FrontAccounting-2.4.7/C2/Banking-and-General-Ledger-in-FrontAccounting/Kannada

From Script | Spoken-Tutorial
Jump to: navigation, search
Time Narration
00:01 Front Accounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು

‘ಜನರಲ್ ಲೆಡ್ಜರ್’ ಕ್ಲಾಸುಗಳು,

00:13 ‘ಜನರಲ್ ಲೆಡ್ಜರ್’ ಗ್ರೂಪ್ ಗಳು ಮತ್ತು

‘ಜನರಲ್ ಲೆಡ್ಜರ್’ ಅಕೌಂಟ್ ಗಳ ರಚನೆಯನ್ನು ಕಲಿಯಲಿದ್ದೇವೆ.

00:18 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು,

ಉಬಂಟು ಲಿನಕ್ಸ್ ಒ.ಎಸ್ ವರ್ಶನ್ 16.04 ಮತ್ತು

00:26 FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
00:30 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್, ಬುಕ್-ಕೀಪಿಂಗ್ ನ ತತ್ವಗಳ ಬಗ್ಗೆ ತಿಳಿದಿರಬೇಕು.
00:40 ಅಲ್ಲದೆ, FrontAccounting ನಲ್ಲಿ ನೀವು ಈಗಾಗಲೇ ಒಂದು ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು.
00:46 ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ನ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ ಸೈಟ್ ಗೆ ಭೇಟಿ ನೀಡಿ.
00:52 ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
00:58 ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ.
01:01 ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
01:09 ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
01:12 admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

01:20 FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
01:23 Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
01:27 Maintenance ಪ್ಯಾನೆಲ್ ನಲ್ಲಿ, ಈ ಕೆಳಗಿನ ಆಯ್ಕೆಗಳನ್ನು ನಾವು ನೋಡಬಹುದು:

GL Accounts

01:33 GL Account Groups ಮತ್ತು

GL Account Classes.

01:38 ಯಾವುದೇ ವಹಿವಾಟನ್ನು ಪ್ರಾರಂಭಿಸುವ ಮೊದಲು, ನಾವು Charts of Accounts ಅನ್ನು ಹೊಂದಿಸಿಕೊಳ್ಳಬೇಕು.
01:43 FrontAccounting ನಲ್ಲಿ, Charts of Accounts ಅನ್ನು ಟೈಪ್, ಕ್ಲಾಸ್, ಗ್ರೂಪ್ ಮತ್ತು ಅಕೌಂಟ್ ಗಳಿಂದ ಡಿಫೈನ್ ಮಾಡಲಾಗುತ್ತದೆ.
01:50 ಎಲ್ಲಾ ಟ್ರಾನ್ಸಾಕ್ಷನ್ ಗಳನ್ನು ಅಕೌಂಟ್, ಗ್ರೂಪ್ ಮತ್ತು ಕ್ಲಾಸ್ ಗಳಿಗೆ ಚಾರ್ಜ್ ಮಾಡಲಾಗುತ್ತದೆ.
01:56 ಇವುಗಳನ್ನು, ರಿಪೋರ್ಟಿಂಗ್ ಉದ್ದೇಶಗಳಿಗಾಗಿ ಟ್ರಾನ್ಸಾಕ್ಷನ್ ಗಳನ್ನು ಗುಂಪುಗೂಡಿಸಲು ಬಳಸಲಾಗುತ್ತದೆ.
02:00 FrontAccounting ನಲ್ಲಿ, Account, Group ಗೆ ಮತ್ತು Group, Class ಗೆ ಸಂಬಂಧಿಸಿದೆ.
02:06 ಇದು Account ಗ್ರೂಪ್ ನ ಪ್ರಕಾರ, ಬ್ಯಾಲನ್ಸ್ ಶೀಟ್ ಮತ್ತು ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಸ್ಟೇಟ್ ಮೆಂಟ್ ಗಳಲ್ಲಿ ಪ್ರತಿಫಲಿಸುತ್ತದೆ.
02:13 ಈಗ FrontAccounting ಇಂಟರ್ಫೇಸ್ ಗೆ ಹಿಂದಿರುಗಿ.
02:17 ಇಲ್ಲಿನ ಮೊದಲ ಹಂತವೆಂದರೆ General Ledger Account ಕ್ಲಾಸ್ ಗಳನ್ನು ಹೊಂದಿಸುವುದು.
02:22 Maintenance ಪ್ಯಾನಲ್ ನಲ್ಲಿ, GL Account Classes ಲಿಂಕ್ ಮೇಲೆ ಕ್ಲಿಕ್ ಮಾಡಿ.
02:27 ಇಲ್ಲಿ ಡಿಫಾಲ್ಟ್ ಆಗಿ, ಕ್ಲಾಸ್ ನೇಮ್ ಮತ್ತು ಕ್ಲಾಸ್ ಟೈಪ್ ಅನ್ನು ಈ ಕೆಳಗಿನಂತೆ ಡಿಫೈನ್ ಮಾಡಲಾಗುತ್ತದೆ:

Assets , Liabilities , Income ಮತ್ತು Expense.

02:38 ಅಲ್ಲದೆ, ಪ್ರತಿಯೊಂದು ಕ್ಲಾಸ್ ಟೈಪ್ ಗೆ ಒಂದು Class ID ಯನ್ನು ಹೊಂದಿಸಲಾಗಿದೆ.
02:44 Account Group ಹೊಂದಿಸುವ ಮೊದಲು ನಾವು ಈ ಕ್ಲಾಸ್ ಅನ್ನು ಹೊಂದಿಸಬೇಕು.
02:49 ಈಗ ಹೊಸ ಕ್ಲಾಸ್ ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ.
02:53 Class ID ಫೀಲ್ಡ್ನಲ್ಲಿ, 5 ಅನ್ನು ಟೈಪ್ ಮಾಡಿ. Class ID ವಿಶಿಷ್ಟ ವ್ಯಾಲ್ಯೂವನ್ನು ಹೊಂದಿರಬೇಕು.
03:00 Class Name ಫೀಲ್ಡ್ನಲ್ಲಿ Equity ಎಂದು ಟೈಪ್ ಮಾಡಿ.
03:04 Class Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.

ನಾವು ಈ ಡಿಫಾಲ್ಟ್ ಪಟ್ಟಿಯನ್ನು ನೋಡಬಹುದು: Assets, Liabilities, Equity, Income, Cost of Goods Sold ಮತ್ತು Expense.

03:21 ಬ್ಯಾಲನ್ಸ್ ಶೀಟ್ ನಲ್ಲಿ ತೋರಿಸಲು, FrontAccounting ಈ ಕ್ಲಾಸ್ ಟೈಪ್ ಅನ್ನು ಅನುಸರಿಸುತ್ತದೆ.
03:26 Class Type ಅನ್ನು Equity ಆಗಿ ಆರಿಸಿ.
03:29 ವಿಂಡೋದ ಕೆಳಗಿನ Add new ಬಟನ್ ಮೇಲೆ ಕ್ಲಿಕ್ ಮಾಡಿ.
03:33 'New account class has been added' ಎನ್ನುವ ಮೆಸೇಜ್ ಕಾಣಿಸಿಕೊಳ್ಳುತ್ತದೆ.
03:38 ಇಲ್ಲಿ ಹೊಸ ಕ್ಲಾಸ್ “Equity” ಯನ್ನು ಮೂರನೇ ಸಾಲಿಗೆ ಸೇರಿಸಿರುವುದನ್ನು ನಾವು ಕಾಣಬಹುದು.
03:44 ಏಕೆಂದರೆ, ಡಿಫಾಲ್ಟ್ ಕ್ಲಾಸ್ ಟೈಪ್ ನಲ್ಲಿ, Equity ಯು ಮೂರನೇ ಶ್ರೇಣಿಯಲ್ಲಿರುತ್ತದೆ.
03:50 ಹೀಗಾಗಿ, ಹೊಸ ಕ್ಲಾಸ್ ಅನ್ನು ಸೇರಿಸಿದಾಗಲೆಲ್ಲ, ಇದು ಕ್ಲಾಸ್ ಟೈಪ್ ನ ಡಿಫಾಲ್ಟ್ ಸ್ಥಾನವನ್ನು ಪಡೆದುಕೊಳ್ಳುತ್ತದೆ.
03:56 ಈಗ GL Groups ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ.
04:00 Banking and General Ledger ಟ್ಯಾಬ್ಗೆ ಹೋಗಿ.
04:03 Maintenance ಪ್ಯಾನೆಲ್ ನಲ್ಲಿ, GL Account Groups ಲಿಂಕ್ ಮೇಲೆ ಕ್ಲಿಕ್ ಮಾಡಿ.
04:08 ನಾವೀಗ ಡಿಫಾಲ್ಟ್ Group Name ನೋಡಬಹುದು. ಇದು Class ನ ಅಡಿಯಲ್ಲಿ GL Account Groups ತೋರಿಸುತ್ತದೆ.
04:15 ಕ್ಲಾಸ್ನ ಪ್ರಕಾರ Group ID ಸೆಟ್ ಆಗಿರುವುದನ್ನು ನೀವು ನೋಡಬಹುದು.
04:20 ID ಫೀಲ್ಡ್ನಲ್ಲಿ, ಹೊಸ Group ID ಯನ್ನು 12 ಎಂದು ಟೈಪ್ ಮಾಡಿ.
04:24 Name ಫೀಲ್ಡ್ನಲ್ಲಿ ನಾನು, Fixed Assets ಅನ್ನು Group Name ಆಗಿ ಟೈಪ್ ಮಾಡುತ್ತೇನೆ.
04:29 “Fixed Assets” ಗ್ರೂಪ್ ನೇಮ್ ಈಗಾಗಲೇ ಲಭ್ಯವಿರುವ ಯಾವುದೇ ಸಬ್-ಗ್ರೂಪ್ಗೆ ಸೇರಿಲ್ಲ.
04:35 ಹೀಗಾಗಿ, Subgroup ಫೀಲ್ಡ್ನಲ್ಲಿ, ಇದನ್ನು None ಆಗಿ ಇಡಿ.
04:40 ಈಗ Class ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
04:44 Charts of Accounts ಪ್ರಕಾರ, Fixed Assets, Assets ಕ್ಲಾಸ್ ನ ಅಡಿಯಲ್ಲಿ ಬರುತ್ತದೆ.

ಹೀಗಾಗಿ Class ಅನ್ನು Assets' ಆಗಿ ಆರಿಸಿ.

04:53 ಈ ಬದಲಾವಣೆಗಳನ್ನು ಸೇವ್ ಮಾಡಲು, ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
04:59 ನಾವು, "This account Group ID is already in use" ಎನ್ನುವ ಎರರ್ ಮೆಸೆಜ್ ಕಾಣಬಹುದು.
05:06 ಆದ್ದರಿಂದ, ಪ್ರತಿ Group Name ಗೆ ಒಂದು ವಿಶಿಷ್ಟ Class ID ಯನ್ನು ಸೇರಿಸಬೇಕು.
05:11 ನಾವೀಗ Group ID ಯನ್ನು 13ಕ್ಕೆ ಬದಲಾಯಿಸೋಣ.
05:15 ವಿಂಡೋದ ಕೆಳಗಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ.
05:19 ಈ ಬಾರಿ ನಾವು "New account type has been added" ಎನ್ನುವ ಮೆಸೆಜ್ ನೋಡಬಹುದು.
05:25 “Assets” ಕ್ಲಾಸ್ ನ ಒಳಗೆ, ಹೊಸ Group Name ಅನ್ನು ಯಾದೃಚ್ಛಿಕವಾಗಿ (randomly) ಸೇರಿಸಲಾಗಿದೆ.
05:30 ಇದೇ ರೀತಿ, ನಾವು ನಮ್ಮದೇ ಆದ Group Name ಸೇರಿಸಬಹುದು.
05:34 ಈಗ GL Accounts ಹೇಗೆ ಸೇರಿಸಬಹುದೆಂದು ನೋಡೋಣ.
05:38 Banking and General Ledger ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
05:42 ನಂತರ Maintenance ಪ್ಯಾನೆಲ್ ನಲ್ಲಿ, GL Accounts ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
05:47 ಇಲ್ಲಿ ಸಹ ನಾವು ವಿಶಿಷ್ಟ ಕೋಡ್ ಅನ್ನು ಟೈಪ್ ಮಾಡಬೇಕು. ಇದು ಕಡ್ಡಾಯವಾದ ಫೀಲ್ಡ್ ಆಗಿದೆ.
05:53 Account Code ಫೀಲ್ಡ್ ನಲ್ಲಿ, ನಾನು 1100 ಅನ್ನು ಕೋಡ್ ಆಗಿ ಟೈಪ್ ಮಾಡುತ್ತೇನೆ.
06:00 ನೀವಿಲ್ಲಿ ನಿಮ್ಮ ಇಚ್ಛೆಯ ಯಾವುದೇ ಕೋಡ್ ಅನ್ನು ಕೊಡಬಹುದು.
06:04 Account Name ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.

Account Name ಅನ್ನು "Land and Building" ಎಂದು ಟೈಪ್ ಮಾಡಿ.

06:11 ನೀವು ನಿಮ್ಮ ಆಯ್ಕೆಯ ಯಾವುದೇ ಹೆಸರನ್ನು ನೀಡಬಹುದು.
06:14 Account Group ಡ್ರಾಪ್ ಡೌನ್ ಬಾಕ್ಸ್ನಲ್ಲಿ, Account Group ಅನ್ನು Fixed Assets ಆಗಿ ಆರಿಸಿ.
06:20 Charts of Accounts ಪ್ರಕಾರ, Land and Building ಈ ಅಕೌಂಟ್ ನೇಮ್, Fixed Assets ಗ್ರೂಪ್ ನ ಅಡಿಯಲ್ಲಿ ಬರುತ್ತದೆ.
06:28 ನಂತರ Account status ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.

status ಅನ್ನು Active ಎಂದು ಆರಿಸಿಕೊಳ್ಳಿ.

06:35 ನಂತರ ವಿಂಡೋದ ಕೆಳಗಿರುವ Add Account ಬಟನ್ ಮೇಲೆ ಕ್ಲಿಕ್ ಮಾಡಿ.
06:40 ನಾವು "New account has been added" ಎಂಬ ಮೆಸೇಜ್ ನೋಡಬಹುದು.
06:45 ಈಗ ಮೇಲ್ಗಡೆ New account ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.

ನಾವಿಲ್ಲಿ ಹೊಸದಾಗಿ ಸೇರಿಸಲಾದ ಅಕೌಂಟ್ ಅನ್ನು ನೋಡಬಹುದು.

06:54 ಇಲ್ಲಿ ತೋರಿಸಿರುವಂತೆ, ಪ್ರತಿಯೊಂದು ಸಂಸ್ಥೆಯು ತನ್ನದೇ ಆದ ಅಕೌಂಟ್ ಕೋಡ್ ಗಳ ಸೆಟ್ ಅನ್ನು ಹೊಂದಿರುತ್ತದೆ.
07:00 ಇದೇ ರೀತಿ, ಮೇಲಿನ ಹಂತಗಳನ್ನು ಅನುಸರಿಸಿ, ನೀವು ನಿಮ್ಮದೇ ಆದ GL Accounts ರಚಿಸಬಹುದು.
07:06 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

07:12 ಈ ಟ್ಯುಟೋರಿಯಲ್ನಲ್ಲಿ ನಾವು,

‘ಜನರಲ್ ಲೆಡ್ಜರ್’ ಕ್ಲಾಸ್, ‘ಜನರಲ್ ಲೆಡ್ಜರ್’ ಗ್ರೂಪ್ ಮತ್ತು ‘ಜನರಲ್ ಲೆಡ್ಜರ್’ ಅಕೌಂಟ್ ಗಳನ್ನು ರಚಿಸಲು ಕಲಿತೆವು.

07:22 ಅಸೈನ್ಮೆಂಟ್ ಗಾಗಿ,

ಈ ಕೆಳಗಿನ ವಿವರಗಳೊಂದಿಗೆ ಹೊಸ GL Accounts – Cash ಮತ್ತು Capital ರಚಿಸಿ. ಬದಲಾವಣೆಗಳನ್ನು ಸೇವ್ ಮಾಡಿ.

07:31 ನಾವೀಗ ನಮ್ಮ ಕಂಪನಿಗೆ, ಹೊಸ GL Accounts ನೊಂದಿಗೆ Charts of Accounts ಅನ್ನು ಸೆಟ್ ಮಾಡಿದ್ದೇವೆ.
07:38 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ.
07:46 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
07:55 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
07:59 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
08:05 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Melkamiyar, Sandhya.np14