Difference between revisions of "GIMP/C2/Adjusting-Colours-with-Curves-Tool/Kannada"
From Script | Spoken-Tutorial
Sandhya.np14 (Talk | contribs) (Created page with "{| border = 1 |'''Time''' |'''Narration''' |- | 00:24 | Meet the GIMP (ಮೀಟ್ ದ ಗಿಂಪ್) ಗೆ ನಿಮಗೆ ಸ್ವಾಗತ. |- | 00:26 | ಇವತ್...") |
NaveenBhat (Talk | contribs) |
||
Line 53: | Line 53: | ||
|- | |- | ||
| 03:30 | | 03:30 | ||
− | | ನನಗೆ Sea ‘ಲೇಯರ್’ಅನ್ನು ಕಪ್ಪುಬಣ್ಣದಿಂದ ಪೇಂಟ್ ಮಾಡುವುದು ಬೇಕಾಗಿಲ್ಲ. ಹೀಗಾಗಿ, ನಾನು | + | | ನನಗೆ Sea ‘ಲೇಯರ್’ಅನ್ನು ಕಪ್ಪುಬಣ್ಣದಿಂದ ಪೇಂಟ್ ಮಾಡುವುದು ಬೇಕಾಗಿಲ್ಲ. ಹೀಗಾಗಿ, ನಾನು ಫೋರ್ಗ್ರೌಂಡ್ ಮತ್ತು ಬ್ಯಾಕ್ಗ್ರೌಂಡ್ ಗಳ ಬಣ್ಣವನ್ನು ಅದಲುಬದಲು ಮಾಡುತ್ತೇನೆ. |
|- | |- | ||
| 03:39 | | 03:39 | ||
Line 179: | Line 179: | ||
|- | |- | ||
| 11:38 | | 11:38 | ||
− | | ‘ಡಾಡ್ಜಿಂಗ್ ಆಂಡ್ ಬರ್ನಿಂಗ್’ ಎನ್ನುವುದು ‘ಡಾರ್ಕ್ ರೂಮ್’ ನ ಕಾಲದ ಒಂದು ಪದವಾಗಿದೆ. | + | | ‘ಡಾಡ್ಜಿಂಗ್ ಆಂಡ್ ಬರ್ನಿಂಗ್’ ಎನ್ನುವುದು ‘ಡಾರ್ಕ್ ರೂಮ್’ ನ ಕಾಲದ ಒಂದು ಪದವಾಗಿದೆ. ‘ಎನ್ಲಾರ್ಜರ್’ನ ಮತ್ತು ‘ಫೋಟೋಗ್ರಾಫಿಕ್ ಪೇಪರ್’ನ ನಡುವೆ, ನಿಮ್ಮ ಕೈ ಅಥವಾ ಕಾಗದ ಅಥವಾ ಮತ್ತೇನನ್ನೋ ‘ಎನ್ಲಾರ್ಜರ್’ನ ಬೆಳಕಿನ ಕಿರಣದಲ್ಲಿ ಇಡುವುದರಿಂದ ನೀವು ಒಂದು ಚಿತ್ರವನ್ನು ಡಾಡ್ಜ್ ಮಾಡಬಹುದು. ಬರ್ನಿಂಗ್ ಎನ್ನುವುದು ಇದರ ವಿರುದ್ಧವಾಗಿದೆ. |
|- | |- | ||
| 12:02 | | 12:02 | ||
Line 216: | Line 216: | ||
|- | |- | ||
|13:55 | |13:55 | ||
− | | ಹೊಸ ಲೇಯರ್ ಆಯ್ಕೆಯಾಗಿದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ. | + | | ಹೊಸ ಲೇಯರ್ ಆಯ್ಕೆಯಾಗಿದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ. ‘ಫೋರ್ಗ್ರೌಂಡ್ ಕಲರ್’ಅನ್ನು ಬಿಳಿ ಹಾಗೂ ‘ಬ್ಯಾಕ್ಗ್ರೌಂಡ್ ಕಲರ್’ಅನ್ನು ಕಪ್ಪುಬಣ್ಣಕ್ಕೆ ಬದಲಾಯಿಸಿ, ಇಲ್ಲಿ ಗೋಡೆಯನ್ನು ಪೇಂಟ್ ಮಾಡಲು ಆರಂಭಿಸುತ್ತೇನೆ. |
|- | |- | ||
| 14:19 | | 14:19 | ||
Line 234: | Line 234: | ||
|- | |- | ||
|15:25 | |15:25 | ||
− | | ಆದರೆ ಬಣ್ಣವನ್ನು ಬದಲಾಯಿಸುವದರಿಂದ ನಾನು ಅದನ್ನು ಸರಿಪಡಿಸಬಹುದು. ಇದನ್ನು ಮಾಡಲು, ‘X’, | + | | ಆದರೆ ಬಣ್ಣವನ್ನು ಬದಲಾಯಿಸುವದರಿಂದ ನಾನು ಅದನ್ನು ಸರಿಪಡಿಸಬಹುದು. ಇದನ್ನು ಮಾಡಲು, ‘X’, ಶಾರ್ಟ್ಕಟ್ ಕೀ ಆಗಿದೆ. ಇಲ್ಲಿ ಇದನ್ನು ಸ್ವಲ್ಪ ಗಾಢಗೊಳಿಸುತ್ತೇನೆ. |
|- | |- | ||
| 15:44 | | 15:44 | ||
Line 273: | Line 273: | ||
|- | |- | ||
| 18:13 | | 18:13 | ||
− | | ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಈ | + | | ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಈ ಲಿಂಕ್’ಗೆ ಬರೆಯಿರಿ. info@meetthegimp.org ಮತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ‘ಲಿಂಕ್’ಗೆ ಹೋಗಿ. http://meetthegimp.org |
|- | |- | ||
| 18:33 | | 18:33 | ||
Line 279: | Line 279: | ||
|- | |- | ||
| 18:46 | | 18:46 | ||
− | | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ | + | | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ಧನ್ಯವಾದ. |
Revision as of 20:43, 23 July 2015
Time | Narration |
00:24 | Meet the GIMP (ಮೀಟ್ ದ ಗಿಂಪ್) ಗೆ ನಿಮಗೆ ಸ್ವಾಗತ. |
00:26 | ಇವತ್ತಿನ ಟ್ಯುಟೋರಿಯಲ್, ‘ರಾ ಕನ್ವರ್ಟಿಂಗ್’ ಬಗ್ಗೆ ಇಲ್ಲ. ಆದರೆ ನಿಜವಾದ ‘ಶೋ’ ಮಾಡುವಾಗಿನ ಹೊಸ ಕೋಡಿಂಗ್ ಬಗ್ಗೆ ಮತ್ತು ಕಳೆದ ಟ್ಯುಟೋರಿಯಲ್’ನ ಕೆಲವು ತಪ್ಪುಗಳನ್ನು ಸರಿಪಡಿಸಲು ಆಗಿದೆ. |
00:40 | ನಾನು, ಈ ‘ಇಮೇಜ್’ನ ಬಗ್ಗೆ ನಿಮಗೆ ಏನನ್ನೋ ಹೇಳಬೇಕೆಂದಿದ್ದೇನೆ. |
00:44 | ‘ಶೋ’ಅನ್ನು ರೆಕಾರ್ಡ್ ಮಾಡುವಾಗ ನಾನು ಕೆಲವು ಹೆಚ್ಚಿನ ಬದಲಾವಣೆಗಳನ್ನು ಮಾಡಿದ್ದೇನೆ. |
00:50 | ನೀವು ನೋಡುವಂತೆ, ಸಮುದ್ರವು ಸ್ವಲ್ಪ ಮಂಕಾಗಿದೆ, ಅದು ಸಾಕಷ್ಟು ಲಕ್ಷಣವನ್ನು ಹೊಂದಿರದೆ ಕೇವಲ ಬೂದುಬಣ್ಣದ್ದಾಗಿದೆ. ನಾನು ಇಲ್ಲಿ Sea ಲೇಯರ್ ಹಾಗೂ ಇನ್ನುಳಿದ ‘ಲೇಯರ್’ಗಳನ್ನು ಸ್ವಿಚ್-ಆಫ್ ಮಾಡಿದಾಗ, ನೀವು ಈ ಸಮುದ್ರದಲ್ಲಿ ಸ್ವಲ್ಪ ಲಕ್ಷಣವಿರುವದನ್ನು ನೋಡಬಹುದು. |
01:17 | Layer Mask ಅನ್ನು ನೋಡಿದಾಗ, ನನಗೆ ತೋರಿಸಬೇಕಾದ ಜಾಗಕ್ಕಾಗಿ ನಾನು ಬಹುಮಟ್ಟಿಗೆ ಬೂದುಬಣ್ಣದ ಲೇಯರ್ ಮಾಸ್ಕನ್ನು ಬಳಸಿದ್ದೇನೆಂದು ನೀವು ನೋಡಬಹುದು. |
01:30 | ಆದ್ದರಿಂದ ಈ ‘ಸ್ಟೆಪ್’ಅನ್ನು ಪುನಃ ಮಾಡೋಣ. |
01:37 | ನಾನು Sea ಲೇಯರನ್ನು ತೆಗೆದುಹಾಕಿದ್ದೇನೆ ಹಾಗೂ Background ಲೇಯರ್’ನ ‘ಕಾಪಿ’ಯನ್ನು ಮಾಡಿದ್ದೇನೆ. |
01:44 | ಈ ಲೇಯರನ್ನು Sea ಎಂದು ಹೆಸರಿಸಿ, ಅದನ್ನು Sky ದ ಕೆಳಗೆ ಹಾಗೂ Land ನ ಮೇಲೆ ಇಡುತ್ತೇನೆ. |
01:57 | ನಾನು, ನನ್ನ ಹತ್ತಿರವಿದ್ದ ‘ಲೇಯರ್’ನ ಜೊತೆಗೆ ಕೆಲಸ ಮಾಡಬಹುದಿತ್ತು ಆದರೆ ನನಗೆ ಒಳ್ಳೆಯ ಪರಿಣಾಮವು ಸಿಗುತ್ತಿರಲಿಲ್ಲ. ಏಕೆಂದರೆ, ಸಮುದ್ರವನ್ನು ಸ್ವಲ್ಪ ಗಾಢವಾಗಿ ಪಡೆಯಲು ನಾನು ಕರ್ವ್ಸ್ ಟೂಲನ್ನು ಬಳಸಿದ್ದೆ. |
02:10 | ಮತ್ತು ಅದರೊಂದಿಗೆ, ಆ ಲೇಯರ್’ನಲ್ಲಿದ್ದ ಬಹಳಷ್ಟು ಬಣ್ಣದ ಮಾಹಿತಿಯನ್ನು ನಾನು ನಾಶಗೊಳಿಸಿದ್ದೇನೆ. ಇಲ್ಲಿ, ಈ ರೀತಿಯಲ್ಲಿ, ನಾನು ಉತ್ತಮವಾದ ಫಲಿತಾಂಶವನ್ನು ಪಡೆಯುವೆನು. |
02:24 | ಈಗ, ಮತ್ತೆ Sea ‘ಲೇಯರ್’ಗೆ ಒಂದು ಲೇಯರ್ ಮಾಸ್ಕನ್ನು ಸೇರಿಸುತ್ತೇನೆ. Gray scale copy of layer ಅನ್ನು ಬಳಸಿ, ಅದಕ್ಕೆ ಸೇರಿಸುತ್ತೇನೆ. |
02:35 | Show Layer Mask ಎನ್ನುವುದರ ಮೇಲೆ ಕ್ಲಿಕ್ ಮಾಡಿ, ಲೇಯರ್ ಮಾಸ್ಕನ್ನು ಎಡಿಟ್ ಮಾಡುತ್ತೇನೆ. |
02:41 | ನಾನು ಕರ್ವ್ಸ್ ಟೂಲನ್ನು ಬಳಸುವೆನು ಮತ್ತು ಇದನ್ನು ಕೆಳಗೆ ಎಳೆದು ಇದೇ ವಿಧಾನವನ್ನು ಪುನರಾವರ್ತಿಸುತ್ತೇನೆ. ಆದರೆ ಈ ಸಲ ನಾನು ಈ ಮೇಲಿನ ‘ಕರ್ವ್’ಅನ್ನು ಮೇಲೆ ಎಳೆಯುತ್ತೇನೆ. |
03:01 | ಈಗ ನನ್ನ ಹತ್ತಿರ, ಸಮುದ್ರದ ಹಾಗೂ ಮುಗಿಲಿನ ಜಾಗಕ್ಕಾಗಿ ಹೆಚ್ಚೂಕಡಿಮೆ ಬಿಳಿಯ ಮತ್ತು ನೆಲಕ್ಕಾಗಿ ಕಪ್ಪುಬಣ್ಣದ ಲೇಯರ್ ಮಾಸ್ಕ್ ಇದೆ. |
03:12 | ಕಾಣೆಯಾದ ಕೆಲವು ರಚನೆಗಳನ್ನು ಸರಿಪಡಿಸಲು ಇಲ್ಲಿ ನಾನು ಬ್ರಶ್ ಟೂಲನ್ನು ಆಯ್ಕೆಮಾಡಿ, ಇಲ್ಲಿ ದೊಡ್ಡ ‘ಬ್ರಶ್’ಅನ್ನು ಆರಿಸಿಕೊಳ್ಳುತ್ತೇನೆ ಮತ್ತು ನೆಲದ ಭಾಗವನ್ನು ಕಪ್ಪುಬಣ್ಣದಿಂದ ಪೇಂಟ್ ಮಾಡಲು ಆರಂಭಿಸುತ್ತೇನೆ. |
03:30 | ನನಗೆ Sea ‘ಲೇಯರ್’ಅನ್ನು ಕಪ್ಪುಬಣ್ಣದಿಂದ ಪೇಂಟ್ ಮಾಡುವುದು ಬೇಕಾಗಿಲ್ಲ. ಹೀಗಾಗಿ, ನಾನು ಫೋರ್ಗ್ರೌಂಡ್ ಮತ್ತು ಬ್ಯಾಕ್ಗ್ರೌಂಡ್ ಗಳ ಬಣ್ಣವನ್ನು ಅದಲುಬದಲು ಮಾಡುತ್ತೇನೆ. |
03:39 | ಸಮುದ್ರದ ಭಾಗಕ್ಕೆ ಹೋಗಿ ಬಿಳಿಬಣ್ಣದಿಂದ ಪೇಂಟ್ ಮಾಡಲು ಆರಂಭಿಸುತ್ತೇನೆ. ಇದನ್ನು ನಾನು ಸ್ವಲ್ಪ ನಯವಾಗಿ ಮಾಡಬೇಕು. |
03:56 | ಇಲ್ಲಿ, ಈ ಜಾಗವು ಸಾಕಷ್ಟು ಚೆನ್ನಾಗಿತ್ತು ಆದರೆ ನೀವು ಅದನ್ನು ಆಮೇಲೆ ಸರಿಪಡಿಸಬಹುದು. |
04:04 | ನಾವು ನಯವಾದ ‘ಬ್ರಶ್’ಅನ್ನು ಆರಿಸಿ, ಇಲ್ಲಿಯ ಈ ಅಂಚು ಚೊಕ್ಕವಾಗಿರುವಂತೆ ನೋಡಿಕೊಳ್ಳೋಣ. |
04:21 | Show Layer Mask ಅನ್ನು ನಿಷ್ಕ್ರಿಯಗೊಳಿಸಿದಾಗ, ಇಲ್ಲಿ, ನೆಲ ಹಾಗೂ ಸಮುದ್ರಗಳ ನಡುವಿನ ಅಂಚಿನ ಮೇಲೆ ಹರಡಿದ ದೃಶ್ಯವನ್ನು ನಾವು ನೋಡಬಹುದು. |
04:32 | ನಾವು ಇಮೇಜ್ನಲ್ಲಿ ಝೂಮ್ ಮಾಡೋಣ. ಲೇಯರ್ ಮಾಸ್ಕ್ ಹಾಗೂ ಲೇಯರ್ ಒಟ್ಟಿಗೇ ಕೆಲಸ ಮಾಡದೇ ಇರುವ ಸ್ಥಳದಲ್ಲಿ ಒಂದು ಹ್ಯಾಲೋ ಇರುವದನ್ನು ನೀವು ನೋಡಬಹುದು. ಅದರ ಮೇಲೆ ನಾವು ಆಮೇಲೆ ಕೆಲಸ ಮಾಡೋಣ. |
04:50 | shift + ctrl + E ಯೊಂದಿಗೆ ನಾನು ಈಗ ಪೂರ್ತಿ ಇಮೇಜ್’ಗೆ ಮರಳಿ ಹೋಗುತ್ತೇನೆ. |
04:58 | ನಾನು Curves Tool ಅನ್ನು ಆಯ್ಕೆಮಾಡಿ, ಲೇಯರ್ ಮಾಸ್ಕ್ ಆಯ್ಕೆಯಾಗಿರುವ ಬಗ್ಗೆ ಪರಿಶೀಲಿಸುತ್ತೇನೆ. ಪೂರ್ತಿ ಚಿತ್ರವನ್ನು ನೋಡಲು Sky ‘ಲೇಯರ್’ಅನ್ನು ಸೇರಿಸುತ್ತೆನೆ. ಈಗ ಇಮೇಜ್ನಲ್ಲಿ ಕ್ಲಿಕ್ ಮಾಡಿ, ಕರ್ವ್ಸ್ ಗಳೊಂದಿಗೆ ಆಡುತ್ತೇನೆ. |
05:28 | ಈಗ ಸಮುದ್ರ ಮತ್ತು ನೆಲದ ನಡುವಿನ ಹ್ಯಾಲೋ ಮಾಯವಾಗುತ್ತದೆ ಎಂದು ನೀವು ನೋಡಬಹುದು. ಆದರೆ ಸಮುದ್ರವು ಮತ್ತೆ ಸ್ವಲ್ಪ ಮಂಕಾಗಿದೆ. |
05:40 | ಆದರೆ ನಾನು ಇಲ್ಲಿ ಕರ್ವನ್ನು ಮೇಲೆ ಎಳೆಯಬಹುದು ಹಾಗೂ ನನಗೆ ನಿಚ್ಚಳವಾದ ಸಮುದ್ರವು ಸಿಗುತ್ತದೆ. |
05:52 | ನಾನು ಹೆಚ್ಚಾಗಿ ಮಾಡಬಾರದು ಎಂದು ನನಗೆನಿಸುತ್ತಿದೆ. |
06:07 | ಸಮುದ್ರದ ಮೇಲೆ ಸೂರ್ಯನು ಬೆಳಗುವುದನ್ನು, ಮೋಡಗಳ ನೆರಳನ್ನು, ಅಲೆಗಳ ವಿವಿಧ ರಚನೆಗಳನ್ನು ಮತ್ತು ಸಮುದ್ರದ ಮೇಲೆ ಇರಬೇಕಾದಂತಹ ಸ್ವಲ್ಪ ನೀಲಿಬಣ್ಣವನ್ನು ನಾನು ನೋಡಬಹುದು. |
06:22 | ಮುಗಿಲಿನ ಅಂಚಿನಲ್ಲಿರುವ, ಹೊಳಪುಳ್ಳ ವಿಷಯದ ಬಗ್ಗೆ ಇಲ್ಲಿ ಸ್ವಲ್ಪ ಸಮಸ್ಯೆ ಆಗಿದೆ. ಏಕೆಂದರೆ, ಮುಗಿಲು ತುಂಬಾ ಬೆಳಗಿಸಲ್ಪಟ್ಟಿದೆ. ಆ ಸಮಸ್ಯೆಯನ್ನು ನಂತರದ ‘ಸ್ಟೆಪ್’ಗಳಲ್ಲಿ ನಾನು ಬಗೆಹರಿಸಬಹುದು. |
06:41 | ಸರಿ, ನಾನು ‘ಕರ್ವ್ಸ್ ಟೂಲ್’ನ ಪರಿಣಾಮವನ್ನು ‘ಓಪ್ಯಾಸಿಟೀ ಸ್ಲೈಡರ್’ನೊಂದಿಗೆ ಹೊಂದಿಸಬಹುದು. ಒಳ್ಳೆಯ ಪರಿಣಾಮಕ್ಕಾಗಿ ನಾನು ಅದನ್ನು ಸ್ವಲ್ಪ ಕಡಿಮೆ ಮಾಡಬೇಕು. |
06:58 | ಜಾನ್ ಅರ್ನಾಲ್ಡ್ ಅವರ ಪ್ರಸಾರದ ಒಂದು ಸಲಹೆಯಂತೆ ನಾವು, ಸಾಧ್ಯವಿರುವ ಪೂರ್ತಿ ಪ್ರಮಾಣಕ್ಕೆ ಹೋಗಬೇಕು, ಆನಂತರ ಸ್ಲೈಡರ್’ನಲ್ಲಿ ಕೆಳಗೆ ಹೋಗಬೇಕು. ಏಕೆಂದರೆ, ಕೆಳಗೆ ಹೋಗುವಾಗ ಪರಿಣಾಮವನ್ನು ನೋಡುವುದು ತುಂಬಾ ಸುಲಭವಾಗಿದೆ. |
07:17 | ಮತ್ತು ಸರಿಯಾದ ಪ್ರಮಾಣವನ್ನು ನಾವು ಸುಲಭವಾಗಿ ನಿರ್ಧರಿಸಬಹುದು. |
07:22 | ನಾನು ಈ ಭಾಗದೊಂದಿಗೆ ಬಹಳ ಹೆಚ್ಚಾಗಿ ಮಾಡಿದ್ದೇನೆ ಎಂದು ನನಗೆನಿಸುತ್ತಿದೆ. ಆದ್ದರಿಂದ ಸ್ಲೈಡರನ್ನು ಕೆಳಗೆ ಜಾರಿಸುತ್ತೇನೆ. ಇದು ಸರಿಯಾಗಿದೆ. |
07:36 | ದಿಗಂತದ ಮೇಲೆ ಈ ಹೊಳಪಿನ ವಸ್ತು ಎಲ್ಲಿಂದ ಬರುತ್ತದೆ? |
07:40 | ನಾನು Sky ಲೇಯರನ್ನು ಡೀ-ಸೆಲೆಕ್ಟ್ ಮಾಡಿ ಪರಿಶೀಲಿಸುತ್ತೇನೆ. ಆದರೆ ಇದು ಆ ಕಾರಣದಿಂದ ಆಗಿಲ್ಲ. |
07:46 | ಹೀಗಾಗಿ, ನಾನು Sea ಲೇಯರನ್ನು ಡೀ-ಸೆಲೆಕ್ಟ್ ಮಾಡುತ್ತೇನೆ ಮತ್ತು ಅದು Sea ‘ಲೇಯರ್’ನ ಕಾರಣದಿಂದಾಗಿದೆ. |
07:52 | ನನಗೆ ಇಲ್ಲಿ, ಈ ಭಾಗವನ್ನು ಗಾಢಗೊಳಿಸಬೇಕಾಗಿದೆ. |
07:55 | ಅದನ್ನು ಮಾಡಲು Gradient Tool ಅನ್ನು ಬಳಸುತ್ತೇನೆ. |
07:59 | ನಾನು Layer Mask ಅನ್ನು ಆಯ್ಕೆಮಾಡಿ, ಈಗ ‘ಟೂಲ್ ಬಾಕ್ಸ್’ನಿಂದ Gradient Tool ಅನ್ನು ಆಯ್ಕೆಮಾಡುತ್ತೇನೆ. ನನಗೆ ನೆಲದ ಭಾಗವು ಬಿಳಿ ಹಾಗೂ ಮುಗಿಲಿನ ಭಾಗವು ಕಪ್ಪುಬಣ್ಣದ್ದಾಗಿ ಬೇಕಾಗಿದೆ. ಅಂಚು ನನಗೆ ಇಲ್ಲಿ ಬೇಕಾಗಿದೆ. |
08:21 | ಗ್ರೇಡಿಯೆಂಟ್, ಪೂರ್ತಿ ಬಿಳಿಯಿಂದ ಆರಂಭವಾಗಿ ಕಪ್ಪಿನೊಂದಿಗೆ ಕೊನೆಗೊಳ್ಳುತ್ತದೆ. |
08:29 | ನಾನು ಈ ಭಾಗದಲ್ಲಿ ಝೂಮ್ ಮಾಡುತ್ತೇನೆ. Gradient Tool ಅನ್ನು ಆಯ್ಕೆಮಾಡುತ್ತೇನೆ. ಇಲ್ಲಿಂದ ಆರಂಭಿಸುತ್ತೇನೆ. |
08:38 | ಈ ಗೆರೆಯನ್ನು ಮಾಡುವಾಗ, ಸರಳ ರೇಖೆಯನ್ನು ಪಡೆಯಲು ನಾನು ctrl ಕೀ ಹಾಗೂ ಮೌಸ್’ನ ಎಡ ಬಟನ್ ಒತ್ತಿ, ಎಳೆಯುತ್ತಿದ್ದೇನೆ. ಇಲ್ಲಿ ಬಟನ್’ಅನ್ನು ಬಿಡುತ್ತೇನೆ. |
08:53 | ನೀವು ನೋಡಿ, ಇದು ಕೆಲಸ ಮಾಡಿದೆ. ದಿಗಂತದ ಮೇಲಿನ ಹೊಳಪು ಹೋಗಿದೆ ಹಾಗೂ Land ನ ಲೇಯರ್ ಮಾಸ್ಕ್ ಕೂಡ ಹೋಗಿದೆ ಎಂದು ನೀವು ನೋಡಬಹುದು. |
09:06 | ನಾವು ಪೂರ್ತಿ ಇಮೇಜ್’ನೆಡೆಗೆ ನೋಡೋಣ. ನಮ್ಮ ಎಲ್ಲ ಎಡಿಟ್’ಗಳು ಹೋಗಿವೆ ಎಂದು ನೀವು ನೋಡಬಹುದು. |
09:18 | ಆದ್ದರಿಂದ ದಿಗಂತದ ಜೊತೆಗೆ ವ್ಯವಹರಿಸಲು ಇದು ಉತ್ತಮವಾದ ವಿಧಾನವಾಗಿರಲಿಲ್ಲ. ಹೀಗಾಗಿ ಇಲ್ಲಿ,ಈ ‘ಸ್ಟೆಪ್’ಅನ್ನು ‘ಅನ್-ಡು’ ಮಾಡುತ್ತೇನೆ. |
09:27 | ಈಗ ಮೊದಲು Rectangle ಅನ್ನು ಆಯ್ಕೆಮಾಡುತ್ತೇನೆ. ಲೇಯರ್ ಮಾಸ್ಕ್ ಆಯ್ಕೆಯಾಗಿರುವ ಬಗ್ಗೆ ಪರಿಶೀಲಿಸುತ್ತೇನೆ. ಮುಗಿಲಿನ ಭಾಗದಲ್ಲಿ ಆಯತವನ್ನು ಡ್ರಾ ಮಾಡುತ್ತೇನೆ. |
09:41 | ಈಗ, ಆಯತವನ್ನು ಡ್ರಾ ಮಾಡಿದಾಗ, ನಾನು ಅದರಲ್ಲಿ ಎಡಿಟ್ ಕೆಲಸವನ್ನು ಮಾಡಬಹುದು ಮತ್ತು ‘ಲೇಯರ್ ಮಾಸ್ಕ್’ನ ಉಳಿದ ಭಾಗದ ಮೇಲೆ ಪರಿಣಾಮವಾಗುವುದಿಲ್ಲ. |
09:54 | ಈಗ ನಾನು ಅದೇ ವಿಧಾನವನ್ನು ಮತ್ತೆ ಮಾಡುತ್ತೇನೆ. |
10:00 | ಇಲ್ಲಿ, ಹೊಳಪಿನ ಭಾಗದಲ್ಲಿ ಝೂಮ್ ಮಾಡಿ, ಲೇಯರ್ ಮಾಸ್ಕನ್ನು ಆಯ್ಕೆಮಾಡಿ. |
10:07 | ನನಗೆ ಕಪ್ಪುಬಣ್ಣ ಮೇಲೆ ಹಾಗೂ ಬಿಳಿ ಕೆಳಗೆ ಬೇಕಾಗಿದೆ. ಆದ್ದರಿಂದ ನಾನು ಇಲ್ಲಿಂದ ಆರಂಭಿಸಿ, ನೇರವಾಗಿ ಮೇಲೆ ದಿಗಂತದವರೆಗೆ ಹೋಗುತ್ತೇನೆ. ಈಗ ಸಮುದ್ರವು ಮಾತ್ರ ಬಿಳಿಯಿದ್ದು ನೆಲ ಹಾಗೂ ಮುಗಿಲುಗಳು ಕಪ್ಪಾಗಿವೆ ಎಂದು ನೀವು ನೋಡಬಹುದು. |
10:33 | Shift + ctrl + A, ಎಲ್ಲ ‘ಸೆಲೆಕ್ಶನ್’ಗಳನ್ನು ನಿಷ್ಕ್ರಿಯಗೊಳಿಸುತ್ತದೆ. shift +ctrl + E, ಪೂರ್ತಿ ‘ಇಮೇಜ್’ಗೆ ಮರಳಿ ಹೋಗುತ್ತದೆ ಮತ್ತು ಈಗ ಬಹಳ ಉತ್ತಮವಾಗಿದೆ. |
10:52 | Land ಲೇಯರ್’ಗೆ ಮಾಡಿದ ರೀತಿಯಲ್ಲಿಯೇ ನನಗೆ Sky ಲೇಯರನ್ನು ಎಡಿಟ್ ಮಾಡಬೇಕಾಗಿದೆ. |
11:01 | Sky ಲೇಯರನ್ನು ಎರಡು ಸಲ ಮಾಡಿ ಹಾಗೂ Overlay ಮೋಡ್ ಗೆ ಬದಲಾಯಿಸಿ. |
11:08 | ಇದು ತುಂಬಾ ಹೆಚ್ಚಾಯಿತು. ಆದ್ದರಿಂದ ನಾನು ಓಪ್ಯಾಸಿಟೀ ಸ್ಲೈಡರನ್ನು ಸ್ವಲ್ಪ ಕೆಳಗೆ ಎಳೆಯುತ್ತೇನೆ. ನಮಗೆ ಮುಗಿಲಿನಲ್ಲಿ ಸ್ವಲ್ಪ ಹೆಚ್ಚು ಕಾಂಟ್ರಾಸ್ಟ್ ಸಿಕ್ಕಿದೆ. |
11:22 | ಈಗ ಇಮೇಜ್, ಒಂದು ವಿಷಯದ ಹೊರತಾಗಿ, ಹೆಚ್ಚೂಕಡಿಮೆ ತಯಾರಾಗಿದೆ. |
11:29 | ಮನೆಯ ಈ ಗೋಡೆಯು, ಇಲ್ಲಿ ತುಂಬಾ ಹೆಚ್ಚು ಗಾಢವಾಗಿದೆ. |
11:33 | ಈ ಸಂದರ್ಭವು ‘ಡಾಡ್ಜಿಂಗ್ ಆಂಡ್ ಬರ್ನಿಂಗ್’ಗಾಗಿ ಆಗಿದೆ. |
11:38 | ‘ಡಾಡ್ಜಿಂಗ್ ಆಂಡ್ ಬರ್ನಿಂಗ್’ ಎನ್ನುವುದು ‘ಡಾರ್ಕ್ ರೂಮ್’ ನ ಕಾಲದ ಒಂದು ಪದವಾಗಿದೆ. ‘ಎನ್ಲಾರ್ಜರ್’ನ ಮತ್ತು ‘ಫೋಟೋಗ್ರಾಫಿಕ್ ಪೇಪರ್’ನ ನಡುವೆ, ನಿಮ್ಮ ಕೈ ಅಥವಾ ಕಾಗದ ಅಥವಾ ಮತ್ತೇನನ್ನೋ ‘ಎನ್ಲಾರ್ಜರ್’ನ ಬೆಳಕಿನ ಕಿರಣದಲ್ಲಿ ಇಡುವುದರಿಂದ ನೀವು ಒಂದು ಚಿತ್ರವನ್ನು ಡಾಡ್ಜ್ ಮಾಡಬಹುದು. ಬರ್ನಿಂಗ್ ಎನ್ನುವುದು ಇದರ ವಿರುದ್ಧವಾಗಿದೆ. |
12:02 | ಅಲ್ಲಿ, ನೀವು ಒಂದು ಕಾಗದವನ್ನು ತೆಗೆದುಕೊಂಡು, ಅದರಲ್ಲಿ ನಿರ್ದಿಷ್ಟ ರೂಪದಲ್ಲಿ ಒಂದು ರಂಧ್ರವನ್ನು ಮಾಡಿ. ಹಾಗಾಗಿ ಸ್ವಲ್ಪ ಬೆಳಕನ್ನು ಬೇರೆ ಕೆಲವು ಭಾಗಗಳಿಗೆ ಹೊರಸೂಸುತ್ತದೆ. |
12:15 | ಯಾವಾಗ ಯಾವ ‘ಸ್ಟೆಪ್’ಅನ್ನು ಮಾಡಬೇಕು ಎಂದು ಕಂಡುಹಿಡಿಯುವುದು ಬಹಳ ಬೇಸರದ ಕಾರ್ಯವಿಧಾನವಾಗಿದೆ. ಅದಕ್ಕಾಗಿ ನಿಮಗೆ ಬಹಳಷ್ಟು ಕಾಗದದ ಅಗತ್ಯವಿದೆ. ನಿಮಗೆ ಇಂತಹ ಪ್ರಕ್ರಿಯೆಯನ್ನು ನೋಡಬೇಕಾದಾಗ ನಾನು ನಿಮಗೆ ‘ವೆಲ್ ಫೋಟೋಗ್ರಾಫರ್’ ಎನ್ನುವ ಚಲನಚಿತ್ರವನ್ನು ನೋಡಲು ಶಿಫಾರಸು ಮಾಡುತ್ತೇನೆ. |
12:36 | ಅದು ಜೇಮ್ಸ್ ಅವರ ಬಗ್ಗೆ ಚಲನಚಿತ್ರವಾಗಿದೆ ಮತ್ತು ಅದು ಒಂದು ಸೊಗಸಾದ ಚಲನಚಿತ್ರವಾಗಿದೆ. ಇದು ಇಲ್ಲದೆಯೇ, ‘ಡಾರ್ಕ್ ಚೇಂಬರ್’ ಕಾಣಿಸಿಕೊಂಡಿದೆ. |
12:45 | ನಾನು ನಿಮಗೆ ನಿಜವಾಗಿಯೂ ಆ ಚಲನಚಿತ್ರವನ್ನು ಶಿಫಾರಸು ಮಾಡುತ್ತೇನೆ. |
12:49 | ಈಗ ನಾವು ‘ಡಾಡ್ಜಿಂಗ್ ಆಂಡ್ ಬರ್ನಿಂಗ್’ ಪ್ರಕ್ರಿಯೆಯನ್ನು ನೋಡೋಣ. |
12:52 | ಟೂಲ್ ಬಾಕ್ಸ್ ನಲ್ಲಿ, ಇಲ್ಲಿ Dodge / Burn Tool ಇರುತ್ತದೆ. ಆದರೆ ನಾನು ಮತ್ತೆ ‘ಲೇಯರ್’ನ ಜೊತೆಗೆ ಕೆಲಸ ಮಾಡಬಯಸುತ್ತೇನೆ |
13:02 | I ನಾನು ಇನ್ನೊಂದು ಲೇಯರನ್ನು ಸೇರಿಸುತ್ತೇನೆ. ನನಗೆ ಇದನ್ನು ಬಿಳಿಬಣ್ಣದಿಂದ ತುಂಬಬೇಕಾಗಿದೆ. |
13:09 | ನಾನು ಕಲರ್ ‘ಚಾನೆಲ್’ಗೆ ಹೋಗಿ, ಬೂದುಬಣ್ಣಕ್ಕಾಗಿ 50% (ಐವತ್ತು ಪ್ರತಿಶತ) ಮತ್ತು ಬೇರೆ ‘ಚಾನೆಲ್’ನಲ್ಲಿ 128% (ನೂರಿಪ್ಪತ್ತೆಂಟು ಪ್ರತಿಶತ) ಎಂದು ಇಡುತ್ತೇನೆ. |
13:21 | ಈ ಬೂದುಬಣ್ಣವು 50% (ಐವತ್ತು ಪ್ರತಿಶತ) ಬೂದುಬಣ್ಣವಾಗಿದೆ. Layer Mode ಅನ್ನು Overlay ಗೆ ಬದಲಾಯಿಸುತ್ತೇನೆ. ಏನೂ ಆಗಿಲ್ಲವೆಂದು ನೀವು ನೋಡಬಹುದು. |
13:35 | ಈಗ ನಾನು ಕಲರ್ಸ್ ಅನ್ನು Black and White ಗೆ ಬದಲಾಯಿಸುತ್ತೇನೆ ಹಾಗೂ ಒಂದು ಬ್ರಶ್’ಅನ್ನು ಆಯ್ಕೆಮಾಡುತ್ತೇನೆ. |
13:45 | ಈ ‘ಬ್ರಶ್’ನ ಸೈಜ್ ಸರಿಇದ್ದಂತಿದೆ. ಆದರೆ ನಾನು ಓಪ್ಯಾಸಿಟೀ ಟೂಲನ್ನು 30% (ಮೂವತ್ತು ಪ್ರತಿಶತ) ರಷ್ಟು ಕಡಿಮೆಮಾಡುತ್ತೇನೆ. |
13:55 | ಹೊಸ ಲೇಯರ್ ಆಯ್ಕೆಯಾಗಿದೆ ಎಂದು ನಾನು ಖಚಿತಪಡಿಸಿಕೊಳ್ಳುತ್ತೇನೆ. ‘ಫೋರ್ಗ್ರೌಂಡ್ ಕಲರ್’ಅನ್ನು ಬಿಳಿ ಹಾಗೂ ‘ಬ್ಯಾಕ್ಗ್ರೌಂಡ್ ಕಲರ್’ಅನ್ನು ಕಪ್ಪುಬಣ್ಣಕ್ಕೆ ಬದಲಾಯಿಸಿ, ಇಲ್ಲಿ ಗೋಡೆಯನ್ನು ಪೇಂಟ್ ಮಾಡಲು ಆರಂಭಿಸುತ್ತೇನೆ. |
14:19 | ಕಂಪ್ರೆಷನ್, ತನ್ನ ಕೆಲಸವನ್ನು ಮಾಡಿದೆ ಹಾಗೂ ಗೋಡೆಯ ಬದಿಯು ಪ್ರಕಾಶಮಾನವಾಗಿದೆ ಎನ್ನುವುದನ್ನು ಬಹುಶಃ ನೀವು ನೋಡಬಹುದು. |
14:36 | ಈ ಪ್ರಕ್ರಿಯೆಯು ‘ಡಾಡ್ಜಿಂಗ್’ ಎಂದು ಕರೆಯಲ್ಪಡುತ್ತದೆ ಏಕೆಂದರೆ ನಾನು ಬೆಳಕನ್ನು ‘ಫೋಟೋಗ್ರಾಫಿಕ್ ಪೇಪರ್’ನ ಮೇಲೆ ಇಡುತ್ತಿದ್ದೇನೆ. ಹೀಗಾಗಿ ಗೋಡೆಯು ಹೆಚ್ಚು ಹೊಳೆಯುತ್ತದೆ. |
14:49 | ನಾವು ಇಲ್ಲಿಯ ಲೇಯರನ್ನು ನೋಡಿದಾಗ, ಇಲ್ಲಿ ನನ್ನ ಹತ್ತಿರ ಹೆಚ್ಚು ಬಿಳಿಯಾದ ಜಾಗ ಇದೆ ಮತ್ತು ಅಲ್ಲಿ ಸ್ವಲ್ಪ ಲಘುವಾಗಿ ಇರಬಹುದಾದ ‘ಇಮೇಜ್’ನ ಬೇರೆ ಕೆಲವು ಭಾಗಗಳು ಇವೆ ಎಂದು ನೀವು ನೋಡಬಹುದು. |
15:03 | ಉದಾಹರಣೆಗೆ, ದಡದ ಹತ್ತಿರವಿರುವ ಬಂಡೆಗಲ್ಲುಗಳು. |
15:09 | ಇಮೇಜ್ನಲ್ಲಿ ಝೂಮ್ ಮಾಡುವುದು ಅತ್ಯುತ್ತಮ ವಿಧಾನವಾಗಿದೆ. ಈಗ ನಾನು ಗೋಡೆಯನ್ನು ಹೆಚ್ಚು ಹೊಳಪಾಗಿಸಿದ್ದೇನೆ ಮತ್ತು ‘JPEG (ಜೇಪೆಗ್) ಕಂಪ್ರೆಷನ್’ನಿಂದಾಗಿ ವಿನ್ಯಾಸವು ಹೆಚ್ಚೂಕಮ್ಮಿ ಹೋಗಿಬಿಟ್ಟಿದೆ ಎಂದು ನಾನು ನೋಡಬಹುದು. |
15:25 | ಆದರೆ ಬಣ್ಣವನ್ನು ಬದಲಾಯಿಸುವದರಿಂದ ನಾನು ಅದನ್ನು ಸರಿಪಡಿಸಬಹುದು. ಇದನ್ನು ಮಾಡಲು, ‘X’, ಶಾರ್ಟ್ಕಟ್ ಕೀ ಆಗಿದೆ. ಇಲ್ಲಿ ಇದನ್ನು ಸ್ವಲ್ಪ ಗಾಢಗೊಳಿಸುತ್ತೇನೆ. |
15:44 | ನಾನು ಓಪ್ಯಾಸಿಟೀ ಸ್ಲೈಡರನ್ನು ಸ್ವಲ್ಪ ಕೆಳಗೆ ಎಳೆಯಬೇಕು. ಇದು ಸರಿಯಾಗಿದೆ. |
15:54 | ನನಗೆನಿಸುವಂತೆ ದಿಗಂತವು ತುಂಬಾ ಹೊಳಪಾಗಿದೆ. ಹೀಗಾಗಿ, ಆ ಭಾಗವನ್ನು ಪೇಂಟ್ ಮಾಡಲು ‘ಬ್ರಶ್’ನ ‘ಸರ್ಕಲ್ ಸೈಜ್’ಅನ್ನು ಹೊಂದಿಸುತ್ತೇನೆ ಹಾಗೂ ‘ಇಮೇಜ್’ನ ಆ ಭಾಗವನ್ನು ಗಾಢಗೊಳಿಸಲು ಕಪ್ಪು ಬಣ್ಣವನ್ನು ಬಳಸುತ್ತೇನೆ. |
16:34 | ‘x’ ಕೀಯಿಂದ ಬಣ್ಣವನ್ನು ಬದಲಾಯಿಸಿ, ನಾನು ಇಮೇಜ್’ನ ಮೇಲೆ ಕೆಲಸ ಮಾಡಬಹುದು ಹಾಗೂ ಅದನ್ನು ಸ್ವಲ್ಪ ಗಾಢಗೊಳಿಸಬಹುದು. |
16:53 | ಅದು ಬಹಳ ಹೆಚ್ಚಾಗಿತ್ತು. ನಾನು ಅಲ್ಲಿ ಏನು ಮಾಡುತ್ತಿದ್ದೇನೆಂದು ನನಗೆ ಅಷ್ಟು ಖಚಿತವಾಗಿ ತಿಳಿದಿಲ್ಲ. |
17:00 | ಆದ್ದರಿಂದ ಈ ‘ಸ್ಟೆಪ್’ಅನ್ನು ‘ಅನ್-ಡು’ ಮಾಡುತ್ತೇನೆ. |
17:03 | ನಾನು ಒಂದು ಲೇಯರನ್ನು ಮಾಡಿ, ಅದನ್ನು ಮಧ್ಯಮ ಬೂದುಬಣ್ಣವನ್ನು ಮಾಡಿ ಮತ್ತು ಪ್ರತಿಯೊಂದು ‘ಚಾನೆಲ್’ಗಾಗಿ 128% (ನೂರಿಪ್ಪತ್ತೆಂಟು ಪ್ರತಿಶತ) ಹಾಗೂ Layer Mode ಅನ್ನು Overlay ಗೆ ಬದಲಾಯಿಸಿರುವ ತಂತ್ರವನ್ನು ನೀವು ನೋಡಬಹುದು. |
17:17 | ಮಧ್ಯಮ ಬೂದುಬಣ್ಣ ಹಾಗೂ Overlay ಮೋಡ್’ಗಳು ಏನನ್ನೂ ಮಾಡುವುದಿಲ್ಲ. ನೀವು ಇಮೇಜ್ನಲ್ಲಿ, ಬಿಳಿ ಅಥವಾ ಕಪ್ಪುಬಣ್ಣದಿಂದ ಪೇಂಟ್ ಮಾಡಬಹುದು. |
17:26 | ಬಿಳಿಬಣ್ಣದಿಂದ ಪೇಂಟ್ ಮಾಡುವಾಗ ನೀವು ಇಮೇಜನ್ನು ಸ್ವಲ್ಪ ಹೊಳಪಾಗಿಸುತ್ತೀರಿ, ಕಪ್ಪುಬಣ್ಣದಿಂದ ಅದನ್ನು ನೀವು ಗಾಢಗೊಳಿಸುತ್ತೀರಿ. |
17:36 | ನನಗೆನಿಸುವಂತೆ ಈ ‘ಇಮೇಜ್’ನ ಎಡಿಟಿಂಗ್, ಈಗ ನಿಜವಾಗಿಯೂ ಪೂರ್ತಿಯಾಗಿದೆ. |
17:42 | ನಾನು ಇವತ್ತು ಮಾಡಿದ ‘ಎಡಿಟ್’ನಲ್ಲಿ, ನಿಮ್ಮಲ್ಲಿ ಯಾರಾದರೂ ತಪ್ಪು ಹುಡುಕಿದ ಹೊರತು ನಾನು ಇದರ ಮೇಲೆ ಇನ್ನೊಮ್ಮೆ ಕೆಲಸ ಮಾಡುವುದಿಲ್ಲ. |
17:53 | ನಾನು ಅದನ್ನು ಮಾಡಿಲ್ಲ ಎಂದು ಆಶಿಸುತ್ತೇನೆ ಮತ್ತು ಲೇಯರನ್ನು Dodge and Burn (ಡಾಡ್ಜ್ ಆಂಡ್ ಬರ್ನ್) ಎಂದು ಹೆಸರಿಸುತ್ತೇನೆ. |
18:10 | ಇದು ಈದಿನಕ್ಕೆ ಆಗಿತ್ತು. |
18:13 | ನಿಮ್ಮ ಅಭಿಪ್ರಾಯವನ್ನು ತಿಳಿಸಲು ದಯವಿಟ್ಟು ಈ ಲಿಂಕ್’ಗೆ ಬರೆಯಿರಿ. info@meetthegimp.org ಮತ್ತು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ‘ಲಿಂಕ್’ಗೆ ಹೋಗಿ. http://meetthegimp.org |
18:33 | ನಿಮಗೆ ಏನು ಇಷ್ಟವಾಯಿತು, ನಾನು ಏನನ್ನು ಉತ್ತಮಗೊಳಿಸಬಹುದಿತ್ತು, ನಿಮಗೆ ಮುಂದೆ ಏನು ನೋಡಬೇಕಾಗಿದೆ ಎನ್ನುವುದನ್ನು ಹೇಳಿ. ನಾನು ನಿಮ್ಮಿಂದ ಕೇಳಲು ಬಯಸುತ್ತೇನೆ. |
18:46 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಮತ್ತು ಪ್ರವಾಚಕ ವಿದ್ವಾನ್ ನವೀನ್ ಭಟ್ಟ ಉಪ್ಪಿನಪಟ್ಟಣ ಧನ್ಯವಾದ. |