Linux-AWK/C2/User-Defined-Functions-in-awk/Kannada
|
|
00:01 | User-defined functions in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು –
'ಫಂಕ್ಷನ್' ವ್ಯಾಖ್ಯಾನದ ಸಿಂಟ್ಯಾಕ್ಸ್, 'ಫಂಕ್ಷನ್ ಕಾಲ್' ಹಾಗೂ Return ಸ್ಟೇಟ್ಮೆಂಟ್ ಇವುಗಳ ಬಗ್ಗೆ ಕಲಿಯುವೆವು. |
00:17 | ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು. |
00:21 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ gedit ಟೆಕ್ಸ್ಟ್-ಎಡಿಟರ್ 3.20.1 ಇವುಗಳನ್ನು ಬಳಸುತ್ತಿದ್ದೇನೆ. |
00:34 | ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು. |
00:38 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಈ ವೆಬ್ಸೈಟ್ನಲ್ಲಿಯ ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿರಬೇಕು. |
00:45 | ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು. |
00:52 | ಇಲ್ಲದಿದ್ದರೆ, ನಮ್ಮ ವೆಬ್ಸೈಟ್ನಲ್ಲಿಯ ಸಂಬಂಧಿತ ಟ್ಯುಟೋರಿಯಲ್ ಗಳನ್ನು ದಯವಿಟ್ಟು ನೋಡಿ. |
00:58 | ಇಲ್ಲಿ ಬಳಸಲಾದ ಫೈಲ್ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್ನಲ್ಲಿ ಲಭ್ಯವಿರುತ್ತವೆ.
ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ extract ಮಾಡಿಕೊಳ್ಳಿ. |
01:08 | ಈಗ ನಾವು, 'ಯೂಸರ್ ಡಿಫೈನ್ಡ್ ಫಂಕ್ಷನ್' ಗಳ (user defined functions) ಬಗ್ಗೆ ಕಲಿಯೋಣ.
function ನ ಸಿಂಟ್ಯಾಕ್ಸ್ ಹೀಗಿದೆ |
01:16 | ಮತ್ತು, ಸಿಂಟ್ಯಾಕ್ಸ್ ಸ್ವಯಂ ವಿವರಣಾತ್ಮಕವಾಗಿದೆ. |
01:20 | ಇಲ್ಲಿ, function ಎಂಬ ಕೀವರ್ಡ್ ಕಡ್ಡಾಯವಾಗಿದೆ. |
01:24 | ಒಂದು ಫಂಕ್ಷನ್ ಅನ್ನು ಕಾಲ್ ಮಾಡಲು, ಫಂಕ್ಷನ್ ನ ಹೆಸರನ್ನು ಬರೆದು, ನಂತರ ಆವರಣದಲ್ಲಿ (parentheses) ಆರ್ಗ್ಯುಮೆಂಟ್ ಗಳನ್ನು ಬರೆಯಿರಿ. |
01:31 | ಗಮನಿಸಿ: 'ಫಂಕ್ಷನ್' ನ ಹೆಸರು ಮತ್ತು 'ಆರ್ಗ್ಯುಮೆಂಟ್'ನ ತೆರೆದ ಆವರಣದ ನಡುವೆ 'ಸ್ಪೇಸ್' ಇರಬಾರದು. |
01:39 | ನಾವು ಈಗ ಒಂದು ಉದಾಹರಣೆಯನ್ನು ನೋಡುವೆವು. |
01:42 | ನಮ್ಮ awkdemo.txt ಫೈಲ್ ನಲ್ಲಿ, ೬ ನೆಯ ಫೀಲ್ಡ್ stipend ಎಂದು ಇದೆ. |
01:47 | 'ಸ್ಟೈಪೆಂಡ್', ಸೊನ್ನೆ ಆಗಿದೆ ಅಥವಾ ನಾಲ್ಕು ಅಂಕೆಗಳನ್ನು ಒಳಗೊಂಡಿದೆ ಎಂದು ಭಾವಿಸಿ. |
01:54 | ಈಗ, 'ಸ್ಟೈಪೆಂಡ್' 8900 ಇದೆ ಎನ್ನೋಣ.
ಇದನ್ನು ಪದಗಳಲ್ಲಿ 8 thousand 9 hundred ಎಂದು ಪ್ರಿಂಟ್ ಮಾಡಿ. |
02:03 | ಸ್ಟೈಪೆಂಡ್ 0 (ಸೊನ್ನೆ) ಆಗಿದ್ದರೆ, “zero” ಎಂದು ಪ್ರಿಂಟ್ ಮಾಡಿ. |
02:08 | user_function.awk ಎಂಬ ಫೈಲ್ ನಲ್ಲಿ ನಾನು ಈಗಾಗಲೇ ಕೋಡ್ ಅನ್ನು ಬರೆದಿದ್ದೇನೆ. |
02:15 | ಇಲ್ಲಿ, ನಾನು changeit ( ಚೇಂಜ್ ಇಟ್) ಎಂಬ 'ಫಂಕ್ಷನ್' ಅನ್ನು ಬರೆದಿದ್ದೇನೆ. ಇದು 'argval' ( ಎ ಆರ್ ಜಿ ವ್ಯಾಲ್) ಎಂಬ ಒಂದೇ ಆರ್ಗ್ಯುಮೆಂಟ್ ಅನ್ನು ಹೊಂದಿದೆ. |
02:23 | ಇಲ್ಲಿ, argval ಮೂಲತಃ ಸ್ಟೈಪೆಂಡ್ ಎಂಬ ನಮ್ಮ ಆರನೇ ಫೀಲ್ಡ್ ಆಗಿದೆ. |
02:29 | 'ಫಂಕ್ಷನ್' ನ ಒಳಗೆ, ಮೊದಲನೆಯ ಕೋಡ್ argval ಸೊನ್ನೆ ಆಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸುತ್ತದೆ. |
02:36 | ಹೌದು ಎಂದಾದರೆ, ಅದು “Zero” ಎಂದು ಪ್ರಿಂಟ್ ಮಾಡುತ್ತದೆ. |
02:40 | ಇಲ್ಲದಿದ್ದರೆ, ಕೋಡ್ನ else ಭಾಗವನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ. |
02:46 | else ಭಾಗದಲ್ಲಿ, ಮೊದಲು substring ಫಂಕ್ಷನ್ ಅನ್ನು ಬಳಸಿಕೊಂಡು, ಪ್ರತಿಯೊಂದು ಅಂಕಿಯನ್ನು ಒಂದೊಂದಾಗಿ extract ಮಾಡುತ್ತೇವೆ. |
02:54 | ಮತ್ತು, ವ್ಯಾಲ್ಯೂಗಳನ್ನು a ಎಂಬ ಆರೇಯಲ್ಲಿ, ವಿಭಿನ್ನ ಇಂಡೆಕ್ಸ್ ಗಳಲ್ಲಿ ಸ್ಟೋರ್ ಮಾಡುತ್ತೇವೆ. |
03:00 | ಉದಾಹರಣೆಗೆ- a[1] ಎಡಗಡೆಯಿಂದ ಮೊದಲನೆಯ ಅಂಕಿಯನ್ನು ಅಥವಾ ಸಾವಿರದ ಸ್ಥಳದ ಅಂಕಿಯನ್ನು ಕೊಡುತ್ತದೆ. |
03:08 | ಇಲ್ಲಿ ಕೇವಲ ನಾಲ್ಕು ಅಂಕಿಗಳು ಇರುವುದರಿಂದ, ನಾನು ನಾಲ್ಕು ಇಂಡೆಕ್ಸ್ ಗಳನ್ನು ಬಳಸಿದ್ದೇನೆ. |
03:13 | ನಂತರ, ಎಲಿಮೆಂಟ್ ಗಳು ಸೊನ್ನೆಗೆ ಸಮನಾಗಿಲ್ಲವೇ ಎಂದು ನಾವು ಪರೀಕ್ಷಿಸುತ್ತೇವೆ.
ಮತ್ತು ಅವುಗಳನ್ನು ಸರಿಯಾದ ಕ್ರಮದಲ್ಲಿ ಪ್ರಿಂಟ್ ಮಾಡುತ್ತೇವೆ. |
03:21 | ಕೊನೆಗೆ, ಔಟ್ಪುಟ್ ನಲ್ಲಿ ಹೊಸ 'ಲೈನ್ ಬ್ರೆಕ್' ಅನ್ನು ಒದಗಿಸಲು, ನಾವು 'ಬ್ಯಾಕ್-ಸ್ಲ್ಯಾಶ್ ಎನ್' ಕ್ಯಾರೆಕ್ಟರ್ ಅನ್ನು ಪ್ರಿಂಟ್ ಮಾಡುತ್ತೇವೆ. |
03:28 | ನಂತರ, awk ಸ್ಕ್ರಿಪ್ಟ್ ನ ಒಳಗೆ, ನಾವು 'ಡಾಲರ್ 2' ಅನ್ನು ಪ್ರಿಂಟ್ ಮಾಡಿದ್ದೇವೆ. ಅದು ಎರಡನೇ ಫೀಲ್ಡ್ ಎಂದರೆ name ಆಗಿದೆ. |
03:35 | ನಂತರ, 'ಡಾಲರ್ 6' ಪ್ಯಾರಾಮೀಟರ್ ನೊಂದಿಗೆ, changeit ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ. 'ಡಾಲರ್ 6', stipend ಆಗಿದೆ.
ಫೈಲ್ ಅನ್ನು ನಾವು ಎಕ್ಸೀಕ್ಯೂಟ್ ಮಾಡೋಣ. |
03:43 | 'ಟರ್ಮಿನಲ್' ಗೆ ಬದಲಾಯಿಸಿ.
ನಂತರ, cd ಕಮಾಂಡ್ ಅನ್ನು ಬಳಸಿ, ನೀವು ಫೈಲ್ ಅನ್ನು ಡೌನ್ಲೋಡ್ ಹಾಗೂ extract ಮಾಡಿರುವ ಫೋಲ್ಡರ್ಗೆ ಹೋಗಿ. |
03:53 | ಈಗ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
04:00 | ನಿರೀಕ್ಷಿಸಿದ ಔಟ್ಪುಟ್ ಅನ್ನು ನಾವು ಪಡೆಯುತ್ತೇವೆ. |
04:03 | 'ಯೂಸರ್ ಡಿಫೈನ್ಡ್ ಫಂಕ್ಷನ್', return ಸ್ಟೇಟ್ಮೆಂಟ್ ಅನ್ನು ಸಹ ಒಳಗೊಂಡಿರಬಹುದು. |
04:08 | ಈ ಸ್ಟೇಟ್ಮೆಂಟ್, awk ಪ್ರೋಗ್ರಾಂ ನ ಕಾಲ್ ಮಾಡುವ ಭಾಗಕ್ಕೆ, ಕಂಟ್ರೋಲ್ ಅನ್ನು ಹಿಂದಿರುಗಿಸುತ್ತದೆ. |
04:13 | ಇನ್ನುಳಿದ awk ಪ್ರೋಗ್ರಾಂನ ಬಳಕೆಗಾಗಿ, ವ್ಯಾಲ್ಯೂವನ್ನು ಹಿಂತಿರುಗಿಸಲು ಸಹ ಇದನ್ನು ಬಳಸಬಹುದು. |
04:20 | ಇದು ಹೀಗೆ ಕಾಣುತ್ತದೆ: return space expression.
ಇಲ್ಲಿ, ಎಕ್ಸ್ಪ್ರೆಶನ್ (expression) ಭಾಗವು ಐಚ್ಛಿಕವಾಗಿದೆ. |
04:29 | 'ಅರೇ' ಯ ಸರಾಸರಿಯನ್ನು ಹಿಂದಿರುಗಿಸಲು, ಒಂದು ಫಂಕ್ಷನ್ ಅನ್ನು ಬರೆಯೋಣ. |
04:34 | ನಾನು average.awk ಫೈಲ್ನಲ್ಲಿ, ಕೋಡ್ ಅನ್ನು ಬರೆದಿದ್ದೇನೆ. ಅದನ್ನು ನೋಡೋಣ. |
04:41 | ಈ ಉದ್ದೇಶಕ್ಕಾಗಿ, ನಾವು avg (ಎ ವಿ ಜಿ) ಎಂಬ ಫಂಕ್ಷನ್ ಅನ್ನು ವ್ಯಾಖ್ಯಾನಿಸಿದ್ದೇವೆ. |
04:46 | ಇದು ಐದು ಪ್ಯಾರಾಮೀಟರ್ ಗಳನ್ನು ಹೊಂದಿದೆ.
arr (ಎ ಆರ್ ಆರ್) ಎಂಬ 'ಅರೇ' ಗಾಗಿ ಸರಾಸರಿಯನ್ನು ಕಂಡುಹಿಡಿಯಬೇಕಾಗಿದೆ. |
04:55 | 'i' - ಇದು ಅರೇ ಲೂಪ್ ವೇರಿಯಬಲ್ ಆಗಿದೆ. |
04:58 | sum - ಇದು ಎಲ್ಲಾ 'ಅರೇ ಎಲಿಮೆಂಟ್' ಗಳ ಸಂಕಲನವಾಗಿದೆ. |
05:03 | n ಆರೇ ಯಲ್ಲಿನ ಎಲಿಮೆಂಟ್ ಗಳ ಸಂಖ್ಯೆಯನ್ನು ಸೂಚಿಸುತ್ತದೆ. |
05:07 | ret- ಇದು avg ಫಂಕ್ಷನ್ ನಿಂದ ಹಿಂತಿರುಗಿಸಬೇಕಾದ ವೇರಿಯೇಬಲ್ ಅನ್ನು ಪ್ರತಿನಿಧಿಸುತ್ತದೆ.
ಲೆಕ್ಕಮಾಡಿದ ಸರಾಸರಿಯನ್ನು ret (ಆರ್ ಇ ಟಿ) ಸ್ಟೋರ್ ಮಾಡುತ್ತದೆ. |
05:17 | 'i' ಗೆ ಮುನ್ನ ಇರುವ ಈ ಹೆಚ್ಚಿನ ಸ್ಪೇಸ್, i, sum, n ಮತ್ತು ret ಗಳು ಲೋಕಲ್ ವೇರಿಯೇಬಲ್ ಗಳೆಂದು ಸೂಚಿಸುತ್ತದೆ. |
05:27 | ವಾಸ್ತವವಾಗಿ ಲೋಕಲ್ ವೇರಿಯಬಲ್ ಗಳು, ಆರ್ಗ್ಯೂಮೆಂಟ್ ಆಗುವದಿಲ್ಲ. |
05:32 | ಫಂಕ್ಷನ್ ಗಳನ್ನು ವ್ಯಾಖ್ಯಾನಿಸುವಾಗ, ನೀವು ಈ ರೂಢಿಯನ್ನು ಅನುಸರಿಸಬೇಕು. |
05:36 | for ಲೂಪ್ ನ ಒಳಗೆ, ನಾವು ಆರೇ ಎಲಿಮೆಂಟ್ ಗಳ ಒಟ್ಟು ಸಂಖ್ಯೆ ಮತ್ತು ಸಂಕಲನವನ್ನು ಲೆಕ್ಕ ಮಾಡಿದ್ದೇವೆ. |
05:43 | ಮೊತ್ತವನ್ನು ಎಲಿಮೆಂಟ್ ಗಳ ಒಟ್ಟು ಸಂಖ್ಯೆಯಿಂದ ಭಾಗಿಸುವ ಮೂಲಕ ನಾವು ಸರಾಸರಿಯನ್ನು ಕಂಡುಹಿಡಿದಿದ್ದೇವೆ. ಮತ್ತು, ಆ ವ್ಯಾಲ್ಯೂವನ್ನು ವೇರಿಯಬಲ್ ret ನಲ್ಲಿ ಸ್ಟೋರ್ ಮಾಡಿದ್ದೇವೆ. |
05:54 | ಈ ಫಂಕ್ಷನ್ avg(), ವೇರಿಯೇಬಲ್ ret ಯ ವ್ಯಾಲ್ಯೂವನ್ನು ಹಿಂದಿರುಗಿಸುತ್ತದೆ. |
06:01 | BEGIN ವಿಭಾಗದ ಒಳಗೆ, ನಾವು nums ಎಂಬ ಅರೇ ಯನ್ನು 5 ವಿಭಿನ್ನ ಸಂಖ್ಯೆಗಳೊಂದಿಗೆ ವ್ಯಾಖ್ಯಾನಿಸಿದ್ದೇವೆ. |
06:07 | ಪ್ರಿಂಟ್ ಸ್ಟೇಟ್ಮೆಂಟ್ ನಲ್ಲಿ, ಆರೇ ಹೆಸರನ್ನು 'ಆರ್ಗ್ಯುಮೆಂಟ್' ಮಾಡಿ, ಫಂಕ್ಷನ್ avg() ಅನ್ನು ನಾವು ಕಾಲ್ ಮಾಡುತ್ತೇವೆ. |
06:14 | ಆದ್ದರಿಂದ, ನೀವು ಲೋಕಲ್ ವೇರಿಯೆಬಲ್ ಗಳನ್ನು ಆರ್ಗ್ಯುಮೆಂಟ್ ಗಳೆಂದು ಪಾಸ್ ಮಾಡಬೇಕಾಗಿಲ್ಲ. |
06:20 | 'ಟರ್ಮಿನಲ್' ಗೆ ಬದಲಾಯಿಸಿ. ನಾನು ಟರ್ಮಿನಲ್ ಅನ್ನು ಖಾಲಿ ಮಾಡುತ್ತೇನೆ. |
06:26 | ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ:
awk space hyphen f space average dot awk. Enter ಅನ್ನು ಒತ್ತಿ. |
06:37 | ನಾವು 3.6 ಅನ್ನು ಔಟ್ಪುಟ್ ಎಂದು ಪಡೆಯುತ್ತೇವೆ.
ಕ್ಯಾಲ್ಕುಲೇಟರ್ ಬಳಸಿ ನೀವು ಅದನ್ನು ಪ್ರಮಾಣಿಸಬಹುದು. |
06:44 | ಇನ್ನೊಂದು ಉದಾಹರಣೆಯನ್ನು ನೋಡೋಣ. |
06:47 | 'ಸ್ಟ್ರಿಂಗ್' ಅನ್ನು ರಿವರ್ಸ್ ಮಾಡಲು, ಕೋಡ್ ಅನ್ನು ಬರೆದಿದ್ದೇನೆ. ಅದನ್ನು reverse.awk ಎಂದು ಹೆಸರಿಸಿದ್ದೇನೆ.
ಸ್ಟ್ರಿಂಗ್ ಅನ್ನು ರಿವರ್ಸ್ ಮಾಡಲು, 'ರಿಕರ್ಸಿವ್ ಫಂಕ್ಷನ್' ಅನ್ನು ಬಳಸಲಾಗುತ್ತದೆ. |
06:57 | ಇಲ್ಲಿ ವೀಡಿಯೊವನ್ನು ನಿಲ್ಲಿಸಿ ಮತ್ತು ಕಂಟ್ರೋಲ್ ಹೇಗೆ ಮುಂದೆ ಹೋಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಕೋಡ್ ಅನ್ನು ನೋಡಿ.
ನಂತರ, ಔಟ್ಪುಟ್ ಅನ್ನು ನೋಡಲು ಅದನ್ನು ಎಕ್ಸೀಕ್ಯೂಟ್ ಮಾಡಿ. |
07:07 | ಒಂದು ಅಸೈನ್ಮೆಂಟ್ ಇದೆ - awkdemo.txt ಫೈಲ್ನಲ್ಲಿ, Roll number ಫೀಲ್ಡ್ ಅನ್ನು ರಿವರ್ಸ್ ಮಾಡಲು rev() ಫಂಕ್ಷನ್ ಅನ್ನು ಬಳಸಿ. |
07:16 | ಉದಾಹರಣೆಗೆ, ರೋಲ್ ನಂಬರ್ A001 ಆಗಿದ್ದರೆ, ಔಟ್ಪುಟ್ 100A ಆಗಿರಬೇಕು. |
07:24 | ಇದಕ್ಕಾಗಿ ಕೋಡ್ ಅನ್ನು, Code Files ಲಿಂಕ್ನಲ್ಲಿ, reverse_roll.awk ಎಂದು ಒದಗಿಸಲಾಗಿದೆ. |
07:31 | ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
07:36 | ಈ ಟ್ಯುಟೋರಿಯಲ್ ನಲ್ಲಿ ನಾವು -
'ಫಂಕ್ಷನ್' ವ್ಯಾಖ್ಯಾನದ ಸಿಂಟ್ಯಾಕ್ಸ್, |
07:41 | 'ಫಂಕ್ಷನ್ ಕಾಲ್' ಹಾಗೂ
Return ಸ್ಟೇಟ್ಮೆಂಟ್, ಇವುಗಳ ಬಗ್ಗೆ ಕಲಿತಿದ್ದೇವೆ. |
07:45 | ಒಂದು ಅಸೈನ್ಮೆಂಟ್-
transpose of a 2D matrix ಅನ್ನು ಕ್ರಿಯೇಟ್ ಮಾಡಲು, ಒಂದು ಫಂಕ್ಷನ್ ಅನ್ನು ಬರೆಯಿರಿ. |
07:52 | ಒಂದು ಆರೇಯಿಂದ minimum value element ಅನ್ನು ರಿಟರ್ನ್ ಮಾಡಲು ಒಂದು ಫಂಕ್ಷನ್ ಅನ್ನು ಬರೆಯಿರಿ. |
07:58 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
08:06 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, “ಸ್ಪೋಕನ್ ಟ್ಯುಟೋರಿಯಲ್” ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:16 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
08:20 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಂಗೆ ಬರೆಯಿರಿ. |
08:24 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
08:36 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |