Difference between revisions of "Linux/C2/Working-with-Linux-Process/Kannada"
From Script | Spoken-Tutorial
(Created page with ' {| border=1 |Time ||Narration |- |0:00 ||ಲಿನಕ್ಸ್ ಪ್ರೋಸೆಸ್ ಜೊತೆಗೆ ಕೆಲಸ ಮಾಡುವ ಬಗೆಗಿನ ಸ್ಪೋಕನ್…') |
|||
Line 1: | Line 1: | ||
− | |||
{| border=1 | {| border=1 | ||
|Time | |Time | ||
Line 10: | Line 9: | ||
|- | |- | ||
|0:05 | |0:05 | ||
− | ||ನಾನು ಉಬಂಟು 10.04 ಬಳಸುತ್ತಿದ್ದೇನೆ. | + | ||ನಾನು ಉಬಂಟು 10.04 ನ್ನು ಬಳಸುತ್ತಿದ್ದೇನೆ. |
|- | |- | ||
|0:09 | |0:09 | ||
− | ||ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ | + | ||ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಆರಂಭಿಸುವುದನ್ನು ತಿಳಿದಿರುವಿರಿ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದೀರಿ ಎಂದು ನಾನು ಊಹಿಸುತ್ತೇನೆ. |
|- | |- | ||
Line 23: | Line 22: | ||
|- | |- | ||
|0:28 | |0:28 | ||
− | || | + | ||ಇದನ್ನು ಗಮನಿಸಿ: ಲಿನಕ್ಸ್ ಒಂದು ಕೇಸ್ ಸೆನ್ಸಿಟಿವ್ ಆಗಿದ್ದು, ಈ ಟ್ಯುಟೋರಿಯಲ್ ನಲ್ಲಿರುವ ಎಲ್ಲಾ ಕಮಾಂಡ್ ಗಳೂ ಲೋವರ್ ಕೇಸ್ ನಲ್ಲಿಯೇ ಇದೆ, ಇಲ್ಲವಾದಲ್ಲಿ ಅದನ್ನು ತಿಳಿಸಲಾಗಿದೆ. |
|- | |- | ||
Line 39: | Line 38: | ||
|- | |- | ||
|0:51 | |0:51 | ||
− | ||ನಾವು ಟರ್ಮಿನಲ್ ನಲ್ಲಿ | + | ||ನಾವು ಟರ್ಮಿನಲ್ ನಲ್ಲಿ ಕಮಾಂಡ್ ಗಳನ್ನು ಟೈಪ್ ಮಾಡಿದರೆ, ಅವುಗಳು ಕಾರ್ಯನಿರತವಾಗಿರುವಾಗ ಅವನ್ನು ಪ್ರೋಸೆಸ್ ಗಳು ಎನ್ನುತ್ತೇವೆ. |
|- | |- | ||
|0:56 | |0:56 | ||
− | ||ನೀವು ಈಗ ಯಾವ ವಿಡಿಯೋದಲ್ಲಿ ಈ ಟ್ಯುಟೋರಿಯಲ್ ನ್ನು ವೀಕ್ಷಿಸುತ್ತಿರುವಿರೋ ಆ | + | ||ನೀವು ಈಗ ಯಾವ ವಿಡಿಯೋದಲ್ಲಿ ಈ ಟ್ಯುಟೋರಿಯಲ್ ನ್ನು ವೀಕ್ಷಿಸುತ್ತಿರುವಿರೋ ಆ ವಿಡಿಯೋವನ್ನು ಒಂದು ಪ್ರೋಸೆಸ್ ಎನ್ನುತ್ತಾರೆ. |
|- | |- | ||
|1:00 | |1:00 | ||
− | ||ನೀವು ಯಾವ ಬ್ರೌಸರ್ ನಲ್ಲಿ ಈ ಸ್ಪೋಕನ್ ಟ್ಯುಟೋರಿಯಲ್ ನ ವೆಬ್ ಸೈಟ್ ಓಪನ್ ಮಾಡಿರುವಿರೋ, ಆ ಬ್ರೌಸರ್ | + | ||ನೀವು ಯಾವ ಬ್ರೌಸರ್ ನಲ್ಲಿ ಈ ಸ್ಪೋಕನ್ ಟ್ಯುಟೋರಿಯಲ್ ನ ವೆಬ್ ಸೈಟ್ ಓಪನ್ ಮಾಡಿರುವಿರೋ, ಆ ಬ್ರೌಸರ್ ಅನ್ನು ಒಂದು ಪ್ರೋಸೆಸ್ ಎನ್ನುತ್ತಾರೆ. |
|- | |- | ||
|1:05 | |1:05 | ||
− | ||ಕಾರ್ಯನಿರತವಾಗಿರುವ ಶೆಲ್ ಸ್ಕ್ರಿಪ್ಟ್ ಗಳು | + | ||ಕಾರ್ಯನಿರತವಾಗಿರುವ ಶೆಲ್ ಸ್ಕ್ರಿಪ್ಟ್ ಗಳು ಕೂಡಾ ಪ್ರೋಸೆಸ್ ಗಳು. ಹೀಗೆಯೇ ಎಲ್ಲವೂ. |
|- | |- | ||
|1:11 | |1:11 | ||
− | ||ಪ್ರೋಸೆಸ್ ನ್ನು ಹೀಗೆ ನಿರೂಪಿಸಬಹುದು: ಯಾವುದೇ ಒಂದು ಪ್ರೊಗ್ರಾಮ್, ಚಲಾವಣೆಯಾಗುತ್ತಿದ್ದರೆ , ಅಂದರೆ | + | ||ಪ್ರೋಸೆಸ್ ನ್ನು ಹೀಗೆ ನಿರೂಪಿಸಬಹುದು: ಯಾವುದೇ ಒಂದು ಪ್ರೊಗ್ರಾಮ್, ಚಲಾವಣೆಯಾಗುತ್ತಿದ್ದರೆ, ಅಂದರೆ ಕಾರ್ಯವಹಿಸುತ್ತಿದ್ದರೆ, ಅದನ್ನು ಒಂದು ಪ್ರೋಸೆಸ್ ಎಂದು ಕರೆಯುತ್ತಾರೆ. |
|- | |- | ||
|1:17 | |1:17 | ||
− | ||ಪ್ರೋಸೆಸ್ ಗಳು ನಮ್ಮ ಹಾಗೆಯೇ. ಅವುಗಳು ಹುಟ್ಟುತ್ತವೆ, ಸಾಯುತ್ತವೆ ಹಾಗೂ ಅವುಗಳಿಗೆ | + | ||ಪ್ರೋಸೆಸ್ ಗಳು ನಮ್ಮ ಹಾಗೆಯೇ. ಅವುಗಳು ಹುಟ್ಟುತ್ತವೆ, ಸಾಯುತ್ತವೆ ಹಾಗೂ ಅವುಗಳಿಗೆ ಪಾಲಕರು ಹಾಗೂ ಮಕ್ಕಳೂ ಇರುತ್ತವೆ. |
|- | |- | ||
Line 99: | Line 98: | ||
|- | |- | ||
|2:18 | |2:18 | ||
− | ||ಈಗ, ಶೆಲ್ ಪ್ರೋಸೆಸ್, ಡೇಟ್ ಪ್ರೋಸೆಸ್ ನ್ನು | + | ||ಈಗ, ಶೆಲ್ ಪ್ರೋಸೆಸ್, ಡೇಟ್ ಪ್ರೋಸೆಸ್ ನ್ನು ಸೃಷ್ಟಿ ಮಾಡಿರುವುದರಿಂದ, ಶೆಲ್ ಪ್ರೋಸೆಸ್ ನ್ನು ಡೇಟ್ ಪ್ರೋಸೆಸ್ ನ ತಾಯಿ ಎಂದು ಕರೆಯಬಹುದು ಹಾಗೂ ಡೇಟ್ ಪ್ರೋಸೆಸ್ ನ್ನು ಶೆಲ್ ಪ್ರೋಸೆಸ್ ನ ಮಗು ಎಂದು ಕರೆಯಬಹುದು. |
|- | |- |
Revision as of 10:16, 17 April 2014
Time | Narration |
0:00 | ಲಿನಕ್ಸ್ ಪ್ರೋಸೆಸ್ ಜೊತೆಗೆ ಕೆಲಸ ಮಾಡುವ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
0:05 | ನಾನು ಉಬಂಟು 10.04 ನ್ನು ಬಳಸುತ್ತಿದ್ದೇನೆ. |
0:09 | ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಆರಂಭಿಸುವುದನ್ನು ತಿಳಿದಿರುವಿರಿ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದೀರಿ ಎಂದು ನಾನು ಊಹಿಸುತ್ತೇನೆ. |
0:16 | ನಿಮಗೆ ಆಸಕ್ತಿ ಇದ್ದಲ್ಲಿ, ಈ ಕೆಳಗಿನ ವೆಬ್ ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಅದು ಲಭ್ಯವಿದೆ. |
0:28 | ಇದನ್ನು ಗಮನಿಸಿ: ಲಿನಕ್ಸ್ ಒಂದು ಕೇಸ್ ಸೆನ್ಸಿಟಿವ್ ಆಗಿದ್ದು, ಈ ಟ್ಯುಟೋರಿಯಲ್ ನಲ್ಲಿರುವ ಎಲ್ಲಾ ಕಮಾಂಡ್ ಗಳೂ ಲೋವರ್ ಕೇಸ್ ನಲ್ಲಿಯೇ ಇದೆ, ಇಲ್ಲವಾದಲ್ಲಿ ಅದನ್ನು ತಿಳಿಸಲಾಗಿದೆ. |
0:38 | ಒಂದು ಪ್ರೋಸೆಸ್ ಎಂದರೆ ಏನು ಎಂದು ತಿಳಿಯಲು ನಾನು ನಿಮಗೆ ಒಂದು ಸಂಕ್ಷಿಪ್ತ ವಿವರಣೆ ನೀಡುತ್ತೇನೆ. |
0:42 | ಲಿನಕ್ಸ್ ನಲ್ಲಿ ಏನಾದರೂ ಒಂದು ಕೆಲಸ ನಡೆಯುತ್ತಿದೆ ಎಂದರೆ, ಅದನ್ನು ಒಂದು ಪ್ರೋಸೆಸ್ ಎನ್ನುತ್ತಾರೆ. |
0:46 | ಕಾರ್ಯವಹಿಸುವ ಮತ್ತು ನಮ್ಮ ಕಮಾಂಡ್ ಗಳನ್ನು ಸ್ವೀಕರಿಸುವ ಶೆಲ್ ನ್ನು ಪ್ರೋಸೆಸ್ ಎನ್ನುತ್ತಾರೆ. |
0:51 | ನಾವು ಟರ್ಮಿನಲ್ ನಲ್ಲಿ ಕಮಾಂಡ್ ಗಳನ್ನು ಟೈಪ್ ಮಾಡಿದರೆ, ಅವುಗಳು ಕಾರ್ಯನಿರತವಾಗಿರುವಾಗ ಅವನ್ನು ಪ್ರೋಸೆಸ್ ಗಳು ಎನ್ನುತ್ತೇವೆ. |
0:56 | ನೀವು ಈಗ ಯಾವ ವಿಡಿಯೋದಲ್ಲಿ ಈ ಟ್ಯುಟೋರಿಯಲ್ ನ್ನು ವೀಕ್ಷಿಸುತ್ತಿರುವಿರೋ ಆ ವಿಡಿಯೋವನ್ನು ಒಂದು ಪ್ರೋಸೆಸ್ ಎನ್ನುತ್ತಾರೆ. |
1:00 | ನೀವು ಯಾವ ಬ್ರೌಸರ್ ನಲ್ಲಿ ಈ ಸ್ಪೋಕನ್ ಟ್ಯುಟೋರಿಯಲ್ ನ ವೆಬ್ ಸೈಟ್ ಓಪನ್ ಮಾಡಿರುವಿರೋ, ಆ ಬ್ರೌಸರ್ ಅನ್ನು ಒಂದು ಪ್ರೋಸೆಸ್ ಎನ್ನುತ್ತಾರೆ. |
1:05 | ಕಾರ್ಯನಿರತವಾಗಿರುವ ಶೆಲ್ ಸ್ಕ್ರಿಪ್ಟ್ ಗಳು ಕೂಡಾ ಪ್ರೋಸೆಸ್ ಗಳು. ಹೀಗೆಯೇ ಎಲ್ಲವೂ. |
1:11 | ಪ್ರೋಸೆಸ್ ನ್ನು ಹೀಗೆ ನಿರೂಪಿಸಬಹುದು: ಯಾವುದೇ ಒಂದು ಪ್ರೊಗ್ರಾಮ್, ಚಲಾವಣೆಯಾಗುತ್ತಿದ್ದರೆ, ಅಂದರೆ ಕಾರ್ಯವಹಿಸುತ್ತಿದ್ದರೆ, ಅದನ್ನು ಒಂದು ಪ್ರೋಸೆಸ್ ಎಂದು ಕರೆಯುತ್ತಾರೆ. |
1:17 | ಪ್ರೋಸೆಸ್ ಗಳು ನಮ್ಮ ಹಾಗೆಯೇ. ಅವುಗಳು ಹುಟ್ಟುತ್ತವೆ, ಸಾಯುತ್ತವೆ ಹಾಗೂ ಅವುಗಳಿಗೆ ಪಾಲಕರು ಹಾಗೂ ಮಕ್ಕಳೂ ಇರುತ್ತವೆ. |
1:28 | ಈಗ ನಾವು ಮೊದಲ ಶೆಲ್ ಪ್ರೋಸೆಸ್ ಬಗ್ಗೆ ಕಲಿಯೋಣ. |
1:31 | ನಾವು ಸಿಸ್ಟಂ ಗೆ ಲಾಗ್ ಇನ್ ಆಗುತ್ತಿದ್ದಂತೆ, ಲಿನಕ್ಸ್ ಕರ್ನಲ್ ಮುಖಾಂತರ ಶೆಲ್ ಪ್ರೋಸೆಸ್ ಪ್ರಾರಂಭವಾಗುತ್ತದೆ. |
1:36 | ಈ ದೃಷ್ಟಿಯಲ್ಲಿ ನಾವು ತಿಳಿಯಬೇಕಾದದ್ದು ಇಷ್ಟೇ: ಲಿನಕ್ಸ್ ಕರ್ನಲ್ ಎಂಬುದು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಗೆ ಬೇಕಾಗಿರುವ ಪ್ರಮುಖವಾದ ಅಂಶವಾಗಿದೆ. |
1:43 | ಇದು ಲಿನಕ್ಸ್ ಕಾರ್ಯವಹಿಸಲು ಬೇಕಾಗಿರುವ ಅತ್ಯಂತ ಅವಶ್ಯಕ ಅಂಶಗಳನ್ನೊಳಗೊಂಡಿದೆ. ಎಲ್ಲ ಯುಸರ್ ಕಮಾಂಡ್ ಪ್ರೋಸೆಸ್ ಗಳು ಶೆಲ್ ನಿಂದ ಸೃಷ್ಟಿಯಾಗುತ್ತವೆ ಅಥವಾ ಹುಟ್ಟಲ್ಪಡುತ್ತವೆ. |
1:53 | ಈಗ ನಾವು ಟರ್ಮಿನಲ್ ಓಪನ್ ಮಾಡೋಣ. |
1:57 | ನಾವು ಟರ್ಮಿನಲ್ ನಲ್ಲಿ ಕಮಾಂಡ್ ಪ್ರಾಂಪ್ಟ್ ನ್ನು ಡಾಲರ್ ಚಿಹ್ನೆಯ ರೂಪದಲ್ಲಿ ನೋಡಬಹುದು. |
2:03 | ಇದು ಶೆಲ್ ಪ್ರೋಸೆಸ್ ನ ಕೆಲಸವಾಗಿದೆ. |
2:07 | ಈಗ ನಾವು ಯಾವುದಾದರೂ ಕಮಾಂಡ್ ಟೈಪ್ ಮಾಡೋಣ, "date" ಎಂದು ಬರೆದು ನಂತರ ಎಂಟರ್ ಒತ್ತಿ. |
2:13 | ನಾವು ಈ ಕಮಾಂಡ್ ನ್ನು ಬರೆದಾಕ್ಷಣ ಶೆಲ್ ಪ್ರೋಸೆಸ್, ಡೇಟ್ ಎಂಬ ಒಂದು ಪ್ರೋಸೆಸ್ ನ್ನು ಸೃಷ್ಟಿಸುತ್ತದೆ. |
2:18 | ಈಗ, ಶೆಲ್ ಪ್ರೋಸೆಸ್, ಡೇಟ್ ಪ್ರೋಸೆಸ್ ನ್ನು ಸೃಷ್ಟಿ ಮಾಡಿರುವುದರಿಂದ, ಶೆಲ್ ಪ್ರೋಸೆಸ್ ನ್ನು ಡೇಟ್ ಪ್ರೋಸೆಸ್ ನ ತಾಯಿ ಎಂದು ಕರೆಯಬಹುದು ಹಾಗೂ ಡೇಟ್ ಪ್ರೋಸೆಸ್ ನ್ನು ಶೆಲ್ ಪ್ರೋಸೆಸ್ ನ ಮಗು ಎಂದು ಕರೆಯಬಹುದು. |
2:30 | ಒಮ್ಮೆ ಡೇಟ್ ಪ್ರೋಸೆಸ್ ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ತೋರಿಸಿದ ನಂತರ ಆ ಪ್ರೋಸೆಸ್ ಕೊನೆಗೊಳ್ಳುತ್ತದೆ. |
2:40 | ಒಂದು ಶೆಲ್ ಇನ್ನೊಂದು ಶೆಲ್ ನ್ನು ಕೂಡ ಸೃಷ್ಟಿಸುತ್ತದೆ. ಹೀಗೆ ಪ್ರೋಸೆಸ್ ನ್ನು ಸೃಷ್ಟಿ ಮಾಡುವುದಕ್ಕೆ ಅಥವಾ ಹುಟ್ಟಿಸುವುದಕ್ಕೆ, ಪ್ರೋಸೆಸ್ ನ್ನು ಸ್ಪಾನ್ ಮಾಡುವುದು ಎನ್ನುತಾರೆ. |
2:50 | ಇನ್ನೊಂದು ಪ್ರೋಸೆಸ್ ನ್ನು ಸ್ಪಾನ್ ಮಾಡಬೇಕಾದರೆ, ಟರ್ಮಿನಲ್ ಗೆ ಹೋಗಿ, “sh” ಎಂದು ಟೈಪ್ ಮಾಡಿ, ಎಂಟರ್ ಒತ್ತಿ. |
3:00 | ನಾವು ಈಗ ಟರ್ಮಿನಲ್ ನಲ್ಲಿ ಒಂದು ಹೊಸ ಪ್ರಾಂಪ್ಟ್ ಕಾಣಿಸುವುದನ್ನು ನೋಡಬಹುದು. ಈಗ ನಮ್ಮ ಮೂಲ ಶೆಲ್ ನ್ನು shell 1 ಎಂದು ಕರೆಯೋಣ. ಅದು ಒಂದು ಮಗು ಶೆಲ್ ಅಥವಾ ಉಪ ಶೆಲ್ ಗೆ ಜನ್ಮ ನೀಡಿರುತ್ತದೆ, ಅದನ್ನು shell 2 ಎಂದು ಕರೆಯೋಣ. |
3:13 | ಅಂದ ಹಾಗೆ, ನಿಮಗೆ ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ ಒಂದು ಕಮಾಂಡ್ ನ್ನು ಚಲಾಯಿಸಬಹುದು.ಈಗ ನಾವು ಈ ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ ls ಕಮಾಂಡ್ ನ್ನು ಚಲಾಯಿಸೋಣ. |
3:20 | ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ “ls” ಎಂದು ಟೈಪ್ ಮಾಡಿ ನಂತರ ಎಂಟರ್ ಒತ್ತಿ. ಈಗ ನಾವು ಫೈಲ್ ಗಳ ಮತ್ತು ಡೈರೆಕ್ಟರಿಗಳ ಒಂದು ಲಿಸ್ಟ್ ನ್ನು ನೋಡಬಹುದು. |
3:32 | ಈಗ ls ಎಂಬ ಒಂದು ಹೊಸ ಪ್ರೋಸೆಸ್ ಹುಟ್ಟಿಕೊಂಡಿದೆ. |
3:35 | ಇಲ್ಲಿ shell 2, IS ನ ತಾಯಿ ಆಗಿದೆ, shell 1, IS ನ ತಾತಾ ಆಗಿದೆ, ಮತ್ತು shell 2 ನ ಮಗು ಆಗಿದೆ ಹಾಗೆಯೇ, shell 2 ಕೂಡಾ shell 1 ನ ಮಗು ಆಗಿದೆ. |
3:56 | shell 2 ನ್ನು ನಾಶ ಮಾಡಲು ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ “exit” ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ. |
4:04 | ಇದು shell 2 ನ್ನು ನಾಶ ಮಾಡುತ್ತದೆ ಮತ್ತು ನಮ್ಮ ಮೂಲ ಕಮಾಂಡ್ ಪ್ರಾಂಪ್ಟನ್ನು ಮರಳಿ ದೊರಕಿಸುತ್ತದೆ. |
4:12 | ಪ್ರೋಸೆಸ್ ಮತ್ತು ನಮ್ಮ ನಡುವಿನ ಹೋಲಿಕೆಯನ್ನು ಮುಂದುವರಿಸಿದಂತೆ, ನಮಗೆ ತಿಳಿಯಬರುವುದೇನೆಂದರೆ, ನಮಗೆ ಪ್ರತಿಯೊಬ್ಬರಿಗೂ ನಮ್ಮನ್ನು ಗುರುತಿಸುವಂತಹ ವೈಶಿಷ್ಟ್ಯಗಳಿವೆ. ಆ ವೈಶಿಷ್ಟ್ಯಗಳು, ನಮ್ಮ ಹೆಸರು ಆಗಬಹುದು, ನಮ್ಮ ತಂದೆ/ತಾಯಿಯ ಹೆಸರು ಆಗಬಹುದು, ಹುಟ್ಟಿದ ದಿನಾಂಕ ಆಗಬಹುದು, ಅಥವಾ PAN ಕಾರ್ಡ್ ನಂಬರ್, ಇತ್ಯಾದಿಗಳು ಆಗಬಹುದು. |
4:26 | ಅದೇ ರೀತಿ ಪ್ರೋಸೆಸ್ ಗಳೂ ಕೂಡಾ ಕೆಲವು ಲಕ್ಷಣಗಳನ್ನು ಹೊಂದಿವೆ: PID(Process ID), PPID(Parent Process ID), Start time, ಇತ್ಯಾದಿ. |
4:38 | ಇವುಗಳಲ್ಲಿ ಹೆಚ್ಚಿನ ಲಕ್ಷಣಗಳನ್ನು ಕರ್ನಲ್, ಒಂದು ಟೇಬಲ್ ನಲ್ಲಿ ನಿರ್ವಹಿಸುತ್ತದೆ. |
4:43 | ಪ್ರತಿಯೊಂದು ಪ್ರೋಸೆಸ್, PID ಎಂಬ ಒಂದು ವಿಶಿಷ್ಟವಾದ ಇಂಟಿಜರ್ ನಿಂದ ವಿಶೇಷವಾಗಿ ಗುರುತಿಸಲ್ಪಡುತ್ತದೆ. PID ಯು ಪ್ರೋಸೆಸ್ ಹುಟ್ಟಿಕೊಂಡಾಗಲೇ ಕರ್ನಲ್ ನಿಂದ ಗುರುತಿಸಲ್ಪಟ್ಟಿದೆ. |
4:51 | ತಾಯಿ ಪ್ರೋಸೆಸ್ ನ PID ಯು P1 ಎಂಬ ಇನ್ನೊಂದು ಪ್ರೋಸೆಸ್ ನ್ನು ಪ್ರೋಸೆಸ್ ನ್ನು ಹುಟ್ಟಿಸಿದರೆ, ಅದರ PID ಯನ್ನು P1 ನ PPID ಎನ್ನುತ್ತಾರೆ. |
5:00 | ಪ್ರಸ್ತುತ shell ನ PID ನೋಡಲು ಪ್ರಾಂಪ್ಟಿನಲ್ಲಿ ಟೈಪ್ ಮಾಡಿ “echo space dollar dollar” ಮತ್ತು ಎಂಟರ್ ಕೀಅನ್ನು ಒತ್ತಿ. |
5:11 | ಒಂದು ಸಂಖ್ಯೆಯನ್ನು ತೋರಿಸಲಾಗುತ್ತದೆ.ಇದು PID ಯ ಪ್ರಸಕ್ತ ಶೆಲ್ ಆಗಿದೆ. |
5:23 | ನಾವು ಹೆಚ್ಚಾಗಿ ಬಳಸುತ್ತಿರುವ ಒಂದು ಕಮಾಂಡ್ ಯಾವುದೆಂದರೆ, ps ಕಮಾಂಡ್. |
5:29 | PS ಅಥವಾ ಪ್ರೋಸೆಸ್ ಸ್ಥಿತಿ ಒಂದು ಕಮಾಂಡ್ ಆಗಿದ್ದು, ಅದು ಸಿಸ್ಟಂ ನಲ್ಲಿ ಚಲಾಯಿಸುವ ಪ್ರೋಸೆಸ್ ನ್ನು ತೋರಿಸುತ್ತದೆ. |
5:34 | ನಾವು ಯಾವುದೇ ಆಯ್ಕೆ ಇಲ್ಲದೇ ಈ ಕಮಾಂಡ್ ನ್ನು ಚಲಾಯಿಸಿದರೆ ಏನಾಗುತ್ತದೆ ಎಂದು ನೋಡೋಣ. |
5:40 | ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ “ps”ಎಂದು ಟೈಪ್ ಮಾಡಿ ಎಂಟರ್ ಒತ್ತಿ . |
5:47 | ಈ ರೀತಿಯಾಗಿ ನಾವು ಸಾಮಾನ್ಯವಾಗಿ ನೋಡಬಹುದೇನೆಂದರೆ, ಬಳಕೆದಾರನ ಸ್ವಂತದ್ದಾಗಿರುವ ಎಲ್ಲಾ ಪ್ರೋಸೆಸ್ ಗಳ ಲಿಸ್ಟ್ ಪ್ರೊಗ್ರಾಮ್ ನ್ನು ನಡೆಸುತ್ತದೆ. |
5:54 | ನೀವು CMD ಹೆಡಿಂಗ್ ನ ಕೆಳಗೆ ಪ್ರೋಸೆಸ್ ನ ಹೆಸರನ್ನು ನೋಡಬಹುದು. |
5:58 | ಇದಲ್ಲದೆ ನೀವು PID, TTY ಅಥವಾ ಕನ್ಸೋಲ್,TIME ಪ್ರೋಸೆಸ್ ಚಾಲನೆಯಲ್ಲಿರುವುದು ನೋಡಬಹುದು. |
6:06 | ಇದು ಪ್ರೋಸೆಸ್ ಆರಂಭವಾಗುವಾಗಲೇ ಬಳಸಿರುವ ಒಟ್ಟು ಸಮಯವಾಗಿದೆ. |
6:12 | ನನ್ನ ಸಿಸ್ಟಂ ನಲ್ಲಿ ಎರಡು ಪ್ರಕ್ರಿಯೆಗಳನ್ನು ತೋರಿಸುತ್ತದೆ. |
6:16 | ಒಂದು ಬ್ಯಾಷ್, ನಾವು ಬಳಸುವ ಶೆಲ್ ಪ್ರೋಸೆಸ್. ಇನ್ನೊಂದು ಸ್ವತಃ. PS ಪ್ರೋಸೆಸ್.. |
6:25 | ಇನ್ನೊಂದು ಮುಖ್ಯವಾದ ವಿಷಯ ಇಲ್ಲಿ ನಾವು ನೋಡಬೇಕಾದ್ದು ಏನೆಂದರೆ, ಶೆಲ್ ಪ್ರೋಸೆಸ್ ನ PID echo space dollar dollar ಕಮಾಂಡ್ ಗೆ ಸಮನಾಗಿದೆ. |
6:35 | ನಾವು ಒಂದು ವೇಳೆ ಉಪ ಶೆಲ್ ನ್ನು ಸ್ಪಾನ್ ಮಾಡಿದರೆ ಏನಾಗುತ್ತದೆ ಎಂದು ನೋಡೋಣ. ಈಗ ಟರ್ಮಿನಲ್ ನಲ್ಲಿ “sh” ಟೈಪ್ ಮಾಡಿ ಎಂಟರ್ ಒತ್ತಿ. |
6:42 | ಈಗ ಹೊಸ ಪ್ರಾಂಪ್ಟ್ ನಲ್ಲಿ ಕಾಣಿಸಿಕೊಳ್ಳುವುದು ಹೊಸ ಸಾಲು .ಇಲ್ಲಿ “ps” ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ. |
6:51 | ಈಗ ನಾವು ಪಟ್ಟಿಯಲ್ಲಿ 3 ಪ್ರೋಸೆಸ್ ಗಳನ್ನು ನೋಡಬಹುದು. sh ಪ್ರೋಸೆಸ್ ನ್ನು ಸೇರಿಸಲಾಗಿದೆ. |
6:57 | ಇಲ್ಲಿ ಮತ್ತೆ ಗಮನಿಸಿ PID ಯಾ ಬ್ಯಾಷ್ ಪ್ರೋಸೆಸ್ ಮುಂಚಿನಂತೆ ಸಮನಾಗಿರುತ್ತದೆ. |
7:05 | ps ಹಲವು ಆಯ್ಕೆಗಳನ್ನು ಹೊಂದಿರುವುದನ್ನು ಮುಂದೆ ನೋಡಬಹುದು.ಮೊದಲ ಆಯ್ಕೆ ನಾವು ನೋಡುವಂತದು ಹೆಚ್ಚು ವೈಶಿಷ್ಟ್ಯಗಳ ಪ್ರೋಸೆಸ್ ಗಳನ್ನು ತೋರಿಸುತ್ತದೆ.
|
7:13 | ಈಗ ಪ್ರಾಂಪ್ಟ್ ನಲ್ಲಿ ಟೈಪ್ ಮಾಡಿ “ps space minus f” ಮತ್ತು ಎಂಟರ್ ಪ್ರೆಸ್ ಮಾಡಿ.ಇದು ಮತ್ತೆ ಮೂರು ಪ್ರೋಸೆಸ್ ಗಳನ್ನು ಹಿಂದಿನ ಸಂದರ್ಭದಂತೆ ಪಟ್ಟಿ ಮಾಡುತ್ತದೆ. |
7:28 | Bash, sh and ps -f. |
7:31 | ಒಂದೇ ವ್ಯತ್ಯಾಸವೆಂದರೆ ಈಗ ಹೆಚ್ಚು ವೈಶಿಷ್ಟ್ಯಗಳ ಪಟ್ಟಿ ಇವೆ. |
7:36 | UID ಪ್ರೋಸೆಸ್ ನ್ನು ಮೊದಲು ಶುರು ಮಾಡಿದ ಯುಸರ್ ನ ಯುಸರ್ id ಯನ್ನು ನೀಡುತ್ತದೆ. ಅದು, ಪ್ರೋಸೆಸ್ ನ್ನು ತಯಾರಿಸಿದ ತಾಯಿ ಪ್ರೋಸೆಸ್ ನ PID, ಅಂದರೆ, PPID ನ್ನೂ ಕೂಡಾ ತೋರಿಸುತ್ತದೆ. |
7:47 | ಉದಾಹರಣೆಗಾಗಿ ನೋಡಿ sh ಪ್ರೋಸೆಸ್ ಮೂಲ ಬ್ಯಾಷ್ ಪ್ರಕ್ರಿಯೆ,ಆದ್ದರಿಂದ ಬ್ಯಾಷ್ ಆಫ್ PID sh ಪ್ರೋಸೆಸ್ PPID ಒಂದೇ ಆಗಿದೆ. |
8:00 | ಇದೇ ರೀತಿ ps ಪ್ರೋಸೆಸ್ ಮೂಲ sh ಪ್ರೋಸೆಸ್,sh ಪ್ರೋಸೆಸ್ PID ps-f ಪ್ರೋಸೆಸ್ PPID ಒಂದೇ ಆಗಿದೆ. |
8:17 | ಪ್ರೊಸೆಸರ್ ಬಳಕೆ C ಹೊಂದಲಾಗಿದೆ.ಈ ಪ್ರೋಸೆಸ್ ಜೀವಿತಾವಧಿಯಲ್ಲಿ ಪ್ರೊಸೆಸರ್ ಶೇಕಡ ಬಳಕೆಯಿಂದಾಗಿ ಪೂರ್ಣಸಂಖ್ಯೆ ಮೌಲ್ಯವಾಗಿದೆ. |
8:26 | ಈ ಸಂದರ್ಭದಲ್ಲಿ ಬಳಕೆ ತೀರಾ ಕಡಿಮೆ ಇರುವುದರಿಂದ 0 ತೋರಿಸಲ್ಪಡುತ್ತದೆ. |
8:32 | STIME ಕ್ಷೇತ್ರವು ಯಾವ ಸಮಯದಲ್ಲಿ ಪ್ರೋಸೆಸ್ ಶುರುವಾಗುತ್ತದೆ ಎಂಬ ಸೂಚನೆ ನೀಡುತ್ತದೆ, ನಾವು ಉಳಿದದನ್ನು ಈಗಾಗಲೇ ps ಚಲಾಯಿಸುವಾಗ ನೋಡಿದ್ದೇವೆ.
|
8:42 | ಪ್ರೋಸೆಸ್ ಗಳು ಎರಡು ರೀತಿಯದು: ಮೊದಲನೆಯದ್ದು ಬಳಕೆದಾರ ಪ್ರೋಸೆಸ್ ಗಳು. ಆ ಬಳಕೆದಾರರು ಇದನ್ನು ಆರಂಭಿಸಿದರು. |
8:49 | ಉದಾಹರಣೆಗೆ 'ps' ಅಥವಾ ನಾವು ಆ ಕಾರಣಕ್ಕಾಗಿ ಹೆಚ್ಚಿನ ಕಮಾಂಡ್ ನ್ನು ಚಲಾಯಿಸುತ್ತೇವೆ. |
8:54 | ಎರಡನೆಯದು, ಸಿಸ್ಟಂ ಪ್ರೋಸೆಸ್. ಆ ಪ್ರೋಸ್ಸೇಸ್ ಗಳು ಆಗಾಗ ಸಿಸ್ಟಂ ಆರಂಭವಾಗುವ ಸಮಯದಲ್ಲಿ ಅಥವಾ ಯುಸರ್ ಲಾಗಿನ್ ಸಮಯದಲ್ಲಿ ಶುರುವಾಗುತ್ತದೆ. |
9:05 | ಉದಾಹರಣೆಗೆ ಸಿಸ್ಟಂ ಪ್ರೋಸೆಸ್ ನ್ನು ಬಾಶ್ ಎನ್ನಬಹುದು. |
9:09 | ಕೆಲವೊಮ್ಮೆ ನಾವು ಎಲ್ಲಾ ಪ್ರೋಸೆಸ್ ಗಳಲ್ಲಿ ನೋಡಲು ಬಯಸುವೆವು- ಎರಡೂ ಸಿಸ್ಟಂ ಪ್ರೋಸೆಸ್ ಗಳು ಮತ್ತು ಬಳಕೆದಾರ ಪ್ರೋಸೆಸ್ ಗಳು. |
9:17 | ನಂತರ ನಾವು minus e ಅಥವಾ minus capital A ಆಯ್ಕೆಯನ್ನು ಉಪಯೋಗಿಸೋಣ. |
9:23 | ಟರ್ಮಿನಲ್ ಗೇ ಹೋಗಿ ಪ್ರಾಂಪ್ಟ್ನಲ್ಲಿ “ps space minus e” ಟೈಪ್ ಮಾಡಿ ಮತ್ತು ಎಂಟರ್ ಪ್ರೆಸ್ ಮಾಡಿ. |
9:32 | ನಾವು ಪ್ರೋಸೆಸ್ ಗಳ ಒಂದು ದೊಡ್ಡ ಪಟ್ಟಿಯನ್ನೇ ನೋಡಬಹುದು. |
9:35 | ಒಂದು multipage ಪ್ರದರ್ಶನ ಪಡೆಯಲು ಕೇವಲ ಪ್ರಾಂಪ್ಟಿನಲ್ಲಿ ಟೈಪ್ ಮಾಡಿ. |
9:40 | “ps space minus e space vertical bar space more” ಮತ್ತು ಎಂಟರ್ ಪ್ರೆಸ್ ಮಾಡಿ. |
9:52 | ನಾವು ಮೊದಲು ನೋಡಿದ ಹಾಗೆ ಹೆಚ್ಚು ಮಾಡಿದ ಅನೇಕ ಪ್ರೋಸೆಸ್ ಗಳು ಕೇವಲ ಪಟ್ಟಿ ಮಾಡಿ ಒಂದೇ ವಿಂಡೋದಲ್ಲಿ ಹೊಂದುತ್ತದೆ. |
9:58 | ನಾವು ಎಂಟರ್ ಒತ್ತಿ ನಾವು ಪ್ರೋಸೆಸ್ ಗಳ ಪಟ್ಟಿಯನ್ನು ನೋಡಬಹುದು. |
10:03 | ಈ ಪಟ್ಟಿಯಲ್ಲಿ ಮೊದಲ ಪ್ರೋಸೆಸ್ ಕುತೂಹಲಕಾರಿಯಾಗಿದೆ.ಇದನ್ನು init ಪ್ರೋಸೆಸ್ 'ಎಂದು ಕರೆಯಲಾಗುತ್ತದೆ. |
10:09 | ಈ ಪ್ರೋಸೆಸ್ ಇತರ ಎಲ್ಲಾ ಪ್ರೋಸೆಸ್ ಗಳ ದಾರಿಗೆ ಕಾರಣವಾಗುತ್ತದೆ . |
10:12 | ಇದು PID ಯ 1 ಹೊಂದಿದೆ. |
10:16 | ಮತ್ತೆ ಪ್ರಾಂಪ್ಟ್ ಗೆ ಹಿಂತಿರುಗಲು q ಒತ್ತಿ. |
10:24 | ಆದ್ದರಿಂದ, ಈ ಟ್ಯುಟೋರಿಯಲ್ ನಲ್ಲಿ , ಶೆಲ್ ಪ್ರೋಸೆಸ್, ಪ್ರೋಸೆಸ್ ನ್ನು ಸ್ಪಾನ್ ಮಾಡುವುದು,ಪ್ರೋಸೆಸ್ ಲಕ್ಷಣಗಳು ಮತ್ತು ವಿವಿಧ ಪ್ರೋಸೆಸ್ ಗಳ ಬಗ್ಗೆ ಕಲಿತೆವು. |
10:37 | ನಾವು ps ಕಮಾಂಡ್ ಬಳಕೆಯ ಬಗ್ಗೆ ಕಲಿತೆವು.ಈ ಟ್ಯುಟೋರಿಯಲ್ ನ್ನು ಕೊನೆಗೊಳಿಸೋಣ. |
10:45 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಎ ಟೀಚರ್ ನ ಒಂದು ವಿಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ ಯಿಂದ ಸ್ಪೂರ್ತಿಗೊಂಡಿದೆ.MHRD, Government of India. |
10:55 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು http://spoken-tutorial.org/NMEICT-Intro ಈ ಸೈಟ್ ನಲ್ಲಿ ಲಭ್ಯವಿದೆ. |
11:07 | ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದೆ.
ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು. |