Difference between revisions of "Moodle-Learning-Management-System/C2/Blocks-in-Admin-Dashboard/Kannada"

From Script | Spoken-Tutorial
Jump to: navigation, search
(Created page with "{| border=1 | '''''Time''''' | '''''Narration''''' |- |00:01 | '''Blocks in Admin's Dashboard''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನ...")
 
Line 102: Line 102:
 
| 03:46
 
| 03:46
 
| '''Configure HTML block''' 3 ವಿಭಾಗಗಳನ್ನು ಹೊಂದಿದೆ: 'ಬ್ಲಾಕ್' ಗಳು
 
| '''Configure HTML block''' 3 ವಿಭಾಗಗಳನ್ನು ಹೊಂದಿದೆ: 'ಬ್ಲಾಕ್' ಗಳು
'''Block settings''',
+
'''Block settings''',
'''Where this block appears ''' ಮತ್ತು  
+
 
'''On this page'''  
+
'''Where this block appears ''' ಮತ್ತು
 +
 +
'''On this page'''.
 
|-  
 
|-  
 
| 03:57
 
| 03:57

Revision as of 11:34, 15 June 2019

Time Narration
00:01 Blocks in Admin's Dashboard ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು:

block ಗಳನ್ನು ಸೇರಿಸುವುದು ಹಾಗೂ ತೆಗೆದುಹಾಕುವುದು, Front page ಅನ್ನು ಹೇಗೆ ಸೆಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.

00:18 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:26 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:35 Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ.
00:41 ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು.

ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.

00:54 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು Admin’s dashboard ಬಗ್ಗೆ ತಿಳಿದಿರಬೇಕು.

ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.

01:08 ಬ್ರೌಸರ್ ಗೆ ಬದಲಾಯಿಸಿ ಮತ್ತು ನಿಮ್ಮ moodle ಸೈಟ್ ಅನ್ನು ತೆರೆಯಿರಿ.

XAMPP ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.

01:17 ನಿಮ್ಮ admin username ಮತ್ತು ಪಾಸ್ವರ್ಡ್ ಗಳೊಂದಿಗೆ ಲಾಗ್-ಇನ್ ಮಾಡಿ.
01:22 ಈಗ ನಾವು ‘Admin’s ಡ್ಯಾಶ್-ಬೋರ್ಡ್’ ನಲ್ಲಿದ್ದೇವೆ.
01:26 ನೆನಪಿಸಿಕೊಳ್ಳಿ: 'ಬ್ಲಾಕ್' ಗಳು ನಿರ್ದಿಷ್ಟ ಉದ್ದೇಶ ಅಥವಾ ಮಾಹಿತಿಯನ್ನು ಪೂರೈಸುತ್ತವೆ ಮತ್ತು 'ಮೂಡಲ್' ನ ಎಲ್ಲಾ ಪೇಜ್ ಗಳಲ್ಲಿ ಕಂಡುಬರುತ್ತವೆ.
01:38 ಈಗ, 'ಮೂಡಲ್ ಬ್ಲಾಕ್' ಗಳೊಂದಿಗೆ ಹೇಗೆ ಕೆಲಸ ಮಾಡಬಹುದೆಂದು ತಿಳಿಯೋಣ.
01:44 ಬಳಸಲಾದ 'ಥೀಮ್' ಅನ್ನು ಆಧರಿಸಿ, 'ಬ್ಲಾಕ್' ಗಳು ಬಲಬದಿಯಲ್ಲಿ ಅಥವಾ ಎರಡೂ ಬದಿಗಳಲ್ಲಿ ಇರಬಹುದು.
01:52 ಲಾಗ್-ಇನ್ ಮಾಡಿದಾಗಲೆಲ್ಲ ಜನರು ನೋಡಲಿ ಎಂದು ನಾವು ಬಯಸುವ ಮಾಹಿತಿಯನ್ನು 'ಬ್ಲಾಕ್' ಗಳು ಒಳಗೊಂಡಿವೆ.
01:58 'ಮೂಡಲ್' ನಲ್ಲಿ ಅನೇಕ ವಿಧದ 'ಬ್ಲಾಕ್' ಗಳು ಲಭ್ಯವಿರುತ್ತವೆ. ನಮ್ಮ ಆದ್ಯತೆಗಳ ಪ್ರಕಾರ ಅವುಗಳನ್ನು ಸುಲಭವಾಗಿ ಸರಿಸಬಹುದು ಅಥವಾ ಹೊಂದಿಸಬಹುದು.
02:09 ನಾವು ಈಗ ನಮ್ಮ 'ಡ್ಯಾಶ್-ಬೋರ್ಡ್' ಗೆ ಕೆಲವು 'ಬ್ಲಾಕ್' ಗಳನ್ನು ಸೇರಿಸುತ್ತೇವೆ.
02:14 ಪೇಜ್ ನ ಎಡಭಾಗದಲ್ಲಿರುವ 'ನ್ಯಾವಿಗೇಷನ್ ಮೆನ್ಯು' ಮೇಲೆ ಕ್ಲಿಕ್ ಮಾಡಿ.
02:19 'ಡ್ಯಾಶ್-ಬೋರ್ಡ್' ನ ಬಲಭಾಗದಲ್ಲಿರುವ Customise this page ಬಟನ್ ಮೇಲೆ ಕ್ಲಿಕ್ ಮಾಡಿ.
02:26 Add a block ಎಂಬ ಒಂದು ಹೊಸ ಮೆನ್ಯು ಐಟಂ ಈಗ ಕಾಣುತ್ತಿದೆ ಎಂದು ಗಮನಿಸಿ.

Add a block ಮೇಲೆ ಕ್ಲಿಕ್ ಮಾಡಿ.

02:35 ಒಂದು ಹೊಸ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.

ನಾವು ಸೇರಿಸಲು ಬಯಸುವ 'ಬ್ಲಾಕ್'ನ ವಿಧವನ್ನು ಆಯ್ಕೆ ಮಾಡಬೇಕಾಗಿದೆ.

02:43 ಉದಾಹರಣೆಗೆ, Messages ಮೇಲೆ ಕ್ಲಿಕ್ ಮಾಡಿ.

Messages ಬ್ಲಾಕ್, ಈಗ 'ಡ್ಯಾಶ್-ಬೋರ್ಡ್' ನಲ್ಲಿ ಕಾಣುತ್ತಿರುವುದನ್ನು ನೀವು ನೋಡಬಹುದು.

02:53 ಸಧ್ಯಕ್ಕೆ ಇಲ್ಲಿ ಯಾವುದೇ ಮೆಸೇಜ್ ಗಳಿಲ್ಲ.
02:56 ಡೀಫಾಲ್ಟ್ ಆಗಿ, ಎಲ್ಲಾ ಹೊಸ 'ಬ್ಲಾಕ್' ಗಳು ಬಲತುದಿಯ ಕಾಲಂಗೆ ಸೇರಿಸಲ್ಪಡುತ್ತವೆ.
03:02 ನಾವು ಇನ್ನೊಂದು 'ಬ್ಲಾಕ್' ಅನ್ನು ಸೇರಿಸೋಣ.

ಎಡಭಾಗದಲ್ಲಿರುವ Add a block ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.

03:09 menu types ನ ಲಿಸ್ಟ್ ನಿಂದ, HTML ಅನ್ನು ಅಯ್ಕೆಮಾಡಿ.

HTML ಬ್ಲಾಕ್ ನಲ್ಲಿ ರೂಢಿಯ HTML ಯನ್ನು ಬರೆಯಬಹುದು.

03:19 ಇದನ್ನು ಬಳಸಿ, ನಾವು Library widgets, News feeds, Twitter, Facebook ಗಳಂತಹ widgets ಗಳನ್ನು ಒಳಗೆ ಸೇರಿಸಬಹುದು.
03:30 ಈಗ Messages ಬ್ಲಾಕ್ ನ ಕೆಳಗೆ, NEW HTML BLOCK ಅನ್ನು ಸೇರಿಸಿರುವುದನ್ನು ಗಮನಿಸಿ.
03:37 HTML 'ಬ್ಲಾಕ್' ನಲ್ಲಿ, ಗಿಯರ್ (gear) ಐಕಾನ್ ಮೇಲೆ ಕ್ಲಿಕ್ ಮಾಡಿ.

ನಂತರ Configure (NEW HTML BLOCK) block ಮೇಲೆ ಕ್ಲಿಕ್ ಮಾಡಿ.

03:46 Configure HTML block 3 ವಿಭಾಗಗಳನ್ನು ಹೊಂದಿದೆ: 'ಬ್ಲಾಕ್' ಗಳು

Block settings,

Where this block appears ಮತ್ತು

On this page.

03:57 ಡೀಫಾಲ್ಟ್ ಆಗಿ, ಮೊದಲನೆಯ ವಿಭಾಗವನ್ನು ವಿಸ್ತರಿಸಲಾಗಿದೆ.
04:02 ಎಲ್ಲ ವಿಭಾಗಗಳನ್ನು ವಿಸ್ತರಿಸಲು, Expand all ಮೇಲೆ ಕ್ಲಿಕ್ ಮಾಡಿ.
04:07 block title ನಲ್ಲಿ, ನಾವು “Things to do” ಎಂದು ಟೈಪ್ ಮಾಡೋಣ.
04:12 Content, ಜಾಗದಲ್ಲಿ ಈ admin user ಗಾಗಿ ನಾವು ಕೆಲವು tasks ಅನ್ನು ಸೇರಿಸೋಣ.
04:19 ಇವುಗಳನ್ನು ಟೈಪ್ ಮಾಡಿ: Create a new course,

Create new users, Add users to the course.

04:30 ಇದೊಂದು HTML ಎಡಿಟರ್ ಆಗಿದ್ದು, ಇದನ್ನು ಯಾವುದೇ 'ವರ್ಡ್ ಪ್ರೊಸೆಸರ್' (word processor) ಅಥವಾ ಎಡಿಟರ್ ನಂತೆ ಬಳಸಬಹುದು.
04:39 Where this block appears ನ ಅಡಿಯಲ್ಲಿ, ಆಯ್ಕೆಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
04:45 Default region ನಲ್ಲಿ, Content ಅನ್ನು ಆಯ್ಕೆಮಾಡಿ.

Default weight ನಲ್ಲಿ, -10 ಅನ್ನು (ಮೈನಸ್ ೧೦) ಆಯ್ಕೆಮಾಡಿ.

04:54 'ಬ್ಲಾಕ್' ನ weight ಕಡಿಮೆ ಇದ್ದಷ್ಟು, ಅದು ಆ “region” ನಲ್ಲಿ ಮೇಲಕ್ಕೆ ಕಾಣಿಸಿಕೊಳ್ಳುವುದು.

-10 ಅತಿ ಕಡಿಮೆ ಇದೆ.

05:03 -10 ಅನ್ನು ಆಯ್ಕೆಮಾಡಿ, ಇದು content region ನ ಮೇಲ್ಭಾಗದಲ್ಲಿದೆ ಎಂದು ನಾನು ಖಚಿತಪಡಿಸುತ್ತಿದ್ದೇನೆ.
05:12 ಈ 'ಬ್ಲಾಕ್', Admin’s dashboard ನಲ್ಲಿ ಕಾಣಿಸಿಕೊಳ್ಳುತ್ತದೆ.
05:17 ಈಗ “On this page” ವಿಭಾಗವು ಬರುತ್ತದೆ.

ಇಲ್ಲಿ, ಈ 'ಬ್ಲಾಕ್' ಅನ್ನು ಸೇರಿಸಲಾದ ಪೇಜ್ ಗಾಗಿ, ನೀವು ಕಾನ್ಫಿಗರೇಶನ್ ಅನ್ನು ವಿವರಿಸಬಹುದು.

05:28 ಈ ಸಂದರ್ಭದಲ್ಲಿ, ಇದು ‘ಡ್ಯಾಶ್-ಬೋರ್ಡ್’ ಆಗಿದೆ.

ಈ ಕಾನ್ಫಿಗರೇಶನ್, ಮೇಲಿನ ವಿಭಾಗದಲ್ಲಿ ವಿವರಿಸಲಾದ ಡೀಫಾಲ್ಟ್ ಕಾನ್ಫಿಗರೇಶನ್ ಅನ್ನು ಅತಿಕ್ರಮಿಸುತ್ತದೆ.

05:40 ಅದು Where this block appears ಎಂಬ ವಿಭಾಗವಾಗಿದೆ.

ಈ ವಿಭಾಗದಲ್ಲಿ ನಾವು, Region ನಲ್ಲಿ Content ಅನ್ನು ಮತ್ತು Weight ನಲ್ಲಿ -10 ಅನ್ನು ಆಯ್ಕೆಮಾಡೋಣ.

05:53 ಗಮನಿಸಿ: 'ಬ್ಲಾಕ್' ನ ವಿಧವನ್ನು ಆಧರಿಸಿ, ಕಾನ್ಫಿಗರೇಶನ್ (ಸಂರಚನೆ) ಸೆಟ್ಟಿಂಗ್ ಗಳು ಬದಲಾಗುತ್ತವೆ.
06:01 ಬದಲಾವಣೆಗಳನ್ನು ಸೇವ್ ಮಾಡಲು, Save Changes ಮೇಲೆ ಕ್ಲಿಕ್ ಮಾಡಿ ಮತ್ತು ‘ಡ್ಯಾಶ್-ಬೋರ್ಡ್’ ಗೆ ಹಿಂದಿರುಗಿ.
06:07 ಹೊಸ HTML ಬ್ಲಾಕ್, Things to do ಎಂಬ ಶೀರ್ಷಿಕೆಯೊಂದಿಗೆ ಈಗ ಕಾಣುತ್ತಿರುವುದನ್ನು ನೋಡಿ. ಮತ್ತು content ಜಾಗದಲ್ಲಿ, ಇದು ಎಲ್ಲಕ್ಕಿಂತ ಮೇಲೆ ಇರುವ 'ಬ್ಲಾಕ್' ಆಗಿದೆ.
06:18 Move ಐಕಾನ್ ಬಳಸಿ, ಬ್ಲಾಕ್ ಅನ್ನು ಎಳೆಯುವುದರ ಮೂಲಕ ನಾವು ಅದರ ಸ್ಥಾನವನ್ನು ಬದಲಾಯಿಸಬಹುದು.
06:25 ಡ್ರ್ಯಾಗ್ & ಡ್ರಾಪ್ ಮೂಲಕ ನಾವು Things to do ಬ್ಲಾಕ್ ಅನ್ನು, Course Overview ಬ್ಲಾಕ್ ನ ಕೆಳಗೆ ಸರಿಸೋಣ.
06:34 ನಾವು ಕೆಲವು ನಿಮಿಷಗಳ ಹಿಂದೆ ಸೆಟ್ ಮಾಡಿದ ಕಾನ್ಫಿಗರೇಶನ್ ಅನ್ನು, ಇದು ಹೇಗೆ ಬದಲಾಯಿಸುತ್ತದೆ ಎಂದು ನೋಡೋಣ.
06:40 ಕ್ರಮವಾಗಿ ಗಿಯರ್ (gear) ಐಕಾನ್ ---> Configure Things to do ಬ್ಲಾಕ್ ---> , Expand All ಗಳ ಮೇಲೆ ಕ್ಲಿಕ್ ಮಾಡಿ.
06:49 “On this page” ವಿಭಾಗವನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ. weight -2 ಗೆ ಬದಲಾಯಿಸಿದೆ.

ಆದಾಗ್ಯೂ, Default weight ಹಾಗೇ ಉಳಿಯುತ್ತದೆ.

07:03 Dashboard ಗೆ ಹಿಂದಿರುಗಲು, Cancel ಮೇಲೆ ಕ್ಲಿಕ್ ಮಾಡಿ.
07:07 ನಮಗೆ ಈ Learning Plans ಬ್ಲಾಕ್ ಬೇಕಾಗಿಲ್ಲ. ಆದ್ದರಿಂದ ನಾವು ಇದನ್ನು ಡಿಲೀಟ್ ಮಾಡೋಣ.

ಗಿಯರ್ (gear) ಐಕಾನ್ ಮೇಲೆ, ನಂತರ Delete Learning plans block ಮೇಲೆ ಕ್ಲಿಕ್ ಮಾಡಿ.

07:19 Confirm ಪಾಪ್-ಅಪ್ ವಿಂಡೋ ಕಾಣಿಸುತ್ತದೆ ಮತ್ತು ಡಿಲೀಟ್ ಮಾಡುವುದನ್ನು ಖಚಿತಪಡಿಸಲು ಸೂಚಿಸುತ್ತದೆ.

ಇಲ್ಲಿ Yes ಬಟನ್ ಮೇಲೆ ಕ್ಲಿಕ್ ಮಾಡಿ.

07:29 Learning Plans ಬ್ಲಾಕ್ ಇನ್ನುಮುಂದೆ ಲಭ್ಯವಿಲ್ಲ ಎಂದು ಗಮನಿಸಿ. ಆಮೇಲೆ ಅಗತ್ಯವಿದ್ದರೆ, ನಾವು ಯಾವಾಗಲೂ ಈ 'ಬ್ಲಾಕ್' ಅನ್ನು ಸೇರಿಸಬಹುದು.
07:40 ಈಗ ನಮ್ಮ Moodle ಇನ್ಸ್ಟಾಲ್ಲೇಶನ್ ನ ಮುಖಪುಟವನ್ನು (ಫ್ರಂಟ್ ಪೇಜ್) ಕಸ್ಟಮೈಜ್ ಮಾಡೋಣ.
07:46 ಎಡಭಾಗದ ಮೆನ್ಯೂನಲ್ಲಿ, Site Administration ಲಿಂಕ್ ಮೇಲೆ ಕ್ಲಿಕ್ ಮಾಡಿ.
07:51 Front page ವಿಭಾಗದಲ್ಲಿ, Front Page settings ಅನ್ನು ಗುರುತಿಸಲು ಕೆಳಗೆ ಸ್ಕ್ರೋಲ್ ಮಾಡಿ. ಅದರ ಮೇಲೆ ಕ್ಲಿಕ್ ಮಾಡಿ.
08:00 Full Site Name ಅನ್ನು Digital India Learning Management System ಎಂದು ಬದಲಾಯಿಸೋಣ.
08:08 ಪ್ರತಿಯೊಂದು ಪೇಜ್ ನ ಮೇಲ್ತುದಿಯಲ್ಲಿ, breadcrumbs ನ ಮೇಲೆ, ಈ ಟೆಕ್ಸ್ಟ್ ಕಾಣಿಸುತ್ತದೆ.
08:15 ಪೇಜ್ ನ ಶೀರ್ಷಿಕೆಯಲ್ಲಿ, Short name ಟೆಕ್ಸ್ಟ್ ಕಾಣಿಸುತ್ತದೆ.
08:20 ಗಮನಿಸಿ: ಈ ಪೇಜ್ ನ ಟೈಟಲ್ Digital India LMS ಆಗಿದೆ. ಆನಂತರ, ಈಗ ನಾವು ಇರುವ ಪೇಜ್ ನ ಹೆಸರು ಇದೆ.
08:29 ನಾವು ಲೋಗೊ ಗಾಗಿ ಯಾವುದೇ ಇಮೇಜ್ ಅನ್ನು ಒದಗಿಸದಿದ್ದರೆ, Short name ಅನ್ನು ಲೋಗೊ-ಟೆಕ್ಸ್ಟ್ ನ ಹಾಗೆ ಸಹ ಬಳಸಲಾಗುತ್ತದೆ. ನಾವು ಅದನ್ನು ಹಾಗೇ ಬಿಟ್ಟುಬಿಡುತ್ತೇವೆ.
08:40 Front page ಐಟಂ ಗಳಿಗಾಗಿ ಡ್ರಾಪ್-ಡೌನ್ ಗಳನ್ನು ನೋಡಲು, ಕೆಳಗೆ ಸ್ಕ್ರೋಲ್ ಮಾಡಿ.

ಇವುಗಳು front page ನಲ್ಲಿ ತೋರಿಸಬಹುದಾದ ಐಟಂಗಳ ಪಟ್ಟಿ ಆಗಿವೆ.

08:50 ಎಲ್ಲ ಸಂದರ್ಶಕರು, ಅವರು ಲಾಗಿನ್ ಆದರೂ ಅಥವಾ ಆಗದಿದ್ದರೂ, ಈ ಐಟಂಗಳನ್ನು ನೋಡಬಹುದು.
08:57 ಇದರ ಕ್ರಮವನ್ನು ಕಾಂಬಿನೇಶನ್-ಬಾಕ್ಸ್ ನಿರ್ಧರಿಸುತ್ತದೆ. ನಾವು ಇದನ್ನು ಹಾಗೇ ಬಿಟ್ಟುಬಿಡುತ್ತೇವೆ.
09:05 ಆದ್ದರಿಂದ, ಎಲ್ಲಾ ಯೂಸರ್ ಗಳು ಕೋರ್ಸುಗಳ ಪಟ್ಟಿಯನ್ನು (ಲಭ್ಯವಿದ್ದಲ್ಲಿ) ನೋಡಲು ಸಾಧ್ಯವಾಗುತ್ತದೆ ಮತ್ತು ಬೇರೆ ಏನನ್ನೂ ಅಲ್ಲ.
09:13 ಮುಂದಿನದು Front page items when logged in ಆಗಿದೆ.

ಇದು, ಲಾಗ್-ಇನ್ ಮಾಡಿದ ಯೂಸರ್ ಗಳಿಗೆ ತೋರಿಸಬಹುದಾದ ಐಟಂಗಳ ಪಟ್ಟಿ ಆಗಿದೆ.

09:24 ಮೊದಲನೆಯ ಡ್ರಾಪ್-ಡೌನ್ ನಲ್ಲಿ, ನಾವು Enrolled courses ಅನ್ನು ಆಯ್ಕೆಮಾಡೋಣ.
09:29 ನಾವು ಉಳಿದ ಆಯ್ಕೆಗಳನ್ನು ಅವುಗಳ ಡೀಫಾಲ್ಟ್ ವ್ಯಾಲ್ಯೂಗಳೊಂದಿಗೆ ಬಿಡುತ್ತೇವೆ.
09:35 ಕೆಳಗೆ ಸ್ಕ್ರೋಲ್ ಮಾಡಿ ಮತ್ತು Save Changes ಮೇಲೆ ಕ್ಲಿಕ್ ಮಾಡಿ.
09:40 ಸಂಕ್ಷಿಪ್ತವಾಗಿ,
09:43 ಈ ಟ್ಯುಟೋರಿಯಲ್ ನಲ್ಲಿ ನಾವು:

“Things to do” ಎಂಬ HTML ಬ್ಲಾಕ್ ಅನ್ನು ಸೇರಿಸಲು ಕಲಿತಿದ್ದೇವೆ ಮತ್ತು ಪೇಜ್ ನಲ್ಲಿ ಅದು ಎಲ್ಲಿ ಕಾಣಬೇಕೆಂದು ಸೂಚಿಸಿದ್ದೇವೆ.

09:54 ಗೆಸ್ಟ್ ಮತ್ತು ಲಾಗ್-ಇನ್ ಮಾಡಿದ ಯೂಸರ್ ಗಳಿಗಾಗಿ, 'ಫ್ರಂಟ್ ಪೇಜ್' ಅನ್ನು ಸೆಟ್-ಅಪ್ ಸಹ ಮಾಡಿದ್ದೇವೆ.
10:00 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:

Private files ಬ್ಲಾಕ್ ಅನ್ನು ಡಿಲೀಟ್ ಮಾಡಿ. Code files ಲಿಂಕ್ ನಲ್ಲಿ ಕೊಟ್ಟಿರುವ ಸಲಹೆಗಳನ್ನು ಬಳಸಿ, ಒಂದು ಹೊಸ HTML ಬ್ಲಾಕ್ ಅನ್ನು ಸೇರಿಸಿ.

10:14 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
10:23 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
10:33 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
10:37 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
10:51 ಈ ಸ್ಕ್ರಿಪ್ಟ್, ಪ್ರಿಯಾಂಕಾ ಅವರ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Sandhya.np14