Difference between revisions of "Linux-AWK/C2/Basics-of-Single-Dimensional-Array-in-awk/Kannada"
Sandhya.np14 (Talk | contribs) (Created page with "{| border=1 | <center>'''Time'''</center> | <center>'''Narration'''</center> |- | 00:01 | '''Basics of single dimensional array in awk''' ಎಂಬ ಈ ಸ್ಪೋಕನ್...") |
Sandhya.np14 (Talk | contribs) |
||
Line 24: | Line 24: | ||
|00:26 | |00:26 | ||
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: | ||
− | '''Ubuntu Linux 16.04''' ಆಪರೇಟಿಂಗ್ ಸಿಸ್ಟಂ ಹಾಗೂ | + | '''Ubuntu Linux 16.04''' ಆಪರೇಟಿಂಗ್ ಸಿಸ್ಟಂ ಹಾಗೂ |
+ | |||
'''gedit''' ಟೆಕ್ಸ್ಟ್-ಎಡಿಟರ್ '''3.20.1''' ಇವುಗಳನ್ನು ಬಳಸುತ್ತಿದ್ದೇನೆ. | '''gedit''' ಟೆಕ್ಸ್ಟ್-ಎಡಿಟರ್ '''3.20.1''' ಇವುಗಳನ್ನು ಬಳಸುತ್ತಿದ್ದೇನೆ. | ||
|- | |- |
Latest revision as of 11:34, 23 July 2019
|
|
00:01 | Basics of single dimensional array in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು –
awk ನಲ್ಲಿಯ ಅರೇಗಳು, |
00:12 | ಆರೇಯ ಎಲಿಮೆಂಟ್ ಗಳನ್ನುಆಸೈನ್ ಮಾಡುವುದು, |
00:15 | ಇತರ ಪ್ರೋಗ್ರಾಮಿಂಗ್ ಭಾಷೆಗಳಲ್ಲಿನ ಆರೇಗಳಿಂದ ಇದು ಹೇಗೆ ಭಿನ್ನವಾಗಿದೆ,
ಮತ್ತು ಆರೇಯ ಎಲಿಮೆಂಟ್ ಗಳನ್ನು ರೆಫರ್ ಮಾಡುವುದು (ಸೂಚಿಸುವುದು), ಇವುಗಳ ಬಗ್ಗೆ ಕಲಿಯುವೆವು. |
00:23 | ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು. |
00:26 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ gedit ಟೆಕ್ಸ್ಟ್-ಎಡಿಟರ್ 3.20.1 ಇವುಗಳನ್ನು ಬಳಸುತ್ತಿದ್ದೇನೆ. |
00:38 | ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು. |
00:42 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ನಮ್ಮ ವೆಬ್‌ಸೈಟ್‌ನಲ್ಲಿಯ ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿರಬೇಕು. |
00:49 | ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು. |
00:56 | ಇಲ್ಲದಿದ್ದರೆ, ದಯವಿಟ್ಟು ಈ ವೆಬ್‌ಸೈಟ್‌ನಲ್ಲಿಯ ಸಂಬಂಧಿತ ಟ್ಯುಟೋರಿಯಲ್ ಗಳನ್ನು ನೋಡಿ. |
01:02 | ಇಲ್ಲಿ ಬಳಸಲಾದ ಫೈಲ್‌ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್‌ನಲ್ಲಿ ಲಭ್ಯವಿರುತ್ತವೆ.
ದಯವಿಟ್ಟು ಅವುಗಳನ್ನು ಡೌನ್‌ಲೋಡ್ ಮಾಡಿ extract ಮಾಡಿಕೊಳ್ಳಿ. |
01:11 | awk ನಲ್ಲಿ ಆರೇ (array) ಎಂದರೇನು?
ಸಂಬಂಧಿತ ಎಲಿಮೆಂಟ್ ಗಳನ್ನು ಸ್ಟೋರ್ ಮಾಡಲು awk ಆರೇಗಳನ್ನು ಬಳಸುತ್ತದೆ. |
01:18 | ಈ ಎಲಿಮೆಂಟ್, ಸಂಖ್ಯೆ ಅಥವಾ ಸ್ಟ್ರಿಂಗ್ ಆಗಿರಬಹುದು. |
01:21 | awk ನಲ್ಲಿ ಆರೇಗಳು associative (ಅಸೋಸಿಏಟಿವ್) ಆಗಿವೆ. |
01:24 | ಇದರರ್ಥ, ಪ್ರತಿಯೊಂದು 'ಅರೇ ಎಲಿಮೆಂಟ್', ಒಂದು 'ಇಂಡೆಕ್ಸ್ -ವ್ಯಾಲ್ಯೂ' ಜೋಡಿ ಆಗಿದೆ. |
01:29 | ಇದು ಬೇರೆ ಯಾವುದೇ ಪ್ರೋಗ್ರಾಮಿಂಗ್ ಭಾಷೆಯಲ್ಲಿಯ 'ಅರೇ' ಗಳಂತೆಯೇ ಇದೆ. |
01:33 | ಆದರೆ ಇಲ್ಲಿ ಕೆಲವು ಪ್ರಮುಖ ವ್ಯತ್ಯಾಸಗಳಿವೆ. |
01:36 | ಮೊದಲನೆಯದಾಗಿ, ನಾವು ಅರೇ ಯನ್ನು ಬಳಸುವ ಮೊದಲು, ಅದನ್ನು ಡಿಕ್ಲೇರ್ ಮಾಡುವ ಅಗತ್ಯವಿಲ್ಲ. |
01:41 | ಅಲ್ಲದೆ, ಅರೇ ಎಷ್ಟು ಎಲಿಮೆಂಟ್ ಗಳನ್ನು ಹೊಂದಿದೆ ಎಂದು ಸಹ ಹೇಳಬೇಕಾಗಿಲ್ಲ. |
01:47 | ಪ್ರೋಗ್ರಾಮಿಂಗ್ ಭಾಷೆಗಳಲ್ಲಿ, 'ಅರೇ ಇಂಡೆಕ್ಸ್' ಸಾಮಾನ್ಯವಾಗಿ ಧನಾತ್ಮಕ ಪೂರ್ಣಾಂಕವಾಗಿದೆ. |
01:52 | ಇಂಡೆಕ್ಸ್ ಸಾಮಾನ್ಯವಾಗಿ ಸೊನ್ನೆಯಿಂದ (0) ಪ್ರಾರಂಭವಾಗುತ್ತದೆ. ನಂತರ 1, ನಂತರ 2 ಮತ್ತು ಹೀಗೆ… |
01:58 | ಆದರೆ awk ನಲ್ಲಿ, ಇಂಡೆಕ್ಸ್ ಯಾವುದೇ ಸಂಖ್ಯೆ ಅಥವಾ ಸ್ಟ್ರಿಂಗ್ ಆಗಿರಬಹುದು. |
02:03 | ಇದು awk ನಲ್ಲಿ ಅರೇ ಎಲಿಮೆಂಟ್ ಅನ್ನು ಅಸೈನ್ ಮಾಡುವ ಸಿಂಟ್ಯಾಕ್ಸ್ ಆಗಿದೆ.
Array name ಯಾವುದೇ ಸಮಂಜಸವಾದ ವೇರಿಯಬಲ್ ಹೆಸರಾಗಿರಬಹುದು. |
02:11 | ಇಲ್ಲಿ, index ಒಂದು ಪೂರ್ಣಾಂಕ (integer) ಅಥವಾ ಸ್ಟ್ರಿಂಗ್ ಆಗಿರಬಹುದು. |
02:16 | ಇಂಡೆಕ್ಸ್ ಹೆಸರು ಅಥವಾ ವ್ಯಾಲ್ಯೂ ಯಾವುದೇ ಆಗಿರಲಿ, 'ಸ್ಟ್ರಿಂಗ್' ಗಳನ್ನು ಡಬಲ್-ಕೋಟ್ಸ್ ಒಳಗೆ ಬರೆಯಬೇಕು. |
02:23 | ಇದನ್ನು ಒಂದು ಉದಾಹರಣೆಯೊಂದಿಗೆ ತಿಳಿದುಕೊಳ್ಳೋಣ. |
02:27 | ನಾನು ಈಗಾಗಲೇ ಕೋಡ್ ಅನ್ನು ಬರೆದಿದ್ದೇನೆ ಮತ್ತು ಅದನ್ನು array_intro.awk ಎಂದು ಸೇವ್ ಮಾಡಿದ್ದೇನೆ. |
02:34 | ಪ್ಲೇಯರ್‌ನ ಕೆಳಗಿನ Code Files ಲಿಂಕ್‌ನಲ್ಲಿ, ಈ ಫೈಲ್ ಲಭ್ಯವಿದೆ.
ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಿ. |
02:41 | ಇಲ್ಲಿ ನಾನು ಉದಾಹರಣೆಗಾಗಿ ವಾರದ ದಿನಗಳನ್ನು BEGIN ವಿಭಾಗದ ಒಳಗೆ ಬರೆದಿದ್ದೇನೆ. |
02:48 | ಮತ್ತು 'ಅರೇ' ಯ ಹೆಸರು day ಆಗಿದೆ. |
02:52 | ನಾನು ಇಂಡೆಕ್ಸ್ ಅನ್ನು 1 ಎಂದು ಮತ್ತು ವ್ಯಾಲ್ಯೂಅನ್ನು “Sunday” ಎಂದು ಸೆಟ್ ಮಾಡಿದ್ದೇನೆ. |
02:57 | ಈ 'ಅರೇ ಎಲಿಮೆಂಟ್' ನಲ್ಲಿ, ಒಂದು 'ಸ್ಟ್ರಿಂಗ್' ಅನ್ನು ಇಂಡೆಕ್ಸ್ ಆಗಿ ಬಳಸಿದ್ದೇನೆ.
ಹೀಗಾಗಿ, ಇಂಡೆಕ್ಸ್ “first” ಗಾಗಿ, ವ್ಯಾಲ್ಯೂ “Sunday” ಆಗಿದೆ. |
03:06 | ಸಂಪೂರ್ಣ 'ಅರೇ' ಅನ್ನು ಹೀಗೆಯೇ ರಚಿಸಲಾಗಿದೆ. |
03:10 | ಇಲ್ಲಿ ಗಮನಿಸಿ, 'ಅರೇ ಎಲಿಮೆಂಟ್ ಗಳು' ಅನುಕ್ರಮವಾಗಿಲ್ಲ.
ನಾನು day four ಅನ್ನು day three ಗಿಂತ ಮೊದಲು ಡಿಕ್ಲೇರ್ ಮಾಡಿದ್ದೇನೆ. |
03:18 | awk ಆರೇಗಳಲ್ಲಿ, ಇಂಡೆಕ್ಸ್ ಅನುಕ್ರಮವಾಗಿ ಇರಬೇಕಾಗಿಲ್ಲ. |
03:23 | 'ಅಸೋಸಿಯೇಟಿವ್ ಆರೇ' ಯ (associative array) ಪ್ರಯೋಜನವೆಂದರೆ, ಯಾವುದೇ ಸಮಯದಲ್ಲಿ ಹೊಸ ಜೊತೆಗಳನ್ನು ಸೇರಿಸಬಹುದು. |
03:29 | ನಾನು day 6 ಅನ್ನು 'ಅರೇ' ಯಲ್ಲಿ ಸೇರಿಸುತ್ತೇನೆ. |
03:33 | ಕೊನೆಯ ಸಾಲಿನ ತುದಿಯಲ್ಲಿ ಕರ್ಸರ್ ಅನ್ನು ಇರಿಸಿ ಮತ್ತು Enter ಅನ್ನು ಒತ್ತಿ.
ನಂತರ ಈಕೆಳಗಿನಂತೆ ಟೈಪ್ ಮಾಡಿ. |
03:42 | ಫೈಲ್ ಅನ್ನು ಸೇವ್ ಮಾಡಿ. |
03:44 | ನಾವು ಆರೇಯನ್ನು ಡಿಕ್ಲೇರ್ ಮಾಡಿದ್ದೇವೆ.
ಆದರೆ ನಾವು 'ಅರೇ ಎಲಿಮೆಂಟ್' ಅನ್ನು ಹೇಗೆ ರೆಫರ್ ಮಾಡಬೇಕು? |
03:49 | ಒಂದು ನಿರ್ದಿಷ್ಟ ಇಂಡೆಕ್ಸ್ ನಲ್ಲಿಯ ಎಲಿಮೆಂಟ್ ಅನ್ನು ರೆಫರ್ ಮಾಡಲು, array name ಮತ್ತು ಚೌಕ ಬ್ರಾಕೆಟ್ ಗಳಲ್ಲಿ index ಅನ್ನು ಬರೆಯಿರಿ.
ಇದನ್ನು ನಾವು ಪ್ರಯತ್ನಿಸೋಣ. |
03:58 | ಮತ್ತೊಮ್ಮೆ ಕೋಡ್‌ಗೆ ಬದಲಿಸಿ. |
04:01 | ಮುಚ್ಚುವ ಕರ್ಲೀ ಬ್ರೇಸ್ ನ ಎಡಬದಿಯಲ್ಲಿ ಕರ್ಸರ್ ಅನ್ನು ಇರಿಸಿ. |
04:05 | Enter ಅನ್ನು ಒತ್ತಿ.
ಹೀಗೆ ಟೈಪ್ ಮಾಡಿ: print space day within square brackets 6. |
04:13 | ಕೋಡ್ ಅನ್ನು ಸೇವ್ ಮಾಡಿ. |
04:15 | CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ. |
04:20 | cd ಕಮಾಂಡ್ ಅನ್ನು ಬಳಸಿ, ನೀವು Code Files ಅನ್ನು ಡೌನ್‌ಲೋಡ್ ಹಾಗೂ extract ಮಾಡಿರುವ ಫೋಲ್ಡರ್‌ಗೆ ಹೋಗಿ. |
04:27 | ಈಗ, ಹೀಗೆ ಟೈಪ್ ಮಾಡಿ: awk space hyphen small f space array_intro.awk
Enter ಅನ್ನು ಒತ್ತಿ. |
04:38 | ನೋಡಿ, Friday ಯನ್ನು ಔಟ್ಪುಟ್ ಎಂದು ಪಡೆಯುತ್ತೇವೆ. |
04:42 | ನಂತರ, 'ಆರೇ' ಯಲ್ಲಿ, ಒಂದು ನಿರ್ದಿಷ್ಟ ಇಂಡೆಕ್ಸ್ ನಲ್ಲಿ, ಯಾವುದೇ ಎಲಿಮೆಂಟ್ ಇದೆಯೇ ಎಂದು ನಾವು ಪರೀಕ್ಷಿಸುತ್ತೇವೆ. |
04:48 | ಇದಕ್ಕಾಗಿ, ನಾವು 'in ಆಪರೇಟರ್' ಅನ್ನು ಬಳಸಬೇಕು. ಇದನ್ನು ಒಂದು ಉದಾಹರಣೆಯೊಂದಿಗೆ ವಿವರಿಸುತ್ತೇನೆ. |
04:55 | ಎಡಿಟರ್ ವಿಂಡೋದಲ್ಲಿ ಕೋಡ್‌ಗೆ ಬದಲಾಯಿಸಿ. |
04:59 | ಕರ್ಸರ್ ಅನ್ನು print ಸ್ಟೇಟ್ಮೆಂಟ್ ನ ಕೊನೆಯಲ್ಲಿ ಇರಿಸಿ ಹಾಗೂ Enter ಅನ್ನು ಒತ್ತಿ.
ನಂತರ ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ. |
05:09 | ಕೋಡ್ ಅನ್ನು ಸೇವ್ ಮಾಡಿ. |
05:11 | ಈಗ ನಾನು ಎರಡು if ಕಂಡಿಷನ್ ಗಳನ್ನು ಸೇರಿಸಿದ್ದೇನೆ. |
05:15 | ಮೊದಲನೆಯ if ಕಂಡಿಷನ್, day ಯಲ್ಲಿ ಇಂಡೆಕ್ಸ್ 2 (index two) ಇದೆಯೇ ಎಂದು ಪರೀಕ್ಷಿಸುತ್ತದೆ. |
05:21 | ಹೌದು ಎಂದಾದರೆ, ಆಗ ಸಂಬಂಧಿತ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ. |
05:26 | ನಂತರ, ಎರಡನೇ ಕಂಡಿಷನ್, day ಯಲ್ಲಿ ಇಂಡೆಕ್ಸ್ 7 (index seven) ಇದೆಯೇ ಎಂದು ಪರೀಕ್ಷಿಸುತ್ತದೆ.
ಇದು true ಎಂದಾದರೆ, print ಸ್ಟೇಟ್ಮೆಂಟ್ ಅನ್ನು ಇದು ಎಕ್ಸೀಕ್ಯೂಟ್ ಮಾಡುವುದು. |
05:35 | ನಾವು ನೋಡುವಂತೆ, ಇಂಡೆಕ್ಸ್ 2 ಆರೇಯಲ್ಲಿದೆ, ಮತ್ತು 7 ಇಲ್ಲ.
ಔಟ್ಪುಟ್ ಅನ್ನು ಪರಿಶೀಲಿಸಲು, ಈ ಫೈಲ್ ಅನ್ನು ನಾವು ಎಕ್ಸೀಕ್ಯೂಟ್ ಮಾಡೋಣ. |
05:44 | 'ಟರ್ಮಿನಲ್' ಗೆ ಬದಲಾಯಿಸಿ. ಹಿಂದೆ ಎಕ್ಸೀಕ್ಯೂಟ್ ಮಾಡಿದ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ. |
05:51 | ಎಕ್ಸೀಕ್ಯೂಟ್ ಮಾಡಲು, Enter ಅನ್ನು ಒತ್ತಿ. |
05:54 | ನಮಗೆ ಬೇಕಾಗಿರುವಂತೆ ಔಟ್‌ಪುಟ್ ಸಿಗುತ್ತದೆ. |
05:57 | ನಾವು ಈಗ ಕೋಡ್‌ನಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ಮಾಡುತ್ತೇವೆ.
ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಅಪ್ಡೇಟ್ ಮಾಡಿ. |
06:04 | 7 in day ಕಂಡಿಷನ್ ನ ಕೆಳಗೆ, ನಾನು ಇನ್ನೂ ಒಂದು ಕಂಡಿಷನ್ ಅನ್ನು ಸೇರಿಸಿದ್ದೇನೆ. |
06:09 | ಇದು, ಇಂಡೆಕ್ಸ್ seven ನ ವ್ಯಾಲ್ಯೂ, null ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸುತ್ತದೆ. |
06:14 | true ಎಂದಾದರೆ, ಅದು Index 7 is not null ಎಂದು ಪ್ರಿಂಟ್ ಮಾಡುವುದು. |
06:18 | ನಮ್ಮಲ್ಲಿ 7 ಇರುವ ಯಾವುದೇ ಇಂಡೆಕ್ಸ್ ಇಲ್ಲ ಎಂದು ಈಗಾಗಲೇ ತಿಳಿದಿದೆ. ಹೀಗಾಗಿ ಅದು ಏನನ್ನೂ ಪ್ರಿಂಟ್ ಮಾಡುವುದಿಲ್ಲ. |
06:24 | ಆಮೇಲೆ, ನಾವು 7 in day ಕಂಡಿಷನ್ ನ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಬದಲಾಯಿಸಿದ್ದೇವೆ. |
06:30 | ಕೋಡ್ ಅನ್ನು ಸೇವ್ ಮಾಡಿ.
ನಾವು ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡಿದಾಗ ಏನಾಗುತ್ತದೆ ಎಂದು ನೋಡೋಣ. |
06:35 | ಟರ್ಮಿನಲ್‌ಗೆ ಬದಲಾಯಿಸಿ.
ಹಿಂದೆ ಎಕ್ಸೀಕ್ಯೂಟ್ ಮಾಡಿದ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ. |
06:43 | ಎಕ್ಸೀಕ್ಯೂಟ್ ಮಾಡಲು, Enter ಅನ್ನು ಒತ್ತಿ. |
06:46 | ನಮಗೆ ಅನಿರೀಕ್ಷಿತ ಔಟ್‌ಪುಟ್ ಸಿಕ್ಕಿದೆ. |
06:49 | "Index 7 is present after null comparison." ಎಂಬ ಸ್ಟೇಟ್ಮೆಂಟ್ ಅನ್ನು ಪ್ರಿಂಟ್ ಮಾಡಲಾಗಿದೆ.
ಅದು ಹೇಗೆ ಸಾಧ್ಯ? |
06:57 | day[7] not equal to null ಎಂದು ಬರೆದಾಗ, ನಾವು ಇಂಡೆಕ್ಸ್ 7 ನಲ್ಲಿರುವ ಎಲಿಮೆಂಟ್ ಅನ್ನು ಆಕ್ಸೆಸ್ ಮಾಡಲು ಪ್ರಯತ್ನಿಸುತ್ತಿದ್ದೇವೆ. |
07:04 | ಈ ಆಕ್ಸೆಸ್, ಮೊದಲು ಇಂಡೆಕ್ಸ್ 7 ನಲ್ಲಿ ಒಂದು ಎಲಿಮೆಂಟ್ ಅನ್ನು ತಾನೇ ಕ್ರಿಯೇಟ್ ಮಾಡುತ್ತದೆ ಮತ್ತು ಅದನ್ನು null ವ್ಯಾಲ್ಯೂ ಗೆ ಇನಿಶಿಯಲೈಸ್ ಮಾಡುತ್ತದೆ. |
07:12 | ಆಮೇಲೆ, ಇಂಡೆಕ್ಸ್ 7 ನಲ್ಲಿ ವಾಸ್ತವವಾಗಿ ಯಾವುದೇ ಎಲಿಮೆಂಟ್ ಇದೆಯೇ ಎಂದು ನೋಡುತ್ತಿದ್ದೇವೆ. |
07:18 | null ಎಲಿಮೆಂಟ್ ಅನ್ನು ಈಗಾಗಲೇ ಕ್ರಿಯೇಟ್ ಮಾಡಿರುವುದರಿಂದ, ಔಟ್‌ಪುಟ್ Index 7 is present after null comparison ಎಂದು ತೋರಿಸುತ್ತದೆ. |
07:26 | ಆದ್ದರಿಂದ, ಇದನ್ನು ನೆನಪಿಡಿ -
day at index 7 not equal to null ಇದು ಎಲಿಮೆಂಟ್ ನ ಇರುವಿಕೆಯನ್ನು ಪರೀಕ್ಷಿಸಲು ತಪ್ಪು ವಿಧಾನವಾಗಿದೆ. |
07:34 | ಇದು ಇಂಡೆಕ್ಸ್ 7 ನಲ್ಲಿ, ಒಂದು null ಎಲಿಮೆಂಟ್ ಅನ್ನು ಕ್ರಿಯೇಟ್ ಮಾಡುತ್ತದೆ. |
07:38 | ಬದಲಾಗಿ, ನಾವು in ಆಪರೇಟರ್ ಅನ್ನು ಬಳಸಬೇಕು. |
07:41 | ಇದು ಆರೇಯಲ್ಲಿ ಯಾವುದೇ ಹೆಚ್ಚಿನ ಎಲಿಮೆಂಟ್ ಅನ್ನು ಕ್ರಿಯೇಟ್ ಮಾಡುವುದಿಲ್ಲ.
ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
07:50 | ಈ ಟ್ಯುಟೋರಿಯಲ್ ನಲ್ಲಿ ನಾವು -
awk ನಲ್ಲಿಯ ಅರೇಗಳು, |
07:54 | ಆರೇಯ ಎಲಿಮೆಂಟ್ ಗಳನ್ನುಆಸೈನ್ ಮಾಡುವುದು, |
07:56 | ಇತರ ಪ್ರೋಗ್ರಾಮಿಂಗ್ ಭಾಷೆಗಳಲ್ಲಿನ ಆರೇಗಳಿಂದ ಇದು ಹೇಗೆ ಭಿನ್ನವಾಗಿದೆ? |
08:00 | ಆರೇಯ ಎಲಿಮೆಂಟ್ ಗಳನ್ನು ರೆಫರ್ ಮಾಡುವುದು (ಸೂಚಿಸುವುದು),
ಇವುಗಳ ಬಗ್ಗೆ ಕಲಿತಿದ್ದೇವೆ. |
08:03 | ಒಂದು ಅಸೈನ್ಮೆಂಟ್-
flowerColor ಎಂಬ ಒಂದು ಆರೇಯನ್ನು ಡಿಫೈನ್ ಮಾಡಿ. |
08:07 | ಹೂವುಗಳ ಹೆಸರುಗಳು ಇಂಡೆಕ್ಸ್ ಆಗಿರುತ್ತದೆ. |
08:10 | ಆ ಹೂವುಗಳಿಗೆ ಅನುಗುಣವಾದ ಬಣ್ಣಗಳು ವ್ಯಾಲ್ಯೂ ಆಗಿರುತ್ತವೆ. |
08:14 | ನಿಮ್ಮ ಆಯ್ಕೆಯ ಯಾವುದೇ ಐದು ಹೂವುಗಳ ಹೆಸರನ್ನು ಸೇರಿಸಿ. |
08:18 | ನಾಲ್ಕನೆಯ ಹೂವಿನ ಬಣ್ಣವನ್ನು ಪ್ರಿಂಟ್ ಮಾಡಿ.
'ಅರೇ' ಯಲ್ಲಿ “ಲೋಟಸ್” ಹೂವು ಇದೆಯೇ ಎಂದು ಪರೀಕ್ಷಿಸಿ. |
08:25 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
08:33 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, “ಸ್ಪೋಕನ್ ಟ್ಯುಟೋರಿಯಲ್” ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:42 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
08:46 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಂಗೆ ಬರೆಯಿರಿ. |
08:50 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
09:01 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |