Difference between revisions of "C-and-Cpp/C4/Working-With-Structures/Kannada"
From Script | Spoken-Tutorial
Line 217: | Line 217: | ||
|- | |- | ||
| 05:05 | | 05:05 | ||
− | |Total is 210 (ಟೋಟಲ್ ಈಸ್ ಟೆನ್) | + | |Total is 210 (ಟೋಟಲ್ ಈಸ್ ಟು ಟೆನ್) |
|- | |- | ||
| 05:08 | | 05:08 |
Revision as of 11:43, 22 July 2015
Time | Narration |
00:01 | c ಮತ್ತು c++ ನಲ್ಲಿ Structures (ಸ್ಟ್ರಕ್ಚರ್ಸ್) ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು, |
00:08 | structure ಎಂದರೇನು ಹಾಗೂ, |
00:10 | structure ಡಿಕ್ಲೇರ್ ಮಾಡುವ ರೀತಿ. |
00:13 | ಇದನ್ನು ನಾವು ಒಂದು ಉದಾಹರಣೆಯೊಂದಿಗೆ ಮಾಡೋಣ. |
00:15 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.04 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:28 | structure ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ. |
00:31 | ಒಂದು ಅಥವಾ ಹೆಚ್ಚು ವೇರಿಯೇಬಲ್ ಗಳನ್ನು ಗುಂಪು ಮಾಡಿ, ಒಂದೇ ಹೆಸರಿನಿಂದ ಗುರುತಿಸುವುದನ್ನು structure ಎನ್ನುತ್ತಾರೆ. |
00:37 | ವಿವಿಧ ರೀತಿಯ ಡಾಟಾ ಗಳನ್ನು ಒಂದೇ ಆಬ್ಜೆಕ್ಟ್(object) ಎಂದು ವಿಂಗಡಿಸಲು structure ಅನ್ನು ಉಪಯೋಗಿಸುತ್ತಾರೆ. |
00:42 | ಇದನ್ನು ಕಂಪೌಂಡ್ ಡಾಟಾ ಟೈಪ್ (compound data-type) ಎನ್ನುತ್ತಾರೆ. |
00:45 | ಸಂಬಂಧಿತ ಮಾಹಿತಿಗಳನ್ನು ಒಟ್ಟುಗೂಡಿಸಲು structure ಅನ್ನು ಬಳಸುತ್ತಾರೆ. |
00:49 | ಈಗ ನಾವು structure ಅನ್ನು ಡಿಕ್ಲೇರ್ ಮಾಡಲು ಸಿಂಟ್ಯಾಕ್ಸ್ ಅನ್ನು ನೋಡೋಣ. |
00:52 | ಇಲ್ಲಿರುವ struct(ಸ್ಟ್ರಕ್ಟ್) ಎಂಬ ಶಬ್ದ, structure ಅನ್ನು ಡಿಕ್ಲೇರ್ ಮಾಡುತ್ತಿದ್ದೇವೆ ಎಂಬುದನ್ನು ಕಂಪೈಲರ್ ಗೆ ಹೇಳುತ್ತದೆ. |
00:59 | strcut_name(ಸ್ಟ್ರಕ್ಟ್ ನೇಮ್) ಎಂಬುದು structure ನ ಹೆಸರು. |
01:02 | ಉದಾಹರಣೆಗೆ: struct employee(ಎಂಪ್ಲಾಯೀ) |
01:04 | ನೀವು ಯಾವುದಾದರೂ ಹೆಸರನ್ನು ಕೊಡಬಹುದು. |
01:07 | ಈಗ structure ವೇರಿಯೇಬಲ್ ಅನ್ನು ಹೇಗೆ ಡಿಕ್ಲೇರ್ ಮಾಡುವುದೆಂದು ನೋಡೋಣ. |
01:10 | ಇದರ ಸಿಂಟ್ಯಾಕ್ಸ್ ಹೀಗಿದೆ |
01:13 | struct struct_name ಮತ್ತು struct_var(ಸ್ಟ್ರಕ್ಟ್ ವೇರ್) |
01:17 | struct_var ನ ಟೈಪ್ struc_name ಆಗಿರುತ್ತದೆ. |
01:21 | ಉದಾಹರಣೆಗೆ: struct employee addr(ಎ ಡಿ ಡಿ ಆರ್) |
01:26 | addr ಎಂಬುದು employee ಟೈಪ್ ನ ವೇರಿಯೇಬಲ್ ಆಗಿದೆ. |
01:30 | ಈಗ ನಮ್ಮ ಉದಾಹರಣೆಯನ್ನು ನೋಡೋಣ. |
01:33 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ, ಅದನ್ನು ಒಪನ್ ಮಾಡುತ್ತೇನೆ. |
01:37 | ನಮ್ಮ ಫೈಲ್ ನ ಹೆಸರು structure.c ಎಂಬುದನ್ನು ಗಮನದಲ್ಲಿಡಿ. |
01:41 | ಈ ಪ್ರೊಗ್ರಾಮ್ ನಲ್ಲಿ structure ಅನ್ನು ಉಪಯೋಗಿಸಿ, ಮೂರು ವಿಷಯಗಳ ಒಟ್ಟು ಅಂಕಗಳನ್ನು ಲೆಕ್ಕ ಮಾಡುತ್ತೇವೆ. |
01:48 | ಈಗ ಕೋಡ್ ಅನ್ನು ವಿವರಿಸುತ್ತೇನೆ. |
01:51 | ಇದು ನಮ್ಮ ಹೆಡರ್ ಫೈಲ್. |
01:53 | ಇಲ್ಲಿ ನಾವು student(ಸ್ಟೂಡೆಂಟ್) ಎಂಬ structure ಅನ್ನು ಡಿಕ್ಲೇರ್ ಮಾಡಿದ್ದೇವೆ. |
01:57 | ನಂತರ, English(ಇಂಗ್ಲೀಷ್), maths(ಮ್ಯಾಥ್ಸ್), science(ಸೈನ್ಸ್) ಎಂದು ಮೂರು ಇಂಟಿಜರ್ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿದ್ದೇವೆ. |
02:03 | structure ನ ಒಳಗೆ ಡಿಕ್ಲೇರ್ ಮಾಡಿದ ವೇರಿಯೇಬಲ್ ಗಳನ್ನು structure ನ ಸದಸ್ಯರು ಎನ್ನುತ್ತಾರೆ. |
02:09 | ಇದು ನಮ್ಮ ಮೈನ್ ಫಂಕ್ಷನ್. |
02:11 | ಇಲ್ಲಿ, total(ಟೋಟಲ್) ಎಂಬ ಇಂಟಿಜರ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
02:16 | ನಾವು ಈಗ stud (ಸ್ಟುಡ್) ಎಂಬ structure ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. Stud ಎಂಬುದು student ಟೈಪ್ ನ ವೇರಿಯೇಬಲ್ ಆಗಿದೆ, ಇದನ್ನು, structure ನ ಸದಸ್ಯರನ್ನು ಬಳಸಲು ಮತ್ತು ಮಾರ್ಪಡಿಸಲು ಉಪಯೋಗಿಸುತ್ತಾರೆ. |
02:28 | ಇವುಗಳಿಗೆ 75, 70 ಮತ್ತು 65 ಎಂದು ಮೌಲ್ಯಗಳನ್ನು ಕೊಡುವುದರೊಂದಿಗೆ, ನಾವು ಸದಸ್ಯರನ್ನು ಮಾರ್ಪಡಿಸುತ್ತಿದ್ದೇವೆ. |
02:37 | ಇಲ್ಲಿ ನಾವು ಮೂರು ವಿಷಯಗಳ ಒಟ್ಟು ಅಂಕವನ್ನು ಲೆಕ್ಕ ಮಾಡುತ್ತಿದ್ದೇವೆ. |
02:41 | ನಂತರ ನಾವು ಫಲಿತಾಂಶವನ್ನು ಪ್ರಿಂಟ್ ಮಾಡುತ್ತಿದ್ದೇವೆ. |
02:44 | ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್. |
02:46 | ಈಗ save ಅನ್ನು ಒತ್ತಿ. |
02:48 | ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
02:50 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:59 | ಕಂಪೈಲ್ ಮಾಡಲು, gcc ಸ್ಪೇಸ್ structure.c (ಸ್ಟ್ರಕ್ಚರ್ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ struct (ಸ್ಟ್ರಕ್ಟ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
03:12 | ./struct ( ಡಾಟ್ ಸ್ಲ್ಯಾಶ್ ಸ್ಟ್ರಕ್ಟ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
03:17 | ಔಟ್ ಪುಟ್ ಹೀಗೆ ತೋರಿಸುತ್ತದೆ, |
03:20 | Total is (ಟೋಟಲ್ ಈಸ್) 210 |
03:22 | ಈಗ ನಾವು ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಎಕ್ಸಿಕ್ಯೂಟ್ ಮಾಡೋಣ. |
03:26 | ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗೋಣ. |
03:28 | ಈದೇ ಕೋಡ್ ಅನ್ನು ಬದಲಾಯಿಸುತ್ತೇನೆ. |
03:30 | ಮೊದಲು, ನಿಮ್ಮ ಕೀಬೋರ್ಡ್ ನಲ್ಲಿ, shift, Ctrl ಮತ್ತು S ಒಮ್ಮೆಗೇ ಒತ್ತಿ. |
03:37 | ಈಗ ಫೈಲ್ ಅನ್ನು .cpp(ಡಾಟ್ ಸಿಪಿಪಿ ) ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ. |
03:41 | ಮತ್ತು save ಅನ್ನು ಒತ್ತಿ. |
03:43 | ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್(iostream) ಎಂದು ಬದಲಾಯಿಸೋಣ. |
03:47 | ಈಗ ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಸೇರಿಸಿ, |
03:53 | ಮತ್ತು save ಅನ್ನು ಒತ್ತಿ. |
03:56 | c++ ನಲ್ಲಿ structure ನ ಡಿಕ್ಲೇರೇಶನ್ c ಯಲ್ಲಿ ಇರುವಂತೆಯೇ ಇರುತ್ತದೆ. |
04:01 | ಹಾಗಾಗಿ ಇಲ್ಲಿ ಯಾವುದನ್ನೂ ಬದಲಾಯಿಸಬೆಕಾಗಿಲ್ಲ. |
04:05 | ಕೊನೆಗೆ, ಪ್ರಿಂಟ್ ಎಫ್ (printf) ಸ್ಟೇಟ್ಮೆಂಟ್ ಅನ್ನು ಸಿಔಟ್(cout) ಸ್ಟೇಟ್ಮೆಂಟ್ ಗೆ ಬದಲಾಯಿಸಿ. |
04:12 | ಫಾರ್ಮ್ಯಾಟ್ ಸ್ಪೆಸಿಫೈರ್ ಮತ್ತು (ಬ್ಯಾಕ್ ಸ್ಲ್ಯಾಶ್ ಎನ್) \n ಅನ್ನು ಡಿಲೀಟ್ ಮಾಡಿ. |
04:15 | ಈಗ ಕೋಮ ಅನ್ನು ಡಿಲೀಟ್ ಮಾಡಿ. |
04:17 | ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಗಳನ್ನು ಟೈಪ್ ಮಾಡಿ. |
04:20 | ಇಲ್ಲಿರುವ ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ, |
04:22 | ಮತ್ತು ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಗಳನ್ನು ಟೈಪ್ ಮಾಡಿ. |
04:25 | ಮತ್ತು ಡಬಲ್ ಕೋಟ್ಸ್ ನ ಒಳಗೆ ಬ್ಯಾಕ್ ಸ್ಲ್ಯಾಶ್ ಎನ್(\n) ಅನ್ನು ಟೈಪ್ ಮಾಡಿ. |
04:29 | ಈಗ save ಅನ್ನು ಒತ್ತಿ. |
04:31 | ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
04:33 | ನಮ್ಮ ಟರ್ಮಿನಲ್ ಗೆ ಹಿಂದಿರುಗಿ. |
04:35 | ಕಂಪೈಲ್ ಮಾಡಲು, g++ ಸ್ಪೇಸ್ structure.c ಸ್ಪೇಸ್ ಹೈಫನ್ ಒ(-o) ಸ್ಪೇಸ್ struct1 ಎಂದು ಟೈಪ್ ಮಾಡಿ. |
04:46 | structure.c ಫೈಲ್ ನ ಔಟ್ ಪುಟ್ ಪ್ಯಾರಾಮೀಟರ್ ಫೈಲ್, struct ಅನ್ನು ಬದಲಾಯಿಸಬಾರದು ಎಂದು ಇಲ್ಲಿ struct1 ಎಂದು ಇದೆ. |
04:55 | ಈಗ Enter ಅನ್ನು ಒತ್ತಿ. |
04:57 | ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಸ್ಟ್ರಕ್ಟ್ ಒನ್ (./struct1) ಎಂದು ಟೈಪ್ ಮಾಡಿ, enter ಅನ್ನು ಒತ್ತಿ. |
05:03 | ಔಟ್ ಪುಟ್ ಹೀಗೆ ತೋರಿಸುತ್ತದೆ: |
05:05 | Total is 210 (ಟೋಟಲ್ ಈಸ್ ಟು ಟೆನ್) |
05:08 | ಈ ಔಟ್ ಪುಟ್ ನಮ್ಮ c ಕೋಡ್ ನ ಔಟ್ ಪುಟ್ ನಂತೆ ಇರುವುದನ್ನು ನೋಡಬಹುದು. |
05:12 | ಈಗ ನಮ್ಮ ಸ್ಲೈಡ್ ಗೆ ಹಿಂದಿರುಗೋಣ. |
05:14 | ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು : |
05:18 | Structure. |
05:19 | structure ನ ಸಿಂಟ್ಯಾಕ್ಸ್. |
05:20 | ಉದಾಹರಣೆಗೆ: struct struct_name; |
05:23 | structure ನ ಸದಸ್ಯರನ್ನು ಬಳಸಲು |
05:25 | ಉದಾಹರಣೆಗೆ: stud.maths = 75;(ಸ್ಟುಡ್ ಡಾಟ್ ಮ್ಯಾಥ್ಸ್ ಈಸ್ ಈಕ್ವಲ್ ಟು ಸೆವೆನ್ಟಿ ಫೈವ್) |
05:30 | ಮತ್ತು structure ವೇರಿಯೇಬಲ್ ಗಳನ್ನು ಕೂಡಿಸುವುದು. |
05:33 | ಉದಾಹರಣೆಗೆ: ಟೋಟಲ್ ಈಸ್ ಈಕ್ವಲ್ ಟು ಸ್ಟುಡ್ ಡಾಟ್ ಇಂಗ್ಲಿಷ್ ಪ್ಲಸ್ ಸ್ಟುಡ್ ಡಾಟ್ ಮ್ಯಾಥ್ಸ್ ಪ್ಲಸ್ ಸ್ಟುಡ್ ಡಾಟ್ ಸೈನ್ಸ್(total = stud.english+ stud.maths + stud.science;) |
05:40 | ಉದ್ಯೋಗಿಯ ದಾಖಲೆಗಳಾದ ಹೆಸರು, ವಿಳಾಸ, ಬಿರುದು ಮತ್ತು ಸಂಬಳವನ್ನು ತೋರಿಸಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
05:49 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
05:52 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
05:54 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
05:59 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
06:04 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
06:08 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
06:15 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
06:18 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
06:25 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
06:29 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. |
06:33 | ಧನ್ಯವಾದಗಳು. |