C-and-Cpp/C4/Working-With-Structures/Kannada

From Script | Spoken-Tutorial
Jump to: navigation, search
Time Narration
00:01 c ಮತ್ತು c++ ನಲ್ಲಿ Structures (ಸ್ಟ್ರಕ್ಚರ್ಸ್) ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು,
00:08 structure ಎಂದರೇನು ಹಾಗೂ,
00:10 structure ಡಿಕ್ಲೇರ್ ಮಾಡುವ ರೀತಿ.
00:13 ಇದನ್ನು ನಾವು ಒಂದು ಉದಾಹರಣೆಯೊಂದಿಗೆ ಮಾಡೋಣ.
00:15 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.04 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ.
00:28 structure ಅನ್ನು ಪೀಠಿಕೆಯೊಂದಿಗೆ ಪ್ರಾರಂಭಿಸೋಣ.
00:31 ಒಂದು ಅಥವಾ ಹೆಚ್ಚು ವೇರಿಯೇಬಲ್ ಗಳನ್ನು ಗುಂಪು ಮಾಡಿ, ಒಂದೇ ಹೆಸರಿನಿಂದ ಗುರುತಿಸುವುದನ್ನು structure ಎನ್ನುತ್ತಾರೆ.
00:37 ವಿವಿಧ ರೀತಿಯ ಡಾಟಾ ಗಳನ್ನು ಒಂದೇ ಆಬ್ಜೆಕ್ಟ್(object) ಎಂದು ವಿಂಗಡಿಸಲು structure ಅನ್ನು ಉಪಯೋಗಿಸುತ್ತಾರೆ.
00:42 ಇದನ್ನು ಕಂಪೌಂಡ್ ಡಾಟಾ ಟೈಪ್ (compound data-type) ಎನ್ನುತ್ತಾರೆ.
00:45 ಸಂಬಂಧಿತ ಮಾಹಿತಿಗಳನ್ನು ಒಟ್ಟುಗೂಡಿಸಲು structure ಅನ್ನು ಬಳಸುತ್ತಾರೆ.
00:49 ಈಗ ನಾವು structure ಅನ್ನು ಡಿಕ್ಲೇರ್ ಮಾಡಲು ಸಿಂಟ್ಯಾಕ್ಸ್ ಅನ್ನು ನೋಡೋಣ.
00:52 ಇಲ್ಲಿರುವ struct(ಸ್ಟ್ರಕ್ಟ್) ಎಂಬ ಶಬ್ದ, structure ಅನ್ನು ಡಿಕ್ಲೇರ್ ಮಾಡುತ್ತಿದ್ದೇವೆ ಎಂಬುದನ್ನು ಕಂಪೈಲರ್ ಗೆ ಹೇಳುತ್ತದೆ.
00:59 strcut_name(ಸ್ಟ್ರಕ್ಟ್ ನೇಮ್) ಎಂಬುದು structure ನ ಹೆಸರು.
01:02 ಉದಾಹರಣೆಗೆ: struct employee(ಎಂಪ್ಲಾಯೀ)
01:04 ನೀವು ಯಾವುದಾದರೂ ಹೆಸರನ್ನು ಕೊಡಬಹುದು.
01:07 ಈಗ structure ವೇರಿಯೇಬಲ್ ಅನ್ನು ಹೇಗೆ ಡಿಕ್ಲೇರ್ ಮಾಡುವುದೆಂದು ನೋಡೋಣ.
01:10 ಇದರ ಸಿಂಟ್ಯಾಕ್ಸ್ ಹೀಗಿದೆ
01:13 struct struct_name ಮತ್ತು struct_var(ಸ್ಟ್ರಕ್ಟ್ ವೇರ್)
01:17 struct_var ನ ಟೈಪ್ struc_name ಆಗಿರುತ್ತದೆ.
01:21 ಉದಾಹರಣೆಗೆ: struct employee addr(ಎ ಡಿ ಡಿ ಆರ್)
01:26 addr ಎಂಬುದು employee ಟೈಪ್ ನ ವೇರಿಯೇಬಲ್ ಆಗಿದೆ.
01:30 ಈಗ ನಮ್ಮ ಉದಾಹರಣೆಯನ್ನು ನೋಡೋಣ.
01:33 ನಾನೀಗಾಗಲೇ ಪ್ರೊಗ್ರಾಮ್ ಅನ್ನು ಎಡಿಟರ್ ನಲ್ಲಿ ಟೈಪ್ ಮಾಡಿದ್ದೇನೆ, ಅದನ್ನು ಒಪನ್ ಮಾಡುತ್ತೇನೆ.
01:37 ನಮ್ಮ ಫೈಲ್ ನ ಹೆಸರು structure.c ಎಂಬುದನ್ನು ಗಮನದಲ್ಲಿಡಿ.
01:41 ಈ ಪ್ರೊಗ್ರಾಮ್ ನಲ್ಲಿ structure ಅನ್ನು ಉಪಯೋಗಿಸಿ, ಮೂರು ವಿಷಯಗಳ ಒಟ್ಟು ಅಂಕಗಳನ್ನು ಲೆಕ್ಕ ಮಾಡುತ್ತೇವೆ.
01:48 ಈಗ ಕೋಡ್ ಅನ್ನು ವಿವರಿಸುತ್ತೇನೆ.
01:51 ಇದು ನಮ್ಮ ಹೆಡರ್ ಫೈಲ್.
01:53 ಇಲ್ಲಿ ನಾವು student(ಸ್ಟೂಡೆಂಟ್) ಎಂಬ structure ಅನ್ನು ಡಿಕ್ಲೇರ್ ಮಾಡಿದ್ದೇವೆ.
01:57 ನಂತರ, English(ಇಂಗ್ಲೀಷ್), maths(ಮ್ಯಾಥ್ಸ್), science(ಸೈನ್ಸ್) ಎಂದು ಮೂರು ಇಂಟಿಜರ್ ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡಿದ್ದೇವೆ.
02:03 structure ನ ಒಳಗೆ ಡಿಕ್ಲೇರ್ ಮಾಡಿದ ವೇರಿಯೇಬಲ್ ಗಳನ್ನು structure ನ ಸದಸ್ಯರು ಎನ್ನುತ್ತಾರೆ.
02:09 ಇದು ನಮ್ಮ ಮೈನ್ ಫಂಕ್ಷನ್.
02:11 ಇಲ್ಲಿ, total(ಟೋಟಲ್) ಎಂಬ ಇಂಟಿಜರ್ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ.
02:16 ನಾವು ಈಗ stud (ಸ್ಟುಡ್) ಎಂಬ structure ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. Stud ಎಂಬುದು student ಟೈಪ್ ನ ವೇರಿಯೇಬಲ್ ಆಗಿದೆ, ಇದನ್ನು, structure ನ ಸದಸ್ಯರನ್ನು ಬಳಸಲು ಮತ್ತು ಮಾರ್ಪಡಿಸಲು ಉಪಯೋಗಿಸುತ್ತಾರೆ.
02:28 ಇವುಗಳಿಗೆ 75, 70 ಮತ್ತು 65 ಎಂದು ಮೌಲ್ಯಗಳನ್ನು ಕೊಡುವುದರೊಂದಿಗೆ, ನಾವು ಸದಸ್ಯರನ್ನು ಮಾರ್ಪಡಿಸುತ್ತಿದ್ದೇವೆ.
02:37 ಇಲ್ಲಿ ನಾವು ಮೂರು ವಿಷಯಗಳ ಒಟ್ಟು ಅಂಕವನ್ನು ಲೆಕ್ಕ ಮಾಡುತ್ತಿದ್ದೇವೆ.
02:41 ನಂತರ ನಾವು ಫಲಿತಾಂಶವನ್ನು ಪ್ರಿಂಟ್ ಮಾಡುತ್ತಿದ್ದೇವೆ.
02:44 ಇದು ನಮ್ಮ ರಿಟರ್ನ್ ಸ್ಟೇಟ್ಮೆಂಟ್.
02:46 ಈಗ save ಅನ್ನು ಒತ್ತಿ.
02:48 ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
02:50 ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ.
02:59 ಕಂಪೈಲ್ ಮಾಡಲು, gcc ಸ್ಪೇಸ್ structure.c (ಸ್ಟ್ರಕ್ಚರ್ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ struct (ಸ್ಟ್ರಕ್ಟ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ.
03:12 ./struct ( ಡಾಟ್ ಸ್ಲ್ಯಾಶ್ ಸ್ಟ್ರಕ್ಟ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ.
03:17 ಔಟ್ ಪುಟ್ ಹೀಗೆ ತೋರಿಸುತ್ತದೆ,
03:20 Total is (ಟೋಟಲ್ ಈಸ್) 210
03:22 ಈಗ ನಾವು ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಎಕ್ಸಿಕ್ಯೂಟ್ ಮಾಡೋಣ.
03:26 ನಮ್ಮ ಪ್ರೊಗ್ರಾಮ್ ಗೆ ಹಿಂದಿರುಗೋಣ.
03:28 ಈದೇ ಕೋಡ್ ಅನ್ನು ಬದಲಾಯಿಸುತ್ತೇನೆ.
03:30 ಮೊದಲು, ನಿಮ್ಮ ಕೀಬೋರ್ಡ್ ನಲ್ಲಿ, shift, Ctrl ಮತ್ತು S ಒಮ್ಮೆಗೇ ಒತ್ತಿ.
03:37 ಈಗ ಫೈಲ್ ಅನ್ನು .cpp(ಡಾಟ್ ಸಿಪಿಪಿ ) ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ.
03:41 ಮತ್ತು save ಅನ್ನು ಒತ್ತಿ.
03:43 ಹೆಡರ್ ಫೈಲ್ ಅನ್ನು ಐಒಸ್ಟ್ರೀಮ್(iostream) ಎಂದು ಬದಲಾಯಿಸೋಣ.
03:47 ಈಗ ಯೂಸಿಂಗ್ ಸ್ಟೇಟ್ಮೆಂಟ್ ಅನ್ನು ಸೇರಿಸಿ,
03:53 ಮತ್ತು save ಅನ್ನು ಒತ್ತಿ.
03:56 c++ ನಲ್ಲಿ structure ನ ಡಿಕ್ಲೇರೇಶನ್ c ಯಲ್ಲಿ ಇರುವಂತೆಯೇ ಇರುತ್ತದೆ.
04:01 ಹಾಗಾಗಿ ಇಲ್ಲಿ ಯಾವುದನ್ನೂ ಬದಲಾಯಿಸಬೆಕಾಗಿಲ್ಲ.
04:05 ಕೊನೆಗೆ, ಪ್ರಿಂಟ್ ಎಫ್ (printf) ಸ್ಟೇಟ್ಮೆಂಟ್ ಅನ್ನು ಸಿಔಟ್(cout) ಸ್ಟೇಟ್ಮೆಂಟ್ ಗೆ ಬದಲಾಯಿಸಿ.
04:12 ಫಾರ್ಮ್ಯಾಟ್ ಸ್ಪೆಸಿಫೈರ್ ಮತ್ತು (ಬ್ಯಾಕ್ ಸ್ಲ್ಯಾಶ್ ಎನ್) \n ಅನ್ನು ಡಿಲೀಟ್ ಮಾಡಿ.
04:15 ಈಗ ಕೋಮ ಅನ್ನು ಡಿಲೀಟ್ ಮಾಡಿ.
04:17 ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಗಳನ್ನು ಟೈಪ್ ಮಾಡಿ.
04:20 ಇಲ್ಲಿರುವ ಕ್ಲೋಸಿಂಗ್ ಬ್ರಾಕೆಟ್ ಅನ್ನು ಡಿಲೀಟ್ ಮಾಡಿ,
04:22 ಮತ್ತು ಎರಡು ಒಪನಿಂಗ್ ಆಂಗಲ್ ಬ್ರಾಕೆಟ್ ಗಳನ್ನು ಟೈಪ್ ಮಾಡಿ.
04:25 ಮತ್ತು ಡಬಲ್ ಕೋಟ್ಸ್ ನ ಒಳಗೆ ಬ್ಯಾಕ್ ಸ್ಲ್ಯಾಶ್ ಎನ್(\n) ಅನ್ನು ಟೈಪ್ ಮಾಡಿ.
04:29 ಈಗ save ಅನ್ನು ಒತ್ತಿ.
04:31 ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ.
04:33 ನಮ್ಮ ಟರ್ಮಿನಲ್ ಗೆ ಹಿಂದಿರುಗಿ.
04:35 ಕಂಪೈಲ್ ಮಾಡಲು, g++ ಸ್ಪೇಸ್ structure.c ಸ್ಪೇಸ್ ಹೈಫನ್ ಒ(-o) ಸ್ಪೇಸ್ struct1 ಎಂದು ಟೈಪ್ ಮಾಡಿ.
04:46 structure.c ಫೈಲ್ ನ ಔಟ್ ಪುಟ್ ಪ್ಯಾರಾಮೀಟರ್ ಫೈಲ್, struct ಅನ್ನು ಬದಲಾಯಿಸಬಾರದು ಎಂದು ಇಲ್ಲಿ struct1 ಎಂದು ಇದೆ.
04:55 ಈಗ Enter ಅನ್ನು ಒತ್ತಿ.
04:57 ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಸ್ಟ್ರಕ್ಟ್ ಒನ್ (./struct1) ಎಂದು ಟೈಪ್ ಮಾಡಿ, enter ಅನ್ನು ಒತ್ತಿ.
05:03 ಔಟ್ ಪುಟ್ ಹೀಗೆ ತೋರಿಸುತ್ತದೆ:
05:05 Total is 210 (ಟೋಟಲ್ ಈಸ್ ಟು ಟೆನ್)
05:08 ಈ ಔಟ್ ಪುಟ್ ನಮ್ಮ c ಕೋಡ್ ನ ಔಟ್ ಪುಟ್ ನಂತೆ ಇರುವುದನ್ನು ನೋಡಬಹುದು.
05:12 ಈಗ ನಮ್ಮ ಸ್ಲೈಡ್ ಗೆ ಹಿಂದಿರುಗೋಣ.
05:14 ಈಗ ಸಾರಾಂಶ ತಿಳಿಯೋಣ. ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿದ ಅಂಶಗಳು :
05:18 Structure. Structure ನ ಸಿಂಟ್ಯಾಕ್ಸ್.
05:20 ಉದಾಹರಣೆಗೆ: struct struct_name;
05:23 structure ನ ಸದಸ್ಯರನ್ನು ಬಳಸಲು
05:25 ಉದಾಹರಣೆಗೆ: stud.maths = 75;(ಸ್ಟುಡ್ ಡಾಟ್ ಮ್ಯಾಥ್ಸ್ ಈಸ್ ಈಕ್ವಲ್ ಟು ಸೆವೆನ್ಟಿ ಫೈವ್)
05:30 ಮತ್ತು structure ವೇರಿಯೇಬಲ್ ಗಳನ್ನು ಕೂಡಿಸುವುದು.
05:33 ಉದಾಹರಣೆಗೆ: ಟೋಟಲ್ ಈಸ್ ಈಕ್ವಲ್ ಟು ಸ್ಟುಡ್ ಡಾಟ್ ಇಂಗ್ಲಿಷ್ ಪ್ಲಸ್ ಸ್ಟುಡ್ ಡಾಟ್ ಮ್ಯಾಥ್ಸ್ ಪ್ಲಸ್ ಸ್ಟುಡ್ ಡಾಟ್ ಸೈನ್ಸ್(total = stud.english+ stud.maths + stud.science;)
05:40 ಉದ್ಯೋಗಿಯ ದಾಖಲೆಗಳಾದ ಹೆಸರು, ವಿಳಾಸ, ಬಿರುದು ಮತ್ತು ಸಂಬಳವನ್ನು ತೋರಿಸಲು ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ.
05:49 ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ.
05:52 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ.
05:54 ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು.
05:59 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ.
06:04 ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ.
06:08 ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ.
06:15 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ.
06:18 ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ.
06:25 ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ.
06:29 ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
06:33 ಧನ್ಯವಾದಗಳು.

Contributors and Content Editors

Chetana, PoojaMoolya, Vasudeva ahitanal