PHP-and-MySQL/C4/User-Registration-Part-6/Kannada

From Script | Spoken-Tutorial
Jump to: navigation, search
Time Narration
00:00 ನಮಸ್ಕಾರ, ಅಪ್ಡೇಟ್ ಗಳಿರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. ಇದು ತುಂಬ ಉದ್ದವಿರುವ ವಿಡಿಯೋ ಅಲ್ಲ.
00:08 ನನ್ನ ರೆಜಿಸ್ಟರ್ ಸ್ಕ್ರಿಪ್ಟ್ ನಲ್ಲಿ, ಯಾರೋ ಒಂದು ತಪ್ಪನ್ನು ತಿಳಿಸಿದ್ದಾರೆ. ಬಳಕೆದಾರ ರೆಜಿಸ್ಟರ್ ಆಗಿದ್ದು, ಅವರು ನಿರ್ದಿಷ್ಟಪಡಿಸಿದ "username" ಈಗಾಗಲೇ ಅಸ್ತಿತ್ವದಲ್ಲಿದೆಯೇ ಎಂದು ನಾನು ಪರಿಶೀಲಿಸಬೇಕು.
00:19 ಇಲ್ಲಿರುವ ನನ್ನ ಫಾರ್ಮ್ ಗೆ ಹಿಂದಿರುಗುವೆನು. ಇಲ್ಲಿ ನಾವು 'full name' ಅನ್ನು ಟೈಪ್ ಮಾಡುವೆನು. ನೀವು 'username' ಮತ್ತು 'password' ಅನ್ನು ಆಯ್ಕೆ ಮಾಡಿಕೊಳ್ಳಬಹುದು.
00:28 ನಾನು ಈ ವ್ಯಾಲ್ಯುಗಳನ್ನು ಮೊದಲು ಹೊಂದಿದ್ದೆ. ಈಗ ಇದನ್ನು ತೆಗೆದುಹಾಕೋಣ.
00:33 ಆದರೆ ಈಗ ನಾವು "username" ಅನ್ನು ಆಯ್ಕೆ ಮಾಡುವಾಗ,
00:37 ಉದಾಹರಣೆಗೆ, ನಾನು "alex" ಎಂಬ ಯೂಸರ್ ನೇಮ್ ನಿಂದ ರೆಜಿಸ್ಟರ್ ಆಗುವೆನು ಎಂದುಕೊಳ್ಳೋಣ. ನಮ್ಮ ಡಾಟಾಬೇಸ್ ನಲ್ಲಿ ಈಗಾಗಲೇ "alex" ಎಂಬ ಯೂಸರ್ ನೇಮ್ ಅಸ್ತಿತ್ವದಲ್ಲಿದೆ.
00:47 ಹಾಗಾಗಿ ನಾವು ಯೂಸರ್ ನೇಮ್ ಈಗಾಗಲೇ ಅಸ್ತಿತ್ವದಲ್ಲಿದೆಯೇ ಎಂದು ಪರಿಶೀಲಿಸಬೇಕು.
00:50 ಯೂಸರ್ ನೇಮ್ ಈಗಾಗಲೇ ಅಸ್ತಿತ್ವದಲ್ಲಿದ್ದರೆ, ನಾವು ಆ ಬಳಕೆದಾರರನ್ನು ದಾಖಲು ಮಾಡಿಕೊಳ್ಳುವುದಿಲ್ಲ. ಏಕೆಂದರೆ, ನಮಗೆ ಒಂದೇ ಯೂಸರ್ ನೇಮ್ ಎರಡು ಬಾರಿ ಬೇಡ.
01:01 ನಾನು ಇಲ್ಲಿ ರೆಜಿಸ್ಟರ್ ಮಾಡಿದರೆ, ಪಾಸ್ವರ್ಡ್ ಅನ್ನು ಇಲ್ಲಿ ಇಡೋಣ ಮತ್ತು ಯೂಸರ್ ನೇಮ್ ಅನ್ನು "alex" ಎಂದೇ ಆಯ್ಕೆಮಾಡೋಣ. ಡಾಟಾಬೇಸ್ ನಲ್ಲಿ "alex" ಎನ್ನುವ ಯೂಸರ್ ನೇಮ್ ಈಗಾಗಲೇ ಇದೆ.
01:13 ಹೆಸರನ್ನು ಬದಲಿಸಿ, Register ಅನ್ನು ಕ್ಲಿಕ್ ಮಾಡೋಣ.
01:20 ನಾನು ಯಶಸ್ವಿಯಾಗಿ ರೆಜಿಸ್ಟರ್ ಆಗಿದ್ದೇನೆ.
01:23 ಡಾಟಾಬೇಸ್ ನಲ್ಲಿ ನೋಡೋಣ. ನಾವು "alex" ಎನ್ನುವ ಎರಡು ಯೂಸರ್ ನೇಮ್ ಗಳಿರುವುದನ್ನು ನೋಡಬಹುದು.
01:28 ಇದು ಲಾಗಿನ್ ಆಗುವಾಗ ಸಮಸ್ಯೆಯನ್ನು ಮಾಡುತ್ತದೆ.
01:31 ಹೆಸರು ಮೊದಲು ಕಾಣಿಸಿದ ತಕ್ಷಣ, ನಾವು ಲಾಗಿನ್ ಆಗುವೆವು ಮತ್ತು ಇದು ನಿರ್ಲಕ್ಷಿಸಲ್ಪಡುತ್ತದೆ.
01:39 ಹಾಗಾಗಿ, ಈ ವ್ಯಕ್ತಿಯು ಡಾಟಾಬೇಸ್ ಗೆ ಯಾವಾಗಲೂ ಲಾಗಿನ್ ಆಗಲು ಸಾಧ್ಯವಿಲ್ಲ.
01:44 ಹಾಗಾಗಿ ಇದನ್ನು ಡಿಲೀಟ್ ಮಾಡೋಣ.
01:48 'username' ಈಗಾಗಲೆ ಅಸ್ತಿತ್ವದಲ್ಲಿದೆಯೇ ಎಂದು ನೀವು ಕೆಲವು ಚೆಕ್ ಗಳನ್ನು ಇಡಬೇಕು.
01:53 ಇದು ತುಂಬಾ ಸರಳವಾಗಿದೆ. ಇದನ್ನು ಮಾಡಲು ಒಂದಕ್ಕಿಂತ ಹೆಚ್ಚು ವಿಧಾನಗಳಿವೆ.
01:59 ಆದರೆ ನಾನು ಸರಳವಾದ ಮತ್ತು ಪರಿಣಾಮಕಾರಿಯಾಗಿ ಕೆಲಸಮಾಡುವ ವಿಧಾನವನ್ನು ಆಯ್ಕೆಮಾಡಿಕೊಳ್ಳುವೆನು.
02:05 ಮೊದಲಿಗೆ ನನ್ನ ಡಾಟಾಬೇಸ್ ಗೆ ಸಂಪರ್ಕಿಸುವ ಕೋಡ್ ಅನ್ನು ತೆಗೆದುಕೊಳ್ಳುವೆನು.
02:12 ನನ್ನ ಡಾಟಾಬೇಸ್ ಅನ್ನು ಆಯ್ಕೆಮಾಡಿಕೊಂಡು, ಇದನ್ನು ಮೇಲೆ ಅಂದರೆ 'submit' ಬಟನ್ ಅನ್ನು ಪರಿಶೀಲಿಸುವಲ್ಲಿ ತೆಗೆದುಕೊಂಡು ಹೋಗುತ್ತೇನೆ.
02:20 ಇದು ಕೇವಲ ಡಾಟಾಬೇಸ್ ಅನ್ನು ಸಂಪರ್ಕ ಮಾಡಲು ಇರುವುದಾಗಿದೆ. ನಾನು ಇದರ ಒಳಗೆ ಇದ್ದೇನೆ.
02:26 ನಂತರ, ಇದರಡಿಯಲ್ಲಿ 'username' ಅನ್ನು ಪರಿಶೀಲಿಸಲು ಬಯಸುವೆನು.
02:31 ನೀವು ಪರಿಶೀಲನೆಯನ್ನು ಎಲ್ಲಿ ಬೇಕಾದರೂ ಮಾಡುವಂತಿಲ್ಲ. ಸರಳವಾಗಿಡಲು, ಇದನ್ನು ಇಲ್ಲಿ ಇಡುವೆನು ಮತ್ತು ಉಳಿದ ಸ್ಕ್ರಿಪ್ಟ್ ಅನ್ನು ಕಿಲ್ ಮಾಡುವೆನು.
02:39 'username' ಸಿಕ್ಕರೆ, ನೀವು ಇದನ್ನು ಎಲ್ಲಿ ಬೇಕಾದರೂ ಇಡಬಹುದು.
02:44 ನಿಮ್ಮ ವೆಬ್ಸೈಟ್ ನಲ್ಲಿ ಪೂರ್ಣ ಪೇಜ್ ಅನ್ನು ಬಳಸುವಾಗ ಜಾಗೃತವಾಗಿರಿ. die ಫಂಕ್ಷನ್ ಉಳಿದ ಕೋಡ್ ಅನ್ನು ನಾಶಮಾಡುತ್ತದೆ. ಹಾಗಾಗಿ ನಾನು ಇದನ್ನು ಬಳಸುವುದನ್ನು ಶಿಫಾರಸು ಮಾಡುವುದಿಲ್ಲ.
02:53 ನಾನು ಮುಂದಿರುವ ಸ್ಟೇಟ್ಮೆಂಟ್ ಗಳಂತೆ, ನೀವು ಇವುಗಳನ್ನು ಪರಿಶೀಲಿಸುವದನ್ನು ಶಿಫಾರಸು ಮಾಡುತ್ತೇನೆ. ಸ್ಕ್ರಿಪ್ಟ್ ಅನ್ನು kill ಮಾಡುವುದು ಬೇಡ.
03:00 ಆದರೆ ಇಲ್ಲಿ ನಾವು ಮಾಡುತ್ತಿರುವುದರ ಬಗ್ಗೆ, ನಿಮಗೆ ಸಾಮಾನ್ಯ ಜ್ಞಾನ ಸಿಗುವುದು.
03:06 ನಾವು ನಿರ್ದಿಷ್ಟವಾದ username ಅನ್ನು ಹೊಂದಿರುವ ರೆಕಾರ್ಡ್ ಅನ್ನು ತೆಗೆದುಕೊಳ್ಳುವ ಒಂದು ಕ್ವೆರಿಯನ್ನು ಬರೆಯಬೇಕು.
03:12 ಅದಕ್ಕಾಗಿ ಇಲ್ಲಿ "namecheck query" ಯನ್ನು ಬರೆಯುವೆನು. ಈ ವೇರಿಯೇಬಲ್ ಅನ್ನು "$namecheck" ಎಂದು ಕರೆಯುವೆನು ಮತ್ತು ಇದು ಒಂದು mysql query ಆಗಿರುವುದು.
03:21 ಅದನ್ನು ಸರಳವಾಗಿಡಲು select "username" ಎಂದು ಟೈಪ್ ಮಾಡುವೆನು. ಇದು ಎಲ್ಲಾ ಡಾಟಾವನ್ನು ತೆಗೆದುಕೊಳ್ಳುವುದಿಲ್ಲ.
03:27 "users" ನಿಂದ username ಅನ್ನು ಆಯ್ಕೆಮಾಡಿಕೊಳ್ಳುವೆನು.
03:35 ಅದು ಇಲ್ಲಿ ನಮ್ಮ table ನ ಹೆಸರಾಗಿದೆ.
03:39 ಅದಕ್ಕಾಗಿ "WHERE username" is equal to ಎಂದು ಟೈಪ್ ಮಾಡುವೆನು. ಇಲ್ಲಿ ನೀವು ನೋಡಿದರೆ, ಇಲ್ಲಿ ನಾವು ಫಾರ್ಮ್ ಅನ್ನು ಸಬ್ಮಿಟ್ ಮಾಡುವ ಬಳಕೆದಾರನ ಹೆಸರು, ಅಂದರೆ "username" ಎನ್ನುವ ವೇರಿಯೇಬಲ್ ಆಗಿದೆ.
03:50 ಅದಕ್ಕಾಗಿ, ಇಲ್ಲಿ ಕೆಳಕ್ಕೆ ಬಂದು, "username" ಎಂದು ಟೈಪ್ ಮಾಡುವೆನು.
03:55 ಈಗ ನಾವು ಹೆಸರನ್ನು "alex" ಎಂದು ಆಯ್ಕೆ ಮಾಡಿಕೊಂಡರೆ, ಇದು ಡಾಟಾಬೇಸ್ ನಿಂದ username "alex" ಆಗಿರುವ ಪ್ರತಿಯೊಂದು ರೆಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳುತ್ತದೆ. ಈಗ ಸದ್ಯಕ್ಕೆ ಒಂದು ರೆಕಾರ್ಡ್ ಇರುವುದನ್ನು ನೋಡಬಹುದು.
04:09 ಇಲ್ಲಿ ಈ ಉದಾಹರಣೆಯಲ್ಲಿ ಒಂದೇ ರೆಕಾರ್ಡ್ ಅನ್ನು ನೋಡಬಹುದು.
04:15 ಉದಾಹರಣೆಗೆ, ನಾವು username ಅನ್ನು "Dale" ಎಂದು ಸೂಚಿಸಿದರೆ, ರೆಕಾರ್ಡ್ ಗಳನ್ನು ಇದು ಹಿಂದಿರುಗಿಸುವುದಿಲ್ಲ.
04:20 ಅಂದರೆ ರೆಕಾರ್ಡ್ ಅನ್ನು ಹಿಂದಿರುಗಿಸದಿದ್ದರೆ, ಈ ಯೂಸರ್ ನೇಮ್ ಅಸ್ತಿತ್ವದಲ್ಲಿಲ್ಲ ಎಂದರ್ಥ. ಹಾಗಾಗಿ ನಾವು ಎಷ್ಟು ರೆಕಾರ್ಡ್ ಗಳನ್ನು ಇದು ಹಿಂದಿರುಗಿಸುತ್ತದೆ ಎಂದು ಪರೀಕ್ಷಿಸಲು, ನಮಗೆ ಒಂದು ಫಂಕ್ಷನ್ ಬೇಕು.
04:29 ನಾವು $count ವೇರಿಯೇಬಲ್ ಅನ್ನು ರಚಿಸಿ, "mysql num rows" ಗೆ ಸಮೀಕರಿಸುವೆವು.
04:36 ಇದು ನಮ್ಮ ಕ್ವೆರಿಯಲ್ಲಿರುವ ರೆಕಾರ್ಡ್ ಗಳ ಅಥವಾ ರೋ ಗಳ ಸಂಖ್ಯೆಯನ್ನು ಹಿಂದಿರುಗಿಸುತ್ತದೆ. ಇಲ್ಲಿ "$namecheck" ಎಂದು ಟೈಪ್ ಮಾಡಿ.
04:47 ಈಗ ಇದನ್ನು ಪರೀಕ್ಷಿಸೋಣ. ಇಲ್ಲಿ echo $count ಎಂದು ಟೈಪ್ ಮಾಡುವೆನು ಮತ್ತು ನಂತರ ಸ್ಕ್ರಿಪ್ಟ್ ಅನ್ನು ಮುಗಿಸುವೆನು.
04:53 ಉಳಿದ ಕೋಡ್ ಗಳು ಎಕ್ಸಿಕ್ಯೂಟ್ ಆಗುವುದಿಲ್ಲ.
04:57 ಈಗ Register ಆಗಲು ಹಿಂದಿರುಗಿ ಮತ್ತು ಇಲ್ಲಿ full name ಅನ್ನು "alex" ಎಂದು ಟೈಪ್ ಮಾಡುವೆನು.
05:03 Fullname, ನಂತರ username ಅನ್ನು ಆಯ್ಕೆ ಮಾಡುವೆನು. ಇಲ್ಲಿ ನಾನು "Dale" ಎಂದು ಟೈಪ್ ಮಾಡುವೆನು.
05:10 ಪಾಸ್ವರ್ಡ್ ಅನ್ನು ನಾವು ಪರಿಶೀಲಿಸುವುದಿಲ್ಲ, ಹಾಗಾಗಿ ಅದನ್ನು ಬಿಡುವೆನು.
05:16 ಆದರೆ ನಾನು ಇಲ್ಲಿ ಅವುಗಳನ್ನು ಸುಮ್ಮನೆ ಹಾಕುವೆನು ಮತ್ತು Register ಅನ್ನು ಕ್ಲಿಕ್ ಮಾಡುವೆನು.
05:24 ನಾವು ಇಲ್ಲಿ ಸೊನ್ನೆ ವ್ಯಾಲ್ಯುವನ್ನು ಪಡೆದಿದ್ದೇವೆ.
05:28 ಏಕೆಂದರೆ "Dale" ಎನ್ನುವ 'username' ಡಾಟಾಬೇಸ್ ನಲ್ಲಿ ಇಲ್ಲ.
05:32 ನಾನು ಇದನ್ನು "alex" ಎಂದು ಬದಲಿಸುವೆನು, ಸಣ್ಣ ಅಕ್ಷರ "a" ಆಗಿರಲಿ.
05:39 ನಾವು ಇಲ್ಲಿ strip tag ಗಳನ್ನು ಹೊಂದಿದ್ದೇವೆ. ನಮಗೆ ಕೇಸ್ ಸೆನ್ಸಿಟಿವಿಟಿ ಬೇಕಾಗುವುದರಿಂದ, ಇಲ್ಲಿ ಇನ್ನೊಂದು ಅಂಶವನ್ನು ಸೇರಿಸಬೇಕು.
05:49 ನಾವು 'username' ಅನ್ನು ಗಣನೆಗೆ ತೆಗೆದುಕೊಳ್ಳುವಾಗ, ಇಲ್ಲಿ "string to lower" ಫಂಕ್ಷನ್ ಅನ್ನು ಬಳಸಬೇಕು. ಏಕೆಂದರೆ, ನಾವು ಯಾವಾಗಲೂ ಸಣ್ಣ ಅಕ್ಷರಕ್ಕೆ ಇದನ್ನು ಪರಿವರ್ತಿಸಬೇಕು.
06:01 ಈಗ ನಾವು ಹಿಂದಿರುಗೋಣ, Register ಅನ್ನು ಕ್ಲಿಕ್ ಮಾಡಿ.
06:08 1 ಎಂದು ವ್ಯಾಲ್ಯು ಹಿಂದಿರುಗಿಸುವದನ್ನು ನಾವು ನೋಡಬಹುದು.
06:12 ಇಲ್ಲಿ ಪರಿಶೀಲಿಸಬೇಕಾದ ವಿಷಯವೆಂದರೆ, ನಾವು ಎಕೋ ಮಾಡುತ್ತಿರುವ ಈ ವೇರಿಯೇಬಲ್ ಸೊನ್ನೆಗೆ ಸಮವಾಗಿಲ್ಲ. ಎಂದರೆ, ನಾವು ಬಳಕೆದಾರರಿಗೆ ಈ username ಈಗಾಗಲೇ ಅಸ್ತಿತ್ವದಲ್ಲಿದೆ ಎಂದು ಹೇಳಬೇಕು.
06:25 ಇಲ್ಲಿ ಒಂದು ಸರಳವಾದ if ಸ್ಟೇಟ್ಮೆಂಟ್ ಅನ್ನು ರಚಿಸಿ, ಇಲ್ಲಿ ನನ್ನ block ಅನ್ನು ಸೇರಿಸುವೆನು.
06:29 if '$count' doesn't equal zero, ಅಂದರೆ ಈ ಕಂಡಿಷನ್ ನ ಅಡಿಯಲ್ಲಿ ಈ ರೆಕಾರ್ಡ್ ಇದೆ. ಅಂದರೆ ಈ 'username' ಅನ್ನು ಈಗಾಗಲೇ ಬಳಸಲಾಗಿದೆ.
06:40 ಆಗ ನಾವು ಸ್ಕ್ರಿಪ್ಟ್ ಅನ್ನು kill ಮಾಡಿ, "Username already taken!" ಅಥವಾ ಈ ರೀತಿಯಾದ ಮೆಸೇಜ್ ಅನ್ನು ಕೊಡಬೇಕು. ಹಿಂದಿರುಗಿ, ರಿಫ್ರೆಶ್ ಮಾಡಿ.
06:50 ಇಲ್ಲಿ "alex" ಎಂದು ಟೈಪ್ ಮಾಡಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ. Register ಅನ್ನು ಕ್ಲಿಕ್ ಮಾಡಿ.
06:56 ಈಗ "Username already taken!" ಎಂಬ ಎರರ್ ಬಂದಿರುವುದನ್ನು ನೋಡಬಹುದು.
07:00 ನಾನು ಇಲ್ಲಿ "Dale" ಎಂದು ಟೈಪ್ ಮಾಡಿ, ಹೊಸ ಹೆಸರನ್ನು ಆಯ್ಕೆ ಮಾಡಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ, Register ಅನ್ನು ಕ್ಲಿಕ್ ಮಾಡಿದರೆ, ಇದು ಯಶಸ್ವಿಯಾಗಿ ಡಾಟಾಬೇಸ್ ಗೆ ರೆಜಿಸ್ಟರ್ ಆಗಿರುವುದನ್ನು ನೋಡಬಹುದು. ಏಕೆಂದರೆ, 'username' ಅಸ್ತಿತ್ವದಲ್ಲಿಲ್ಲ.
07:15 ಸರಿ ಇದನ್ನು ಇಲ್ಲಿಗೆ ಬಿಡುವೆನು. ನೀವು ನಮ್ಮ ರೆಜಿಸ್ಟರ್ ಆದ ಬಳಕೆದಾರರನ್ನು ಇಲ್ಲಿ ನೋಡಬಹುದು.
07:22 "str to lower()" ಫಂಕ್ಷನ್ ಅನ್ನು ಬಳಸಿ. ಇದು ಎಲ್ಲವನ್ನು ಸರಳವಾಗಿಡಲು ಉಪಯುಕ್ತವಾಗಿದೆ.
07:29 ಅಥವಾ ನೀವು "str to lower()" ಫಂಕ್ಷನ್ ಅನ್ನು if ಸ್ಟೇಟ್ಮೆಂಟ್ ನಲ್ಲೂ ಬಳಸಬಹುದು.
07:32 ಆದರೆ ಎಲ್ಲ ಯೂಸರ್ನೇಮ್ ಗಳನ್ನು ಸಣ್ಣ ಅಕ್ಷರದಲ್ಲಿ ಇಡುವುದು ಒಳ್ಳೆಯದು ಎಂದು ಶಿಫಾರಸು ಮಾಡುವೆನು.
07:39 ನೀವು ಇದನ್ನು ಲಾಗಿನ್ ಸ್ಕ್ರಿಪ್ಟ್ ನಲ್ಲೂ ಸೇರಿಸಬೇಕು. ಲಾಗಿನ್ ಬಾಕ್ಸ್ ನಲ್ಲಿ ಬಳಕೆದಾರ ಏನನ್ನೇ ಟೈಪ್ ಮಾಡಿದರೂ ಅದನ್ನು ಸಣ್ಣ ಅಕ್ಷರಕ್ಕೆ ಪರಿವರ್ತಿಸಬೇಕು.
07:48 ನಾನು ಈ ರೀತಿಯ ಪರೀಕ್ಷೆಗಳನ್ನು ಮಾಡಲು ಪ್ರೋತ್ಸಾಹಿಸುವೆನು. ಇದು ಎರರ್ ಗಳನ್ನು ಕಂಡುಹಿಡಿಯಲು ಉತ್ತಮ ವಿಧಾನವಾಗಿದೆ.
07:53 ಅವುಗಳನ್ನು ಪ್ರಯತ್ನಿಸಿ, ನಿಮಗೆ ಏನಾದರೂ ಸಹಾಯ ಬೇಕಾದಲ್ಲಿ ನನಗೆ ಇ-ಮೇಲ್ ಮಾಡಿ. ಅಪ್ಡೇಟ್ ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ.
07:58 ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14