Difference between revisions of "Drupal/C2/Creating-New-Content-Types/Kannada"

From Script | Spoken-Tutorial
Jump to: navigation, search
 
Line 9: Line 9:
 
|-
 
|-
 
| 00:06
 
| 00:06
| ಈ ಟ್ಯುಟೋರಿಯಲ್ ನಲ್ಲಿ ನಾವು  
+
| ಈ ಟ್ಯುಟೋರಿಯಲ್ ನಲ್ಲಿ ನಾವು ಹೊಸ '''Content type''' ಅನ್ನು ರಚನೆ ಮಾಡುವುದು ಮತ್ತು ಕಂಟೆಂಟ್ ಟೈಪ್ ಗೆ ಹೊಸ ಫೀಲ್ಡ್ ಗಳನ್ನು ಸೇರಿಸುವುದನ್ನು ಕುರಿತು ಕಲಿಯುತ್ತೇವೆ.  
ಹೊಸ '''Content type''' ಅನ್ನು ರಚನೆ ಮಾಡುವುದು ಮತ್ತು ಕಂಟೆಂಟ್ ಟೈಪ್ ಗೆ ಹೊಸ ಫೀಲ್ಡ್ ಗಳನ್ನು ಸೇರಿಸುವುದನ್ನು ಕುರಿತು ಕಲಿಯುತ್ತೇವೆ.  
+
 
|-
 
|-
 
| 00:15
 
| 00:15
| ಈ ಟ್ಯುಟೋರಿಯಲ್ ಗಾಗಿ ನಾನು:  
+
| ಈ ಟ್ಯುಟೋರಿಯಲ್ ಗಾಗಿ ನಾನು: '''Ubuntu''' ಆಪರೇಟಿಂಗ್ ಸಿಸ್ಟಂ , '''Drupal 8 ''' ಮತ್ತು , '''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.
 
+
'''Ubuntu''' ಆಪರೇಟಿಂಗ್ ಸಿಸ್ಟಂ  
+
'''Drupal 8 ''' ಮತ್ತು  
+
'''Firefox ''' ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.
+
ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.
+
  
 
|-
 
|-
Line 325: Line 319:
 
|-
 
|-
 
| 09:43
 
| 09:43
| ''' Allowed Link type''' ನಡಿಯಲ್ಲಿ, ನಾವು -
+
| ''' Allowed Link type''' ನಡಿಯಲ್ಲಿ, ನಾವು - '''Internal links only''', '''External links only ''' ಮತ್ತು '''Both internal and external links''' ಎಂಬ ಆಯ್ಕೆಗಳನ್ನು ಹೊಂದಿದ್ದೇವೆ.
'''Internal links only'''
+
'''External links only ''' ಮತ್ತು
+
'''Both internal and external links''' ಎಂಬ ಆಯ್ಕೆಗಳನ್ನು ಹೊಂದಿದ್ದೇವೆ.
+
  
 
|-
 
|-
Line 391: Line 382:
 
|-
 
|-
 
| 11:55
 
| 11:55
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್- ಇದು NMEICT, Ministry of Human Resource Development
+
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್- ಇದು NMEICT, Ministry of Human Resource Development ಮತ್ತು  NVLI,Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.
ಮತ್ತು  NVLI, Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.
+
  
 
|-
 
|-

Latest revision as of 18:09, 14 October 2016

Time Narration
00:01 Creating New Content Types ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಹೊಸ Content type ಅನ್ನು ರಚನೆ ಮಾಡುವುದು ಮತ್ತು ಕಂಟೆಂಟ್ ಟೈಪ್ ಗೆ ಹೊಸ ಫೀಲ್ಡ್ ಗಳನ್ನು ಸೇರಿಸುವುದನ್ನು ಕುರಿತು ಕಲಿಯುತ್ತೇವೆ.
00:15 ಈ ಟ್ಯುಟೋರಿಯಲ್ ಗಾಗಿ ನಾನು: Ubuntu ಆಪರೇಟಿಂಗ್ ಸಿಸ್ಟಂ , Drupal 8 ಮತ್ತು , Firefox ವೆಬ್ ಬ್ರೌಸರ್ ಗಳನ್ನು ಉಪಯೋಗಿಸಿದ್ದೇನೆ.ನೀವು ನಿಮಗೆ ಇಷ್ಟವಾದ ವೆಬ್ ಬ್ರೌಸರ್ ಅನ್ನು ಉಪಯೋಗಿಸಬಹುದು.
00:29 ಈಗ, ಮೊದಲೇ ರಚಿಸಿದ ವೆಬ್ ಸೈಟ್ ಅನ್ನು ತೆರೆಯೋಣ.
00:34 ನಾವು built-in Content types ಎಂದರೇನು ಎಂದು ತಿಳಿದಿದ್ದೇವೆ. ಈಗ ಕೆಲವು ಕಸ್ಟಮ್ Content type ಗಳನ್ನು ರಚನೆ ಮಾಡೋಣ.
00:41 Content type ಗಳ ಪರಿಚಯವನ್ನು ನೆನಪಿಸಿಕೊಳ್ಳಿ.
00:45 ನಾವು ಎಲ್ಲವನ್ನೂ body ಯಲ್ಲಿ ಸೇರಿಸಬಾರದು ಎಂಬುದನ್ನು ಕಲಿತಿದ್ದೇವೆ.
00:49 ಈಗ ನಾವು custom Content type ಗಳನ್ನು ಹೇಗೆ ರಚನೆ ಮಾಡಬಹುದು ಎಂದು ಕಲಿಯೋಣ.
00:55 ನಾವು 'ದ್ರುಪಲ್' ನ ಎಲ್ಲಾ 'ಇವೆಂಟ್' ಗಳನ್ನು ಪ್ರಪಂಚದಾದ್ಯಂತ ಟ್ರ್ಯಾಕ್ ಮಾಡಬಲ್ಲ ಒಂದು Events Content type ಅನ್ನು ರಚನೆ ಮಾಡೋಣ.
01:02 ಮೊದಲಿಗೆ, ಈ Content type ಗೆ ಬೇಕಾಗುವ ಎಲ್ಲಾ 'ಫೀಲ್ಡ್' ಗಳನ್ನು ಕಾಗದದಲ್ಲಿ ಡಿಸೈನ್ ಮಾಡಿಕೊಳ್ಳೋಣ.
01:09 'ದ್ರುಪಲ್' ನಲ್ಲಿ ಹೊಸ Content types ರಚನೆ ಮಾಡುವ ಮೊದಲು ಈ ರೀತಿ ಮಾಡಿಕೊಳ್ಳುವುದು ಉತ್ತಮ ಅಭ್ಯಾಸ.
01:16 Field Name, Field Type ಮತ್ತು Purpose ಎಂಬ ಕಾಲಮ್ ಗಳುಳ್ಳ ಟೇಬಲ್ ಅನ್ನು ರಚನೆ ಮಾಡಿ.
01:23 ಎಲ್ಲ 'ದ್ರುಪಲ್ ನೋಡ್' ಗಳು ಡಿಫಾಲ್ಟ್ ಆಗಿ Title ಮತ್ತು Body ಫೀಲ್ಡ್ ಗಳನ್ನು ಹೊಂದಿರುತ್ತವೆ.
01:29 'ಇವೆಂಟ್' ಅನ್ನು ಗುರ್ತಿಸಲು Title ಫೀಲ್ಡ್ ನಲ್ಲಿ Event Name ಅನ್ನು ಕೊಡಬಹುದು.
01:36 Body ಫೀಲ್ಡ್ ನಲ್ಲಿ ಸಣ್ಣ ವಿವರಣೆಯುಳ್ಳ Event Description ಅನ್ನು ಕೊಡುವುದು ಒಳ್ಳೆಯದು.
01:43 'ಇವೆಂಟ್' ನ ಲೋಗೋವನ್ನು ಡಿಸ್ಪ್ಲೇ ಮಾಡಲು 'ಇವೆಂಟ್' ಗೆ ಸಂಬಂಧಿಸಿದ ಇಮೇಜ್ ಅನ್ನು Event Logo ಫೀಲ್ಡ್ ನಲ್ಲಿ ಕೊಡಬಹುದು.
01:50 Event Date- ಇದು Date ಟೈಪ್ ನದ್ದಾಗಿದ್ದು 'ಇವೆಂಟ್' ನ ಪ್ರಾರಂಭದ ದಿನಾಂಕ ಮತ್ತು ಕೊನೆಯ ದಿನಾಂಕವನ್ನು ನೀಡಲು ಅವಶ್ಯಕ.
01:58 Event ಅದರದ್ದೇ ಆದ Event Website ಅನ್ನು ಹೊಂದಿರಬಹುದು ಮತ್ತು ಅದು ಈ Content type ನಲ್ಲಿ ಡಿಸ್ಪ್ಲೇ ಆಗುವ ಒಂದು URL ಆಗಿದೆ.
02:07 ನಾವು ಈ ಟ್ಯುಟೋರಿಯಲ್ ನಲ್ಲಿ ಈ ಐದು ಫೀಲ್ಡ್ ಗಳನ್ನು ಕಲಿಯುತ್ತೇವೆ. ನಂತರ ಇನ್ನೂ ಎರಡು ಫೀಲ್ಡ್ ಗಳ ಕುರಿತು ಕಲಿಯುತ್ತೇವೆ.
02:17 ಪ್ರತಿಯೊಂದು 'ಇವೆಂಟ್' ಕೂಡ User Group ನಿಂದ ಪ್ರಾಯೋಜಿತವಾಗಿರುತ್ತದೆ. User Group ಇನ್ನೊಂದು Content type, ಇದನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯುತ್ತೇವೆ.
02:27 'ದ್ರುಪಲ್' ನಲ್ಲಿ ಎರಡು ಬೇರೆ ಬೇರೆ ಕಂಟೆಂಟ್ ಟೈಪ್ ಗಳ ಎರಡು 'ನೋಡ್' ಗಳನ್ನು Entity Reference field ಅನ್ನು ಉಪಯೋಗಿಸಿ ಲಿಂಕ್ ಮಾಡಲಾಗುತ್ತದೆ.
02:35 Event Topic ಇದೊಂದು Taxonomy ಫೀಲ್ಡ್. ಇದನ್ನು, 'ಇವೆಂಟ್' ಗಳನ್ನು ವಿವಿಧ keyword ಗಳಡಿಯಲ್ಲಿ ವಿಭಾಗಿಸಲು ಉಪಯೋಗಿಸುತ್ತೇವೆ.
02:44 ಈಗ Structure ನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ Content types ನ ಮೇಲೆ ಕ್ಲಿಕ್ ಮಾಡಿ.
02:50 ಇವುಗಳು ಎರಡು ಸಾಮಾನ್ಯ ' Content type ಗಳು.
02:53 Add content type ನೀಲಿ ಬಟನ್ ನ ಮೇಲೆ ಕ್ಲಿಕ್ ಮಾಡಿ.
02:57 ನಾವು ನಮ್ಮ ಹೊಸ Content type ಅನ್ನು Events ಎಂದು ಕರೆಯೋಣ.
03:02 ಮತ್ತು Description, ನಲ್ಲಿ- "This is where we track all the Drupal events from around the world" ಎಂದು ಟೈಪ್ ಮಾಡೋಣ.
03:11 ಇಲ್ಲಿ ನಮಗೆ ಬೇಕಾದುದನ್ನು ಟೈಪ್ ಮಾಡಿಕೊಳ್ಳಬಹುದು.
03:15 Description, Content type ಪುಟದಲ್ಲಿ ಕಾಣಿಸುತ್ತದೆ.
03:20 ನಾವು, 'ದ್ರುಪಲ್' ಇದಕ್ಕೆ Machine name ಕೊಟ್ಟಿರುವುದನ್ನು ಗಮನಿಸಬಹುದು. ಇಲ್ಲಿ ಇದು events ಎಂದು ಹೆಸರಿಸಲ್ಪಟ್ಟಿದೆ.
03:28 Machine name- ಇದು 'ದ್ರುಪಲ್' ಕಂಟೆಂಟ್ ಅನ್ನು ಅಸೈನ್ ಮಾಡಿದ ಡಾಟಾಬೇಸ್ ನಲ್ಲಿನ ಟೇಬಲ್ ನ ಹೆಸರು.
03:36 Submission form settings ನಲ್ಲಿ Title ಅನ್ನು Event Name ಆಗಿ ಬದಲಿಸಿ.
03:43 Publishing options, ನಲ್ಲಿ Create new revision ನ ಮೇಲೆ ಒಂದು ಚೆಕ್ ಮಾರ್ಕ್ ಅನ್ನು ಹಾಕಿ.
03:49 ಅಂದರೆ ಪ್ರತಿಸಲ ಒಂದು ನೋಡ್ ಅನ್ನು ಎಡಿಟ್ ಮಾಡಿದಾಗ ಹೊಸ ಆವೃತ್ತಿಯ ರಚನೆ ಆಗುತ್ತದೆ.
03:55 ಉಳಿದ ಸೆಟ್ಟಿಂಗ್ ಗಳನ್ನು ಹಾಗೇ ಬಿಡಿ. Display author and date information ಅನ್ನು ಆಫ್ ಮಾಡಿ.
04:02 ಇದು ಇದಕ್ಕೆ ಮುಖ್ಯವಲ್ಲ. ಆದರೆ ಇದನ್ನು ಎಲ್ಲಾ Content type ಗೂ ಮಾಡುವುದು ಒಳ್ಳೆಯದು.
04:09 Menu settings ಮೇಲೆ ಕ್ಲಿಕ್ ಮಾಡಿ. Available menus ನಡಿಯಲ್ಲಿ ಎಲ್ಲಾ ಮೆನುಗಳನ್ನು ಅನ್-ಚೆಕ್ ಮಾಡಿ.
04:17 ಇದು content editor, ನಮ್ಮ menu structure ಗೆ ಸಾವಿರಾರು 'ಇವೆಂಟ್' ಗಳನ್ನು ಸೇರಿಸುವುದನ್ನು ತಪ್ಪಿಸುತ್ತದೆ.
04:24 ಇದು, ಬೇರೆಯವರು ನಮ್ಮ ಮೆನು ಗೆ 'ಇವೆಂಟ್' ಗಳನ್ನು ಸೇರಿಸುವುದಕ್ಕೆ ಒಪ್ಪಿಗೆ ಇಲ್ಲವೆಂದು ಖಚಿತ ಪಡಿಸುತ್ತದೆ.
04:31 ಮುಂದೆ ನಾವೇ 'ಇವೆಂಟ್' ಅನ್ನು ಸೇರಿಸಬಯಸಿದರೆ ನಾವು ಮಾಡಬಹುದು.
04:37 Save and manage fields ಮೇಲೆ ಕ್ಲಿಕ್ ಮಾಡಿ.
04:40 ಒಮ್ಮೆ ನಮ್ಮ Events Content type ಸೇವ್ ಆದರೆ ನಾವು Body ಫೀಲ್ಡ್ ಅನ್ನು ಕಾಣಬಹುದು.
04:45 ಬಲ ಭಾಗದಲ್ಲಿರುವ Edit ಮೇಲೆ ಕ್ಲಿಕ್ ಮಾಡಿ ಮತ್ತು Label ಅನ್ನು Event Description ಗೆ ಬದಲಾಯಿಸಿ.
04:55 ಕೆಳಭಾಗದಲ್ಲಿರುವ Save settings ಬಟನ್ ಮೇಲೆ ಕ್ಲಿಕ್ ಮಾಡಿ.
04:59 ನಾವು ಈಗ ತಾನೇ ದ್ರುಪಲ್ ನಲ್ಲಿ ನಮ್ಮ ಹೊಸ Custom Content type ಅನ್ನು ರಚನೆ ಮಾಡಿದ್ದೇವೆ.
05:04 ಪ್ರಸ್ತುತವಾಗಿ ಇದು ಮಿತಿಯಲ್ಲಿದೆ. Title ಮತ್ತು Body ಗಳು basic pageಗೆ ಸಮನಾಗಿವೆ.
05:13 ಮುಂದೆ ನಾವು ಕಾಗದದಲ್ಲಿ ಡಿಸೈನ್ ಮಾಡಿರುವಂತೆ ಅನೇಕ ಫೀಲ್ಡ್ ಗಳನ್ನು ಸೇರಿಸುತ್ತೇವೆ ಮತ್ತು ಇದು ತುಂಬಾ ಉಪಯುಕ್ತವಾಗಿದೆ.
05:23 ಮೇಲ್ಭಾಗದಲ್ಲಿರುವ Add field ಬಟನ್ ಮೇಲೆ ಕ್ಲಿಕ್ ಮಾಡಿ.
05:27 Select a field type ಡ್ರಾಪ್ ಡೌನ್ ನಲ್ಲಿ Image ಎಂದು ಬದಲಿಸಿ ಮತ್ತು Label field ನಲ್ಲಿ "Event Logo" ಎಂದು ಟೈಪ್ ಮಾಡಿ.
05:36 Save and continue. ಅನ್ನು ಕ್ಲಿಕ್ ಮಾಡಿ.
05:39 ಅವಶ್ಯವಿದ್ದಲ್ಲಿ Choose file ಬಟನ್ ಅನ್ನು ಕ್ಲಿಕ್ ಮಾಡಿ ನಾವು ಬೇಕಾದ ಇಮೇಜ್ ಅನ್ನು ಅಪ್ಲೋಡ್ ಮಾಡಬಹುದು.
05:48 ಅವಶ್ಯವಿದ್ದಲ್ಲಿ ನಾವು ಡಿಫಾಲ್ಟ್ Alternative text ಅನ್ನೂ ಸೇರಿಸಬಹುದು.
05:54 ನಾವು ಪ್ರತಿಯೊಂದು 'ಇವೆಂಟ್' ಗೂ ಒಂದು ಲೋಗೋ ಎಂಬ ಮಿತಿಯನ್ನು ಇಟ್ಟುಕೊಳ್ಳೋಣ. Save field settings ಅನ್ನು ಕ್ಲಿಕ್ ಮಾಡಿ.
06:02 ನಾವು ಈಗ Event logo field ಗೆ ಸೆಟ್ಟಿಂಗ್ ಗಳನ್ನು ಮಾಡಬೇಕು.
06:07 ಇವೆಲ್ಲವೂ ಸಂದರ್ಭೋಚಿತವಾಗಿದೆ ಮತ್ತು field type ಅನ್ನು ಅವಲಂಬಿಸಿದೆ.
06:11 ನಾವು ಇಲ್ಲಿ ನಮ್ಮ content editor ಗಳಿಗೆ ಸಹಾಯವನ್ನು ಅಥವಾ ಮಾಹಿತಿಯನ್ನು ಸೇರಿಸಬಹುದು.
06:18 ನಾವು ಇಲ್ಲಿ Required field ಬಾಕ್ಸ್ ಅನ್ನು ಚೆಕ್ ಮಾಡಬಹುದು. ಹಾಗೆ ಮಾಡಿದರೆ content item ಅಥವಾ ನೋಡ್ ಅನ್ನು 'ಇವೆಂಟ್' ಲೋಗೊ ವನ್ನು ಸೇರಿಸುವವರೆಗೂ ಸೇವ್ ಮಾಡಲು ಆಗುವುದಿಲ್ಲ.
06:30 ನಾವು ಇಲ್ಲಿ ಸೇರಿಸಬಹುದಾದ file extension ಅನ್ನು ಬದಲಿಸಬಹುದು. ಇಲ್ಲಿ bitmap ಅನ್ನು ಸೇರಿಸುವುದನ್ನು ಶಿಫಾರಸು ಮಾಡಿಲ್ಲ.
06:38 ಫೈಲ್ ಡೈರಕ್ಟರಿಯು ಡಿಫಾಲ್ಟ್ ಆಗಿ ವರ್ಷ ಮತ್ತು ತಿಂಗಳುಗಳಿಂದ ತುಂಬಿರುತ್ತದೆ. ಅವಶ್ಯವಿದ್ದಲ್ಲಿ ನಾವು ಇದನ್ನು ಬದಲಿಸಬಹುದು.
06:47 ಉದಾಹರಣೆಗೆ, ನೀವು ಇಮೇಜ್ ನೊಂದಿಗೆ ಹಲವಾರು Content type ಗಳನ್ನು ಹೊಂದಿರಬಹುದು.
06:53 ನಂತರ ನೀವು events ಎಂಬ ಪ್ರಿಫಿಕ್ಸ್ ಅನ್ನು ಸೇರಿಸಬಹುದು. ಹಾಗಾಗಿ, Events Content type ನ ಎಲ್ಲಾ ಇಮೇಜ್ ಗಳೂ ಒಂದೇ ಫೈಲ್ ಡೈರಕ್ಟರಿಯಲ್ಲಿರಬಹುದು.
07:04 'ದ್ರುಪಲ್' ನಮಗೆ ಬೇಕಾದ ಹೆಸರಿಡಲು ಅವಕಾಶ ಕೊಟ್ಟಿದೆ. ಆದರೆ ಹೆಸರಿಡುವಾಗ ಜೋಪಾನವಾಗಿರಿ ಏಕೆಂದರೆ ನಾವು ನಂತರ ಇದನ್ನು ಸುಲಭವಾಗಿ ಬದಲಿಸಲು ಸಾಧ್ಯವಿಲ್ಲ.
07:14 ನಾವು Maximum ಮತ್ತು Minimum image resolution ಅನ್ನೂ ಮತ್ತು Maximum upload size ಅನ್ನೂ ಸೆಟ್ ಮಾಡಬಹುದು.
07:21 ಇಲ್ಲಿ ಬದಲಾವಣೆಗಳನ್ನು ಮಾಡುವ ಮೊದಲು ನಿಧಾನವಾಗಿ ಯೋಚಿಸಿ. ನೀವು 2 ಅಥವಾ 3 ಮೆಗಾಪಿಕ್ಸೆಲ್ ನ ಇಮೇಜ್ ಅನ್ನು ಅಪ್ಲೋಡ್ ಮಾಡುತ್ತೀರೆಂದು ಊಹಿಸಿಕೊಳ್ಳಿ.
07:28 ನೀವು ನಿಮ್ಮ wysiwyg editor ಅನ್ನು ಉಪಯೋಗಿಸುತ್ತಿದ್ದೀರಿ. ಇದನ್ನು ಕೆಲವು ನೂರು ಪಿಕ್ಸಲ್ ಗೆ ಕುಗ್ಗಿಸಿ.
07:35 ದ್ರುಪಲ್ ಈಗಲೂ 2 ಮೆಗಾ ಪಿಕ್ಸಲ್ ಇಮೇಜ್ ಅನ್ನೇ ಅಪ್ಲೋಡ್ ಮಾಡುತ್ತದೆ. ಇದು ನಿಜವಾಗಿಯೂ ನಿರಾಶಾದಯಕ.
07:41 ಅವರು ಮೊಬೈಲ್ ಅನ್ನು ಉಪಯೋಗಿಸುತ್ತಿದ್ದರೆ ತುಂಬ ಕಷ್ಟ ಮತ್ತು ಅವಶ್ಯವಿಲ್ಲದಿದ್ದರೂ ಡಾಟಾ ಪ್ಲ್ಯಾನ್ ನಲ್ಲಿ 2 ಮೆಗಾಬೈಟ್ ವ್ಯಯವಾಗುತ್ತದೆ.
07:51 ಹಾಗಾಗಿ ಅಪ್ಲೋಡ್ ಮಾಡುವ ಮೊದಲು ನಾವು ನಮ್ಮ ಇಮೇಜ್ ಸರಿಯಾಗಿ ಸೆಟ್ ಆಗಿದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು.
07:57 ಇಮೇಜ್ ನ ಗರಿಷ್ಟ ಗಾತ್ರ ಮತ್ತು ಕನಿಷ್ಟ ಗಾತ್ರ ಎಷ್ಟಿರಬೇಕು ಎಂದು ತಿಳಿದಿರಬೇಕು.
08:03 Minimum Image resolution, ತುಂಬ ಪ್ರಮುಖವಾದದ್ದು.
08:08 ಈ ಫೀಲ್ಡ್, ನೀವು ಡಿಸ್ಪ್ಲೇ ಮಾಡುವ ಇಮೇಜ್ ನ ಗರಿಷ್ಠ ಗಾತ್ರಕ್ಕಿಂತ ಚಿಕ್ಕದಾಗಿರಬಾರದು.
08:14 ಇದು ದ್ರುಪಾಲ್ ಅನ್ನು ಇಮೇಜ್ ನ ನೈಜ ಗಾತ್ರದಿಂದ 'ಸ್ಕೇಲಿಂಗ್' ಮಾಡುವುದನ್ನು ಮತ್ತು ಪಿಕ್ಸಲೇಟೆಡ್ ಮಾಡುವುದನ್ನೂ ತಪ್ಪಿಸುತ್ತದೆ.
08:21 ನಿಮ್ಮ Maximum Image resolution ಅನ್ನು 1000 x 1000 ಗೆ ಸೆಟ್ ಮಾಡಿ.
08:26 ನಿಮ್ಮ Minimum Image resolution ಅನ್ನು 100 x 100 ಕ್ಕೆ ಸೆಟ್ ಮಾಡಿ.
08:31 Maximum upload size ಅನ್ನು 80 KB ಎಂದು ಮಾಡಿ.
08:36 ದ್ರುಪಾಲ್ ಏನು ಮಾಡುತ್ತದೆ ಎಂದರೆ ಇಮೇಜ್ ಅನ್ನು 1000 ಬೈ 1000 ಕ್ಕೆ ಕುಗ್ಗಿಸುತ್ತದೆ ಮತ್ತು ಇದನ್ನು 80 ಕಿಲೊ ಬೈಟ್ಸ್ ಮಾಡುತ್ತದೆ.
08:44 ಮತ್ತು ಇದು ಸಾಧ್ಯವಾಗದಿದ್ದಲ್ಲಿ ದ್ರುಪಲ್ ಇಮೇಜ್ ಅನ್ನು ತಿರಸ್ಕರಿಸುತ್ತದೆ.
08:48 ಈ ಇಮೇಜ್ ಅನ್ನು 600 ಬೈ 600 ಪಿಕ್ಸಲ್ ಆಗಿ ಮಾಡುವುದು ಉತ್ತಮ.
08:56 Enable Alt field ಮತ್ತು Alt field required ಚೆಕ್ ಬಾಕ್ಸ್ ಗಳನ್ನು ಚೆಕ್ ಮಾಡೋಣ.
09:02 ನಂತರ Save settings ಅನ್ನು ಕ್ಲಿಕ್ ಮಾಡಿ.
09:05 ಈಗ ನಾವು ನಮ್ಮ Content type ಗೆ ಒಂದು Event Logo ಫೀಲ್ಡ್ ಅನ್ನು ಹೊಂದಿದ್ದೇವೆ.
09:09 ಈಗ Add fieldಅನ್ನು ಕ್ಲಿಕ್ ಮಾಡಿ ಇನ್ನೊಂದು ಹೊಸ ಫೀಲ್ಡ್ ಅನ್ನು ಸೇರಿಸೋಣ.
09:12 Add a new field ಡ್ರಾಪ್ ಡೌನ್ ನಲ್ಲಿ Link ಅನ್ನು ಸೇರಿಸಿ. Label field ನಲ್ಲಿ "Event Website" ಎಂದು ಟೈಪ್ ಮಾಡೋಣ.
09:22 Save and continue. ಅನ್ನು ಕ್ಲಿಕ್ ಮಾಡಿ.
09:25 ತಕ್ಷಣವೇ ನಾವು Allowed number of values ನಮೂದಿಸಲು ಕೇಳಲ್ಪಡುತ್ತೇವೆ. ಇಲ್ಲಿ ನಾವು 1 ಅನ್ನು ಹೊಂದಿದ್ದೇವೆ.
09:34 Save Field Setting ಅನ್ನು ಕ್ಲಿಕ್ ಮಾಡಿ. ಮತ್ತೊಮ್ಮೆ ಈ ಪರದೆಯು ನಮಗೆ ನಮ್ಮ Link ಫೀಲ್ಡ್ ಗೆ ಸಂದರ್ಭೋಚಿತ ಸೆಟ್ಟಿಂಗ್ಸ್ ಗಳನ್ನು ಕೊಡುತ್ತದೆ.
09:43 Allowed Link type ನಡಿಯಲ್ಲಿ, ನಾವು - Internal links only, External links only ಮತ್ತು Both internal and external links ಎಂಬ ಆಯ್ಕೆಗಳನ್ನು ಹೊಂದಿದ್ದೇವೆ.
09:54 ನಂತರ ನಾವು Allow link text ಅನ್ನು Disabled, Optional ಅಥವಾ Required ಎಂದು ಸೂಚಿಸಬಹುದು.
10:04 ನಾವು ಈಗ ಇದನ್ನು Optional ಎಂದು ಬಿಟ್ಟು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನೋಡೋಣ.
10:09 ಮುಂದೆ ಹೋಗಿ Save settings ಅನ್ನು ಕ್ಲಿಕ್ ಮಾಡಿ. ಮತ್ತೊಮ್ಮೆ Add field ಅನ್ನು ಕ್ಲಿಕ್ ಮಾಡಿ.
10:15 ಈ ಬಾರಿ ನಾವು Date field ಅನ್ನು ಆರಿಸಿಕೊಳ್ಳಲಿದ್ದೇವೆ.
10:20 Label ಅನ್ನು Event Date ಎಂದು ಟೈಪ್ ಮಾಡಿ.
10:24 Save and continue. ಅನ್ನು ಕ್ಲಿಕ್ ಮಾಡಿ.
10:26 value ವನ್ನು 1 ಎಂದು ಬಿಡೋಣ. Date type ಡ್ರಾಪ್ ಡೌನ್ ನಲ್ಲಿ, Date only ಆಯ್ಕೆಯನ್ನು ಆರಿಸಿಕೊಳ್ಳೋಣ.
10:34 Save field settings ಕ್ಲಿಕ್ ಮಾಡಿ. ಇನ್ನೊಮ್ಮೆ ಸಂದರ್ಭೋಚಿತ ಸೆಟ್ಟಿಂಗ್ ಪೇಜ್ ಅನ್ನು ಪಡೆಯುತ್ತೇವೆ. ಪುನಃ ನಾವು contextual settings page ಅನ್ನು ಪಡೆಯುತ್ತೇವೆ.
10:43 ಇಲ್ಲಿ Default date ಅನ್ನು Current date ಗೆ ಬದಲಿಸಿ.
10:47 Save settings ಅನ್ನು ಕ್ಲಿಕ್ ಮಾಡಿ.
10:49 ಈಗ ಇಲ್ಲಿ ಇನ್ನೂ ಎರಡು ಫೀಲ್ಡ್ ಗಳು ಸೇರಿಸಲಿಕ್ಕಿವೆ. ಆದರೆ ನಾವು ಈಗ ಅದನ್ನು ಸೇರಿಸಲಾಗುವುದಿಲ್ಲ.
10:55 ಇವುಗಳನ್ನು ನಾವು ನಮ್ಮ ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ. ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
11:03 ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ಹೊಸ Content type ಅನ್ನು ರಚನೆ ಮಾಡುವುದು ಮತ್ತು ಕಂಟೆಂಟ್ ಟೈಪ್ ಗೆ ಹೊಸ ಫೀಲ್ಡ್ ಗಳನ್ನು ಸೇರಿಸುವುದನ್ನು ಕಲಿತಿದ್ದೇವೆ.
11:28 ಈ ವೀಡಿಯೋವನ್ನು Acquia ಮತ್ತು OSTraining ಗಳಿಂದ ಪಡೆದುಕೊಳ್ಳಲಾಗಿದೆ ಮತ್ತು Spoken Tutorial Project, IIT Bombay ಇವರಿಂದ ಪುನರಾವರ್ತಿಸಲಾಗಿದೆ.
11:39 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ನ ಕುರಿತು ತಿಳಿಸಿಕೊಡುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
11:46 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪ ತಂಡವು ಇದರ ಕಾರ್ಯಾಗಾರವನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣಪತ್ರವನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ.
11:55 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್- ಇದು NMEICT, Ministry of Human Resource Development ಮತ್ತು NVLI,Ministry of Culture ಭಾರತ ಸರ್ಕಾರ- ಇವುಗಳಿಂದ ಪ್ರಾಯೋಜಿತವಾಗಿದೆ.
12:09 ಅನುವಾದ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ ಉಪ್ಪಿನ ಪಟ್ಟಣ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble, Sandhya.np14