Ubuntu-Linux-on-Virtual-Box/C2/Installing-Ubuntu-Linux-OS-in-a-VirtualBox/Kannada
|
|
00:01 | Installing Ubuntu Linux OS in a VirtualBox ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, Windows ಬೇಸ್-ಮಷಿನ್ ಮೇಲೆ, ವರ್ಚ್ಯುವಲ್ ಬಾಕ್ಸ್ ನಲ್ಲಿ, Ubuntu Linux 16.04 ಅನ್ನು ಹೇಗೆ ಇನ್ಸ್ಟಾಲ್ ಮಾಡುವುದೆಂದು ಕಲಿಯುವೆವು. |
00:18 | ಈ ಟ್ಯುಟೋರಿಯಲ್ ಅನ್ನು: Windows OS ಆವೃತ್ತಿ 10, |
00:23 | VirtualBox ಆವೃತ್ತಿ 5.2.18, |
00:27 | Ubuntu Linux 16.04 OS ಇವುಗಳನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ. |
00:31 | ನಾವು ಆರಂಭಿಸುವ ಮೊದಲು, ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ. |
00:36 | 'ವರ್ಚ್ಯುವಲ್ ಬಾಕ್ಸ್' ನಲ್ಲಿ ಒಂದು OS ಅನ್ನು ಇನ್ಸ್ಟಾಲ್ ಮಾಡಲು, ಬೇಸ್-ಮಶಿನ್ ಈ ಕೆಳಗಿನ ಕಾನ್ಫಿಗರೇಷನ್ ಅನ್ನು ಹೊಂದಿರಬೇಕು: |
00:43 | i 3 (ಐ ೩) ಅಥವಾ ಅದಕ್ಕಿಂತ ಹೆಚ್ಚಿನ ಪ್ರೊಸೆಸರ್, |
00:46 | 4 GB ಅಥವಾ ಅದಕ್ಕಿಂತ ಹೆಚ್ಚಿನ RAM (ರ್ಯಾ ಮ್), |
00:49 | 50 GB (ಜಿ ಬಿ) ಅಥವಾ ಅದಕ್ಕಿಂತ ಹೆಚ್ಚು ಖಾಲಿ ಸ್ಪೇಸ್ ಹೊಂದಿರುವ ಹಾರ್ಡ್ ಡಿಸ್ಕ್ ಮತ್ತು |
00:54 | BIOS ನಲ್ಲಿ (ಬಯೋಸ್) Virtualization (ವರ್ಚ್ಯುವಲೈಜೇಷನ್) ಅನ್ನು ಸಕ್ರಿಯಗೊಳಿಸಿರಬೇಕು (enabled). |
00:58 | ಇದು ವರ್ಚ್ಯುವಲ್ ಬಾಕ್ಸ್, ಸಲೀಸಾಗಿ ಕೆಲಸ ಮಾಡುವುದನ್ನು ಖಚಿತಪಡಿಸುತ್ತದೆ. |
01:03 | ನಾವು ಇನ್ಸ್ಟಾಲ್ ಮಾಡುವುದನ್ನು ಆರಂಭಿಸುವ ಮೊದಲು, System type , 32-bit ಇದೆಯೇ ಅಥವಾ 64-bit ಆಗಿದೆಯೇ ಎಂದು ದಯವಿಟ್ಟು ಪರೀಕ್ಷಿಸಿ. |
01:12 | ಇದನ್ನು ಮಾಡಲು, Start ಮೆನ್ಯು ದ ಪಕ್ಕದಲ್ಲಿರುವ ಸರ್ಚ್-ಬಾಕ್ಸ್ ಗೆ ಹೋಗಿ. ಹೀಗೆ ಟೈಪ್ ಮಾಡಿ: About your PC. |
01:22 | About your PC ಯನ್ನು ಆಯ್ಕೆಮಾಡಿ. |
01:25 | System type ನ ಅಡಿಯಲ್ಲಿ, ನಾವು Windows ನ 32-bit ಅಥವಾ 64-bit ಆವೃತ್ತಿಗಳಲ್ಲಿ ಯಾವುದನ್ನು ರನ್ ಮಾಡುತ್ತಿದ್ದೇವೆ ಎಂದು ನೋಡಬಹುದು. |
01:34 | ಇಲ್ಲಿ, ನನ್ನದು 64-bit Windows ಆಗಿದೆ. |
01:39 | ನಿಮ್ಮ ಸಿಸ್ಟಂ-ಟೈಪ್ ಗೆ ಅನುಸಾರವಾಗಿ, ಈ ಲಿಂಕ್ ನಿಂದ ಸೂಕ್ತವಾದ Ubuntu Linux 16.04 ISO ಅನ್ನು ಡೌನ್ಲೋಡ್ ಮಾಡಿ:
http colon double slash releases dot ubuntu dot com slash 16.04 |
01:59 | 32-bit ಗಾಗಿ, ಇದು ಹೀಗಿದೆ:
ubuntu hyphen 16.04.5 hyphen desktop hyphen i386 dot iso |
02:12 | 64-bit ಗಾಗಿ, ಇದು ಹೀಗಿದೆ:
ubuntu hyphen 16.04.5 hyphen desktop hyphen amd64 dot iso |
02:26 | ಈಮೊದಲು ಹೇಳಿದಂತೆ, ನನ್ನ Windows System type, 64-bit ಆಗಿದೆ. |
02:31 | ಆದ್ದರಿಂದ, ಇಲ್ಲಿ ವಿವರಣೆಗಾಗಿ ನಾನು ubuntu hyphen 16.04.5 hyphen desktop hyphen amd64.iso ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ. |
02:45 | ಮೊದಲು, 'ವರ್ಚ್ಯುವಲ್ ಬಾಕ್ಸ್' ನ (VirtualBox) ಒಳಗೆ, 'ವರ್ಚ್ಯುವಲ್ ಮಷಿನ್' ಅನ್ನು (virtual machine) ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ಕಲಿಯುವೆವು. |
02:52 | ಡೆಸ್ಕ್-ಟಾಪ್ ನ (Desktop) ಮೇಲೆ, VirtualBox ಅನ್ನು ಲಾಂಚ್ ಮಾಡಲು, ಅದರ ಐಕಾನ್ ಮೇಲೆ ಡಬಲ್-ಕ್ಲಿಕ್ ಮಾಡಿ. |
02:59 | VirtualBox ವಿಂಡೋದ ಮೇಲ್ಗಡೆ, New ಎಂಬ ನೀಲಿ ಬಣ್ಣದ ಐಕಾನ್ ಅನ್ನು ಗುರುತಿಸಿ, ಅದನ್ನು ಕ್ಲಿಕ್ ಮಾಡಿ. |
03:06 | ಈಗ ತೆರೆದುಕೊಳ್ಳುವ Create Virtual Machine ವಿಂಡೋದಲ್ಲಿ, Name and Operating system ಎಂಬ ಪೇಜ್ ಅನ್ನು ನಾವು ನೋಡಬಹುದು. |
03:14 | Name ಎಂಬ ಟೆಕ್ಸ್ಟ್-ಬಾಕ್ಸ್ ನ ಅಡಿಯಲ್ಲಿ, ನಿಮಗೆ ಕೊಡಬೇಕಾದ ಹೆಸರನ್ನು ಟೈಪ್ ಮಾಡಿ.
ನಾನು Ubuntu ಎಂದು ಟೈಪ್ ಮಾಡುವೆನು. |
03:22 | ಆಮೇಲೆ, Type ಎಂಬ ಡ್ರಾಪ್-ಡೌನ್ ನಲ್ಲಿ, Linux ಅನ್ನು ಆಯ್ಕೆಮಾಡಿ. |
03:27 | Version ಎಂಬ ಡ್ರಾಪ್-ಡೌನ್ ನಿಂದ, ನಾನು Ubuntu (64-bit) ಅನ್ನು ಆಯ್ಕೆ ಮಾಡುವೆನು. |
03:33 | ಒಂದುವೇಳೆ, ನಿಮ್ಮ ಬೇಸ್ ಮಷಿನ್ 32-bit ಆಗಿದ್ದರೆ, ಆಗ ಡ್ರಾಪ್-ಡೌನ್ ನಿಂದ, Ubuntu (32-bit) ಅನ್ನು ಆಯ್ಕೆಮಾಡಿ. |
03:40 | ಮತ್ತು, ವಿಂಡೋದ ಕೆಳಗೆ ಇರುವ Next ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
03:44 | ಮುಂದಿನ ಪೇಜ್, Memory size ಆಗಿದೆ.
ಇಲ್ಲಿ, ನಾವು 'ವರ್ಚ್ಯುವಲ್ ಮಷಿನ್'ಗಾಗಿ RAM ನ ಸೈಜ್ ಅನ್ನು ನಿಗದಿ ಮಾಡುತ್ತೇವೆ. |
03:52 | RAM ಗಾಗಿ, ಸೈಜ್ ಅನ್ನು ನಿಗದಿ ಮಾಡಲು, ಸ್ಲೈಡರ್ ಅಥವಾ ಟೆಕ್ಸ್ಟ್-ಬಾಕ್ಸ್ ಅನ್ನು ಬಳಸಿ. |
03:58 | ಯೂನಿಟ್ MB ಎಂದು ಇರುವುದರಿಂದ, ನಾನು ಟೆಕ್ಸ್ಟ್-ಬಾಕ್ಸ್ ನಲ್ಲಿ 4048 ಎಂದು ಟೈಪ್ ಮಾಡುವೆನು. |
04:05 | ಇದು 4GB RAM ಅನ್ನು, ಈ 'ವರ್ಚುವಲ್ ಮಷಿನ್'ಗಾಗಿ ನಿಗದಿ ಮಾಡುವುದು. |
04:11 | 'ಬೇಸ್ ಮಷಿನ್' ನ ಸಿಸ್ಟಮ್-ಮೆಮರಿ ಕೇವಲ 4 GB ಆಗಿದ್ದರೆ, ಆಗ ವರ್ಚುವಲ್- ಮಷಿನ್ ಗಾಗಿ 2 GB ಯನ್ನು ನಿಗದಿಮಾಡಿ. |
04:19 | ಈಗ, ವಿಂಡೋದ ಕೆಳಭಾಗದಲ್ಲಿರುವ Next ಬಟನ್ ಮೇಲೆ ಕ್ಲಿಕ್ ಮಾಡಿ. |
04:24 | Hard disk ಪೇಜ್ ನಲ್ಲಿ, ನಾವು ಯಾವ ರೀತಿಯ 'ವರ್ಚುವಲ್ ಹಾರ್ಡ್ ಡಿಸ್ಕ್' ಅನ್ನು ಬಳಸುವವರಿದ್ದೇವೆ ಎಂದು ನಿರ್ಧರಿಸಬೇಕು. |
04:32 | ನಾನು ಒಂದು ಹೊಸ ವರ್ಚುವಲ್- ಮಷಿನ್ ಅನ್ನು ತಯಾರಿಸುತ್ತಿದ್ದೇನೆ. ಹೀಗಾಗಿ, ನಾನು Create a virtual hard disk now ಅನ್ನು ಆಯ್ಕೆಮಾಡುತ್ತೇನೆ. |
04:39 | ಈಗಾಗಲೇ 'ಡೀಫಾಲ್ಟ್' ಆಗಿ, ಈ ಆಯ್ಕೆಯು ನಿಮಗಾಗಿ ಆಯ್ಕೆ ಆಗಿರಬಹುದು. |
04:44 | ಕೆಳಗೆ ಇರುವ Create ಬಟನ್ ಮೇಲೆ ಕ್ಲಿಕ್ ಮಾಡಿ. |
04:48 | Hard disk file type ನಲ್ಲಿ, VDI (Virtual Disk Image) ಅನ್ನು ಆಯ್ಕೆಮಾಡಿ. ಮತ್ತು, ವಿಂಡೋದ ಕೆಳಭಾಗದಲ್ಲಿರುವ Next ಬಟನ್ ಮೇಲೆ ಕ್ಲಿಕ್ ಮಾಡಿ. |
04:59 | Storage on physical hard disk ಎಂಬ ಮುಂದಿನ ಪೇಜ್ ನಲ್ಲಿ, ನಮ್ಮ 'ಹಾರ್ಡ್ ಡಿಸ್ಕ್ ಸ್ಟೋರೇಜ್' ಹೇಗಿರಬೇಕು ಎಂದು ನಾವು ನಿರ್ಧರಿಸಬೇಕು. ಇಲ್ಲಿ ಎರಡು ಆಯ್ಕೆಗಳಿವೆ. |
05:11 | Dynamically allocated ಎಂಬ ಆಯ್ಕೆಯು, ಬಳಕೆಯನ್ನು ಆಧರಿಸಿ 'ಹಾರ್ಡ್ ಡಿಸ್ಕ್ ಸ್ಟೋರೇಜ್' ಅನ್ನು ಹೆಚ್ಚಿಸುವುದು. |
05:19 | Fixed Size, ನಾವು ಹೇಳಿದಷ್ಟು ಸೈಜ್ ಅನ್ನು ನಿಗದಿಪಡಿಸುವುದು.
ನಾನು Fixed size ಅನ್ನು ಆರಿಸಿಕೊಳ್ಳುತ್ತೇನೆ. |
05:27 | ಮುಂದುವರಿಯಲು, ಈಗ Next ಬಟನ್ ಮೇಲೆ ಕ್ಲಿಕ್ ಮಾಡಿ. |
05:31 | File location and size ಎಂಬ ಮುಂದಿನ ಪೇಜ್, 'ಹಾರ್ಡ್-ಡಿಸ್ಕ್ ಸೈಜ್' ಅನ್ನು ನಿಗದಿಪಡಿಸಲು ಆಗಿದೆ. |
05:38 | ಇಲ್ಲಿ ನಾವು ಮೊದಲು ಕೊಟ್ಟಿರುವ 'Ubuntu' ಎಂಬ ಹೆಸರನ್ನು ನೀವು ನೋಡಬಹುದು. |
05:44 | ಅಲ್ಲದೆ, ಬಲಗಡೆಯಲ್ಲಿ ನಾವು ಒಂದು ಫೋಲ್ಡರ್ ನ ಐಕಾನ್ ಅನ್ನು ನೋಡಬಹುದು. |
05:48 | ನಿಮಗೆ ಈ 'ವರ್ಚುವಲ್ ಡಿಸ್ಕ್ ಇಮೇಜ್' ಅನ್ನು ಬೇರೊಂದು ಸ್ಥಳದಲ್ಲಿ (ಲೊಕೇಷನ್) ಸೇವ್ ಮಾಡಬೇಕಾಗಿದ್ದರೆ, ಈ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದುವರೆಯಿರಿ. ನಾನು ಈ ವಿವರಣೆಯಲ್ಲಿ, ಈ ಭಾಗವನ್ನು ಬಿಟ್ಟುಬಿಡುತ್ತೇನೆ. |
06:02 | ನಂತರ, 'ಹಾರ್ಡ್-ಡಿಸ್ಕ್ ಸೈಜ್'ಅನ್ನು ನಿಗದಿಪಡಿಸಲು, ಸ್ಲೈಡರ್ ಅಥವಾ ಟೆಕ್ಸ್ಟ್-ಬಾಕ್ಸ್ ಅನ್ನು ಬಳಸಿ. |
06:09 | ಶಿಫಾರಸು ಮಾಡಲಾದ ಸೈಜ್ 10GB ಆಗಿದೆ. ಆದರೆ ನಾನು ಇದನ್ನು 20GBಗೆ ಬದಲಾಯಿಸುವೆನು. |
06:16 | ಆಮೇಲೆ, ಕೆಳಗೆ Create ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
06:20 | ಇದು, ಇಲ್ಲಿಯವರೆಗೆ ನಾವು ಒದಗಿಸಿದ ವಿವರಗಳೊಂದಿಗೆ ಹೊಸದೊಂದು ' ವರ್ಚುವಲ್ ಮಷಿನ್ ಬೇಸ್' (Virtual Machine base) ಅನ್ನು ಕ್ರಿಯೇಟ್ ಮಾಡುತ್ತದೆ. ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. |
06:31 | 'ವರ್ಚುವಲ್ ಮಷಿನ್' ಕ್ರಿಯೇಟ್ ಆದ ನಂತರ, ಎಡಭಾಗದಲ್ಲಿ ನಾವು ಅದನ್ನು ನೋಡಬಹುದು. |
06:37 | ಈಗಷ್ಟೇ ನಾವು ಕ್ರಿಯೇಟ್ ಮಾಡಿರುವ 'ವರ್ಚುವಲ್ ಮಷಿನ್' - Ubuntu ಇಲ್ಲಿದೆ. |
06:42 | ನಾವು 'ವರ್ಚುವಲ್ ಮಷಿನ್', ಎಂದರೆ VMಅನ್ನು ಯಶಸ್ವಿಯಾಗಿ ಕ್ರಿಯೇಟ್ ಮಾಡಿದ್ದೇವೆ ಎಂದು ಇದು ಸೂಚಿಸುತ್ತದೆ. |
06:49 | ನಂತರ, ನಾವು ಇದರ ಮೇಲೆ Ubuntu Linux 16.04 ಅನ್ನು ಇನ್ಸ್ಟಾಲ್ ಮಾಡೋಣ. |
06:55 | ಡೀಫಾಲ್ಟ್ ಆಗಿ 'ವರ್ಚುವಲ್ ಮಷಿನ್', Power off ಮೋಡ್ ನಲ್ಲಿ ಇರುವುದು. |
07:00 | 'ವರ್ಚುವಲ್ ಮಷಿನ್' Ubuntu ಅನ್ನು ಆಯ್ಕೆಮಾಡಿ. ಆಮೇಲೆ, ಮೇಲ್ಗಡೆ ಹಸಿರು ಬಣ್ಣದ ಬಾಣದ ಗುರುತಿನ Start ಬಟನ್ ಮೇಲೆ ಕ್ಲಿಕ್ ಮಾಡಿ. |
07:09 | ಒಂದು ಹೊಸ ವಿಂಡೋ ಪಾಪ್-ಅಪ್ ಆಗುವುದು. ಮತ್ತು, ನಮಗೆ virtual optical disk file ಅಥವಾ physical optical drive ಅನ್ನು ಆಯ್ಕೆ ಮಾಡಲು ಕೇಳುವುದು.
ಫೋಲ್ಡರ್ ಐಕಾನ್ ಅನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ. |
07:22 | ಈಗ, ಬ್ರೌಸ್ ಮಾಡಿ ಮತ್ತು ubuntu hyphen 16.04.5 hyphen desktop hyphen amd64.iso ಫೈಲ್ ಅನ್ನು ಆಯ್ಕೆಮಾಡಿ. ಇದನ್ನು ಮೊದಲೇ ನಾವು ಡೌನ್ಲೋಡ್ ಮಾಡಿದ್ದೆವು. |
07:37 | ಮತ್ತು, ಕೆಳಗಡೆ Open ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
07:41 | ಈಗ ನಮ್ಮನ್ನು ಮತ್ತೆ ಹಿಂದಿನ ಸ್ಕ್ರೀನ್ ಗೆ ಕಳಿಸಲಾಗುವುದು.
ಗಮನಿಸಿ: ಈಗ ubuntu hyphen 16.04.5 hyphen desktop hyphen amd64.iso ಅನ್ನು ಸೆಲೆಕ್ಟ್ ಮಾಡಲಾಗಿದೆ. |
07:56 | ಇನ್ಸ್ಟಾಲೇಶನ್ ಅನ್ನು ಆರಂಭಿಸಲು, ಕೆಳಗಡೆ Start ಬಟನ್ ಮೇಲೆ ಕ್ಲಿಕ್ ಮಾಡಿ. |
08:02 | Ubuntu Linux ಲೋಡ್ ಆಗುತ್ತಿರುವುದನ್ನು ಇಲ್ಲಿ ನಾವು ನೋಡಬಹುದು. |
08:07 | ನಾವು ನೋಡುವ ಮೊದಲನೆಯ ಸ್ಕ್ರೀನ್, ಮೂರು ಆಯ್ಕೆಗಳನ್ನು ಹೊಂದಿದೆ. |
08:11 | ಎಡಭಾಗದಲ್ಲಿ, ನಾವು ಭಾಷೆಗಳ ಒಂದು ಲಿಸ್ಟ್ ಅನ್ನು ನೋಡಬಹುದು. ನಿಮಗಿಷ್ಟವಾದ ಒಂದು ಭಾಷೆಯನ್ನು ಆರಿಸಿಕೊಳ್ಳಿ. |
08:18 | ಡೀಫಾಲ್ಟ್ ಆಗಿ, English ಆಯ್ಕೆಯಾಗಿದೆ. ನಾನು ಇದನ್ನು ಹೀಗೆಯೇ ಇಡುತ್ತೇನೆ. |
08:25 | ಮಧ್ಯದಲ್ಲಿ, ನಾವು Try Ubuntu ಹಾಗೂ Install Ubuntu ಎಂಬ ಎರಡು ಆಯ್ಕೆಗಳನ್ನು ನೋಡಬಹುದು. |
08:31 | ಇನ್ಸ್ಟಾಲ್ ಮಾಡುವ ಮೊದಲು, ನೀವು Ubuntu ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸಿದರೆ, Try Ubuntu ಮೇಲೆ ಕ್ಲಿಕ್ ಮಾಡಿ. |
08:38 | ಇಲ್ಲವಾದರೆ, ನೇರವಾಗಿ Install Ubuntuಮೇಲೆ ಕ್ಲಿಕ್ ಮಾಡಿ.
ನಾನು Install Ubuntu ಆಯ್ಕೆಯ ಮೇಲೆ ಕ್ಲಿಕ್ ಮಾಡುವೆನು. |
08:47 | ಮುಂದಿನ ಪೇಜ್, ಎರಡು ಆಯ್ಕೆಗಳನ್ನು ತೋರಿಸುತ್ತದೆ.
Downloading update while installing Ubuntu ಮತ್ತು Installing some third-party software... |
09:00 | ನಾನು ಇವುಗಳನ್ನು ಬಿಟ್ಟುಬಿಡುತ್ತೇನೆ ಮತ್ತು ಕೆಳಗಡೆ Continue ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ. |
09:05 | Ubuntu Linux ಇನ್ಸ್ಟಾಲೇಶನ್ ಮಾಡುವಾಗ, ಮೂರನೆಯ ಪೇಜ್, ಮುಖ್ಯ ಹಂತಗಳಲ್ಲಿ ಒಂದಾಗಿದೆ.
ಇಲ್ಲಿ, Ubuntu Linux ಅನ್ನು ಎಲ್ಲಿ ಇನ್ಸ್ಟಾಲ್ ಮಾಡುವುದೆಂದು ನಾವು ನಿರ್ಧರಿಸಬೇಕು. |
09:18 | Something else - ನಾವು ನಮ್ಮ ಮಷಿನ್ ನಲ್ಲಿ VirtualBox ಇಲ್ಲದೆಯೇ Ubuntu ಅನ್ನು ನೇರವಾಗಿ ಇನ್ಸ್ಟಾಲ್ ಮಾಡುತ್ತಿದ್ದರೆ, ಇದೊಂದು ಒಳ್ಳೆಯ ಆಯ್ಕೆಯಾಗಿದೆ. |
09:28 | ಈ ಆಯ್ಕೆಯೊಂದಿಗೆ, ನಮ್ಮ ಬೇಸ್-ಮಷಿನ್ ನಲ್ಲಿ ನಾವು dual boot OS ಅನ್ನು ಹೊಂದಿರಬಹುದು. |
09:34 | ನಾನು ಒಂದು 'ವರ್ಚ್ಯುವಲ್ ಬಾಕ್ಸ್' ನ ಮೇಲೆ ಕೆಲಸ ಮಾಡುತ್ತಿರುವುದರಿಂದ, Erase disk and install Ubuntu ಅನ್ನು ಆಯ್ಕೆಮಾಡುವೆನು. |
09:41 | ಈ ಆಯ್ಕೆಯು, ಇಡೀ Virtual hard disk ಅನ್ನು ಅಳಿಸಿಹಾಕುವುದು. ಮತ್ತು, Ubuntu OS ಅನ್ನು ಒಂದೇ ವಿಭಾಗವಾಗಿ ಇನ್ಸ್ಟಾಲ್ ಮಾಡುವುದು. |
09:49 | ಆಮೇಲೆ ಕೆಳಗೆ ಇರುವ Install Now ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
09:53 | Write the changes to the disks? ಎಂಬ ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
09:59 | ಇಲ್ಲಿ, Continue ಬಟನ್ ಮೇಲೆ ಕ್ಲಿಕ್ ಮಾಡಿ. |
10:03 | ನಂತರ Where are you? ಎಂಬ ಪೇಜ್ ಬರುತ್ತದೆ.
ನಾನು India ದಲ್ಲಿ ಇದ್ದೇನೆ, ಹೀಗಾಗಿ ನಾನು India ಅನ್ನು ಗುರುತಿಸುವೆನು. |
10:11 | ಕೆಳಗೆ ಇರುವ ಟೆಕ್ಸ್ಟ್-ಬಾಕ್ಸ್ ನಲ್ಲಿ, ಅದು Kolkata ಎನ್ನುತ್ತದೆ.
ನಮ್ಮ ಆಯ್ಕೆಯನ್ನು ಆಧರಿಸಿ, ಅದು ಟೈಮ್-ಝೋನ್ ಅನ್ನು ಸೆಟ್ ಮಾಡುವುದು. |
10:21 | ಕೆಳಗಡೆಯ Continue ಮೇಲೆ ಕ್ಲಿಕ್ ಮಾಡಿ. |
10:24 | ಈಗ, ನಾವು ನಮ್ಮ Keyboard layout ಅನ್ನು ಆಯ್ಕೆಮಾಡಬೇಕು. |
10:28 | ಡೀಫಾಲ್ಟ್ ಆಗಿ, ಎರಡೂ ಬದಿಗಳಲ್ಲಿ English (US) ಆಯ್ಕೆಯಾಗುವುದು. |
10:34 | ನಿಮಗೆ ಬೇರೆ ಭಾಷೆ ಬೇಕಾಗಿದ್ದರೆ, ನೀವು ಬಯಸಿದ ಆಯ್ಕೆಯನ್ನು ಆರಿಸಿಕೊಳ್ಳಿ.
ನಾನು English (US) ಅನ್ನು ಹಾಗೇ ಇಡುತ್ತೇನೆ. |
10:42 | ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ. |
10:46 | ಕೊನೆಯ ಹಂತವು, ಲಾಗ್-ಇನ್ ವಿವರಗಳನ್ನು ಕೊಡುವುದಾಗಿದೆ.
ನಾನು Your name ಫೀಲ್ಡ್ ಅನ್ನು spoken ಎಂದು ತುಂಬುವೆನು. |
10:55 | ತಕ್ಷಣ, ನಮ್ಮ ಇನ್ಪುಟ್ ಅನ್ನು ಆಧರಿಸಿ Computer’s name ಹಾಗೂ Pick a username ಫೀಲ್ಡ್ ಗಳನ್ನು ತುಂಬಲಾಗುವುದು.
ನೀವು ಬಯಸಿದರೆ, ಈ ವ್ಯಾಲ್ಯೂಗಳನ್ನು ನೀವು ಬದಲಾಯಿಸಬಹುದು. |
11:07 | ಬಳಿಕ, Choose a password ಟೆಕ್ಸ್ಟ್-ಬಾಕ್ಸ್ ನಲ್ಲಿ, ನಿಮ್ಮ Ubuntu Linux OS ಗಾಗಿ ಪಾಸ್ವರ್ಡ್ ಅನ್ನು ಟೈಪ್ ಮಾಡಿ. ನಾನು spoken ಎಂದು ಟೈಪ್ ಮಾಡುವೆನು. |
11:18 | Confirm your password ಟೆಕ್ಸ್ಟ್-ಬಾಕ್ಸ್ ನಲ್ಲಿ, ಮತ್ತೆ ಅದೇ ಪಾಸ್ವರ್ಡ್ ಅನ್ನು ಟೈಪ್ ಮಾಡಿ. |
11:24 | ದಯವಿಟ್ಟು ಈ ಪಾಸ್ವರ್ಡ್ ಅನ್ನು ಬರೆದಿಟ್ಟುಕೊಳ್ಳಿ. ಏಕೆಂದರೆ, ಇದು ಈ Ubuntu Linux OS ಗಾಗಿ admin password ಆಗಿದೆ. |
11:32 | ಪಾಸ್ವರ್ಡ್ ಟೆಕ್ಸ್ಟ್-ಬಾಕ್ಸ್ ನ ಕೆಳಗೆ, ನಾವು ಇನ್ನೂ ಕೆಲವು ಆಯ್ಕೆಗಳನ್ನು ನೋಡಬಹುದು.
ನಾನು Require my password to login ಅನ್ನು ಆಯ್ಕೆಮಾಡುವೆನು. |
11:42 | ಯೂಸರ್ ನು ಪ್ರತಿಸಲ ಲಾಗ್-ಇನ್ ಮಾಡಿದಾಗ, ಅವನು ಪಾಸ್ವರ್ಡ್ ಅನ್ನು ನಮೂದಿಸಲು ಇದು ಒತ್ತಾಯ ಮಾಡುವುದು. |
11:49 | ಇನ್ಸ್ಟಾಲೇಶನ್ ಅನ್ನು ಮುಂದುವರೆಸಲು Continueಮೇಲೆ ಕ್ಲಿಕ್ ಮಾಡಿ. |
11:53 | ಇನ್ಸ್ಟಾಲೇಶನ್ ಪೂರ್ತಿಗೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು. |
11:58 | ಇನ್ಸ್ಟಾಲೇಶನ್ ಪೂರ್ತಿಗೊಂಡ ನಂತರ, Installation Complete ಎಂದು ಹೇಳುವ ಒಂದು ಡೈಲಾಗ್-ಬಾಕ್ಸ್ ಅನ್ನು ನಾವು ನೋಡಬಹುದು. |
12:06 | ಈ ಡೈಲಾಗ್-ಬಾಕ್ಸ್ ನಲ್ಲಿ, Restart Now ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
12:11 | Ubuntu ಲೋಡ್ ಆಗುತ್ತಿದೆ ಎಂದು ಹೇಳುತ್ತಿರುವ ಒಂದು ಸ್ಕ್ರೀನ್ ಕಾಣಿಸಿಕೊಳ್ಳುತ್ತದೆ.
ಇನ್ಸ್ಟಾಲೇಶನ್ ಮೀಡಿಯಮ್ ಅನ್ನು ತೆಗೆದುಹಾಕಲು, Enter ಅನ್ನು ಒತ್ತಲು ಇದು ನಮಗೆ ಸೂಚಿಸುವುದು. |
12:20 | ಉದಾಹರಣೆಗೆ: CD/USB Stick ಇತ್ಯಾದಿ.
ನಿಮ್ಮ ಕೀಬೋರ್ಡ್ ಮೇಲಿನ Enter ಅನ್ನು ಒತ್ತಿ. |
12:28 | ಇದು ಈ 'ವರ್ಚುವಲ್ ಮಷಿನ್' ಅನ್ನು ಆರಂಭಿಸುತ್ತದೆ ಮತ್ತು ನಮ್ಮನ್ನು 'ಲಾಗ್-ಇನ್ ಪೇಜ್' ಗೆ ಕರೆದೊಯ್ಯುತ್ತದೆ. |
12:34 | ಇನ್ಸ್ಟಾಲೇಶನ್ ಮಾಡುವಾಗ ನಾವು ಕೊಟ್ಟ ವಿವರಗಳೊಂದಿಗೆ ಲಾಗ್-ಇನ್ ಮಾಡಿ. |
12:39 | Ubuntu 16.04 Desktop ಗೆ ನಮ್ಮನ್ನು ಕರೆತರಲಾಗಿದೆ.
ನಾವು ಇನ್ಸ್ಟಾಲೇಶನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಎಂದು ಇದು ಸೂಚಿಸುತ್ತದೆ. |
12:49 | Ubuntu ವನ್ನು ಮುಚ್ಚಿಬಿಡಲು, ಮೇಲ್ಗಡೆ ಬಲಮೂಲೆಯಲ್ಲಿರುವ 'ಪಾವರ್' (power) ಐಕಾನ್ ಮೇಲೆ ಕ್ಲಿಕ್ ಮಾಡಿ. ಮತ್ತು, Shut Down ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
12:58 | ಈಗ ಕಾಣಿಸಿಕೊಳ್ಳುವ ಪಾಪ್-ಅಪ್ ನಲ್ಲಿ, ದೊಡ್ಡ Shut Down ಬಟನ್ ಮೇಲೆ ಕ್ಲಿಕ್ ಮಾಡಿ. |
13:04 | ಕೂಡಲೆ, Ubuntu ವಿಂಡೋ ಮುಚ್ಚಿಬಿಡುತ್ತದೆ ಮತ್ತು ನಾವು VirtualBox manager ಗೆ ಹಿಂದಿರುಗಿದ್ದೇವೆ. |
13:11 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
13:16 | ಈ ಟ್ಯುಟೋರಿಯಲ್ ನಲ್ಲಿ ನಾವು 'ವರ್ಚ್ಯುವಲ್ ಬಾಕ್ಸ್' ನಲ್ಲಿ, 'ವರ್ಚುವಲ್ ಮಷಿನ್' ಅನ್ನು ಕ್ರಿಯೇಟ್ ಮಾಡಲು, ಮತ್ತು |
13:24 | 'ವರ್ಚುವಲ್ ಮಷಿನ್' ಮೇಲೆ, Ubuntu Linux 16.04 ಅನ್ನು ಇನ್ಸ್ಟಾಲ್ ಮಾಡಲು ಕಲಿತಿದ್ದೇವೆ. |
13:30 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
13:38 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
13:50 | ದಯವಿಟ್ಟು ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
13:54 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
14:06 | ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಮತ್ತು ವೀಡಿಯೋಗಳು, NVLI ಮತ್ತು ಸ್ಪೋಕನ್ ಟ್ಯುಟೋರಿಯಲ್ ತಂಡದವರ ಕೊಡುಗೆಯಾಗಿವೆ.
ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ. ಧನ್ಯವಾದಗಳು. |