Linux/C2/Working-with-Linux-Process/Kannada

From Script | Spoken-Tutorial
Jump to: navigation, search
Time Narration
00:00 ಲಿನಕ್ಸ್ ಪ್ರೋಸೆಸ್ ಜೊತೆಗೆ ಕೆಲಸ ಮಾಡುವ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:05 ನಾನು ಉಬಂಟು 10.04 ನ್ನು ಬಳಸುತ್ತಿದ್ದೇನೆ.
00:09 ನೀವು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಆರಂಭಿಸುವುದನ್ನು ತಿಳಿದಿರುವಿರಿ ಹಾಗೂ ಕಮಾಂಡ್ ಗಳ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದೀರಿ ಎಂದು ನಾನು ಊಹಿಸುತ್ತೇನೆ.
00:16 ನಿಮಗೆ ಆಸಕ್ತಿ ಇದ್ದಲ್ಲಿ, ಈ ಕೆಳಗಿನ ವೆಬ್ ಸೈಟ್ ನಲ್ಲಿ ಸಿಗುವ ಇನ್ನೊಂದು ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಅದು ಲಭ್ಯವಿದೆ.

http://spoken-tutorial.org

00:28 ಇದನ್ನು ಗಮನಿಸಿ: ಲಿನಕ್ಸ್ ಒಂದು ಕೇಸ್ ಸೆನ್ಸಿಟಿವ್ ಆಗಿದ್ದು, ಈ ಟ್ಯುಟೋರಿಯಲ್ ನಲ್ಲಿರುವ ಎಲ್ಲಾ ಕಮಾಂಡ್ ಗಳೂ ಲೋವರ್ ಕೇಸ್ ನಲ್ಲಿಯೇ ಇದೆ, ಇಲ್ಲವಾದಲ್ಲಿ ಅದನ್ನು ತಿಳಿಸಲಾಗಿದೆ.
00:38 ಒಂದು ಪ್ರೋಸೆಸ್ ಎಂದರೆ ಏನು ಎಂದು ತಿಳಿಯಲು ನಾನು ನಿಮಗೆ ಒಂದು ಸಂಕ್ಷಿಪ್ತ ವಿವರಣೆ ನೀಡುತ್ತೇನೆ.
00:42 ಲಿನಕ್ಸ್ ನಲ್ಲಿ ಏನಾದರೂ ಒಂದು ಕೆಲಸ ನಡೆಯುತ್ತಿದೆ ಎಂದರೆ, ಅದನ್ನು ಒಂದು ಪ್ರೋಸೆಸ್ ಎನ್ನುತ್ತಾರೆ.
00:46 ಕಾರ್ಯನಿರ್ವಹಿಸುವ ಮತ್ತು ನಮ್ಮ ಕಮಾಂಡ್ ಗಳನ್ನು ಸ್ವೀಕರಿಸುವ ಶೆಲ್ ನ್ನು ಪ್ರೋಸೆಸ್ ಎನ್ನುತ್ತಾರೆ.
00:51 ನಾವು ಟರ್ಮಿನಲ್ ನಲ್ಲಿ ಕಮಾಂಡ್ ಗಳನ್ನು ಟೈಪ್ ಮಾಡಿದರೆ, ಅವುಗಳು ಕಾರ್ಯನಿರತವಾಗಿರುವಾಗ ಅವನ್ನು ಪ್ರೋಸೆಸ್ ಗಳು ಎನ್ನುತ್ತೇವೆ.
00:56 ನೀವು ಈಗ ಯಾವ ವಿಡಿಯೋದಲ್ಲಿ ಈ ಟ್ಯುಟೋರಿಯಲ್ ನ್ನು ವೀಕ್ಷಿಸುತ್ತಿರುವಿರೋ ಆ ವಿಡಿಯೋವನ್ನು ಒಂದು ಪ್ರೋಸೆಸ್ ಎನ್ನುತ್ತಾರೆ.
01:00 ನೀವು ಯಾವ ಬ್ರೌಸರ್ ನಲ್ಲಿ ಈ ಸ್ಪೋಕನ್ ಟ್ಯುಟೋರಿಯಲ್ ನ ವೆಬ್ ಸೈಟ್ ಓಪನ್ ಮಾಡಿರುವಿರೋ, ಆ ಬ್ರೌಸರ್ ಅನ್ನು ಒಂದು ಪ್ರೋಸೆಸ್ ಎನ್ನುತ್ತಾರೆ.
01:05 ಕಾರ್ಯನಿರತವಾಗಿರುವ ಶೆಲ್ ಸ್ಕ್ರಿಪ್ಟ್ ಗಳು ಕೂಡಾ ಪ್ರೋಸೆಸ್ ಗಳೇ. ಹೀಗೆಯೇ ಎಲ್ಲವೂ.
01:11 ಪ್ರೋಸೆಸ್ ನ್ನು ಹೀಗೆ ನಿರೂಪಿಸಬಹುದು: ಯಾವುದೇ ಒಂದು ಪ್ರೊಗ್ರಾಮ್, ಚಲಾವಣೆಯಾಗುತ್ತಿದ್ದರೆ, ಅಂದರೆ ಕಾರ್ಯವಹಿಸುತ್ತಿದ್ದರೆ, ಅದನ್ನು ಒಂದು ಪ್ರೋಸೆಸ್ ಎಂದು ಕರೆಯುತ್ತಾರೆ.
01:17 ಪ್ರೋಸೆಸ್ ಗಳು ನಮ್ಮ ಹಾಗೆಯೇ. ಅವುಗಳು ಹುಟ್ಟುತ್ತವೆ, ಸಾಯುತ್ತವೆ ಹಾಗೂ ಅವುಗಳಿಗೆ ಪಾಲಕರು ಹಾಗೂ ಮಕ್ಕಳೂ ಇರುತ್ತವೆ.
01:28 ಈಗ ನಾವು ಮೊದಲ ಶೆಲ್ ಪ್ರೋಸೆಸ್ ಬಗ್ಗೆ ಕಲಿಯೋಣ.
01:31 ನಾವು ಸಿಸ್ಟಂ ಗೆ ಲಾಗ್ ಇನ್ ಆಗುತ್ತಿದ್ದಂತೆ, ಲಿನಕ್ಸ್ ಕರ್ನಲ್ ಮುಖಾಂತರ ಶೆಲ್ ಪ್ರೋಸೆಸ್ ಪ್ರಾರಂಭವಾಗುತ್ತದೆ.
01:36 ಈ ದೃಷ್ಟಿಯಲ್ಲಿ ನಾವು ತಿಳಿಯಬೇಕಾದದ್ದು ಇಷ್ಟೇ: ಲಿನಕ್ಸ್ ಕರ್ನಲ್ ಎಂಬುದು ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಗೆ ಬೇಕಾಗಿರುವ ಪ್ರಮುಖವಾದ ಅಂಶವಾಗಿದೆ.
01:43 ಇದು ಲಿನಕ್ಸ್ ಕಾರ್ಯವಹಿಸಲು ಬೇಕಾಗಿರುವ ಅತ್ಯಂತ ಆವಶ್ಯಕ ಅಂಶಗಳನ್ನೊಳಗೊಂಡಿದೆ. ಎಲ್ಲ ಯೂಸರ್ ಕಮಾಂಡ್ ಪ್ರೋಸೆಸ್ ಗಳು ಶೆಲ್ ನಿಂದ ರಚಿಸಲ್ಪಡುತ್ತವೆ ಅಥವಾ ಸೃಷ್ಟಿಯಾಗುತ್ತವೆ.
01:53 ಈಗ ನಾವು ಟರ್ಮಿನಲ್ ಓಪನ್ ಮಾಡೋಣ.
01:57 ನಾವು ಟರ್ಮಿನಲ್ ನಲ್ಲಿ ಕಮಾಂಡ್ ಪ್ರಾಂಪ್ಟ್ ನ್ನು ಡಾಲರ್ ಚಿಹ್ನೆಯ ರೂಪದಲ್ಲಿ ನೋಡಬಹುದು.
02:03 ಇದು ಶೆಲ್ ಪ್ರೋಸೆಸ್ ನ ಕೆಲಸವಾಗಿದೆ.
02:07 ಈಗ ನಾವು ಯಾವುದಾದರೂ ಕಮಾಂಡ್ ಟೈಪ್ ಮಾಡೋಣ, "date" ಎಂದು ಬರೆದು ನಂತರ ಎಂಟರ್ ಒತ್ತಿ.
02:13 ನಾವು ಈ ಕಮಾಂಡ್ ನ್ನು ಬರೆದಾಕ್ಷಣ ಶೆಲ್ ಪ್ರೋಸೆಸ್, date ಎಂಬ ಒಂದು ಪ್ರೋಸೆಸ್ ನ್ನು ರಚಿಸುತ್ತದೆ.
02:18 ಈಗ, ಶೆಲ್ ಪ್ರೋಸೆಸ್, ಡೇಟ್ ಪ್ರೋಸೆಸ್ ನ್ನು ರಚಿಸಿರುವುದರಿಂದ, ಶೆಲ್ ಪ್ರೋಸೆಸ್ ನ್ನು ಡೇಟ್ ಪ್ರೋಸೆಸ್ ನ ತಾಯಿ ಎಂದು ಕರೆಯಬಹುದು ಹಾಗೂ ಡೇಟ್ ಪ್ರೋಸೆಸ್ ನ್ನು ಶೆಲ್ ಪ್ರೋಸೆಸ್ ನ ಮಗು ಎಂದು ಕರೆಯಬಹುದು.
02:30 ಒಮ್ಮೆ ಡೇಟ್ ಪ್ರೋಸೆಸ್ ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ತೋರಿಸಿದ ನಂತರ ಆ ಪ್ರೋಸೆಸ್ ಕೊನೆಗೊಳ್ಳುತ್ತದೆ.
02:40 ಒಂದು ಶೆಲ್ ಇನ್ನೊಂದು ಶೆಲ್ ನ್ನು ಕೂಡ ರಚಿಸುತ್ತದೆ. ಹೀಗೆ ಪ್ರೋಸೆಸ್ ನ್ನು ರಚಿಸುವುದಕ್ಕೆ ಅಥವಾ ಸೃಷ್ಟಿಸುವುದಕ್ಕೆ, ಪ್ರೋಸೆಸ್ ನ್ನು ಸ್ಪಾನ್ ಮಾಡುವುದು ಎನ್ನುತಾರೆ.
02:50 ಇನ್ನೊಂದು ಪ್ರೋಸೆಸ್ ನ್ನು ಸ್ಪಾನ್ ಮಾಡಬೇಕಾದರೆ, ಟರ್ಮಿನಲ್ ಗೆ ಹೋಗಿ, “sh” ಎಂದು ಟೈಪ್ ಮಾಡಿ, ಎಂಟರ್ ಒತ್ತಿ.
03:00 ನಾವು ಈಗ ಟರ್ಮಿನಲ್ ನಲ್ಲಿ ಒಂದು ಹೊಸ ಪ್ರಾಂಪ್ಟ್ ಕಾಣಿಸುವುದನ್ನು ನೋಡಬಹುದು. ಈಗ ನಮ್ಮ ಮೂಲ ಶೆಲ್ ನ್ನು shell 1 ಎಂದು ಕರೆಯೋಣ. ಅದು ಒಂದು ಮಗು ಶೆಲ್ ಅಥವಾ ಉಪ ಶೆಲ್ ಗೆ ಜನ್ಮ ನೀಡಿರುತ್ತದೆ, ಅದನ್ನು shell 2 ಎಂದು ಕರೆಯೋಣ.
03:13 ಅಂದ ಹಾಗೆ, ನಿಮಗೆ ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ ಒಂದು ಕಮಾಂಡ್ ನ್ನು ಚಲಾಯಿಸಬಹುದು. ಈಗ ನಾವು ಈ ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ ls ಕಮಾಂಡ್ ನ್ನು ಚಲಾಯಿಸೋಣ.
03:20 ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ “ls” ಎಂದು ಟೈಪ್ ಮಾಡಿ ನಂತರ ಎಂಟರ್ ಒತ್ತಿ. ಈಗ ನಾವು ಫೈಲ್ ಗಳ ಮತ್ತು ಡೈರೆಕ್ಟರಿಗಳ ಒಂದು ಲಿಸ್ಟ್ ನ್ನು ನೋಡಬಹುದು.
03:32 ಈಗ ls ಎಂಬ ಒಂದು ಹೊಸ ಪ್ರೋಸೆಸ್ ರಚಿತವಾಗಿದೆ.
03:35 ಇಲ್ಲಿ shell 2, IS ನ ತಾಯಿ ಆಗಿದೆ, shell 1, IS ನ ಅಜ್ಜಿಯಾಗಿದೆ, ಮತ್ತು LS, shell 2 ನ ಮಗು ಆಗಿದೆ ಹಾಗೆಯೇ, shell 2 ಕೂಡಾ shell 1 ನ ಮಗು ಆಗಿದೆ.
03:56 shell 2 ನ್ನು ನಾಶ ಮಾಡಲು ಹೊಸ ಕಮಾಂಡ್ ಪ್ರಾಂಪ್ಟ್ ನಲ್ಲಿ “exit” ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿ.
04:04 ಇದು shell 2 ನ್ನು ನಾಶ ಮಾಡುತ್ತದೆ ಮತ್ತು ನಮ್ಮ ಮೂಲ ಕಮಾಂಡ್ ಪ್ರಾಂಪ್ಟನ್ನು ಮರಳಿ ದೊರಕಿಸುತ್ತದೆ.
04:12 ಪ್ರೋಸೆಸ್ ಮತ್ತು ನಮ್ಮ ನಡುವಿನ ಹೋಲಿಕೆಯನ್ನು ಮುಂದುವರಿಸಿದಾಗ, ನಮಗೆ ತಿಳಿಯಬರುವುದೇನೆಂದರೆ, ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ನಮ್ಮನ್ನು ಗುರುತಿಸುವಂತಹ ವೈಶಿಷ್ಟ್ಯಗಳಿವೆ. ಆ ವೈಶಿಷ್ಟ್ಯಗಳು, ನಮ್ಮ ಹೆಸರು ಆಗಿರಬಹುದು, ನಮ್ಮ ತಂದೆ/ತಾಯಿಯ ಹೆಸರು ಆಗಿರಬಹುದು, ಹುಟ್ಟಿದ ದಿನಾಂಕ ಆಗಿರಬಹುದು ಅಥವಾ PAN ಕಾರ್ಡ್ ನಂಬರ್ ಆಗಿರಬಹುದು.
04:26 ಅದೇ ರೀತಿ ಪ್ರೋಸೆಸ್ ಗಳೂ ಕೂಡಾ ಕೆಲವು ಲಕ್ಷಣಗಳನ್ನು ಹೊಂದಿವೆ: PID(Process ID), PPID(Parent Process ID), Start time, ಇತ್ಯಾದಿ.
04:38 ಇವುಗಳಲ್ಲಿ ಹೆಚ್ಚಿನ ಲಕ್ಷಣಗಳನ್ನು ಕರ್ನಲ್, ಒಂದು ಟೇಬಲ್ ನಲ್ಲಿ ನಿರ್ವಹಿಸುತ್ತದೆ.
04:43 ಪ್ರತಿಯೊಂದು ಪ್ರೋಸೆಸ್, PID ಎಂಬ ಒಂದು ವಿಶಿಷ್ಟವಾದ ಇಂಟಿಜರ್ ನಿಂದ ವಿಶೇಷವಾಗಿ ಗುರುತಿಸಲ್ಪಡುತ್ತದೆ. PID ಯು ಪ್ರೋಸೆಸ್ ಹುಟ್ಟಿಕೊಂಡಾಗಲೇ ಕರ್ನಲ್ ನಿಂದ ಗುರುತಿಸಲ್ಪಟ್ಟಿರುತ್ತದೆ.
04:51 ತಾಯಿ ಪ್ರೋಸೆಸ್ ನ PID ಯು P1 ಎಂಬ ಇನ್ನೊಂದು ಪ್ರೋಸೆಸ್ ನ್ನು ಹುಟ್ಟಿಸಿದರೆ, ಅದರ PID ಯನ್ನು P1 ನ PPID ಎನ್ನುತ್ತಾರೆ.
05:00 ಪ್ರಸ್ತುತ shell ನ PID ನೋಡಲು ಪ್ರಾಂಪ್ಟಿನಲ್ಲಿ ಟೈಪ್ ಮಾಡಿ “echo space dollar dollar” ಮತ್ತು ಎಂಟರ್ ಕೀಯನ್ನು ಒತ್ತಿ.
05:11 ಒಂದು ಸಂಖ್ಯೆಯನ್ನು ತೋರಿಸಲಾಗುತ್ತದೆ. ಇದು PID ಯ ಪ್ರಸಕ್ತ ಶೆಲ್ ಆಗಿದೆ.
05:23 ನಾವು ಹೆಚ್ಚಾಗಿ ಬಳಸುತ್ತಿರುವ ಒಂದು ಕಮಾಂಡ್ ಯಾವುದೆಂದರೆ, ps ಕಮಾಂಡ್.
05:29 PS ಅಥವಾ process status ಒಂದು ಕಮಾಂಡ್ ಆಗಿದ್ದು, ಅದು ಸಿಸ್ಟಂ ನಲ್ಲಿ ಚಲಾಯಿಸುವ ಪ್ರೋಸೆಸ್ ನ್ನು ತೋರಿಸುತ್ತದೆ.
05:34 ನಾವು ಯಾವುದೇ ಆಯ್ಕೆ ಇಲ್ಲದೇ ಈ ಕಮಾಂಡ್ ನ್ನು ಚಲಾಯಿಸಿದರೆ ಏನಾಗುತ್ತದೆ ಎಂದು ನೋಡೋಣ.
05:40 ಈಗ ಕಮಾಂಡ್ ಪ್ರಾಂಪ್ಟ್ ನಲ್ಲಿ “ps”ಎಂದು ಟೈಪ್ ಮಾಡಿ ಎಂಟರ್ ಒತ್ತಿ.
05:47 ಈ ರೀತಿಯಾಗಿ ನಾವು ಸಾಮಾನ್ಯವಾಗಿ ಪ್ರೊಗ್ರಾಮ್ ನಡೆಸುತ್ತಿರುವ ಬಳಕೆದಾರನ ಕೆಳಗೆ ಬರುವ ಎಲ್ಲಾ ಪ್ರೋಸೆಸ್ ಗಳ ಲಿಸ್ಟ್ ಅನ್ನು ನೋಡಬಹುದಾಗಿದೆ.
05:54 ನೀವು CMD ಹೆಡಿಂಗ್ ನ ಕೆಳಗೆ ಪ್ರೋಸೆಸ್ ನ ಹೆಸರನ್ನು ನೋಡಬಹುದು.
05:58 ಇದಲ್ಲದೆ ನೀವು PID, TTY ಅಥವಾ ಕನ್ಸೋಲ್ ಎಂಬ ಪ್ರೋಸೆಸ್ ಚಾಲನೆಯಲ್ಲಿರುವುದನ್ನು ನೋಡಬಹುದು.
06:06 TIME, ಇದು ಪ್ರೋಸೆಸ್ ಆರಂಭದಿಂದ ಬಳಸಿರುವ ಒಟ್ಟು ಸಮಯವಾಗಿದೆ.
06:12 ನನ್ನ ಸಿಸ್ಟಂ ನಲ್ಲಿ ಎರಡು ಪ್ರೊಸೆಸ್ ಗಳು ತೋರುತ್ತಿವೆ.
06:16 ಒಂದು ಬ್ಯಾಷ್, ನಾವು ಬಳಸುವ ಶೆಲ್ ಪ್ರೋಸೆಸ್. ಇನ್ನೊಂದು ಸ್ವತಃ PS ಪ್ರೋಸೆಸ್.
06:25 ನಾವು ಗಮನಿಸಬೇಕಾದ ಇನ್ನೊಂದು ಮುಖ್ಯವಾದ ವಿಷಯವೇನೆಂದರೆ, ಶೆಲ್ ಪ್ರೋಸೆಸ್ ನ PID ಯು echo space dollar dollar ಎಂಬ ಕಮಾಂಡ್ ಗೆ ಸಮನಾಗಿದೆ.
06:35 ನಾವು ಒಂದು ವೇಳೆ ಉಪ ಶೆಲ್ ನ್ನು ಸ್ಪಾನ್ ಮಾಡಿದರೆ ಏನಾಗುತ್ತದೆ ಎಂದು ನೋಡೋಣ. ಈಗ ಟರ್ಮಿನಲ್ ನಲ್ಲಿ “sh” ಟೈಪ್ ಮಾಡಿ ಎಂಟರ್ ಒತ್ತಿ.
06:42 ಈಗ ಅದು ಹೊಸ ಪ್ರಾಂಪ್ಟ್ ನ ಹೊಸ ಸಾಲಿನಲ್ಲಿ ಕಾಣಿಸಿಕೊಳ್ಳುವುದು. ಇಲ್ಲಿ “ps” ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ.
06:51 ಈಗ ನಾವು ಪಟ್ಟಿಯಲ್ಲಿ 3 ಪ್ರೋಸೆಸ್ ಗಳನ್ನು ನೋಡಬಹುದು. sh ಪ್ರೋಸೆಸ್ ನ್ನು ಸೇರಿಸಲಾಗಿದೆ.
06:57 ಇಲ್ಲಿ ಮತ್ತೆ ಗಮನಿಸಿ ಬ್ಯಾಷ್ ಪ್ರೋಸೆಸ್ ನ PID ಯು ಮುಂಚಿನಂತೆ ಸಮನಾಗಿರುತ್ತದೆ.
07:05 ps ಹಲವು ಆಯ್ಕೆಗಳನ್ನು ಹೊಂದಿರುವುದನ್ನು ನಾವು ಮುಂದೆ ನೋಡಬಹುದು. ನಮಗೆ ಕಾಣುವ ಮೊದಲ ಆಯ್ಕೆಯು ಲಿಸ್ಟ್ ನಲ್ಲಿರುವ ಪ್ರೋಸೆಸ್ ಗಳ ವೈಶಿಷ್ಟ್ಯಗಳ ನ್ನು ತೋರಿಸುತ್ತದೆ.


07:13 ಈಗ ಪ್ರಾಂಪ್ಟ್ ನಲ್ಲಿ “ps space minus f” ಎಂದು ಟೈಪ್ ಮಾಡಿ ಮತ್ತು ಎಂಟರ್ ಪ್ರೆಸ್ ಮಾಡಿ. ಇದು ಪುನಃ ಮೂರು ಪ್ರೋಸೆಸ್ ಗಳನ್ನು ಹಿಂದಿನಂತೆಯೇ ಪಟ್ಟಿ ಮಾಡುತ್ತದೆ.
07:28 Bash, sh ಮತ್ತು ps -f.
07:31 ಒಂದೇ ವ್ಯತ್ಯಾಸವೆಂದರೆ ಈಗ ಹೆಚ್ಚು ವೈಶಿಷ್ಟ್ಯಗಳ ಪಟ್ಟಿ ಇವೆ.
07:36 UID ಯು ಪ್ರೋಸೆಸ್ ನ್ನು ಶುರು ಮಾಡಿದ ಯುಸರ್ ನ ಯುಸರ್ id ಯನ್ನು ನೀಡುತ್ತದೆ. ಹಾಗೆಯೇ ಅದು, ಪ್ರೋಸೆಸ್ ನ ತಾಯಿಯ PID ಆದ PPID ಯನ್ನು ಕೂಡಾ ತೋರಿಸುತ್ತದೆ.
07:47 ಉದಾಹರಣೆಗಾಗಿ, ಬಾಶ್ಃ ಪ್ರೊಸೆಸ್ ಎನ್ನುವುದು sh ಪ್ರೋಸೆಸ್ ನ ತಾಯಿಯಾಗಿದೆ. ಹೀಗಿರುವಾಗ, ಬ್ಯಾಷ್ ನ PID ಯು sh ಪ್ರೋಸೆಸ್ ನ PPID ಗೆ ಸಮನಾಗಿದೆ.
08:00 ಇದೇ ರೀತಿ, ps ಪ್ರೋಸೆಸ್ ನ ಮೂಲ sh ಪ್ರೋಸೆಸ್ ಆಗಿರುವುದರಿಂದ, sh ಪ್ರೋಸೆಸ್ ನ PID ಯು ps-f ಪ್ರೋಸೆಸ್ PPID ಯು ಒಂದೇ ಆಗಿದೆ.
08:17 C ಎಂಬುದು ಪ್ರೊಸೆಸರ್ ನ ಬಳಕೆಯನ್ನು ಸೂಚಿಸುತ್ತದೆ. ಪ್ರಸ್ತುತ ಇದು ಪ್ರೋಸೆಸ್ ನ ಕಾಲಾವಧಿಯಲ್ಲಿ ಉಪಯೋಗಿಸಲಾದ ಪ್ರೊಸೆಸರ್ ನ ಶೇಕಡ ಬಳಕೆಯ ಪೂರ್ಣಮೌಲ್ಯವಾಗಿದೆ.
08:26 ಈ ಸಂದರ್ಭದಲ್ಲಿ ಬಳಕೆ ತೀರಾ ಕಡಿಮೆ ಇರುವುದರಿಂದ 0 ಎಂದು ತೋರಿಸಲ್ಪಡುತ್ತದೆ.
08:32 STIME ಕ್ಷೇತ್ರವು ಯಾವ ಸಮಯದಲ್ಲಿ ಪ್ರೋಸೆಸ್ ಶುರುವಾಗುತ್ತದೆ ಎಂಬ ಸೂಚನೆ ನೀಡುತ್ತದೆ, ನಾವು ಉಳಿದದನ್ನು ಈಗಾಗಲೇ ps ಚಲಾಯಿಸುವಾಗ ನೋಡಿದ್ದೇವೆ.


08:42 ಪ್ರೋಸೆಸ್ ಗಳು ಎರಡು ರೀತಿಯದು: ಮೊದಲನೆಯದ್ದು ಬಳಕೆದಾರ ಪ್ರೋಸೆಸ್ ಗಳು. ಇವುಗಳು ಬಳಕೆದಾರರಿಂದ ಆರಂಭವಾಗುತ್ತವೆ.
08:49 ಉದಾಹರಣೆಗೆ 'ps' ಅಥವಾ ಅದಕ್ಕಾಗಿ ಟರ್ಮಿನಲ್ ನಲ್ಲಿ ಚಲಾಯಿಸುವ ಹೆಚ್ಚಿನ ಕಮಾಂಡ್ ಗಳು.
08:54 ಎರಡನೆಯದು, ಸಿಸ್ಟಂ ಪ್ರೋಸೆಸ್. ಇವುಗಳು ಸಿಸ್ಟಂ ಆರಂಭವಾಗುವ ಸಮಯದಲ್ಲಿ ಅಥವಾ ಯುಸರ್ ಲಾಗಿನ್ ಸಮಯದಲ್ಲಿ ಶುರುವಾಗುತ್ತದೆ.
09:05 ಸಿಸ್ಟಂ ಪ್ರೋಸೆಸ್ ಗೆ ಉದಾಹರಣೆ ಬಾಶ್ ಆಗಿದೆ.
09:09 ಕೆಲವೊಮ್ಮೆ ನಾವು ಸಿಸ್ಟಂ ಪ್ರೋಸೆಸ್ ಗಳು ಮತ್ತು ಬಳಕೆದಾರ ಪ್ರೋಸೆಸ್ ಗಳೆರಡನ್ನೂ ನೋಡಬಯಸಬಹುದು.
09:17 ನಂತರ ನಾವು minus e ಅಥವಾ minus capital A ಆಯ್ಕೆಯನ್ನು ಉಪಯೋಗಿಸೋಣ.
09:23 ಟರ್ಮಿನಲ್ ಗೆ ಹೋಗಿ ಪ್ರಾಂಪ್ಟ್ನಲ್ಲಿ “ps space minus e” ಎಂದು ಟೈಪ್ ಮಾಡಿ ಮತ್ತು ಎಂಟರ್ ಪ್ರೆಸ್ ಮಾಡಿ.
09:32 ನಾವು ಪ್ರೋಸೆಸ್ ಗಳ ಒಂದು ದೊಡ್ಡ ಪಟ್ಟಿಯನ್ನೇ ನೋಡಬಹುದು.
09:35 ಒಂದು multipage display ಪಡೆಯಲು ಪ್ರಾಂಪ್ಟಿನಲ್ಲಿ,
09:40 “ps space minus e space vertical bar space more” ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ ಮಾಡಿ.
09:52 ನಾವು ಮೊದಲು ಕಂಡಂತೆ, "more" ಎಂಬುದು ಪ್ರೊಸೆಸ್ ನ ದೊಡ್ಡ ಲಿಸ್ಟ್ ಅನ್ನು ಒಂದೇ ವಿಂಡೋ ದಲ್ಲಿ ಪ್ರದರ್ಶಿಸಲು ಕಾರಣವಾಗುತ್ತದೆ.
09:58 ನಾವು ಎಂಟರ್ ಒತ್ತಿ ಪ್ರೋಸೆಸ್ ಗಳ ಪಟ್ಟಿಯನ್ನು ನೋಡಬಹುದು.
10:03 ಈ ಪಟ್ಟಿಯಲ್ಲಿ ಮೊದಲ ಪ್ರೋಸೆಸ್ ಕುತೂಹಲಕಾರಿಯಾಗಿದೆ. ಇದನ್ನು init (ಇನಿಟ್) ಪ್ರೋಸೆಸ್ ಎಂದು ಕರೆಯಲಾಗುತ್ತದೆ.
10:09 ಈ ಪ್ರೋಸೆಸ್ ನಿಂದಲೇ ಇತರ ಎಲ್ಲಾ ಪ್ರೋಸೆಸ್ ಗಳೂ ಕೂಡಾ ಹುಟ್ಟುತ್ತವೆ.
10:12 ಇದರ PID ಯು 1 ಆಗಿರುತ್ತದೆ.
10:16 ಮತ್ತೆ ಪ್ರಾಂಪ್ಟ್ ಗೆ ಹಿಂತಿರುಗಲು q ಒತ್ತಿ.
10:24 ಹೀಗೆ, ಈ ಟ್ಯುಟೋರಿಯಲ್ ನಲ್ಲಿ, ಶೆಲ್ ಪ್ರೋಸೆಸ್, ಪ್ರೋಸೆಸ್ ನ್ನು ಸ್ಪಾನ್ ಮಾಡುವುದು, ಪ್ರೋಸೆಸ್ ನ ಲಕ್ಷಣಗಳು ಮತ್ತು ವಿವಿಧ ಪ್ರೋಸೆಸ್ ಗಳ ಬಗ್ಗೆ ಕಲಿತೆವು.
10:37 ನಾವು ps ಕಮಾಂಡ್ ಬಳಕೆಯ ಬಗ್ಗೆ ಕಲಿತೆವು. ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದೆವು.
10:45 ಈ ಟ್ಯುಟೋರಿಯಲ್ ಟಾಕ್ ಟು ಅ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
10:55 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
11:07 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ. ಧನ್ಯವಾದಗಳು.

Contributors and Content Editors

Gaurav, Udaya, Vasudeva ahitanal