Difference between revisions of "Inkscape/C2/Basics-of-Bezier-Tool/Kannada"

From Script | Spoken-Tutorial
Jump to: navigation, search
Line 1: Line 1:
 
{| Border = 1
 
{| Border = 1
| Time
+
| '''Time'''
| Narration
+
|'''Narration'''
  
 
|-
 
|-
Line 11: Line 11:
 
|-
 
|-
 
| 00:08
 
| 00:08
|* ಸರಳರೇಖೆ ಮತ್ತು ಮುಚ್ಚಿದ ಆಕೃತಿಗಳನ್ನು ಚಿತ್ರಿಸಲು,
+
| ಸರಳರೇಖೆ ಮತ್ತು ಮುಚ್ಚಿದ ಆಕೃತಿಗಳನ್ನು ಚಿತ್ರಿಸಲು,
 
|-
 
|-
 
| 00:11
 
| 00:11
|* ವಕ್ರರೇಖೆಯನ್ನು ಚಿತ್ರಿಸಲು   
+
|ವಕ್ರರೇಖೆಯನ್ನು ಚಿತ್ರಿಸಲು   
 
|-
 
|-
 
| 0013
 
| 0013
|* ಮತ್ತು ನೋಡ್ ಗಳನ್ನು ಸೇರಿಸುವುದು, ಎಡಿಟ್ ಮಾಡುವುದು ಮತ್ತು ಅಳಿಸುವುದನ್ನು ಕಲಿಯುತ್ತೇವೆ.
+
|  ಮತ್ತು ನೋಡ್ ಗಳನ್ನು ಸೇರಿಸುವುದು, ಎಡಿಟ್ ಮಾಡುವುದು ಮತ್ತು ಅಳಿಸುವುದನ್ನು ಕಲಿಯುತ್ತೇವೆ.
 
  |-
 
  |-
 
| 00:15
 
| 00:15
Line 23: Line 23:
 
|-
 
|-
 
| 00:18
 
| 00:18
|* '''Ubuntu Linux''' 12.04 ಆಪರೇಟಿಂಗ್ ಸಿಸ್ಟಮ್  
+
| '''Ubuntu Linux''' 12.04 ಆಪರೇಟಿಂಗ್ ಸಿಸ್ಟಮ್  
 
|-
 
|-
 
| 00:21
 
| 00:21
|* '''Inkscape''' ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ.
+
| '''Inkscape''' ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ.
 
|-
 
|-
 
| 00:24
 
| 00:24
Line 374: Line 374:
 
|-
 
|-
 
| 10:37
 
| 10:37
|* ಸರಳ ರೇಖೆ ಮತ್ತು ಮುಚ್ಚಿದ ಆಕೃತಿಯನ್ನು ಚಿತ್ರಿಸುವುದು,
+
| ಸರಳ ರೇಖೆ ಮತ್ತು ಮುಚ್ಚಿದ ಆಕೃತಿಯನ್ನು ಚಿತ್ರಿಸುವುದು,
 
|-
 
|-
| 10:39
+
|10:39
|* ವಕ್ರರೇಖೆಯನ್ನು ಚಿತ್ರಿಸುವುದು  
+
| ವಕ್ರರೇಖೆಯನ್ನು ಚಿತ್ರಿಸುವುದು  
 
|-
 
|-
 
| 10:41
 
| 10:41
|* ಮತ್ತು ನೋಡ್ ಗಳನ್ನು ಸೇರಿಸುವುದು, ಎಡಿಟ್ ಮಾಡುವುದು ಮತ್ತು ಅಳಿಸುವುದನ್ನು ಕಲಿತಿದ್ದೇವೆ.
+
| ಮತ್ತು ನೋಡ್ ಗಳನ್ನು ಸೇರಿಸುವುದು, ಎಡಿಟ್ ಮಾಡುವುದು ಮತ್ತು ಅಳಿಸುವುದನ್ನು ಕಲಿತಿದ್ದೇವೆ.
 
  |-
 
  |-
 
| 10:43
 
| 10:43
Line 401: Line 401:
 
  |-
 
  |-
 
| 11:05
 
| 11:05
|   
+
|  Spoken Tutorial Project Team  ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ  
Spoken Tutorial Project Team  ಇದು  
+
*spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ.  
+
* online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ  
+
 
|-
 
|-
 
| 11:12
 
| 11:12

Revision as of 17:09, 22 February 2017

Time Narration
00:00 Inkscape ನಲ್ಲಿ“Basics of Bezier tool” ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು
00:08 ಸರಳರೇಖೆ ಮತ್ತು ಮುಚ್ಚಿದ ಆಕೃತಿಗಳನ್ನು ಚಿತ್ರಿಸಲು,
00:11 ವಕ್ರರೇಖೆಯನ್ನು ಚಿತ್ರಿಸಲು
0013 ಮತ್ತು ನೋಡ್ ಗಳನ್ನು ಸೇರಿಸುವುದು, ಎಡಿಟ್ ಮಾಡುವುದು ಮತ್ತು ಅಳಿಸುವುದನ್ನು ಕಲಿಯುತ್ತೇವೆ.
00:15 ಈ ಟ್ಯುಟೋರಿಯಲ್ ಗಾಗಿ ನಾನು
00:18 Ubuntu Linux 12.04 ಆಪರೇಟಿಂಗ್ ಸಿಸ್ಟಮ್
00:21 Inkscape ಆವೃತ್ತಿ 0.48.4 ಗಳನ್ನು ಉಪಯೋಗಿಸುತ್ತೇನೆ.
00:24 ನಾನು ಈ ಟ್ಯುಟೋರಿಯಲ್ ಅನ್ನು ಗರಿಷ್ಠ ರೆಸೊಲ್ಯುಷನ್ ಮೋಡ್ ನಲ್ಲಿ ರೆಕಾರ್ಡ್ ಮಾಡುತ್ತೇನೆ.
00:28 ಏಕೆಂದರೆ ಇದು ಟೂಲ್ಸ್ ಗಳನ್ನು ತೋರಿಸಲು ಅವಕಾಶ ಕಲ್ಪಿಸಿಕೊಡುತ್ತದೆ.
00:32 Inkscape ಅನ್ನು ತೆರೆಯೋಣ.
00:35 ಮೊದಲು Bezier tool ಅನ್ನು ಉಪಯೋಗಿಸಿ ಒಂದು ಸರಳರೇಖೆಯನ್ನು ಚಿತ್ರಿಸೋಣ.
00:39 Bezier tool ಇದು Pencil tool ನ ಕೆಳಗಡೆ ಇರುತ್ತದೆ.
00:42 ಅದರ ಮೇಲೆ ಕ್ಲಿಕ್ ಮಾಡೋಣ.
00:44 ಮೇಲ್ಗಡೆ ಎಡಭಾಗದಲ್ಲಿರುವ Tool controls bar ನಲ್ಲಿರುವ 4 ಆಯ್ಕೆಗಳನ್ನು ಗಮನಿಸಿ.
00:48 Bezier curve ಚಿತ್ರಿಸಲು ನಾಲ್ಕು ವಿಧಾನಗಳಿವೆ.
00:51 Create regular Bezier path ಆಯ್ಕೆಯು ಡಿಫಾಲ್ಟ್ ಆಗಿ ಸಕ್ರಿಯವಾಗಿರುತ್ತದೆ.
00:57 canvas ಮೇಲೆ ಒಮ್ಮೆ ಕ್ಲಿಕ್ ಮಾಡಿ ಮತ್ತು ಕರ್ಸರ್ ಅನ್ನು ಇನ್ನೊಂದು ತುದಿಗೆ ಚಲಿಸಿ.
01:01 ಇನ್ನೊಮ್ಮೆ ಕ್ಲಿಕ್ ಮಾಡಿ. ಗಮನಿಸಿ ಚಿತ್ರಿಸಿದ ರೇಖೆಯು ಹಸಿರು ಬಣ್ಣದಿಂದ ಗುರ್ತಿಸಲ್ಪಟ್ಟಿದೆ.
01:07 ರೇಖೆಯನ್ನು ಪೂರ್ಣಗೊಳಿಸಲು right-click ಮಾಡಿ.
01:11 ರೇಖೆಯ ಎರಡು ಕೊನೆಯ ಬಿಂದುಗಳನ್ನು nodes ಎಂದು ಕರೆಯುತ್ತಾರೆ. ಇದರ ಕುರಿತು ಮುಂದೆ ತಿಳಿಯೋಣ.
00:17 ಈಗ ನಾವು ಒಂದು ತ್ರಿಭುಜವನ್ನು ರಚಿಸೋಣ.
01:21 ಮೊದಲು, ಒಂದು ವಾಲಿರುವ ರೇಖೆಯನ್ನು ಎಳೆಯಿರಿ, ಒಮ್ಮೆ ಕ್ಲಿಕ್ ಮಾಡಿ ಕೋನವಾಗುವಂತೆ ಇನ್ನೊಂದು ರೇಖೆಯನ್ನು ರಚಿಸಿ.
01:27 ಈಗ ತ್ರಿಕೋನವನ್ನು ಪೂರ್ಣಗೊಳಿಸಲು ಇನ್ನೊಮ್ಮೆ ಕ್ಲಿಕ್ ಮಾಡಿ ಮೂರನೇ ರೇಖೆಯನ್ನು ಎಳೆದು ಪ್ರಾರಂಭದ node ಗೆ ಸೇರಿಸಿ.
01:34 ನಂತರ ನಾವು Bezier tool ಅನ್ನು ಉಪಯೋಗಿಸಿ ವಕ್ರ ರೇಖೆಯನ್ನು ರಚಿಸೋಣ.
01:38 ಕ್ಯಾನ್ವಾಸ್ ಮೇಲೆ ಕ್ಲಿಕ್ ಮಾಡಿ ಸರಳರೇಖೆಯನ್ನು ರಚಿಸಿ. ವಕ್ರ ರೇಖೆಯನ್ನಾಗಿಸಲು ಇನ್ನೊಮ್ಮೆ ಕ್ಲಿಕ್ ಮಾಡಿ ಮತ್ತು ಮೌಸ್ ಗುಂಡಿಯನ್ನು ಒತ್ತಿ ಹಿಡಿದು ಎಳೆಯಿರಿ.
01:46 ತಿರುವನ್ನು ಮುಗಿಸಲು ರೈಟ್ ಕ್ಲಿಕ್ ಮಾಡಿ.
01:48 ಇದೇ ರೀತಿಯಲ್ಲಿ ಇನ್ನು ಕೆಲವು ತಿರುವುಳ್ಳ ಆಕೃತಿಗಳನ್ನು ಕ್ಯಾನ್ವಾಸ್ ಮೇಲೆ ಚಿತ್ರಿಸಿ.
01:55 ಈ ಹಂತಗಳನ್ನು ನೆನಪಿಡಿ- 1. ಕ್ಲಿಕ್ ಮಾಡಿ ಸರಳ ರೇಖೆಯನ್ನು ಚಿತ್ರಿಸುವುದು,
01:59 2. ಇನ್ನೊಮ್ಮೆ ಕ್ಲಿಕ್ ಮಾಡಿ , ಮತ್ತು ಮೌಸ್ ಗುಂಡಿಯನ್ನು ಒತ್ತಿಕೊಂಡು ಎಳೆದು ವಕ್ರ ರೇಖೆಯನ್ನು ರಚಿಸುವುದು.
02:03 3. ತಿರುವನ್ನು ಮುಗಿಸಲು ರೈಟ್ ಕ್ಲಿಕ್ ಮಾಡುವುದು.
02:06 ಮುಂದುವರೆಯುವ ಮೊದಲು ಕ್ಯಾನ್ ವಾಸ್ ಅನ್ನು ಖಾಲಿ ಮಾಡಲು Ctrl A ಯನ್ನು ಒತ್ತಿ.
02:11 ಈಗ ನಾವು ಮುಚ್ಚಿದ ವಕ್ರಪಥವನ್ನು ಚಿತ್ರಿಸಲು ಕಲಿಯೋಣ.
02:15 ಮೊದಲು ಕ್ಯಾನ್ವಾಸ್ ಮೇಲೆ ಒಂದು ವಕ್ರರೇಖೆಯನ್ನು ಚಿತ್ರಿಸಿ.
02:18 ನಂತರ mouse ಬಿಡಿ ಮತ್ತು ಕರ್ಸರ್ ಅನ್ನು ವಕ್ರರೇಖೆಯ ಕೊನೆಯ ನೋಡ್ ನಿಂದ ದೂರ ಸರಿಸಿ.
02:23 ನಾವು ವಕ್ರಪಥವನ್ನು ಕೆಂಪು ಬಣ್ಣದಲ್ಲಿ ಕಾಣುತ್ತೇವೆ.
02:27 ಇನ್ನೊಮ್ಮೆ ಕ್ಲಿಕ್ ಮಾಡಿ ಕರ್ಸರ್ ಅನ್ನು ಚಲಿಸಿದರೆ ನೇರವಾದ ಪಥವನ್ನು ಕೆಂಪು ಬಣ್ಣದಲ್ಲಿ ಕಾಣುತ್ತೇವೆ. ಇದನ್ನು ವಕ್ರಗೊಳಿಸಲು ಕ್ಲಿಕ್ ಮಾಡಿ ಎಳೆಯಿರಿ.
02:36 ಮತ್ತೆ ಕೊನೆಯ ನೋಡ್ ನಲ್ಲಿ ನಾವು ಕರ್ಸರ್ ಅನ್ನು ಚಲಿಸಿದಂತೆ ರೇಖೆಯು ತಿರುಗಿಕೊಳ್ಳುತ್ತದೆ.
02:41 ಮತ್ತೆ ಕ್ಲಿಕ್ ಮಾಡಿ; ನಾವು ನೇರವಾದ ಪಥವನ್ನು ಕೆಂಪು ಬಣ್ಣದಲ್ಲಿ ಕಾಣುತ್ತೇವೆ. ಇದನ್ನು ವಕ್ರಗೊಳಿಸಲು ಕ್ಲಿಕ್ ಮಾಡಿ ಎಳೆಯಿರಿ.
02:50 ಮತ್ತೆ ಕೊನೆಯ ನೋಡ್ ನಲ್ಲಿ ನಾವು ಕರ್ಸರ್ ಅನ್ನು ಚಲಿಸಿದಂತೆ ರೇಖೆಯು ತಿರುಗಿಕೊಳ್ಳುತ್ತದೆ. ಕರ್ಸರ್ ಅನ್ನು ಪ್ರಾರಂಭದ ನೋಡ್ ಗೆ ತೆಗೆದುಕೊಂಡು ಹೋಗಿ ಪಥವನ್ನು ಮುಚ್ಚಿ.
02:59 Tool controls bar ಗೆ ಹೋಗಿ. ಮೋಡ್ ನ ಎರಡನೇ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
03:08 ಕೆಲವು ಅನಿಯಮಿತ ತಿರುವುಗಳನ್ನು ಚಿತ್ರಿಸಿ ಪಥವನ್ನು ಪೂರ್ಣಗೊಳಿಸಿ.
03:15 ಗಮನಿಸಿ ಇದು ಸಮೀಪದ ಸುರುಳಿ ಆಕಾರಕ್ಕೆ ರೂಪಾಂತರಗೊಳ್ಳುತ್ತದೆ.ಈಗ ಕ್ಯಾನ್ವಾಸ್ ಅನ್ನು ಖಾಲಿ ಮಾಡೋಣ.
03:22 ಮೂರನೇ ಐಕಾನ್ ಕೇವಲ ಸರಳ ರೇಖೆಯನ್ನು ಮಾತ್ರ ಚಿತ್ರಿಸುತ್ತದೆ.ಅದರ ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ನ ಮೇಲೆ ರೇಖೆಗಳನ್ನು ಚಿತ್ರಿಸಿ.
03:29 ಗಮನಿಸಿ ಈ ರೀತಿಯಲ್ಲಿ ವಕ್ರರೇಖೆಯನ್ನು ರಚಿಸಲು ಸಾಧ್ಯವಿಲ್ಲ.
03:32 ನಾವು ನೇರ ಬಾಹುಗಳಿರುವ ತ್ರಿಭುಜ ಅಥವಾ ಬಹುಭುಜಾಕೃತಿಗಳನ್ನು ಚಿತ್ರಿಸಬಹುದು.
03:40 ಕೊನೆಯ ಐಕಾನ್ ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ಮೇಲೆ ಚಿತ್ರಿಸಿ.
03:44 ಇದರಲ್ಲಿ ನಾವು ಕೇವಲ ಸಮಾಂತರ ಮತ್ತು ಲಂಬ ರೇಖೆಗಳನ್ನು ಮಾತ್ರ ಚಿತ್ರಿಸಬಹುದು.ಅಂದರೆ ಅಡ್ಡಗೆರೆ ಅಥವಾ ಲಂಬರೇಖೆ.
03:52 ಹಾಗಾಗಿ ನಾವು ಈ ಮೋಡ್ ನಲ್ಲಿ ಚೌಕ ಮತ್ತು ಆಯತಾಕಾರಗಳನ್ನು ಚಿತ್ರಿಸ ಬಹುದು.
03:58 ಈಗ ಬಿಡಿಸಿರುವ ಎಲ್ಲಾ ಆಕೃತಿಗಳನ್ನು ಅಳಿಸೋಣ.
04:02 Shape ಆಯ್ಕೆಯು ರೇಖೆ ಅಥವಾ ತಿರುವುಗಳನ್ನು ಉಪಯೋಗಿಸಿ ನಿರ್ದಿಷ್ಟವಾದ ಆಕೃತಿಯನ್ನು ರಚಿಸಲು ಸಹಾಯ ಮಾಡುತ್ತದೆ.
04:07 ಡ್ರಾಪ್ ಡೌನ್ ಬಟ್ಟನ್ ಮೇಲೆ ಕ್ಲಿಕ್ ಮಾಡಿ.
04:09 ಇಲ್ಲಿ 5 ಆಯ್ಕೆಗಳಿವೆ- None, Triangle in, Triangle out, Ellipse, From clipboard.
04:18 ಮೊದಲ ಆಯ್ಕೆ None ಇದು ಯಾವ ಪರಿಣಾಮವನ್ನೂ ಕೊಡುವುದಿಲ್ಲ.ಹಾಗಾಗಿ Triangle in ಆಯ್ಕೆಗೆ ಹೋಗೋಣ.
04:25 ಅದರ ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ಮೇಲೆ ರೇಖೆಯನ್ನು ಚಿತ್ರಿಸಿ.
04:28 ರೇಖೆಯು ಒಳಮುಖವಾಗಿ ತ್ರಿಭುಜಾಕೃತಿಗೆ ರೂಪಾಂತರ ಗೊಳ್ಳುತ್ತದೆ.
04:34 ನಂತರ Triangle out ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ಮೇಲೆ ರೇಖೆಯನ್ನು ಚಿತ್ರಿಸಿ.
04:39 ಈಗ ತ್ರಿಭುಜಾಕೃತಿಯು ಹೊರಮುಖವಾಗಿ ರೂಪುಗೊಂಡಿದೆ.
04:43 Ellipse ಮೇಲೆ ಕ್ಲಿಕ್ ಮಾಡಿ ಕ್ಯಾನ್ವಾಸ್ ಮೇಲೆ ರೇಖೆಯನ್ನು ಚಿತ್ರಿಸಿ.
04:47 ಗಮನಿಸಿ ರೇಖೆಯು ಅಂಡಾಕೃತಿಯಲ್ಲಿದೆ.
04:50 ನಾವು ಕೊನೆಯ ಆಯ್ಕೆ From clipboard ನ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಕಲಿಯೋಣ.
04:56 ಈಗ node ಗಳನ್ನು ಸೇರಿಸುವುದು, ಅಳಿಸುವುದು ಮತ್ತು ಬದಲಾಯಿಸುವುದು ಹೇಗೆಂದು ನೋಡೋಣ.
05:00 ಇದನ್ನು Node tool ಅನ್ನು ಉಪಯೋಗಿಸಿ ಮಾಡಬಹುದು.
05:03 ಕ್ಯಾನ್ವಾಸ್ ನಲ್ಲಿರುವ ರೇಖೆಗಳನ್ನು ಅಳಿಸಿ.
05:06 Tool controls bar ಹೋಗಿ Mode ಅನ್ನು regular path ಎಂದೂ ಮತ್ತು Shape ಅನ್ನು None. ಎಂದೂ ಬದಲಿಸಿ.
05:13 ಕ್ಯಾನ್ವಾಸ್ ಗೆ ಹಿಂದಿರುಗಿ ಮತ್ತು ಮನುಷ್ಯರ ಹಸ್ತವನ್ನು ಬರೆಯಿರಿ.
05:23 ಈಗ Node ಮೇಲೆ ಕ್ಲಿಕ್ ಮಾಡಿ.
05:26 ಗಮನಿಸಿ ಈ ಚಿತ್ರದಲ್ಲಿರುವ ಎಲ್ಲಾ ನೋಡ್ ಗಳು ಗೋಚರಿಸುತ್ತಿವೆ.
05:30 Tool Controls bar ನ ಕಡೆ ನಿಮ್ಮ ಗಮನವನ್ನು ಹರಿಸಿ.
05:33 ಇಲ್ಲಿ ಮೊದಲ ಆರು ಐಕಾನ್ ಗಳು nodeಗಳು ಮತ್ತು path ಗಳನ್ನು ಸೇರಿಸಲು ಮತ್ತು ಅಳಿಸಲು ಸಹಾಯ ಮಾಡುತ್ತವೆ.
05:38 ಇದರ ಕುರಿತು ತಿಳಿಯಲು ಟೂಲ್ ಟಿಪ್ ಅನ್ನು ನೋಡಿ.
05:41 ಯಾವುದೇ ಒಂದು ಭಾಗದ ಮೇಲೆ ಕ್ಲಿಕ್ ಮಾಡಿ. ಆ ಭಾಗದ ಎರಡೂ ನೋಡ್ ಗಳು ನೀಲಿಯಾಗುವುದನ್ನು ಗಮನಿಸಿ.
05:48 ನಂತರ Add node ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
05:52 ಆಯ್ಕೆ ಮಾಡಿದ ಭಾಗದ ಎರಡು ನೋಡ್ ಗಳ ಮಧ್ಯದಲ್ಲಿ ಇನ್ನೊಂದು ನೋಡ್ ಅನ್ನು ಸೇರಿಸಿರುವುದನ್ನು ಗಮನಿಸಿ.
05:58 ಈಗ ಚಿಕ್ಕ ಭಾಗವನ್ನು ಆಯ್ಕೆಮಾಡಿಕೊಂಡು ಮೇಲಿನ ಹಂತಗಳನ್ನು ಪುನರಾವರ್ತಿಸಿ.
06:04 ಚಿಕ್ಕ ಭಾಗದ ಮಧ್ಯ ಬಿಂದುವಿನಲ್ಲಿ ಹೊಸ ನೋಡ್ ಅನ್ನು ಸೇರಿಸಿರುವುದನ್ನು ನೀವು ನೋಡಬಹುದು.
06:10 ಈಗ ಹೊಸದಾಗಿ ಸೇರಿಸಿದ ನೋಡನ್ನು ಆಯ್ಕೆ ಮಾಡಿಕೊಳ್ಳಿ.
06:13 Delete node ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ಆ ನೋಡ್ ಅಳಿಸಿ ಹೋಗಿದೆ.
06:18 ಹಸ್ತದ ಮೇಲಿರುವ ಯಾವುದಾದರೂ ಒಂದು node ನ ಮೇಲೆ ಕ್ಲಿಕ್ ಮಾಡಿ.
06:21 Bezier handles ಗೋಚರಿಸುವಂತೆ ಮಾಡಲು Tool controls bar ನ ಕೊನೆಯದಕ್ಕೂ ಮುಂಚಿನ ಐಕಾನ್ ಅನ್ನು ಕ್ಲಿಕ್ ಮಾಡಿ.
06:27 ಈಗ ಆಯ್ಕೆ ಮಾಡಿದ ಭಾಗಕ್ಕೆ Bezier handles ಗೋಚರವಾಗುತ್ತದೆ.
06:32 ಇಲ್ಲವಾದಲ್ಲಿ ಆ ಭಾಗದ ಮೇಲೆ ಒಮ್ಮೆ ಕ್ಲಿಕ್ ಮಾಡಿ ಮೌಸ್ ಅನ್ನು ಬಿಡದೇ ಒಂದು ಚೂರು ಸರಿಸಿ.
06:37 ಆ ಭಾಗವು ತಿರುಗುತ್ತದೆ ಮತ್ತು Bezier handles ಗೋಚರಿಸುತ್ತದೆ.
06:41 ಆಯ್ಕೆ ಮಾಡಿದ node ನ ಗಾತ್ರ ಬದಲಿಸಲು ಮತ್ತು ತಿರುಗಿಸಲು handles ನ ಮೇಲೆ ಕ್ಲಿಕ್ ಮಾಡಿ.
06:45 ಇದೇ ರೀತಿಯಲ್ಲಿ ಉಳಿದ ನೋಡ್ ಗಳನ್ನೂ ಮಾರ್ಪಡಿಸಿ.
07:04 ಮುಂದಿನ ಐಕಾನ್ node ಗಳನ್ನು ಸಂಯೋಜಿಸಲು ಸಹಾಯ ಮಾಡುತ್ತದೆ.
07:07 ತೋರ್ಬೆರಳಿನ ಮೇಲೆ ಒಂದು ಹೆಚ್ಚಿನ node ಇರುವುದನ್ನು ಗಮನಿಸಿ.
07:11 ಆ ಮಧ್ಯದ node ಮತ್ತು ಮೇಲಿನ node ಗಳನ್ನುShift ಕೀಲಿಯನ್ನು ಒತ್ತಿ ಆಯ್ಕೆ ಮಾಡಿಕೊಳ್ಳಿ
07:18 ಈಗ Join node ಐಕಾನ್ ನ ಮೇಲೆ ಕ್ಲಿಕ್ ಮಾಡಿ. ಎರಡೂ ನೋಡ್ ಗಳೂ ಸೇರಿರುವದನ್ನು ಗಮನಿಸಿ.
07:25 ಮುಂದಿನ ಐಕಾನ್ ಆಯ್ಕೆ ಮಾಡಿಕೊಂಡ ನೋಡ್ ಗಳ ಪಥವನ್ನು ಮುರಿಯಲು ಸಹಾಯ ಮಾಡುತ್ತದೆ.
07:29 ಈಗ ನಾನು ಹೆಬ್ಬೆರಳು ಮತ್ತು ತೋರ್ಬೆರಳುಗಳ ಸಂಪರ್ಕವನ್ನುಕಡಿದು ಹಾಕುತ್ತೇನೆ.
07:33 ಹಾಗಾಗಿ ಇವನ್ನು ಸೇರಿಸುವ node ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು Break path ಐಕಾನ್ ಮೇಲೆ ಕ್ಲಿಕ್ ಮಾಡಿ.
07:40 ನೋಡ್ ಅನ್ನು ಆಯ್ಕೆ ಮಾಡಿ ಮತ್ತು ಅದನ್ನು ಒಂದು ಚೂರು ಸರಿಸಿ.
07:46 ನೀವು ಪಥವು ಮುರಿದಿರುವುದನ್ನು ಮತ್ತು ಆ ನೋಡ್ ಎರಡು ಬೇರೆ ಬೇರೆ ನೋಡ್ ಗಳಾಗಿ ವಿಂಗಡನೆಯಾಗಿರುವುದನ್ನು ನೋಡಬಹುದು.
07:53 ಅವನ್ನು ಒಂದುಗೂಡಿಸಲು ಆ ಎರಡು ನೋಡ್ ಗಳನ್ನು ಆಯ್ಕೆ ಮಾಡಿಕೊಂಡು Tool controls bar ನಲ್ಲಿ Join selected end-nodes ಐಕಾನ್ ಮೇಲೆ ಕ್ಲಿಕ್ ಮಾಡಿ.
08:03 ಈ ಎರಡು ನೋಡ್ ಗಳ ನಡುವೆ ಎರಡು ಹೊಸ ಪಥಗಳು ರಚನೆಯಾಗಿರುವುದನ್ನು ಗಮನಿಸಿ.
08:08 ಒಂದು ಭಾಗವನ್ನು ಅಥವಾ ಪಥವನ್ನು ಅಳಿಸಲು ಮುಂದಿನ ಐಕಾನ್ ಅಂದರೆ Delete segment ಐಕಾನ್ ಮೇಲೆ ಕ್ಲಿಕ್ ಮಾಡಿ. ಈಗ ಪಥವು ಅಳಿಸಿ ಹೋಗಿದೆ.
08:17 ಈ ಕ್ರಿಯೆಯನ್ನು undoಮಾಡಲು Ctrl Z ಅನ್ನು ಒತ್ತಿ.
08:20 ಈ ಹಸ್ತವನ್ನು ಬಿಟ್ಟು, ಇನ್ನೊಮ್ಮೆ Node tool ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ.
08:26 ಈಗ Tool controls bar ನ ಮುಂದಿನ ನಾಲ್ಕು ಐಕಾನ್ ಗಳನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ.
08:30 ಈ ಐಕಾನ್ ಗಳು ಆಯ್ಕೆ ಮಾಡಿದ ನೋಡ್ ಗಳನ್ನು ಎಡಿಟ್ ಮಾಡಲು ಸಹಾಯ ಮಾಡುತ್ತವೆ.
08:34 Bezier tool ಅನ್ನು ಉಪಯೋಗಿಸಿ ತಿರುಗಿದ U ಆಕೃತಿಯನ್ನು ಚಿತ್ರಿಸಿ. Node ಟೂಲ್ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಮೂರು ನೋಡ್ ಗಳಿರುವುದನ್ನು ಗಮನಿಸಿ.
08:49 ಮೇಲಿನ ನೋಡ್ ಅನ್ನು ಆಯ್ಕೆ ಮಾಡಿ ಮತ್ತು Tool controls bar ನಲ್ಲಿ Make selected nodes corner ಐಕಾನ್ ನ ಮೇಲೆ ಕ್ಲಿಕ್ ಮಾಡಿ.
08:55 ಇದು ಇದನ್ನು ಮೂಲೆಯ ನೋಡ್ ಅನ್ನಾಗಿ ಮಾಡುತ್ತದೆ.
08:58 Bezier handless ಮೇಲೆ ಕ್ಲಿಕ್ ಮಾಡಿ ಮತ್ತು ಮೇಲಕ್ಕೂ ಕೆಳಕ್ಕೂ ಸರಿಸಿ ಬದಲಾವಣೆಯನ್ನು ನೋಡಿ.
09:03 node ಅನ್ನು ಸಪಾಟಾಗಿರುವಂತೆ ಮಾಡಲು ಮುಂದಿನ ಐಕಾನ್ ಮೇಲೆ ಕ್ಲಿಕ್ ಮಾಡಿ.ಆಕೃತಿಯಲ್ಲಿ ಬದಲಾವಣೆಯನ್ನು ನೋಡಿ.
09:11 ನೋಡ್ ಗಳನ್ನು ಸಿಮೆಟ್ರಿಕ್ ಮಾಡಲು ಮುಂದಿನ ಐಕಾನ್ ಅನ್ನು ಕ್ಲಿಕ್ ಮಾಡಿ.
09:16 ನೋಡ್ ಅನ್ನು ಆಟೋ ಸ್ಮೂಥ್ ಮಾಡಲು ಮುಂದಿನ ಐಕಾನ್ ಮೇಲೆ ಕ್ಲಿಕ್ ಮಾಡಿ.
09:20 ಮುಂದಿನ ಎರಡು ಐಕಾನ್ ಗಳು ಕೇವಲ ಆಕೃತಿಯ ಒಂದು ಭಾಗದ ಮೇಲೆ ಮಾತ್ರ ಕೆಲಸ ಮಾಡುತ್ತದೆ. ಹಾಗಾಗಿ U ಆಕೃತಿಯ ಎಡ ಭಾಗವನ್ನು ಆಯ್ಕೆ ಮಾಡಿ ಮತ್ತು ಮೊದಲನೆ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
09:30 ಟೂಲ್ ಟಿಪ್ ನಲ್ಲಿ ಹೇಳಿದಂತೆ ಆ ಭಾಗವು ಈಗ ಸರಳರೇಖೆಯಾಗಿ ಮಾರ್ಪಟ್ಟಿದೆ.
09:35 Bezier handles ಮೇಲೆ ಕ್ಲಿಕ್ ಮಾಡಿ ಮತ್ತು ಸರಿಸಲು ಪ್ರಯತ್ನಿಸಿ. ಅದನ್ನು ತಿರುಗಿಸಲು ಸಾಧ್ಯವಿಲ್ಲ ಎನ್ನುವುದನ್ನು ನೀವು ನೋಡಬಹುದು.
09:44 ಅದನ್ನು ಪುನಃ ವಕ್ರ ರೇಖೆಯನ್ನಾಗಿಸಲು ಮುಂದಿನ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
09:49 ಈಗ Bezier handles ಅನ್ನು ಸರಿಸಿ ಮತ್ತು ನೀವು ಅದನ್ನು ವಕ್ರಗೊಳಿಸಲು ಸಾಧ್ಯ.
09:54 ಆಯ್ಕೆಮಾಡಿದ ವಸ್ತುವನ್ನು ಪಥವನ್ನಾಗಿ ಬದಲಿಸಲು ಮುಂದಿನ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
09:58 stroke ಅನ್ನು ಪಥವನ್ನಾಗಿ ಬದಲಿಸಲು ಮುಂದಿನ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
10:02 stroke ಗಳು ಗೋಚರಿಸುವಂತೆ ಮಾಡಲು ನೋಡ್ ಅನ್ನು ಕ್ಲಿಕ್ ಮಾಡಿ ಎಳೆಯಿರಿ.
10:08 ಆಯ್ಕೆ ಮಾಡಿದ ನೋಡಗಳನ್ನು X ಮತ್ತು Y ಅಕ್ಷದಲ್ಲಿ ಚಲಿಸುವಂತೆ ಮಾಡಲು ಕ್ರಮವಾಗಿ ಮುಂದಿನ ಎರಡು ಐಕಾನ್ ಗಳು ಸಹಾಯ ಮಾಡುತ್ತವೆ.
10:15 ಅಪ್ ಎರೋ ಮತ್ತು ಡೌನ್ ಎರೋ ದ ಮೇಲೆ ಕ್ಲಿಕ್ ಮಾಡಿ ಬದಲಾವಣೆಯನ್ನು ಗಮನಿಸಿ.
10:24 ಪಥವು ಕ್ಲಿಪಿಂಗ್ ಮತ್ತು ಮಾಸ್ಕಿಂಗ್ ಎಫೆಕ್ಟ್ ಅನ್ನು ಹೊಂದಿದ್ದಲ್ಲಿ ಮುಂದಿನ ಎರಡು ಐಕಾನ್ ಗಳು ಸಹಾಯ ಮಾಡುತ್ತವೆ.
10:29 ಈ ಆಯ್ಕೆಗಳನ್ನು ನೀವೇ ಅಭ್ಯಸಿಸಬಹುದು.
10:33 ಸಾರಾಂಶವನ್ನು ನೋಡೋಣ.
10:34 ಈ ಟ್ಯುಟೋರಿಯಲ್ ನಲ್ಲಿ ನಾವು,
10:37 ಸರಳ ರೇಖೆ ಮತ್ತು ಮುಚ್ಚಿದ ಆಕೃತಿಯನ್ನು ಚಿತ್ರಿಸುವುದು,
10:39 ವಕ್ರರೇಖೆಯನ್ನು ಚಿತ್ರಿಸುವುದು
10:41 ಮತ್ತು ನೋಡ್ ಗಳನ್ನು ಸೇರಿಸುವುದು, ಎಡಿಟ್ ಮಾಡುವುದು ಮತ್ತು ಅಳಿಸುವುದನ್ನು ಕಲಿತಿದ್ದೇವೆ.
10:43 ನಿಮಗಾಗಿ ಅಸೈನ್ ಮೆಂಟ್-
10:46 Bezier tool ಅನ್ನು ಉಪಯೋಗಿಸಿ ಐದು ದಳಗಳು ಒಂದು ಕೊಂಬೆ ಮತ್ತು ಎರಡು ಎಲೆಗಳಿರುವ ಒಂದು ಹೂವನ್ನು ಚಿತ್ರಿಸಿ.
10:52 ದಳಗಳಿಗೆ ಗುಲಾಬಿ ಬಣ್ಣವನ್ನೂ,
10:54 ಕೊಂಬೆ ಮತ್ತುಎಲೆಗಳಿಗೆ ಹಸಿರು ಬಣ್ಣವನ್ನೂ ತುಂಬಿ.
10:57 ಮುಗಿಸಿದ ನಂತರ ನಿಮ್ಮ ಅಸೈನ್ ಮೆಂಟ್ ಈ ರೀತಿಯಾಗಿರಬೇಕು.
11:00 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಕುರಿತು ತಿಳಿಸುತ್ತದೆ. ದಯವಿಟ್ಟು ನೋಡಿ.
11:05 Spoken Tutorial Project Team ಇದು spoken tutorialಗಳ ಕುರಿತು ಕಾರ್ಯಾಗಾರವನ್ನು ಏರ್ಪಡಿಸುತ್ತದೆ. online testನಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ
11:12 ಹೆಚ್ಚಿನ ವಿವರಗಳಿಗಾಗಿ ನಮಗೆ ಬರೆಯಿರಿ.
11:14 Spoken Tutorial Project ಇದು ರಾಷ್ಟ್ರೀಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರಕಾರದಿಂದ ಅನುದಾನಿತವಾಗಿದೆ
11:20 ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ದೊರೆಯುತ್ತದೆ.
11:24 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
11:26 ಭಾಷಾಂತರ ಮತ್ತು ಧ್ವನಿ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ. ನಮಸ್ಕಾರ. ಧನ್ಯವಾದಗಳು.

Contributors and Content Editors

NaveenBhat, PoojaMoolya, Pratik kamble