Difference between revisions of "FrontAccounting-2.4.7/C2/Banking-and-General-Ledger-in-FrontAccounting/Kannada"
Melkamiyar (Talk | contribs) (Created page with "{| border=1 ||'''Time''' || '''Narration''' |- ||00:01 || Front Accounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ...") |
Melkamiyar (Talk | contribs) |
||
Line 10: | Line 10: | ||
|- | |- | ||
||00:07 | ||00:07 | ||
− | || ಈ | + | || ಈ ಟ್ಯುಟೋರಿಯಲ್ ನಲ್ಲಿ ನಾವು |
ಜನರಲ್ ಲೆಡ್ಜರ್ ಕ್ಲಾಸುಗಳು, | ಜನರಲ್ ಲೆಡ್ಜರ್ ಕ್ಲಾಸುಗಳು, | ||
Revision as of 12:51, 23 April 2020
Time | Narration
|
00:01 | Front Accounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಕುರಿತ ಸ್ಪೋಕನ್ ಟ್ಯುಟೋರಿಯಲ್‌ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು
ಜನರಲ್ ಲೆಡ್ಜರ್ ಕ್ಲಾಸುಗಳು, |
00:13 | ಜನರಲ್ ಲೆಡ್ಜರ್ ಗ್ರೂಪ್ ಗಳು ಮತ್ತು
ಜನರಲ್ ಲೆಡ್ಜರ್ ಅಕೌಂಟ್ ಗಳ ರಚನೆಯನ್ನು ಕಲಿಯಲಿದ್ದೇವೆ. |
00:18 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
00:26 | FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. |
00:30 | ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್,
ಬುಕ್ ಕೀಪಿಂಗ್‌ನ ತತ್ವಗಳ ಜ್ಞಾನವನ್ನು ಹೊಂದಿರಬೇಕು. |
00:40 | ಮತ್ತು ನೀವು FrontAccounting ನಲ್ಲಿ ಈಗಾಗಲೇ ಒಂದು ಆರ್ಗನೈಸೇಶನ್ ಅಥವಾ ಕಂಪನಿಯನ್ನು ರೂಪಿಸಿರಬೇಕು. |
00:46 | ಇಲ್ಲದಿದ್ದಲ್ಲಿ ಸಂಬಂಧಿತ FrontAccounting ನ ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಈ ವೆಬ್‌ಸೈಟ್‌ಗೆ ಭೇಟಿ ನೀಡಿ. |
00:52 | ನೀವು FrontAccounting ಇಂಟರ್ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ. |
00:58 | ನಾವೀಗ FrontAccounting ಇಂಟರ್ಫೇಸ್ ತೆರೆಯೋಣ. |
01:01 | ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:09 | ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ. |
01:12 | admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ ವರ್ಡ್ ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:20 | FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
01:23 | Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
01:27 | Maintenance ಪ್ಯಾನೆಲ್ ನಲ್ಲಿ ಈ ಕೆಳಗಿನ ಆಯ್ಕೆಗಳನ್ನು ನಾವು ನೋಡಬಹುದು:
GL Accounts |
01:33 | GL Account Groups ಮತ್ತು
GL Account Classes |
01:38 | ನಾವು ಯಾವುದೇ ವಹಿವಾಟನ್ನು ಪ್ರಾರಂಭಿಸುವ ಮೊದಲು ನಾವು ಚಾರ್ಟ್ಸ್ ಆಫ್ ಅಕೌಂಟ್ಸ್ ಹೊಂದಿಸಿಕೊಳ್ಳಬೇಕು. |
01:43 | FrontAccounting ನಲ್ಲಿ ಚಾರ್ಟ್ಸ್ ಆಫ್ ಅಕೌಂಟ್ಸ್ ಅನ್ನು ಟೈಪ್, ಕ್ಲಾಸ್, ಗ್ರೂಪ್ ಮತ್ತು ಅಕೌಂಟ್ ನಿಂದ ನಿರೂಪಿಸಲಾಗುತ್ತದೆ. |
01:50 | ಎಲ್ಲಾ ಟ್ರಾನ್ಸಾಕ್ಷನ್ ಗಳನ್ನು ಅಕೌಂಟ್, ಗ್ರೂಪ್ ಮತ್ತು ಕ್ಲಾಸ್ ಗಳಿಗೆ ಚಾರ್ಜ್ ಮಾಡಲಾಗುತ್ತದೆ. |
01:56 | ಇವುಗಳನ್ನು, ರಿಪೋರ್ಟಿಂಗ್ ಪರ್ಪೊಸ್ ಗಳಿಗಾಗಿ ಟ್ರಾನ್ಸಾಕ್ಷನ್ ಗಳನ್ನು ಗುಂಪುಗೂಡಿಸಲು ಬಳಸಲಾಗುತ್ತದೆ. |
02:00 | FrontAccounting ನಲ್ಲಿ ಅಕೌಂಟ್ ಗ್ರೂಪ್ ಗೆ ಸಂಬಂಧಿಸಿದೆ ಮತ್ತು ಗ್ರೂಪ್ ಕ್ಲಾಸ್ ಗೆ ಸಂಬಂಧಿಸಿದೆ. |
02:06 | ಇದು ಅಕೌಂಟ್ ಗ್ರೂಪ್ ನ ಪ್ರಕಾರ ಬ್ಯಾಲನ್ಸ್ ಶೀಟ್ ಮತ್ತು ಪ್ರಾಫಿಟ್ ಅಂಡ್ ಲಾಸ್ ಅಕೌಂಟ್ ಸ್ಟೇಟ್ಮೆಂಟ್ ಗಳಲ್ಲಿ ಪ್ರತಿಫಲಿಸುತ್ತದೆ. |
02:13 | ಈಗ FrontAccounting ಇಂಟರ್ಫೇಸ್ ಗೆ ಮರಳಿ. |
02:17 | ಇಲ್ಲಿನ ಮೊದಲ ಹಂತವೆಂದರೆ ಜನರಲ್ ಲೆಡ್ಜರ್ ಅಕೌಂಟ್ ಕ್ಲಾಸ್ ಗಳನ್ನು ಹೊಂದಿಸುವುದು. |
02:22 | Maintenance ಪ್ಯಾನಲ್ ನಲ್ಲಿ GL Account Classes ಲಿಂಕ್ ಮೇಲೆ ಕ್ಲಿಕ್ ಮಾಡಿ. |
02:27 | ಇಲ್ಲಿ ಡಿಫಾಲ್ಟ್ ಆಗಿ ಕ್ಲಾಸ್ ನೇಮ್ ಮತ್ತು ಕ್ಲಾಸ್ ಟೈಪ್ ಅನ್ನು ಈ ಕೆಳಗಿನಂತೆ ನಿರೂಪಿಸಲಾಗಿರುತ್ತದೆ:
ಅಸೆಟ್ ಗಳು, ಲಯಾಬಿಲಿಟಿಗಳು, ಇನ್ಕಂ ಮತ್ತು ಎಕ್ಸ್ಪೆನ್ಸ್. |
02:38 | ಅಲ್ಲದೆ ಪ್ರತಿ ಕ್ಲಾಸ್ ಟೈಪ್ ಗೆ ಕ್ಲಾಸ್ ಐ.ಡಿ ಯನ್ನು ಹೊಂದಿಸಿರುವುದನ್ನು ನಾವು ನೋಡಬಹುದು. |
02:44 | ಅಕೌಂಟ್ ಗ್ರೂಪ್ ಹೊಂದಿಸುವ ಮೊದಲು ನಾವು ಈ ಕ್ಲಾಸ್ ಅನ್ನು ಹೊಂದಿಸಬೇಕು. |
02:49 | ಈಗ ಹೊಸ ಕ್ಲಾಸ್ ಅನ್ನು ಹೇಗೆ ಸೇರಿಸಬಹುದು ಎಂದು ನೋಡೋಣ. |
02:53 | Class ID ಫೀಲ್ಡ್ ನಲ್ಲಿ 5 ಟೈಪ್ ಮಾಡಿ. Class ID ವಿಶಿಷ್ಟ ಮೌಲ್ಯವನ್ನು ಹೊಂದಿರಬೇಕು. |
03:00 | Class Name ಫೀಲ್ಡ್ ನಲ್ಲಿ Equity ಎಂದು ಟೈಪ್ ಮಾಡಿ. |
03:04 | Class Type ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
ನಾವು ಡಿಫಾಲ್ಟ್ ಪಟ್ಟಿಯನ್ನು ನೋಡಬಹುದು: Assets, Liabilities, Equity, Income, Cost of Goods Sold ಮತ್ತು Expense |
03:21 | ಬ್ಯಾಲನ್ಸ್ ಶೀಟ್ ಪ್ರಸ್ತುತಪಡಿಸಲು FrontAccounting ಈ ಕ್ಲಾಸ್ ಟೈಪ್ ಅನ್ನು ಅನುಸರಿಸುತ್ತದೆ. |
03:26 | Class Type ಅನ್ನು Equity ಆಗಿ ಆರಿಸಿ. |
03:29 | ವಿಂಡೋವಿನ ಕೆಳಭಾಗದಲ್ಲಿ Add new ಬಟನ್ ಮೇಲೆ ಕ್ಲಿಕ್ ಮಾಡಿ. |
03:33 | 'New account class has been added' ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ. |
03:38 | ಇಲ್ಲಿ ಹೊಸ ಕ್ಲಾಸ್ “Equity” ಯನ್ನು ಮೂರನೇ ಸಾಲಿಗೆ ಸೇರಿಸಿರುವುದನ್ನು ನಾವು ಕಾಣಬಹುದು. |
03:44 | ಏಕೆಂದರೆ, ಡಿಫಾಲ್ಟ್ ಕ್ಲಾಸ್ ಟೈಪ್ ನಲ್ಲಿ, ಈಕ್ವಿಟಿಯು ಮೂರನೇ ಶ್ರೇಣಿ ಮಟ್ಟದಲ್ಲಿರುತ್ತದೆ. |
03:50 | ಹೀಗಾಗಿ, ಹೊಸ ಕ್ಲಾಸ್ ಅನ್ನು ಸೇರಿಸಿದಾಗಲೆಲ್ಲ, ಇದು ಕ್ಲಾಸ್ ಟೈಪ್ ನ ಡಿಫಾಲ್ಟ್ ಸ್ಥಾನವನ್ನು ಪಡೆದುಕೊಳ್ಳುತ್ತದೆ. |
03:56 | ಈಗ ಜಿ.ಎಲ್. ಗ್ರೂಪ್ ಗಳನ್ನು ಹೇಗೆ ಸೇರಿಸಬಹುದು ಎಂದು ನೋಡೋಣ. |
04:00 | Banking and General Ledger ಟ್ಯಾಬ್ ಗೆ ಹೋಗಿ. |
04:03 | Maintenance ಪ್ಯಾನೆಲ್ ನಲ್ಲಿ GL Account Groups ಲಿಂಕ್ ಮೇಲೆ ಕ್ಲಿಕ್ ಮಾಡಿ. |
04:08 | ನಾವೀಗ ಡಿಫಾಲ್ಟ್ Group Name ನೋಡಬಹುದು. ಇದು Class ನ ಅಡಿಯಲ್ಲಿ GL Account Groups ತೋರಿಸುತ್ತದೆ. |
04:15 | ಕ್ಲಾಸ್ನ ಪ್ರಕಾರ ಗ್ರೂಪ್ ಐ.ಡಿ ಹೊಂದಿಕೆಯಾಗಿರುವುದನ್ನು ನೀವು ನೋಡಬಹುದು. |
04:20 | ID ಫೀಲ್ಡ್ ನಲ್ಲಿ ಹೊಸ ಗ್ರೂಪ್ ಐ.ಡಿ ಯನ್ನು 12 ಆಗಿ ಟೈಪ್ ಮಾಡಿ. |
04:24 | Name ಫೀಲ್ಡ್ ನಲ್ಲಿ ನಾನು Fixed Assets ಅನ್ನು ಗ್ರೂಪ್ ನೇಮ್ ಆಗಿ ಟೈಪ್ ಮಾಡುತ್ತೇನೆ. |
04:29 | “Fixed Assets” ಗ್ರೂಪ್ ನೇಮ್ ಈಗಾಗಲೇ ಲಭ್ಯವಿರುವ ಯಾವುದೇ ಸಬ್ ಗ್ರೂಪ್ ಗೆ ಸೇರಿಲ್ಲ. |
04:35 | ಹೀಗಾಗಿ, Subgroup ಫೀಲ್ಡ್ ನಲ್ಲಿ ಫೀಲ್ಡ್ ಅನ್ನು None ಆಗಿ ಇಡಿ. |
04:40 | ಈಗ Class ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ. |
04:44 | ಚಾರ್ಟ್ಸ್ ಆಫ್ ಅಕೌಂಟ್ಸ್ ಪ್ರಕಾರ, ಕ್ಲಾಸ್ ಆಫ್ ಆಸೆಟ್ಸ್ ಅಡಿ ಫಿಕ್ಸ್ಡ್ ಆಸೆಟ್ಸ್ ಬರುತ್ತದೆ.
ಹೀಗಾಗಿ ಕ್ಲಾಸ್ ಅನ್ನು ಆಸೆಟ್ಸ್ ಆಗಿ ಆರಿಸಿ. |
04:53 | ಈ ಬದಲಾವಣೆಗಳನ್ನು ಸೇವ್ ಮಾಡಲು, ವಿಂಡೋವಿನ ಕೆಳಭಾಗದಲ್ಲಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ. |
04:59 | ನಾವು, "This account Group ID is already in use" ಎನ್ನುವ ಎರರ್ ಮೆಸೇಜ್ ಕಾಣಬಹುದು. |
05:06 | ಹೀಗಾಗಿ ಪ್ರತಿ ಗ್ರೂಪ್ ನೇಮ್ಗೆ ವಿಶಿಷ್ಟ ಕ್ಲಾಸ್ ಐ.ಡಿ ಯನ್ನು ಸೇರಿಸಬೇಕು. |
05:11 | ನಾವೀಗ ಗ್ರೂಪ್ ಐ.ಡಿ ಯನ್ನು 13ಕ್ಕೆ ಬದಲಾಯಿಸೋಣ. |
05:15 | ವಿಂಡೋವಿನ ಕೆಳಭಾಗದಲ್ಲಿರುವ Add new ಬಟನ್ ಮೇಲೆ ಕ್ಲಿಕ್ ಮಾಡಿ. |
05:19 | ಈ ಬಾರಿ ನಾವು "New account type has been added" ಎನ್ನುವ ಸಂದೇಶವನ್ನು ನೋಡಬಹುದು. |
05:25 | ಹೊಸ ಗ್ರೂಪ್ ನೇಮ್ ಅನ್ನು ಯಾದೃಚ್ಛಿಕವಾಗಿ “Assets” ಕ್ಲಾಸ್ ನ ಒಳಗೆ ಸೇರಿಸಲಾಗಿದೆ. |
05:30 | ಇದೇ ರೀತಿ ನಾವು ನಮ್ಮದೇ ಆದ ಗ್ರೂಪ್ ನೇಮ್ ಸೇರಿಸಬಹುದು. |
05:34 | ಈಗ ಜಿ.ಎಲ್ ಅಕೌಂಟ್ ಗಳನ್ನು ಹೇಗೆ ಸೇರಿಸಬಹುದು ಎಂಬುದನ್ನು ನೋಡೋಣ. |
05:38 | Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
05:42 | ನಂತರ Maintenance ಪ್ಯಾನೆಲ್ ನಲ್ಲಿ GL Accounts ಲಿಂಕ್ ಮೇಲೆ ಕ್ಲಿಕ್ ಮಾಡಿ. |
05:47 | ಇಲ್ಲಿ ಸಹ ನಾವು ವಿಶಿಷ್ಟ ಕೋಡ್ ಅನ್ನು ಟೈಪ್ ಮಾಡಬೇಕು. ಇದು ಕಡ್ಡಾಯವಾದ ಫೀಲ್ಡ್ ಆಗಿದೆ. |
05:53 | Account Code ಫೀಲ್ಡ್ ನಲ್ಲಿ ನಾವು 1100 ಅನ್ನು ಕೋಡ್ ಆಗಿ ಟೈಪ್ ಮಾಡುತ್ತೇನೆ. |
06:00 | ನೀವಿಲ್ಲಿ ನಿಮ್ಮ ಇಚ್ಛೆಯ ಯಾವುದೇ ಕೋಡ್ ಅನ್ನು ನೀಡಬಹುದು. |
06:04 | Account Name ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ.
Account Name ಅನ್ನು "Land and Building" ಎಂದು ಟೈಪ್ ಮಾಡಿ. |
06:11 | ನೀವು ನಿಮ್ಮ ಆಯ್ಕೆಯ ಯಾವುದೇ ಹೆಸರನ್ನು ನೀಡಬಹುದು. |
06:14 | Account Group ಡ್ರಾಪ್ ಡೌನ್ ಬಾಕ್ಸ್ ನಲ್ಲಿ Account Group ಅನ್ನು Fixed Assets ಆಗಿ ಆರಿಸಿ. |
06:20 | ಚಾರ್ಟ್ಸ್ ಆಫ್ ಅಕೌಂಟ್ಸ್ ಪ್ರಕಾರ Land and Building ಅಕೌಂಟ್ ನೇಮ್, ಗ್ರೂಪ್ ಫಿಕ್ಸ್ಡ್ ಆಸೆಟ್ಸ್ ಅಡಿಯಲ್ಲಿ ಬರುತ್ತದೆ. |
06:28 | ನಂತರ Account status ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
status ಅನ್ನು Active ಆಗಿ ಆರಿಸಿ. |
06:35 | ನಂತರ ವಿಂಡೋವಿನ ಕೆಳಭಾಗದಲ್ಲಿ Add Account ಬಟನ್ ಮೇಲೆ ಕ್ಲಿಕ್ ಮಾಡಿ. |
06:40 | ನಾವು "New account has been added" ಎಂಬ ಸಂದೇಶವನ್ನು ನೋಡಬಹುದು. |
06:45 | ಈಗ ಮೇಲ್ಗಡೆ New account ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
ನಾವಿಲ್ಲಿ ಹೊಸದಾಗಿ ಸೇರ್ಪಡೆ ಮಾಡಿದ ಅಕೌಂಟ್ ಅನ್ನು ನೋಡಬಹುದು. |
06:54 | ಇಲ್ಲಿ ತೋರಿಸಿರುವಂತೆ, ಪ್ರತಿ ಸಂಸ್ಥೆಯು ತನ್ನದೇ ಆದ ಅಕೌಂಟ್ ಕೋಡ್ ಗಳ ಸಮೂಹವನ್ನು ಹೊಂದಿರುತ್ತದೆ. |
07:00 | ಇದೇ ರೀತಿ, ಮೇಲಿನ ಹೆಜ್ಜೆಗಳನ್ನು ಅನುಸರಿಸಿ, ನೀವು ನಿಮ್ಮದೇ ಆದ ಜಿ.ಎಲ್ ಅಕೌಂಟ್ ಗಳನ್ನು ರಚಿಸಬಹುದು. |
07:06 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ನಾವೀಗ ಸಂಕ್ಷೇಪಿಸೋಣ. |
07:12 | ಈ ಟ್ಯುಟೋರಿಯಲ್ ನಲ್ಲಿ ನಾವು,
ಜನರಲ್ ಲೆಡ್ಜರ್ ಕ್ಲಾಸ್ ಗಳನ್ನು, ಜನರಲ್ ಲೆಡ್ಜರ್ ಗ್ರೂಪ್ ಗಳನ್ನು ಮತ್ತು ಜನರಲ್ ಲೆಡ್ಜರ್ ಅಕೌಂಟ್ ಗಳನ್ನು ರಚಿಸಲು ಕಲಿತೆವು. |
07:22 | ಅಸೈನ್ಮೆಂಟ್ ಆಗಿ,
ಈ ಕೆಳಗಿನ ವಿವರಗಳೊಂದಿಗೆ ಹೊಸ ಜಿ.ಎಲ್ ಅಕೌಂಟ್ ಗಳು – ಕ್ಯಾಶ್ ಮತ್ತು ಕ್ಯಾಪಿಟಲ್ ರಚಿಸಿ. ಬದಲಾವಣೆಗಳನ್ನು ಸೇವ್ ಮಾಡಿ. |
07:31 | ನಾವೀಗ ನಮ್ಮ ಕಂಪನಿಗೆ ಹೊಸ ಜಿ.ಎಲ್. ಅಕೌಂಟ್ ಗಳೊಂದಿಗೆ ಚಾರ್ಟ್ಸ್ ಆಫ್ ಅಕೌಂಟ್ಸ್ ನ ಸೆಟ್ ಹೊಂದಿದ್ದೇವೆ. |
07:38 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ. |
07:46 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
07:55 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
07:59 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
08:05 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- . |