STEMI-2017/C2/Essential-data-to-be-filled-before-an-ECG/Kannada
From Script | Spoken-Tutorial
TIME | NARRATION |
00:00 | ನಮಸ್ತೇ, ECG’ಗಿಂತ ಮೊದಲು ತುಂಬಬೇಕಾದ ಮುಖ್ಯ-ಅಂಶಗಳ ಬಗೆಗಿನ ಟ್ಯುಟೋರಿಯಲ್’ಗೆ ಸ್ವಾಗತ |
00:08 | ಈ ಟ್ಯುಟೋರಿಯಲ್’ನಲ್ಲಿ ನಾವು STEMI ತಂತ್ರಾಂಶದಲ್ಲಿ ECGಗಿಂತ ಮೊದಲು ತುಂಬಬೇಕಾದ ಮುಖ್ಯ ಅಂಶಗಳ ಬಗ್ಗೆ ತಿಳಿಯಲಿದ್ದೇವೆ |
00:15 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನಿಮ್ಮ ಬಳಿ STEMI ತಂತ್ರಾಂಶವಿರುವ Android tablet ಮತ್ತು ಕಾರ್ಯಗತ ಅಂತರ್ಜಾಲ ಸಂಪರ್ಕ ಇರಬೇಕು |
00:25 | ಈ ಸರಣಿಯಲ್ಲಿ ನಾವು ಈ ಮೊದಲು *STEMI ತಂತ್ರಾಂಶದಲ್ಲಿ ಲಾಗಿನ್ ಮತ್ತು ಲಾಗೌಟ್ ಆಗಲು ಮತ್ತು ಕಡ್ಡಾಯ ವಿಷಯಗಳನ್ನು ಭಾರ್ತಿ ಮಾಡಲು ಕಲಿತಿದ್ದೆವು |
00:37 | ನಾವು ಲಾಗಿನ್ ಮಾಡುವುದಕ್ಕೂ ಮೊದಲು, ECG ಯಂತ್ರವು ರೋಗಿ ಮತ್ತು STEMI ಯಂತ್ರದ ನಡುವೆ ಸರಿಯಾಗಿ ಸಂಪರ್ಕವಾಗಿದೆ ಎಂದು ಖಾತರಿಪಡಿಸಿಕೊಳ್ಳಿ. |
00:46 | ನಾವೀಗ STEMI homepageನಲ್ಲಿದ್ದೇವೆ. |
00:50 | ವೈದ್ಯಕೀಯ ತುರ್ತುಸಂದರ್ಭದಲ್ಲಿ, ಕಡಿಮೆ ವಿಷಯಭರ್ತಿ ಮಾಡಿ ECG ಅಳೆಯಲು ECG ಟ್ಯಾಬ್ ಅನ್ನು ಆಯ್ಕೆ ಮಾಡಿರಿ |
00:59 | ಒಂದು ರೋಗಿಯನ್ನು ಊಹಿಸಿ ವಿಷಯಭರ್ತಿ ಮಾಡೋಣ. |
01:03 | ರೋಗಿಯ ಹೆಸರು : ರಮೇಶ್
ವಯಸ್ಸು: 53 ಲಿಂಗ : ಪುರುಷ ಪ್ರವೇಶ : ನೇರ |
01:12 | ಈ ನಾಲ್ಕು ವಿಷಯಗಳು ಎಲ್ಲ ರೋಗಿಗಳಿಗೂ ಸಾಮಾನ್ಯವಾಗಿರುತ್ತವೆ, ಯಾವುದೇ ರೀತಿಯ ಹಾಸ್ಪಿಟಲ್ ಲಾಗಿನ್ ಆಗಿದ್ದರೂ. |
01:19 | ನಾವು ಈ ನಾಲ್ಕು ವಿಷಗಳನ್ನು ಮಾತ್ರ ಭರ್ತಿ ಮಾಡಬೇಕಾಗಿರುವುದು ನಮಗೆ ಅನುಕೂಲವಾಗಿದೆ |
01:25 | Take ECG ಪುಟದ ಕೆಳಗಿನ ಭಾಗದಲ್ಲಿರುವ ಎಂಬ ಆಯ್ಕೆಯನ್ನು ಒತ್ತುವ ಮೂಲಕ ನಾವು ಶೀಘ್ರ ರೀತಿಯಲ್ಲಿ ECG ಅಳೆಯಬಹುದು |
01:34 | Take ECG ಗುಂಡಿ ಒತ್ತುವ ಮೂಲಕ ರೋಗಿಯ ವಿವರಗಳು ರಕ್ಷಿಸಲ್ಪಡುತ್ತವೆ (ಸೇವ್ ಆಗುತ್ತವೆ) |
01:42 | ಕೂಡಲೇ, “saved successfully (ಯಶಶ್ವಿಯಾಗಿ ರಕ್ಷಿಸಲ್ಪಟ್ಟಿದೆ) ಎಂಬ ಸಂದೇಶವನ್ನು ಪುಟದ ಕೆಳಭಾಗದಲ್ಲಿ ನೋಡಬಹುದು |
01:49 | ಈಗ ಯಂತ್ರವು ECG live stream ಪುಟಕ್ಕೆ ಕರೆದೊಯ್ಯುತ್ತದೆ ಮತ್ತು ECG ಅಳೆಯಲು ನಾವು ಸಿದ್ಧರಿದ್ದೇವೆ |
01:57 | ECG ಅನ್ನು ಶೀಘ್ರವಾಗಿ ವಿಷಯಭರ್ತಿಯ ಯಾವುದೇ ಸಮಯದಲ್ಲಾದರೂ ಅಳೆಯಬಹುದು, |
02:02 | Homepage’ನಲ್ಲಿರುವ ಹೊಸ ರೋಗಿ ಎಂಬ ಟ್ಯಾಬ್’ನಲ್ಲಿ ECG ಎಂಬ ಗುಂಡಿಯನ್ನು ಒತ್ತಿರಿ. ಇದು ಪುಟದ ಬಲಬದಿಯ ಮೇಲ್ಭಾಗದಲ್ಲಿರುತ್ತದೆ |
02:10 | ECG ಗುಂಡಿ ಒತ್ತಿದೊಡನೆಯೇ ECG live stream ಪುಟಕ್ಕೆ ನಾವು ಕರೆದೊಯ್ಯಲ್ಪಡುತ್ತೇವೆ |
02:17 | ಸಾರಾಂಶ ತಿಳಿಯೋಣ |
02:19 | ಈ ಟ್ಯುಟೋರಿಯಲ್’ನಲ್ಲಿ ನಾವು STEMI ತಂತ್ರಾಂಶದಲ್ಲಿ ECG ಅಲೆಯುವ ಮುನ್ನ ತುಂಬಬೇಕಾದ ವಿಷಯಗಳ ಬಗ್ಗೆ ಕಲಿತೆವು |
02:27 | STEMI ಇಂಡಿಯಾ
ಒಂದು ಸೇವಾಸಂಸ್ಥೆಯಾಗಿದ್ದು ಹೃದಯಾಘಾತಕ್ಕೊಳಗಾದ ರೋಗಿಗಳ ವಿಶೇಷ ಕಾಳಜಿಯನ್ನು ವಹಿಸುವ ವಿಷಯದಲ್ಲಿ ವಿಳಂಬವಾಗದಂತೆ ಹಾಗೂ ಇದರಿಂದ ಸಾವು ಸಂಭವಿಸುವುದು ಕಡಿಮೆಯಾಗುವ ಬಗ್ಗೆ ಕಾರ್ಯ ನಿರ್ವಹಿಸುತ್ತದೆ |
02:41 | ಸ್ಪೋಕನ್ ಟ್ಯುಟೋರಿಯಲ್ ಯೋಜನೆ, IIT ಬಾಂಬೆ NMEICT, MHRD, ಭಾರತ ಸರ್ಕಾರ ಇದರಿಂದ ಅನುದಾನಿತವಾಗಿದೆ. ವಿವರಗಳಿಗೆ http://spoken-tutorial.org ನೋಡಿರಿ |
02:54 | ಈ ಟ್ಯುಟೋರಿಯಲ್ STEMI ಇಂಡಿಯಾ ಮತ್ತು ಸ್ಪೋಕನ್ ಟ್ಯುಟೋರಿಯಲ್ ಇವುಗಳ ಸಹಯೋಗದಲ್ಲಿ ಮೂಡಿಬಂದಿದೆ.
ನಾನು ರಾಕೇಶ್ ವಿರಮಿಸುತ್ತೇನೆ. ಧನ್ಯವಾದ. |