Difference between revisions of "FrontAccounting-2.4.7/C2/Taxes-and-Bank-Account-in-FrontAccounting/Kannada"
Sandhya.np14 (Talk | contribs) |
Sandhya.np14 (Talk | contribs) |
||
Line 37: | Line 37: | ||
|- | |- | ||
||00:42 | ||00:42 | ||
− | || ಬುಕ್ ಕೀಪಿಂಗ್ ಗಳ | + | || ಬುಕ್ ಕೀಪಿಂಗ್ ಗಳ ಬಗ್ಗೆ ತಿಳಿದಿರಬೇಕು. |
|- | |- | ||
Line 77: | Line 77: | ||
||01:33 | ||01:33 | ||
|| '''Company Setup''' ಪ್ಯಾನೆಲ್ ನಲ್ಲಿ, '''Taxes''' ಲಿಂಕ್ ಮೇಲೆ ಕ್ಲಿಕ್ ಮಾಡಿ. | || '''Company Setup''' ಪ್ಯಾನೆಲ್ ನಲ್ಲಿ, '''Taxes''' ಲಿಂಕ್ ಮೇಲೆ ಕ್ಲಿಕ್ ಮಾಡಿ. | ||
− | + | ನಮ್ಮ ಡಿಫಾಲ್ಟ್ ನಮೂದು '''Tax''' ಆಗಿದೆ. | |
|- | |- | ||
Line 93: | Line 93: | ||
|- | |- | ||
||02:00 | ||02:00 | ||
− | || ಪ್ರತಿಯೊಂದು ಟ್ಯಾಕ್ಸ್ ಗೆ, ಪ್ರತ್ಯೇಕ | + | || ಪ್ರತಿಯೊಂದು ಟ್ಯಾಕ್ಸ್ ಗೆ, ಪ್ರತ್ಯೇಕ ‘ಸೇಲ್ಸ್ ಅಂಡ್ ಪರ್ಚೇಸ್ GL ಅಕೌಂಟ್’ ಅನ್ನು ಅಸೈನ್ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ. |
|- | |- |
Latest revision as of 11:31, 17 June 2020
Time | Narration |
00:01 | FrontAccounting ನಲ್ಲಿ ಟ್ಯಾಕ್ಸ್ಗಳು ಮತ್ತು ಬ್ಯಾಂಕ್ ಅಕೌಂಟ್ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು
ಹೊಸ ಟ್ಯಾಕ್ಸ್ ಸೇರಿಸಲು, |
00:12 | ಬ್ಯಾಂಕ್ ಅಕೌಂಟ್ ಗಳನ್ನು ರೂಪಿಸಲು,
ಡೆಪೋಸಿಟ್ ಗಳನ್ನು ಸೇರಿಸಲು, |
00:16 | ಬ್ಯಾಂಕ್ ಅಕೌಂಟ್ ಗೆ ಹಣವನ್ನು ವರ್ಗಾಯಿಸಲು ಮತ್ತು
ಬ್ಯಾಂಕ್ ಅಕೌಂಟ್ ನ ರಿಕನ್ಸೈಲ್ ಕಲಿಯಲಿದ್ದೇವೆ. |
00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
00:30 | FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. |
00:35 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು, ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ |
00:42 | ಬುಕ್ ಕೀಪಿಂಗ್ ಗಳ ಬಗ್ಗೆ ತಿಳಿದಿರಬೇಕು. |
00:45 | ಅಲ್ಲದೆ, ನೀವು FrontAccounting ನಲ್ಲಿ ಈಗಾಗಲೇ ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು. |
00:51 | ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. |
00:57 | ನೀವು FrontAccounting ಇಂಟರ್ಫೇಸ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸುವ ಮೊದಲು, XAMPP ಸರ್ವಿಸ್ಗಳನ್ನು ಪ್ರಾರಂಭಿಸಿ. |
01:03 | ನಾವೀಗ FrontAccounting ಇಂಟರ್ಫೇಸ್ ತೆರೆಯೋಣ. |
01:07 | ವೆಬ್ ಬ್ರೌಸರ್ ಒಂದನ್ನು ತೆರೆಯಿರಿ.
localhost/account ಎಂದು ಟೈಪ್ ಮಾಡಿ Enter ಒತ್ತಿ. |
01:16 | ಲಾಗಿನ್ ಪೇಜ್ ತೆರೆದುಕೊಳ್ಳುತ್ತದೆ. |
01:19 | admin ಅನ್ನು ಯೂಸರ್ ನೇಮ್ ಎಂದು ಮತ್ತು ಇದರ ಪಾಸ್ವರ್ಡ್ ಅನ್ನು ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:26 | FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
01:33 | Company Setup ಪ್ಯಾನೆಲ್ ನಲ್ಲಿ, Taxes ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಮ್ಮ ಡಿಫಾಲ್ಟ್ ನಮೂದು Tax ಆಗಿದೆ. |
01:42 | ಇಲ್ಲಿ ತೋರಿಸಿರುವಂತೆ Percentage, Sales GL Account ಮತ್ತು Purchasing GL Account ಅನ್ನು ಸೂಚಿಸಲಾಗಿದೆ. |
01:51 | ನಮ್ಮ ವ್ಯವಹಾರವು ಬಳಸುವ ಪ್ರತಿಯೊಂದು ಟ್ಯಾಕ್ಸ್ ಗೆ GL Account ಗಳನ್ನು ಅಸೈನ್ ಮಾಡಬೇಕು. |
01:57 | ವಿಂಡೋದ ಮೇಲ್ತುದಿಯಲ್ಲಿ ನಾವು ಮೆಸೆಜ್ ಒಂದನ್ನು ನೋಡಬಹುದು. |
02:00 | ಪ್ರತಿಯೊಂದು ಟ್ಯಾಕ್ಸ್ ಗೆ, ಪ್ರತ್ಯೇಕ ‘ಸೇಲ್ಸ್ ಅಂಡ್ ಪರ್ಚೇಸ್ GL ಅಕೌಂಟ್’ ಅನ್ನು ಅಸೈನ್ ಮಾಡಬೇಕೆಂದು ಶಿಫಾರಸು ಮಾಡಲಾಗಿದೆ. |
02:09 | ನಮ್ಮ ಕಂಪನಿಗೆ ಜಿ.ಎಸ್.ಟಿ ಮತ್ತು ಸರ್ವಿಸ್ ಟ್ಯಾಕ್ಸ್ ಅನ್ನು ಹೇಗೆ ಸೇರಿಸಬಹುದೆಂದು ನೋಡೋಣ. |
02:15 | ಡಿಫಾಲ್ಟ್ ಎಂಟ್ರಿ Tax ಸಾಲಿನಲ್ಲಿ, Edit ಐಕಾನ್ ಮೇಲೆ ಕ್ಲಿಕ್ ಮಾಡಿ. |
02:20 | ನಾನು Tax ಅನ್ನು GST ಎಂದು ಎಡಿಟ್ ಮಾಡುತ್ತೇನೆ. ಏಕೆಂದರೆ, ನಮ್ಮ ಕಂಪನಿಯು ಡಿಫಾಲ್ಟ್ ಎಂಟ್ರಿಯಾದ Tax ಅನ್ನು ಬಳಸುವುದಿಲ್ಲ. |
02:28 | ನಾನು Description ಅನ್ನು GST ಎಂದು ಮತ್ತು ಶೇಕಡಾವನ್ನು 12 ಕ್ಕೆ ಬದಲಾಯಿಸುತ್ತೇನೆ. |
02:35 | Sales GL account ಮತ್ತು Purchase GL Account ಗಳನ್ನು Sales tax ಎನ್ನುತ್ತೇನೆ. |
02:42 | ವಿಂಡೋದ ಕೆಳಗಿರುವ Update ಬಟನ್ ಮೇಲೆ ಕ್ಲಿಕ್ ಮಾಡಿ. |
02:46 | ನಾವು ಡಿಫಾಲ್ಟ್ ಎಂಟ್ರಿ Tax ಅನ್ನು GST ಗೆ ಯಶಸ್ವಿಯಾಗಿ ಬದಲಾಯಿಸಿದ್ದೇವೆ. |
02:52 | ನಾವೀಗ ಸರ್ವಿಸ್ ಟ್ಯಾಕ್ಸ್ ಅನ್ನು ಸೇರಿಸೋಣ.
ಇದಕ್ಕೂ ಮೊದಲು, ಸರ್ವಿಸ್ ಟ್ಯಾಕ್ಸ್ಗಾಗಿ ನಾವು ಒಂದು GL Account ತೆರೆಯಬೇಕು. |
03:00 | Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
03:04 | Maintenance ಪ್ಯಾನೆಲ್ ನಲ್ಲಿ, GL Accounts ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:09 | ಇಲ್ಲಿ ತೋರಿಸಿರುವಂತೆ ವ್ಯಾಲ್ಯೂಗಳನ್ನು ಟೈಪ್ ಮಾಡಿ:
ನಂತರ ವಿಂಡೋದ ಕೆಳಗಿರುವ Add Account ಬಟನ್ ಮೇಲೆ ಕ್ಲಿಕ್ ಮಾಡಿ. |
03:17 | ಈಗ Setup ಟ್ಯಾಬ್ ಮೇಲೆ, ನಂತರ Taxes ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:22 | Tax Types ಅಡಿಯಲ್ಲಿ, Service tax ಸೇರಿಸೋಣ. |
03:27 | ಇಲ್ಲಿ ತೋರಿಸಿರುವಂತೆ ವ್ಯಾಲ್ಯೂಗಳನ್ನು ಟೈಪ್ ಮಾಡಿ. |
03:30 | Sales GL Account ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
03:35 | Current Liabilities ಕೆಳಗೆ ಇರುವ Service Tax ಆರಿಸಿಕೊಳ್ಳಿ. |
03:39 | ಇದೇ ರೀತಿ, Purchase GL Account ಗಾಗಿ, Service Tax ಆರಿಸಿಕೊಳ್ಳಿ. |
03:46 | ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ. |
03:50 | ಎರಡು ಟ್ಯಾಕ್ಸ್ ಗಳನ್ನು ಸೇರಿಸಿರುವುದನ್ನು ನಾವೀಗ ನೋಡಬಹುದು. |
03:55 | FrontAccounting ನ ಸೇಲ್ಸ್ ಮಾಡ್ಯುಲ್ ನಲ್ಲಿ ಈ ಟ್ಯಾಕ್ಸ್ ಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂದು ನೋಡೋಣ. |
04:03 | ಮೊದಲು ಕಂಪನಿಗಾಗಿ ಒಂದು ಬ್ಯಾಂಕ್ ಅಕೌಂಟ್ ಅನ್ನು ನಾವು ತಯಾರಿಸೋಣ. |
04:07 | Banking and General ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
04:11 | Maintenance ಪ್ಯಾನಲ್ ನಲ್ಲಿ, Bank Accounts ಲಿಂಕ್ ಮೇಲೆ ಕ್ಲಿಕ್ ಮಾಡಿ. |
04:16 | ಬ್ಯಾಂಕ್ ಮತ್ತು ಕ್ಯಾಶ್ ಅಕೌಂಟ್ ಗಳನ್ನು ರೂಪಿಸಲು (ಕಾನ್ಫಿಗರ್) ಈ ಆಯ್ಕೆಯನ್ನು ಬಳಸಲಾಗುತ್ತದೆ. |
04:22 | ಡಿಫಾಲ್ಟ್ ಆಗಿ, ‘ಕರಂಟ್ ಅಕೌಂಟ್’ ಮತ್ತು ‘ಪೆಟ್ಟಿ ಕ್ಯಾಶ್ ಅಕೌಂಟ್’ ವಿವರಗಳನ್ನು ನೀವು ನೋಡಬಹುದು. |
04:29 | ಡಿಫಾಲ್ಟ್ ಆಗಿ, Currency ಕಾಲಂ US Dollar ನಲ್ಲಿದೆ.
ಇದನ್ನು ನಾವು Indian currency ಗೆ ಬದಲಾಯಿಸೋಣ. |
04:38 | Current account ಸಾಲಿನಲ್ಲಿ, Edit ಐಕಾನ್ ಮೇಲೆ ಕ್ಲಿಕ್ ಮಾಡಿ. |
04:43 | Account type ಅನ್ನು Chequing Account ಗೆ ಬದಲಾಯಿಸಿ. |
04:48 | Bank account currency ಅನ್ನು Indian Rupees ಗೆ ಬದಲಾಯಿಸಿ. |
04:53 | ನಂತರ, ಕೆಳಗಡೆ Update ಬಟನ್ ಮೇಲೆ ಕ್ಲಿಕ್ ಮಾಡಿ, ಈ ಬದಲಾವಣೆಗಳನ್ನು ಅಪ್ಡೇಟ್ ಮಾಡಿ. |
04:59 | ಇದೇ ರೀತಿ, Petty Cash account ಅನ್ನು ಸಹ Indian Rupees ಗೆ ಬದಲಾಯಿಸಿ.
ನಂತರ ಬದಲಾವಣೆಗಳನ್ನು ಅಪ್ಡೇಟ್ ಮಾಡಿ. |
05:11 | ನಂತರ ಒಂದಷ್ಟು ಮೊತ್ತವನ್ನು ST Company Pvt. Ltd. bank account ಗೆ ಸೇರಿಸೋಣ. |
05:17 | Banking and General ledger ಟ್ಯಾಬ್ ಗೆ ಹೋಗಿ.
Transactions ಪ್ಯಾನೆಲ್ ನಲ್ಲಿ, Deposits ಲಿಂಕ್ ಮೇಲೆ ಕ್ಲಿಕ್ ಮಾಡಿ. |
05:25 | ಗ್ರಾಹಕರ ಠೇವಣಿ, ವಿವಿಧ ಮಾರಾಟಗಳು ಇತ್ಯಾದಿಗಳನ್ನು ಇಲ್ಲಿ ನಮೂದಿಸಬಹುದು. |
05:31 | From ಫೀಲ್ಡ್ ಅನ್ನು Miscellaneous ಎನ್ನಿ.
ಹಣವನ್ನು ಠೇವಣಿ ಮಾಡಿರುವ ವ್ಯಕ್ತಿಯ ಹೆಸರನ್ನು, ಇಲ್ಲಿ ತೋರಿಸಿರುವಂತೆ ನಾನು ನಮೂದಿಸುತ್ತೇನೆ. |
05:41 | Account description ಫೀಲ್ಡ್ ನಲ್ಲಿ, Cash ಅನ್ನು ಆಯ್ಕೆಮಾಡಿ. |
05:45 | Amount ಫೀಲ್ಡ್ ನಲ್ಲಿ, 3 lakhs ಎಂದು ಟೈಪ್ ಮಾಡಿ. |
05:49 | Memo ಫೀಲ್ಡ್ ನಲ್ಲಿ, ಠೇವಣಿಯ ಉದ್ದೇಶವನ್ನು ಟೈಪ್ ಮಾಡಿ. |
05:54 | ನಂತರ, ಈ ಸಾಲಿನ ಬಲ ತುದಿಯಲ್ಲಿ Add item ಬಟನ್ ಮೇಲೆ ಕ್ಲಿಕ್ ಮಾಡಿ. |
05:59 | ವಿಂಡೋದ ಕೆಳಗಿರುವ Process Deposit ಬಟನ್ ಮೇಲೆ ಕ್ಲಿಕ್ ಮಾಡಿ. |
06:04 | ಹೊಸ ವಿಂಡೋದಲ್ಲಿ, ಡೆಪಾಸಿಟ್ ಅನ್ನು ನಮೂದಿಸಲಾಗಿದೆ ಎನ್ನುವ ಮೆಸೆಜ್ ಅನ್ನು ನಾವು ನೋಡಬಹುದು. |
06:10 | ಮುಂದಿನ ಲಿಂಕ್ View the GL postings for this Deposit ಆಗಿದೆ. ಇದರ ಮೇಲೆ ಕ್ಲಿಕ್ ಮಾಡಿ. |
06:17 | ಡೆಪಾಸಿಟ್ ಮಾಡಿರುವ ಮೊತ್ತದ ವಹಿವಾಟು (transaction) ವಿವರಗಳೊಂದಿಗೆ, ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. |
06:24 | ವಿಂಡೋದ ಕೆಳಭಾಗದಲ್ಲಿ, Close ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:28 | ನೀವು ಇನ್ನೊಂದು ಡೆಪಾಸಿಟ್ ಅನ್ನು ನಮೂದಿಸಲು ಇಚ್ಛಿಸಿದಲ್ಲಿ, “Enter Another Deposit” ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:34 | FrontAccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಗಡೆ Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:41 | ನಂತರ, ಬ್ಯಾಂಕ್ ಅಕೌಂಟ್ ನಿಂದ ಕ್ಯಾಶ್ ಗೆ ಅಥವಾ ಇನ್ನೊಂದು ಅಕೌಂಟ್ ಗೆ ಹಣವನ್ನು ಹೇಗೆ ವರ್ಗಾಯಿಸಬಹುದೆಂದು ನೋಡೋಣ. |
06:49 | Transactions ಪ್ಯಾನೆಲ್ ನಲ್ಲಿ, Bank Account Transfers ಲಿಂಕ್ ಮೇಲೆ ಕ್ಲಿಕ್ ಮಾಡಿ. |
06:55 | ಇಲ್ಲಿ, ಮೂರು ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಬ್ಯಾಲನ್ಸ್ ಆಗಿ ತೋರಿಸಲಾಗಿದೆ ಎಂದು ಗಮನಿಸಿ.
ಈ ಮೊತ್ತವನ್ನು ಹಿಂದೆ ಡೆಪಾಸಿಟ್ ಮಾಡಿದ್ದನ್ನು ನೆನಪಿಸಿಕೊಳ್ಳಿ. |
07:05 | To Account ಫೀಲ್ಡ್ನಲ್ಲಿ, Petty Cash account ಅನ್ನು ಆಯ್ಕೆಮಾಡಿ. |
07:10 | Amount ಫೀಲ್ಡ್ ನಲ್ಲಿ, 20,000 ಎಂದು ನಮೂದಿಸಿ. |
07:14 | Memo ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ. |
07:17 | ವಿಂಡೋದ ಕೆಳಭಾಗದಲ್ಲಿ, Enter Transfer ಬಟನ್ ಮೇಲೆ ಕ್ಲಿಕ್ ಮಾಡಿ. |
07:22 | ಹೊಸ ವಿಂಡೋದಲ್ಲಿ, ನಾವು “Transfer has been entered” ಎನ್ನುವ ಹೊಸ ಮೆಸೆಜ್ ಅನ್ನು ನೋಡಬಹುದು. |
07:27 | ಮುಂದಿನ ಲಿಂಕ್ View The GL Journal Entries for this Transfer ಆಗಿದೆ.
ನಮೂದುಗಳನ್ನು ನೋಡಲು, ಇದರ ಮೇಲೆ ಕ್ಲಿಕ್ ಮಾಡಿ. |
07:35 | ವರ್ಗಾಯಿಸಿದ ಮೊತ್ತದ ಟ್ರಾನ್ಸಾಕ್ಷನ್ ವಿವರಗಳೊಂದಿಗೆ, ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. |
07:42 | ವಿಂಡೋದ ಕೆಳಭಾಗದಲ್ಲಿ, Close ಲಿಂಕ್ ಮೇಲೆ ಕ್ಲಿಕ್ ಮಾಡಿ. |
07:46 | FrontAccounting ಇಂಟರ್ಫೇಸ್ ಗೆ ಹಿಂದಿರುಗಲು, ವಿಂಡೋದ ಕೆಳಭಾಗದಲ್ಲಿ Back ಲಿಂಕ್ ಮೇಲೆ ಕ್ಲಿಕ್ ಮಾಡಿ. |
07:53 | ನಂತರ ನಾವು Bank Statements ಪರೀಕ್ಷಿಸುವೆವು. |
07:57 | Transactions ಪ್ಯಾನೆಲ್ ನಲ್ಲಿ, ಬಲಭಾಗದಲ್ಲಿ Reconcile Bank Account ಲಿಂಕ್ ಮೇಲೆ ಕ್ಲಿಕ್ ಮಾಡಿ. |
08:04 | ಇದು ಕಂಪನಿ ಅಕೌಂಟ್ ಗಳಲ್ಲಿನ ಮತ್ತು Bank Statement ನಲ್ಲಿನ ಡೆಪಾಸಿಟ್ ಗಳನ್ನು ಹೊಂದಿಸಿ ನೋಡುತ್ತದೆ. |
08:10 | ಅಕೌಂಟ್ ಟೋಟಲ್, ಬ್ಯಾಂಕ್ ಡೆಪಾಸಿಟ್ ಗಳು ಮತ್ತು ಫಂಡ್ ಟ್ರಾನ್ಸ್ಫರ್ ವಿವರಗಳನ್ನು ನಾವು ನೋಡಬಹುದು. |
08:17 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
08:22 | ಈ ಟ್ಯುಟೋರಿಯಲ್ ನಲ್ಲಿ, ನಾವು:
ಹೊಸ ಟ್ಯಾಕ್ಸ್ ಅನ್ನು ಸೇರಿಸಲು, |
08:27 | ಬ್ಯಾಂಕ್ ಅಕೌಂಟ್ ಗಳನ್ನು ತಯಾರಿಸಲು, |
08:30 | ಡೆಪಾಸಿಟ್ ಗಳನ್ನು ಸೇರಿಸಲು, |
08:32 | ಮೊತ್ತವನ್ನು ಬ್ಯಾಂಕ್ ಅಕೌಂಟ್ ಗೆ ವರ್ಗಾಯಿಸಲು ಮತ್ತು |
08:35 | ಬ್ಯಾಂಕ್ ಅಕೌಂಟ್ ಅನ್ನು ರೀಕನ್ಸೈಲ್ ಮಾಡಲು ಕಲಿತೆವು. |
08:39 | ಅಸೈನ್ ಮೆಂಟ್ ಗಾಗಿ:
Deposits ಆಯ್ಕೆಯನ್ನು ಬಳಸಿ ರೂ. 10,000 ಅನ್ನು ‘ಪೆಟ್ಟಿ ಕ್ಯಾಶ್ ಅಕೌಂಟ್’ ನಲ್ಲಿ ಜಮಾ ಮಾಡಿ. |
08:48 | From ಫೀಲ್ಡ್ ನಲ್ಲಿ, Miscellaneous ಅನ್ನು ಆಯ್ಕೆಮಾಡಿ.
Name ಅನ್ನು Mr. Rahul ಎಂದು ನಮೂದಿಸಿ. |
08:54 | ‘ಪೆಟ್ಟಿ ಕ್ಯಾಶ್ ಅಕೌಂಟ್’ ಗಾಗಿ ‘ರೀಕನ್ಸೈಲ್ ಬ್ಯಾಂಕ್ ಅಕೌಂಟ್’ ಅನ್ನು ಪರೀಕ್ಷಿಸಿ. |
08:59 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
09:07 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
09:18 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
09:22 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
09.28 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |