Linux-AWK/C2/Basics-of-Single-Dimensional-Array-in-awk/Kannada

From Script | Spoken-Tutorial
Jump to: navigation, search
Time
Narration
00:01 Basics of single dimensional array in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು –

awk ನಲ್ಲಿಯ ಅರೇಗಳು,

00:12 ಆರೇಯ ಎಲಿಮೆಂಟ್ ಗಳನ್ನುಆಸೈನ್ ಮಾಡುವುದು,
00:15 ಇತರ ಪ್ರೋಗ್ರಾಮಿಂಗ್ ಭಾಷೆಗಳಲ್ಲಿನ ಆರೇಗಳಿಂದ ಇದು ಹೇಗೆ ಭಿನ್ನವಾಗಿದೆ,

ಮತ್ತು ಆರೇಯ ಎಲಿಮೆಂಟ್ ಗಳನ್ನು ರೆಫರ್ ಮಾಡುವುದು (ಸೂಚಿಸುವುದು), ಇವುಗಳ ಬಗ್ಗೆ ಕಲಿಯುವೆವು.

00:23 ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು.
00:26 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ

gedit ಟೆಕ್ಸ್ಟ್-ಎಡಿಟರ್ 3.20.1 ಇವುಗಳನ್ನು ಬಳಸುತ್ತಿದ್ದೇನೆ.

00:38 ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು.
00:42 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ನಮ್ಮ ವೆಬ್‌ಸೈಟ್‌ನಲ್ಲಿಯ ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿರಬೇಕು.
00:49 ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು.
00:56 ಇಲ್ಲದಿದ್ದರೆ, ದಯವಿಟ್ಟು ಈ ವೆಬ್‌ಸೈಟ್‌ನಲ್ಲಿಯ ಸಂಬಂಧಿತ ಟ್ಯುಟೋರಿಯಲ್ ಗಳನ್ನು ನೋಡಿ.
01:02 ಇಲ್ಲಿ ಬಳಸಲಾದ ಫೈಲ್‌ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್‌ನಲ್ಲಿ ಲಭ್ಯವಿರುತ್ತವೆ.

ದಯವಿಟ್ಟು ಅವುಗಳನ್ನು ಡೌನ್‌ಲೋಡ್ ಮಾಡಿ extract ಮಾಡಿಕೊಳ್ಳಿ.

01:11 awk ನಲ್ಲಿ ಆರೇ (array) ಎಂದರೇನು?

ಸಂಬಂಧಿತ ಎಲಿಮೆಂಟ್ ಗಳನ್ನು ಸ್ಟೋರ್ ಮಾಡಲು awk ಆರೇಗಳನ್ನು ಬಳಸುತ್ತದೆ.

01:18 ಈ ಎಲಿಮೆಂಟ್, ಸಂಖ್ಯೆ ಅಥವಾ ಸ್ಟ್ರಿಂಗ್ ಆಗಿರಬಹುದು.
01:21 awk ನಲ್ಲಿ ಆರೇಗಳು associative (ಅಸೋಸಿಏಟಿವ್) ಆಗಿವೆ.
01:24 ಇದರರ್ಥ, ಪ್ರತಿಯೊಂದು 'ಅರೇ ಎಲಿಮೆಂಟ್', ಒಂದು 'ಇಂಡೆಕ್ಸ್ -ವ್ಯಾಲ್ಯೂ' ಜೋಡಿ ಆಗಿದೆ.
01:29 ಇದು ಬೇರೆ ಯಾವುದೇ ಪ್ರೋಗ್ರಾಮಿಂಗ್ ಭಾಷೆಯಲ್ಲಿಯ 'ಅರೇ' ಗಳಂತೆಯೇ ಇದೆ.
01:33 ಆದರೆ ಇಲ್ಲಿ ಕೆಲವು ಪ್ರಮುಖ ವ್ಯತ್ಯಾಸಗಳಿವೆ.
01:36 ಮೊದಲನೆಯದಾಗಿ, ನಾವು ಅರೇ ಯನ್ನು ಬಳಸುವ ಮೊದಲು, ಅದನ್ನು ಡಿಕ್ಲೇರ್ ಮಾಡುವ ಅಗತ್ಯವಿಲ್ಲ.
01:41 ಅಲ್ಲದೆ, ಅರೇ ಎಷ್ಟು ಎಲಿಮೆಂಟ್ ಗಳನ್ನು ಹೊಂದಿದೆ ಎಂದು ಸಹ ಹೇಳಬೇಕಾಗಿಲ್ಲ.
01:47 ಪ್ರೋಗ್ರಾಮಿಂಗ್ ಭಾಷೆಗಳಲ್ಲಿ, 'ಅರೇ ಇಂಡೆಕ್ಸ್' ಸಾಮಾನ್ಯವಾಗಿ ಧನಾತ್ಮಕ ಪೂರ್ಣಾಂಕವಾಗಿದೆ.
01:52 ಇಂಡೆಕ್ಸ್ ಸಾಮಾನ್ಯವಾಗಿ ಸೊನ್ನೆಯಿಂದ (0) ಪ್ರಾರಂಭವಾಗುತ್ತದೆ. ನಂತರ 1, ನಂತರ 2 ಮತ್ತು ಹೀಗೆ…
01:58 ಆದರೆ awk ನಲ್ಲಿ, ಇಂಡೆಕ್ಸ್ ಯಾವುದೇ ಸಂಖ್ಯೆ ಅಥವಾ ಸ್ಟ್ರಿಂಗ್ ಆಗಿರಬಹುದು.
02:03 ಇದು awk ನಲ್ಲಿ ಅರೇ ಎಲಿಮೆಂಟ್ ಅನ್ನು ಅಸೈನ್ ಮಾಡುವ ಸಿಂಟ್ಯಾಕ್ಸ್ ಆಗಿದೆ.

Array name ಯಾವುದೇ ಸಮಂಜಸವಾದ ವೇರಿಯಬಲ್ ಹೆಸರಾಗಿರಬಹುದು.

02:11 ಇಲ್ಲಿ, index ಒಂದು ಪೂರ್ಣಾಂಕ (integer) ಅಥವಾ ಸ್ಟ್ರಿಂಗ್ ಆಗಿರಬಹುದು.
02:16 ಇಂಡೆಕ್ಸ್ ಹೆಸರು ಅಥವಾ ವ್ಯಾಲ್ಯೂ ಯಾವುದೇ ಆಗಿರಲಿ, 'ಸ್ಟ್ರಿಂಗ್' ಗಳನ್ನು ಡಬಲ್-ಕೋಟ್ಸ್ ಒಳಗೆ ಬರೆಯಬೇಕು.
02:23 ಇದನ್ನು ಒಂದು ಉದಾಹರಣೆಯೊಂದಿಗೆ ತಿಳಿದುಕೊಳ್ಳೋಣ.
02:27 ನಾನು ಈಗಾಗಲೇ ಕೋಡ್ ಅನ್ನು ಬರೆದಿದ್ದೇನೆ ಮತ್ತು ಅದನ್ನು array_intro.awk ಎಂದು ಸೇವ್ ಮಾಡಿದ್ದೇನೆ.
02:34 ಪ್ಲೇಯರ್‌ನ ಕೆಳಗಿನ Code Files ಲಿಂಕ್‌ನಲ್ಲಿ, ಈ ಫೈಲ್ ಲಭ್ಯವಿದೆ.

ದಯವಿಟ್ಟು ಅದನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಿ.

02:41 ಇಲ್ಲಿ ನಾನು ಉದಾಹರಣೆಗಾಗಿ ವಾರದ ದಿನಗಳನ್ನು BEGIN ವಿಭಾಗದ ಒಳಗೆ ಬರೆದಿದ್ದೇನೆ.
02:48 ಮತ್ತು 'ಅರೇ' ಯ ಹೆಸರು day ಆಗಿದೆ.
02:52 ನಾನು ಇಂಡೆಕ್ಸ್ ಅನ್ನು 1 ಎಂದು ಮತ್ತು ವ್ಯಾಲ್ಯೂಅನ್ನು “Sunday” ಎಂದು ಸೆಟ್ ಮಾಡಿದ್ದೇನೆ.
02:57 ಈ 'ಅರೇ ಎಲಿಮೆಂಟ್' ನಲ್ಲಿ, ಒಂದು 'ಸ್ಟ್ರಿಂಗ್' ಅನ್ನು ಇಂಡೆಕ್ಸ್ ಆಗಿ ಬಳಸಿದ್ದೇನೆ.

ಹೀಗಾಗಿ, ಇಂಡೆಕ್ಸ್ “first” ಗಾಗಿ, ವ್ಯಾಲ್ಯೂ “Sunday” ಆಗಿದೆ.

03:06 ಸಂಪೂರ್ಣ 'ಅರೇ' ಅನ್ನು ಹೀಗೆಯೇ ರಚಿಸಲಾಗಿದೆ.
03:10 ಇಲ್ಲಿ ಗಮನಿಸಿ, 'ಅರೇ ಎಲಿಮೆಂಟ್ ಗಳು' ಅನುಕ್ರಮವಾಗಿಲ್ಲ.

ನಾನು day four ಅನ್ನು day three ಗಿಂತ ಮೊದಲು ಡಿಕ್ಲೇರ್ ಮಾಡಿದ್ದೇನೆ.

03:18 awk ಆರೇಗಳಲ್ಲಿ, ಇಂಡೆಕ್ಸ್ ಅನುಕ್ರಮವಾಗಿ ಇರಬೇಕಾಗಿಲ್ಲ.
03:23 'ಅಸೋಸಿಯೇಟಿವ್ ಆರೇ' ಯ (associative array) ಪ್ರಯೋಜನವೆಂದರೆ, ಯಾವುದೇ ಸಮಯದಲ್ಲಿ ಹೊಸ ಜೊತೆಗಳನ್ನು ಸೇರಿಸಬಹುದು.
03:29 ನಾನು day 6 ಅನ್ನು 'ಅರೇ' ಯಲ್ಲಿ ಸೇರಿಸುತ್ತೇನೆ.
03:33 ಕೊನೆಯ ಸಾಲಿನ ತುದಿಯಲ್ಲಿ ಕರ್ಸರ್ ಅನ್ನು ಇರಿಸಿ ಮತ್ತು Enter ಅನ್ನು ಒತ್ತಿ.

ನಂತರ ಈಕೆಳಗಿನಂತೆ ಟೈಪ್ ಮಾಡಿ.

03:42 ಫೈಲ್ ಅನ್ನು ಸೇವ್ ಮಾಡಿ.
03:44 ನಾವು ಆರೇಯನ್ನು ಡಿಕ್ಲೇರ್ ಮಾಡಿದ್ದೇವೆ.

ಆದರೆ ನಾವು 'ಅರೇ ಎಲಿಮೆಂಟ್' ಅನ್ನು ಹೇಗೆ ರೆಫರ್ ಮಾಡಬೇಕು?

03:49 ಒಂದು ನಿರ್ದಿಷ್ಟ ಇಂಡೆಕ್ಸ್ ನಲ್ಲಿಯ ಎಲಿಮೆಂಟ್ ಅನ್ನು ರೆಫರ್ ಮಾಡಲು, array name ಮತ್ತು ಚೌಕ ಬ್ರಾಕೆಟ್ ಗಳಲ್ಲಿ index ಅನ್ನು ಬರೆಯಿರಿ.

ಇದನ್ನು ನಾವು ಪ್ರಯತ್ನಿಸೋಣ.

03:58 ಮತ್ತೊಮ್ಮೆ ಕೋಡ್‌ಗೆ ಬದಲಿಸಿ.
04:01 ಮುಚ್ಚುವ ಕರ್ಲೀ ಬ್ರೇಸ್ ನ ಎಡಬದಿಯಲ್ಲಿ ಕರ್ಸರ್ ಅನ್ನು ಇರಿಸಿ.
04:05 Enter ಅನ್ನು ಒತ್ತಿ.

ಹೀಗೆ ಟೈಪ್ ಮಾಡಿ: print space day within square brackets 6.

04:13 ಕೋಡ್ ಅನ್ನು ಸೇವ್ ಮಾಡಿ.
04:15 CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ.
04:20 cd ಕಮಾಂಡ್ ಅನ್ನು ಬಳಸಿ, ನೀವು Code Files ಅನ್ನು ಡೌನ್‌ಲೋಡ್ ಹಾಗೂ extract ಮಾಡಿರುವ ಫೋಲ್ಡರ್‌ಗೆ ಹೋಗಿ.
04:27 ಈಗ, ಹೀಗೆ ಟೈಪ್ ಮಾಡಿ: awk space hyphen small f space array_intro.awk

Enter ಅನ್ನು ಒತ್ತಿ.

04:38 ನೋಡಿ, Friday ಯನ್ನು ಔಟ್ಪುಟ್ ಎಂದು ಪಡೆಯುತ್ತೇವೆ.
04:42 ನಂತರ, 'ಆರೇ' ಯಲ್ಲಿ, ಒಂದು ನಿರ್ದಿಷ್ಟ ಇಂಡೆಕ್ಸ್ ನಲ್ಲಿ, ಯಾವುದೇ ಎಲಿಮೆಂಟ್ ಇದೆಯೇ ಎಂದು ನಾವು ಪರೀಕ್ಷಿಸುತ್ತೇವೆ.
04:48 ಇದಕ್ಕಾಗಿ, ನಾವು 'in ಆಪರೇಟರ್' ಅನ್ನು ಬಳಸಬೇಕು. ಇದನ್ನು ಒಂದು ಉದಾಹರಣೆಯೊಂದಿಗೆ ವಿವರಿಸುತ್ತೇನೆ.
04:55 ಎಡಿಟರ್ ವಿಂಡೋದಲ್ಲಿ ಕೋಡ್‌ಗೆ ಬದಲಾಯಿಸಿ.
04:59 ಕರ್ಸರ್ ಅನ್ನು print ಸ್ಟೇಟ್ಮೆಂಟ್ ನ ಕೊನೆಯಲ್ಲಿ ಇರಿಸಿ ಹಾಗೂ Enter ಅನ್ನು ಒತ್ತಿ.

ನಂತರ ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ.

05:09 ಕೋಡ್ ಅನ್ನು ಸೇವ್ ಮಾಡಿ.
05:11 ಈಗ ನಾನು ಎರಡು if ಕಂಡಿಷನ್ ಗಳನ್ನು ಸೇರಿಸಿದ್ದೇನೆ.
05:15 ಮೊದಲನೆಯ if ಕಂಡಿಷನ್, day ಯಲ್ಲಿ ಇಂಡೆಕ್ಸ್ 2 (index two) ಇದೆಯೇ ಎಂದು ಪರೀಕ್ಷಿಸುತ್ತದೆ.
05:21 ಹೌದು ಎಂದಾದರೆ, ಆಗ ಸಂಬಂಧಿತ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ.
05:26 ನಂತರ, ಎರಡನೇ ಕಂಡಿಷನ್, day ಯಲ್ಲಿ ಇಂಡೆಕ್ಸ್ 7 (index seven) ಇದೆಯೇ ಎಂದು ಪರೀಕ್ಷಿಸುತ್ತದೆ.

ಇದು true ಎಂದಾದರೆ, print ಸ್ಟೇಟ್ಮೆಂಟ್ ಅನ್ನು ಇದು ಎಕ್ಸೀಕ್ಯೂಟ್ ಮಾಡುವುದು.

05:35 ನಾವು ನೋಡುವಂತೆ, ಇಂಡೆಕ್ಸ್ 2 ಆರೇಯಲ್ಲಿದೆ, ಮತ್ತು 7 ಇಲ್ಲ.

ಔಟ್ಪುಟ್ ಅನ್ನು ಪರಿಶೀಲಿಸಲು, ಈ ಫೈಲ್ ಅನ್ನು ನಾವು ಎಕ್ಸೀಕ್ಯೂಟ್ ಮಾಡೋಣ.

05:44 'ಟರ್ಮಿನಲ್' ಗೆ ಬದಲಾಯಿಸಿ. ಹಿಂದೆ ಎಕ್ಸೀಕ್ಯೂಟ್ ಮಾಡಿದ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ.
05:51 ಎಕ್ಸೀಕ್ಯೂಟ್ ಮಾಡಲು, Enter ಅನ್ನು ಒತ್ತಿ.
05:54 ನಮಗೆ ಬೇಕಾಗಿರುವಂತೆ ಔಟ್‌ಪುಟ್ ಸಿಗುತ್ತದೆ.
05:57 ನಾವು ಈಗ ಕೋಡ್‌ನಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ಮಾಡುತ್ತೇವೆ.

ಇಲ್ಲಿ ತೋರಿಸಿರುವಂತೆ ಕೋಡ್ ಅನ್ನು ಅಪ್ಡೇಟ್ ಮಾಡಿ.

06:04 7 in day ಕಂಡಿಷನ್ ನ ಕೆಳಗೆ, ನಾನು ಇನ್ನೂ ಒಂದು ಕಂಡಿಷನ್ ಅನ್ನು ಸೇರಿಸಿದ್ದೇನೆ.
06:09 ಇದು, ಇಂಡೆಕ್ಸ್ seven ನ ವ್ಯಾಲ್ಯೂ, null ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸುತ್ತದೆ.
06:14 true ಎಂದಾದರೆ, ಅದು Index 7 is not null ಎಂದು ಪ್ರಿಂಟ್ ಮಾಡುವುದು.
06:18 ನಮ್ಮಲ್ಲಿ 7 ಇರುವ ಯಾವುದೇ ಇಂಡೆಕ್ಸ್ ಇಲ್ಲ ಎಂದು ಈಗಾಗಲೇ ತಿಳಿದಿದೆ. ಹೀಗಾಗಿ ಅದು ಏನನ್ನೂ ಪ್ರಿಂಟ್ ಮಾಡುವುದಿಲ್ಲ.
06:24 ಆಮೇಲೆ, ನಾವು 7 in day ಕಂಡಿಷನ್ ನ ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಬದಲಾಯಿಸಿದ್ದೇವೆ.
06:30 ಕೋಡ್ ಅನ್ನು ಸೇವ್ ಮಾಡಿ.

ನಾವು ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡಿದಾಗ ಏನಾಗುತ್ತದೆ ಎಂದು ನೋಡೋಣ.

06:35 ಟರ್ಮಿನಲ್‌ಗೆ ಬದಲಾಯಿಸಿ.

ಹಿಂದೆ ಎಕ್ಸೀಕ್ಯೂಟ್ ಮಾಡಿದ ಕಮಾಂಡ್ ಅನ್ನು ಪಡೆಯಲು, 'ಅಪ್-ಆರೋ' ಕೀಯನ್ನು ಒತ್ತಿ.

06:43 ಎಕ್ಸೀಕ್ಯೂಟ್ ಮಾಡಲು, Enter ಅನ್ನು ಒತ್ತಿ.
06:46 ನಮಗೆ ಅನಿರೀಕ್ಷಿತ ಔಟ್‌ಪುಟ್ ಸಿಕ್ಕಿದೆ.
06:49 "Index 7 is present after null comparison." ಎಂಬ ಸ್ಟೇಟ್ಮೆಂಟ್ ಅನ್ನು ಪ್ರಿಂಟ್ ಮಾಡಲಾಗಿದೆ.

ಅದು ಹೇಗೆ ಸಾಧ್ಯ?

06:57 day[7] not equal to null ಎಂದು ಬರೆದಾಗ, ನಾವು ಇಂಡೆಕ್ಸ್ 7 ನಲ್ಲಿರುವ ಎಲಿಮೆಂಟ್ ಅನ್ನು ಆಕ್ಸೆಸ್ ಮಾಡಲು ಪ್ರಯತ್ನಿಸುತ್ತಿದ್ದೇವೆ.
07:04 ಈ ಆಕ್ಸೆಸ್, ಮೊದಲು ಇಂಡೆಕ್ಸ್ 7 ನಲ್ಲಿ ಒಂದು ಎಲಿಮೆಂಟ್ ಅನ್ನು ತಾನೇ ಕ್ರಿಯೇಟ್ ಮಾಡುತ್ತದೆ ಮತ್ತು ಅದನ್ನು null ವ್ಯಾಲ್ಯೂ ಗೆ ಇನಿಶಿಯಲೈಸ್ ಮಾಡುತ್ತದೆ.
07:12 ಆಮೇಲೆ, ಇಂಡೆಕ್ಸ್ 7 ನಲ್ಲಿ ವಾಸ್ತವವಾಗಿ ಯಾವುದೇ ಎಲಿಮೆಂಟ್ ಇದೆಯೇ ಎಂದು ನೋಡುತ್ತಿದ್ದೇವೆ.
07:18 null ಎಲಿಮೆಂಟ್ ಅನ್ನು ಈಗಾಗಲೇ ಕ್ರಿಯೇಟ್ ಮಾಡಿರುವುದರಿಂದ, ಔಟ್‌ಪುಟ್ Index 7 is present after null comparison ಎಂದು ತೋರಿಸುತ್ತದೆ.
07:26 ಆದ್ದರಿಂದ, ಇದನ್ನು ನೆನಪಿಡಿ -

day at index 7 not equal to null ಇದು ಎಲಿಮೆಂಟ್ ನ ಇರುವಿಕೆಯನ್ನು ಪರೀಕ್ಷಿಸಲು ತಪ್ಪು ವಿಧಾನವಾಗಿದೆ.

07:34 ಇದು ಇಂಡೆಕ್ಸ್ 7 ನಲ್ಲಿ, ಒಂದು null ಎಲಿಮೆಂಟ್ ಅನ್ನು ಕ್ರಿಯೇಟ್ ಮಾಡುತ್ತದೆ.
07:38 ಬದಲಾಗಿ, ನಾವು in ಆಪರೇಟರ್‌ ಅನ್ನು ಬಳಸಬೇಕು.
07:41 ಇದು ಆರೇಯಲ್ಲಿ ಯಾವುದೇ ಹೆಚ್ಚಿನ ಎಲಿಮೆಂಟ್ ಅನ್ನು ಕ್ರಿಯೇಟ್ ಮಾಡುವುದಿಲ್ಲ.

ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

07:50 ಈ ಟ್ಯುಟೋರಿಯಲ್ ನಲ್ಲಿ ನಾವು -

awk ನಲ್ಲಿಯ ಅರೇಗಳು,

07:54 ಆರೇಯ ಎಲಿಮೆಂಟ್ ಗಳನ್ನುಆಸೈನ್ ಮಾಡುವುದು,
07:56 ಇತರ ಪ್ರೋಗ್ರಾಮಿಂಗ್ ಭಾಷೆಗಳಲ್ಲಿನ ಆರೇಗಳಿಂದ ಇದು ಹೇಗೆ ಭಿನ್ನವಾಗಿದೆ?
08:00 ಆರೇಯ ಎಲಿಮೆಂಟ್ ಗಳನ್ನು ರೆಫರ್ ಮಾಡುವುದು (ಸೂಚಿಸುವುದು),

ಇವುಗಳ ಬಗ್ಗೆ ಕಲಿತಿದ್ದೇವೆ.

08:03 ಒಂದು ಅಸೈನ್ಮೆಂಟ್-

flowerColor ಎಂಬ ಒಂದು ಆರೇಯನ್ನು ಡಿಫೈನ್ ಮಾಡಿ.

08:07 ಹೂವುಗಳ ಹೆಸರುಗಳು ಇಂಡೆಕ್ಸ್ ಆಗಿರುತ್ತದೆ.
08:10 ಆ ಹೂವುಗಳಿಗೆ ಅನುಗುಣವಾದ ಬಣ್ಣಗಳು ವ್ಯಾಲ್ಯೂ ಆಗಿರುತ್ತವೆ.
08:14 ನಿಮ್ಮ ಆಯ್ಕೆಯ ಯಾವುದೇ ಐದು ಹೂವುಗಳ ಹೆಸರನ್ನು ಸೇರಿಸಿ.
08:18 ನಾಲ್ಕನೆಯ ಹೂವಿನ ಬಣ್ಣವನ್ನು ಪ್ರಿಂಟ್ ಮಾಡಿ.

'ಅರೇ' ಯಲ್ಲಿ “ಲೋಟಸ್” ಹೂವು ಇದೆಯೇ ಎಂದು ಪರೀಕ್ಷಿಸಿ.

08:25 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
08:33 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, “ಸ್ಪೋಕನ್ ಟ್ಯುಟೋರಿಯಲ್” ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:42 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
08:46 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಂಗೆ ಬರೆಯಿರಿ.
08:50 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

09:01 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14