Scilab/C4/Linear-equations-Iterative-Methods/Kannada
From Script | Spoken-Tutorial
| Time | Narration |
| 00:01 | ಸೈಲ್ಯಾಬ್ ನಲ್ಲಿ, Solving System of Linear Equations using Iterative Methods ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
| 00:10 | ಈ ಟ್ಯುಟೋರಿಯಲ್ ನಲ್ಲಿ ನೀವು, |
| 00:14 | ‘ಇಟರೇಟಿವ್ ಮೆಥಡ್’ ಗಳನ್ನು ಬಳಸಿ, ‘ಲೀನಿಯರ್ ಇಕ್ವೇಶನ್’ ಗಳ ಸಿಸ್ಟಮ್ ನ ಉತ್ತರವನ್ನು ಕಂಡುಹಿಡಿಯುವುದು ಹಾಗೂ |
| 00:18 | ಇದಕ್ಕಾಗಿ ಸೈಲ್ಯಾಬ್ ಕೋಡ್ ಅನ್ನು ಬರೆಯುವುದನ್ನು ಕಲಿಯುವಿರಿ. |
| 00:22 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು, |
| 00:25 | Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನು |
| 00:28 | Scilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ. |
| 00:33 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡುವ ಮೊದಲು, ನೀವು ಸೈಲ್ಯಾಬ್ ನ ಬಗ್ಗೆ ಮತ್ತು |
| 00:38 | ಲೀನಿಯರ್ ಇಕ್ವೇಷನ್ ಗಳನ್ನು ಸಾಲ್ವ್ ಮಾಡುವುದರ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರುವುದು ಅವಶ್ಯಕ. |
| 00:42 | ಸೈಲ್ಯಾಬ್ ಗೆ ಸಂಬಂಧಿಸಿದ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು Spoken Tutorial ವೆಬ್ಸೈಟ್ ಅನ್ನು ನೋಡಿ. |
| 00:50 | 'ಜಕೋಬಿ ಮೆಥಡ್', ನಾವು ಕಲಿಯುವ ಮೊದಲನೆಯ ಇಟರೇಟಿವ್ ಮೆಥಡ್ ಆಗಿದೆ. |
| 00:56 | ಇಲ್ಲಿ, n ಇಕ್ವೇಷನ್ ಗಳು (ಸಮೀಕರಣ) ಮತ್ತು n ವೇರಿಯೇಬಲ್ ಗಳನ್ನು ಹೊಂದಿರುವ ಲೀನಿಯರ್ ಇಕ್ವೇಷನ್ ಗಳ ಒಂದು ಸಿಸ್ಟಮ್ ಅನ್ನು ಕೊಟ್ಟಿದೆ. |
| 01:02 | ನಾವು ಇಕ್ವೇಷನ್ ಗಳನ್ನು ಹೀಗೆ ಬರೆಯುತ್ತೇವೆ- x of i, k plus one, is equal to, b i, minus, summation of a i j, x j k, from j equal to one to n, divided by a i i where i is from one to n. |
| 01:24 | ನಾವು ಪ್ರತಿಯೊಂದು x of i ನ ವ್ಯಾಲ್ಯುವನ್ನು ಊಹಿಸುತ್ತೇವೆ. |
| 01:27 | ನಂತರ ಹಿಂದಿನ ಹಂತದಲ್ಲಿ ದೊರೆತ ಇಕ್ವೇಷನ್ ಗಳಲ್ಲಿ ಈ ವ್ಯಾಲ್ಯುಗಳನ್ನು ಹಾಕುತ್ತೇವೆ. |
| 01:34 | ಉತ್ತರದ ಹತ್ತಿರ ಹತ್ತಿರ ಬರುವವರೆಗೂ, ಈ ಆವರ್ತನವನ್ನು ನಾವು ಮುಂದುವರಿಸುತ್ತೇವೆ. |
| 01:39 | ನಾವು ಜಕೋಬಿ ವಿಧಾನವನ್ನು ಬಳಸಿ, ಈ ಉದಾಹರಣೆಯನ್ನು ಸಾಲ್ವ್ ಮಾಡೋಣ. |
| 01:44 | ಜಕೋಬಿ ವಿಧಾನದ ಕೋಡ್ ಅನ್ನು ನೋಡೋಣ. |
| 01:48 | ಸೈಲ್ಯಾಬ್ ಕನ್ಸೋಲ್ ನಲ್ಲಿ ಪ್ರದರ್ಶಿಸಬೇಕಾದ ಉತ್ತರದ ಫಾರ್ಮ್ಯಾಟ್ ಅನ್ನು ಸೂಚಿಸಲು, ನಾವು format ಮೆಥಡ್ ಅನ್ನು ಬಳಸುತ್ತೇವೆ. |
| 01:56 | ಇಲ್ಲಿ e, ಉತ್ತರವು ’scientific notation’ ನಲ್ಲಿ (ಸೈಂಟಿಫಿಕ್ ನೊಟೇಶನ್) ಇರಬೇಕೆಂದು ಸೂಚಿಸುತ್ತದೆ. |
| 02:01 | ಮತ್ತು, ಸಂಖ್ಯೆ ಇಪ್ಪತ್ತು (20), ಪ್ರದರ್ಶಿಸಬೇಕಾದ ಅಂಕಿಗಳನ್ನು ಸೂಚಿಸುತ್ತದೆ. |
| 02:06 | ನಂತರ ನಾವು input ಫಂಕ್ಷನ್ ಅನ್ನು ಬಳಸಿ, |
| 02:10 | 'ಕೊಇಫಿಶಿಯೆಂಟ್ ಮ್ಯಾಟ್ರಿಕ್ಸ್' (coefficient matrix). |
| 02:12 | 'ರೈಟ್-ಹ್ಯಾಂಡ್-ಸೈಡ್ ಮ್ಯಾಟ್ರಿಕ್ಸ್', |
| 02:14 | 'ಇನಿಶಿಯಲ್ ವ್ಯಾಲ್ಯೂಸ್ ಮ್ಯಾಟ್ರಿಕ್ಸ್', |
| 02:17 | 'ಇಟರೇಷನ್ ಗಳ ಗರಿಷ್ಠ ಸಂಖ್ಯೆ' ಮತ್ತು |
| 02:19 | ' ಕನ್ವರ್ಜೆನ್ಸ್ ಟಾಲರೆನ್ಸ್' - ಇವುಗಳ ವ್ಯಾಲ್ಯುಗಳನ್ನು ಪಡೆಯುವೆವು. |
| 02:22 | ನಂತರ ನಾವು, ಮ್ಯಾಟ್ರಿಕ್ಸ್ A, ‘ಸ್ಕ್ವೇರ್ ಮ್ಯಾಟ್ರಿಕ್ಸ್’ ಆಗಿದೆಯೇ ಎಂದು ಪರೀಕ್ಷಿಸಲು, size ಫಂಕ್ಷನ್ ಅನ್ನು ಬಳಸುತ್ತೇವೆ. |
| 02:29 | ಅದು ಹಾಗೆ ಆಗಿರದಿದ್ದರೆ, ಎರರ್ ಅನ್ನು ಡಿಸ್ಪ್ಲೇ ಮಾಡಲು, ನಾವು error ಫಂಕ್ಷನ್ ಅನ್ನು ಬಳಸುತ್ತೇವೆ. |
| 02:34 | ನಂತರ ನಾವು, ಮ್ಯಾಟ್ರಿಕ್ಸ್ A, 'ಡಯಾಗೊನಲಿ ಡಾಮಿನೆಂಟ್(diagonally dominant)' ಆಗಿದೆಯೇ ಎಂದು ಪರೀಕ್ಷಿಸುತ್ತೇವೆ. |
| 02:40 | ಮೊದಲನೆಯ ಆರ್ಧವು, ಮ್ಯಾಟ್ರಿಕ್ಸ್ ನ ಪ್ರತಿಯೊಂದು ‘ರೋ’ ದ ಮೊತ್ತವನ್ನು ಕಂಡುಹಿಡಿಯುತ್ತದೆ. |
| 02:45 | ನಂತರ ಅದು, ‘ಡಯಾಗೊನಲ್ ಎಲಿಮೆಂಟ್’ ನ ಎರಡರಷ್ಟು, ಆ ‘ರೋ’ದ ಎಲಿಮೆಂಟ್ ಗಳ ಮೊತ್ತಕ್ಕಿಂತ ಹೆಚ್ಚು ಇದೆಯೇ ಎಂದು ಪರೀಕ್ಷಿಸುತ್ತದೆ. |
| 02:54 | ಇಲ್ಲವಾದಲ್ಲಿ, error ಫಂಕ್ಷನ್ ಅನ್ನು ಬಳಸಿ, ಎರರ್ ಅನ್ನು ಡಿಸ್ಲ್ಪೇ ಮಾಡಲಾಗುತ್ತದೆ. |
| 03:01 | ನಂತರ ನಾವು, A, b, x zero, maximum iteration ಮತ್ತು |
| 03:07 | tolerance level ಎಂಬ ‘ಇನ್ಪುಟ್ ಆರ್ಗ್ಯುಮೆಂಟ್’ ಗಳೊಂದಿಗೆ |
| 03:09 | Jacobi Iteration( ಜಕೋಬಿ ಇಟರೇಶನ್) ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ. |
| 03:14 | ಇಲ್ಲಿ, x zero, initial values matrix (ಇನಿಶಿಯಲ್ ವ್ಯಾಲ್ಯುಸ್ ಮ್ಯಾಟ್ರಿಕ್ಸ್ ) ಆಗಿದೆ. |
| 03:19 | ನಾವು, ಮ್ಯಾಟ್ರಿಕ್ಸ್ A ಮತ್ತು initial values ಮ್ಯಾಟ್ರಿಕ್ಸ್ ನ ಸೈಜ್ ಪರಸ್ಪರ ಹೊಂದಿಕೆ ಆಗುತ್ತದೆಯೇ ಎಂದು ಪರೀಕ್ಷಿಸುತ್ತೇವೆ. |
| 03:28 | x k p one ಗಾಗಿ ವ್ಯಾಲ್ಯುವನ್ನು ಕಂಡುಹಿಡಿಯುತ್ತೇವೆ. ನಂತರ, relative error, tolerance level ಗಿಂತ ಕಡಿಮೆ ಇದೆಯೇ ಎಂದು ಪರೀಕ್ಷಿಸುತ್ತೇವೆ. |
| 03:38 | ಅದು tolerance level ಗಿಂತ ಕಡಿಮೆ ಇದ್ದರೆ, ನಾವು ಇಟರೇಷನ್ ಅನ್ನು break ಮಾಡುತ್ತೇವೆ ಮತ್ತು ಉತ್ತರವನ್ನು ರಿಟರ್ನ್ ಮಾಡುತ್ತೇವೆ. |
| 03:45 | ಕೊನೆಯದಾಗಿ, ಫಂಕ್ಷನ್ ಅನ್ನು end ಮಾಡುತ್ತೇವೆ. |
| 03:48 | ಈಗ ಫಂಕ್ಷನ್ ಅನ್ನು ಸೇವ್ ಮಾಡಿ, ಎಕ್ಸಿಕ್ಯೂಟ್ ಮಾಡೋಣ. |
| 03:51 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
| 03:54 | ಪ್ರತಿಯೊಂದು ಪ್ರಾಂಪ್ಟ್ ನಲ್ಲಿ ನಾವು ವ್ಯಾಲ್ಯೂಗಳನ್ನು ನಮೂದಿಸೋಣ. |
| 03:57 | coefficient matrix A ಅನ್ನು ಹೀಗೆ ಟೈಪ್ ಮಾಡಿ: open square bracket two space one semi colon five space seven close square bracket . |
| 04:08 | Enter ಅನ್ನು ಒತ್ತಿ. |
| 04:10 | ನಂತರ ಹೀಗೆ ಟೈಪ್ ಮಾಡುತ್ತೇವೆ: open square bracket eleven semicolon thirteen close square bracket |
| 04:17 | Enter ಅನ್ನು ಒತ್ತಿ. |
| 04:20 | initial values matrix ಅನ್ನು ಹೀಗೆ ಟೈಪ್ ಮಾಡಿ: open square bracket one semicolon one close square bracket |
| 04:28 | Enter ಅನ್ನು ಒತ್ತಿ. |
| 04:30 | maximum number of iterations- ಇದು 25 ಆಗಿರಲಿ. |
| 04:34 | Enter ಅನ್ನು ಒತ್ತಿ. |
| 04:36 | convergence tolerance level: ಇದು zero point zero zero zero zero one ಆಗಿರಲಿ. |
| 04:44 | Enter ಅನ್ನು ಒತ್ತಿ. |
| 04:46 | ನಾವು ಹೀಗೆ ಟೈಪ್ ಮಾಡಿ, ಫಂಕ್ಷನ್ ಅನ್ನು ಕಾಲ್ ಮಾಡುತ್ತೇವೆ: |
| 04:48 | Jacobi Iteration open parenthesis A comma b comma x zero comma M a x I t e r comma t o l close parenthesis |
| 05:04 | Enter ಅನ್ನು ಒತ್ತಿ. |
| 05:06 | 'ಕನ್ಸೋಲ್ ' ನಲ್ಲಿ, x one ಮತ್ತು x two ಗಳ ವ್ಯಾಲ್ಯುಗಳನ್ನು ತೋರಿಸಲಾಗಿದೆ. |
| 05:11 | ಇಟರೇಷನ್ ಗಳ ಸಂಖ್ಯೆಯನ್ನು ಕೂಡ ತೋರಿಸಲಾಗಿದೆ. |
| 05:14 | ಈಗ ನಾವು 'ಗಾಸ್ ಸೈಡಲ್ (Gauss Seidel)' ವಿಧಾನವನ್ನು ಕಲಿಯೋಣ. |
| 05:19 | ಇಲ್ಲಿ, ‘n’ ಇಕ್ವೇಷನ್ ಗಳು ಮತ್ತು ‘n’ ವೇರಿಯೇಬಲ್ ಗಳನ್ನು ಹೊಂದಿರುವ ಒಂದು ಲೀನಿಯರ್ ಇಕ್ವೇಷನ್ ಗಳ ಸಿಸ್ಟಮ್ ಅನ್ನು ಕೊಡಲಾಗಿದೆ. |
| 05:26 | ಪ್ರತಿಯೊಂದು ವೇರಿಯೇಬಲ್ ಗಾಗಿ, ನಾವು ಈ ಇಕ್ವೇಷನ್ ಗಳನ್ನು ಪುನಃ ಹೀಗೆ ಬರೆಯುತ್ತೇವೆ. |
| 05:29 | ಉಳಿದ ವೇರಿಯೇಬಲ್ ಗಳು ಮತ್ತು ಅವುಗಳ ಕೋಇಫಿಶಿಯೆಂಟ್ ಗಳನ್ನು, ಅದಕ್ಕೆ ಸಂಬಂಧಿತ ‘ರೈಟ್ ಹ್ಯಾಂಡ್ ಸೈಡ್ ಎಲಿಮೆಂಟ್’ನಿಂದ ಕಳೆಯುತ್ತೇವೆ (ಮೈನಸ್). |
| 05:37 | ನಂತರ ಇದನ್ನು, ಆ ವೇರಿಯೇಬಲ್ ನ ಕೋಇಫಿಶಿಯೆಂಟ್ ಆಗಿರುವ a i i ನಿಂದ ಭಾಗಿಸುತ್ತೇವೆ. |
| 05:45 | ಕೊಟ್ಟಿರುವ ಪ್ರತಿಯೊಂದು ಇಕ್ವೇಷನ್ ಗೂ ಇದನ್ನೇ ಮಾಡಲಾಗುತ್ತದೆ. |
| 05:49 | ‘ಜಕೋಬಿ ಮೆಥಡ್’ ನಲ್ಲಿ, x of i k plus one ನ ಕಂಪ್ಯುಟೇಷನ್ ಗಾಗಿ, x of i k plus one ದ ಹೊರತಾಗಿ, x of i k ದ ಎಲ್ಲಾ ಎಲಿಮೆಂಟ್ ಗಳನ್ನೂ ಬಳಸಲಾಗುತ್ತದೆ. |
| 06:03 | 'ಗಾಸ್ ಸೈಡಲ್ ಮೆಥಡ್’ ನಲ್ಲಿ, ನಾವು x of i k ದ ವ್ಯಾಲ್ಯುದ ಬದಲಾಗಿ x of i k plus one ದ ವ್ಯಾಲ್ಯುವನ್ನು ಬರೆಯುತ್ತೇವೆ. |
| 06:12 | ' ಗಾಸ್ ಸೈಡಲ್ ಮೆಥಡ್' ಅನ್ನು ಬಳಸಿ, ನಾವು ಈ ಉದಾಹರಣೆಯನ್ನು ಸಾಲ್ವ್ ಮಾಡೋಣ. |
| 06:17 | ಇದಕ್ಕಾಗಿ 'ಗಾಸ್ ಸೈಡಲ್ ಮೆಥಡ್' ನ ಕೋಡ್ ಅನ್ನು ನೋಡೋಣ. |
| 06:21 | ಇಲ್ಲಿ ಮೊದಲನೆಯ ಸಾಲು, format ಮೆಥಡ್ ಅನ್ನು ಬಳಸಿ, ಸೈಲ್ಯಾಬ್ ಕನ್ಸೋಲ್ ನಲ್ಲಿ ತೋರಿಸಲಾಗುವ ಉತ್ತರದ ಫಾರ್ಮ್ಯಾಟ್ ಅನ್ನು ಸೂಚಿಸುತ್ತದೆ. |
| 06:29 | ನಂತರ ನಾವು input ಫಂಕ್ಷನ್ ಅನ್ನು: |
| 06:32 | 'ಕೋಇಫಿಶಿಯೆಂಟ್ ಮ್ಯಾಟ್ರಿಕ್ಸ್', |
| 06:34 | 'ರೈಟ್ ಹ್ಯಾಂಡ್ ಸೈಡ್ ಮ್ಯಾಟ್ರಿಕ್ಸ್', |
| 06:36 | ' ಇನಿಷಿಯಲ್ ವ್ಯಾಲ್ಯುಸ್ ಆಫ್ ವೇರಿಯೇಬಲ್ಸ್ ಮ್ಯಾಟ್ರಿಕ್ಸ್', |
| 06:38 | ಇಟರೇಷನ್ ಗಳ ಗರಿಷ್ಠ ಸಂಖ್ಯೆ ಮತ್ತು |
| 06:40 | ' ಟಾಲರೆನ್ಸ್ ಲೆವೆಲ್' ಇವುಗಳ ವ್ಯಾಲ್ಯುಗಳನ್ನು ಪಡೆಯಲು ಬಳಸುತ್ತೇವೆ. |
| 06:43 | ನಂತರ ನಾವು, Gauss Seidel ಎಂಬ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ. ಇದು, A comma b comma x zero comma max iterations and tolerance level ಎಂಬ ‘ಇನ್ಪುಟ್ ಆರ್ಗ್ಯುಮೆಂಟ್’ ಗಳನ್ನು ಮತ್ತು solution ಎಂಬ ಔಟ್ಪುಟ್ ಆರ್ಗ್ಯುಮೆಂಟ್ ಅನ್ನು ಹೊಂದಿದೆ. |
| 06:58 | ನಾವು, ಮ್ಯಾಟ್ರಿಕ್ಸ್ A, ‘ಸ್ಕ್ವೇರ್ ಮ್ಯಾಟ್ರಿಕ್ಸ್’ ಆಗಿದೆಯೇ ಮತ್ತು ‘ಇನಿಶಿಯಲ್ ವೆಕ್ಟರ್’ ಮತ್ತು ಮ್ಯಾಟ್ರಿಕ್ಸ್ A ಗಳು ಹೊಂದಿಕೆ ಆಗುತ್ತವೆಯೇ ಎಂದು ಪರೀಕ್ಷಿಸುತ್ತೇವೆ. ಇದಕ್ಕಾಗಿ size ಮತ್ತು length ಫಂಕ್ಷನ್ ಗಳನ್ನು ಬಳಸುತ್ತೇವೆ. |
| 07:10 | ನಂತರ ನಾವು ಇಟರೇಷನ್ ಗಳನ್ನು ಪ್ರಾರಂಭಿಸುತ್ತೇವೆ. |
| 07:13 | initial values vector x zero, x k ಗೆ ಸಮವಾಗಿದೆ ಎನ್ನುತ್ತೇವೆ. |
| 07:19 | x k ದ ಸೈಜ್ ಅನ್ನು ಹೊಂದಿರುವ ಒಂದು matrix of zeros ಅನ್ನು ಕ್ರಿಯೇಟ್ ಮಾಡಿ, ಅದನ್ನು x k p one ಎನ್ನುತ್ತೇವೆ. |
| 07:28 | ಪ್ರತಿಯೊಂದು ಇಕ್ವೇಷನ್ ನ ವೇರಿಯೇಬಲ್ ನ ವ್ಯಾಲ್ಯುವನ್ನು ಪಡೆಯಲು, ನಾವು x k p one ಅನ್ನು ಬಳಸಿ, ಆ ಇಕ್ವೇಷನ್ ಅನ್ನು ಸಾಲ್ವ್ ಮಾಡುತ್ತೇವೆ. |
| 07:38 | ಪ್ರತಿಯೊಂದು ಇಟರೇಷನ್ ನಲ್ಲಿ, x k p one ನ ವ್ಯಾಲ್ಯು, ಅಪ್ಡೇಟ್ ಆಗುತ್ತದೆ (ನವೀಕರಿಸಲಾಗುತ್ತದೆ). |
| 07:44 | ಅಲ್ಲದೇ, relative error, ನಿಗದಿಪಡಿಸಲಾದ tolerance level ಗಿಂತ ಕಡಿಮೆ ಆಗಿದೆಯೇ ಎಂದು ನಾವು ಪರೀಕ್ಷಿಸುತ್ತೇವೆ. |
| 07:50 | ಅದು ಕಡಿಮೆ ಆಗಿದ್ದಲ್ಲಿ, ನಾವು ಇಟರೇಷನ್ ಅನ್ನು break ಮಾಡುವೆವು. |
| 07:54 | ನಂತರ, x k p one ಅನ್ನು solution ಎಂಬ ವೇರಿಯೇಬಲ್ ಗೆ ಸಮನಾಗಿಸುತ್ತೇವೆ. |
| 07:59 | ಕೊನೆಯದಾಗಿ, ನಾವು ಫಂಕ್ಷನ್ ಅನ್ನು end ಮಾಡುತ್ತೇವೆ. |
| 08:02 | ನಾವು ಫಂಕ್ಷನ್ ಅನ್ನು ಸೇವ್ ಮಾಡಿ, ಎಕ್ಸಿಕ್ಯೂಟ್ ಮಾಡೋಣ. |
| 08:06 | 'ಸೈಲ್ಯಾಬ್ ಕನ್ಸೋಲ್' ಗೆ ಹಿಂದಿರುಗಿ. |
| 08:09 | ಮೊದಲನೆಯ ಪ್ರಾಂಪ್ಟ್ ನಲ್ಲಿ ನಾವು, ಮ್ಯಾಟ್ರಿಕ್ಸ್ A ಯನ್ನು ಟೈಪ್ ಮಾಡುವೆವು. |
| 08:12 | ಹೀಗೆ ಟೈಪ್ ಮಾಡಿ: open square bracket two space one semicolon five space seven close square bracket. |
| 08:21 | Enter ಅನ್ನು ಒತ್ತಿ. ಮುಂದಿನ ಪ್ರಾಂಪ್ಟ್ ನಲ್ಲಿ, ಹೀಗೆ ಟೈಪ್ ಮಾಡಿ. |
| 08:24 | open square bracket eleven semicolon thirteen close square bracket |
| 08:31 | Enter ಅನ್ನು ಒತ್ತಿ. |
| 08:33 | initial value vector ನ ವ್ಯಾಲ್ಯುಗಳನ್ನು ಕೊಡಲು, ಹೀಗೆ ಟೈಪ್ ಮಾಡಿ. |
| 08:38 | open square bracket one semicolon one close square bracket |
| 08:43 | Enter ಅನ್ನು ಒತ್ತಿ. |
| 08:45 | ನಂತರ, ನಾವು maximum number of iterations ಅನ್ನು 25 ಎಂದು ಕೊಡುತ್ತೇವೆ. |
| 08:50 | Enter ಅನ್ನು ಒತ್ತಿ. |
| 08:52 | tolerance level ಅನ್ನು zero point zero zero zero zero one ಎಂದು ಕೊಡೋಣ. |
| 08:58 | Enter ಅನ್ನು ಒತ್ತಿ. |
| 09:01 | ಕೊನೆಯದಾಗಿ, ಫಂಕ್ಷನ್ ಅನ್ನು ಕಾಲ್ ಮಾಡಲು, ನಾವು ಹೀಗೆ ಟೈಪ್ ಮಾಡುತ್ತೇವೆ. |
| 09:04 | G a u s s S e i d e l open parenthesis A comma b comma x zero comma M a x I t e r comma t o l close parenthesis |
| 09:24 | Enter ಅನ್ನು ಒತ್ತಿ. |
| 09:26 | x one ಮತ್ತು x two ಗಳ ವ್ಯಾಲ್ಯುಗಳನ್ನು ತೋರಿಸಲಾಗಿದೆ. |
| 09:30 | ಇದೇ ಸಮಸ್ಯೆಯನ್ನು ಸಾಲ್ವ್ ಮಾಡಲು, ಇಲ್ಲಿ ಬೇಕಾಗುವ ಇಟರೇಷನ್ ಗಳ ಸಂಖ್ಯೆಯು, ಜಕೋಬಿ ವಿಧಾನದಲ್ಲಿ ಇರುವುದಕ್ಕಿಂತ ಕಡಿಮೆ ಆಗಿದೆ. |
| 09:37 | ಜಕೋಬಿ ಮತ್ತು ಗಾಸ್ ಸೈಡಲ್ ವಿಧಾನಗಳನ್ನು ಬಳಸಿ ಈ ಸಮಸ್ಯೆಯನ್ನು ನೀವು ಸ್ವತಃ ಸಾಲ್ವ್ ಮಾಡಿ. |
| 09:43 | ಈ ಟ್ಯುಟೋರಿಯಲ್ ನಲ್ಲಿ ನಾವು, |
| 09:47 | ಲೀನಿಯರ್ ಇಕ್ವೇಷನ್ ಗಳ ಸಿಸ್ಟಮ್ ಅನ್ನು ಸಾಲ್ವ್ ಮಾಡಲು, ಸೈಲ್ಯಾಬ್ ಕೋಡ್ ಅನ್ನು ಬರೆಯುವುದು ಮತ್ತು |
| 09:52 | ಲೀನಿಯರ್ ಇಕ್ವೇಷನ್ ಗಳ ಸಿಸ್ಟಮ್ ನಲ್ಲಿ, ವೇರಿಯೇಬಲ್ ಗಳ ವ್ಯಾಲ್ಯುವನ್ನು ಕಂಡುಹಿಡಿಯುವುದು ಇವುಗಳನ್ನು ಕಲಿತಿದ್ದೇವೆ. |
| 09:58 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ. |
| 10:01 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
| 10:04 | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
| 10:09 | ಸ್ಪೋಕನ್ ಟ್ಯುಟೋರಿಯಲ್ ತಂಡವು: |
| 10:11 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. |
| 10:15 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
| 10:18 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
conatct@spoken-tutorial.org. |
| 10:25 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
| 10:30 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
| 10:37 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
| 10:49 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
| 10:51 | ಧನ್ಯವಾದಗಳು. |