Difference between revisions of "GChemPaint/C2/Formation-of-Bonds/Kannada"

From Script | Spoken-Tutorial
Jump to: navigation, search
 
Line 290: Line 290:
 
|-
 
|-
 
|07:00
 
|07:00
| ಒಂದು ಅಸೈನ್ಮೆಂಟ್ ಎಂದು,
+
| ಒಂದು ಅಸೈನ್ಮೆಂಟ್ ಎಂದು, ‘ಪ್ರೊಪೇನ್’ಅನ್ನು ‘ಪ್ರೊಪೈನ್’ಗೆ ಪರಿವರ್ತಿಸಿ.
|-
+
|07:01
+
|* ‘ಪ್ರೊಪೇನ್’ಅನ್ನು ‘ಪ್ರೊಪೈನ್’ಗೆ ಪರಿವರ್ತಿಸಿ.
+
 
|-
 
|-
 
|07:04
 
|07:04

Latest revision as of 15:54, 17 March 2017

Time Narration
00:00 ನಮಸ್ಕಾರ.
00:02 GChemPaint (ಜಿ-ಕೆಮ್-ಪೇಂಟ್) ನಲ್ಲಿಯ Formation of bonds (ಫಾರ್ಮೇಶನ್ ಆಫ್ ಬಾಂಡ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ‘ಟ್ಯುಟೋರಿಯಲ್’ನಲ್ಲಿ ನಾವು,
00:10 * ಈಗಿರುವ ‘ಬಾಂಡ್’ಗೆ, ‘ಬಾಂಡ್’ಗಳನ್ನು ಸೇರಿಸುವುದು,
00:13 * ‘ಬಾಂಡ್’ಗಳನ್ನು ಓರಿಯಂಟ್ ಮಾಡುವುದು (ತಿರುಗಿಸುವುದು)
00:15 * ‘ಸ್ಟೀರಿಯೋಕೆಮಿಕಲ್ ಬಾಂಡ್’ಗಳನ್ನು ಸೇರಿಸುವುದು ಮತ್ತು
00:18 * ‘ಇನ್ವರ್ಸ್ ವೆಡ್ಜ್ ಹ್ಯಾಷಸ್’ ಇತ್ಯಾದಿಗಳನ್ನು ಕಲಿಯುವೆವು.
00:21 ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ
00:27 GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ.
00:33 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು
00:37 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು.
00:40 ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ.
00:46 ನಾನು Ethane (ಈಥೇನ್) ನ ರಚನೆಯೊಂದಿಗೆ ಹೊಸ GChemPaint ‘ಅಪ್ಪ್ಲಿಕೇಶನ್’ಅನ್ನು ತೆರೆದಿದ್ದೇನೆ.
00:51 'ಸ್ಯಾಚುರೇಟೆಡ್ ಹೈಡ್ರೋಕಾರ್ಬನ್’ಗಳನ್ನು 'ಅನ್ಸ್ಯಾಚುರೇಟೆಡ್ ಹೈಡ್ರೋಕಾರ್ಬನ್’ಗಳನ್ನಾಗಿ ಪರಿವರ್ತಿಸಲು ನಾವು ಕಲಿಯೋಣ.
00:58 ನಾವು ‘ಈಥೇನ್’ನ ರಚನೆಯನ್ನು ‘ಕಾಪಿ’ ಮಾಡಿ ಅದನ್ನು ‘ಡಿಸ್ಪ್ಲೇ ಏರಿಯಾ’ದ ಮೇಲೆ ಎರಡು ಸಲ ‘ಪೇಸ್ಟ್’ ಮಾಡೋಣ.
01:05 Select one or more objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:08 ‘Ethane ಸ್ಟ್ರಕ್ಚರ್’ಅನ್ನು ಆಯ್ಕೆಮಾಡಲು ಅದರ ಮೇಲೆ ಕ್ಲಿಕ್ ಮಾಡಿ.
01:11 ‘ಸ್ಟ್ರಕ್ಚರ್’ಅನ್ನು ‘ಕಾಪಿ’ ಮಾಡಲು Ctrl+C ಒತ್ತಿ.
01:14 ಮತ್ತು ‘ಸ್ಟ್ರಕ್ಚರ್’ಅನ್ನು ‘ಪೇಸ್ಟ್’ ಮಾಡಲು Ctrl+ V ಒತ್ತಿ.
01:19 ಎರಡು ರಚನೆಗಳು ಪರಸ್ಪರ ಒಂದರ ಮೇಲೊಂದು ಇರುವದನ್ನು ಗಮನಿಸಿ.
01:23 ಮೇಲೆ ಚಾಚಿರುವ ಎರಡನೆಯ ರಚನೆಯನ್ನು ನಾವು ಬದಿಗೆ ಸರಿಸೋಣ.
01:27 ಕರ್ಸರ್ ಅನ್ನು ರಚನೆಯ ಮೇಲೆ ಇರಿಸಿ ಮತ್ತು ಅದನ್ನು ಮೌಸ್ ನೊಂದಿಗೆ ಎಳೆಯಿರಿ.
01:33 ರಚನೆಗಳಲ್ಲಿ ಕಾರ್ಬನ್ ಅಣುಗಳ ನಡುವಿನ ಏಕೈಕ (ಸಿಂಗಲ್) ‘ಬಾಂಡ್’ಅನ್ನು ಗಮನಿಸಿ.
01:40 ಮೊದಲು ನಾವು ‘ಸಿಂಗಲ್ ಬಾಂಡ್’ಅನ್ನು ‘ಡಬಲ್ ಬಾಂಡ್’ಗೆ ಪರಿವರ್ತಿಸೋಣ.
01:44 Add a bond or change the multiplicity of an existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
01:51 ಎರಡನೆಯ ‘Ethane ಸ್ಟ್ರಕ್ಚರ್’ನ, ಈಗಿರುವ ‘ಬಾಂಡ್’ನ ಮೇಲೆ ಕ್ಲಿಕ್ ಮಾಡಿ.
01:55 ‘ಸಿಂಗಲ್ ಬಾಂಡ್’, ‘ಡಬಲ್ ಬಾಂಡ್’ಗೆ ಪರಿವರ್ತಿತವಾಗಿರುವುದನ್ನು ಗಮನಿಸಿ.
02:00 ‘ಹೈಡ್ರೋಜನ್’ ಅಣುಗಳ ಸಂಖ್ಯೆಯು 6 ರಿಂದ 4 ಕ್ಕೆ ಇಳಿದಿದೆ.
02:06 ಹೊಸ ರಚನೆಯು ‘ಈಥೀನ್’ ಆಗಿದೆ.
02:09 ಆಮೇಲೆ, ನಾವು ‘ಸಿಂಗಲ್ ಬಾಂಡ್’ಅನ್ನು ‘ಟ್ರಿಪಲ್ ಬಾಂಡ್’ಗೆ ಪರಿವರ್ತಿಸೋಣ.
02:14 ಮೂರನೆಯ ‘Ethane ಸ್ಟ್ರಕ್ಚರ್’ನ, ಈಗಿರುವ ‘ಬಾಂಡ್’ನ ಮೇಲೆ ಎರಡು ಸಲ ಕ್ಲಿಕ್ ಮಾಡಿ.
02:20 ‘ಸಿಂಗಲ್ ಬಾಂಡ್’, ‘ಟ್ರಿಪಲ್ ಬಾಂಡ್’ಗೆ ಪರಿವರ್ತಿತವಾಗಿರುವುದನ್ನು ಗಮನಿಸಿ.
02:25 ‘ಹೈಡ್ರೋಜನ್’ ಅಣುಗಳ ಸಂಖ್ಯೆಯು 6 ರಿಂದ 2 ಕ್ಕೆ ಇಳಿದಿದೆ.
02:30 ಈ ಹೊಸ ರಚನೆಯು ‘ಈಥೈನ್’ ಆಗಿದೆ.
02:34 ಈ ರಚನೆಗಳ ಹೆಸರುಗಳನ್ನು ನಾವು ಬರೆಯೋಣ.
02:37 Add or modify a text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
02:41 ರಚನೆಗಳ ಕೆಳಗೆ ಕ್ಲಿಕ್ ಮಾಡಿ.
02:43 ರಚನೆಗಳ ಹೆಸರುಗಳನ್ನು ‘ಈಥೇನ್’, ‘ಈಥೀನ್’ ಹಾಗೂ ‘ಈಥೈನ್’ ಎಂದು ನಮೂದಿಸಿ.
02:53 ಆಮೇಲೆ, ನಾವು ‘ಟೆಟ್ರಾಹೆಡ್ರಲ್ ಜಿಯೊಮೆಟ್ರೀ’ ಬಗ್ಗೆ ತಿಳಿಯೋಣ.
02:57 ನಾವು ರಚನೆಗಳನ್ನು ಒಂದು ಬದಿಗೆ ಸರಿಸೋಣ.
03:00 ಎಲ್ಲ ಓಬ್ಜೆಕ್ಟ್ ಗಳನ್ನು ಆಯ್ಕೆಮಾಡಲು Ctrl+A ಒತ್ತಿ.
03:03 Select one or more objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ ಮತ್ತು ರಚನೆಗಳನ್ನು ಎಳೆಯಿರಿ.
03:10 'ಟೆಟ್ರಾಹೆಡ್ರಲ್ ಮೀಥೇನ್' ರಚನೆಗಾಗಿ ಇಲ್ಲಿ ಒಂದು ಸ್ಲೈಡ್ ಇದೆ.
03:14 ಎಲ್ಲ ‘ಬಾಂಡ್’ಗಳ ಉದ್ದಳತೆಯು 1.09 ಆಂಗಸ್ಟ್ರಾಂ ಆಗಿದೆ.
03:19 'ಟೆಟ್ರಾಹೆಡ್ರಲ್ ಮೀಥೇನ್' ರಚನೆಯಲ್ಲಿ, ಎಲ್ಲ ‘ಬಾಂಡ್’ಗಳ ಕೋನಗಳು 109.5 ಅಂಶಗಳಾಗಿವೆ.
03:31 ಈಗ, ನಾವು 'ಟೆಟ್ರಾಹೆಡ್ರಲ್ ಈಥೇನ್'ನ ರಚನೆಯನ್ನು ‘ಡ್ರಾ’ ಮಾಡೋಣ.
03:35 Add a bond or change the multiplicity of existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
03:41 ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
03:43 ‘ಬಾಂಡ್’ಅನ್ನು ಸಮತಲ ದಿಕ್ಕಿನಲ್ಲಿ (horizontal) ತಿರುಗಿಸಿ.
03:47 ‘ಬಾಂಡ್’ನ ಪ್ರತಿಯೊಂದು ತುದಿಗೆ ನಾವು ಮೂರು ‘ಬಾಂಡ್’ಗಳನ್ನು ಡ್ರಾ ಮಾಡೋಣ.
03:51 ‘ಟೆಟ್ರಾಹೆಡ್ರಲ್ ಜಿಯೊಮೆಟ್ರೀ’ಯನ್ನು ರೂಪಿಸಲು ‘ಬಾಂಡ್’ಗಳನ್ನು ತಿರುಗಿಸಿ.
03:55 ಪ್ರತಿಯೊಂದು ತುದಿಯಮೇಲೆ ಕ್ಲಿಕ್ ಮಾಡಿ. ನಂತರ ಮೂರು ‘ಬಾಂಡ್’ಗಳನ್ನು ಬೇರೆ ದಿಕ್ಕುಗಳಲ್ಲಿ ತಿರುಗಿಸಿ.
04:02 ಹೀಗೆಯೇ, ನಾವು ಇನ್ನೊಂದು ತುದಿಯ ಮೇಲೆ ‘ಡ್ರಾ’ ಮಾಡೋಣ.
04:07 ನಾವು ತುದಿಗಳಲ್ಲಿ ‘ಹೈಡ್ರೋಜನ್’ ಅಣುಗಳನ್ನು ಜೋಡಿಸೋಣ.
04:10 ’ಹೈಡ್ರೋಜನ್’ ಅಣುಗಳನ್ನು ತುದಿಗಳಲ್ಲಿ ಜೋಡಿಸಲು ದೊಡ್ಡಕ್ಷರ H ಅನ್ನು ಒತ್ತಿ.
04:16 ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ. ಇದರಲ್ಲಿ ನಾವು H ಅನ್ನು ಆಯ್ಕೆಮಾಡುವೆವು.
04:21 Hydrogen ಅಣು, ‘ಟೂಲ್ ಬಾಕ್ಸ್’ನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಗಮನಿಸಿ.
04:26 Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ.
04:29 ‘ಹೈಡ್ರೋಜನ್’ ಅಣುಗಳನ್ನು ಸೇರಿಸಲು ಎಲ್ಲ ಸ್ಥಾನಗಳ ಮೇಲೆ ಕ್ಲಿಕ್ ಮಾಡಿ.
04:37 ‘ಈಥೇನ್’ನ ರಚನೆಗೆ, ‘ಸ್ಟೀರಿಯೋಕೆಮಿಕಲ್ ಬಾಂಡ್’ಗಳನ್ನು ಈಗ ನಾವು ಸೇರಿಸೋಣ.
04:42 ಟೂಲ್-ಬಾಕ್ಸ್ ನಲ್ಲಿ ಲಭ್ಯವಿರುವ ‘ಸ್ಟೀರಿಯೋಕೆಮಿಕಲ್ ಬಾಂಡ್’ಗಳು ಈ ರೀತಿಯಾಗಿವೆ.
04:46 * Add a wedge bond (ಆಡ್ ಎ ವೆಡ್ಜ್ ಬಾಂಡ್)
04:48 * Add a hash bond (ಆಡ್ ಎ ಹ್ಯಾಶ್ ಬಾಂಡ್)
04:50 * Add a squiggle bond (ಆಡ್ ಎ ಸ್ಕ್ವಿಗಲ್ ಬಾಂಡ್)
04:53 * ಮತ್ತು Add a fore bond (ಆಡ್ ಎ ಫೋರ್ ಬಾಂಡ್).
04:55 ‘ಈಥೇನ್’ಅನ್ನು ‘ಸ್ಟೀರಿಯೋಕೆಮಿಕಲ್’ ರಚನೆಗೆ ಪರಿವರ್ತಿಸಲು, ನಾವು Add a wedge bond ಅನ್ನು ಬಳಸೋಣ.
05:03 Add a wedge bond ನ ಮೇಲೆ ಕ್ಲಿಕ್ ಮಾಡಿ.
05:05 ನಂತರ ಎಲ್ಲ ‘ಬಾಂಡ್’ಗಳ ಮೇಲೆ ಕ್ಲಿಕ್ ಮಾಡಿ.
05:10 ಬದಲಾವಣೆಗಳನ್ನು ಗಮನಿಸಿ.
05:13 Add a hash bond ನ ಮೇಲೆ ಕ್ಲಿಕ್ ಮಾಡಿ.
05:15 ನಂತರ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ.
05:19 ಈಗ ನಾನು ‘ಇನ್ವರ್ಟ್ ವೆಡ್ಜ್ ಹ್ಯಾಶಸ್’ನ ಬಗ್ಗೆ ವಿವರಿಸುವೆನು.
05:25 Edit ಮೆನ್ಯೂ ಗೆ ಹೋಗಿ. ಅಲ್ಲಿ, Preferences ಎನ್ನುವಲ್ಲಿಗೆ ಹೋಗಿ ಅದರ ಮೇಲೆ ಕ್ಲಿಕ್ ಮಾಡಿ.
05:31 GChemPaint Preferences (ಜಿ-ಕೆಮ್-ಪೇಂಟ್ ಪ್ರಿಫರೆನ್ಸಸ್) ವಿಂಡೋ ತೆರೆದುಕೊಳ್ಳುತ್ತದೆ.
05:34 Invert wedge hashes ಎನ್ನುವ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
05:38 ‘ಸೆಟ್’ ಮಾಡಿದರೆ, ‘ವೆಡ್ಜ್ ಹ್ಯಾಶಸ್ ಬಾಂಡ್’ಗಳು ಸಾಮಾನ್ಯ ರೂಢಿಯನ್ನು ಅನುಸರಿಸುವವು.
05:43 ಕಿರಿದಾದ ಕೊನೆಯು ‘ಬಾಂಡ್’ನ ಆರಂಭದಲ್ಲಿ ಮತ್ತು ಅಗಲವಾದ ಕೊನೆಯು ಇನ್ನೊಂದು ತುದಿಯಲ್ಲಿ ಇರುತ್ತವೆ.
05:50 ಇದು ‘ಬಾಂಡ್’ಅನ್ನು ಸರಿಯಾಗಿ ಕಲ್ಪಿಸಿಕೊಳ್ಳಲು ಸಹಾಯಮಾಡುತ್ತದೆ.
05:55 GChemPaint ನಲ್ಲಿ ಡೀ-ಫಾಲ್ಟ್ ಆಗಿ ‘Inverse’, ರೂಢಿಯಲ್ಲಿದೆ. ಏಕೆಂದರೆ,ಇದು ‘ಪರ್ಸ್ಪೆಕ್ಟಿವ್ ರೂಲ್’ಗಳೊಂದಿಗೆ ಹೆಚ್ಚು ಸ್ಥಿರವಾಗಿದೆ.
06:05 ‘ಹ್ಯಾಶ್ ಬಾಂಡ್’ನಲ್ಲಿಯ ಬದಲಾವಣೆಗಳನ್ನು ಗಮನಿಸಿ.
06:09 ವಿಂಡೋವನ್ನು ಮುಚ್ಚಲು ನಾವು Close ‘ಬಟನ್’ನ ಮೇಲೆ ಕ್ಲಿಕ್ ಮಾಡೋಣ.
06:13 ‘ಈಥೇನ್ ಸ್ಟ್ರಕ್ಚರ್’ನಲ್ಲಿಯ ‘ಬಾಂಡ್’ಗಳನ್ನು ‘ಹ್ಯಾಶ್ ಬಾಂಡ್’ಗಳಿಗೆ ನಾವು ಬದಲಾಯಿಸೋಣ.
06:18 Add a hash bond ನ ಮೇಲೆ ಕ್ಲಿಕ್ ಮಾಡಿ.
06:21 ಎಲ್ಲ ‘ಬಾಂಡ್’ಗಳ ಮೇಲೆ ಕ್ಲಿಕ್ ಮಾಡಿ.
06:27 ಈಗ ನಾವು ಫೈಲ್ ಅನ್ನು ಸೇವ್ ಮಾಡೋಣ.
06:30 ಟೂಲ್ ಬಾರ್ ನ ಮೇಲಿರುವ Save the current file ಎನ್ನುವ ಐಕಾನ್ ಮೇಲೆ ಕ್ಲಿಕ್ ಮಾಡಿ.
06:34 Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
06:37 ಫೈಲ್ ನ ಹೆಸರನ್ನು Formation of bond ಎಂದು ನಮೂದಿಸಿ.
06:41 Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ.
06:44 ನಾವು ಸಾರಾಂಶಗೊಳಿಸೋಣ.
06:46 ಈ ‘ಟ್ಯುಟೋರಿಯಲ್’ನಲ್ಲಿ ನಾವು,
06:49 * ಈಗಿರುವ ‘ಬಾಂಡ್’ಗೆ ‘ಬಾಂಡ್’ಗಳನ್ನು ಸೇರಿಸುವುದು
06:52 * ‘ಬಾಂಡ್’ಗಳನ್ನು ಓರಿಯಂಟ್ ಮಾಡುವುದು
06:54 * ‘ಸ್ಟೀರಿಯೋಕೆಮಿಕಲ್ ಬಾಂಡ್’ಗಳನ್ನು ಸೇರಿಸುವುದು
06:56 * ಮತ್ತು ‘ಇನ್ವರ್ಸ್ ವೆಡ್ಜ್ ಹ್ಯಾಷಸ್’ ಇತ್ಯಾದಿಗಳನ್ನು ಕಲಿತಿದ್ದೇವೆ.
07:00 ಒಂದು ಅಸೈನ್ಮೆಂಟ್ ಎಂದು, ‘ಪ್ರೊಪೇನ್’ಅನ್ನು ‘ಪ್ರೊಪೈನ್’ಗೆ ಪರಿವರ್ತಿಸಿ.
07:04 * ‘ಪ್ರೊಪೇನ್’ ಮತ್ತು ‘ಬ್ಯುಟೇನ್’ಗಳ ರಚನೆಗಳನ್ನು ‘ಡ್ರಾ’ ಮಾಡಿ.
07:07 * ‘ಸ್ಟೀರಿಯೋಕೆಮಿಕಲ್ ಬಾಂಡ್’ಗಳನ್ನು ತೋರಿಸಿ.
07:11 ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಿಸಬೇಕು.
07:16 ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial
07:19 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
07:23 ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:28 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:33 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:36 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
07:42 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
07:47 ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ.
07:54 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
08:00 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್. ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal