PHP-and-MySQL/C3/MySQL-Part-4/Kannada
From Script | Spoken-Tutorial
Time | Narration |
00:00 | ಟುಟೋರಿಯಲ್ನ ನಾಲ್ಕನೇ ಭಾಗದ My SQL ಮತ್ತು php tutorials ಗೆ ಸ್ವಾಗತ. |
00:10 | ಹಿಂದಿನ ತರಗತಿಯಲ್ಲಿ, ನಮ್ಮ ಟೇಬಲ್ಲಿನಲ್ಲಿ ಕೆಲವು ಮೌಲ್ಯಗಳನ್ನು ಸೇರಿಸಲು "mysql_query" function ನ್ನು ಬಳಸಿದ್ದೆ. |
00:20 | ಇಲ್ಲಿ ದಿನಾಂಕವನ್ನು ಪ್ರಸ್ತುತ ದಿನಾಂಕವೆಂದು ಹಾಕಿ ತಪ್ಪು ಮಾಡಿದ್ದೆ. ಆದರೆ ಅದು ನನ್ನ ಹ್ಮಟ್ಟುಹಬ್ಬದ ದಿನವಲ್ಲ. |
00:26 | ಇಲ್ಲಿ ನನಗೆ ಅಪ್ಡೇಟ್ ಮಾಡಲು ಸಾಧ್ಯವಾಯಿತು. ನಿರ್ದಿಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂಬುದನ್ನು ಹೇಳಲು ಸಾಧ್ಯವಾಯಿತು. |
00:31 | ವಿಶೇಷ ID key ಬಳಸಿ, ನಿಶ್ಕ್ರಷ್ಟವಾಗಿ ಎಲ್ಲಿ ಅಪ್ಡೇಟ್ ಮಾಡಬೇಕೆಂಬುದನ್ನು ನಿಖರವಾಗಿ ಹೇಳಲು ಸಾಧ್ಯವಾಯಿತು. |
00:35 | ನಾವೀಗಾಗಲೇ mysql codeನಲ್ಲಿ ಅಪ್ಡೇಟನ್ನು ನೋಡಿದ್ದೇವೆ. |
00:40 | ಇದು ಬಹಳ ಉಪಯೋಗಕಾರಿ. ಈ ಕ್ವೆರಿ ಮತ್ತು ಕೋಡ್ಗಳನ್ನು ಹೆಚ್ಚಿನ ಸಮಯದಲ್ಲಿ ಉಪಯೋಗಿಸುವುದು ಟೇಬಲ್ಸ್ಗಳನ್ನು ಬಳಸುವಾಗ ಅಥವಾ ಸಾಮಾನ್ಯವಾಗಿ mysqlಆನ್ನು ಬಳಸುವಾಗ. |
00:52 | ನಿಮ್ಮ ಟೇಬಲ್ಗಳಿಂದ ಡೇಟಾವನ್ನು ಪಡೆಯುವುದು ಹೇಗೆ ಮತ್ತು ಅದನ್ನು ಸುಂದರವಾಗಿ ಪ್ರದರ್ಶಿಸುವುದರ ಬಗ್ಗೆ ಮುಂದೆ ನಾನು ನಿಮಗೆ ತೋರಿಸಲಿದ್ದೇನೆ. |
01:04 | ಆದ್ದರಿಂದ ಇದನ್ನು update data ಎಂದು ಕರೆದಾಗ ಅದು ಏನೆಂದು ನಮಗೆಲ್ಲ ತಿಳಿದಿರುತ್ತದೆ. |
01:14 | ಇಲ್ಲಿ ನಾವು extract data ಎಂದು ಹೇಳೋಣ. |
01:17 | ಬಳಸಲು ಅದೊಂದು ಒಳ್ಳೆಯ ಪದ.ಈಗ ಮತ್ತೆ ನಾವು extract ಎಂದು ಹೇಳಿ, ಒಂದು ವೇರಿಯಬಲ್ಅನ್ನು ಸೃಷ್ಟಿಸೋಣ. |
01:24 | ಇದು mysql query ಮತ್ತು ಇಲ್ಲಿ ಕೆಲವು ಕೋಡ್ಗಳಿವೆ. |
01:28 | ಸಿಂಗಲ್ ಲೈನ್ ಕ್ವೆರಿಗಳನ್ನು ಬಳಸುವುದಕ್ಕಿಂತ ಇದು ಸ್ವಲ್ಪ ಸಂಕೀರ್ಣವಾದದ್ದು. |
01:37 | ಆದ್ದರಿಂದ ಇಲ್ಲಿ ಸಿಂಗಲ್ ಲೈನ್ ಕ್ವೆರಿಗಳನ್ನು ಬಳಸುತ್ತೇವೆ. ಆದರೆ ಸರಿಯಾಗಿ ಪ್ರದರ್ಶಿಸಲು ಕೆಲವು ಕೋಡ್ಗಳನ್ನು ನಾವು ಬಳಸಬಹುದು. |
01:44 | ಮೊದಲಿಗೆ, ಟೇಬಲ್ನಲ್ಲಿ ಇನ್ನೊಂದು ರೆಕಾರ್ಡನ್ನು ಸೃಷ್ಟಿಸುತ್ತೇನೆ. |
01:50 | ಹಾಗಗಿ ಈ ಪ್ರಸ್ತುತ ದಿನಾಂಕದ ಕಾರ್ಯ ನಮಗಿನ್ನು ಅವಶ್ಯ ಇರುವುದಿಲ್ಲ. |
01:52 | ಇಲ್ಲಿರುವ “ write"ಅನ್ನು ತೋರಿಸಬೇಕಾಗುತ್ತದೆ. ಕೆಲವು ಹೊಸ ವಾಲ್ಯೂಗಳನ್ನು create ಮಾಡೋಣ. |
01:59 | ಕೈಲ್ ಹೀಡನ್ ಎಂದು ಹೇಳುತ್ತೇನೆ ಮತ್ತು ಹುಟ್ಟಿದ ದಿನಾಂಕವನ್ನು ಇಲ್ಲಿ ಸೆಟ್ ಮಾಡುತ್ತೇನೆ. ಇದು ತಿಂಗಳು. ಹಾಗಾಗಿ ಅದು ೭ನೇದು, ಮತ್ತು ಇಲ್ಲಿ ೨೪ ಹಾಕೋಣ. |
02:16 | ಈಗ ನಮಗ ಹುಟ್ಟಿದ ದಿನಾಂಕ ಸಿಕ್ಕಿದೆ. |
02:18 | ನಮಗಾಗಲೇ male ಸಿಕ್ಕಿತ್ತು ಮತ್ತೀಗ ನಮಗೆ ಸಿಕ್ಕೆದೆ ಕೈಲ್ ಹೀಡನ್. ಮತ್ತೆ ಇದನ್ನು ನಮ್ಮ ಡೇಟಾಬೇಸ್ನಲ್ಲಿ ಸೇರಿಸುತ್ತಿದ್ದೇವೆ. |
02:26 | ಈಗ refresh ಮಾಡೋಣ. |
02:28 | ನಾನಿಲ್ಲಿ ಇನ್ನೊಂದು ವಾಲ್ಯೂವನ್ನು create ಮಾಡುತ್ತಿದ್ದೇನೆ. |
02:32 | ಎಮಿಲಿ ಹೀಡನ್ ಎಂದು ಹೇಳುತ್ತೇನೆ ಮತ್ತು ಹುಟ್ಟುದ ದಿನಾಂಕವನ್ನು ಸದ್ಯಕ್ಕೆ ಹಾಗೆ ಬಿಡುತ್ತೇನೆ. |
02:44 | ಇದು "Female" ಆಗಿರುತ್ತದೆ ಏಕೆಂದರೆ ಈ ದಾಖಲೆಗಳನ್ನು ಬೇರೊಂದು ಸಮಯದಲ್ಲಿ extract ಮಾಡುತ್ತೇನೆ. |
02:48 | ಮತ್ತೊಮ್ಮೆ refresh ಮಾಡೋಣ. |
02:50 | ನಾವೀಗ ೩ ರೆಕಾರ್ಡ್ಗಳನ್ನು ಸೃಷ್ಟಿಸಿದ್ದೇವೆ. |
02:53 | ಈ "write" ಅನ್ನು comment ಮಾಡುತ್ತೇನೆ. ನನ್ನ ಡೇಟಾಬೇಸನ್ನು ಬ್ಯಾಕ್ಅಪ್ ಮಾಡುತ್ತೇನೆ. |
02:56 | ಈ ನಿರ್ದಿಷ್ಟ ಟೇಬಲ್ನ ಬ್ರೌಸ್ ಮೇಲೆ ಕ್ಲಿಕ್ ಮಾಡಿದಾಗ ನನಗೆ ಸಿಕ್ಕಿರುವ ೩ ರೆಕಾರ್ಡ್ಗಳನ್ನು ನೀವು ನೋಡಬಹುದು. |
03:02 | ಪ್ರತಿಯೊಂದನ್ನು "record of data"ಎಂದು ಕರೆಯುತ್ತಾರೆ. |
03:05 | ಈ idಯು ಯಾಂತ್ರಿಕವಾಗಿ ಏರಿಕೆಯಾಗಿರುವುದನ್ನು ನೀವ್ ನೋಡುತ್ತೇವೆ. |
03:07 | ನಾವು ನಿರ್ದಿಷ್ಟವಾಗಿ ಕೇಳಿದ ಡೇಟಾ ಹಾಗೂ ನಮಗೆ ಬೇಕಿದ್ದ ಉಳೆದೆಲ್ಲವೂ ಸಿಕ್ಕಿದೆ. |
03:12 | ಈಗ ಡೇಟಾವನ್ನು ಎಕ್ಸ್ಟ್ರಾಕ್ಟ್ ಮಾಡುತ್ತಿದ್ದೇವೆ. ಇದನ್ನು uncomment ಮಾಡುತ್ತೇನೆ. |
03:19 | "select"ನೊಡೊನೆ ನಮ್ಮ mysql query ಆರಂಭಗೊಳ್ಳಲಿದೆ. |
03:23 | ಇದು ನಿರ್ದಿಷ್ಟ ದಾಖಲೆಗಳಾಗಿರಬಹುದು ಅಥವಾ ನಾವು ಆಸ್ಟೆರಿಸ್ಕ್ಅನ್ನು ಬಳಸಿ ನಮಗೆ ಬೇಕಾದ ಡೇಟಾವನ್ನು ಪಡೆಯಬಹುದು |
03:32 | ನಾನೀಗ ಆಸ್ಟರಿಸ್ಕನ್ನು ಬಳಸುವೆ. |
03:35 | Select first name ಎಂದು ನೀವು ಟೈಪ್ ಮಾಡಬಹುದು. |
03:40 | ಸಾಮಾನ್ಯವಾಗಿ, ನಿಮ್ಮ ಬಳಿ ಟೇಬಲ್ ಇದ್ದಾಗ, ಹೆಚ್ಚುಕಮ್ಮಿ ನಿಮಗೆಲ್ಲ ಡೇಟಾಗಳು ಬೇಕಾಗುತ್ತದೆ ಮತ್ತು ಅದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. |
03:46 | ಟೇಬಲ್ನ ಮೂಲಗಳನ್ನು ಅವಲಂಬಿಸಿ ಬಹುಶ ಇದು ಹೆಚ್ಚು ಸಮಯ ತೆಗೆದುಕೊಳ್ಳಲಾರದು. |
03:52 | ಈಗಾಗಲೆ ನಿಮ್ಮ ಬಳಿ ಒಂದೆರಡು ರೆಕಾರ್ಡ್ಸ್ಗಳು ಅಥವಾ fieldಗಳಿವೆ. |
03:55 | ಆದರೆ ಸದ್ಯಕ್ಕೆ ನಾನು ನಕ್ಷತ್ರವಾದ ಆಸ್ಟರಿಸ್ಕ್ಅನ್ನು ಸೆಲೆಕ್ಟ್ ಮಾಡಿ ಎಂದು ಹೇಳುತ್ತೇನೆ. |
04:00 | ನಾವು ಸೆಲೆಕ್ಟ್ ಸ್ಟಾರ್ ಎಂದು ಹೇಳಿ ನಂತರ FROM ಎಂದು ಹೇಳುತ್ತೇವೆ. |
04:04 | ಮತ್ತೆ ನಿರ್ದಿಷ್ಟ ಟೇಬಲ್ನಿಂದ "people"ಎಂದು ಹೇಳುತ್ತೇವೆ. |
04:08 | ಇಲ್ಲಿ ನಾವು WHERE ಎಂದು ಹೇಳಬಹುದು ಮತು ಬೇಕಾದ ಡೇಟಾವನ್ನು filter ಮಾಡೋದೆ ಹೇಗೆಂದು ತಿಳೀಬಹುದು. |
04:18 | FROM ಜನರಲ್ಲಿ WHERE firstname= "Alex'"ಎಂದಿರುತ್ತದೋ ಅದನ್ನು ಸೆಲೆಕ್ಟ್ ಸ್ಟಾರ್ ಎಂದು ಹೇಳುತ್ತೇನೆ. |
04:22 | ಈ ಕ್ವೆರಿ ಒಂದೇ ವಾಲ್ಯೂವಿನೊಡೊನೆ ಹಿಂದಿರುಗುತ್ತದೆ ಏಕೆಂದರೆ ನಾವು ಇಲ್ಲಿ ತೆರೆದು ನೋಡಿದಾಗ, "Alex" ಹೆಸರಲ್ಲಿ ಒಂದೇ ರೆಕಾರ್ಡ್ ಇರುತ್ತದೆ. |
04:33 | ಮತ್ತೊಂದು ಪ್ರಯೋಜನಕಾರಿ ಕಾರ್ಯವಾದ "mysql numrows" ಬಳಸಿ ಈ ಕೆಲಸವನ್ನು ಮಾಡಬಹುದು. ನಾನೀಗ ಇದನ್ನು ಎಕೋ ಔಟ್ ಮಾಡಬಹುದು. |
04:44 | ನಾನೀಗ "echo mysql_num_rows" ಎಂದು ಹೇಳುತ್ತೇನೆ. ಈ ವೇರಿಯಬಲ್ಗಳು ಇಲ್ಲಿ ಸ್ಟೋರ್ ಆಗಿರಲು ಈ ಕಾರಣವನ್ನೇ ಕೊಟ್ಟಿದ್ದೇವೆ. |
04:54 | ಇಲ್ಲಿ ನಾವು "extract" ಎಂದು ಟೈಪ್ ಮಾಡಬಹುದು. |
04:56 | ನಮ್ಮ "extract" ವೇರಿಯಬಲ್ ನಮ್ಮ ಕ್ವೆರಿಯನ್ನು ಹಿಡಿದಿಟ್ಟುಕೊಳ್ಳುತ್ತದೆ ಮತ್ತು ಹೊರಹಾಕುವ ಕ್ವೆರಿಯಲ್ಲಿ ಎಷ್ಟು ಸಾಲುಗಳಿವೆ ಎಂದು ನಮ್ಮ ಕಾರ್ಯ ತಿಳಿಸುತ್ತದೆ. |
05:09 | ನಾವು refresh ಮಾಡಿದಾಗ ನಾವು ಅಂದುಕೊಂಡಂತಹ firstname ಅಗಿ "Alex"ಅನ್ನು ತೋರಿಸುತ್ತದೆ. |
05:14 | ಹೇಗಿದ್ದರೂ ನಿಮಗೆ ೧ ಸಿಗುತ್ತದೆ.ಇದನ್ನು ಬದಲಾಯಿಸೋಣ. ಇಬ್ಬರಿಗೆ ಸಾಮಾನ್ಯವಾಗಿರುವಂತಹ ಏನನ್ನಾದರೂ ಈ ಡೇಟಾಬೇಸ್ನಲ್ಲಿ ಹಾಕೋಣ. |
05:21 | ಅದು"gender" ಆಗಿರುತ್ತದೆ. |
05:23 | ಹಾಗಾಗಿ ಅದು "Male" ಅಥವಾ "Female" ಆಗುತ್ತದೆ. ಇಲ್ಲಿ ನಾವು "WHERE gender = M" ಎಂದು ಹೇಳಬಹುದು ಮತ್ತು refresh ಮಾಡಿದಾಗ, ನಮಗೆ ಎರಡು ರೆಕಾರ್ಡ್ಗಳು ಸಿಗುತ್ತದೆ. |
05:35 | ಹಾಗಾಗಿ ನಾವು ಎಷ್ಟು ರೆಕಾರ್ಡ್ಗಳನ್ನು ಹೊರತೆಗೆಯುತ್ತೇವೆ ಎಂದು ಹೇಳಬಹುದು. |
05:38 | ಉದಾರಣೆಗೆ, ನಮ್ಮ ಡೇಟಾಬೇಸ್ನಲ್ಲಿ ಎಷ್ಟು ಗಂಡಸರಿದ್ದಾರೆ ಎಂದು ಹೇಳಲು ಇದು ಬಹಳ ಉಪಯೋಗಕಾರಿ. |
05:44 | ಮತ್ತು ನಮ್ಮ ವೆಬ್ಸೈಟ್ನಲ್ಲಿ ಎಷ್ಟು ಗಂಡಸರು ಅಥವಾ ಹೆಂಗಸರು ರೆಜಿಸ್ಟರ್ ಆಗಿದ್ದಾರೆ ಎಂದು ನೋಡಬಹುದು. |
05:49 | ಇದರ ಒಳಗೆ ರೆಜಿಸ್ಟರ್ಡ್ ಮಾಹಿತಿಯನ್ನು ಸ್ಟೋರ್ ಮಾಡಬಹುದು. |
05:55 | ಇದರಲ್ಲಿ ರೆಕಾರ್ಡ್ಗಳನ್ನು ಕ್ರಮದಲ್ಲಿ ಜೋಡಿಸಬಹುದು. |
05:59 | ನಾನೀಗ "ORDER BY id" ಎಂದು ಹೇಳುತ್ತೇನೆ ಮತ್ತು ಇಳಿಕೆ ಕ್ರಮದಲ್ಲಿ ಅಂದರೆ "DESC" ಅಥವಾ ಏರಿಕೆ ಕ್ರಮದಲ್ಲಿ ಅಂದರೆ "ASC"ಅನ್ನು ನಾವು ಆಯ್ಕೆ ಮಾಡಿಕೊಳ್ಳ ಬಹುದು. |
06:08 | ಆದರೆ ಸದ್ಯಕ್ಕೆ ಇದನ್ನು ಹೊರತೆಗೆಯುತ್ತೇನೆ ಏಕೆಂದರೆ ನಾವಿನ್ನು ನಮ್ಮ ಡೇಟಾವನ್ನು ಎಕೋ ಔಟ್ ಮಾಡಿಲ್ಲ. |
06:13 | ನಾವು ಆಯ್ಕೆಮಾಡಿರುವ ಡೇಟಾವನ್ನು ನಮ್ಮ ಬಳಕೆದಾರರಿಗೆ ಇನ್ನೂ ಪ್ರದರ್ಶಿಸಿಲ್ಲ. |
06:16 | ಆದ್ದರಿಂದ ಈ ಕ್ಷಣದಲ್ಲಿ ಅದನ್ನು ಬಳಸುವುದರಿಂದ ಉಪಯೋಗವಿಲ್ಲ. |
06:19 | ಈಗ ನಾನು "people" ಯಿಂದ ಸೆಲೆಕ್ಟ್ ಸ್ಟಾರ್ ಎಂದು ಹೇಳುತ್ತೇನೆ ಏಕೆಂದರೆ ಈ ಟೇಬಲ್ನಿಂದ ಎಲ್ಲಾ ಡೇಟಾವನ್ನು ನಾನು ಆರಿಸಿಕೊಳ್ಳಬೇಕು. |
06:29 | ಇದನ್ನು ನಿಭಾಯಿಸುತ್ತ ನನ್ನಿಚ್ಚೆಯಂತೆ ಬಳಕೆದಾರನಿಗೆ ತೋರಿಸಬಹುದು. |
06:31 | ಇಲ್ಲಿ ನಾನು "numrows" ಎನ್ನುವುದನ್ನು ಸೃಷ್ಟಿಸುತ್ತೇನೆ. "numrows =" ಅದಕ್ಕೆ ಸಮ. |
06:42 | ನಾನು "while" loopಅನ್ನು ಬಳಸುತ್ತೇನೆ. ಇದು ನಿರ್ದಿಷ್ಟ ಕಾರ್ಯವಾದ "mysql_fetch_assoc"ಅನ್ನು ಬಳಸುತ್ತದೆ. |
06:58 | ಇದನ್ನು ಅದು associative array ಒಳಗೆ ಹಾಕುತ್ತದೆ. |
07:02 | ನಿಮಗೆ associative array ಎಂದರೇನು ಎಂದು ತಿಳಿಯದಿದ್ದರೆ, "Arrays" ತರಗತಿಯನ್ನೊಮ್ಮೆ ಓದಿರಿ. |
07:06 | ಮತ್ತೆ ಇಲ್ಲಿಗೆ ಬರುತ್ತ, "WHILE the row= mysql_fetch_aasoc" ಅಥವಾ associative ಎಂದು ನಾನು ಹೇಳುತ್ತೇನೆ. ಇದು "extract" ಕ್ವೆರಿಯ ಒಳಗೆ ಇದೆ. |
07:21 | array ಹೆಸರಾಗಿ ನಾವು "row" ಅನ್ನು ಆಯ್ಕೆ ಮಾಡಿಕೊಂಡಿದ್ದೇವೆ ಮತ್ತು ಈ arrayಅನ್ನು ಎಲ್ಲಾ ಸೆಲೆಕ್ಟೆಡ್ ಡೇಟಾಗಾಗಿ ಆಯ್ಕೆ ಮಾಡಿಕೊಂಡಿದ್ದೇವೆ. |
07:31 | ಇಲ್ಲಿಗೆ ನಿಲ್ಲಿಸುತ್ತೇನೆ. ಮುಂದಿನ ತರಗತಿಯಲ್ಲಿ ಎಕೊ ಔಟ್ ಮಾಡುವುದು ಹೇಗೆಂದು ತೋರಿಸುತ್ತೇನೆ. |
07:37 | ಬಹುಶ ಇನ್ನೂ ಹೆಚ್ಚಿನ ವಿವರಣೆಗಳೊಂದಿಗೆ ವಿವರಿಸುತ್ತೇನೆ. |
07:40 | ಈ ವಾಕ್ ಟುಟೋರಿಯಲ್ಗೆ ಡಬ್ ಮಾಡಿದವರು ಅರವಿಂದ್. |