Difference between revisions of "GIMP/C2/Easy-Animation/Kannada"

From Script | Spoken-Tutorial
Jump to: navigation, search
(Created page with "{| border = 1 |'''Time''' |'''Narration''' |- | 00:23 | ಇವತ್ತು ನಾವು ’ಸಿಂಪಲ್ ಅನಿಮೇಶನ್’ ಎನ್ನುವುದರ ಬಗ್...")
 
Line 4: Line 4:
 
|-
 
|-
 
| 00:23
 
| 00:23
| ಇವತ್ತು ನಾವು ’ಸಿಂಪಲ್ ಅನಿಮೇಶನ್’ ಎನ್ನುವುದರ ಬಗ್ಗೆ ಮಾತನಾಡೋಣ.
+
|ಈದಿನ ನಾವು ’ಸಿಂಪಲ್ ಅನಿಮೇಶನ್’ ಎನ್ನುವುದರ ಬಗ್ಗೆ ಮಾತನಾಡೋಣ.
 
|-
 
|-
 
| 00:28
 
| 00:28
Line 13: Line 13:
 
|-
 
|-
 
| 00:46
 
| 00:46
| ಜರ್ಮನಿಯಲ್ಲಿಯ ಪುರಾತನ ‘ಅನಿಮೇಶನ್’ಗಳು ಡೌಮೆಂಕೀನೋ ಅಥವಾ ಫ್ರಂಟ್ ಸಿನಿಮಾ ಎಂದು ಕರೆಯಲ್ಪಡುತ್ತವೆ.
+
| ಜರ್ಮನಿಯಲ್ಲಿಯ ಪುರಾತನ ‘ಅನಿಮೇಶನ್’ಗಳು ಡೌಮೆನ್ಕೀನೋ ಅಥವಾ ಫ್ರಂಟ್ ಸಿನಿಮಾ ಎಂದು ಕರೆಯಲ್ಪಡುತ್ತವೆ.
 
|-
 
|-
 
| 00:55
 
| 00:55
Line 118: Line 118:
 
|-
 
|-
 
| 06:53
 
| 06:53
| ನಾನು ಅದನ್ನು ‘80 by 80’ ‘ಪಿಕ್ಸೆಲ್’ಗಳಿಗೆ ಮತ್ತೆ ಕುಗ್ಗಿಸಬೇಕು. ಆಮೇಲೆ ನಾನು ನನ್ನ ಬ್ಯಾಕ್‌ಗ್ರೌಂಡ್ ಗಾಗಿ ಬಿಳಿ ಬಣ್ಣವನ್ನು ಸೇರಿಸಬೇಕು ಏಕೆಂದರೆ ಕಪ್ಪು ಈ ‘ಇಮೇಜ್’ಗಾಗಿ ತುಂಬಾ ಗಡುಸಾಗುತ್ತದೆ.
+
| ನಾನು ಅದನ್ನು ‘80 by 80’ ‘ಪಿಕ್ಸೆಲ್’ಗಳಿಗೆ ಮತ್ತೆ ಕುಗ್ಗಿಸಬೇಕು. ಆಮೇಲೆ ನಾನು ನನ್ನ ಬ್ಯಾಕ್ಗ್ರೌಂಡ್ ಗಾಗಿ ಬಿಳಿ ಬಣ್ಣವನ್ನು ಸೇರಿಸಬೇಕು ಏಕೆಂದರೆ ಕಪ್ಪು ಈ ‘ಇಮೇಜ್’ಗಾಗಿ ತುಂಬಾ ಗಡುಸಾಗುತ್ತದೆ.
 
|-
 
|-
 
| 07:12
 
| 07:12
Line 142: Line 142:
 
|-
 
|-
 
| 08:09
 
| 08:09
| ‘ಶಾರ್ಪ್‌ನೆಸ್’ಅನ್ನು ನಾನು ಸಾಕಷ್ಟು ಹೆಚ್ಚಿಸಬೇಕು.
+
| ‘ಶಾರ್ಪ್ನೆಸ್’ಅನ್ನು ನಾನು ಸಾಕಷ್ಟು ಹೆಚ್ಚಿಸಬೇಕು.
 
|-
 
|-
 
| 08:15
 
| 08:15
Line 337: Line 337:
 
|-
 
|-
 
| 17:22
 
| 17:22
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ …………………
+
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ.

Revision as of 21:55, 26 July 2015

Time Narration
00:23 ಈದಿನ ನಾವು ’ಸಿಂಪಲ್ ಅನಿಮೇಶನ್’ ಎನ್ನುವುದರ ಬಗ್ಗೆ ಮಾತನಾಡೋಣ.
00:28 ಗಿಂಪ್ ಅನಿಮೇಶನ್ ನ ಪ್ಯಾಕೇಜ್, GAP (ಗ್ಯಾಪ್) ಅಥವಾ ‘ಗಿಂಪ್ ಅನಿಮೇಶನ್ ಪ್ಯಾಕೇಜ್’, ಎಂದು ಕರೆಯಲ್ಪಡುತ್ತದೆ. ಇದು ಅನಿಮೇಶನ್, ಚಿತ್ರಗಳು ಮತ್ತು ಚಲನಚಿತ್ರಗಳನ್ನು ಮಾಡಲು ಸಾಕಷ್ಟು ಉಪಯುಕ್ತವಾಗಿದೆ.
00:43 ಆದರೆ ನಾವು ಅದನ್ನು ನಂತರ ನೋಡೋಣ.
00:46 ಜರ್ಮನಿಯಲ್ಲಿಯ ಪುರಾತನ ‘ಅನಿಮೇಶನ್’ಗಳು ಡೌಮೆನ್ಕೀನೋ ಅಥವಾ ಫ್ರಂಟ್ ಸಿನಿಮಾ ಎಂದು ಕರೆಯಲ್ಪಡುತ್ತವೆ.
00:55 ಮತ್ತು ಇಂಗ್ಲೀಷ್’ನಲ್ಲಿ ಇದು ‘ಫ್ಲಿಪ್ ಬುಕ್’ ಅಥವಾ ‘ಫ್ಲಿಕ್ ಬುಕ್’ ಎಂದು ಕರೆಯಲ್ಪಡುತ್ತದೆ.
01:02 ಈ ಪುಸ್ತಕವು ಹೆಚ್ಚೂಕಮ್ಮಿ ಒ೦ದೇ ರೀತಿಯಲ್ಲಿರುವ ಬಹಳಷ್ಟು ಇಮೇಜ್’ಗಳನ್ನು ಒಳಗೊಂಡಿದೆ. ಆದರೆ ಪುಟದಿಂದ ಪುಟಕ್ಕೆ ಸಣ್ಣಪುಟ್ಟ ಮಾರ್ಪಾಡುಗಳು ಇದ್ದು ನೀವು ಅವುಗಳನ್ನು ತಿರುವಿ ಹಾಕಿದರೆ ನಿಮಗೆ ಚಲಿಸುವ ಚಿತ್ರ ಸಿಗುತ್ತದೆ.
01:20 ಇಲ್ಲಿರುವ ಈ ವೀಡಿಯೋ ಕೂಡ ಅನಿಮೇಶನ್ ಆಗಿದೆ ಮತ್ತು ನೀವು ಪ್ರತಿ ಸೆಕೆಂಡಿಗೆ 25 ‘ಇಮೇಜ್’ಗಳನ್ನು ಹೊಂದಿದ ಒಂದು ‘ಸ್ಲೈಡ್ ಶೋ’ ನೋಡುತ್ತಿರುವಿರಿ.
01:36 ಇಲ್ಲಿ ಎರಡು ಜಾಹೀರಾತುಗಳಿವೆ. ಇದು ನನ್ನದು ಮತ್ತು ಇದು ರಾಬ್ ಅವರ, ಅನಿಮೇಟೆಡ್ gif (ಜಿಫ್) ಅನ್ನು ತೋರಿಸುವದಾಗಿದೆ.
01:51 ನನಗೆ, ನನ್ನ ಜಾಹೀರಾತನ್ನು ಇಲ್ಲಿ ಸುಧಾರಿಸಬೇಕಾಗಿದೆ.
01:56 ನನಗೆ, ನನ್ನ ಜಾಹೀರಾತಿನಲ್ಲಿ ‘ಮೀಟ್ ದ ಗಿಂಪ್’ನ ಲೋಗೋವನ್ನು ತೋರಿಸಬೇಕಾಗಿದೆ.
02:04 ಈಗ, ನನಗೆ ಈ ಇಮೇಜನ್ನು ನನ್ನ ‘ಡೆಸ್ಕ್ಟಾಪ್’ನಲ್ಲಿ ಸೇವ್ ಮಾಡಬೇಕಾಗಿದೆ ಹಾಗೂ ಯಶಸ್ವಿಯಾಗಿ ‘ಅನಿಮೇಶನ್’ಅನ್ನು ತಯಾರಿಸಬೇಕಾಗಿದೆ.
02:15 ಆದ್ದರಿಂದ ಈಗ ನಾನು ನನ್ನ ಸ್ವಂತದ ಇಮೇಜನ್ನು ಕಳುವುಮಾಡಿ ಅದನ್ನು ನನ್ನ ‘ಡೆಸ್ಕ್ಟಾಪ್’ನ ಮೇಲೆ ಸೇವ್ ಮಾಡುತ್ತೇನೆ.
02:24 ನಾನು ಈ ಇಮೇಜನ್ನು GIMP ನಲ್ಲಿ ಓಪನ್ ಮಾಡುತ್ತೇನೆ.
02:28 ಹೀಗೆ, ‘ಟೂಲ್ ಬಾಕ್ಸ್’ನ ಮೇಲೆ ಎಳೆಯುತ್ತೇನೆ. ಇದು ಇಲ್ಲಿ ಇದೆ.
02:35 ನಾನು ಇಲ್ಲಿ, ಇದನ್ನು ಸ್ವಲ್ಪ ದೊಡ್ಡದು ಮಾಡುತ್ತೇನೆ.
02:43 ಮೂಲತಃ ಈ ಇಮೇಜ್ನಲ್ಲಿ ಅನಿಮೇಶನ್ ಇಲ್ಲ. ಆದರೆ ‘ಲೇಯರ್ ಡೈಲಾಗ್’ನಲ್ಲಿ ಎಂಟು ‘ಲೇಯರ್’ಗಳ ಸ್ಟಾಕ್ ಇದೆ.
02:56 ಇದು ಇಂಡೆಕ್ಸ್ ಮಾಡಲಾದ gif (ಜಿಫ್/ಗಿಫ್) ಇಮೇಜ್ ಇದ್ದು ‘80 by 80’ ‘ಪಿಕ್ಸೆಲ್’ಗಳ ಎಂಟು ಲೇಯರ್ಗಳನ್ನು ಹೊಂದಿದೆ ಎಂದು ನೀವು ಮೇಲ್ಗಡೆಯಲ್ಲಿ ನೋಡಬಹುದು.
03:13 ಈ ಇಮೇಜ್. 256 ವಿಭಿನ್ನ ಬಣ್ಣಗಳಿಂದ ಮಾಡಲ್ಪಟ್ಟಿದೆ.
03:19 ಈ ಬಣ್ಣಗಳನ್ನು ನೋಡಲು ಕ್ರಮವಾಗಿ Dialog, Colormap ಗಳಿಗೆ ಹೋಗಿ.
03:27 ಈ ಇಮೇಜ್ನಲ್ಲಿ ಬಳಸಲಾದ ಬಣ್ಣಗಳನ್ನು ಇಲ್ಲಿ ನೀವು ನೋಡಬಹುದು. ಇಲ್ಲಿ ಬಹಳಷ್ಟು ನೀಲಿ ಹಾಗೂ ಇನ್ನೂ ಹಲವು ಬಣ್ಣಗಳು ಇವೆ. ಪ್ರತಿಯೊಂದು ಬಣ್ಣವು ಇಂಡೆಕ್ಸ್ ಹಾಗೂ HTML ಸಂಕೇತಗಳನ್ನು ಹೊಂದಿದೆ.
03:50 gif ‘ಇಮೇಜ್’ಗಳು ಇಂಡೆಕ್ಸ್ ಮಾಡಲ್ಪಟ್ಟಿವೆ, rgb(ಆರ್ ಜಿ ಬಿ) ‘ಇಮೇಜ್’ಗಳಲ್ಲ. ಹೀಗಾಗಿ ಅವುಗಳಿಗೆ ಒಂದೇ ಒಂದು ಸೀಮಿತ ಬಣ್ಣವು ಲಭ್ಯವಿದೆ.
04:05 ಈಗ ನಾವು ಇಲ್ಲಿಯ ಫ್ರೇಮ್’ಗಳತ್ತ ನೋಡೋಣ.
04:10 ಮೊದಲನೆಯ ‘ಲೇಯರ್’ಅನ್ನು, Background ಎಂದು ಹೆಸರಿಸಲಾಗಿದೆ ಹಾಗೂ ಬ್ರಾಕೆಟ್ ನಲ್ಲಿ ಮಿಲಿಸೆಕೆಂಡುಗಳು ಎಂದರೆ 5 ಸೆಕೆಂಡುಗಳು ಎಂದು ಇರುವುದನ್ನು ನೀವು ನೋಡಬಹುದು.
04:25 ಆದ್ದರಿಂದ ಈ ಇಮೇಜ್, 5 ಸೆಕೆಂಡುಗಳವರೆಗೆ ತೋರಿಸಲ್ಪಡುತ್ತದೆ. ಆಮೇಲೆ 2,3,4 ‘ಫ್ರೇಮ್’ಗಳು 100 ಮಿಲಿಸೆಕೆಂಡುಗಳೊಂದಿಗೆ ಅನುಸರಿಸುತ್ತವೆ. ಇಲ್ಲಿ ‘replace’ ಆಯ್ಕೆಯಿದೆ.
04:42 ‘ಫ್ರೇಮ್’ಗಳನ್ನು ನೋಡಲು ನಾನು Shift ಕೀಯನ್ನು ಒತ್ತಿ ಹಿಡಿದು, ಇಲ್ಲಿರುವ ಕಣ್ಣಿನ ಮೇಲೆ ಕ್ಲಿಕ್ ಮಾಡುತ್ತೇನೆ. ಉಳಿದೆಲ್ಲ ‘ಫ್ರೇಮ್’ಗಳನ್ನು ಕಣ್ಮರೆ ಮಾಡಲಾಗಿದೆ.
04:55 ಈಗ ನಾನು ಅವುಗಳನ್ನು ಮೇಲ್ಗಡೆ, ಇಲ್ಲಿ ಪೇರಿಸಿಡಬಹುದು.
05:03 ‘ಇಂಡೆಕ್ಸ್ ಕಲರ್’ಗಳನ್ನು ಬಳಸುವುದರಲ್ಲಿ ಒಂದು ನ್ಯೂನತೆಯಿದೆ.
05:07 ಇದರಲ್ಲಿ ನೀವು ಬಹಳಷ್ಟು ಚುಕ್ಕೆಗಳನ್ನು ನೋಡಬಹುದು. ಏಕೆಂದರೆ ಈ ‘ಟೈಲ್’ಗೆ ಕೇವಲ 256 ವಿಭಿನ್ನ ಬಣ್ಣಗಳು ಮಾತ್ರ ಲಭ್ಯವಿದೆ.
05:18 ಇಲ್ಲಿ, ಇದು ನನ್ನ ಬ್ಯಾಕ್ಗ್ರೌಂಡ್ ಇಮೇಜ್ ಆಗಿದೆ.
05:23 ಇದು ಇನ್ನೊಂದು ಮತ್ತು ಈ ‘ಅನಿಮೇಶನ್’ನಲ್ಲಿ ನಾನು ಬಳಸಿದ ಇನ್ನೊಂದು ಇಮೇಜ್ ಕೂಡ ಆಗಿದೆ. ಇದು ಜನರಿಂದ ಮಾಡಲ್ಪಟ್ಟಿ ಡ್ರಾಯಿಂಗ್ ಆಗಿದೆ, ಪಾಠವನ್ನು ಅನುಸರಿಸಿದ್ದಲ್ಲ. ನಾನು ಅವನ ಅನುಮತಿಯಿಂದ ಇದನ್ನು ಉಪಯೋಗಿಸಿದ್ದೇನೆ.
05:44 ಇನ್ನುಳಿದ ಈ ‘ಇಮೇಜ್’ಗಳು, ಒಂದರಿಂದ ಇನ್ನೊಂದಕ್ಕೆ ಸುಗಮವಾದ ದಾರಿಮಾಡಲು, ಇತರ ‘ಇಮೇಜ್’ಗಳ ಮಿಶ್ರಣಗಳಾಗಿವೆ.
05:56 ಈ ‘ಅನಿಮೇಶನ್’ಅನ್ನು ಮತ್ತೆ ಮಾಡಲು, ನಾನು ಈ ‘ಸ್ಟಾಕ್’ನಿಂದ ಎರಡು ‘ಇಮೇಜ್’ಗಳನ್ನು ತೆಗೆದುಕೊಳ್ಳಬೇಕು. ಇದು ತುಂಬಾ ಸುಲಭವಾಗಿದೆ.
06:06 ಈ ‘ಥಂಬ್ನೇಲ್’ನ ಮೇಲೆ ಇಲ್ಲಿ ಕ್ಲಿಕ್ ಮಾಡಿ, ‘ಮೌಸ್ ಬಟನ್’ಅನ್ನು ಹಿಡಿದು ಟೂಲ್ ಬಾಕ್ಸ್ ವರೆಗೆ ಎಳೆದು ತನ್ನಿ.
06:15 ಇದು ನನ್ನ ಮೊದಲನೆಯ ಇಮೇಜ್ ಆಗಿದೆ.
06:18 ಈಗ ಇಲ್ಲಿ ಕ್ಲಿಕ್ ಮಾಡುತ್ತೇನೆ. ಇಲ್ಲಿ, ಇದು ನನ್ನ ಎರಡನೆಯ ಇಮೇಜ್ ಆಗಿದೆ.
06:24 ಹೀಗಾಗಿ, ಇಲ್ಲಿ ನನಗೆ ಈ ಎರಡು ‘ಇಮೇಜ್’ಗಳು ಸಿಕ್ಕಿವೆ. ನಾನು ನನ್ನ ಮೂಲ ‘ಅನಿಮೇಶನ್’ಅನ್ನು ಕ್ಲೋಸ್ ಮಾಡಬಹುದು. ನನಗೆ ಅದರಲ್ಲಿಯ ಏನನ್ನೂ ಸೇವ್ ಮಾಡಬೇಕಾಗಿಲ್ಲ.
06:40 ಈಗ ನನಗೆ Meet the GIMP ನ ಲೋಗೋ ಸೇರಿಸಬೇಕಾಗಿದೆ.
06:46 ಸುಮ್ಮನೆ ಅದನ್ನು ಟೂಲ್ ಬಾಕ್ಸ್ ಮೇಲೆ ಎಳೆದು ತನ್ನಿ. ಅದು ಇಲ್ಲಿದೆ.
06:53 ನಾನು ಅದನ್ನು ‘80 by 80’ ‘ಪಿಕ್ಸೆಲ್’ಗಳಿಗೆ ಮತ್ತೆ ಕುಗ್ಗಿಸಬೇಕು. ಆಮೇಲೆ ನಾನು ನನ್ನ ಬ್ಯಾಕ್ಗ್ರೌಂಡ್ ಗಾಗಿ ಬಿಳಿ ಬಣ್ಣವನ್ನು ಸೇರಿಸಬೇಕು ಏಕೆಂದರೆ ಕಪ್ಪು ಈ ‘ಇಮೇಜ್’ಗಾಗಿ ತುಂಬಾ ಗಡುಸಾಗುತ್ತದೆ.
07:12 ಅದನ್ನು ಮಾಡಲು, ನಾನು ಕ್ರಮವಾಗಿ Add a new layer, Layer Fill Type, white ಗಳನ್ನು ಆರಿಸಿಕೊಂಡು ಅದನ್ನು ಕೆಳಗೆ ಎಳೆಯುತ್ತೇನೆ. ಈಗ white ನನ್ನ Background ಆಗಿದೆ.
07:25 ‘Layer ಡೈಲಾಗ್’ನಲ್ಲಿ ರೈಟ್ ಕ್ಲಿಕ್ ಮಾಡಿ ಮತ್ತು Flatten Image ಅನ್ನು ಆಯ್ಕೆಮಾಡಿ.
07:33 ಈಗ ನನಗೆ White ನ ಮೇಲೆ, Meet The GIMP ನ ಚಪ್ಪಟೆಯಾಗಿರುವ ಲೋಗೋ ಸಿಕ್ಕಿದೆ.
07:39 ಈಗ ಕ್ರಮವಾಗಿ Image, Scale Image ಗಳಿಗೆ ಹೋಗುತ್ತೇನೆ. ನನಗೆ 80 ಪಿಕ್ಸೆಲ್ಗಳು ಬೇಕಾಗಿದೆ. Interpolation ನಲ್ಲಿ Cubic ಸರಿಯಾಗಿದೆ. Scale ನ ಮೇಲೆ ಕ್ಲಿಕ್ ಮಾಡಿ.
07:51 ಈಗ ಇಮೇಜ್, ಮತ್ತೆ ಸ್ಕೇಲ್ ಮಾಡಲ್ಪಟ್ಟಿದೆ ಆದರೆ ಅದು ತುಂಬಾ ನಯವಾಗಿದೆ.
07:58 ರಿ-ಸ್ಕೇಲಿಂಗ್ ಮಾಡಿದಮೇಲೆ ನೀವು ಅದನ್ನು ಶಾರ್ಪ್ ಮಾಡಬೇಕು.
08:03 ಆದ್ದರಿಂದ, ನಾನು ಕ್ರಮವಾಗಿ Filters, Enhance, Sharpen ಗಳಿಗೆ ಹೋಗುತ್ತೇನೆ.
08:09 ‘ಶಾರ್ಪ್ನೆಸ್’ಅನ್ನು ನಾನು ಸಾಕಷ್ಟು ಹೆಚ್ಚಿಸಬೇಕು.
08:15 ನನಗೆನಿಸುವಂತೆ ಇದು ಚೆನ್ನಾಗಿದೆ.
08:22 ಈಗ, ಒಂದು ಅನಿಮೇಶನ್ ಆಗಲು ಕಾಯುತ್ತಿರುವ ಮೂರು ‘ಇಮೇಜ್’ಗಳು ನನ್ನ ಹತ್ತಿರ ಇವೆ.
08:29 ನಾನು ಈ ಮೂಲ ‘ಇಮೇಜ್’ಗಳನ್ನು ಸೇವ್ ಮಾಡುವುದನ್ನು ಹೆಚ್ಚೂಕಮ್ಮಿ ಮರೆತೇಬಿಟ್ಟಿದ್ದೇನೆ.
08:37 ಇಲ್ಲಿರುವ Meet The GIMP ಎನ್ನುವುದು ಮೊದಲನೆಯದಾಗಿದೆ. ನಾನು ಅದನ್ನು mtg80.xcf (ಎಮ್ ಟಿ ಜಿ ಏಟಿ ಡಾಟ್ ಎಕ್ಸ್ ಸಿ ಎಫ್) ಎಂದು ಸೇವ್ ಮಾಡುತ್ತೇನೆ.
08:55 ಮತ್ತು ಇಲ್ಲಿ ಇದನ್ನೂ ಸಹ.
08:58 ‘ಮೆನ್ಯೂ’ಗೆ ಹೋಗುವ ಇನ್ನೊಂದು ದಾರಿ, ಇಮೇಜ್ನಲ್ಲಿ ರೈಟ್ ಕ್ಲಿಕ್ ಮಾಡಿ, ಕ್ರಮವಾಗಿ Image, Mode ಮತ್ತುRGB ಗಳಿಗೆ ಹೋಗಿ.
09:11 ಆಮೇಲೆ ಕ್ರಮವಾಗಿ File, Save As ಗಳಿಗೆ ಹೋಗಿ.
09:21 ನಾನು ಈ ಇಮೇಜನ್ನು ನನ್ನ ‘ಬೇಸ್’ನಂತೆ ಉಪಯೋಗಿಸುವೆನು.
09:26 ಈ ಸಲ ‘ಕಾಪಿ’ಯಂತೆ ನಾನು ಅದನ್ನು ಮತ್ತೆ ಸೇವ್ ಮಾಡುತ್ತೇನೆ.
09:33 ನಾನು ಅದನ್ನು avatar.xcf ಎಂದು ಕರೆಯುತ್ತೇನೆ.
09:41 ಹೌದು. ನನಗೆ ಅದನ್ನು ಬದಲಾಯಿಸಬೇಕಾಗಿದೆ. ನಾನು ಅದನ್ನು ಮೊದಲು ಮಾಡಿದ್ದೇನೆ.
09:48 ಕ್ರಮವಾಗಿ File, Open ಗಳಿಗೆ ಹೋಗಿ.
09:52 ಇಲ್ಲಿ, ಇದು ನನ್ನ ಮೂಲ ಇಮೇಜ್ ಆಗಿದೆ.
09:56 ನಾನು ಮಾಡಬೇಕಾದ ಮೊದಲ ಕೆಲಸ, ಈ ಇಮೇಜನ್ನು Meet The GIMP ನ ಲೋಗೋದೊಂದಿಗೆ ಬ್ಲೆಂಡ್ ಮಾಡುವುದು.
10:05 ಅದಕ್ಕಾಗಿ ನಾನು ಇದರ ಒಂದು ‘ಕಾಪಿ’ಯನ್ನು ಮಾಡಿ ಅದನ್ನು ಲೋಗೋದೊಂದಿಗೆ ಬೆರೆಸುತ್ತೇನೆ.
10:14 ಕ್ಲಿಕ್ ಮಾಡಿ ಇದನ್ನು ನನ್ನ ಟೂಲ್ ಬಾಕ್ಸ್ ನಲ್ಲಿ ಎಳೆಯುವುದರಿಂದ, ನಾನು ಈ ಇಮೇಜನ್ನು ಆಯ್ಕೆಮಾಡುತ್ತೇನೆ. ಇಲ್ಲಿ ನನ ಲೇಯರ್ ಇದೆ. ಈಗ ಲೋಗೋವನ್ನು ಆಯ್ಕೆಮಾಡಿ, ಅದನ್ನು ಈ ‘ಇಮೇಜ್’ನ ಮೇಲೆ ಎಳೆಯುತ್ತೇನೆ. ನಿಮಗೆ ಒಂದು untitled, ಸ್ಕ್ರ್ಯಾಪ್ ಲೇಯರ್ ಸಿಗುತ್ತದೆ ಮತ್ತು ಇದು ಯಾವಾಗಲೂ ಸೇವ್ ಮಾಡಲ್ಪಡುವದಿಲ್ಲ.
10:40 ಈಗ ಇಲ್ಲಿ, ನನ್ನ ಇಮೇಜ್’ಗಳೊಂದಿಗೆ ಎರಡು ‘ಲೇಯರ್’ಗಳು ಇರುತ್ತವೆ.
10:46 ನನಗೆ ಈ ಎರಡು ‘ಲೇಯರ್’ಗಳ ನಡುವೆ ಮೂರು ಸ್ಟೆಪ್ ಗಳು ಬೇಕಾಗಿವೆ.
10:51 ಅದನ್ನು ಮಾಡಲು ನಾನು ಸುಮಾರು 25% (ಇಪ್ಪತ್ತೈದು ಪ್ರತಿಶತ) ಟ್ರಾನ್ಸ್ಪರೆನ್ಸಿ ಯನ್ನು ಆರಿಸಿಕೊಳ್ಳುತ್ಟೇನೆ.
11:01 ಈಗ ನಾನು ಈ ಇಮೇಜನ್ನು ಫ್ಲ್ಯಾಟ್ ಮಾಡಿ ನನ್ನ avatar.xcf ‘ಇಮೇಜ್’ಗೆ ಎಳೆಯುತ್ತೇನೆ.
11:11 ಈ ಹೆಸರುಗಳನ್ನು ನಾನು ಆಮೇಲೆ ಬದಲಾಯಿಸುತ್ತೇನೆ.
11:18 ನಾನು untitled ‘ಇಮೇಜ್’ಗೆ ಮರಳಿಹೋಗಿ, Edit ಮತ್ತು Undo ಗಳಿಗೆ ಹೋಗುತ್ತೆನೆ.
11:27 ಈಗ ನಾನು ‘ಟ್ರಾನ್ಸ್ಪರೆನ್ಸಿ’ ಯನ್ನು ಸುಮಾರು 50% (ಐವತ್ತು ಪ್ರತಿಶತ) ಕ್ಕೆ ಸೆಟ್ ಮಾಡುತ್ತೇನೆ.
11:36 ‘ಲೇಯರ್’ನ ಮೇಲೆ ರೈಟ್ ಕ್ಲಿಕ್ ಮಾಡಿ Flatten Image ಅನ್ನು ಆಯ್ಕೆಮಾಡಿ. ಇದನ್ನು ಎಳೆಯುವ ಮೊದಲು ನಾನು ‘ಲೇಯರ್’ಅನ್ನು Frame X ಎಂದು ‘ರೀ-ನೇಮ್’ ಮಾಡುತ್ತೇನೆ ಮತ್ತು ‘ಬ್ರಾಕೆಟ್’ನಲ್ಲಿ 100 ಮಿಲಿಸೆಕೆಂಡುಗಳೆಂದು ಟೈಪ್ ಮಾಡುತ್ತೇನೆ..
12:02 ಈಗ ಇದನ್ನು ನಾನು avatar.xcf ಗೆ ಎಳೆಯುತ್ತೇನೆ ಮತ್ತು ನನ್ನ ‘ಇಮೇಜ್’ಗೆ ಮರಳುತ್ತೇನೆ.
12:14 ctrl + Z ಒತ್ತುತ್ತೇನೆ. ಮೇಲಿನ ‘ಲೇಯರ್’ನ ಓಪ್ಯಾಸಿಟೀಯನ್ನು ಸುಮಾರು 75% (ಎಪ್ಪತ್ತೈದು ಪ್ರತಿಶತ) ಕ್ಕೆ ಬದಲಾಯಿಸುತ್ತೇನೆ.
12:26 ’ಲೇಯರ್’ನ ಮೇಲೆ ರೈಟ್ ಕ್ಲಿಕ್ ಮಾಡಿ, Flatten Image ಅನ್ನು ಆಯ್ಕೆಮಾಡುತ್ತೇನೆ.
12:34 ಈ ‘ಲೇಯರ್’ಅನ್ನು ನಾನು ಈ ‘ಇಮೇಜ್’ಗೆ ಎಳೆಯುತ್ತೇನೆ.
12:39 ಈ ಅನಿಮೇಶನ್ ಸ್ಟೆಪ್ ಗಾಗಿ ಇಷ್ಟೇ ಆಗಿದೆ.
12:45 ಈಗ ನಾನು ಲೋಗೋವನ್ನು ಈ ‘ಇಮೇಜ್’ಗೆ ಎಳೆಯಬೇಕು. ‘ಬ್ಲೆಂಡಿಂಗ್’ಗಾಗಿ ಇಲ್ಲಿ ನನ್ನ ಮೊದಲ ಮೂರು ‘ಲೇಯರ್’ಗಳಿವೆ.
12:57 ಈಗ ನಾನು ಸ್ಕ್ರ್ಯಾಪ್ ‘ಲೇಯರ್’ಅನ್ನು ಇಲ್ಲಿ ಕ್ಲೋಸ್ ಮಾಡುತ್ತೇನೆ ಹಾಗೂ ಸೇವ್ ಮಾಡುವುದಿಲ್ಲ.
13:05 ಈಗ, ಇದು ಹೇಗೆ ಆಗಿದೆ ಎಂದು ನೋಡೋಣ.
13:10 ಆದರೆ, ಅದಕ್ಕೂ ಮೊದಲು ನಾನು ನನ್ನ ಕೆಲಸವನ್ನು ಇಲ್ಲಿ ‘ಸೇವ್’ ಮಾಡುತ್ತೇನೆ.
13:15 ಈಗ ನಾನು ಕ್ರಮವಾಗಿ Filters, Animation ಮತ್ತು Playback ಗಳಿಗೆ ಹೋಗುತ್ತೇನೆ.
13:26 ಇದು ನನ್ನ ಅನಿಮೇಶನ್ ಆಗಿದೆ.
13:29 ನಾನು Play (ಪ್ಲೇ) ದ ಮೇಲೆ ಕ್ಲಿಕ್ ಮಾಡುತ್ತೇನೆ.
13:33 Play ಮಾಡುವ ಮೊದಲು ನಾನು ಈ ‘ಲೇಯರ್’ಗಳ ಹೆಸರುಗಳನ್ನು ಬದಲಾಯಿಸಬೇಕು.
13:43 ಇತರ ‘ಇಮೇಜ್ ವರ್ಡ್ ಪ್ರೊಸೆಸ್ಸಿಂಗ್’ ಆಯ್ಕೆಗಳ ರೀತಿಯಲ್ಲಿಯೇ ‘ಲೇಯರ್’ಗಳನ್ನು ನೀವು ‘ರೀ-ನೇಮ್’ ಮಾಡಬಹುದು.
13:56 ಸುಮ್ಮನೆ ‘ಟೆಕ್ಸ್ಟ್’ಅನ್ನು ಆಯ್ಕೆ ಮಾಡಿ. Ctrl + C ಯನ್ನು ಒತ್ತಿ ಹಾಗೂ ಮುಂದಿನ ‘ಲೇಯರ್’ನ ಮೇಲೆ ಡಬಲ್ ಕ್ಲಿಕ್ ಮಾಡಿ. Ctrl + V ಒತ್ತಿ. ಮತ್ತು ಅವಶ್ಯವಿರುವದನ್ನು ಬದಲಾಯಿಸಿ.
14:14 ಈಗ ಎಲ್ಲ ‘ಫ್ರೇಮ್’ಗಳು, ಅವುಗಳಿಗೆ ಸೂಕ್ತವಾದ ಹೆಸರನ್ನು ಹೊಂದಿವೆ.
14:22 ನಾನು ನನ್ನ ‘ಇಮೇಜ್’ಗೆ ಮರಳಿ ಹೋಗಿ, ಕ್ರಮವಾಗಿ Filter, Animation, Playback ಗಳನ್ನು ಆಯ್ಕೆಮಾಡುತ್ತೇನೆ. ನಾವು ಇಲ್ಲಿ ಇದನ್ನು ನೋಡೋಣ.
14:34 ನೀವು ಮೂಲ ‘ಇಮೇಜ್’ಅನ್ನು ನೋಡುತ್ತೀರಿ.
14:38 ಮತ್ತು ಇದನ್ನು ಬೇರೆ ‘ಇಮೇಜ್’ಗೆ ಪರಿವರ್ತಿಸಲಾಗಿದೆ. ಆದರೆ ಅದು ಬಹಳ ಶೀಘ್ರವಾಗಿದೆ.
14:50 ಅದು ಸ್ವಲ್ಪ ನಿಧಾನವಾಗಬಹುದಿತ್ತು.
14:55 ಆದ್ದರಿಂದ, ನಾನು ‘ಟೈಮಿಂಗ್’ಅನ್ನು 200 ಮಿಲಿಸೆಕೆಂಡುಗಳಿಗೆ ಬದಲಾಯಿಸುತ್ತೇನೆ.
15:02 ಆದ್ದರಿಂದ, ಮತ್ತೆ Filters, Animation, Playback.
15:15 ಇದು ಉತ್ತಮವಾಗಿದೆ.
15:18 ಕೊನೆಯದಾಗಿ, ಈ ‘ಇಮೇಜ್’ಗೆ ‘ಇಂಡೆಕ್ಸ್’ ಮಾಡುವುದು ಮತ್ತು ‘gif ಇಮೇಜ್’ ಎಂದು ಸೇವ್ ಮಾಡುವುದು. ಇದನ್ನು ಸುಲಭವಾಗಿ ಮಾಡಲಾಗುತ್ತದೆ.
15:30 ಕ್ರಮವಾಗಿ File, Save As ಗಳಿಗೆ ಹೋಗಿ. ಆಮೇಲೆ ‘ನೇಮ್ ಎಕ್ಸ್ಟೆನ್ಶನ್’ಅನ್ನು GIF ಗೆ ಬದಲಾಯಿಸಿ. Save ನ ಮೇಲೆ ಕ್ಲಿಕ್ ಮಾಡಿ.
15:43 ನಂತರ ನನಗೆ ಆಯ್ಕೆಯ ಒಂದು ಡೈಲಾಗ್ ಸಿಗುತ್ತದೆ.
15:47 ಇಲ್ಲಿ ಈ ‘ಲೇಯರ್’ಗಳನ್ನು gif (ಜಿಫ್), ನಿರ್ವಹಿಸಲು ಸಾಧ್ಯವಿಲ್ಲ.
15:52 ಮತ್ತು ಇದು ‘ಅನಿಮೇಶನ್ ಫ್ರೇಮ್’ಗಳನ್ನು ಮಾತ್ರ ನಿರ್ವಹಿಸಲು ಸಾಧ್ಯವಿದೆ.
15:57 ಆದ್ದರಿಂದ ನನಗೆ ಇದನ್ನು Save as Animation ಎಂದು ಮಾಡಬೇಕಾಗಿದೆ.
16:04 GIF(ಜಿಫ್), Grey Scale (ಗ್ರೇ ಸ್ಕೇಲ್) ಅಥವಾ Index Images (ಇಂಡೆಕ್ಸ್ ಇಮೇಜಸ್) ಗಳನ್ನು ಮಾತ್ರ ನಿಭಾಯಿಸಬಲ್ಲದು.
16:10 ಆದ್ದರಿಂದ, ನನಗೆ ಇದನ್ನು ‘ಇಂಡೆಕ್ಸ್ ರಿಸಲ್ಟ್’ ಗೆ ಪರಿವರ್ತಿಸಬೇಕಾಗಿದೆ.
16:15 ಇವು, ನಾನು ನೋಡಿದ ‘ಡೀಫಾಲ್ಟ್ ಸೆಟ್ಟಿಂಗ್’ಗಳಾಗಿವೆ. ಅವುಗಳು ನನ್ನ ಕೆಲಸಕ್ಕೆ ಸಾಕಷ್ಟು ಉತ್ತಮವಾಗಿವೆ. ನಾನು ಇದನ್ನು ಬದಲಾಯಿಸಬಹುದು ಆದರೆ ಅದು ಅವಶ್ಯವಿಲ್ಲ.
16:26 ಆದ್ದರಿಂದ, ನಾನು Export ಮೇಲೆ ಕ್ಲಿಕ್ ಮಾಡುತ್ತೇನೆ.
16:29 ಇಲ್ಲಿ, Created with GIMP ಮತ್ತು Loop forever ಗಳನ್ನು ನೀವು ನೋಡುತ್ತೀರಿ.
16:36 Frame disposal ನಲ್ಲಿ ನನಗೆ One frame per layer (replace) ಬೇಕಾಗಿದೆ.
16:43 ಈ ಉಳಿದ ಆಯ್ಕೆಗಳನ್ನು ‘ಚೆಕ್’ಮಾಡಲಾಗಿಲ್ಲ, ಆದ್ದರಿಂದ ನಾನು ಅವುಗಳನ್ನು ಹಾಗೆಯೇ ಬಿಡುತ್ತೇನೆ. ಏಕೆಂದರೆ ನನಗೆ ‘ಟೈಮಿಂಗ್’ಅನ್ನು 5000 ಅಥವಾ 2000 ಮಿಲಿಸೆಕೆಂಡುಗಳಿಗೆ ಬದಲಾಯಿಸಬೇಕಾಗಿದ್ದರೆ ಆವಾಗ ನಾನು ಮಾಡಬಹುದು.
17:01 ಈಗ Save ನ ಮೇಲೆ ಕ್ಲಿಕ್ ಮಾಡಿ, ನಾವು ಪರಿಣಾಮವನ್ನು ನೋಡುವೆವು.
17:07 ಅದಕ್ಕಾಗಿ ನಾವು GIMP ಅಲ್ಲ, ಆದರೆ Mozilla ಬಳಸುತ್ತೇವೆ.
17:13 Mozilla ದಲ್ಲಿ, ಇದು ಆಶಿಸಿದಂತೆಯೆ ಕೆಲಸ ಮಾಡುತ್ತದೆ.
17:18 ಮುಂದಿನ ವಾರ ಮತ್ತೆ ನೋಡೋಣ. ವಂದನೆಗಳು.
17:22 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ.

Contributors and Content Editors

NaveenBhat, Sandhya.np14