PHP-and-MySQL/C4/User-Registration-Part-3/Kannada
From Script | Spoken-Tutorial
Time | Narration |
00:00 | User Registration ಟ್ಯುಟೋರಿಯಲ್ ನ ಮೂರನೇ ಭಾಗಕ್ಕೆ ಸ್ವಾಗತ. |
00:04 | ಇಲ್ಲಿ ನಾವು ಹಿಂದಿನ ಭಾಗದಲ್ಲಿ ಚರ್ಚೆ ಮಾಡಿದ ಎಲ್ಲ ವಿಷಯಗಳ ಅಸ್ತಿತ್ವವನ್ನು ಪರೀಕ್ಷಿಸುವೆವು. |
00:10 | ಈಗ ಹಿಂದಿನ ಭಾಗದಲ್ಲಿ ಕಲಿತ ವಿಷಯಗಳನ್ನು ಒಮ್ಮೆ ನೋಡಿಬಿಡೋಣ. |
00:14 | ನಾವು ನಮ್ಮ "fullname" ಮತ್ತು "username" ಗಳ ಟ್ಯಾಗ್ ಗಳನ್ನು ಸ್ಟ್ರಿಪ್ ಮಾಡಿದ್ದೇವೆ. |
00:19 | ನಮ್ಮ ಎನ್ಕ್ರಿಪ್ಟ್ ಆದ "password" ಅನ್ನು ಸಹ ಸ್ಟ್ರಿಪ್ ಮಾಡಿದ್ದೇವೆ. |
00:23 | ಈ ಫಂಕ್ಷನ್ ಗಳ ಕ್ರಮವನ್ನು ನೆನಪಿಟ್ಟುಕೊಳ್ಳಿ, ನಾವು ನಮ್ಮ ಎನ್ಕ್ರಿಪ್ಟ್ ಆದ ವ್ಯಾಲ್ಯುವನ್ನು ಸ್ಟ್ರಿಪ್ ಮಾಡುತ್ತಿಲ್ಲ. |
00:30 | ಇಲ್ಲಿ ನಮ್ಮ ರೆಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದೇವೆ. |
00:34 | ನಾನು ಇವೆಲ್ಲದರ ಅಸ್ತಿತ್ವವನ್ನು ಪರೀಕ್ಷಿಸುತ್ತಿದ್ದೇನೆ. |
00:38 | ಅದನ್ನು ಮಾಡುವ ಮೊದಲು "$date" ಅನ್ನು ಸೆಟ್ ಮಾಡುವೆನು. |
00:43 | ಇದನ್ನು date() ಫಂಕ್ಷನ್ ಅನ್ನು ಬಳಸಿ ಮಾಡಬೇಕು. |
00:47 | ಇದರೊಳಗೆ, ಇಸ್ವಿಗಾಗಿ "Y", ತಿಂಗಳಿಗಾಗಿ "m" ಮತ್ತು ದಿನಾಂಕಕ್ಕಾಗಿ "d" –ಇವುಗಳನ್ನು ಬಳಸಬೇಕು. |
00:55 | ಇಲ್ಲಿ ಕ್ಯಾಪಿಟಲ್ "Y", 4- ಅಂಕಿಗಳ ಇಸ್ವಿಯನ್ನು ಕೊಡುತ್ತದೆ. ನೀವು ಸಣ್ಣಕ್ಷರದ "y" ಬಳಸಿದರೆ, ಇದು 2-ಅಂಕಿಗಳ ಇಸ್ವಿಯನ್ನು ಕೊಡುತ್ತದೆ. |
01:02 | ನನ್ನ ಡೇಟಾಬೇಸ್ ನಲ್ಲಿ ಈಗ ನಾನು ಮೊದಲಿಗೆ ಇಸ್ವಿ, ನಂತರ ತಿಂಗಳು ಮತ್ತು ದಿನಾಂಕವನ್ನು ಹೊಂದಿರುತ್ತೇನೆ ಮತ್ತು ಪ್ರತಿಯೊಂದು ಹೈಫನ್ ನಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ. |
01:15 | ನಾವು ಡೇಟಾಬೇಸ್ ನಲ್ಲಿ ಹೋಗಿ, "users" ಟೇಬಲ್ ನಲ್ಲಿ ವ್ಯಾಲ್ಯುವನ್ನು ಸೇರಿಸಿದರೆ, |
01:22 | ಇಲ್ಲಿ ಈ ರೀತಿಯ ಫಂಕ್ಷನ್ ಅನ್ನು ಬಳಸಿದರೆ, "date" ಒಂದು ನಿರ್ದಿಷ್ಟವಾದ ಮಾದರಿಯಲ್ಲಿ ಇರುವುದನ್ನು ನೋಡಬಹುದು. |
01:29 | ನಾನು ಇವತ್ತಿನ ದಿನಾಂಕವನ್ನು ಕ್ಲಿಕ್ ಮಾಡಿದರೆ, ಇಲ್ಲಿ ನಾವು 4-ಅಂಕಿಗಳ ಇಸ್ವಿ, ಇಲ್ಲಿ ತಿಂಗಳು ಮತ್ತು ಇಲ್ಲಿ ದಿನಾಂಕ ಇದ್ದು, ಎಲ್ಲವನ್ನು ಹೈಫನ್ ನಿಂದ ಬೇರ್ಪಡಿಸಿರುವುದನ್ನು ನೋಡಬಹುದು. |
01:40 | ನನ್ನ ಡೇಟಾಬೇಸ್ ನಲ್ಲಿ ಈ ಮಾದರಿಗೆ ಹೊಂದಾಣಿಕೆಯಾಗಿದೆ. |
01:45 | ಈಗ if $submit ಆದಮೇಲೆ, ನಾವು ಅದರ ಇರುವಿಕೆಯನ್ನು ಪರೀಕ್ಷಿಸಬೇಕು. |
01:51 | ಇಲ್ಲಿ "check for existence" ಎಂದು ಕಮೆಂಟ್ ಅನ್ನು ಸೇರಿಸುವೆನು. |
01:55 | ಇದು ತುಂಬ ಸರಳವಾಗಿದೆ. |
01:58 | ನಾವು ಒಂದು "if" ಸ್ಟೇಟ್ಮೆಂಟ್ ಅನ್ನು ಸೇರಿಸಿ, ಅದರೊಳಗೆ ಕೋಡ್ ಬ್ಲಾಕ್ ಅನ್ನು ಬರೆಯಬೇಕು. |
02:05 | ಇಲ್ಲಿ ನಮ್ಮ ಕಂಡಿಷನ್: ' $fullname, $username, $password and $repeat password' ಗಳು ಇವೆಯೇ ಎಂದಿರಬೇಕು. ಅದಕ್ಕಾಗಿ ನಾವು if $username AND, ಅಂದರೆ ಎರಡು ಆಂಪರ್ಸೆಂಡ್ ಚಿಹ್ನೆಗಳು, |
02:24 | ನಂತರ "$password", ಆನಂತರ |
02:28 | ಓಹ್.. ನಾನು ಇಲ್ಲಿ "$fullname" ಅನ್ನು ಮರೆತಿದ್ದೇನೆ, ಇಲ್ಲಿ ಅದನ್ನು ಸೇರಿಸುವೆನು. |
02:33 | ಪ್ರತಿಯೊಂದನ್ನು ಎರಡು ಆಂಪರ್ಸೆಂಡ್ ಚಿಹ್ನೆಗಳಿಂದ ಬೇರ್ಪಡಿಸಿ. |
02:38 | ಕೊನೆಯದಾಗಿ "$repeat password". ಇವಿಷ್ಟನ್ನೂ ಈ ರೀತಿಯಾಗಿ ಟೈಪ್ ಮಾಡಿ. |
02:42 | ನಮಗೆ ಇವೆಲ್ಲವೂ ಬೇಕು. |
02:46 | Else, - echo "Please fill in" ಬೋಲ್ಡ್ ಅಲ್ಲಿ, "all", "fields!" ಎಂದು ಟೈಪ್ ಮಾಡಿ. |
02:57 | ಇದಾದ ನಂತರ ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಸೇರಿಸೋಣ. |
03:01 | ಮತ್ತು ನಮ್ಮ ಫಾರ್ಮ್ ಗೂ ಮೊದಲು ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಸೇರಿಸುವೆನು. ಆಗ ನಾವು ಪ್ರತಿ ಎರರ್ ಮೆಸೇಜ್ ಗೂ ಇದನ್ನು ಸೇರಿಸುವ ಅಗತ್ಯವಿಲ್ಲ. |
03:10 | ಇದು ಸರಿಯಾಗಿದೆ. ಈಗ ಪರೀಕ್ಷಿಸೋಣ. |
03:13 | ನಾನು ನನ್ನ "Register" ಪೇಜ್ ಗೆ ಹಿಂದಿರುಗುವೆನು. |
03:17 | ಇದು ಇಲ್ಲಿ ಬಂದಿದೆ. ಈಗ "register" ಅನ್ನು ಕ್ಲಿಕ್ ಮಾಡಿ. |
03:20 | "Please fill in all fields!" ಎಂಬ ಮೆಸೇಜ್ ಬಂದಿದೆ. |
03:22 | ಇಲ್ಲಿ ಎರಡು ಫೀಲ್ಡ್ ಗಳನ್ನು ಟೈಪ್ ಮಾಡೋಣ. |
03:25 | ಒಂದು ಪಾಸ್ವರ್ಡ್ ಅನ್ನು ಆಯ್ಕೆ ಮಾಡೋಣ. |
03:27 | ಪಾಸ್ವರ್ಡ್ ಅನ್ನು ಪುನರಾವರ್ತಿಸುವುದು ಬೇಡ. |
03:30 | "Register" ಅನ್ನು ಕ್ಲಿಕ್ ಮಾಡಿ. ಓಹ್! repeat password..ಸರಿಯಾಗಿದೆ.. |
03:42 | '$repeat password' ಇಲ್ಲೂ ಸರಿಯಾಗಿದೆ. |
03:45 | ಇದು ಈಗ ಕೆಲಸ ಮಾಡದೇ ಇರುವುದಕ್ಕೆ ಕಾರಣವೆಂದರೆ, ಖಾಲಿ ಫೀಲ್ಡ್ ನ "md5" ವ್ಯಾಲ್ಯುವು ಕೂಡ "md5" string ಟೆಕ್ಸ್ಟ್ ಅನ್ನು ಹೊಂದಿರುತ್ತದೆ. |
03:56 | ಎನ್ಕ್ರಿಪ್ಟೆಡ್ ಸ್ಟ್ರಿಂಗ್ ಟೆಕ್ಸ್ಟ್ ಆಗಿರುತ್ತದೆ. |
04:00 | ಅದಕ್ಕಾಗಿ ನೀವು ಇಲ್ಲಿ ಈ "md5" ಫಂಕ್ಷನ್ ಅನ್ನು ತೆಗೆದುಬಿಡಿ. |
04:06 | ಕೊನೆಯಲ್ಲಿ ಬ್ರ್ಯಾಕೆಟ್ ಅನ್ನು ತೆಗೆದಿರುವುದನ್ನು ಖಚಿತಪಡಿಸಿಕೊಳ್ಳಿ. ಈಗ ನಾನು ಕೆಳಕ್ಕೆ ಬಂದು ಎಲ್ಲಾ ಡಾಟಾವನ್ನು ಪರೀಕ್ಷಿಸುವೆನು. |
04:14 | ಈಗ ಹಿಂದಿರುಗಿ ಇನ್ನೊಮ್ಮೆ ಪರೀಕ್ಷಿಸೋಣ. |
04:17 | ನೆನಪಿಡಿ, ನಾವು "Repeat password" ಭರ್ತಿ ಮಾಡದೇ ಇದ್ದಾಗ ಇದು ಕಾರ್ಯನಿರ್ವಹಿಸಿರಲಿಲ್ಲ. |
04:23 | ನಾನು ಇಲ್ಲಿ ಎರಡೂ ಪಾಸ್ವರ್ಡ್ ಗಳನ್ನು ಆಯ್ಕೆಮಾಡಿಕೊಳ್ಳದಿದ್ದರೆ, ನಾವು ಎರರ್ ಅನ್ನು ಪಡೆಯುತ್ತೇವೆ. |
04:30 | ಈಗ ನಾನು "Repeat password" ಅನ್ನು ಹೊರತುಪಡಿಸಿ ಉಳಿದೆಲ್ಲ ವ್ಯಾಲ್ಯುಗಳನ್ನು ಭರ್ತಿಮಾಡಿದರೂ, ನಾವು ಎರರ್ ಅನ್ನು ಪಡೆಯುತ್ತೇವೆ. |
04:37 | ಅದೇ ಸಮಸ್ಯೆಯಾಗಿತ್ತು. ಈಗ ಎಲ್ಲವೂ ಅಸ್ತಿತ್ವದಲ್ಲಿದ್ದರೆ ನಾವು "password" ಮತ್ತು "repeat password" ಗಳನ್ನು ಎನ್ಕ್ರಿಪ್ಟ್ ಮಾಡಬೇಕು. |
04:46 | " "$password" is equal to "md5" of "$password" ಎಂದು ಟೈಪ್ ಮಾಡುವೆನು. |
04:53 | ಇದು ನಮ್ಮ ಮೂಲ ವೇರಿಯೇಬಲ್ ವ್ಯಾಲ್ಯುವನ್ನು ಎನ್ಕ್ರಿಪ್ಟ್ ಮಾಡಿ, ಹೊಸ ಪಾಸ್ವರ್ಡ್ ಕೋಡ್ ಅನ್ನು ಅದೇ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
05:00 | ನಾವು " "$repeat password" equals "md5" and "$repeat password" " ಎಂದು ಟೈಪ್ ಮಾಡಬೇಕು. |
05:08 | ಇಲ್ಲಿ "encrypt password" ಎಂದು ಕಮೆಂಟ್ ಮಾಡೋಣ. ನಾವು ನಮ್ಮ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಿದ್ದೇವೆ. |
05:15 | ಈಗ ಮುಂದೆ ಹೋಗಿ ನಮ್ಮ ಎಲ್ಲಾ ಡಾಟಾವನ್ನು ಡಾಟಾಬೇಸ್ ಗೆ ಸೇರಿಸಬೇಕು. |
05:21 | ನಾನು ಇದನ್ನು ಮಾಡುವೆನು. ಏಕೆಂದರೆ ನಾವು ನಮ್ಮ ರೆಜಿಸ್ಟ್ರೇಷನ್ ಗೆ ಬೇಕಾದ ಡಾಟಾವನ್ನು ಹೊಂದಿದ್ದೇವೆ. ಇನ್ಪುಟ್ ನಲ್ಲಿ ಬರುವ ಪ್ರತಿ ಡಾಟಾಗೂ ಗರಿಷ್ಟ ಮಿತಿಯನ್ನು ಸೆಟ್ ಮಾಡೋಣ. |
05:39 | ಈಗ ನಮ್ಮ "fullname, username, password ಮತ್ತು repeat password" ಗಳು 25 ಅಕ್ಷರಗಳೊಳಗೆ ಇರಲಿ ಎಂದುಕೊಳ್ಳೋಣ. ಹಾಗಾಗಿ ಗರಿಷ್ಟ ವ್ಯಾಲ್ಯು 25 ಆಗಿರುತ್ತದೆ. |
05:50 | ಅದಕ್ಕಾಗಿ ನಾವು " string length of '$username' is bigger or greater than 25.... OR |
06:05 | string length of the '$fullname' is greater than 25 " ಎಂದು ಟೈಪ್ ಮಾಡೋಣ. |
06:15 | ಈಗ ಇದನ್ನು ಪ್ರತ್ಯೇಕವಾಗಿ ನೋಡೋಣ. ಅಂದರೆ ನಿಮ್ಮ ಯೂಸರ್ ನೇಮ್ ಅಥವಾ ಫುಲ್ ನೇಮ್ ತುಂಬ ದೊಡ್ಡದಿದ್ದರೆ, |
06:24 | ನಾನು ಇದನ್ನು ಸರಿಯಾಗಿ ಹೇಳುವೆನು. |
06:27 | ಈ ಪ್ರತಿಯೊಂದು ವ್ಯಾಲ್ಯುವೂ 25 ಕ್ಕಿಂತ ಹೆಚ್ಚಾಗಿದ್ದರೆ ಅಥವ 25 ಕ್ಕಿಂತ ದೊಡ್ಡದಾಗಿದ್ದರೆ, |
06:34 | ನಾವು ಈ ರೀತಿಯಾಗಿ: |
06:40 | "username" ಅಥವಾ ಬೇಡ |
06:48 | "Max limit for username or fullname are 25 characters" ಎಂದು ಎಕೊ ಮಾಡೋಣ. |
06:55 | ಇಲ್ಲವಾದಲ್ಲಿ ನಾನು ಪಾಸ್ವರ್ಡ್ ನ ಅಳತೆಯನ್ನು ಪರೀಕ್ಷಿಸುವೆನು. |
07:01 | "check password length" ಎಂದು ಕಮೆಂಟ್ ಮಾಡಿ. ಏಕೆಂದರೆ ನಾವು ಇದಕ್ಕೆ ನಿರ್ದಿಷ್ಟವಾದ ಪರೀಕ್ಷೆಯನ್ನು ಮಾಡಬೇಕು. |
07:12 | "If string length of my password is greater than 25" ಎಂದು ಟೈಪ್ ಮಾಡಿ. ಬೇಡ.. |
07:30 | ಇದನ್ನು ಅಳಿಸಿಬಿಡೋಣ. ಈ else ಅನ್ನು ತೆಗೆದುಬಿಡೋಣ. |
07:36 | ಅದಕ್ಕೂ ಮೊದಲು ನಾನು ಪಾಸ್ವರ್ಡ್ ಗಳು ಒಂದೇ ಆಗಿದೆಯೇ ಎಂದು ಪರೀಕ್ಷಿಸಬೇಕು. |
07:41 | ಅದಕ್ಕಾಗಿ "if password equals equals (==)to repeat password" ಎಂದು ಟೈಪ್ ಮಾಡಿ. TRUE ಆದರೆ ದೊಡ್ಡ ಕೋಡ್-ಬ್ಲಾಕ್ ಅನ್ನು ಮುಂದುವರಿಸೋಣ. |
07:53 | ಇಲ್ಲವಾದರೆ, ಬಳಕೆದಾರರಿಗೆ "Your passwords do not match" ಎಂದು ಎಕೋ ಮಾಡೋಣ. |
08:00 | ಸರಿಯೇ? |
08:03 | ಈಗ ಇಲ್ಲಿ ನೀವು ಟೈಪ್ ಮಾಡಿ ನಿಮ್ಮ ಅಕ್ಷರಗಳ ಸಂಖ್ಯೆಯನ್ನು ಪರೀಕ್ಷಿಸಬಹುದು. |
08:09 | ಈಗ "username" ಮತ್ತು "fullname" ಗಳ ಅಕ್ಷರಗಳ ಸಂಖ್ಯೆಯನ್ನು ಪರೀಕ್ಷಿಸೋಣ. |
08:14 | ಅದಕ್ಕಾಗಿ "check character length of username and fullname" ಎಂದು ಕಮೆಂಟ್ ಮಾಡುವೆನು. |
08:18 | ನಾನು ಮೊದಲೇ ತೋರಿಸಿದಂತೆ if "username is greater than 25", |
08:25 | ಅಂದರೆ "if the string length used in this function is greater than 25... |
08:31 | OR the string length of fullname is greater than 25" ಎಂದು ಸರಿಪಡಿಸೋಣ. ಆಗ "Length of username or fullname is too long!" ಎಂದು ಎಕೋ ಮಾಡೋಣ. |
08:43 | ಇದು ಸರಳವಾಗಿರಲಿ. ಇಲ್ಲವಾದಲ್ಲಿ, |
08:51 | "check password length" ಎಂದು ಕಮೆಂಟ್ ಮಾಡಿ. |
08:57 | ಇಲ್ಲಿ ನಾನು if... ನೆನಪಿಡಿ, ನಮ್ಮ ಪಾಸ್ವರ್ಡ್ ಗಳು ಹೋಲಿಕೆಯಾಗಿವೆ. |
09:04 | ಹಾಗಾಗಿ, ನಾನು ಒಂದು ಪಾಸ್ವರ್ಡ್ ವೇರಿಯೇಬಲ್ ಅನ್ನು ಪರೀಕ್ಷಿಸಿದರೆ ಸಾಕು. |
09:09 | ಅದಕ್ಕಾಗಿ ನಾನು , "if the string length of the password is greater than 25 or string length of our password is lesser than 6" ಎಂದು ಕಂಡಿಷನ್ ಬರೆಯುವೆನು. |
09:23 | ಇದು TRUE ಆಗಿದ್ದರೆ, ನಾನು "Password must be between 6 and 25 characters" ಎಂಬ ಎರರ್ ಅನ್ನು ಎಕೋ ಮಾಡುವೆನು. |
09:35 | ಇದು ಖಂಡಿತವಾಗಿ ಕೆಲಸ ಮಾಡುತ್ತದೆ. |
09:37 | ನಾವು ಇದರ ಕುರಿತು ಮುಂದಿನ ಟ್ಯುಟೋರಿಯಲ್ ನಲ್ಲಿ ಮುಂದುವರಿಸೋಣ. |
09:41 | ಅದಕ್ಕೂ ಮೊದಲು, else ಸ್ಟೇಟ್ಮೆಂಟ್ ನಿಂದ ಇದನ್ನು ಮುಗಿಸೋಣ. |
09:46 | ಅದಕ್ಕಾಗಿ ನಾವು ಇಲ್ಲಿ "register the user" ಎಂದು ಕಮೆಂಟ್ ಮಾಡೋಣ. |
09:51 | ಬಳಕೆದಾರರನ್ನು ದಾಖಲು ಮಾಡಿಕೊಳ್ಳುವ ಕೋಡ್ ಇಲ್ಲಿ ಬರುತ್ತದೆ. |
09:56 | ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು ಇದನ್ನು ಪರೀಕ್ಷಿಸೋಣ ಮತ್ತು ಬಳಕೆದಾರರನ್ನು ಹೇಗೆ ದಾಖಲು ಮಾಡುವುದು ಎಂದು ನೋಡೋಣ. ಅಲ್ಲಿ ನಾವು ಇದರೊಳಗೆ ನಮ್ಮ ಕೋಡ್ ಅನ್ನು ಸೇರಿಸುವೆವು. |
10:06 | ಇದು ಪ್ರಾಥಮಿಕವಾಗಿ, ಪಾಸ್ವರ್ಡ್ ನ ಕನಿಷ್ಟ ಅಥವಾ ಗರಿಷ್ಟ ಮಿತಿಯನ್ನು ಪರೀಕ್ಷಿಸಲು ಇದೆ. ಮತ್ತು, ಈ ಕೋಡ್ ಬ್ಲಾಕ್ ನಮ್ಮ "register the user" ಪ್ರೋಗ್ರಾಂ ನ ಒಂದು ಭಾಗವಾಗಲಿದೆ. |
10:17 | ಮುಂದಿನ ಭಾಗದಲ್ಲಿ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |