GChemPaint/C2/Formation-of-Bonds/Kannada
From Script | Spoken-Tutorial
Time | Narration |
00:00 | ನಮಸ್ಕಾರ. |
00:02 | GChemPaint (ಜಿ-ಕೆಮ್-ಪೇಂಟ್) ನಲ್ಲಿಯ Formation of bonds (ಫಾರ್ಮೇಶನ್ ಆಫ್ ಬಾಂಡ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:10 | * ಈಗಿರುವ ‘ಬಾಂಡ್’ಗೆ, ‘ಬಾಂಡ್’ಗಳನ್ನು ಸೇರಿಸುವುದು, |
00:13 | * ‘ಬಾಂಡ್’ಗಳನ್ನು ಓರಿಯಂಟ್ ಮಾಡುವುದು (ತಿರುಗಿಸುವುದು) |
00:15 | * ‘ಸ್ಟೀರಿಯೋಕೆಮಿಕಲ್ ಬಾಂಡ್’ಗಳನ್ನು ಸೇರಿಸುವುದು ಮತ್ತು |
00:18 | * ‘ಇನ್ವರ್ಸ್ ವೆಡ್ಜ್ ಹ್ಯಾಷಸ್’ ಇತ್ಯಾದಿಗಳನ್ನು ಕಲಿಯುವೆವು. |
00:21 | ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ |
00:27 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ. |
00:33 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು |
00:37 | 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು. |
00:40 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. |
00:46 | ನಾನು Ethane (ಈಥೇನ್) ನ ರಚನೆಯೊಂದಿಗೆ ಹೊಸ GChemPaint ‘ಅಪ್ಪ್ಲಿಕೇಶನ್’ಅನ್ನು ತೆರೆದಿದ್ದೇನೆ. |
00:51 | 'ಸ್ಯಾಚುರೇಟೆಡ್ ಹೈಡ್ರೋಕಾರ್ಬನ್’ಗಳನ್ನು 'ಅನ್ಸ್ಯಾಚುರೇಟೆಡ್ ಹೈಡ್ರೋಕಾರ್ಬನ್’ಗಳನ್ನಾಗಿ ಪರಿವರ್ತಿಸಲು ನಾವು ಕಲಿಯೋಣ. |
00:58 | ನಾವು ‘ಈಥೇನ್’ನ ರಚನೆಯನ್ನು ‘ಕಾಪಿ’ ಮಾಡಿ ಅದನ್ನು ‘ಡಿಸ್ಪ್ಲೇ ಏರಿಯಾ’ದ ಮೇಲೆ ಎರಡು ಸಲ ‘ಪೇಸ್ಟ್’ ಮಾಡೋಣ. |
01:05 | Select one or more objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
01:08 | ‘Ethane ಸ್ಟ್ರಕ್ಚರ್’ಅನ್ನು ಆಯ್ಕೆಮಾಡಲು ಅದರ ಮೇಲೆ ಕ್ಲಿಕ್ ಮಾಡಿ. |
01:11 | ‘ಸ್ಟ್ರಕ್ಚರ್’ಅನ್ನು ‘ಕಾಪಿ’ ಮಾಡಲು Ctrl+C ಒತ್ತಿ. |
01:14 | ಮತ್ತು ‘ಸ್ಟ್ರಕ್ಚರ್’ಅನ್ನು ‘ಪೇಸ್ಟ್’ ಮಾಡಲು Ctrl+ V ಒತ್ತಿ. |
01:19 | ಎರಡು ರಚನೆಗಳು ಪರಸ್ಪರ ಒಂದರ ಮೇಲೊಂದು ಇರುವದನ್ನು ಗಮನಿಸಿ. |
01:23 | ಮೇಲೆ ಚಾಚಿರುವ ಎರಡನೆಯ ರಚನೆಯನ್ನು ನಾವು ಬದಿಗೆ ಸರಿಸೋಣ. |
01:27 | ಕರ್ಸರ್ ಅನ್ನು ರಚನೆಯ ಮೇಲೆ ಇರಿಸಿ ಮತ್ತು ಅದನ್ನು ಮೌಸ್ ನೊಂದಿಗೆ ಎಳೆಯಿರಿ. |
01:33 | ರಚನೆಗಳಲ್ಲಿ ಕಾರ್ಬನ್ ಅಣುಗಳ ನಡುವಿನ ಏಕೈಕ (ಸಿಂಗಲ್) ‘ಬಾಂಡ್’ಅನ್ನು ಗಮನಿಸಿ. |
01:40 | ಮೊದಲು ನಾವು ‘ಸಿಂಗಲ್ ಬಾಂಡ್’ಅನ್ನು ‘ಡಬಲ್ ಬಾಂಡ್’ಗೆ ಪರಿವರ್ತಿಸೋಣ. |
01:44 | Add a bond or change the multiplicity of an existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
01:51 | ಎರಡನೆಯ ‘Ethane ಸ್ಟ್ರಕ್ಚರ್’ನ, ಈಗಿರುವ ‘ಬಾಂಡ್’ನ ಮೇಲೆ ಕ್ಲಿಕ್ ಮಾಡಿ. |
01:55 | ‘ಸಿಂಗಲ್ ಬಾಂಡ್’, ‘ಡಬಲ್ ಬಾಂಡ್’ಗೆ ಪರಿವರ್ತಿತವಾಗಿರುವುದನ್ನು ಗಮನಿಸಿ. |
02:00 | ‘ಹೈಡ್ರೋಜನ್’ ಅಣುಗಳ ಸಂಖ್ಯೆಯು 6 ರಿಂದ 4 ಕ್ಕೆ ಇಳಿದಿದೆ. |
02:06 | ಹೊಸ ರಚನೆಯು ‘ಈಥೀನ್’ ಆಗಿದೆ. |
02:09 | ಆಮೇಲೆ, ನಾವು ‘ಸಿಂಗಲ್ ಬಾಂಡ್’ಅನ್ನು ‘ಟ್ರಿಪಲ್ ಬಾಂಡ್’ಗೆ ಪರಿವರ್ತಿಸೋಣ. |
02:14 | ಮೂರನೆಯ ‘Ethane ಸ್ಟ್ರಕ್ಚರ್’ನ, ಈಗಿರುವ ‘ಬಾಂಡ್’ನ ಮೇಲೆ ಎರಡು ಸಲ ಕ್ಲಿಕ್ ಮಾಡಿ. |
02:20 | ‘ಸಿಂಗಲ್ ಬಾಂಡ್’, ‘ಟ್ರಿಪಲ್ ಬಾಂಡ್’ಗೆ ಪರಿವರ್ತಿತವಾಗಿರುವುದನ್ನು ಗಮನಿಸಿ. |
02:25 | ‘ಹೈಡ್ರೋಜನ್’ ಅಣುಗಳ ಸಂಖ್ಯೆಯು 6 ರಿಂದ 2 ಕ್ಕೆ ಇಳಿದಿದೆ. |
02:30 | ಈ ಹೊಸ ರಚನೆಯು ‘ಈಥೈನ್’ ಆಗಿದೆ. |
02:34 | ಈ ರಚನೆಗಳ ಹೆಸರುಗಳನ್ನು ನಾವು ಬರೆಯೋಣ. |
02:37 | Add or modify a text ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
02:41 | ರಚನೆಗಳ ಕೆಳಗೆ ಕ್ಲಿಕ್ ಮಾಡಿ. |
02:43 | ರಚನೆಗಳ ಹೆಸರುಗಳನ್ನು ‘ಈಥೇನ್’, ‘ಈಥೀನ್’ ಹಾಗೂ ‘ಈಥೈನ್’ ಎಂದು ನಮೂದಿಸಿ. |
02:53 | ಆಮೇಲೆ, ನಾವು ‘ಟೆಟ್ರಾಹೆಡ್ರಲ್ ಜಿಯೊಮೆಟ್ರೀ’ ಬಗ್ಗೆ ತಿಳಿಯೋಣ. |
02:57 | ನಾವು ರಚನೆಗಳನ್ನು ಒಂದು ಬದಿಗೆ ಸರಿಸೋಣ. |
03:00 | ಎಲ್ಲ ಓಬ್ಜೆಕ್ಟ್ ಗಳನ್ನು ಆಯ್ಕೆಮಾಡಲು Ctrl+A ಒತ್ತಿ. |
03:03 | Select one or more objects ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ ಮತ್ತು ರಚನೆಗಳನ್ನು ಎಳೆಯಿರಿ. |
03:10 | 'ಟೆಟ್ರಾಹೆಡ್ರಲ್ ಮೀಥೇನ್' ರಚನೆಗಾಗಿ ಇಲ್ಲಿ ಒಂದು ಸ್ಲೈಡ್ ಇದೆ. |
03:14 | ಎಲ್ಲ ‘ಬಾಂಡ್’ಗಳ ಉದ್ದಳತೆಯು 1.09 ಆಂಗಸ್ಟ್ರಾಂ ಆಗಿದೆ. |
03:19 | 'ಟೆಟ್ರಾಹೆಡ್ರಲ್ ಮೀಥೇನ್' ರಚನೆಯಲ್ಲಿ, ಎಲ್ಲ ‘ಬಾಂಡ್’ಗಳ ಕೋನಗಳು 109.5 ಅಂಶಗಳಾಗಿವೆ. |
03:31 | ಈಗ, ನಾವು 'ಟೆಟ್ರಾಹೆಡ್ರಲ್ ಈಥೇನ್'ನ ರಚನೆಯನ್ನು ‘ಡ್ರಾ’ ಮಾಡೋಣ. |
03:35 | Add a bond or change the multiplicity of existing one ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
03:41 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
03:43 | ‘ಬಾಂಡ್’ಅನ್ನು ಸಮತಲ ದಿಕ್ಕಿನಲ್ಲಿ (horizontal) ತಿರುಗಿಸಿ. |
03:47 | ‘ಬಾಂಡ್’ನ ಪ್ರತಿಯೊಂದು ತುದಿಗೆ ನಾವು ಮೂರು ‘ಬಾಂಡ್’ಗಳನ್ನು ಡ್ರಾ ಮಾಡೋಣ. |
03:51 | ‘ಟೆಟ್ರಾಹೆಡ್ರಲ್ ಜಿಯೊಮೆಟ್ರೀ’ಯನ್ನು ರೂಪಿಸಲು ‘ಬಾಂಡ್’ಗಳನ್ನು ತಿರುಗಿಸಿ. |
03:55 | ಪ್ರತಿಯೊಂದು ತುದಿಯಮೇಲೆ ಕ್ಲಿಕ್ ಮಾಡಿ. ನಂತರ ಮೂರು ‘ಬಾಂಡ್’ಗಳನ್ನು ಬೇರೆ ದಿಕ್ಕುಗಳಲ್ಲಿ ತಿರುಗಿಸಿ. |
04:02 | ಹೀಗೆಯೇ, ನಾವು ಇನ್ನೊಂದು ತುದಿಯ ಮೇಲೆ ‘ಡ್ರಾ’ ಮಾಡೋಣ. |
04:07 | ನಾವು ತುದಿಗಳಲ್ಲಿ ‘ಹೈಡ್ರೋಜನ್’ ಅಣುಗಳನ್ನು ಜೋಡಿಸೋಣ. |
04:10 | ’ಹೈಡ್ರೋಜನ್’ ಅಣುಗಳನ್ನು ತುದಿಗಳಲ್ಲಿ ಜೋಡಿಸಲು ದೊಡ್ಡಕ್ಷರ H ಅನ್ನು ಒತ್ತಿ. |
04:16 | ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ. ಇದರಲ್ಲಿ ನಾವು H ಅನ್ನು ಆಯ್ಕೆಮಾಡುವೆವು. |
04:21 | Hydrogen ಅಣು, ‘ಟೂಲ್ ಬಾಕ್ಸ್’ನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಗಮನಿಸಿ. |
04:26 | Add or modify an atom ಎನ್ನುವ ಟೂಲ್ನ ಮೇಲೆ ಕ್ಲಿಕ್ ಮಾಡಿ. |
04:29 | ‘ಹೈಡ್ರೋಜನ್’ ಅಣುಗಳನ್ನು ಸೇರಿಸಲು ಎಲ್ಲ ಸ್ಥಾನಗಳ ಮೇಲೆ ಕ್ಲಿಕ್ ಮಾಡಿ. |
04:37 | ‘ಈಥೇನ್’ನ ರಚನೆಗೆ, ‘ಸ್ಟೀರಿಯೋಕೆಮಿಕಲ್ ಬಾಂಡ್’ಗಳನ್ನು ಈಗ ನಾವು ಸೇರಿಸೋಣ. |
04:42 | ಟೂಲ್-ಬಾಕ್ಸ್ ನಲ್ಲಿ ಲಭ್ಯವಿರುವ ‘ಸ್ಟೀರಿಯೋಕೆಮಿಕಲ್ ಬಾಂಡ್’ಗಳು ಈ ರೀತಿಯಾಗಿವೆ. |
04:46 | * Add a wedge bond (ಆಡ್ ಎ ವೆಡ್ಜ್ ಬಾಂಡ್) |
04:48 | * Add a hash bond (ಆಡ್ ಎ ಹ್ಯಾಶ್ ಬಾಂಡ್) |
04:50 | * Add a squiggle bond (ಆಡ್ ಎ ಸ್ಕ್ವಿಗಲ್ ಬಾಂಡ್) |
04:53 | * ಮತ್ತು Add a fore bond (ಆಡ್ ಎ ಫೋರ್ ಬಾಂಡ್). |
04:55 | ‘ಈಥೇನ್’ಅನ್ನು ‘ಸ್ಟೀರಿಯೋಕೆಮಿಕಲ್’ ರಚನೆಗೆ ಪರಿವರ್ತಿಸಲು, ನಾವು Add a wedge bond ಅನ್ನು ಬಳಸೋಣ. |
05:03 | Add a wedge bond ನ ಮೇಲೆ ಕ್ಲಿಕ್ ಮಾಡಿ. |
05:05 | ನಂತರ ಎಲ್ಲ ‘ಬಾಂಡ್’ಗಳ ಮೇಲೆ ಕ್ಲಿಕ್ ಮಾಡಿ. |
05:10 | ಬದಲಾವಣೆಗಳನ್ನು ಗಮನಿಸಿ. |
05:13 | Add a hash bond ನ ಮೇಲೆ ಕ್ಲಿಕ್ ಮಾಡಿ. |
05:15 | ನಂತರ ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿ. |
05:19 | ಈಗ ನಾನು ‘ಇನ್ವರ್ಟ್ ವೆಡ್ಜ್ ಹ್ಯಾಶಸ್’ನ ಬಗ್ಗೆ ವಿವರಿಸುವೆನು. |
05:25 | Edit ಮೆನ್ಯೂ ಗೆ ಹೋಗಿ. ಅಲ್ಲಿ, Preferences ಎನ್ನುವಲ್ಲಿಗೆ ಹೋಗಿ ಅದರ ಮೇಲೆ ಕ್ಲಿಕ್ ಮಾಡಿ. |
05:31 | GChemPaint Preferences (ಜಿ-ಕೆಮ್-ಪೇಂಟ್ ಪ್ರಿಫರೆನ್ಸಸ್) ವಿಂಡೋ ತೆರೆದುಕೊಳ್ಳುತ್ತದೆ. |
05:34 | Invert wedge hashes ಎನ್ನುವ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
05:38 | ‘ಸೆಟ್’ ಮಾಡಿದರೆ, ‘ವೆಡ್ಜ್ ಹ್ಯಾಶಸ್ ಬಾಂಡ್’ಗಳು ಸಾಮಾನ್ಯ ರೂಢಿಯನ್ನು ಅನುಸರಿಸುವವು. |
05:43 | ಕಿರಿದಾದ ಕೊನೆಯು ‘ಬಾಂಡ್’ನ ಆರಂಭದಲ್ಲಿ ಮತ್ತು ಅಗಲವಾದ ಕೊನೆಯು ಇನ್ನೊಂದು ತುದಿಯಲ್ಲಿ ಇರುತ್ತವೆ. |
05:50 | ಇದು ‘ಬಾಂಡ್’ಅನ್ನು ಸರಿಯಾಗಿ ಕಲ್ಪಿಸಿಕೊಳ್ಳಲು ಸಹಾಯಮಾಡುತ್ತದೆ. |
05:55 | GChemPaint ನಲ್ಲಿ ಡೀ-ಫಾಲ್ಟ್ ಆಗಿ ‘Inverse’, ರೂಢಿಯಲ್ಲಿದೆ. ಏಕೆಂದರೆ,ಇದು ‘ಪರ್ಸ್ಪೆಕ್ಟಿವ್ ರೂಲ್’ಗಳೊಂದಿಗೆ ಹೆಚ್ಚು ಸ್ಥಿರವಾಗಿದೆ. |
06:05 | ‘ಹ್ಯಾಶ್ ಬಾಂಡ್’ನಲ್ಲಿಯ ಬದಲಾವಣೆಗಳನ್ನು ಗಮನಿಸಿ. |
06:09 | ವಿಂಡೋವನ್ನು ಮುಚ್ಚಲು ನಾವು Close ‘ಬಟನ್’ನ ಮೇಲೆ ಕ್ಲಿಕ್ ಮಾಡೋಣ. |
06:13 | ‘ಈಥೇನ್ ಸ್ಟ್ರಕ್ಚರ್’ನಲ್ಲಿಯ ‘ಬಾಂಡ್’ಗಳನ್ನು ‘ಹ್ಯಾಶ್ ಬಾಂಡ್’ಗಳಿಗೆ ನಾವು ಬದಲಾಯಿಸೋಣ. |
06:18 | Add a hash bond ನ ಮೇಲೆ ಕ್ಲಿಕ್ ಮಾಡಿ. |
06:21 | ಎಲ್ಲ ‘ಬಾಂಡ್’ಗಳ ಮೇಲೆ ಕ್ಲಿಕ್ ಮಾಡಿ. |
06:27 | ಈಗ ನಾವು ಫೈಲ್ ಅನ್ನು ಸೇವ್ ಮಾಡೋಣ. |
06:30 | ಟೂಲ್ ಬಾರ್ ನ ಮೇಲಿರುವ Save the current file ಎನ್ನುವ ಐಕಾನ್ ಮೇಲೆ ಕ್ಲಿಕ್ ಮಾಡಿ. |
06:34 | Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
06:37 | ಫೈಲ್ ನ ಹೆಸರನ್ನು Formation of bond ಎಂದು ನಮೂದಿಸಿ. |
06:41 | Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
06:44 | ನಾವು ಸಾರಾಂಶಗೊಳಿಸೋಣ. |
06:46 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
06:49 | * ಈಗಿರುವ ‘ಬಾಂಡ್’ಗೆ ‘ಬಾಂಡ್’ಗಳನ್ನು ಸೇರಿಸುವುದು |
06:52 | * ‘ಬಾಂಡ್’ಗಳನ್ನು ಓರಿಯಂಟ್ ಮಾಡುವುದು |
06:54 | * ‘ಸ್ಟೀರಿಯೋಕೆಮಿಕಲ್ ಬಾಂಡ್’ಗಳನ್ನು ಸೇರಿಸುವುದು |
06:56 | * ಮತ್ತು ‘ಇನ್ವರ್ಸ್ ವೆಡ್ಜ್ ಹ್ಯಾಷಸ್’ ಇತ್ಯಾದಿಗಳನ್ನು ಕಲಿತಿದ್ದೇವೆ. |
07:00 | ಒಂದು ಅಸೈನ್ಮೆಂಟ್ ಎಂದು, ‘ಪ್ರೊಪೇನ್’ಅನ್ನು ‘ಪ್ರೊಪೈನ್’ಗೆ ಪರಿವರ್ತಿಸಿ. |
07:04 | * ‘ಪ್ರೊಪೇನ್’ ಮತ್ತು ‘ಬ್ಯುಟೇನ್’ಗಳ ರಚನೆಗಳನ್ನು ‘ಡ್ರಾ’ ಮಾಡಿ. |
07:07 | * ‘ಸ್ಟೀರಿಯೋಕೆಮಿಕಲ್ ಬಾಂಡ್’ಗಳನ್ನು ತೋರಿಸಿ. |
07:11 | ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಿಸಬೇಕು. |
07:16 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial |
07:19 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
07:23 | ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:28 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:33 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:36 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
07:42 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
07:47 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
07:54 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
08:00 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್. ವಂದನೆಗಳು. |