Difference between revisions of "Linux-AWK/C2/User-Defined-Functions-in-awk/Kannada"

From Script | Spoken-Tutorial
Jump to: navigation, search
 
(One intermediate revision by the same user not shown)
Line 143: Line 143:
 
|-
 
|-
 
| 04:34
 
| 04:34
| ನಾನು '''average.awk''' ಫೈಲ್‌ನಲ್ಲಿ, ಕೋಡ್ ಅನ್ನು ಬರೆದಿದ್ದೇನೆ. ಅದನ್ನು  
+
| ನಾನು '''average.awk''' ಫೈಲ್‌ನಲ್ಲಿ, ಕೋಡ್ ಅನ್ನು ಬರೆದಿದ್ದೇನೆ. ಅದನ್ನು ನೋಡೋಣ.
ನೋಡೋಣ.
+
 
|-
 
|-
 
| 04:41
 
| 04:41
Line 154: Line 153:
 
|-
 
|-
 
| 04:55
 
| 04:55
| '''i''' - ಇದು ಅರೇ ಲೂಪ್ ವೇರಿಯಬಲ್ ಆಗಿದೆ.  
+
| ''''i'''' - ಇದು ಅರೇ ಲೂಪ್ ವೇರಿಯಬಲ್ ಆಗಿದೆ.  
 
|-
 
|-
 
| 04:58
 
| 04:58
Line 164: Line 163:
 
| 05:07
 
| 05:07
 
| '''ret'''- ಇದು '''avg''' ಫಂಕ್ಷನ್ ನಿಂದ ಹಿಂತಿರುಗಿಸಬೇಕಾದ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ.  
 
| '''ret'''- ಇದು '''avg''' ಫಂಕ್ಷನ್ ನಿಂದ ಹಿಂತಿರುಗಿಸಬೇಕಾದ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ.  
ಲೆಕ್ಕಮಾಡಿದ ಸರಾಸರಿಯನ್ನು '''ret''' (ಆರ್ ಇ ಟಿ) ಸ್ಟೋರ್ ಮಾಡುತ್ತದೆ.
+
ಲೆಕ್ಕಮಾಡಿದ ಸರಾಸರಿಯನ್ನು '''ret''' (ಆರ್ ಇ ಟಿ) ಸ್ಟೋರ್ ಮಾಡುತ್ತದೆ.
 
|-
 
|-
 
| 05:17
 
| 05:17
| '''i ''' ಗೆ ಮುನ್ನ ಇರುವ ಈ ಹೆಚ್ಚಿನ ಸ್ಪೇಸ್, '''i, sum, n''' ಮತ್ತು '''ret''' ಗಳು ಲೋಕಲ್ ವೇರಿಯೇಬಲ್ ಗಳೆಂದು ಸೂಚಿಸುತ್ತದೆ.
+
| ''''i' ''' ಗೆ ಮುನ್ನ ಇರುವ ಈ ಹೆಚ್ಚಿನ ಸ್ಪೇಸ್, '''i, sum, n''' ಮತ್ತು '''ret''' ಗಳು ಲೋಕಲ್ ವೇರಿಯೇಬಲ್ ಗಳೆಂದು ಸೂಚಿಸುತ್ತದೆ.
 
|-
 
|-
 
| 05:27
 
| 05:27
Line 239: Line 238:
 
| 07:45
 
| 07:45
 
| ಒಂದು ಅಸೈನ್ಮೆಂಟ್-
 
| ಒಂದು ಅಸೈನ್ಮೆಂಟ್-
'''transpose of a 2D matrix''' ಅನ್ನು ಕ್ರಿಯೇಟ್ ಮಾಡಲು, ಒಂದು ಫಂಕ್ಷನ್ ಅನ್ನು ಬರೆಯಿರಿ.
+
'''transpose of a 2D matrix''' ಅನ್ನು ಕ್ರಿಯೇಟ್ ಮಾಡಲು, ಒಂದು ಫಂಕ್ಷನ್ ಅನ್ನು ಬರೆಯಿರಿ.
 
|-
 
|-
 
| 07:52
 
| 07:52

Latest revision as of 14:28, 25 July 2019

Time
Narration
00:01 User-defined functions in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು –

'ಫಂಕ್ಷನ್' ವ್ಯಾಖ್ಯಾನದ ಸಿಂಟ್ಯಾಕ್ಸ್,

'ಫಂಕ್ಷನ್ ಕಾಲ್' ಹಾಗೂ

Return ಸ್ಟೇಟ್ಮೆಂಟ್ ಇವುಗಳ ಬಗ್ಗೆ ಕಲಿಯುವೆವು.

00:17 ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು.
00:21 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ

gedit ಟೆಕ್ಸ್ಟ್-ಎಡಿಟರ್ 3.20.1 ಇವುಗಳನ್ನು ಬಳಸುತ್ತಿದ್ದೇನೆ.

00:34 ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು.
00:38 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಈ ವೆಬ್‌ಸೈಟ್‌ನಲ್ಲಿಯ ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿರಬೇಕು.
00:45 ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು.
00:52 ಇಲ್ಲದಿದ್ದರೆ, ನಮ್ಮ ವೆಬ್‌ಸೈಟ್‌ನಲ್ಲಿಯ ಸಂಬಂಧಿತ ಟ್ಯುಟೋರಿಯಲ್ ಗಳನ್ನು ದಯವಿಟ್ಟು ನೋಡಿ.
00:58 ಇಲ್ಲಿ ಬಳಸಲಾದ ಫೈಲ್‌ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್‌ನಲ್ಲಿ ಲಭ್ಯವಿರುತ್ತವೆ.

ದಯವಿಟ್ಟು ಅವುಗಳನ್ನು ಡೌನ್‌ಲೋಡ್ ಮಾಡಿ extract ಮಾಡಿಕೊಳ್ಳಿ.

01:08 ಈಗ ನಾವು, 'ಯೂಸರ್ ಡಿಫೈನ್ಡ್ ಫಂಕ್ಷನ್' ಗಳ (user defined functions) ಬಗ್ಗೆ ಕಲಿಯೋಣ.

function ನ ಸಿಂಟ್ಯಾಕ್ಸ್ ಹೀಗಿದೆ

01:16 ಮತ್ತು, ಸಿಂಟ್ಯಾಕ್ಸ್ ಸ್ವಯಂ ವಿವರಣಾತ್ಮಕವಾಗಿದೆ.
01:20 ಇಲ್ಲಿ, function ಎಂಬ ಕೀವರ್ಡ್ ಕಡ್ಡಾಯವಾಗಿದೆ.
01:24 ಒಂದು ಫಂಕ್ಷನ್ ಅನ್ನು ಕಾಲ್ ಮಾಡಲು, ಫಂಕ್ಷನ್ ನ ಹೆಸರನ್ನು ಬರೆದು, ನಂತರ ಆವರಣದಲ್ಲಿ (parentheses) ಆರ್ಗ್ಯುಮೆಂಟ್ ಗಳನ್ನು ಬರೆಯಿರಿ.
01:31 ಗಮನಿಸಿ: 'ಫಂಕ್ಷನ್' ನ ಹೆಸರು ಮತ್ತು 'ಆರ್ಗ್ಯುಮೆಂಟ್‌'ನ ತೆರೆದ ಆವರಣದ ನಡುವೆ 'ಸ್ಪೇಸ್' ಇರಬಾರದು.
01:39 ನಾವು ಈಗ ಒಂದು ಉದಾಹರಣೆಯನ್ನು ನೋಡುವೆವು.
01:42 ನಮ್ಮ awkdemo.txt ಫೈಲ್ ನಲ್ಲಿ, ೬ ನೆಯ ಫೀಲ್ಡ್ stipend ಎಂದು ಇದೆ.
01:47 'ಸ್ಟೈಪೆಂಡ್', ಸೊನ್ನೆ ಆಗಿದೆ ಅಥವಾ ನಾಲ್ಕು ಅಂಕೆಗಳನ್ನು ಒಳಗೊಂಡಿದೆ ಎಂದು ಭಾವಿಸಿ.
01:54 ಈಗ, 'ಸ್ಟೈಪೆಂಡ್' 8900 ಇದೆ ಎನ್ನೋಣ.

ಇದನ್ನು ಪದಗಳಲ್ಲಿ 8 thousand 9 hundred ಎಂದು ಪ್ರಿಂಟ್ ಮಾಡಿ.

02:03 ಸ್ಟೈಪೆಂಡ್ 0 (ಸೊನ್ನೆ) ಆಗಿದ್ದರೆ, “zero” ಎಂದು ಪ್ರಿಂಟ್ ಮಾಡಿ.
02:08 user_function.awk ಎಂಬ ಫೈಲ್ ನಲ್ಲಿ ನಾನು ಈಗಾಗಲೇ ಕೋಡ್ ಅನ್ನು ಬರೆದಿದ್ದೇನೆ.
02:15 ಇಲ್ಲಿ, ನಾನು changeit ( ಚೇಂಜ್ ಇಟ್) ಎಂಬ 'ಫಂಕ್ಷನ್' ಅನ್ನು ಬರೆದಿದ್ದೇನೆ. ಇದು 'argval' ( ಎ ಆರ್ ಜಿ ವ್ಯಾಲ್) ಎಂಬ ಒಂದೇ ಆರ್ಗ್ಯುಮೆಂಟ್ ಅನ್ನು ಹೊಂದಿದೆ.
02:23 ಇಲ್ಲಿ, argval ಮೂಲತಃ ಸ್ಟೈಪೆಂಡ್ ಎಂಬ ನಮ್ಮ ಆರನೇ ಫೀಲ್ಡ್ ಆಗಿದೆ.
02:29 'ಫಂಕ್ಷನ್' ನ ಒಳಗೆ, ಮೊದಲನೆಯ ಕೋಡ್ argval ಸೊನ್ನೆ ಆಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸುತ್ತದೆ.
02:36 ಹೌದು ಎಂದಾದರೆ, ಅದು “Zero” ಎಂದು ಪ್ರಿಂಟ್ ಮಾಡುತ್ತದೆ.
02:40 ಇಲ್ಲದಿದ್ದರೆ, ಕೋಡ್‌ನ else ಭಾಗವನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ.
02:46 else ಭಾಗದಲ್ಲಿ, ಮೊದಲು substring ಫಂಕ್ಷನ್ ಅನ್ನು ಬಳಸಿಕೊಂಡು, ಪ್ರತಿಯೊಂದು ಅಂಕಿಯನ್ನು ಒಂದೊಂದಾಗಿ extract ಮಾಡುತ್ತೇವೆ.
02:54 ಮತ್ತು, ವ್ಯಾಲ್ಯೂಗಳನ್ನು a ಎಂಬ ಆರೇಯಲ್ಲಿ, ವಿಭಿನ್ನ ಇಂಡೆಕ್ಸ್ ಗಳಲ್ಲಿ ಸ್ಟೋರ್ ಮಾಡುತ್ತೇವೆ.
03:00 ಉದಾಹರಣೆಗೆ- a[1] ಎಡಗಡೆಯಿಂದ ಮೊದಲನೆಯ ಅಂಕಿಯನ್ನು ಅಥವಾ ಸಾವಿರದ ಸ್ಥಳದ ಅಂಕಿಯನ್ನು ಕೊಡುತ್ತದೆ.
03:08 ಇಲ್ಲಿ ಕೇವಲ ನಾಲ್ಕು ಅಂಕಿಗಳು ಇರುವುದರಿಂದ, ನಾನು ನಾಲ್ಕು ಇಂಡೆಕ್ಸ್ ಗಳನ್ನು ಬಳಸಿದ್ದೇನೆ.
03:13 ನಂತರ, ಎಲಿಮೆಂಟ್ ಗಳು ಸೊನ್ನೆಗೆ ಸಮನಾಗಿಲ್ಲವೇ ಎಂದು ನಾವು ಪರೀಕ್ಷಿಸುತ್ತೇವೆ.

ಮತ್ತು ಅವುಗಳನ್ನು ಸರಿಯಾದ ಕ್ರಮದಲ್ಲಿ ಪ್ರಿಂಟ್ ಮಾಡುತ್ತೇವೆ.

03:21 ಕೊನೆಗೆ, ಔಟ್‌ಪುಟ್ ನಲ್ಲಿ ಹೊಸ 'ಲೈನ್ ಬ್ರೆಕ್' ಅನ್ನು ಒದಗಿಸಲು, ನಾವು 'ಬ್ಯಾಕ್-ಸ್ಲ್ಯಾಶ್ ಎನ್' ಕ್ಯಾರೆಕ್ಟರ್ ಅನ್ನು ಪ್ರಿಂಟ್ ಮಾಡುತ್ತೇವೆ.
03:28 ನಂತರ, awk ಸ್ಕ್ರಿಪ್ಟ್ ನ ಒಳಗೆ, ನಾವು 'ಡಾಲರ್ 2' ಅನ್ನು ಪ್ರಿಂಟ್ ಮಾಡಿದ್ದೇವೆ. ಅದು ಎರಡನೇ ಫೀಲ್ಡ್ ಎಂದರೆ name ಆಗಿದೆ.
03:35 ನಂತರ, 'ಡಾಲರ್ 6' ಪ್ಯಾರಾಮೀಟರ್ ನೊಂದಿಗೆ, changeit ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ. 'ಡಾಲರ್ 6', stipend ಆಗಿದೆ.

ಫೈಲ್ ಅನ್ನು ನಾವು ಎಕ್ಸೀಕ್ಯೂಟ್ ಮಾಡೋಣ.

03:43 'ಟರ್ಮಿನಲ್' ಗೆ ಬದಲಾಯಿಸಿ.

ನಂತರ, cd ಕಮಾಂಡ್ ಅನ್ನು ಬಳಸಿ, ನೀವು ಫೈಲ್ ಅನ್ನು ಡೌನ್‌ಲೋಡ್ ಹಾಗೂ extract ಮಾಡಿರುವ ಫೋಲ್ಡರ್‌ಗೆ ಹೋಗಿ.

03:53 ಈಗ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
04:00 ನಿರೀಕ್ಷಿಸಿದ ಔಟ್ಪುಟ್ ಅನ್ನು ನಾವು ಪಡೆಯುತ್ತೇವೆ.
04:03 'ಯೂಸರ್ ಡಿಫೈನ್ಡ್ ಫಂಕ್ಷನ್', return ಸ್ಟೇಟ್ಮೆಂಟ್ ಅನ್ನು ಸಹ ಒಳಗೊಂಡಿರಬಹುದು.
04:08 ಈ ಸ್ಟೇಟ್ಮೆಂಟ್, awk ಪ್ರೋಗ್ರಾಂ ನ ಕಾಲ್ ಮಾಡುವ ಭಾಗಕ್ಕೆ, ಕಂಟ್ರೋಲ್ ಅನ್ನು ಹಿಂದಿರುಗಿಸುತ್ತದೆ.
04:13 ಇನ್ನುಳಿದ awk ಪ್ರೋಗ್ರಾಂನ ಬಳಕೆಗಾಗಿ, ವ್ಯಾಲ್ಯೂವನ್ನು ಹಿಂತಿರುಗಿಸಲು ಸಹ ಇದನ್ನು ಬಳಸಬಹುದು.
04:20 ಇದು ಹೀಗೆ ಕಾಣುತ್ತದೆ: return space expression.

ಇಲ್ಲಿ, ಎಕ್ಸ್ಪ್ರೆಶನ್ (expression) ಭಾಗವು ಐಚ್ಛಿಕವಾಗಿದೆ.

04:29 'ಅರೇ' ಯ ಸರಾಸರಿಯನ್ನು ಹಿಂದಿರುಗಿಸಲು, ಒಂದು ಫಂಕ್ಷನ್ ಅನ್ನು ಬರೆಯೋಣ.
04:34 ನಾನು average.awk ಫೈಲ್‌ನಲ್ಲಿ, ಕೋಡ್ ಅನ್ನು ಬರೆದಿದ್ದೇನೆ. ಅದನ್ನು ನೋಡೋಣ.
04:41 ಈ ಉದ್ದೇಶಕ್ಕಾಗಿ, ನಾವು avg (ಎ ವಿ ಜಿ) ಎಂಬ ಫಂಕ್ಷನ್ ಅನ್ನು ವ್ಯಾಖ್ಯಾನಿಸಿದ್ದೇವೆ.
04:46 ಇದು ಐದು ಪ್ಯಾರಾಮೀಟರ್ ಗಳನ್ನು ಹೊಂದಿದೆ.

arr (ಎ ಆರ್ ಆರ್) ಎಂಬ 'ಅರೇ' ಗಾಗಿ ಸರಾಸರಿಯನ್ನು ಕಂಡುಹಿಡಿಯಬೇಕಾಗಿದೆ.

04:55 'i' - ಇದು ಅರೇ ಲೂಪ್ ವೇರಿಯಬಲ್ ಆಗಿದೆ.
04:58 sum - ಇದು ಎಲ್ಲಾ 'ಅರೇ ಎಲಿಮೆಂಟ್' ಗಳ ಸಂಕಲನವಾಗಿದೆ.
05:03 n ಆರೇ ಯಲ್ಲಿನ ಎಲಿಮೆಂಟ್ ಗಳ ಸಂಖ್ಯೆಯನ್ನು ಸೂಚಿಸುತ್ತದೆ.
05:07 ret- ಇದು avg ಫಂಕ್ಷನ್ ನಿಂದ ಹಿಂತಿರುಗಿಸಬೇಕಾದ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ.

ಲೆಕ್ಕಮಾಡಿದ ಸರಾಸರಿಯನ್ನು ret (ಆರ್ ಇ ಟಿ) ಸ್ಟೋರ್ ಮಾಡುತ್ತದೆ.

05:17 'i' ಗೆ ಮುನ್ನ ಇರುವ ಈ ಹೆಚ್ಚಿನ ಸ್ಪೇಸ್, i, sum, n ಮತ್ತು ret ಗಳು ಲೋಕಲ್ ವೇರಿಯೇಬಲ್ ಗಳೆಂದು ಸೂಚಿಸುತ್ತದೆ.
05:27 ವಾಸ್ತವವಾಗಿ ಲೋಕಲ್ ವೇರಿಯಬಲ್ ಗಳು, ಆರ್ಗ್ಯೂಮೆಂಟ್ ಆಗುವದಿಲ್ಲ.
05:32 ಫಂಕ್ಷನ್ ಗಳನ್ನು ವ್ಯಾಖ್ಯಾನಿಸುವಾಗ, ನೀವು ಈ ರೂಢಿಯನ್ನು ಅನುಸರಿಸಬೇಕು.
05:36 for ಲೂಪ್‌ ನ ಒಳಗೆ, ನಾವು ಆರೇ ಎಲಿಮೆಂಟ್ ಗಳ ಒಟ್ಟು ಸಂಖ್ಯೆ ಮತ್ತು ಸಂಕಲನವನ್ನು ಲೆಕ್ಕ ಮಾಡಿದ್ದೇವೆ.
05:43 ಮೊತ್ತವನ್ನು ಎಲಿಮೆಂಟ್ ಗಳ ಒಟ್ಟು ಸಂಖ್ಯೆಯಿಂದ ಭಾಗಿಸುವ ಮೂಲಕ ನಾವು ಸರಾಸರಿಯನ್ನು ಕಂಡುಹಿಡಿದಿದ್ದೇವೆ. ಮತ್ತು, ಆ ವ್ಯಾಲ್ಯೂವನ್ನು ವೇರಿಯಬಲ್ ret ನಲ್ಲಿ ಸ್ಟೋರ್ ಮಾಡಿದ್ದೇವೆ.
05:54 ಈ ಫಂಕ್ಷನ್ avg(), ವೇರಿಯೇಬಲ್ ret ಯ ವ್ಯಾಲ್ಯೂವನ್ನು ಹಿಂದಿರುಗಿಸುತ್ತದೆ.
06:01 BEGIN ವಿಭಾಗದ ಒಳಗೆ, ನಾವು nums ಎಂಬ ಅರೇ ಯನ್ನು 5 ವಿಭಿನ್ನ ಸಂಖ್ಯೆಗಳೊಂದಿಗೆ ವ್ಯಾಖ್ಯಾನಿಸಿದ್ದೇವೆ.
06:07 ಪ್ರಿಂಟ್ ಸ್ಟೇಟ್ಮೆಂಟ್ ನಲ್ಲಿ, ಆರೇ ಹೆಸರನ್ನು 'ಆರ್ಗ್ಯುಮೆಂಟ್' ಮಾಡಿ, ಫಂಕ್ಷನ್ avg() ಅನ್ನು ನಾವು ಕಾಲ್ ಮಾಡುತ್ತೇವೆ.
06:14 ಆದ್ದರಿಂದ, ನೀವು ಲೋಕಲ್ ವೇರಿಯೆಬಲ್ ಗಳನ್ನು ಆರ್ಗ್ಯುಮೆಂಟ್‌ ಗಳೆಂದು ಪಾಸ್ ಮಾಡಬೇಕಾಗಿಲ್ಲ.
06:20 'ಟರ್ಮಿನಲ್' ಗೆ ಬದಲಾಯಿಸಿ. ನಾನು ಟರ್ಮಿನಲ್ ಅನ್ನು ಖಾಲಿ ಮಾಡುತ್ತೇನೆ.
06:26 ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ:

awk space hyphen f space average dot awk. Enter ಅನ್ನು ಒತ್ತಿ.

06:37 ನಾವು 3.6 ಅನ್ನು ಔಟ್ಪುಟ್ ಎಂದು ಪಡೆಯುತ್ತೇವೆ.

ಕ್ಯಾಲ್ಕುಲೇಟರ್ ಬಳಸಿ ನೀವು ಅದನ್ನು ಪ್ರಮಾಣಿಸಬಹುದು.

06:44 ಇನ್ನೊಂದು ಉದಾಹರಣೆಯನ್ನು ನೋಡೋಣ.
06:47 'ಸ್ಟ್ರಿಂಗ್' ಅನ್ನು ರಿವರ್ಸ್ ಮಾಡಲು, ಕೋಡ್ ಅನ್ನು ಬರೆದಿದ್ದೇನೆ. ಅದನ್ನು reverse.awk ಎಂದು ಹೆಸರಿಸಿದ್ದೇನೆ.

ಸ್ಟ್ರಿಂಗ್ ಅನ್ನು ರಿವರ್ಸ್ ಮಾಡಲು, 'ರಿಕರ್ಸಿವ್ ಫಂಕ್ಷನ್' ಅನ್ನು ಬಳಸಲಾಗುತ್ತದೆ.

06:57 ಇಲ್ಲಿ ವೀಡಿಯೊವನ್ನು ನಿಲ್ಲಿಸಿ ಮತ್ತು ಕಂಟ್ರೋಲ್ ಹೇಗೆ ಮುಂದೆ ಹೋಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಕೋಡ್ ಅನ್ನು ನೋಡಿ.

ನಂತರ, ಔಟ್ಪುಟ್ ಅನ್ನು ನೋಡಲು ಅದನ್ನು ಎಕ್ಸೀಕ್ಯೂಟ್ ಮಾಡಿ.

07:07 ಒಂದು ಅಸೈನ್ಮೆಂಟ್ ಇದೆ - awkdemo.txt ಫೈಲ್‌ನಲ್ಲಿ, Roll number ಫೀಲ್ಡ್ ಅನ್ನು ರಿವರ್ಸ್ ಮಾಡಲು rev() ಫಂಕ್ಷನ್ ಅನ್ನು ಬಳಸಿ.
07:16 ಉದಾಹರಣೆಗೆ, ರೋಲ್ ನಂಬರ್ A001 ಆಗಿದ್ದರೆ, ಔಟ್‌ಪುಟ್ 100A ಆಗಿರಬೇಕು.
07:24 ಇದಕ್ಕಾಗಿ ಕೋಡ್ ಅನ್ನು, Code Files ಲಿಂಕ್‌ನಲ್ಲಿ, reverse_roll.awk ಎಂದು ಒದಗಿಸಲಾಗಿದೆ.
07:31 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

07:36 ಈ ಟ್ಯುಟೋರಿಯಲ್ ನಲ್ಲಿ ನಾವು -

'ಫಂಕ್ಷನ್' ವ್ಯಾಖ್ಯಾನದ ಸಿಂಟ್ಯಾಕ್ಸ್,

07:41 'ಫಂಕ್ಷನ್ ಕಾಲ್' ಹಾಗೂ

Return ಸ್ಟೇಟ್ಮೆಂಟ್, ಇವುಗಳ ಬಗ್ಗೆ ಕಲಿತಿದ್ದೇವೆ.

07:45 ಒಂದು ಅಸೈನ್ಮೆಂಟ್-

transpose of a 2D matrix ಅನ್ನು ಕ್ರಿಯೇಟ್ ಮಾಡಲು, ಒಂದು ಫಂಕ್ಷನ್ ಅನ್ನು ಬರೆಯಿರಿ.

07:52 ಒಂದು ಆರೇಯಿಂದ minimum value element ಅನ್ನು ರಿಟರ್ನ್ ಮಾಡಲು ಒಂದು ಫಂಕ್ಷನ್ ಅನ್ನು ಬರೆಯಿರಿ.
07:58 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
08:06 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, “ಸ್ಪೋಕನ್ ಟ್ಯುಟೋರಿಯಲ್” ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:16 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
08:20 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಂಗೆ ಬರೆಯಿರಿ.
08:24 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

08:36 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14