Spoken-Tutorial-Technology/C2/Editing-a-spoken-tutorial-using-Movie-Maker/Kannada

From Script | Spoken-Tutorial
Jump to: navigation, search

ನ್ನಮಸ್ಕಾರ ಸ್ನೇಹಿತರೆ. CDEEP, IIT Bombay ಪರವಾಗಿ ನಾನು ನಿಮ್ಮನ್ನು ಈ ಶಿಕ್ಷಣ ತರಬೇತಿಗೆ ಸ್ವಾಗಿಸುತ್ತೇನೆ.

ಈ ತರಬೇತಿಯು ನಿಮಗೆ Windows Movie Maker ಉಪಯೋಗಿಸಿಕೊಂಡು ದೃಶ್ಯ ತುಣುಕುಗಳನ್ನು ಸಂಪಾದಿಸುವುದು ಹೇಗೆ ಎಂದು ತಿಳಿಸುತ್ತದೆ.


Windows Movie Maker, ಇದು Microsoft Windows ನ ಒಂದು ಭಾಗ. ಇದೊಂದು editing software. ಇದು ಎಲ್ಲ Windows ಅವತಾರಗಳಲ್ಲಿ ಲಭ್ಯ, ME, XP ಅಥವಾ Vista.

ಇದು ನಿಮ್ಮ computer ನಲ್ಲಿ ಇಲ್ಲವಾದಲ್ಲಿ, www.microsoft.com/downloads ಎಂಬ ಅಂತರ್ಜಾಲ ತಾಣದಿಂದ ಇದನ್ನು ಉಚಿತವಾಗಿ ಪಡೆಯಬಹುದು.


ಇದಕ್ಕಾಗಿ ನಿಮಗೆ ದ್ವನಿಗ್ರಹಿಸುವ headset ಅಥವಾ ದ್ವನಿವೆರ್ಧಕ ಬೇಕಾಗುತ್ತದೆ. Windows Movie Maker ಅನ್ನು ಶುರುಮಾಡಲು ಅದರ icon ಮೇಲೆ ಎರಡು ಭಾರಿ click ಮಾಡಿ. ಇದು ನಿಮ್ಮ screen ಮೇಲೆ ಒಂದು ಖಾಲಿ movie project ಅನ್ನು ತೆರೆಯುತ್ತದೆ. ಮೇಲೆ ನೀವು main menu ವನ್ನು ಕಾಣುವಿರಿ. ಇದರಲ್ಲಿ ಹಲವಾರು ಆಯ್ಕೆಗಳಿವೆ. ಇವುಗಳ ಬಗ್ಗೆ ನಾವು ಮುಂದೆ ತಿಳಿಯೋಣ. ಎಡಭಾಗದಲ್ಲಿ ನೀವು movie task panel ಅನ್ನು ನೋಡುತ್ತಿರಿ, ಮದ್ಯದಲ್ಲಿ collection panel ಇದ್ದು, ಬಲ ಭಾಗದಲ್ಲಿ display panel ಇದೆ. ನೀವು Windows Movie Maker ಮೊದಲನೇ ಭಾರಿ ಉಪಯೋಗಿಸುತ್ತಿದ್ದರೆ, collection panel ಖಾಲಿ ಇರುತ್ತದೆ. ನಿಮ್ಮ project ಗೆ ಬೇಕಾದ ಎಲ್ಲ ದೃಶ್ಯ, ದ್ವನಿ ಮತ್ತು ಸಂಗೀತ ತುಣುಕುಗಳು import ಮಾಡಿದ ಕ್ಷಣ collection panel ನಲ್ಲಿ ಕಾಣುತ್ತದೆ. ನೀವು ಈ program ಅನ್ನು ಮೊದಲೇ ಉಪಯೋಗಿಸಿದ್ದರೆ, ಹಳೆಯ ದೃಶ್ಯ ಮತ್ತು ದ್ವನಿ ತುಣುಕುಗಳು collection panel ನಲ್ಲಿ ಕಂಡು ಬರುತ್ತದೆ. crtl+A ಒತ್ತಿ collection panel ನಲ್ಲಿ ಇರುವ ಎಲ್ಲಾ ತುಣುಕುಗಳನ್ನು select ಮಾಡಿ. ನಂತರ ಅಳಿಸಲು mouse ನಿಂದ right click ಮಾಡಿ delete option ಒತ್ತಿರಿ. ಈಗ ನೀವು ನಿಮಗೆ ಬೇಕಾಗಿರುವ file ಅನ್ನು ಆಯ್ಕೆ ಮಾಡಿ Windows Movie Maker ನಲ್ಲಿ ಸಂಪಾದಿಸಬಹುದು.


Movie task panel ನಲ್ಲಿ ಹಲವಾರು ಆಯ್ಕೆಗಳಿವೆ. ಮೊದಲಾಗಿ Capture video, Edit video, finish video ಮತ್ತು Movie making tips. Capture Video Option ಅಡಿಯಲ್ಲಿ import video ಎಂಬ sub-option ಕಾಣುವಿರಿ. ಅದನ್ನು click ಮಾಡಿ, ಇಲ್ಲವಾದಲ್ಲಿ, ಮೇಲೆ ಕಾಣುವ main menu ವಿನಲ್ಲಿ file, click ಮಾಡಿ, Import into collection sub-option click ಮಾಡಿ. ಈ ಎರಡೂ ವಿಧಾನಗಳಲ್ಲೂ Import file dialog box ತೆರೆಯುತ್ತದೆ. ಇದರಲ್ಲಿ ನಿಮಗೆ ಬೇಕಾದ video ಆಯ್ಕೆಮಾಡಿ.


ನಾನು ಈ video ಅನ್ನು ಆಯ್ಕೆ ಮಾಡಿ import ಅನ್ನು click ಮಾಡುತ್ತೇನೆ. ಆಯ್ಕೆ ಮಾಡಿದ video, collection panel ನಲ್ಲಿ ಬಂದಿರುತ್ತದೆ. ಒಂದುವೇಳೆ video ದೊಡ್ದದಾದಲ್ಲಿ Windows Movie Maker ತಾನಾಗಿಯೆ video ಅನ್ನು ತುಣುಕುಗಳಾಗಿ ವಿಂಗಡಿಸುತ್ತದೆ. crtl+A ಒತ್ತಿ ಎಲ್ಲ video ಗಳನ್ನು ಆಯ್ಕೆಮಾಡಿ. ದೃಶ್ಯ ತುಣುಕಿನ ಮೇಲೆ right click ಮಾಡಿ add to time line, select ಮಾಡಿ. ಈಗ video ಗಳು collection panel ನಲ್ಲಿ ಇದ್ದಂತ್ತೆ ಕ್ರಮಭದ್ದವಾಗಿ timeline ಗೆ ಸೇರಿಕೊಳ್ಳುತ್ತದೆ. ನಿಮಗೆ ಬೇಕ್ಕಾದಲ್ಲಿ video ತುಣುಕುಗಳನ್ನು ಒಂದೊಂದಾಗಿಯೇ timeline ಗೆ ಸೇರಿಸಬಹುದು. ಇದನ್ನು ವಾಪಾಸು ಹಾಕೋಣ.


Vista ಉಪಯೋಗಿಸುವವರು ದಯವಿಟ್ಟು ಗಮನಿಸಿ. Windows Vista ದಲ್ಲಿ ಇರುವ Windows Movie Maker ಉಪಯೋಗಿಸಿದರೆ ಅದು video ಅನ್ನು ಸಣ್ಣ ತುಣುಕುಗಳಾಗಿ ವಿಂಗಡಿಸುವುದಿಲ್ಲ. collection panel ನಲ್ಲಿ ಒಂದು ಸಂಪೂರ್ಣ video ಇರುತ್ತದೆ, ಮತ್ತು right click ಮಾಡಿ add to timeline, option select ಮಾಡಿದಾಗ ಇದು ನಿಮ್ಮ ಸಂಪೂರ್ಣ video ವನ್ನು timeline ಗೆ ಸೇರಿಸುತ್ತದೆ.


ಈ ನೀಲಿ ಬಣ್ಣದ ಚೌಕವನ್ನು frame-head ಎಂದು ಕರೆಯುತ್ತಾರೆ. ಇದು video ನ ಪ್ರಸ್ತುತ ಸ್ಥಾನವನ್ನು ತೋರಿಸುತ್ತದೆ. ಮೂಲತಹ ಇದು timeline ನ ಆರಂಭದಲ್ಲಿರುತ್ತದೆ. ಈಗ ಮೊದಲನೆಯ ತುಣುಕನ್ನು click ಮಾಡಿ.

Contributors and Content Editors

Sneha