೊಳ್ಳುತ್ತದೆ. |
04:30 | New Label ಫೀಲ್ಡ್ ನಲ್ಲಿ 1 ಎಂದು ಟೈಪ್ ಮಾಡಿ ಮತ್ತು OK ಯನ್ನು ಕ್ಲಿಕ್ ಮಾಡಿ. |
04:35 | ನಂತರ ಎರಡನೇ ಪರಮಾಣುವಿನ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು ಲೇಬಲ್ ಅನ್ನು 2 ಎಂದು ಬದಲಾಯಿಸಿ. |
04:41 | ಇದರಂತೆಯೇ, ನಾನು ಪರಮಾಣುಗಳ ಲೇಬಲ್ ಅನ್ನು 3, 4, 5 ಮತ್ತು 6 ಎಂದು ಬದಲಾಯಿಸುವೆನು. |
04:50 | ಈಗ ನಾವು 'ಬೋಟ್ ಕನ್ಫರ್ಮರ್' ಅನ್ನು 'ಟ್ವಿಸ್ಟ್ ಬೋಟ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು. |
04:54 | Manipulation ಟೂಲ್ ಅನ್ನು ಕ್ಲಿಕ್ ಮಾಡಿ. 2 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಡ್ರ್ಯಾಗ್ ಮಾಡಿ. |
04:57 | 5 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಡ್ರ್ಯಾಗ್ ಮಾಡಿ. 3 ಅನ್ನು ಕ್ಲಿಕ್ ಮಾಡಿ, ಅದನ್ನು ಮೇಲ್ಮುಖವಾಗಿ ಡ್ರ್ಯಾಗ್ ಮಾಡಿ. |
05:08 | ಈಗ ನಾವು ಪ್ಯಾನಲ್ ನಲ್ಲಿ ಟ್ವಿಸ್ಟ್ ಬೋಟ್ ಅನ್ನು ಹೊಂದಿದ್ದೇವೆ. |
05:10 | ಈಗ ನಾವು 'ಟ್ವಿಸ್ಟ್ ಬೋಟ್' ಅನ್ನು 'ಹಾಫ್ ಚೇರ್ ಕನ್ಫರ್ಮರ್' ಆಗಿ ಪರಿವರ್ತಿಸುವೆವು. |
05:16 | 2 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ. |
05:19 | 5 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ. |
05:23 | 4 ಅನ್ನು ಕ್ಲಿಕ್ ಮಾಡಿ, ಮತ್ತು ಅಡ್ಡಡ್ಡವಾಗಿ (ಹಾರಿಝೋಂಟಲ್ ) ಡ್ರ್ಯಾಗ್ ಮಾಡಿ. |
05:27 | ಸರಿಯಾದ ರಚನೆಯನ್ನು ಪಡೆಯಲು ಅಗತ್ಯವಿದ್ದಲ್ಲಿ ಎಲ್ಲಾ ಕಾರ್ಬನ್ ಪರಮಾಣುಗಳ ಸ್ಥಾನವನ್ನು ಹೊಂದಿಸಿ. |
05:33 | ಪ್ಯಾನಲ್ ನಲ್ಲಿ ಹಾಫ್ ಚೇರ್ ಅನ್ನು ಹೊಂದಿದ್ದೇವೆ. |
05:36 | ಈಗ ನಾವು ಹಾಫ್ ಚೇರ್ ಅನ್ನು ಚೇರ್ ಕನ್ಫರ್ಮರ್ ಆಗಿ ಪರಿವರ್ತಿಸುವೆವು. |
05:41 | 4 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ. |
05:44 | 1 ಅನ್ನು ಕ್ಲಿಕ್ ಮಾಡಿ, ಅದನ್ನು ಕೆಳಮುಖವಾಗಿ ಡ್ರ್ಯಾಗ್ ಮಾಡಿ. |
05:47 | ಸರಿಯಾದ ರಚನೆಯನ್ನು ಪಡೆಯಲು ಅಗತ್ಯವಿದ್ದಲ್ಲಿ ಎಲ್ಲಾ ಕಾರ್ಬನ್ ಪರಮಾಣುಗಳ ಸ್ಥಾನವನ್ನು ಹೊಂದಿಸಿ. |
05:53 | ಪ್ಯಾನಲ್ ನಲ್ಲಿ ಚೇರ್ ಕನ್ಫರ್ಮರ್ ಅನ್ನು ಹೊಂದಿದ್ದೇವೆ. |
05:56 | ಅಸೈನ್ಮೆಂಟ್: ಬ್ಯುಟೇನ್ ಮತ್ತು ಸೈಕ್ಲೋಪೆಂಟೇನ್ ಗಳ ವಿವಿಧ ಕನ್ಫರ್ಮರ್ ಗಳನ್ನು ಚಿತ್ರಿಸಿ. |
06:03 | ಈಗ ನಾನು ಜಾಮೆಟ್ರಿಕಲ್ ಐಸೋಮೆರಿಸಮ್ ಅನ್ನು ತೋರಿಸಲು ಕೆಲವು ರಚನೆಗಳನ್ನು ಬರೆಯುವೆನು. |
06:09 | ಡಬಲ್ ಬಾಂಡ್ ನ ಸುತ್ತ ಪರಮಾಣುಗಳ ಸ್ಥಾನದ ಜೋಡಣೆಯಲ್ಲಿನ ವ್ಯತ್ಯಾಸಗಳಿಂದ ಜಾಮೆಟ್ರಿಕಲ್ ಐಸೋಮೆರಿಸ್ಮ್ ಉಂಟಾಗುತ್ತದೆ. |
06:17 | ಇಲ್ಲಿ ಡಬಲ್ ಬಾಂಡೆಡ್ ಕಾರ್ಬನ್ ನ ಸುತ್ತ ಪರಮಾಣುಗಳ ಅಥವಾ ಪರಮಾಣು ಗುಂಪುಗಳ ಪರಿಭ್ರಮಣೆಯನ್ನು ನಿರ್ಬಂಧಿಸಲಾಗುತ್ತದೆ. |
06:24 | ನಾನು ವಿವರಣೆಗಾಗಿ, 'ಡೈಅಮೈನ್ ಡೈ ಕ್ಲೋರೋ ಪ್ಲ್ಯಾಟಿನಂ (II) ' ರಚನೆಯನ್ನು ಬರೆಯುವೆನು. ಇದನ್ನು 'ಸಿಸ್ಪ್ಲ್ಯಾಟಿನ್' ಎಂದೂ ಕರೆಯುವರು. |
06:33 | ಒಂದು ಹೊಸ ವಿಂಡೋ ವನ್ನು ಓಪನ್ ಮಾಡಿ. |
06:36 | Draw settings ಮೆನ್ಯುವಿನಲ್ಲಿ, Element ಡ್ರಾಪ್ ಡೌನ್ ಅನ್ನುಕ್ಲಿಕ್ ಮಾಡಿ ಮತ್ತು Other ಅನ್ನು ಆಯ್ಕೆಮಾಡಿ.
Periodic table ತೆರೆದುಕೊಳ್ಳುತ್ತದೆ. |
06:44 | ಟೇಬಲ್ ನಿಂದ Platinum(Pt) ಅನ್ನು ಆಯ್ಕೆ ಮಾಡಿ. Periodic table ವಿಂಡೋವನ್ನು ಕ್ಲೋಸ್ ಮಾಡಿ. |
06:50 | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. |
06:53 | Element ಡ್ರಾಪ್ ಡೌನ್ ನಿಂದ Chlorine ಅನ್ನು ಆಯ್ಕೆ ಮಾಡಿ. |
06:55 | ಪ್ಲ್ಯಾಟಿನಂ ಪರಮಾಣುವಿನ ಒಂದೇ ಬದಿಯಲ್ಲಿ ಎರಡು ಕ್ಲೋರಿನ್ ಬಾಂಡ್ ಗಳನ್ನು ಚಿತ್ರಿಸಿ. |
07:00 | Element ಡ್ರಾಪ್ ಡೌನ್ ನಿಂದ Nitrogen ಅನ್ನು ಆಯ್ಕೆ ಮಾಡಿ. ಮೊದಲಿನಂತೆಯೇ ಎರಡು ನೈಟ್ರೋಜನ್ (ಸಾರಜನಕ) ಬಾಂಡ್ ಅನ್ನು ಚಿತ್ರಿಸಿ. |
07:07 | ರಚನೆಯನ್ನು ಪೂರ್ಣಗೊಳಿಸಲು, ನಮಗೆ ನೈಟ್ರೋಜನ್(ಸಾರಜನಕ) ಪರಮಾಣುಗಳಿಗೆ ಹೊಂದಿಕೊಂಡ ಮೂರು ಹೈಡ್ರೋಜನ್(ಜಲಜನಕ) ಗಳು ಬೇಕು. |
07:13 | Element ಡ್ರಾಪ್ ಡೌನ್ ನಿಂದ Hydrogen ಅನ್ನು ಆಯ್ಕೆ ಮಾಡಿ. |
07:16 | ಮೂರನೇ ಬಾಂಡ್ ಅನ್ನು ರಚಿಸಲು ಪ್ರತಿ ನೈಟ್ರೋಜನ್ ನ ಮೇಲೆ ಕ್ಲಿಕ್ ಮಾಡಿ. |
07:21 | ಈಗ ರಚನೆಯನ್ನು ಆಪ್ಟಿಮೈಜ್ ಮಾಡೋಣ. |
07:24 | Auto Optimization ಟೂಲ್ ನ ಮೇಲೆ ಕ್ಲಿಕ್ ಮಾಡಿ. |
07:27 | Force Field ಫೀಲ್ಡ್ ನಲ್ಲಿ, UFF ಅನ್ನು ಆಯ್ಕೆ ಮಾಡಿ ಮತ್ತು Start ಬಟನ್ ಅನ್ನು ಕ್ಲಿಕ್ ಮಾಡಿ. |
07:35 | ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು Stop ಅನ್ನು ಕ್ಲಿಕ್ ಮಾಡಿ. |
07:39 | ವಿವರಣೆಗಾಗಿ ನನಗೆ ಎರಡು ರಚನೆಗಳ ಅವಶ್ಯಕತೆಯಿದೆ. |
07:43 | ನಾನು ರಚನೆಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡುವೆನು. |
07:46 | ರಚನೆಯನ್ನು ಆಯ್ಕೆ ಮಾಡಲು Selection ಟೂಲ್ ಅನ್ನು ಕ್ಲಿಕ್ ಮಾಡಿ. |
07:50 | ಕಾಪಿ ಮಾಡಲು CTRL+C ಯನ್ನು ಮತ್ತು ಪೇಸ್ಟ್ ಮಾಡಲು CTRL+V ಯನ್ನು ಒತ್ತಿ.ಪೇಸ್ಟ್ ಮಾಡಿದ ರಚನೆಯನ್ನು ಬಲಕ್ಕೆ ಡ್ರ್ಯಾಗ್ ಮಾಡಿ. |
07:57 | ಅನುಕೂಲಕ್ಕಾಗಿ ನಾನು ಪರಮಾಣುಗಳನ್ನು ಲೇಬಲ್ ಮಾಡುವೆನು. |
08:00 | Display Types ಮೆನ್ಯುವಿನಲ್ಲಿ, Label ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:05 | Hydrogen ಗಳನ್ನು ತೆಗೆದುಹಾಕಲು, Build ಮೆನ್ಯುವಿಗೆ ಹೋಗಿ ಮತ್ತು Remove Hydrogens ಅನ್ನು ಆಯ್ಕೆಮಾಡಿ. |
08:11 | ನಾವು ಪ್ಯಾನಲ್ ನಲ್ಲಿ ಸಿಸ್ಪ್ಲ್ಯಾಟಿನ್ ನ ಎರಡು ಐಸೋಮರ್ ಗಳನ್ನು ಹೊಂದಿದ್ದೇವೆ. |
08:16 | ನಾನು ಎರಡನೆಯ ಸಿಸ್ ಐಸೋಮರ್ ಅನ್ನು ಟ್ರಾನ್ಸ್ ಐಸೋಮರ್ ಆಗಿ ಪರಿವರ್ತಿಸುವೆನು. |
08:21 | Manipulation ಟೂಲ್ ಅನ್ನು ಕ್ಲಿಕ್ ಮಾಡಿ. |
08:24 | Cl 4 ಅನ್ನು ಕ್ಲಿಕ್ ಮಾಡಿ ಎಡಕ್ಕೆ ಡ್ರ್ಯಾಗ್ ಮಾಡಿ. N4 ಅನ್ನು ಕ್ಲಿಕ್ ಮಾಡಿ ಬಲಕ್ಕೆ ಡ್ರ್ಯಾಗ್ ಮಾಡಿ. |
08:32 | ರಚನೆಯನ್ನು ಸರಿಯಾದ ಕೋನದಲ್ಲಿ ಜೋಡಿಸಲು, ಎಲ್ಲ ಬಾಂಡ್ ಗಳ ಸ್ಥಾನವನ್ನು ಹೊಂದಿಸಿ. |
08:38 | Build ಮೆನ್ಯುವಿಗೆ ಹೋಗಿ ಮತ್ತು Add Hydrogens ಅನ್ನು ಆಯ್ಕೆಮಾಡಿ. |
08:43 | ಮೊದಲಿನಂತೆ, ನೈಟ್ರೋಜನ್ ಗೆ ಹೊಂದಿಕೊಂಡ ಎರಡು ಪರಮಾಣುಗಳಿರುತ್ತವೆ. |
08:48 | Draw ಟೂಲ್ನಲ್ಲಿರುವ Hydrogen ಅನ್ನು ಬಳಸಿ ಮೂರನೆಯ ಹೈಡ್ರೋಜನ್ ಅನ್ನು ಸೇರಿಸಿ. |
08:53 | ಈಗ ರಚನೆಯನ್ನು ಆಪ್ಟಿಮೈಜ್ ಮಾಡೋಣ. |
08:55 | Auto Optimization ಟೂಲ್ ಅನ್ನು ಕ್ಲಿಕ್ ಮಾಡಿ. |
08:59 | Force Field ನಲ್ಲಿ, UFF ಅನ್ನು ಆಯ್ಕೆಮಾಡಿ ಮತ್ತು Start ಬಟನ್ ಅನ್ನು ಕ್ಲಿಕ್ ಮಾಡಿ. |
09:05 | ಆಪ್ಟಿಮೈಜೇಷನ್ ಕ್ರಿಯೆಯನ್ನು ನಿಲ್ಲಿಸಲು, Stop ಬಟನ್ ಅನ್ನು ಒತ್ತಿ. |
09:09 | ಈಗ ಪ್ಯಾನಲ್ ನಲ್ಲಿ ನಾವು ಡೈಅಮೈನ್ ಡೈಕ್ಲೋರೋ ಪ್ಲ್ಯಾಟಿನಮ್ (II) ದ ಎರಡು ಜಾಮೆಟ್ರಿಕಲ್ ಐಸೋಮರ್ ಗಳನ್ನು ಹೊಂದಿದ್ದೇವೆ. |
09:17 | ಇದೇರೀತಿ, 'ಡೈಅಮೈನ್ ಟೆಟ್ರಾಸೈನೋಫರೇಟ್(III)ಅಯಾನ್' [Fe(NH3) 2CN)4]- ನ ಜಾಮೆಟ್ರಿಕಲ್ ಐಸೋಮರ್ ಗಳನ್ನು ಹೊಂದಿದ್ದೇವೆ. |
09:25 | ಈಗ ನಾವು R-S configuration(ಆರ್-ಎಸ್ ಕಾನ್ಫಿಗರೇಷನ್) ನ ಕುರಿತು ಚರ್ಚಿಸೋಣ. |
09:29 | 'ಆರ್ ಎಸ್ ಕಾನ್ಫಿಗರೇಷನ್ ' ಗಳು Chiral centre(ಕೈರಲ್ ಸೆಂಟರ್) ನ ಉಪಸ್ಥಿತಿಯಿಂದ ಉಂಟಾಗುತ್ತವೆ. |
09:35 | Chiral centre (ಕೈರಲ್ ಸೆಂಟರ್) ಇದು ಒಂದು ಪರಮಾಣುವು ನಾಲ್ಕು ಬೇರೆ ಬೇರೆ ಅಣುಗಳೊಂದಿಗೆ ಸಂಪರ್ಕ ಹೊಂದಿರುವುದು. |
09:41 | ಕಾನ್ಫಿಗರೇಷನ್ ಗಳು, ಪರಸ್ಪರ 'ನಾನ್ ಸುಪರ್ ಇಂಪೋಸೇಬಲ್ ಮಿರರ್ ಇಮೇಜ್' ಗಳಾಗಿವೆ. |
09:47 | ಆರ್ ಎಸ್ ಕಾನ್ಫಿಗರೇಷನ್ ಗಳ ವಿವರಣೆಗಾಗಿ ನಾನು ಅಮಿನೋ ಆಸಿಡ್ –ಅಲನೈನ್ ಅನ್ನು ಬಳಸುವೆನು. |
09:53 | ಹೊಸ ವಿಂಡೋವನ್ನು ತೆರೆಯಿರಿ. |
09:56 | ನಾನು Fragment library ಯಿಂದ Alanine(ಅಲನೈನ್) ರಚನೆಯನ್ನು ಲೋಡ್ ಮಾಡುವೆನು. |
10:01 | ಫ್ರ್ಯಾಗ್ಮಂಟ್ ಲೈಬ್ರರಿಯಲ್ಲಿರುವ ಎಲ್ಲಾ ಅಮಿನೋ ಆಸಿಡ್ ಗಳೂ ಆಪ್ಟಿಕಲಿ ಆಕ್ಟಿವ್ ಆಗಿರುತ್ತವೆ. |
10:07 | ನೀವು ನಿಮಗೆ ಬೇಕಾದ ಅಮಿನೋ ಆಸಿಡ್ ಗಳನ್ನು ಲೋಡ್ ಮಾಡಿ, ನೋಡಿಕೊಳ್ಳಬಹುದು. |
10:11 | ರಚನೆಯನ್ನು ಡಿ-ಸೆಲೆಕ್ಟ್ ಮಾಡಲು CTRL+SHIFT ಮತ್ತು A ಕೀ ಗಳನ್ನು ಒತ್ತಿ. |
10:15 | ರಚನೆಯನ್ನು ಸರಿಯಾದ ಕೋನದಲ್ಲಿ ತಿರುಗಿಸಲು, Navigation ಟೂಲ್ ಅನ್ನು ಬಳಸಿ. |
10:22 | ಮಧ್ಯದ ಕಾರ್ಬನ್ ಪರಮಾಣು, ನಾಲ್ಕು ಬೇರೆ ಬೇರೆ ಗುಂಪುಗಳಿಗೆ ಹೊಂದಿಕೊಂಡಿರುವುದರಿಂಅ ಅದುಅ ಕೈರಲ್ ಆಗಿದೆ. |
10:26 | ಆರ್ ಎಸ್ ಕಾನ್ಫಿಗರೇಷನ್ ನಲ್ಲಿ ಅಣುಗಳು ಬಲ (ಕ್ಲಾಕ್ವೈಸ್) ಅಥವಾ ಎಡ(ಆಂಟಿಕ್ಲಾಕ್ವೈಸ್) ಭಾಗದಲ್ಲಿದೆಯೆ ಎನ್ನುವುದರ ಮೇಲೆ ಆದ್ಯತೆಯನ್ನು ಕೊಡಲಾಗುತ್ತದೆ. |
10:35 | ಆದ್ಯತೆಯು ಪರಮಾಣುವಿನ ಸಂಖ್ಯೆಯನ್ನು ಕೂಡ ಅವಲಂಬಿಸಿರುತ್ತದೆ. |
10:40 | ಹೆಚ್ಚು ಪರಮಾಣು ಸಂಖ್ಯೆ ಹೊಂದಿದ ಅಣುವು ಮೊದಲ ಆದ್ಯತೆಯನ್ನು ಪಡೆದುಕೊಳ್ಳುತ್ತದೆ. |
10:45 | ಈಗ ನಾವು ಪ್ರದಕ್ಷಿಣಾಕಾರವಾಗಿ(ಕ್ಲಾಕ್ವೈಸ್) ಆದ್ಯತೆಯನ್ನು ನೋಡೋಣ. |
10:49 | ಈ ರಚನೆಯಲ್ಲಿ, ನೈಟ್ರೋಜನ್ ಗೆ ಮೊದಲ ಆದ್ಯತೆಯನ್ನು ಕೊಡಲಾಗಿದೆ. |
10:53 | ಆಕ್ಸಿಜನ್ ಗೆ ಹೊಂದಿಕೊಂದ ಕಾರ್ಬನ್ ಗೆ ಎರಡನೇ ಆದ್ಯತೆ ಮತ್ತು ಮೀಥೈಲ್ ಗೆ ಮೂರನೆ ಆದ್ಯತೆ ಇದೆ. |
11:02 | ರಚನೆಯು R configuration ಅನ್ನು ಹೊಂದಿದೆ. |
11:05 | ನಾನು, ಕೈರಲ್ ಕಾರ್ಬನ್ ಗೆ ಹೊಂದಿಕೊಂಡ ಗುಂಪುಗಳ ಸ್ಥಾನವನ್ನು ಬದಲಾಯಿಸುವೆನು. |
11:10 | Build ಮೆನ್ಯುವಿಗೆ ಹೋಗಿ, Remove Hydrogens ಅನ್ನು ಆಯ್ಕೆಮಾಡಿ. |
11:15 | Manipulation ಟೂಲ್ ಅನ್ನು ಕ್ಲಿಕ್ ಮಾಡಿ. |
11:17 | ಕಾರ್ಬನ್ ಅನ್ನು ಬಲಕ್ಕೆ ಚಲಿಸಿ. |
11:20 | ಆಕ್ಸಿಜನ್ ಗೆ ಹೊಂದಿಕೊಂಡ ಕಾರ್ಬನ್ ಅನ್ನು ಚಲಿಸಿ. |
11:25 | Build ಮೆನ್ಯುಗೆ ಹೋಗಿ, ಮತ್ತು Add Hydrogens ಅನ್ನು ಆಯ್ಕೆಮಾಡಿ. |
11:29 | ಈಗ ನಾವು ಆಂಟಿ-ಕ್ಲಾಕ್ವೈಸ್ ನಲ್ಲಿ ಆದ್ಯತೆಯನ್ನು ನೋಡುವೆವು. |
11:33 | ನೈಟ್ರೋಜನ್ ಮೊದಲ ಆದ್ಯತೆಯನ್ನು ಹೊಂದಿದೆ. ಆಕ್ಸಿಜನ್ ಗೆ ಹೊಂದಿಕೊಂಡ ಕಾರ್ಬನ್ ಎರಡನೇ ಆದ್ಯತೆಯನ್ನು ಹೊಂದಿದೆ. ಮತ್ತು ಮೀಥೈಲ್ ಮೂರನೆ ಆದ್ಯತೆಯನ್ನು ಪಡೆದುಕೊಂಡಿದೆ. |
11:45 | ರಚನೆಯು 'ಎಸ್ ಕಾನ್ಫಿಗರೇಷನ್' ಅನ್ನು ಹೊಂದಿದೆ. . |
11:48 | ಇದೇರೀತಿ ನಾವು ಪ್ಯಾನಲ್ ನಲ್ಲಿ ಗ್ಲಿಸರಾಲ್ಡಿಹೈಡ್ ನ R (ಆರ್) ಮತ್ತು S (ಎಸ್)ಕಾನ್ಫಿಗರೇಷನ್ ಗಳನ್ನು ಹೊಂದಿದ್ದೇವೆ. |
11:55 | ಈಗ ಸಂಕ್ಷಿಪ್ತವಾಗಿ ಸಾರಾಂಶವನ್ನು ನೋಡೋಣ. |
11:57 | ಈ ಟ್ಯುಟೋರಿಯಲ್ ನಲ್ಲಿ ನಾವು, '1,2-ಡೈಕ್ಲೋರೋ ಇಥೇನ್' ನ ಕನ್ಫರ್ಮೇಷನ್ ಗಳನ್ನು ಬರೆಯಲು, ಸೈಕ್ಲೋಹೆಕ್ಸೇನ್ ನ ಕನ್ಫರ್ಮೇಷನ್ ಗಳನ್ನು ಬರೆಯಲು, ಸಿಸ್ಪ್ಲ್ಯಾಟಿನ್ ನ ಜಾಮೆಟ್ರಿಕಲ್ ಐಸೋಮರ್ ಗಳನ್ನು ಬರೆಯಲು, ಅಮಿನೋ ಆಸಿಡ್ ಅಲನೈನ್ ನ ಆರ್ ಎಸ್ ಕಾನ್ಫಿಗರೇಷನ್ ಗಳನ್ನು ಬರೆಯಲು ಕಲಿತಿದ್ದೇವೆ. |
12:15 | ಅಸೈನ್ ಮೆಂಟ್ :'2-ಬ್ಯುಟೇನ್' ಮತ್ತು'1,2-ಡೈಕ್ಲೋರೋಇಥೇನ್' ಗಳ ಜಾಮೆಟ್ರಿಕಲ್ ಐಸೋಮರ್ ಗಳನ್ನು ಬರೆಯಿರಿ ಮತ್ತು ಬ್ರೋಮೋಕ್ಲೋರೋಅಯೋಡೋಮಿಥೇನ್ ನ ಆರ್-ಎಸ್ ಕಾನ್ಫಿಗರೇಷನ್ ಗಳನ್ನು ಬರೆಯಿರಿ. |
12:29 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
12:37 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
12:44 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
12:51 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು |