Moodle-Learning-Management-System/C2/Blocks-in-Admin-Dashboard/Kannada
Time | Narration |
00:01 | Blocks in Admin's Dashboard ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು:
block ಗಳನ್ನು ಸೇರಿಸುವುದು ಹಾಗೂ ತೆಗೆದುಹಾಕುವುದು, Front page ಅನ್ನು ಹೇಗೆ ಸೆಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:26 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, |
00:35 | Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ. |
00:41 | ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು.
ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:54 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು Admin’s dashboard ಬಗ್ಗೆ ತಿಳಿದಿರಬೇಕು.
ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:08 | ಬ್ರೌಸರ್ ಗೆ ಬದಲಾಯಿಸಿ ಮತ್ತು ನಿಮ್ಮ moodle ಸೈಟ್ ಅನ್ನು ತೆರೆಯಿರಿ.
XAMPP ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. |
01:17 | ನಿಮ್ಮ admin username ಮತ್ತು ಪಾಸ್ವರ್ಡ್ ಗಳೊಂದಿಗೆ ಲಾಗ್-ಇನ್ ಮಾಡಿ. |
01:22 | ಈಗ ನಾವು ‘Admin’s ಡ್ಯಾಶ್-ಬೋರ್ಡ್’ ನಲ್ಲಿದ್ದೇವೆ. |
01:26 | ನೆನಪಿಸಿಕೊಳ್ಳಿ: 'ಬ್ಲಾಕ್' ಗಳು ನಿರ್ದಿಷ್ಟ ಉದ್ದೇಶ ಅಥವಾ ಮಾಹಿತಿಯನ್ನು ಪೂರೈಸುತ್ತವೆ ಮತ್ತು 'ಮೂಡಲ್' ನ ಎಲ್ಲಾ ಪೇಜ್ ಗಳಲ್ಲಿ ಕಂಡುಬರುತ್ತವೆ. |
01:38 | ಈಗ, 'ಮೂಡಲ್ ಬ್ಲಾಕ್' ಗಳೊಂದಿಗೆ ಹೇಗೆ ಕೆಲಸ ಮಾಡಬಹುದೆಂದು ತಿಳಿಯೋಣ. |
01:44 | ಬಳಸಲಾದ 'ಥೀಮ್' ಅನ್ನು ಆಧರಿಸಿ, 'ಬ್ಲಾಕ್' ಗಳು ಬಲಬದಿಯಲ್ಲಿ ಅಥವಾ ಎರಡೂ ಬದಿಗಳಲ್ಲಿ ಇರಬಹುದು. |
01:52 | ಲಾಗ್-ಇನ್ ಮಾಡಿದಾಗಲೆಲ್ಲ ಜನರು ನೋಡಲಿ ಎಂದು ನಾವು ಬಯಸುವ ಮಾಹಿತಿಯನ್ನು 'ಬ್ಲಾಕ್' ಗಳು ಒಳಗೊಂಡಿವೆ. |
01:58 | 'ಮೂಡಲ್' ನಲ್ಲಿ ಅನೇಕ ವಿಧದ 'ಬ್ಲಾಕ್' ಗಳು ಲಭ್ಯವಿರುತ್ತವೆ. ನಮ್ಮ ಆದ್ಯತೆಗಳ ಪ್ರಕಾರ ಅವುಗಳನ್ನು ಸುಲಭವಾಗಿ ಸರಿಸಬಹುದು ಅಥವಾ ಹೊಂದಿಸಬಹುದು. |
02:09 | ನಾವು ಈಗ ನಮ್ಮ 'ಡ್ಯಾಶ್-ಬೋರ್ಡ್' ಗೆ ಕೆಲವು 'ಬ್ಲಾಕ್' ಗಳನ್ನು ಸೇರಿಸುತ್ತೇವೆ. |
02:14 | ಪೇಜ್ ನ ಎಡಭಾಗದಲ್ಲಿರುವ 'ನ್ಯಾವಿಗೇಷನ್ ಮೆನ್ಯು' ಮೇಲೆ ಕ್ಲಿಕ್ ಮಾಡಿ. |
02:19 | 'ಡ್ಯಾಶ್-ಬೋರ್ಡ್' ನ ಬಲಭಾಗದಲ್ಲಿರುವ Customise this page ಬಟನ್ ಮೇಲೆ ಕ್ಲಿಕ್ ಮಾಡಿ. |
02:26 | Add a block ಎಂಬ ಒಂದು ಹೊಸ ಮೆನ್ಯು ಐಟಂ ಈಗ ಕಾಣುತ್ತಿದೆ ಎಂದು ಗಮನಿಸಿ.
Add a block ಮೇಲೆ ಕ್ಲಿಕ್ ಮಾಡಿ. |
02:35 | ಒಂದು ಹೊಸ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
ನಾವು ಸೇರಿಸಲು ಬಯಸುವ 'ಬ್ಲಾಕ್'ನ ವಿಧವನ್ನು ಆಯ್ಕೆ ಮಾಡಬೇಕಾಗಿದೆ. |
02:43 | ಉದಾಹರಣೆಗೆ, Messages ಮೇಲೆ ಕ್ಲಿಕ್ ಮಾಡಿ.
Messages ಬ್ಲಾಕ್, ಈಗ 'ಡ್ಯಾಶ್-ಬೋರ್ಡ್' ನಲ್ಲಿ ಕಾಣುತ್ತಿರುವುದನ್ನು ನೀವು ನೋಡಬಹುದು. |
02:53 | ಸಧ್ಯಕ್ಕೆ ಇಲ್ಲಿ ಯಾವುದೇ ಮೆಸೇಜ್ ಗಳಿಲ್ಲ. |
02:56 | ಡೀಫಾಲ್ಟ್ ಆಗಿ, ಎಲ್ಲಾ ಹೊಸ 'ಬ್ಲಾಕ್' ಗಳು ಬಲತುದಿಯ ಕಾಲಂಗೆ ಸೇರಿಸಲ್ಪಡುತ್ತವೆ. |
03:02 | ನಾವು ಇನ್ನೊಂದು 'ಬ್ಲಾಕ್' ಅನ್ನು ಸೇರಿಸೋಣ.
ಎಡಭಾಗದಲ್ಲಿರುವ Add a block ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
03:09 | menu types ನ ಲಿಸ್ಟ್ ನಿಂದ, HTML ಅನ್ನು ಅಯ್ಕೆಮಾಡಿ.
HTML ಬ್ಲಾಕ್ ನಲ್ಲಿ ರೂಢಿಯ HTML ಯನ್ನು ಬರೆಯಬಹುದು. |
03:19 | ಇದನ್ನು ಬಳಸಿ, ನಾವು Library widgets, News feeds, Twitter, Facebook ಗಳಂತಹ widgets ಗಳನ್ನು ಒಳಗೆ ಸೇರಿಸಬಹುದು. |
03:30 | ಈಗ Messages ಬ್ಲಾಕ್ ನ ಕೆಳಗೆ, NEW HTML BLOCK ಅನ್ನು ಸೇರಿಸಿರುವುದನ್ನು ಗಮನಿಸಿ. |
03:37 | HTML 'ಬ್ಲಾಕ್' ನಲ್ಲಿ, ಗಿಯರ್ (gear) ಐಕಾನ್ ಮೇಲೆ ಕ್ಲಿಕ್ ಮಾಡಿ.
ನಂತರ Configure (NEW HTML BLOCK) block ಮೇಲೆ ಕ್ಲಿಕ್ ಮಾಡಿ. |
03:46 | Configure HTML block 3 ವಿಭಾಗಗಳನ್ನು ಹೊಂದಿದೆ: 'ಬ್ಲಾಕ್' ಗಳು
Block settings, Where this block appears ಮತ್ತು On this page. |
03:57 | ಡೀಫಾಲ್ಟ್ ಆಗಿ, ಮೊದಲನೆಯ ವಿಭಾಗವನ್ನು ವಿಸ್ತರಿಸಲಾಗಿದೆ. |
04:02 | ಎಲ್ಲ ವಿಭಾಗಗಳನ್ನು ವಿಸ್ತರಿಸಲು, Expand all ಮೇಲೆ ಕ್ಲಿಕ್ ಮಾಡಿ. |
04:07 | Block title ನಲ್ಲಿ, ನಾವು “Things to do” ಎಂದು ಟೈಪ್ ಮಾಡೋಣ. |
04:12 | Content, ಜಾಗದಲ್ಲಿ ಈ admin user ಗಾಗಿ ನಾವು ಕೆಲವು tasks ಅನ್ನು ಸೇರಿಸೋಣ. |
04:19 | ಇವುಗಳನ್ನು ಟೈಪ್ ಮಾಡಿ: Create a new course,
Create new users, Add users to the course. |
04:30 | ಇದೊಂದು HTML ಎಡಿಟರ್ ಆಗಿದ್ದು, ಇದನ್ನು ಯಾವುದೇ 'ವರ್ಡ್ ಪ್ರೊಸೆಸರ್' (word processor) ಅಥವಾ ಎಡಿಟರ್ ನಂತೆ ಬಳಸಬಹುದು. |
04:39 | Where this block appears ನ ಅಡಿಯಲ್ಲಿ, ಆಯ್ಕೆಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ. |
04:45 | Default region ನಲ್ಲಿ, Content ಅನ್ನು ಆಯ್ಕೆಮಾಡಿ.
Default weight ನಲ್ಲಿ, -10 ಅನ್ನು (ಮೈನಸ್ ೧೦) ಆಯ್ಕೆಮಾಡಿ. |
04:54 | 'ಬ್ಲಾಕ್' ನ weight ಕಡಿಮೆ ಇದ್ದಷ್ಟು, ಅದು ಆ “region” ನಲ್ಲಿ ಮೇಲಕ್ಕೆ ಕಾಣಿಸಿಕೊಳ್ಳುವುದು.
-10 ಅತಿ ಕಡಿಮೆ ಇದೆ. |
05:03 | -10 ಅನ್ನು ಆಯ್ಕೆಮಾಡಿ, ಇದು content region ನ ಮೇಲ್ಭಾಗದಲ್ಲಿದೆ ಎಂದು ನಾನು ಖಚಿತಪಡಿಸುತ್ತಿದ್ದೇನೆ. |
05:12 | ಈ 'ಬ್ಲಾಕ್', Admin’s dashboard ನಲ್ಲಿ ಕಾಣಿಸಿಕೊಳ್ಳುತ್ತದೆ. |
05:17 | ಈಗ “On this page” ವಿಭಾಗವು ಬರುತ್ತದೆ.
ಇಲ್ಲಿ, ಈ 'ಬ್ಲಾಕ್' ಅನ್ನು ಸೇರಿಸಲಾದ ಪೇಜ್ ಗಾಗಿ, ನೀವು ಕಾನ್ಫಿಗರೇಶನ್ ಅನ್ನು ವಿವರಿಸಬಹುದು. |
05:28 | ಈ ಸಂದರ್ಭದಲ್ಲಿ, ಇದು ‘ಡ್ಯಾಶ್-ಬೋರ್ಡ್’ ಆಗಿದೆ.
ಈ ಕಾನ್ಫಿಗರೇಶನ್, ಮೇಲಿನ ವಿಭಾಗದಲ್ಲಿ ವಿವರಿಸಲಾದ ಡೀಫಾಲ್ಟ್ ಕಾನ್ಫಿಗರೇಶನ್ ಅನ್ನು ಅತಿಕ್ರಮಿಸುತ್ತದೆ. |
05:40 | ಅದು Where this block appears ಎಂಬ ವಿಭಾಗವಾಗಿದೆ.
ಈ ವಿಭಾಗದಲ್ಲಿ ನಾವು, Region ನಲ್ಲಿ Content ಅನ್ನು ಮತ್ತು Weight ನಲ್ಲಿ -10 ಅನ್ನು ಆಯ್ಕೆಮಾಡೋಣ. |
05:53 | ಗಮನಿಸಿ: 'ಬ್ಲಾಕ್' ನ ವಿಧವನ್ನು ಆಧರಿಸಿ, ಕಾನ್ಫಿಗರೇಶನ್ (ಸಂರಚನೆ) ಸೆಟ್ಟಿಂಗ್ ಗಳು ಬದಲಾಗುತ್ತವೆ. |
06:01 | ಬದಲಾವಣೆಗಳನ್ನು ಸೇವ್ ಮಾಡಲು, Save Changes ಮೇಲೆ ಕ್ಲಿಕ್ ಮಾಡಿ ಮತ್ತು ‘ಡ್ಯಾಶ್-ಬೋರ್ಡ್’ ಗೆ ಹಿಂದಿರುಗಿ. |
06:07 | ಹೊಸ HTML ಬ್ಲಾಕ್, Things to do ಎಂಬ ಶೀರ್ಷಿಕೆಯೊಂದಿಗೆ ಈಗ ಕಾಣುತ್ತಿರುವುದನ್ನು ನೋಡಿ. ಮತ್ತು content ಜಾಗದಲ್ಲಿ, ಇದು ಎಲ್ಲಕ್ಕಿಂತ ಮೇಲೆ ಇರುವ 'ಬ್ಲಾಕ್' ಆಗಿದೆ. |
06:18 | Move ಐಕಾನ್ ಬಳಸಿ, ಬ್ಲಾಕ್ ಅನ್ನು ಎಳೆಯುವುದರ ಮೂಲಕ ನಾವು ಅದರ ಸ್ಥಾನವನ್ನು ಬದಲಾಯಿಸಬಹುದು. |
06:25 | ಡ್ರ್ಯಾಗ್ & ಡ್ರಾಪ್ ಮೂಲಕ ನಾವು Things to do ಬ್ಲಾಕ್ ಅನ್ನು, Course Overview ಬ್ಲಾಕ್ ನ ಕೆಳಗೆ ಸರಿಸೋಣ. |
06:34 | ನಾವು ಕೆಲವು ನಿಮಿಷಗಳ ಹಿಂದೆ ಸೆಟ್ ಮಾಡಿದ ಕಾನ್ಫಿಗರೇಶನ್ ಅನ್ನು, ಇದು ಹೇಗೆ ಬದಲಾಯಿಸುತ್ತದೆ ಎಂದು ನೋಡೋಣ. |
06:40 | ಕ್ರಮವಾಗಿ ಗಿಯರ್ (gear) ಐಕಾನ್ ---> Configure Things to do ಬ್ಲಾಕ್ ---> , Expand All ಗಳ ಮೇಲೆ ಕ್ಲಿಕ್ ಮಾಡಿ. |
06:49 | “On this page” ವಿಭಾಗವನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ. weight -2 ಗೆ ಬದಲಾಯಿಸಿದೆ.
ಆದಾಗ್ಯೂ, Default weight ಹಾಗೇ ಉಳಿಯುತ್ತದೆ. |
07:03 | Dashboard ಗೆ ಹಿಂದಿರುಗಲು, Cancel ಮೇಲೆ ಕ್ಲಿಕ್ ಮಾಡಿ. |
07:07 | ನಮಗೆ ಈ Learning Plans ಬ್ಲಾಕ್ ಬೇಕಾಗಿಲ್ಲ. ಆದ್ದರಿಂದ ನಾವು ಇದನ್ನು ಡಿಲೀಟ್ ಮಾಡೋಣ.
ಗಿಯರ್ (gear) ಐಕಾನ್ ಮೇಲೆ, ನಂತರ Delete Learning plans block ಮೇಲೆ ಕ್ಲಿಕ್ ಮಾಡಿ. |
07:19 | Confirm ಪಾಪ್-ಅಪ್ ವಿಂಡೋ ಕಾಣಿಸುತ್ತದೆ ಮತ್ತು ಡಿಲೀಟ್ ಮಾಡುವುದನ್ನು ಖಚಿತಪಡಿಸಲು ಸೂಚಿಸುತ್ತದೆ.
ಇಲ್ಲಿ Yes ಬಟನ್ ಮೇಲೆ ಕ್ಲಿಕ್ ಮಾಡಿ. |
07:29 | Learning Plans ಬ್ಲಾಕ್ ಇನ್ನುಮುಂದೆ ಲಭ್ಯವಿಲ್ಲ ಎಂದು ಗಮನಿಸಿ. ಆಮೇಲೆ ಅಗತ್ಯವಿದ್ದರೆ, ನಾವು ಯಾವಾಗಲೂ ಈ 'ಬ್ಲಾಕ್' ಅನ್ನು ಸೇರಿಸಬಹುದು. |
07:40 | ಈಗ ನಮ್ಮ Moodle ಇನ್ಸ್ಟಾಲ್ಲೇಶನ್ ನ ಮುಖಪುಟವನ್ನು (ಫ್ರಂಟ್ ಪೇಜ್) ಕಸ್ಟಮೈಜ್ ಮಾಡೋಣ. |
07:46 | ಎಡಭಾಗದ ಮೆನ್ಯೂನಲ್ಲಿ, Site Administration ಲಿಂಕ್ ಮೇಲೆ ಕ್ಲಿಕ್ ಮಾಡಿ. |
07:51 | Front page ವಿಭಾಗದಲ್ಲಿ, Front Page settings ಅನ್ನು ಗುರುತಿಸಲು ಕೆಳಗೆ ಸ್ಕ್ರೋಲ್ ಮಾಡಿ. ಅದರ ಮೇಲೆ ಕ್ಲಿಕ್ ಮಾಡಿ. |
08:00 | Full Site Name ಅನ್ನು Digital India Learning Management System ಎಂದು ಬದಲಾಯಿಸೋಣ. |
08:08 | ಪ್ರತಿಯೊಂದು ಪೇಜ್ ನ ಮೇಲ್ತುದಿಯಲ್ಲಿ, breadcrumbs ನ ಮೇಲೆ, ಈ ಟೆಕ್ಸ್ಟ್ ಕಾಣಿಸುತ್ತದೆ. |
08:15 | ಪೇಜ್ ನ ಶೀರ್ಷಿಕೆಯಲ್ಲಿ, Short name ಟೆಕ್ಸ್ಟ್ ಕಾಣಿಸುತ್ತದೆ. |
08:20 | ಗಮನಿಸಿ: ಈ ಪೇಜ್ ನ ಟೈಟಲ್ Digital India LMS ಆಗಿದೆ. ಆನಂತರ, ಈಗ ನಾವು ಇರುವ ಪೇಜ್ ನ ಹೆಸರು ಇದೆ. |
08:29 | ನಾವು ಲೋಗೊ ಗಾಗಿ ಯಾವುದೇ ಇಮೇಜ್ ಅನ್ನು ಒದಗಿಸದಿದ್ದರೆ, Short name ಅನ್ನು ಲೋಗೊ-ಟೆಕ್ಸ್ಟ್ ನ ಹಾಗೆ ಸಹ ಬಳಸಲಾಗುತ್ತದೆ. ನಾವು ಅದನ್ನು ಹಾಗೇ ಬಿಟ್ಟುಬಿಡುತ್ತೇವೆ. |
08:40 | Front page ಐಟಂ ಗಳಿಗಾಗಿ ಡ್ರಾಪ್-ಡೌನ್ ಗಳನ್ನು ನೋಡಲು, ಕೆಳಗೆ ಸ್ಕ್ರೋಲ್ ಮಾಡಿ.
ಇವುಗಳು front page ನಲ್ಲಿ ತೋರಿಸಬಹುದಾದ ಐಟಂಗಳ ಪಟ್ಟಿ ಆಗಿವೆ. |
08:50 | ಎಲ್ಲ ಸಂದರ್ಶಕರು, ಅವರು ಲಾಗಿನ್ ಆದರೂ ಅಥವಾ ಆಗದಿದ್ದರೂ, ಈ ಐಟಂಗಳನ್ನು ನೋಡಬಹುದು. |
08:57 | ಇದರ ಕ್ರಮವನ್ನು ಕಾಂಬಿನೇಶನ್-ಬಾಕ್ಸ್ ನಿರ್ಧರಿಸುತ್ತದೆ. ನಾವು ಇದನ್ನು ಹಾಗೇ ಬಿಟ್ಟುಬಿಡುತ್ತೇವೆ. |
09:05 | ಆದ್ದರಿಂದ, ಎಲ್ಲಾ ಯೂಸರ್ ಗಳು ಕೋರ್ಸುಗಳ ಪಟ್ಟಿಯನ್ನು (ಲಭ್ಯವಿದ್ದಲ್ಲಿ) ನೋಡಲು ಸಾಧ್ಯವಾಗುತ್ತದೆ ಮತ್ತು ಬೇರೆ ಏನನ್ನೂ ಅಲ್ಲ. |
09:13 | ಮುಂದಿನದು Front page items when logged in ಆಗಿದೆ.
ಇದು, ಲಾಗ್-ಇನ್ ಮಾಡಿದ ಯೂಸರ್ ಗಳಿಗೆ ತೋರಿಸಬಹುದಾದ ಐಟಂಗಳ ಪಟ್ಟಿ ಆಗಿದೆ. |
09:24 | ಮೊದಲನೆಯ ಡ್ರಾಪ್-ಡೌನ್ ನಲ್ಲಿ, ನಾವು Enrolled courses ಅನ್ನು ಆಯ್ಕೆಮಾಡೋಣ. |
09:29 | ನಾವು ಉಳಿದ ಆಯ್ಕೆಗಳನ್ನು ಅವುಗಳ ಡೀಫಾಲ್ಟ್ ವ್ಯಾಲ್ಯೂಗಳೊಂದಿಗೆ ಬಿಡುತ್ತೇವೆ. |
09:35 | ಕೆಳಗೆ ಸ್ಕ್ರೋಲ್ ಮಾಡಿ ಮತ್ತು Save Changes ಮೇಲೆ ಕ್ಲಿಕ್ ಮಾಡಿ. |
09:40 | ಸಂಕ್ಷಿಪ್ತವಾಗಿ, |
09:43 | ಈ ಟ್ಯುಟೋರಿಯಲ್ ನಲ್ಲಿ ನಾವು:
“Things to do” ಎಂಬ HTML ಬ್ಲಾಕ್ ಅನ್ನು ಸೇರಿಸಲು ಕಲಿತಿದ್ದೇವೆ ಮತ್ತು ಪೇಜ್ ನಲ್ಲಿ ಅದು ಎಲ್ಲಿ ಕಾಣಬೇಕೆಂದು ಸೂಚಿಸಿದ್ದೇವೆ. |
09:54 | ಗೆಸ್ಟ್ ಮತ್ತು ಲಾಗ್-ಇನ್ ಮಾಡಿದ ಯೂಸರ್ ಗಳಿಗಾಗಿ, 'ಫ್ರಂಟ್ ಪೇಜ್' ಅನ್ನು ಸೆಟ್-ಅಪ್ ಸಹ ಮಾಡಿದ್ದೇವೆ. |
10:00 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
Private files ಬ್ಲಾಕ್ ಅನ್ನು ಡಿಲೀಟ್ ಮಾಡಿ. Code files ಲಿಂಕ್ ನಲ್ಲಿ ಕೊಟ್ಟಿರುವ ಸಲಹೆಗಳನ್ನು ಬಳಸಿ, ಒಂದು ಹೊಸ HTML ಬ್ಲಾಕ್ ಅನ್ನು ಸೇರಿಸಿ. |
10:14 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
10:23 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
10:33 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
10:37 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
10:51 | ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |