Difference between revisions of "GIMP/C2/Triptychs-In-A-New-Way/Kannada"

From Script | Spoken-Tutorial
Jump to: navigation, search
(Created page with "{| border = 1 |'''Time''' |'''Narration''' |- | 00:23 | Meet The GIMP (ಮೀಟ್ ದ್ ಗಿಂಪ್) ಗೆ ನಿಮಗೆ ಸ್ವಾಗತ. |- | 00:25 | ಇದನ...")
 
 
Line 43: Line 43:
 
|-
 
|-
 
|02:05
 
|02:05
| ಹೊಸ ಇಮೇಜನ್ನು ಕ್ರಿಯೇಟ್ ಮಾಡಲು, File ಎನ್ನುವುದರ ಮೇಲೆ ಕ್ಲಿಕ್ ಮಾಡಿ, New ಎನ್ನುವುದನ್ನು ಆಯ್ಕೆಮಾಡಿ. ಡೀಫಾಲ್ಟ್ ವ್ಯಾಲ್ಯೂಗಳಾಗಿ ಅಗಲವನ್ನು 3400 ಮತ್ತು ಎತ್ತರವನ್ನು 1200 ಎಂದು ನಾವು ಪಡೆಯುತ್ತೇವೆ.
+
| ಹೊಸ ಇಮೇಜನ್ನು ಕ್ರಿಯೇಟ್ ಮಾಡಲು, File ಎನ್ನುವುದರ ಮೇಲೆ ಕ್ಲಿಕ್ ಮಾಡಿ, New ಎನ್ನುವುದನ್ನು ಆಯ್ಕೆಮಾಡಿ. ಡೀಫಾಲ್ಟ್ ವ್ಯಾಲ್ಯೂಗಳಾಗಿ ಅಗಲವನ್ನು 3400 ಮತ್ತು ಎತ್ತರವನ್ನು 1200 ಎಂದು ಪಡೆಯುತ್ತೇವೆ.
 
|-
 
|-
 
|02:19
 
|02:19
Line 82: Line 82:
 
|-
 
|-
 
| 04:59
 
| 04:59
| ಈಗ ಲೇಯರ್ನಲ್ಲಿ ಕ್ಲಿಕ್ ಮಾಡುತ್ತೇನೆ, Info Window ವನ್ನು ಪಕ್ಕಕ್ಕೆ ಎಳೆದು ಇದನ್ನು ಮೂಲೆಯಿಂದ ಕಡಿಮೆ ಮಾಡುತ್ತೇನೆ.
+
| ಈಗ ಇಮೆಜ್-ನಲ್ಲಿ ಕ್ಲಿಕ್ ಮಾಡುತ್ತೇನೆ, Info Window ವನ್ನು ಪಕ್ಕಕ್ಕೆ ಎಳೆದು ಇದನ್ನು ಮೂಲೆಯಿಂದ ಕಡಿಮೆ ಮಾಡುತ್ತೇನೆ.
 
|-
 
|-
 
| 05:09
 
| 05:09
Line 241: Line 241:
 
|-
 
|-
 
| 12:58
 
| 12:58
| ಹೀಗಾಗಿ, ಕ್ರಮವಾಗಿ Image, Guides, New guide ಇವುಗಳ ಮೇಲೆ ಕ್ಲಿಕ್ ಮಾಡುತ್ತೇನೆ. Horizontal Position ಎನ್ನುವಲ್ಲಿ 100 ಎಂದು ಟೈಪ್ ಮಾಡುತ್ತೇನೆ.
+
| ಹೀಗಾಗಿ, ಕ್ರಮವಾಗಿ Image, Guides, New guide ಇವುಗಳ ಮೇಲೆ ಕ್ಲಿಕ್ ಮಾಡುತ್ತೇನೆ. Horizontal Position ಎನ್ನುವದರಲ್ಲಿ 100 ಎಂದು ಟೈಪ್ ಮಾಡುತ್ತೇನೆ.
 
|-
 
|-
 
| 13:10
 
| 13:10
Line 283: Line 283:
 
|-
 
|-
 
| 15:08
 
| 15:08
| ಈ ಫೈಲ್ನ ಲಿಂಕ್, ನಿಮಗೆ ಕೆಳಗೆ ತೋರಿಸಿದ ‘ಲಿಂಕ್’ನ ‘ಶೋ ನೋಟ್ಸ’ನಲ್ಲಿ ಸಿಗುವುದು. ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿರಿ. meetthegimp@org
+
| ಈ ಫೈಲ್ನ ಲಿಂಕ್, ನಿಮಗೆ ಕೆಳಗೆ ತೋರಿಸಿದ ‘ಲಿಂಕ್’ನ ‘ಶೋ ನೋಟ್ಸ’ನಲ್ಲಿ ಸಿಗುವುದು. ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿರಿ. Meetthegimp.org
 
|-
 
|-
 
| 15:18
 
| 15:18
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ. ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………………….
+
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ. ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ..

Latest revision as of 13:21, 27 September 2015

Time Narration
00:23 Meet The GIMP (ಮೀಟ್ ದ್ ಗಿಂಪ್) ಗೆ ನಿಮಗೆ ಸ್ವಾಗತ.
00:25 ಇದನ್ನು ರೋಲ್ಫ್ ಸ್ಟೆನೋರ್ಟ್ ಅವರು, ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:30 ನನಗೆ ನ್ಯೂಯಾರ್ಕ್ ನ ಜೇಸನ್ ಎನ್ನುವವರಿಂದ ಒಂದು ಇ-ಮೇಲ್ ಬಂದಿದೆ. ನಾನು ‘ಟ್ರಿಪ್ಟಿಕ್ಸ್’ಅನ್ನು ಮಾಡಲು ಆರಂಭಿಸುವ ಮೊದಲು, ಅದನ್ನು ಬೇರೆ ವಿಧದಲ್ಲಿ ಮಾಡುವ ವಿಧಾನವನ್ನು ಹುಡುಕಬೇಕೆಂದು ಅವರು ಟ್ರಿಪ್ಟಿಕ್ಸ್ ನ ಕುರಿತು ಇರುವ ಕಾರ್ಯಕ್ರಮವನ್ನು ತಡೆದರು.
00:45 ಮತ್ತು ಅವರು ಲೇಯರ್ ಮಾಸ್ಕನ್ನು ಬಳಸಿ ಮಾಡುವ ಬೇರೆ ವಿಧಾನವನ್ನು ಹುಡುಕಿದರು.
00:50 ನಾನು ಅದನ್ನು ನಿಮಗೆ ಈ ಟ್ಯುಟೋರಿಯಲ್ ನಲ್ಲಿ ತೋರಿಸಬೇಕೆಂದಿದ್ದೇನೆ.
00:57 ಜೇಸನ್ ಅವರು ಟ್ರಿಪ್ಟಿಕ್ಸ್ಅನ್ನು ಮಾಡಲು ಬಳಸಿದ ಇಮೇಜನ್ನು ನಿಮಗೆ ನಾನು ತೋರಿಸಲು ಸಾಧ್ಯವಿಲ್ಲ ಏಕೆಂದರೆ ಅವರು, ಉಚಿತವಾಗಿ ಲಭ್ಯವಿಲ್ಲದ ಇಮೇಜ್ಗಳನ್ನು ಬಳಸಿದರು. ಹೀಗಾಗಿ ನಾನು ಅವುಗಳನ್ನು ಬಳಸಲು ಸಾಧ್ಯವಿಲ್ಲ.
01:10 ಟ್ರಿಪ್ಟಿಕ್ಸ್ಅನ್ನು ಮಾಡಲು ಲೇಯರ್ ಮಾಸ್ಕನ್ನು ಬಳಸುವುದು ತುಂಬಾ ಸುಲಭ ಮತ್ತು ಲೇಯರ್ ಮಾಸ್ಕನ್ನು ಬಳಸುವುದರ ಬಗೆಗೆ ಇರುವ ಅವರ ಪರಿಕಲ್ಪನೆಯನ್ನು ನಾನು ಸ್ವಲ್ಪ ಮಾರ್ಪಡಿಸಿದ್ದೇನೆ.
01:21 ನನಗೆ ಈ ಆಲೋಚನೆ ಏಕೆ ಬರಲಿಲ್ಲವೆಂದು ಆಶ್ಚರ್ಯವಾಗುತ್ತದೆ.
01:25 ನಾನು ಟ್ರಿಪ್ಟಿಕ್ಅನ್ನು ಇಲ್ಲಿಯ ಈ ಮೂರು ಶಾಟ್ ಗಳೊಂದಿಗೆ ಮಾಡಬಯಸುತ್ತೇನೆ.
01:31 ನನಗೆ ಈ ಇಮೇಜ್, ಎಡಭಾಗದಲ್ಲಿ ,ಈ ಎರಡನೆಯದ್ದು ಮಧ್ಯದಲ್ಲಿ ಮತ್ತು ಇದು ಬಲಭಾಗದಲ್ಲಿ ಬೇಕಾಗಿದೆ.
01:42 ನನಗೆ ಈ ಚಚ್ಚೌಕವಾದ ಫ್ರೇಮ್ಗಳನ್ನು ಈ ಇಮೇಜ್ಗೆ ಹೊಂದುವಂತೆ ಬದಲಾಯಿಸಬೇಕಾಗಿದೆ.
01:49 ಇದು ಹೇಗೆ ಆಗುವುದೆಂದು ನಾವು ನೋಡುವೆವು.
01:53 ಈಗ ನಾನು ಇಲ್ಲಿಯ ಈ ಇಮೇಜ್ಗಳೊಂದಿಗೆ ಟ್ರಿಪ್ಟಿಕ್ಸ್ಅನ್ನು ಮಾಡಲು ಆರಂಭಿಸಬಹುದು. ಮತ್ತು ನನ್ನ ಟೂಲ್ ಬಾಕ್ಸ ವಿಂಡೋವನ್ನು ಮುಂಭಾಗದಲ್ಲಿ ತರಲು ನಾನು Tab ಅನ್ನು ಒತ್ತುತ್ತೇನೆ.
02:05 ಹೊಸ ಇಮೇಜನ್ನು ಕ್ರಿಯೇಟ್ ಮಾಡಲು, File ಎನ್ನುವುದರ ಮೇಲೆ ಕ್ಲಿಕ್ ಮಾಡಿ, New ಎನ್ನುವುದನ್ನು ಆಯ್ಕೆಮಾಡಿ. ಡೀಫಾಲ್ಟ್ ವ್ಯಾಲ್ಯೂಗಳಾಗಿ ಅಗಲವನ್ನು 3400 ಮತ್ತು ಎತ್ತರವನ್ನು 1200 ಎಂದು ಪಡೆಯುತ್ತೇವೆ.
02:19 ಆದ್ದರಿಂದ ನಾನು, ಮಧ್ಯದಲ್ಲಿ 100 ಪಿಕ್ಸೆಲ್ಗಳ ಅಂಚು ಇರುವ ‘1000 by 1000’ ಸೈಜ್ ನ, ಮೂರು ಇಮೇಜ್ಗಳನ್ನು ಹೊಂದಿದ್ದೇನೆ.
02:31 ಇದು ಹೇಗೆ ಆಗುವುದೆಂದು ನಾವು ನೋಡೋಣ.
02:36 ಈ ಇಮೇಜನ್ನು ಹೊಸ ಇಮೇಜ್ನಲ್ಲಿ ಪಡೆಯಲು, ಟೂಲ್ ಬಾಕ್ಸ್ನಿಂದ ಈ ಇಮೇಜ್ನ ಬ್ಯಾಕ್ ಗ್ರೌಂಡ್ ಲೇಯರನ್ನು ನನ್ನ ಇಲ್ಲಿಯ ಹೊಸ ಇಮೇಜ್ಗೆ ಎಳೆಯುತ್ತೇನೆ ಹಾಗೂ ಇಲ್ಲಿ ನೀವು ಬ್ಯಾಕ್ ಗ್ರೌಂಡ್ ಕಾಪಿಯನ್ನು ಪಡೆಯುತ್ತೀರಿ.
02:54 ಇದು ನನ್ನ ಎಡತುದಿಯ ಇಮೇಜ್ ಆಗಿತ್ತು, ಹೀಗಾಗಿ ನಾನು ಇದನ್ನು ಪುನಃ ‘left’ ಎಂದು ಹೆಸರಿಡುತ್ತೇನೆ ಮತ್ತು ಟೈಪ್ ಮಾಡಿದ ನಂತರ Return/Enter ಒತ್ತುತ್ತೇನೆ.
03:04 ಆದ್ದರಿಂದ ಈ ಇಮೇಜ್, ಎಡಬದಿಗೆ ಇರಬೇಕು.
03:08 ಮುಂದಿನ ಈ ಇಮೇಜ್, ಬಲಬದಿಗೆ ಇರಬೇಕು, ಹೀಗಾಗಿ ನಾನು ಇಮೇಜನ್ನು ಅದೇ ರೀತಿಯಲ್ಲಿ ಎಳೆಯುತ್ತೇನೆ ಮತ್ತು ಅದಕ್ಕನುಸಾರವಾಗಿ ‘right’ ಎಂದು ಹೆಸರಿಡುತ್ತೇನೆ.
03:32 ಇದು ಮೂರನೆಯ ಇಮೇಜ್ ಆಗಿದೆ ಹಾಗೂ ಇದು ನನ್ನ ಮಧ್ಯದ ವಿಂಡೋ ಆಗುವದು. ಆದ್ದರಿಂದ ನಾನು ಈ ಇಮೇಜನ್ನು ಹೊಸ ಇಮೇಜ್ಗೆ ಎಳೆಯುತ್ತೇನೆ ಹಾಗೂ ಈ ಲೇಯರನ್ನು ‘center’ ಎಂದು ಪುನಃ ಹೆಸರಿಡುತ್ತೇನೆ.
03:49 ಬಲಗಡೆ ಹಾಗೂ ಮಧ್ಯದಲ್ಲಿ ಇರುವ ಲೇಯರ್ಗಳನ್ನು ಅದೃಶ್ಯಗೊಳಿಸುತ್ತೇನೆ. ಈಗ ನಾನು ಎಡಗಡೆಯ ಲೇಯರ್ನ ಅಳತೆಯನ್ನು ಸ್ವಲ್ಪ ಕಡಿಮೆ ಮಾಡಬೇಕು (ಸ್ಕೇಲ್ ಡೌನ್). ಸುಮಾರು 10% ಗೆ ನಾನು ಝೂಮ್ ಡೌನ್ ಮಾಡಿದಾಗ ಈ ಲೇಯರ್ನ ಅಂಚುಗಳನ್ನು ನೀವು ನೋಡಬಹುದು ಮತ್ತು ಈಗ ಇಮೇಜ್ನ ಪೂರ್ತಿ ಫ್ರೇಮನ್ನು ಕಾಣಬಹುದು.
04:16 ಈಗ ನಾನು Move Tool ಅನ್ನು ಆಯ್ಕೆ ಮಾಡುತ್ತೇನೆ. ಇದರಿಂದ ನಾನು ಇಮೇಜನ್ನು ಕದಲಿಸಲು ಹಾಗೂ ಸ್ವಲ್ಪ ಸರಿಹೊಂದಿಸಲು ಸಾಧ್ಯವಿದೆ.
04:26 ಈ ಇಮೇಜ್, ಸರಿಯುತ್ತಿಲ್ಲ ಏಕೆಂದರೆ ನಾನು ಮಧ್ಯದ ಲೇಯರನ್ನು ಆಯ್ಕೆಮಾಡಿದ್ದೇನೆ.
04:33 ಆದ್ದರಿಂದ ಈಗ ನಾನು left ಲೇಯರನ್ನು ಆಯ್ಕೆಮಾಡುತ್ತೇನೆ ಮತ್ತು ಬಾಟಲನ್ನು ಸ್ಥಾನದಲ್ಲಿರಿಸಲು ಇದನ್ನು ಸರಿಸುತ್ತೇನೆ.
04:39 ನನಗೆ ಈ ಲೇಯರನ್ನು ಸ್ವಲ್ಪ ಸ್ಕೇಲ್ ಡೌನ್ ಮಾಡಬೇಕಾಗಿದೆ. ಆದ್ದರಿಂದ ನಾನು ಟೂಲ್ ಬಾಕ್ಸ್ನಿಂದ Scale Tool ಎನ್ನುವುದನ್ನು ಆಯ್ಕೆಮಾಡಿ, Tool info ಎನ್ನುವಲ್ಲಿಗೆ ಹೋಗಿ Aspect ratio ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ ಹಾಗೂ Preview ಎನ್ನುವಲ್ಲಿ Image ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ.
04:59 ಈಗ ಇಮೆಜ್-ನಲ್ಲಿ ಕ್ಲಿಕ್ ಮಾಡುತ್ತೇನೆ, Info Window ವನ್ನು ಪಕ್ಕಕ್ಕೆ ಎಳೆದು ಇದನ್ನು ಮೂಲೆಯಿಂದ ಕಡಿಮೆ ಮಾಡುತ್ತೇನೆ.
05:09 ಹೆಚ್ಚು ಅಥವಾ ಸ್ವಲ್ಪ ಕಡಿಮೆ.
05:15 ನಾನು ಈ ಇಮೇಜನ್ನು ಪಡೆದುಕೊಂಡು ನನಗೆ ಬೇಕಾದಲ್ಲಿ ಅದನ್ನು ಇಡಬಹುದು. ನಾನು ಇಲ್ಲಿ ಕೆಲವು ಮಾರ್ಗಸೂಚಿಗಳನ್ನು ಇಡಬೇಕಾಗಿತ್ತು.
05:30 ಆದ್ದರಿಂದ ಇಮೇಜ್ನಲ್ಲಿ 100% ನಷ್ಟು ಝೂಮ್-ಇನ್ ಮಾಡಿ, ಮೇಲಿನ ಎಡಮೂಲೆಗೆ ಹೋಗುತ್ತೇನೆ.
05:38 ಈಗ ಮಾರ್ಗಸೂಚಿಗಳಿಗಾಗಿ ರೂಲರ್ಸನ್ನು ಕೆಳಗೆ ಎಳೆಯುತ್ತೇನೆ.
05:43 ನನಗೆ ರೂಲರನ್ನು ಸರಿಸಲು ಏಕೆ ಸಾಧ್ಯವಾಗಲಿಲ್ಲವೆಂದು ಆಶ್ಚರ್ಯವಾಗಿತ್ತು. ಇಲ್ಲಿ Move the active layer ಎನ್ನುವ ಒಂದು ಆಯ್ಕೆಯಿದೆ. ಇದನ್ನು ಆಯ್ಕೆಮಾಡುವದರಿಂದ ನಾನು ಆಕ್ಟಿವ್ ಲೇಯರನ್ನು ಸರಿಸಬಹುದು.
06:01 ಲೇಯರ್ಗಳನ್ನು ರಕ್ಷಿಸಲು ಇದು ಒಳ್ಳೆಯ ಆಯ್ಕೆಯಾಗಿದೆ. ಫ್ರೇಮ್ನ ಸೈಜನ್ನು 100 ಎಂದು ಬಲಗಡೆಗೆ ಆಯ್ಕೆಮಾಡಿ, ಕೆಳಗೆ ಹೋಗಿ 1100 ಎಂದು ಸೆಟ್ ಮಾಡುತ್ತೇನೆ. ಬಲಗಡೆಗೆ 1100 ಎಂದು ಸೆಟ್ ಮಾಡುತ್ತೇನೆ.
06:31 ಇದು ನನ್ನ ಇಮೇಜ್ ಗಾಗಿ ಫ್ರೇಮ್ ಆಗಿದೆ.
06:34 Shift + Ctrl + E ನನಗೆ ಪೂರ್ತಿ ಇಮೇಜನ್ನು ಕೊಡುತ್ತದೆ. ಈಗ Active Layer ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ.
06:43 Zoom ratio ಎನ್ನುವಲ್ಲಿ ನಾನು 10% ಅನ್ನು ಆಯ್ಕೆಮಾಡುತ್ತೇನೆ.
06:48 ನಾನು 13% ಅನ್ನು ಆಯ್ಕೆಮಾಡಬೇಕು ಎಂದುಕೊಂಡಿದ್ದೇನೆ, ಅದು ಸಾಕಾಗುತ್ತದೆ.
06:59 ನಾನು Scale Tool ಹಾಗೂ Keep aspect ನ ಮೇಲೆ ಕ್ಲಿಕ್ ಮಾಡುತ್ತೇನೆ. ಈ ಸ್ಕೇಲ್ ವಿಂಡೋವನ್ನು ಫ್ರೇಮ್ನ ಹೊರಗೆ ಎಳೆಯುತ್ತೇನೆ.
07:10 ಈಗ ನಾನು ಈ ಇಮೇಜನ್ನು ಸ್ಕೇಲ್, ಮಾಡುತ್ತೇನೆ.
07:14 ಈ ಇಮೇಜನ್ನು ಎಲ್ಲಿಡಬೇಕೆಂದು ನೋಡಲು ಈಗ ನಾನು ಫ್ರೇಮನ್ನು ಪಡೆದಿದ್ದೇನೆ.
07:21 ಇದನ್ನು ಸ್ವಲ್ಪ ಚಿಕ್ಕದು ಮಾಡಬೇಕೆಂದು ಯೋಚಿಸುತ್ತಿದ್ದೇನೆ ಏಕೆಂದರೆ ನನಗೆ ಇಲ್ಲಿ, ಇಮೇಜ್ನಲ್ಲಿ ಗಾಜಿನ ನೆರಳು ಬೇಕಾಗಿದೆ.
07:40 ಈಗ ನಾನು Scale ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು ನನಗೆ ಸ್ಕೇಲ್ ಮಾಡಲ್ಪಟ್ಟ ಇಮೇಜ್ ಸಿಗುತ್ತದೆ.
07:49 ಇಮೇಜ್ನ ಸುತ್ತಲೂ ಫ್ರೇಮ್ಅನ್ನು ಪಡೆಯಲು ನಾನು ಲೇಯರ್ ಮಾಸ್ಕನ್ನು ಸೇರಿಸುತ್ತೇನೆ.
08:01 ನಾನು, ನನ್ನ ಲೇಯರ್ ಮಾಸ್ಕನ್ನು Black ಎಂದರೆ full transparency (ಫುಲ್ ಟ್ರಾನ್ಸ್ಪರೆನ್ಸಿ) ಎಂದು ಮಾಡುತ್ತೇನೆ.
08:07 ಮತ್ತು Add ಎನ್ನುವುದರ ಮೇಲೆ ಕ್ಲಿಕ್ ಮಾಡುತ್ತೇನೆ.
08:13 ಈಗ, ಇಲ್ಲಿ,ಅಂಚುಗಳ ಒಳಗಡೆಯಲ್ಲಿ ನಾನು Rectangle ಎನ್ನುವುದನ್ನು ಆಯ್ಕೆಮಾಡಿ ಅದನ್ನು ಬಿಳಿ ಬಣ್ಣದಿಂದ ತುಂಬುತ್ತೇನೆ.
08:23 ನಾನು White ಅನ್ನು ಇಲ್ಲಿಗೆ ಎಳೆಯುತ್ತೇನೆ ಹಾಗೂ ಬಾಟಲ್ ಈಗ ಕಾಣಿಸುವುದನ್ನು ನೀವು ನೋಡಬಹುದು. ಇಲ್ಲಿ ಫ್ರೇಮನ್ನು ಪೂರ್ತಿಗೊಳಿಸಲು ನಾನು ಇದರಲ್ಲಿ ಝೂಮ್ ಇನ್ ಮಾಡುತ್ತೇನೆ.
08:36 ಲೇಯರ್ ಮಾಸ್ಕ್ನ ಮೇಲೆ ನಾನು ಬಿಳಿ ಬಣ್ಣದ ಅನಿಯಮಿತ ಸ್ಟ್ರೋಕ್ ಗಳಿಂದ ಪೇಂಟ್ ಮಾಡುತ್ತೇನೆ.
08:44 ಇದಕ್ಕಾಗಿ ನಾನು Brush Tool ಅನ್ನು ಆಯ್ಕೆಮಾಡಿ, ‘ಡೈಲಾಗ್’ಗೆ ಹೋಗಿ ಇಲ್ಲಿ ‘ಪೇಂಟಿಂಗ್’ಗಾಗಿ ಸಾಫ್ಟ್ ಬ್ರಶ್ ಅನ್ನು ಆಯ್ಕೆಮಾಡುತ್ತೇನೆ.
09:01 ಪೇಂಟಿಂಗ್ ಮಾಡುವ ಮೊದಲು, Shift + Ctrl + A ಒತ್ತುವುದರ ಮೂಲಕ ನಾನು ನನ್ನ ಆಯ್ಕೆಯನ್ನು ಡಿ-ಸೆಲೆಕ್ಟ್ ಮಾಡಬೇಕು. ಈಗ ನಾನು ಬಿಳಿ ಬಣ್ಣದಿಂದ ಪೇಂಟ್ ಮಾಡಲು ಸಾಧ್ಯವಿದೆ.
09:13 White, ಆಯ್ಕೆಯಾಗಿದೆ.
09:16 ಈಗ, ಇಲ್ಲಿ ಸುತ್ತಲೂ ನಾನು ಬಿಳಿ ಬಣ್ಣದಿಂದ ಪೇಂಟ್ ಮಾಡುತ್ತೇನೆ. ಲೇಯರ್ ಮಾಸ್ಕ್ ನ ಮೇಲೆ ಬಿಳಿ ಬಣ್ಣದಿಂದ ಪೇಂಟ್ ಮಾಡುವಾಗ ಕೆಳಗಿರುವ ಇಮೇಜ್ಅನ್ನು ನಾನು ಬಹಿರಂಗಪಡಿಸುತ್ತಿದ್ದೇನೆ.
09:28 ಪೇಂಟಿಂಗ್, ಅನಿಯಮಿತವಾಗಿದೆ ಆದರೆ ಪರವಾಗಿಲ್ಲ.
09:40 ಈಗ ನಾನು ಬೇರೊಂದು ‘ಬ್ರಶ್’ಅನ್ನು ಆಯ್ಕೆಮಾಡುತ್ತಿದ್ದೇನೆ. ಇದು ಉತ್ತಮವಾಗಿದೆ.
09:49 ನನಗೆ ಅಸ್ಪಷ್ಟವಾದ (ಫಜಿ) ಮೂಲೆಯು ಸಿಗುತ್ತದೆ.
09:52 ನಾನು ಇಮೇಜ್ನಲ್ಲಿ 100% ಝೂಮ್ ಮಾಡಬೇಕು. ಆಗ ನೀವು ನೋಡಲು ಸಾಧ್ಯವಾಗುವದು.
10:04 ನಾನು ಇಲ್ಲಿ ಒಂದು ತೆರದ ಅಸ್ಪಷ್ಟ ಅಂಚನ್ನು ಪಡೆಯುತ್ತೇನೆ ಹಾಗೂ ಅದರ ಮೇಲೆ ಎರಡು ಸಲ ಪೇಂಟ್ ಮಾಡಿ ಒಂದು ಕ್ಷಣದಲ್ಲಿ ಅದನ್ನು ಇನ್ನೂ ಸ್ವಲ್ಪ ಅಸ್ಪಷ್ಟಗೊಳಿಸುತ್ತೇನೆ.
10:16 ಅಂಚು ಇನ್ನೂ ಸ್ವಲ್ಪ ಅನಿಯಮಿತವಾಗುತ್ತಿರುವದನ್ನು ಈಗ ನೀವು ನೋಡಬಹುದು.
10:22 ಬಹುಶಃ ಇದು ಇಲ್ಲಿ ಸೂಕ್ತವಾದ ಟೂಲ್ ಆಗಿಲ್ಲ, ಆದರೆ ನೀವು ವಿವಿಧ ಟೂಲ್ಗಳನ್ನು ಬಳಸಬಹುದು. ಈಗ ನಾನು ಈ ಇಮೇಜನ್ನು ಶಾರ್ಪ್ ಮಾಡಬಯಸುತ್ತೇನೆ.
10:35 ನಾನು ಈಗಲೂ ಲೇಯರ್ ಮಾಸ್ಕನಲ್ಲಿ ಕೆಲಸ ಮಾಡುತ್ತಿರುವದನ್ನು ನೀವು ಪರೀಕ್ಷಿಸಬಹುದು.
10:41 ನೀವು ಇದನ್ನು ಇಲ್ಲಿ ಪರಿಶೀಲಿಸಬಹುದು.
10:43 ಲೇಯರ್ ಮಾಸ್ಕ್, ಇಲ್ಲಿ White ನೊಂದಿಗೆ ಆಯ್ಕೆಯಾಗಿದೆ.
10:47 ಆದ್ದರಿಂದ Filters, Blur, Gaussian blur ಇವುಗಳ ಮೇಲೆ ಕ್ರಮವಾಗಿ ಕ್ಲಿಕ್ ಮಾಡಿ ಇಲ್ಲಿ ನಾನು ಹೆಚ್ಚಿನ ಬ್ಲರ್ ಕೌಂಟನ್ನು ಆಯ್ಕೆಮಾಡುತ್ತೇನೆ. ಇದು ಸರಿಯಾಗಿದೆ ಎಂದುಕೊಂಡಿದ್ದೇನೆ.
11:03 ಈಗ ನಾನು ನಿಜವಾಗಿಯೂ ಇಲ್ಲಿ, ಸುತ್ತಲೂ ಅಸ್ಪಷ್ಟ ಅಂಚನ್ನು ಹೊಂದಿದ್ದೇನೆ.
11:10 ಆದ್ದರಿಂದ ನಾವು ಪೂರ್ತಿ ಇಮೇಜನ್ನು ನೋಡೋಣ. Shift + Ctrl + E.
11:17 ನನ್ನ ‘ಟ್ರಿಪ್ಟಿಕ್ಸ್’ನ ಮೊದಲ ಭಾಗವನ್ನು ನಾನು ಪಡೆದಿದ್ದೇನೆ ಹಾಗೂ ಬೇರೆಯವುಗಳನ್ನು ಇದೇ ರೀತಿಯಲ್ಲಿ ಮಾಡುತ್ತೇನೆ.
11:26 ನಾನು ಉಳಿದ ಇಮೇಜ್ಗಳನ್ನು ಮುಗಿಸಿದ್ದೇನೆ. ರೂಲರ್ ಗಳ ಮೇಲೆ ನಾನು ಹೆಚ್ಚು ಪೇಂಟ್ ಮಾಡಿದ್ದೇನೆ ಎಂದು ಇಲ್ಲಿ ನೀವು ನೋಡಬಹುದು. ಅದನ್ನು ಇಲ್ಲಿಯೂ ಮಾಡಲು ಸಾಧ್ಯವಿದೆ.
11:39 ಈಗ ನನಗೆ ರೂಲರ್ ಗಳನ್ನು ತೆಗೆಯಬೇಕಾಗಿದೆ. ಇದನ್ನು ಮಾಡುವ ಹೊಸ ವಿಧಾನವೆಂದರೆ, ಕ್ರಮವಾಗಿ Image, Image Guides ಗೆ ಹೋಗಿ. ಇಲ್ಲಿ ನಾನು ಎಲ್ಲ ಗೈಡ್ಸ್ ಅನ್ನು ತೆಗೆದುಹಾಕಬಹುದು.
11:54 ಇಲ್ಲಿ ನಾನು New Guide ಎನ್ನುವುದನ್ನು ಮಾಡಿ ಅದರ ಸ್ಥಾನವನ್ನು ಸಂಖ್ಯಾತ್ಮಕವಾಗಿ ಆಯ್ಕೆಮಾಡಲು ಸಾಧ್ಯ ಎಂದು ಕಂಡುಹಿಡಿದಿದ್ದೇನೆ.
12:03 ಈ ಆಯ್ಕೆಯನ್ನು ಹೊಂದಿರುವುದು ಅದ್ಭುತವಾಗಿದೆ.
12:08 ಗಿಂಪ್ ಎಷ್ಟೊಂದು ಆಯ್ಕೆಗಳನ್ನು ಹೊಂದಿದೆ ಎಂದರೆ ನೀವು ಅವುಗಳೆಲ್ಲವನ್ನು ನೆನಪಿಡಲು ಸಾಧ್ಯವಿಲ್ಲ.
12:14 View ಗೆ ಹೋಗಿ ಮತ್ತು Layer Boundary ಆಯ್ಕೆಯನ್ನು ಡಿ-ಸೆಲೆಕ್ಟ್ ಮಾಡಿ.
12:18 ನನಗೆ ಈ ಬಾಟಲ್ ಸ್ವಲ್ಪ ಮೇಲೆ, ಮೂಲೆಯಲ್ಲಿ ಬೇಕಾಗಿದೆ.
12:23 ನನಗೆನಿಸುವಂತೆ ಇಲ್ಲಿ ಸ್ವಲ್ಪ ಹೆಚ್ಚು ಸ್ಥಳವಿದೆ ಮತ್ತು ಇಲ್ಲಿ ಸ್ವಲ್ಪ ಕಡಿಮೆ.
12:30 ಬಲಗಡೆಯ ಹಾಗೂ ಮಧ್ಯದ ಇಮೇಜ್ ಗಳು ಇಲ್ಲಿ ಬಲಮೂಲೆಯಲ್ಲಿ ಇವೆ.
12:36 ಆದರೆ ಈ ಬಾಟಲ್ ಅಲ್ಲಿ ಮೇಲೆ ಹೋಗಬೇಕು.
12:41 ಹೀಗಾಗಿ ನಾನು ಫುಲ್ ಸ್ಕ್ರೀನ್ ಮೋಡ್ನಿಂದ ಹೊರಗೆ ಬರುತ್ತೇನೆ.
12:45 ನಾನು center ಮತ್ತು right ಲೇಯರ್ಗಳನ್ನು ಡಿ-ಸೆಲೆಕ್ಟ್ ಮಾಡುತ್ತೇನೆ ಹಾಗೂ left ಲೇಯರ್ನ ಮೇಲೆ ಗಮನ ಕೊಡುತ್ತೇನೆ.
12:54 ಈಗ ನನಗೆ ಮಾರ್ಗದರ್ಶನಕ್ಕೆ ರೂಲರ್ಸ್ ಬೇಕಾಗಿದೆ.
12:58 ಹೀಗಾಗಿ, ಕ್ರಮವಾಗಿ Image, Guides, New guide ಇವುಗಳ ಮೇಲೆ ಕ್ಲಿಕ್ ಮಾಡುತ್ತೇನೆ. Horizontal Position ಎನ್ನುವದರಲ್ಲಿ 100 ಎಂದು ಟೈಪ್ ಮಾಡುತ್ತೇನೆ.
13:10 ಮತ್ತೆ ಕ್ರಮವಾಗಿ Image, Guides, New guide ಗೆ ಹೋಗಿ Vertical Position ಅನ್ನು 100 ಎಂದು ಆರಿಸಿಕೊಳ್ಳುತ್ತೇನೆ.
13:20 ಈಗ ನನ್ನ Move Tool ಅನ್ನು ಆಯ್ದುಕೊಳ್ಳುತ್ತೇನೆ. ಆಯ್ಕೆಗಳಿಗೆ ಹೋಗಿ Move the active layer ಎನ್ನುವುದನ್ನು ಆಯ್ದುಕೊಳ್ಳುತ್ತೇನೆ ಮತ್ತು ಇದನ್ನು ಇಲ್ಲಿ, ಮೇಲೆ ಸರಿಸುತ್ತೇನೆ.
13:37 ನಾನು ಒಂದು ತಪ್ಪು ಮಾಡಿದ್ದೇನೆ. ಆದ್ದರಿಂದ ನಾನು ಈ ಸ್ಟೆಪ್ ಅನ್ನು Ctrl + z ಒತ್ತುವುದರ ಮೂಲಕ Undo ಮಾಡುತ್ತೇನೆ. ಇಲ್ಲಿ ಮಾಸ್ಕ್ ಆಯ್ಕೆಯಾಗಿರುವುದನ್ನು ನೀವು ನೋಡಬಹುದು.
13:49 ನನಗೆ ಲೇಯರನ್ನು ಜರುಗಿಸಬೇಕಾಗಿದೆ.
13:51 ಆದ್ದರಿಂದ ಈಗ ನಾನು ಇಮೇಜನ್ನು ಆಯ್ಕೆಮಾಡಿ ಅದನ್ನು ಹಾಗೆಯೇ ಮೇಲೆ ಎಳೆಯುತ್ತೇನೆ. ಮಾಸ್ಕ್ ಅದರ ಜೊತೆಗೇ ಸರಿಯುತ್ತದೆ.
13:58 ಮಾಸ್ಕನ್ನು ಲಾಕ್ ಮಾಡಲು ನನಗೆ ಯಾವ ಹಾದಿಯೂ ಕಾಣಲಿಲ್ಲ ಆದರೆ ನಾನು ಅದನ್ನು ಸರಿಪಡಿಸಲು ಸಾಧ್ಯವಿದೆ.
14:04 ನಾನು layer mask ಅನ್ನು ಆಯ್ಕೆಮಾಡುತ್ತೇನೆ ಮತ್ತು ಅದನ್ನು ಹಿಂದಕ್ಕೆ, ನನ್ನ ಇಲ್ಲಿಯ ಮೂಲೆಗೆ ಎಳೆಯುತ್ತೇನೆ.
14:13 ಇದು ಚೆನ್ನಾಗಿ ಕಾಣುತ್ತಿದೆ ಎಂದು ಭಾವಿಸುತ್ತೇನೆ.
14:19 ಮತ್ತು 'ನ್ಯೂಯಾರ್ಕ್'ನ ಜೇಸನ್ ಎನ್ನುವವರ ಸಹಾಯದಿಂದ ಈ ಇಮೇಜ್ ಈಗ ಪೂರ್ತಿಯಾಗಿದೆ.
14:28 ಇಲ್ಲ, ಈ ಇಮೇಜ್ ಪೂರ್ತಿಯಾಗಿಲ್ಲ.
14:32 ಸಾಮಾನ್ಯವಾಗಿ ನಾನು ಯಾವುದನ್ನು ಮರೆಯುವದಿಲ್ಲವೋ ಅದನ್ನು ರೆಕಾರ್ಡ್ ಮಾಡುವಾಗ ಯಾವಾಗಲೂ ಮರೆಯುತ್ತೇನೆ ಏಕೆಂದರೆ ನನ್ನ ಇಮೇಜ್ ತಯಾರಿಸುವದರ ಹೊರತಾಗಿ ನಾನು ಇಂತಹ ಬಹಳಷ್ಟು ವಿಷಯಗಳ ಬಗ್ಗೆ ಯೋಚಿಸಬೇಕಾಗುತ್ತದೆ.
14:47 ನಾನು ಸೇವ್ ಮಾಡಲು ಮತ್ತೆ ಮರೆತಿದ್ದೇನೆ.
14:56 ಇದನ್ನು jaegermeister.xcf (ಜೇಗರ್ಮಾಸ್ಟರ್.ಎಕ್ಸ್ ಸಿ ಎಫ್ )ಎಂದು ಸೇವ್ ಮಾಡಿರಿ. ‘xcf’ ಎನ್ನುವುದು ಲೇಯರ್ ನ ಎಲ್ಲ ಮಾಹಿತಿಯನ್ನು ಒಳಗೊಂಡಿದೆ ಮತ್ತು ‘ವೆಬ್’ಗಾಗಿ ರಿಸ್ಕೇಲಿಂಗ್ ಮಾಡುವ ಕುರಿತು ಇರುವ ಎಲ್ಲ ವಿಷಯವನ್ನು ನಾನು ತೆಗೆದು ಹಾಕುತ್ತೇನೆ.
15:08 ಈ ಫೈಲ್ನ ಲಿಂಕ್, ನಿಮಗೆ ಕೆಳಗೆ ತೋರಿಸಿದ ‘ಲಿಂಕ್’ನ ‘ಶೋ ನೋಟ್ಸ’ನಲ್ಲಿ ಸಿಗುವುದು. ನಿಮ್ಮ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿರಿ. Meetthegimp.org
15:18 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ. ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ನಮಸ್ಕಾರ..

Contributors and Content Editors

NaveenBhat, Sandhya.np14