Difference between revisions of "FrontAccounting-2.4.7/C2/Banking-and-General-Ledger-in-FrontAccounting/Kannada"
Sandhya.np14 (Talk | contribs) |
Sandhya.np14 (Talk | contribs) |
||
Line 354: | Line 354: | ||
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ. | || ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ. | ||
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ||
+ | |||
ಧನ್ಯವಾದಗಳು. | ಧನ್ಯವಾದಗಳು. |
Latest revision as of 12:03, 3 June 2020
Time | Narration |
00:01 | Front Accounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು
‘ಜನರಲ್ ಲೆಡ್ಜರ್’ ಕ್ಲಾಸುಗಳು, |
00:13 | ‘ಜನರಲ್ ಲೆಡ್ಜರ್’ ಗ್ರೂಪ್ ಗಳು ಮತ್ತು
‘ಜನರಲ್ ಲೆಡ್ಜರ್’ ಅಕೌಂಟ್ ಗಳ ರಚನೆಯನ್ನು ಕಲಿಯಲಿದ್ದೇವೆ. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,
ಉಬಂಟು ಲಿನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
00:26 | FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. |
00:30 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್, ಬುಕ್-ಕೀಪಿಂಗ್ ನ ತತ್ವಗಳ ಬಗ್ಗೆ ತಿಳಿದಿರಬೇಕು. |
00:40 | ಅಲ್ಲದೆ, FrontAccounting ನಲ್ಲಿ ನೀವು ಈಗಾಗಲೇ ಒಂದು ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು. |
00:46 | ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ನ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್ ಗೆ ಭೇಟಿ ನೀಡಿ. |
00:52 | ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ. |
00:58 | ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ. |
01:01 | ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:09 | ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ. |
01:12 | admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:20 | FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
01:23 | Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
01:27 | Maintenance ಪ್ಯಾನೆಲ್ ನಲ್ಲಿ, ಈ ಕೆಳಗಿನ ಆಯ್ಕೆಗಳನ್ನು ನಾವು ನೋಡಬಹುದು:
GL Accounts |
01:33 | GL Account Groups ಮತ್ತು
GL Account Classes. |
01:38 | ಯಾವುದೇ ವಹಿವಾಟನ್ನು ಪ್ರಾರಂಭಿಸುವ ಮೊದಲು, ನಾವು Charts of Accounts ಅನ್ನು ಹೊಂದಿಸಿಕೊಳ್ಳಬೇಕು. |
01:43 | FrontAccounting ನಲ್ಲಿ, Charts of Accounts ಅನ್ನು ಟೈಪ್, ಕ್ಲಾಸ್, ಗ್ರೂಪ್ ಮತ್ತು ಅಕೌಂಟ್ ಗಳಿಂದ ಡಿಫೈನ್ ಮಾಡಲಾಗುತ್ತದೆ. |
01:50 | ಎಲ್ಲಾ ಟ್ರಾನ್ಸಾಕ್ಷನ್ ಗಳನ್ನು ಅಕೌಂಟ್, ಗ್ರೂಪ್ ಮತ್ತು ಕ್ಲಾಸ್ ಗಳಿಗೆ ಚಾರ್ಜ್ ಮಾಡಲಾಗುತ್ತದೆ. |
01:56 | ಇವುಗಳನ್ನು, ರಿಪೋರ್ಟಿಂಗ್ ಉದ್ದೇಶಗಳಿಗಾಗಿ ಟ್ರಾನ್ಸಾಕ್ಷನ್ ಗಳನ್ನು ಗುಂಪುಗೂಡಿಸಲು ಬಳಸಲಾಗುತ್ತದೆ. |
02:00 | FrontAccounting ನಲ್ಲಿ, Account, Group ಗೆ ಮತ್ತು Group, Class ಗೆ ಸಂಬಂಧಿಸಿದೆ. |
02:06 | ಇದು Account ಗ್ರೂಪ್ ನ ಪ್ರಕಾರ, ಬ್ಯಾಲನ್ಸ್ ಶೀಟ್ ಮತ್ತು ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಸ್ಟೇಟ್ ಮೆಂಟ್ ಗಳಲ್ಲಿ ಪ್ರತಿಫಲಿಸುತ್ತದೆ. |
02:13 | ಈಗ FrontAccounting ಇಂಟರ್ಫೇಸ್ ಗೆ ಹಿಂದಿರುಗಿ. |
02:17 | ಇಲ್ಲಿನ ಮೊದಲ ಹಂತವೆಂದರೆ General Ledger Account ಕ್ಲಾಸ್ ಗಳನ್ನು ಹೊಂದಿಸುವುದು. |
02:22 | Maintenance ಪ್ಯಾನಲ್ ನಲ್ಲಿ, GL Account Classes ಲಿಂಕ್ ಮೇಲೆ ಕ್ಲಿಕ್ ಮಾಡಿ. |
02:27 | ಇಲ್ಲಿ ಡಿಫಾಲ್ಟ್ ಆಗಿ, ಕ್ಲಾಸ್ ನೇಮ್ ಮತ್ತು ಕ್ಲಾಸ್ ಟೈಪ್ ಅನ್ನು ಈ ಕೆಳಗಿನಂತೆ ಡಿಫೈನ್ ಮಾಡಲಾಗುತ್ತದೆ:
Assets , Liabilities , Income ಮತ್ತು Expense. |
02:38 | ಅಲ್ಲದೆ, ಪ್ರತಿಯೊಂದು ಕ್ಲಾಸ್ ಟೈಪ್ ಗೆ ಒಂದು Class ID ಯನ್ನು ಹೊಂದಿಸಲಾಗಿದೆ. |
02:44 | Account Group ಹೊಂದಿಸುವ ಮೊದಲು ನಾವು ಈ ಕ್ಲಾಸ್ ಅನ್ನು ಹೊಂದಿಸಬೇಕು. |
02:49 | ಈಗ ಹೊಸ ಕ್ಲಾಸ್ ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ. |
02:53 | Class ID ಫೀಲ್ಡ್ನಲ್ಲಿ, 5 ಅನ್ನು ಟೈಪ್ ಮಾಡಿ. Class ID ವಿಶಿಷ್ಟ ವ್ಯಾಲ್ಯೂವನ್ನು ಹೊಂದಿರಬೇಕು. |
03:00 | Class Name ಫೀಲ್ಡ್ನಲ್ಲಿ Equity ಎಂದು ಟೈಪ್ ಮಾಡಿ. |
03:04 | Class Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
ನಾವು ಈ ಡಿಫಾಲ್ಟ್ ಪಟ್ಟಿಯನ್ನು ನೋಡಬಹುದು: Assets, Liabilities, Equity, Income, Cost of Goods Sold ಮತ್ತು Expense. |
03:21 | ಬ್ಯಾಲನ್ಸ್ ಶೀಟ್ ನಲ್ಲಿ ತೋರಿಸಲು, FrontAccounting ಈ ಕ್ಲಾಸ್ ಟೈಪ್ ಅನ್ನು ಅನುಸರಿಸುತ್ತದೆ. |
03:26 | Class Type ಅನ್ನು Equity ಆಗಿ ಆರಿಸಿ. |
03:29 | ವಿಂಡೋದ ಕೆಳಗಿನ Add new ಬಟನ್ ಮೇಲೆ ಕ್ಲಿಕ್ ಮಾಡಿ. |
03:33 | 'New account class has been added' ಎನ್ನುವ ಮೆಸೇಜ್ ಕಾಣಿಸಿಕೊಳ್ಳುತ್ತದೆ. |
03:38 | ಇಲ್ಲಿ ಹೊಸ ಕ್ಲಾಸ್ “Equity” ಯನ್ನು ಮೂರನೇ ಸಾಲಿಗೆ ಸೇರಿಸಿರುವುದನ್ನು ನಾವು ಕಾಣಬಹುದು. |
03:44 | ಏಕೆಂದರೆ, ಡಿಫಾಲ್ಟ್ ಕ್ಲಾಸ್ ಟೈಪ್ ನಲ್ಲಿ, Equity ಯು ಮೂರನೇ ಶ್ರೇಣಿಯಲ್ಲಿರುತ್ತದೆ. |
03:50 | ಹೀಗಾಗಿ, ಹೊಸ ಕ್ಲಾಸ್ ಅನ್ನು ಸೇರಿಸಿದಾಗಲೆಲ್ಲ, ಇದು ಕ್ಲಾಸ್ ಟೈಪ್ ನ ಡಿಫಾಲ್ಟ್ ಸ್ಥಾನವನ್ನು ಪಡೆದುಕೊಳ್ಳುತ್ತದೆ. |
03:56 | ಈಗ GL Groups ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ. |
04:00 | Banking and General Ledger ಟ್ಯಾಬ್ಗೆ ಹೋಗಿ. |
04:03 | Maintenance ಪ್ಯಾನೆಲ್ ನಲ್ಲಿ, GL Account Groups ಲಿಂಕ್ ಮೇಲೆ ಕ್ಲಿಕ್ ಮಾಡಿ. |
04:08 | ನಾವೀಗ ಡಿಫಾಲ್ಟ್ Group Name ನೋಡಬಹುದು. ಇದು Class ನ ಅಡಿಯಲ್ಲಿ GL Account Groups ತೋರಿಸುತ್ತದೆ. |
04:15 | ಕ್ಲಾಸ್ನ ಪ್ರಕಾರ Group ID ಸೆಟ್ ಆಗಿರುವುದನ್ನು ನೀವು ನೋಡಬಹುದು. |
04:20 | ID ಫೀಲ್ಡ್ನಲ್ಲಿ, ಹೊಸ Group ID ಯನ್ನು 12 ಎಂದು ಟೈಪ್ ಮಾಡಿ. |
04:24 | Name ಫೀಲ್ಡ್ನಲ್ಲಿ ನಾನು, Fixed Assets ಅನ್ನು Group Name ಆಗಿ ಟೈಪ್ ಮಾಡುತ್ತೇನೆ. |
04:29 | “Fixed Assets” ಗ್ರೂಪ್ ನೇಮ್ ಈಗಾಗಲೇ ಲಭ್ಯವಿರುವ ಯಾವುದೇ ಸಬ್-ಗ್ರೂಪ್ಗೆ ಸೇರಿಲ್ಲ. |
04:35 | ಹೀಗಾಗಿ, Subgroup ಫೀಲ್ಡ್ನಲ್ಲಿ, ಇದನ್ನು None ಆಗಿ ಇಡಿ. |
04:40 | ಈಗ Class ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
04:44 | Charts of Accounts ಪ್ರಕಾರ, Fixed Assets, Assets ಕ್ಲಾಸ್ ನ ಅಡಿಯಲ್ಲಿ ಬರುತ್ತದೆ.
ಹೀಗಾಗಿ Class ಅನ್ನು Assets' ಆಗಿ ಆರಿಸಿ. |
04:53 | ಈ ಬದಲಾವಣೆಗಳನ್ನು ಸೇವ್ ಮಾಡಲು, ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ. |
04:59 | ನಾವು, "This account Group ID is already in use" ಎನ್ನುವ ಎರರ್ ಮೆಸೆಜ್ ಕಾಣಬಹುದು. |
05:06 | ಆದ್ದರಿಂದ, ಪ್ರತಿ Group Name ಗೆ ಒಂದು ವಿಶಿಷ್ಟ Class ID ಯನ್ನು ಸೇರಿಸಬೇಕು. |
05:11 | ನಾವೀಗ Group ID ಯನ್ನು 13ಕ್ಕೆ ಬದಲಾಯಿಸೋಣ. |
05:15 | ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ. |
05:19 | ಈ ಬಾರಿ ನಾವು "New account type has been added" ಎನ್ನುವ ಮೆಸೆಜ್ ನೋಡಬಹುದು. |
05:25 | “Assets” ಕ್ಲಾಸ್ ನ ಒಳಗೆ, ಹೊಸ Group Name ಅನ್ನು ಯಾದೃಚ್ಛಿಕವಾಗಿ (randomly) ಸೇರಿಸಲಾಗಿದೆ. |
05:30 | ಇದೇ ರೀತಿ, ನಾವು ನಮ್ಮದೇ ಆದ Group Name ಸೇರಿಸಬಹುದು. |
05:34 | ಈಗ GL Accounts ಹೇಗೆ ಸೇರಿಸಬಹುದೆಂದು ನೋಡೋಣ. |
05:38 | Banking and General Ledger ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
05:42 | ನಂತರ Maintenance ಪ್ಯಾನೆಲ್ ನಲ್ಲಿ, GL Accounts ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
05:47 | ಇಲ್ಲಿ ಸಹ ನಾವು ವಿಶಿಷ್ಟ ಕೋಡ್ ಅನ್ನು ಟೈಪ್ ಮಾಡಬೇಕು. ಇದು ಕಡ್ಡಾಯವಾದ ಫೀಲ್ಡ್ ಆಗಿದೆ. |
05:53 | Account Code ಫೀಲ್ಡ್ ನಲ್ಲಿ, ನಾನು 1100 ಅನ್ನು ಕೋಡ್ ಆಗಿ ಟೈಪ್ ಮಾಡುತ್ತೇನೆ. |
06:00 | ನೀವಿಲ್ಲಿ ನಿಮ್ಮ ಇಚ್ಛೆಯ ಯಾವುದೇ ಕೋಡ್ ಅನ್ನು ಕೊಡಬಹುದು. |
06:04 | Account Name ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
Account Name ಅನ್ನು "Land and Building" ಎಂದು ಟೈಪ್ ಮಾಡಿ. |
06:11 | ನೀವು ನಿಮ್ಮ ಆಯ್ಕೆಯ ಯಾವುದೇ ಹೆಸರನ್ನು ನೀಡಬಹುದು. |
06:14 | Account Group ಡ್ರಾಪ್ ಡೌನ್ ಬಾಕ್ಸ್ನಲ್ಲಿ, Account Group ಅನ್ನು Fixed Assets ಆಗಿ ಆರಿಸಿ. |
06:20 | Charts of Accounts ಪ್ರಕಾರ, Land and Building ಈ ಅಕೌಂಟ್ ನೇಮ್, Fixed Assets ಗ್ರೂಪ್ ನ ಅಡಿಯಲ್ಲಿ ಬರುತ್ತದೆ. |
06:28 | ನಂತರ Account status ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
status ಅನ್ನು Active ಎಂದು ಆರಿಸಿಕೊಳ್ಳಿ. |
06:35 | ನಂತರ ವಿಂಡೋದ ಕೆಳಗಿರುವ Add Account ಬಟನ್ ಮೇಲೆ ಕ್ಲಿಕ್ ಮಾಡಿ. |
06:40 | ನಾವು "New account has been added" ಎಂಬ ಮೆಸೇಜ್ ನೋಡಬಹುದು. |
06:45 | ಈಗ ಮೇಲ್ಗಡೆ New account ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
ನಾವಿಲ್ಲಿ ಹೊಸದಾಗಿ ಸೇರಿಸಲಾದ ಅಕೌಂಟ್ ಅನ್ನು ನೋಡಬಹುದು. |
06:54 | ಇಲ್ಲಿ ತೋರಿಸಿರುವಂತೆ, ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಅಕೌಂಟ್ ಕೋಡ್ ಗಳ ಸೆಟ್ ಅನ್ನು ಹೊಂದಿರುತ್ತದೆ. |
07:00 | ಇದೇ ರೀತಿ, ಮೇಲಿನ ಹಂತಗಳನ್ನು ಅನುಸರಿಸಿ, ನೀವು ನಿಮ್ಮದೇ ಆದ GL Accounts ರಚಿಸಬಹುದು. |
07:06 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
07:12 | ಈ ಟ್ಯುಟೋರಿಯಲ್ನಲ್ಲಿ ನಾವು,
‘ಜನರಲ್ ಲೆಡ್ಜರ್’ ಕ್ಲಾಸ್, ‘ಜನರಲ್ ಲೆಡ್ಜರ್’ ಗ್ರೂಪ್ ಮತ್ತು ‘ಜನರಲ್ ಲೆಡ್ಜರ್’ ಅಕೌಂಟ್ ಗಳನ್ನು ರಚಿಸಲು ಕಲಿತೆವು. |
07:22 | ಅಸೈನ್ಮೆಂಟ್ ಗಾಗಿ,
ಈ ಕೆಳಗಿನ ವಿವರಗಳೊಂದಿಗೆ ಹೊಸ GL Accounts – Cash ಮತ್ತು Capital ರಚಿಸಿ. ಬದಲಾವಣೆಗಳನ್ನು ಸೇವ್ ಮಾಡಿ. |
07:31 | ನಾವೀಗ ನಮ್ಮ ಕಂಪನಿಗೆ, ಹೊಸ GL Accounts ನೊಂದಿಗೆ Charts of Accounts ಅನ್ನು ಸೆಟ್ ಮಾಡಿದ್ದೇವೆ. |
07:38 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
07:46 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
07:55 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
07:59 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
08:05 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |