Difference between revisions of "GIMP/C2/Two-Minutes-Edit/Kannada"

From Script | Spoken-Tutorial
Jump to: navigation, search
(Created page with "{| border = 1 |'''Time''' |'''Narration''' |- | 00:23 | Meet The GIMP (ಮೀಟ್ ದ ಗಿಂಪ್) ಎನ್ನುವುದರ ಟ್ಯುಟೋರಿಯಲ್ ಗೆ...")
 
 
Line 46: Line 46:
 
|-
 
|-
 
|02:00
 
|02:00
| White ಅನ್ನು, ನನ್ನ ‘ಫೋರ್‌ಗ್ರೌಂಡ್ ಕಲರ್’ ಎಂದು ಆಯ್ಕೆಮಾಡುತ್ತೇನೆ.
+
| White ಅನ್ನು, ನನ್ನ ‘ಫೋರ್ಗ್ರೌಂಡ್ ಕಲರ್’ ಎಂದು ಆಯ್ಕೆಮಾಡುತ್ತೇನೆ.
 
|-
 
|-
 
|02:05
 
|02:05
Line 70: Line 70:
 
|-
 
|-
 
| 02:40
 
| 02:40
| ಪುನಃ ಈ ಲೇಯರನ್ನು ಎರಡು ಸಲ ಮಾಡಿ, Overlay Mode ಅನ್ನು ನಾನು ಆಯ್ಕೆಮಾಡುತ್ತೇನೆ. ‘ಬ್ಯಾಕ್‌ಗ್ರೌಂಡ್’ನಲ್ಲಿ ಸ್ವಲ್ಪ ಹೆಚ್ಚು ‘ಪಾಪ್’ಅನ್ನು ಪಡೆಯಲು, ‘ಓಪ್ಯಾಸಿಟೀ’ಯನ್ನು ಸ್ವಲ್ಪ ಕೆಳಗೆ ಇಳಿಸುತ್ತೇನೆ.  
+
| ಪುನಃ ಈ ಲೇಯರನ್ನು ಎರಡು ಸಲ ಮಾಡಿ, Overlay Mode ಅನ್ನು ನಾನು ಆಯ್ಕೆಮಾಡುತ್ತೇನೆ. ‘ಬ್ಯಾಕ್ಗ್ರೌಂಡ್’ನಲ್ಲಿ ಸ್ವಲ್ಪ ಹೆಚ್ಚು ‘ಪಾಪ್’ಅನ್ನು ಪಡೆಯಲು, ‘ಓಪ್ಯಾಸಿಟೀ’ಯನ್ನು ಸ್ವಲ್ಪ ಕೆಳಗೆ ಇಳಿಸುತ್ತೇನೆ.  
 
|-
 
|-
 
| 03:03
 
| 03:03
Line 136: Line 136:
 
|-
 
|-
 
|06:38
 
|06:38
| ಆದ್ದರಿಂದ ಅದನ್ನು ಹೊರಗೆ ಎಳೆಯುತ್ತೇನೆ. ಈಗ ಇಲ್ಲಿ ನನಗೆ ಈ ಗ್ರಿಡ್ ಸಿಕ್ಕಿದೆ. ನಾನು ಮಾಡಬೇಕಾದದ್ದು ಇಷ್ಟೇ, ಈ ‘ಗ್ರಿಡ್‌ಲೈನ್’ಗಳನ್ನು, ಇಮೇಜ್ನಲ್ಲಿ ಲಂಬವಾಗಿ ಇರುವ ಈ ರಚನೆಗಳಿಗೆ ಹೊಂದಿಸುವುದು.
+
| ಆದ್ದರಿಂದ ಅದನ್ನು ಹೊರಗೆ ಎಳೆಯುತ್ತೇನೆ. ಈಗ ಇಲ್ಲಿ ನನಗೆ ಈ ಗ್ರಿಡ್ ಸಿಕ್ಕಿದೆ. ನಾನು ಮಾಡಬೇಕಾದದ್ದು ಇಷ್ಟೇ, ಈ ‘ಗ್ರಿಡ್ಲೈನ್’ಗಳನ್ನು, ಇಮೇಜ್ನಲ್ಲಿ ಲಂಬವಾಗಿ ಇರುವ ಈ ರಚನೆಗಳಿಗೆ ಹೊಂದಿಸುವುದು.
 
|-
 
|-
 
| 06:52
 
| 06:52
| ಈ ‘ಗ್ರಿಡ್‌ಲೈನ್’ಗಳು, ಔಟ್ಪುಟ್ ಇಮೇಜ್ನಲ್ಲಿ ಲಂಬವಾಗಿ ಅಥವಾ ಅಡ್ಡಲಾಗಿರುವವು.ಈ ಮೇಲ್ತುದಿಯಲ್ಲಿರುವ ಗೆರೆಯು ‘ಇಮೇಜ್’ನ ಮೇಲ್ತುದಿಯಾಗಿರುವುದು.  
+
| ಈ ‘ಗ್ರಿಡ್ಲೈನ್’ಗಳು, ಔಟ್ಪುಟ್ ಇಮೇಜ್ನಲ್ಲಿ ಲಂಬವಾಗಿ ಅಥವಾ ಅಡ್ಡಲಾಗಿರುವವು.ಈ ಮೇಲ್ತುದಿಯಲ್ಲಿರುವ ಗೆರೆಯು ‘ಇಮೇಜ್’ನ ಮೇಲ್ತುದಿಯಾಗಿರುವುದು.  
 
|-
 
|-
 
| 07:02
 
| 07:02
Line 352: Line 352:
 
|-
 
|-
 
| 18:25
 
| 18:25
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ …………………
+
| ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ. ಉಪ್ಪಿನಪಟ್ಟಣ. ನಮಸ್ಕಾರ.

Latest revision as of 12:15, 30 August 2015

Time Narration
00:23 Meet The GIMP (ಮೀಟ್ ದ ಗಿಂಪ್) ಎನ್ನುವುದರ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:25 ಇದನ್ನು ರೋಲ್ಫ್ ಸ್ಟೇನೋರ್ಟ್ ಅವರು. ಉತ್ತರ ಜರ್ಮನಿಯ ಬ್ರೆಮೆನ್ ಎನ್ನುವಲ್ಲಿ ರೆಕಾರ್ಡ್ ಮಾಡಿದ್ದಾರೆ.
00:31 ಇಲ್ಲಿ, ಈ ‘ಇಮೇಜ್’ನೊಂದಿಗೆ, ಏನು ಸಮಸ್ಯೆ ಆಗಿದೆ?
00:35 ಈ ‘ಬೋರ್ಡ್’ನ ಮೇಲೆ ಏನಿದೆ ಎಂದು ಸರಿಯಾಗಿ ಕಾಣುತ್ತಿಲ್ಲ.
00:39 ಹೀಗಾಗಿ, ‘ಪಾಪ್ ಔಟ್’ ಮಾಡಲು ಇಲ್ಲಿಯ ಈ ಬರಹವು ನನಗೆ ಬೇಕಾಗಿದೆ.
00:44 ನನಗೆ, ಮುಗಿಲನ್ನು ಇದ್ದ ಹಾಗೆಯೇ ಇಡಬೇಕಾಗಿದೆ. ಆದ್ದರಿಂದ ಈ ಲೇಯರನ್ನು ಎರಡು ಸಲ ಮಾಡುತ್ತೇನೆ ಹಾಗೂ Curves Tool ಅನ್ನು ಆರಿಸಿಕೊಳುತ್ತೇನೆ.
00:56 ಮತ್ತು ‘ಇಮೇಜ್’ನ ಈ ಭಾಗದಲ್ಲಿ ನೋಡುತ್ತೇನೆ.
01:02 ಇದನ್ನು ಪ್ರಕಾಶಿತವಾಗಿ ಪಡೆಯಲು ನಾನು ‘ಕರ್ವ್’ನ್ನು ಮೇಲೆ ಎಳೆಯುತ್ತೇನೆ.
01:10 ಇದು ಸಾಕಷ್ಟು ಚೆನ್ನಾಗಿ ಕಾಣುತ್ತದೆ. ಈಗ, ಇಲ್ಲಿ ಸ್ವಲ್ಪ ಗಾಢತೆಯನ್ನು ಪಡೆಯಲು, ನಾನು ಈ ಕಪ್ಪು ಪಾಯಿಂಟನ್ನು ಇನ್ನೂ ಮೇಲೆ ಎಳೆಯುತ್ತಿದ್ದೇನೆ.
01:19 ಇದು ಕೆಲಸ ಮಾಡಬೇಕು ಎಂದು ನನಗೆನಿಸುತ್ತಿದೆ.
01:25 ಈಗ, ನನಗೆ ಕೆಳಗಿನ ಇಮೇಜ್ನಲ್ಲಿ, ಸೈನ್ ಬೋರ್ಡ್ ಮೇಲಿನ ಬರಹವು ಬೇಕಾಗಿದೆ.
01:32 ಆದ್ದರಿಂದ, ನಾನು ಒಂದು ‘ಲೇಯರ್ ಮಾಸ್ಕ್’ಅನ್ನು ಆರಿಸಿಕೊಂಡು ಅದನ್ನು ಕಪ್ಪುಬಣ್ಣದಿಂದ ತುಂಬುತ್ತೇನೆ.
01:43 ಈಗ ನಾನು ನನ್ನ ಹಳೆಯ ‘ಇಮೇಜ್’ಗೆ ಮರಳಿದ್ದೇನೆ ಮತ್ತು ಬಿಳಿಯ ಅಂಚನ್ನು ಹೊಂದಿರುವ ‘ಲೇಯರ್ ಮಾಸ್ಕ್’ನ ಮೇಲೆ ಕೆಲಸ ಮಾಡುತ್ತೇನೆ.
01:54 ಇಲ್ಲಿ, ನಾನು Paint Tool ಅನ್ನು ಆಯ್ಕೆ ಮಾಡುತ್ತೇನೆ.
02:00 White ಅನ್ನು, ನನ್ನ ‘ಫೋರ್ಗ್ರೌಂಡ್ ಕಲರ್’ ಎಂದು ಆಯ್ಕೆಮಾಡುತ್ತೇನೆ.
02:05 ಒಂದು Brush ಅನ್ನು ಆಯ್ಕೆಮಾಡಿ ಅದನ್ನು ದೊಡ್ಡದುಮಾಡುತ್ತೇನೆ.
02:12 ಈಗ ನಾನು ‘ಲೇಯರ್ ಮಾಸ್ಕ್’ನ ಮೇಲೆ ಪೇಂಟ್ ಮಾಡುತ್ತಿದ್ದೇನೆ.
02:18 ಬಹುಶಃ ನಾನು ಇಮೇಜ್ನಲ್ಲಿ ಝೂಮ್ ಮಾಡಬೇಕು.
02:25 ಇದು ಉತ್ತಮವಾಗಿದೆ.
02:27 ಅದು ಒಳ್ಳೆಯದು.
02:31 ನನ್ನ ‘ಕೀ ಇಂಡಿಕೇಟರ್’ ನಲ್ಲಿ ಒತ್ತಿರುವ ಕೀಗಳನ್ನು, ನೀವು ನೋಡಬಹುದು.
02:37 ಇದು ಬಹಳ ಉತ್ತಮವಾಗಿ ಕಾಣುತ್ತದೆ.
02:40 ಪುನಃ ಈ ಲೇಯರನ್ನು ಎರಡು ಸಲ ಮಾಡಿ, Overlay Mode ಅನ್ನು ನಾನು ಆಯ್ಕೆಮಾಡುತ್ತೇನೆ. ‘ಬ್ಯಾಕ್ಗ್ರೌಂಡ್’ನಲ್ಲಿ ಸ್ವಲ್ಪ ಹೆಚ್ಚು ‘ಪಾಪ್’ಅನ್ನು ಪಡೆಯಲು, ‘ಓಪ್ಯಾಸಿಟೀ’ಯನ್ನು ಸ್ವಲ್ಪ ಕೆಳಗೆ ಇಳಿಸುತ್ತೇನೆ.
03:03 ಇದು, ಈಗ ಹೆಚ್ಚು ಉತ್ತಮವಾಗಿ ಕಾಣುತ್ತದೆ.
03:07 ಈಗ, ನಾನು ಈ ಇಮೇಜನ್ನು ‘ಸೇವ್’ ಮಾಡಲು ಸಿದ್ಧನಾಗಿದ್ದೇನೆ.
03:12 ಇಲ್ಲಿ ‘ಕಾಪಿ’ಗಳ ಮೇಲೆ ಕೆಲಸ ಮಾಡುತ್ತಿದ್ದೇನೆ. ಆದ್ದರಿಂದ ನಾನು, ‘ಸೇವ್’ನ ಮೇಲೆ ಕ್ಲಿಕ್ ಮಾಡಬಹುದು ಅಥವಾ Ctrl + S ಒತ್ತಬಹುದು. ಖಂಡಿತವಾಗಿ,ನನಗೆ ಈ ಎಲ್ಲ ‘ಲೇಯರ್’ಗಳನ್ನು ಇಲ್ಲಿ ‘ಸೇವ್’ ಮಾಡುವದು ಬೇಕಾಗಿಲ್ಲ. ನಾನು, ಇದನ್ನು Jpeg (ಜೇ ಪೆಗ್) ಇಮೇಜ್ ಎಂದು ‘ಸೇವ್’ ಮಾಡುತ್ತೇನೆ.
03:32 ಈ ಇಮೇಜನ್ನು ‘ವೆಬ್’ನ ಮೇಲೆ ‘ಅಪ್-ಲೋಡ್’ ಮಾಡಲು, ಇದನ್ನು ರಿಸೈಜ್ ಮಾಡುವ ಅಗತ್ಯವಿದೆ. ಹೀಗಾಗಿ, ನಾನು ಕ್ರಮವಾಗಿ Image, Scale Image ಗಳಿಗೆ ಹೋಗುತ್ತೇನೆ, ಅಗಲದಲ್ಲಿ ಇದನ್ನು 600 (ಆರುನೂರು) ಕ್ಕೆ ನಾನು ಕುಗ್ಗಿಸುತ್ತಿದ್ದೇನೆ.
03:58 ಈಗ ಇದನ್ನು ಸ್ವಲ್ಪ ‘ಶಾರ್ಪ್’ ಮಾಡಬೇಕು. ಆದ್ದರಿಂದ, ನಾನು ಕ್ರಮವಾಗಿ Filters, Enhance ಮತ್ತು Sharpen ಇವುಗಳಿಗೆ ಹೋಗುತ್ತೇನೆ.
04:20 ನಾನು ಇಮೇಜ್ನಲ್ಲಿಯ ‘ಆರ್ಟ್ ಇಫೆಕ್ಟ್ಸ್’ಗಾಗಿ ಪರಿಶೀಲಿಸುತ್ತೇನೆ. ಇಲ್ಲಿ ನೀವು ಸ್ವಲ್ಪ ಬೆಳಕನ್ನು ನೋಡಬಹುದು.
04:38 ಈಗ, ಇದನ್ನು ನಾನು ಒಂದು ‘ಕಾಪಿ’ ಎಂದು ಸೇವ್ ಮಾಡುತ್ತಿದ್ದೇನೆ.
04:44 ಇದನ್ನು small ಎಂದು ಹೆಸರಿಸಿ, ಸೇವ್ ಮಾಡುತ್ತೇನೆ.
04:50 ಈ ‘ಇಮೇಜ್’ನ ಕೆಲಸ ಮುಗಿಸಿದ್ದೇನೆ.
04:53 ಎಡಿಟ್ ಮಾಡುವಾಗ, ನೀವು ಎರಡು ವಿಷಯಗಳನ್ನು ಯಾವಾಗಲೂ ನೆನಪಿನಲ್ಲಿಡಬೇಕು.
04:58 ಮೊದಲನೆಯದಾಗಿ, ಇಮೇಜ್’ನ ಒಂದು ಭಾಗವನ್ನು ಬದಲಾಯಿಸಿ ಉಳಿದೆಲ್ಲವನ್ನೂ ಇದ್ದಂತೆಯೇ ಇಡಬೇಕಾಗಿದ್ದರೆ, ಆವಾಗ ಆ ‘ಲೇಯರ್’ನ ಒಂದು ಕಾಪಿ ಮಾಡಿ, ನಿಮ್ಮ ಬದಲಾವಣೆಗಳನ್ನು ಮಾಡಿ, ನಂತರ ‘ಲೇಯರ್ ಮಾಸ್ಕ್’ಅನ್ನು ಹಾಕಿರಿ.
05:15 ಕಪ್ಪುಬಣ್ಣವು ಇಮೇಜನ್ನು ಅಡಗಿಸುವುದು ಹಾಗೂ ಬಿಳಿಬಣ್ಣವು ಅದರಲ್ಲಿರುವುದನ್ನು ಬಹಿರಂಗಪಡಿಸುವುದು.
05:22 ಎರಡನೆಯದಾಗಿ, ನೀವು ‘ಓವರ್ಲೇ ಮೋಡ್’ನಲ್ಲಿ, ಅದರ ಮೇಲೆ ಎರಡನೆಯ ಲೇಯರನ್ನು ಹಾಕಿದರೆ, ‘ಇಮೇಜ್’ಗೆ ಉತ್ತಮ ಕಾಂಟ್ರಾಸ್ಟ್ ಹಾಗೂ ಬಣ್ಣಗಳು ಸಿಗುತ್ತವೆ.
05:33 ಶೀಘ್ರವಾಗಿ ‘ಎಡಿಟ್’, ಮಾಡಲು ಇವು ಎರಡು ಉಪಾಯಗಳಾಗಿವೆ.
05:41 ಈ ಇಮೇಜ್ನಲ್ಲಿ, ಕನಿಷ್ಠ ಎರಡು ಸಮಸ್ಯೆಗಳನ್ನು ನೀವು ನೋಡಬಹುದು.
05:46 ಮೊದಲು, ನಾನು ಈ ಜನರ ಪಾದಗಳನ್ನು ಕತ್ತರಿಸಿದ್ದೇನೆ. ಅವು,ಅಲ್ಲಿ ಇದ್ದರೆ ಚೆನ್ನಾಗಿರುತ್ತಿತ್ತು.
05:55 ಎರಡನೆಯ ಸಮಸ್ಯೆ, ಈ ಕಟ್ಟಡಗಳು ಇಮೇಜ್ನಲ್ಲಿ ಬೀಳುತ್ತಿವೆ ಏಕೆಂದರೆ ನಾನು ಕ್ಯಾಮೆರಾವನ್ನು ಮೇಲ್ಮುಖವಾಗಿ ಹಿಡಿದಿದ್ದೆ.
06:08 ನಾನು Perspective Tool ಎನ್ನುವುದನ್ನು ಆಯ್ಕೆಮಾಡುತ್ತೇನೆ.
06:15 Directions ನ ಡೈಲಾಗ್’ನಲ್ಲಿ, Corrective Backward ಅನ್ನು ಆಯ್ಕೆಮಾಡಿ, Preview ನಲ್ಲಿ Grid ಅನ್ನು, ನಾನು ಆಯ್ಕೆಮಾಡುತ್ತೇನೆ.
06:23 ನಾನು Outline ಅಥವಾ Image ನ್ನು ಆಯ್ಕೆಮಾಡಬಹುದು ಆದರೆ ನಾನು Grid ಅನ್ನು ಆಯ್ಕೆಮಾಡುತ್ತೇನೆ.
06:30 ಇಮೇಜ್ನಲ್ಲಿ ಕ್ಲಿಕ್ ಮಾಡಿದಾಗ, ನನಗೆ ಇಲ್ಲಿ ಈ ‘ಇನ್ಫೋ ವಿಂಡೋ’ ಸಿಗುತ್ತದೆ. ಇದು ಹೆಚ್ಚು ಉಪಯುಕ್ತ ಮಾಹಿತಿಯನ್ನು ಹೊಂದಿಲ್ಲ.
06:38 ಆದ್ದರಿಂದ ಅದನ್ನು ಹೊರಗೆ ಎಳೆಯುತ್ತೇನೆ. ಈಗ ಇಲ್ಲಿ ನನಗೆ ಈ ಗ್ರಿಡ್ ಸಿಕ್ಕಿದೆ. ನಾನು ಮಾಡಬೇಕಾದದ್ದು ಇಷ್ಟೇ, ಈ ‘ಗ್ರಿಡ್ಲೈನ್’ಗಳನ್ನು, ಇಮೇಜ್ನಲ್ಲಿ ಲಂಬವಾಗಿ ಇರುವ ಈ ರಚನೆಗಳಿಗೆ ಹೊಂದಿಸುವುದು.
06:52 ಈ ‘ಗ್ರಿಡ್ಲೈನ್’ಗಳು, ಔಟ್ಪುಟ್ ಇಮೇಜ್ನಲ್ಲಿ ಲಂಬವಾಗಿ ಅಥವಾ ಅಡ್ಡಲಾಗಿರುವವು.ಈ ಮೇಲ್ತುದಿಯಲ್ಲಿರುವ ಗೆರೆಯು ‘ಇಮೇಜ್’ನ ಮೇಲ್ತುದಿಯಾಗಿರುವುದು.
07:02 ಹೀಗಾಗಿ, ನಾನು ಇದನ್ನು ಇಲ್ಲಿಗೆ ಎಳೆಯುತ್ತೇನೆ.
07:07 ನಾನು ಇಮೇಜ್ನಲ್ಲಿ ಅತ್ತಿತ್ತ ನೋಡುತ್ತೇನೆ. ಇದು ಸಾಕಷ್ಟು ಚೆನ್ನಾಗಿದೆ.
07:41 ಈಗ ನಾನು Transform ಅನ್ನು ಒತ್ತುತ್ತೇನೆ.
07:45 ಅದು ಬದಲಾಗುವವರೆಗೆ ನಾವು ಕಾಯಬೇಕು.
07:51 ಅದು ಇಲ್ಲಿದೆ.
07:55 ಇಲ್ಲಿ, ಈಗ ಎರಡನೆಯ ಸಮಸ್ಯೆಯನ್ನು ನೀವು ನೋಡುತ್ತೀರಿ.
08:00 ಈ ಭೂಮಿಯು ಅತ್ಯುತ್ತಮವಾಗಿಲ್ಲ.
08:03 ಹೀಗಾಗಿ, ನಾನು ಈ ಇಮೇಜನ್ನು ಕ್ರಾಪ್ ಮಾಡಬೇಕು.
08:16 ನಾನು, ನನ್ನ Crop Tool ಗೆ ಹೋಗುತ್ತೇನೆ.
08:19 ನನಗೆ ಪಕ್ಕದ ಕಟ್ಟಡವನ್ನು ಕ್ರಾಪ್ ಮಾಡಬೇಕಾಗಿದೆ ಹಾಗೂ ಅಲ್ಲಿ ಇದನ್ನು ಮಾತ್ರ ಬಿಡಬೇಕಾಗಿದೆ.
08:28 ಇದು ಸ್ವಲ್ಪ ಚೌಕದ ಹಾಗೆ ಕಾಣುತ್ತದೆ. ನಾನು Fixed Aspect ratio ಎನ್ನುವುದರ ಮೇಲೆ ಕ್ಲಿಕ್ ಮಾಡಿ ಅದನ್ನು 1:1 (ವನ್ ಈಸ್ ಟು ವನ್) ಎಂದು ಇಡುತ್ತೇನೆ.
08:40 ಈಗ ನನಗೆ ಚೌಕಾಕಾರದ ‘ಕ್ರಾಪ್’ ಸಿಕ್ಕಿದೆ.
08:45 ಇಮೇಜ್ನಲ್ಲಿ ಜನರನ್ನು ಇಟ್ಟಿದ್ದೇನೆ.
08:51 ಈ ಕ್ರಾಪ್ ಕೆಲಸ ಮಾಡಬೇಕು.
08:56 ಅದರ ಮೇಲೆ ಕ್ಲಿಕ್ ಮಾಡುತ್ತೇನೆ, ಇದೋ ಇಲ್ಲಿದೆ.
09:00 ಈಗ Curves Tool ಅನ್ನು ಆಯ್ಕೆಮಾಡುತ್ತೇನೆ.
09:04 ಅದರಲ್ಲಿ ಹೆಚ್ಚಿನ ‘ಕಾಂಟ್ರಾಸ್ಟ್’ಗಾಗಿ, ‘ಹೈ ಲೈನ್’ಗಳನ್ನು ಇನ್ನೂ ಸ್ವಲ್ಪ ಮೇಲೆ ಪಡೆಯುತ್ತೇನೆ.
09:19 ಈ ಇಮೇಜ್ ಸಹ ಮುಗಿಯಿತು.
09:24 ಇದು ಮುಂದಿನ ಇಮೇಜ್ ಆಗಿದೆ.
09:27 ಈ ಇಮೇಜ್’ನೊಂದಿಗೆ ಏನು ಮಾಡಬೇಕು?
09:37 ನಾನು Rotate Tool ಅನ್ನು ಆಯ್ಕೆಮಾಡುತ್ತೇನೆ. 1 (ಒಂದು) ನ್ನು ಒತ್ತಿ, ಇಮೇಜ್ನಲ್ಲಿ ಝೂಮ್ ಮಾಡುತ್ತೇನೆ.
09:49 ಇಲ್ಲಿ, ‘ಇಮೇಜ್’ನ ಮಧ್ಯದಲ್ಲಿ, ನಾನು ಒಳ್ಳೆಯ ಲಂಬವಾದ ಭಾಗಕ್ಕಾಗಿ ನೋಡುತ್ತೇನೆ. Direction ನಲ್ಲಿ, ನಾನು Corrective Backwards Rotation ಎನ್ನುವುದನ್ನು ಆಯ್ಕೆಮಾಡುತ್ತೇನೆ.
10:04 Cubic Interpolation ಎನ್ನುವುದನ್ನು ಆಯ್ಕೆಮಾಡಿ, Preview ನಲ್ಲಿ Grid ಅನ್ನು ಆಯ್ಕೆಮಾಡುತ್ತೇನೆ.
10:12 ಈಗ, ‘ಗ್ರಿಡ್ ಲೈನ್ಸ್’ಅನ್ನು ಪಡೆಯಲು ಇಮೇಜ್ನಲ್ಲಿ ಕ್ಲಿಕ್ ಮಾಡುತ್ತೇನೆ, ಈಗ ಈ ‘ಲೈನ್’ಗಳನ್ನು, ಈ ಮನೆಯ ಲಂಬವಾದ ರಚನೆಗಳೊಂದಿಗೆ ಹೊಂದಿಸುತ್ತೇನೆ.
10:24 ಇದು ಇಷ್ಟೇ ಆಗಿದೆ ಎಂದು ನನ್ನ ಭಾವನೆ.
10:28 ಇಲ್ಲಿ ತೆರೆದುಕೊಂಡ ಚಿಕ್ಕ ಕಿಟಕಿಯು 2.90 ಅಂಶಗಳನ್ನು ತೋರಿಸುತ್ತಿದೆ. ನಾನು Rotate ನ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು ಕೊನೆಯ ಫಲಿತಾಂಶಕ್ಕಾಗಿ ಕಾಯುತ್ತೇನೆ.
10:40 ಇದು ಇಲ್ಲಿದೆ.
10:44 ಸರಿ, ಇದು ಚೆನ್ನಾಗಿ ಕಾಣುತ್ತದೆ.
10:48 ಇಲ್ಲಿ ಸಾಕಷ್ಟು ವಿರೂಪವಾಗಿದೆ ಎಂದು ನೀವು ನೋಡಬಹುದು. ನಾನು ಅದರ ತಿದ್ದುಪಡಿಗಾಗಿ ನೋಡಬೇಕು. ಆದರೆ ಈಗ ನಾನು ಈ ಇಮೇಜನ್ನು ಕ್ರಾಪ್ ಮಾಡುತ್ತಿದ್ದೇನೆ.
11:07 ಇದು ಪರವಾಗಿಲ್ಲ.
11:13 ನಾನು ಇಮೇಜನ್ನು ಸರಿಯಾಗಿ ತಿರುಗಿಸಲಿಲ್ಲ ಎಂದು ನನಗನ್ನಿಸುತ್ತದೆ.
11:23 ಸರಿ, ನಾನು ಸಾಕಷ್ಟು ತಿರುಗಿಸಲಿಲ್ಲ ಮತ್ತು ಸರಿಯಾದ ಸ್ಥಾನವನ್ನು ಆಯ್ಕೆಮಾಡಲಿಲ್ಲ.
11:34 ಅದ್ದರಿಂದ ನಾವು ಇದನ್ನು ಮತ್ತೆ ಮಾಡೋಣ.
11:39 ನಾನು Ctrl + Z ಒತ್ತಿ ‘ಸ್ಟೆಪ್’ಗಳನ್ನು ‘ಅನ್-ಡು’ ಮಾಡುತ್ತೇನೆ.
12:00 Rotate Tool ಅನ್ನು ಮತ್ತೆ ಆಯ್ಕೆಮಾಡುತ್ತೇನೆ.
12:10 ಮೊದಲು ಮಾಡಿದ ‘ಸೆಟ್ಟಿಂಗ್’ಗಳನ್ನು ನಾನು ಬದಲಾಯಿಸುವುದಿಲ್ಲ. ಈಗ, ಇಮೇಜ್ನ ಕೇಂದ್ರವನ್ನು ಇಲ್ಲಿಯ TV ಟಾವರ್ ನಲ್ಲಿ ಸೆಟ್ ಮಾಡುತ್ತಿದ್ದೇನೆ.
12:34 ಈಗ ಇದನ್ನು TV ಟಾವರ್ ಗೆ ಹೊಂದಿಸುತ್ತಿದ್ದೇನೆ.
12:41 TV ಟಾವರ್, ‘ಇಮೇಜ್’ನ ಪ್ರಮುಖವಾದ ಭಾಗವಾಗಿದೆ. ಹೀಗಾಗಿ , ಅದು ನೇರವಾಗಿಲ್ಲದಿದ್ದರೆ ಇಮೇಜ್ ಸಹ ನೇರವಾಗಿಲ್ಲವೆನಿಸುತ್ತದೆ.
12:59 ಇದು ಹೆಚ್ಚು ಉತ್ತಮವಾಗಿ ಕಾಣುತ್ತದೆ.
13:01 ಈಗ Crop Tool ಅನ್ನು ತೆಗೆದುಕೊಂಡು, ಅದರಲ್ಲಿ ಹೆಚ್ಚು ನಿರುಪಯುಕ್ತ ಸ್ಥಳವನ್ನು ಹೊಂದಿರದ ‘ಕ್ರಾಪ್’ಅನ್ನು ಆರಿಸುತ್ತೇನೆ.
13:26 ಈಗ, ಕೊನೆಯದಾಗಿ, ಇಮೇಜ್ನಲ್ಲಿ ಸ್ವಲ್ಪ ಹೆಚ್ಚು ಕಾಂಟ್ರಾಸ್ಟ್ ಅನ್ನು ತರಲು ಬಹುಶಃ ಸ್ವಲ್ಪ ‘ಕರ್ವ್ಸ್’.
13:44 ಇದು ಪರವಾಗಿಲ್ಲ. ಈಗ ನಾನು ಈ ಇಮೇಜನ್ನು ಮುಗಿಸಿದ್ದೇನೆ.
13:50 ಈ ಇಮೇಜ್, ‘ಪೋರ್ಟ್ರೇಟ್ ಮೋಡ್’ನಲ್ಲಿ ಇರಬೇಕು, ಹೀಗಾಗಿ ನಾನು ಇದನ್ನು ಇಲ್ಲಿ ಬದಲಾಯಿಸಬೇಕು.
13:59 ನಾನು ಕ್ರಮವಾಗಿ, Image, Transform ಮತ್ತು Rotate 90 degree anti-clockwise ಗಳಿಗೆ ಹೋಗುತ್ತೇನೆ.
14:08 ಈಗ ನನ್ನ ಇಮೇಜ್, ತಿರುಗಿಸಲ್ಪಡುತ್ತದೆ.
14:11 ನಾವು ಇಮೇಜನ್ನು 90 ಅಂಶ ತಿರುಗಿಸಿದಾಗ, ಇದರ ಗುಣಮಟ್ಟದಲ್ಲಿ ಎನೂ ನಷ್ಟವಾಗಿಲ್ಲ.ಇದು jpeg (ಜೇ-ಪೆಗ್) ‘ಇಮೇಜ್’ಗಳಲ್ಲಿ ವಿಶೇಷವಾಗಿ ಮುಖ್ಯವಾಗಿದೆ.
14:28 ಈಗ ನಾವು ಈ ‘ಇಮೇಜ’ಗೆ ಇನ್ನೂ ಸ್ವಲ್ಪ ‘ಕಾಂಟ್ರಾಸ್ಟ್’ಅನ್ನು ಕೊಡೋಣ. ಇದನ್ನು ಮಾಡಲು ನಾನು ‘ಕರ್ವ್ಸ್ ಟೂಲ್’ಅನ್ನು ಬಳಸುತ್ತೇನೆ.
14:37 ನೀವು ‘ಲೆವಲ್ಸ್ ಟೂಲ್’ ಅಥವಾ ಬೇರೆಯದನ್ನು ಬಳಸಬಹುದು. ಆದರೆ ‘ಕರ್ವ್ಸ್ ಟೂಲ್’ ನನಗಾಗಿ ಅತ್ಯುತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ.
14:44 ಸ್ವಲ್ಪಮಟ್ಟಿನ ‘S’ ‘ಕರ್ವ್’ನ್ನು ಅದರ ಮೇಲೆ ಇಡಿ ಮತ್ತು ಇದು ಆಗಿದೆ ಎಂದು ನನಗೆನಿಸುತ್ತಿದೆ, ಆದ್ದರಿಂದ ನಾನು ಇಮೇಜನ್ನು ಸೇವ್ ಮಾಡುತ್ತೇನೆ.
14:59 ಈಗ ಮುಂದಿನ ಇಮೇಜ್.
15:01 ಒಟ್ಟಿನಲ್ಲಿ, ನಿಮ್ಮ ಇಮೇಜನ್ನು ಶೀಘ್ರವಾಗಿ ಎಡಿಟ್ ಮಾಡಲು ನಿಮಗೆ ಕೆಲವು ಮೂಲಭೂತ ಟೂಲ್ಗಳು ಬೇಕು.
15:10 ಮೊದಲನೆಯದು Rotate ಟೂಲ್.
15:13 Corrective ‘ಮೋಡ್’ಅನ್ನು ಮತ್ತು Preview ಗಾಗಿ Grid ಅನ್ನು ಬಳಸಿ. ‘ಗ್ರಿಡ್’ಅನ್ನು ಲಂಬವಾದ ಅಥವಾ ಅಡ್ಡಲಾದ ಗೆರೆಗಳಿಗೆ ಹೊಂದಿಸಿರಿ.
15:24 ಆಮೇಲೆ, ಓರೆಯಾದ ಗೆರೆಗಳಿಗಾಗಿ ನಿಮಗೆ Perspective (ಪರ್ಸ್ಪೆಕ್ಟಿವ್) ‘ಟೂಲ್’ನ ಅಗತ್ಯವಿದೆ.
15:31 ಮತ್ತೆ, Corrective ‘ಮೋಡ್’ಅನ್ನು ಮತ್ತು Grid ಅನ್ನು ಬಳಸಿರಿ ಮತ್ತು ‘ಗ್ರಿಡ್’ಅನ್ನು, ಈ ಲಂಬವಾದ ಅಥವಾ ಅಡ್ಡಲಾದ ಗೆರೆಗಳಿಗೆ ಹೊಂದಿಸಿರಿ
15:48 ‘ಇಮೇಜ್’ನ ಕಾಂಟ್ರಾಸ್ಟ್ ಮತ್ತು ಲಘುತ್ವ ಸರಿಪಡಿಸುವದಕ್ಕಾಗಿ, Curves Tool ಅನ್ನು ಆಯ್ಕೆಮಾಡಿ ಮತ್ತು ಒಂದು ' S ' ಕರ್ವ್’ಅನ್ನು ಅನ್ವಯಿಸಿ. ಇದು ಹೆಚ್ಚಿನ ಸಂದರ್ಭಗಳಲ್ಲಿ ಸಹಕಾರಿಯಾಗುತ್ತದೆ, ಅಥವಾ ಕೆಲವು ಸಂದರ್ಭಗಳಲ್ಲಿ ನಿಮಗೆ ನಯವಾದ ಚಿತ್ರ ಬೇಕಿದ್ದರೆ ಆವಾಗ 'ಇನ್ವರ್ಟೆಡ್ S' ಕರ್ವ್’ಅನ್ನು ಅನ್ವಯಿಸಿ. ಇಲ್ಲಿ ಹೊರಗೆ ನೀವು ನಿಜವಾದ ಮಂಜು ನೋಡಬಹುದು.
16:23 ಕ್ರಮವಾಗಿ Image, Transform ಮೆನ್ಯೂಗಳಿಗೆ ಹೋಗಿರಿ. ಇಲ್ಲಿ, ನೀವು ಇಮೇಜನ್ನು Rotate ಮಾಡಬಹುದು ಹಾಗೂ ಔಟ್ಪುಟ್ ಸೈಜನ್ನು Scale ಮಾಡಬಹುದು.
16:37 ಕೊನೆಯದಾಗಿ, Filters, ಶೀಘ್ರವಾಗಿ ಎಡಿಟ್ ಮಾಡಲು ಮುಖ್ಯವಾಗಿದೆ.
16:43 Enhance ಮತ್ತು Sharpen ಗಳಿಗೆ ಹೋಗಿರಿ.
16:47 ಬಹಳಷ್ಟು ಟೂಲ್ಗಳನ್ನು ಅನ್ವಯಿಸಿದ ಮೇಲೆ, ಉದಾಹರಣೆಗೆ, rotating ಅಥವಾ Transformation tool, Perspective tool ಅಥವಾ Resizing, ಚಿತ್ರವು ನಳನಳಿಸುವುದು.
17:02 ‘ಶಾರ್ಪನಿಂಗ್’ ಜೊತೆಗೆ ನೀವು ಅದನ್ನು ಪುನಃ ಮಾಡಬಹುದು.
17:08 ನೀವು Layers ನೊಂದಿಗೆ ಪಳಗಬೇಕು.
17:15 ಮೊದಲು ಲೇಯರನ್ನು ಎರಡುಸಲ ಮಾಡಿ. ಉದಾಹರಣೆಗೆ, Overlay ಮೋಡ್ ಅಥವಾ ಇನ್ನಿತರ ಮೋಡ್ ಗಳಲ್ಲಿ ಏನಾಗುತ್ತದೆ ಎಂದು ಪರಿಶೀಲಿಸಿರಿ.
17:26 ಪರಿಶೋಧಿಸಲು ಇಲ್ಲಿ ಬೇಕಾದಷ್ಟಿದೆ. ಅವುಗಳನ್ನು ನಾನು ಮತ್ತೆ ಯಾವಾಗಲಾದರೂ ವಿವರಿಸುತ್ತೇನೆ.
17:33 ಲೇಯರ್ ಮೋಡನ್ನು ಪ್ರತಿಸಲ ನಾನು ಬದಲಾಯಿಸಿದಾಗ ನನಗೆ ಪೂರ್ತಿಯಾಗಿ ಬೇರೆಯಾದ ಇಮೇಜ್ ಸಿಗುತ್ತದೆ ಎಂದು ನೀವು ನೋಡುತ್ತೀರಿ.
17:41 ನಿಮಗೆ ‘ಇಮೇಜ್’ನ ಒಂದೇ ಒಂದು ಭಾಗವನ್ನು ಬದಲಾಯಿಸಬೇಕಾಗಿದ್ದರೆ, Layer mask ಅನ್ನು ಸೇರಿಸಿರಿ ಮತ್ತು ‘ಇಮೇಜ್’ನಲ್ಲಿ ನಿಮಗೆ ನೋಡಬೇಕಾಗಿರುವುದನ್ನು White ನಿಂದ ಹಾಗೂ,
17:58 ನೋಡಲು ಬೇಡವಾಗಿರುವುದನ್ನು Black ನಿಂದ ತುಂಬಿಸಿರಿ.
18:05 ಬೂದುಬಣ್ಣವು ಭಾಗಶಃ ಕಾಣುತ್ತಿದೆ ಮತ್ತು ಅದು ಪಾರದರ್ಶಕವಾಗಿದೆ.
18:12 ಇದು ಈ ವಾರಕ್ಕಾಗಿ ಇತ್ತು ಎಂದು ನನಗೆನ್ನಿಸುತ್ತದೆ,
18:17 ಮುಂದಿನ ವಾರ ನಿಮ್ಮನ್ನು ಮತ್ತೆ ನೋಡುವೆನೆಂದು ಆಶಿಸುತ್ತೇನೆ. ವಂದನೆಗಳು.
18:25 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದಿಂದ, ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಿದ್ವಾನ್ ನವೀನ್ ಭಟ್ಟ. ಉಪ್ಪಿನಪಟ್ಟಣ. ನಮಸ್ಕಾರ.

Contributors and Content Editors

NaveenBhat, Sandhya.np14