PHP-and-MySQL/C3/MySQL-Part-1/Kannada
From Script | Spoken-Tutorial
Time | Narration |
00:01 | ಎಲ್ಲರಿಗೂ ನಮಸ್ಕಾರ. |
00:03 | ಇದೊಂದು MySQL php ಟ್ಯುಟೋರಿಯಲ್ ಆಗಿದೆ. |
00:06 | ಇಲ್ಲಿ ನಾನು ಸಂಪರ್ಕಿಸುವುದು, ಡಾಟಾ ವನ್ನು ನೋಡುವುದು, ಎರರ್ ಗಳನ್ನು ನಿರ್ವಹಿಸುವುದು ಮತ್ತು ಡಾಟಾವನ್ನು ಮಾರ್ಪಡಿಸುವುದರ ಕುರಿತು ಹೇಳಿಕೊಡುವೆನು. |
00:12 | ಇಲ್ಲಿ ನಾವು ಕೆಲವು SQL code ಮತ್ತು ಕೆಲವು SQL query ಗಳ ಕುರಿತು ಕಲಿಯುವೆವು. |
00:17 | ಈಗ ಪ್ರಾರಂಭಿಸೋಣ. |
00:19 | ಇಲ್ಲಿ ನಾನು "MySQL" ನ ಡೈರಕ್ಟರಿ ರಚನೆಯನ್ನು ತೋರಿಸಲು ಹೊರಟಿದ್ದೇನೆ. |
00:23 | ಮತ್ತು ನಾವು ಇಲ್ಲಿ ಒಂದು ಜೊತೆ ಫೈಲ್ ಗಳನ್ನು ತಯಾರಿಸುವೆವು. |
00:29 | ನಾನು ಮೊದಲ ಫೈಲ್ ಅನ್ನು ರಚಿಸಿ ಅದನ್ನು "connect.php"ಎಂದು ಕರೆಯುವೆನು. |
00:33 | ನಾನು ಇಲ್ಲಿ ಬಂದು, "mysql" ಎಂಬ ಫೋಲ್ಡರ್ ಅನ್ನು ಕ್ಲಿಕ್ ಮಾಡಿ ಇದನ್ನು "connect.php" ಎಂದು ಸೇವ್ ಮಾಡುವೆನು. |
00:39 | ನಾವು ಇಲ್ಲಿ ಇನ್ನೊಂದು ಬೇರೆ ಫೈಲ್ ಅನ್ನು ರಚಿಸಿ ಅದನ್ನು ನಾವು ಬಳಸುವ ಪ್ರತಿಯೊಂದು ಪೇಜ್ ನಲ್ಲು ಸೇರ್ಪಡೆ( ಇನ್ಕ್ಲ್ಯೂಡ್) ಮಾಡಿಕೊಳ್ಳುವೆನು. |
00:45 | ನಿಮ್ಮ ಡಾಟಾಬೇಸ್ ಅನ್ನು ಸಂಪರ್ಕಿಸಲು ಇದು ಸುಲಭವಾಗಿದೆ. |
00:48 | ನಾವು ಈಗ ನಮ್ಮ "include" ಫಂಕ್ಷನ್ ಅನ್ನು ಟೈಪ್ ಮಾಡಿ, ಈ ಫೈಲ್ ಅನ್ನು ಸೂಚಿಸಬೇಕು. |
00:53 | ನಾನು ಇನ್ನೊಂದು ಫೈಲ್ ಅಂದರೆ, ನನ್ನ ಮೇನ್ ಫೈಲ್ "mysql" ಅನ್ನು ರಚಿಸುವೆನು. |
00:57 | ಅದರಲ್ಲಿರುವ ಕೋಡ್ ಅನ್ನು ನಿಮಗೆಲ್ಲ ತೋರಿಸುವೆನು. |
00:59 | ಈಗ ನಾನು ನನ್ನ 'mysql dot php' ಯನ್ನು ತೆರೆದಿದ್ದೇನೆ. |
01:03 | ಇದು php code ಆಗಿದೆ. ಮತ್ತು ನಮಗೆ php tag ಗಳು ಬೇಕು ಮತ್ತು ಅದು php ಯನ್ನು ಜೋಡಿಸುವುದು. |
01:10 | ನಾನು ಈ "include" ಫಂಕ್ಷನ್ ಅನ್ನು ಒಂದು ನಿಮಿಷದ ನಂತರ ವಿವರಿಸುವೆನು. |
01:16 | ಮೊದಲಿಗೆ ನಾನು ನಿಮಗೆ database ಅನ್ನು ಹೇಗೆ ಜೋಡಿಸುವುದು ಎಂದು ತೋರಿಸುವೆನು. |
01:20 | ನಿಮ್ಮ ವೆಬ್ ಸರ್ವರ್ ನಲ್ಲಿ ನೀವು ಇದನ್ನು ಎಲ್ಲಿ ಸಂಗ್ರಹಿಸಿರುವಿರಿ ಎಂದು ಗೊತ್ತಿಲ್ಲದಿದ್ದರೆ ನೀವು phpMyAdmin ಎನ್ನುವ ಅಪ್ಲಿಕೇಷನ್ ಅನ್ನು ಪರೀಕ್ಷಿಸಿ ಎಂದು ನಾನು ಸಲಹೆ ನೀಡುವೆನು. |
01:28 | ಇದೊಂದು database interface php ಬರೆದ ಪ್ರೋಗ್ರಾಂ ಆಗಿದೆ ಅಥವ ಇದನ್ನು ಸ್ಕ್ರಿಪ್ಟ್ ಎಂದೂ ಹೇಳಬಹುದು. |
01:35 | ಇಲ್ಲಿ ನಾವು ನನ್ನ ಡಾಟಾಬೇಸ್ ನ ಒಳಗೆ ನೋಡುವೆವು, ನನ್ನ ಸರ್ವಿಸ್, |
01:41 | ಅದಕ್ಕಿಂತ ಹೆಚ್ಚಾಗಿ ನನ್ನ ಸರ್ವರ್ ಅಂದರೆ ನನ್ನ SQL server ಅನ್ನು ನೋಡುವೆವು. ಇದು ನಮಗೆ ಬೇಕಾದ ಮಾಹಿತಿಯ ಟೇಬಲ್ ಅನ್ನು ಕೊಡುತ್ತದೆ, ಡಾಟಾಬೇಸ್ ಮಾಹಿತಿ ಮತ್ತು ನನ್ನ ಸರ್ವರ್ ಕುರಿತಾದ ಮಾಹಿತಿ ಮುಂತಾದವುಗಳನ್ನು ಕೊಡುತ್ತದೆ. |
01:55 | ನಾವು ಇದರ ಕುರಿತು ತಿಳಿದುಕೊಳ್ಳುವ ಅಗತ್ಯವಿಲ್ಲದಿದ್ದರೂ, ಇದು ಪ್ರೋಗ್ರಾಂ ಅನ್ನು ಪ್ರಾರಂಭಿಸಲು ಅಂದರೆ ನೀವು ಈಗ ತಾನೆ php mysql ಅಥವಾ mysql ಅನ್ನು ಬಳಸುತ್ತಿದ್ದರೆ ಇದು ಉತ್ತಮವಾಗಿದೆ. |
02:06 | ಈ ಕಾರ್ಯವನ್ನು ಮಾಡಲು ಕಮಾಂಡ್ ಲೈನ್ ಅನ್ನು ಬಳಸುವುದಕ್ಕಿಂತ ಡಾಟಾಬೇಸ್ ನೊಂದಿಗೆ ಇಂಟರ್ಫೇಸ್ ಮಾಡಿಕೊಳ್ಳುವುದು ಉತ್ತಮವಾಗಿದೆ. |
02:13 | command line ಬಳಸುವುದು ಹೊಸಬರಿಗೆ ಕ್ಲಿಷ್ಟವಾಗುವುದು. |
02:18 | ಹಾಗಾಗಿ ನಾವು ಇಲ್ಲಿ ನಮ್ಮ ಡಾಟಾಬೇಸ್ ಅನ್ನು ನೋಡುವೆವು. |
02:23 | ಇಲ್ಲಿ ನಾನು ಒಂದು "phpacademy" ಮತ್ತು ಇನ್ನೊಂದು "phplogin" ಎನ್ನುವ ಎರಡು ಡಾಟಾಬೇಸ್ ಗಳನ್ನು ಹೊಂದಿದ್ದೇನೆ ಮತ್ತು ಇವುಗಳ ರಚನೆಯ ಕುರಿತು ಇನ್ನೊಂದು ಟ್ಯುಟೋರಿಯಲ್ ನಲ್ಲಿ ತಿಳಿಸಿರುವೆನು. |
02:31 | ಉಳಿದವು ಸ್ಟ್ಯಾಂಡರ್ಡ್ ಆಗಿವೆ. |
02:34 | ಅವು ಕೇವಲ ಡಾಟಾ ವನ್ನು ಹಿಡಿದಿಡಲು ಇರುವಂಥವುಗಳಾಗಿವೆ. |
02:36 | ಅವುಗಳನ್ನು ಅಳಿಸಬೇಡಿ. |
02:38 | ನೀವು ಹೊಸ ಡಾಟಾಬೇಸ್ ಗಳನ್ನು ರಚಿಸಬೇಕು. |
02:41 | ಇದನ್ನು ಮಾಡಲು ಇಲ್ಲಿ ಒಂದು ಸರಳವಾದ ಬಾಕ್ಸ್ ಇದೆ. |
02:45 | ಈಗ ನಾವು ಡಾಟಾಬೇಸ್ ಅನ್ನು ರಚಿಸಲು ಹೊರಟಿದ್ದೇವೆ. |
02:47 | ಈಗ ನಾನು "phpacademy" ಡಾಟಾಬೇಸ್ ನಲ್ಲಿ ಕಾರ್ಯ ನಿರ್ವಹಿಸುವೆನು. |
02:51 | ಇದು ತುಂಬ ಸರಳವಾಗಿದೆ. |
02:53 | ಇದು ಈಗ ಡಾಟಾಬೇಸ್ ಅನ್ನು ರಚಿಸುತ್ತದೆ. |
02:55 | ಇದು ತುಂಬ ಸರಳ. ಇಲ್ಲಿ ಹೆಸರನ್ನು ಟೈಪ್ ಮಾಡಿ ಮತ್ತು "Create" ಅನ್ನು ಕ್ಲಿಕ್ ಮಾಡಿ. |
02:58 | ಇಲ್ಲಿ ನನ್ನ ಪಿ.ಎಚ್.ಪಿ ಈಗಾಗಲೇ ಸಿದ್ಧವಾಗಿದೆ. |
03:01 | ಹಾಗಾಗಿ ನಾನು ಇದನ್ನು ಬಳಸುವೆನು. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದರೊಳಗೆ ಹಲವಾರು ಟೇಬಲ್ ಗಳನ್ನು ನೀವು ನೋಡಬಹುದು. |
03:08 | "phpmyadmin" ಅನ್ನು ಬಳಸುವಾಗ ಇಲ್ಲಿ ಇದು ಈ ಚಿಹ್ನೆಯಿಂದ ಸೂಚಿಸಲ್ಪಡುವುದನ್ನು ನೋಡಬಹುದು. |
03:15 | ಇದು ನನ್ನ guestbook tutorial ನ guestbook ಆಗಿದೆ. |
03:21 | ನಾನು ಈ ಟ್ಯುಟೋರಿಯಲ್ ಗಾಗಿ , ಈ ಡಾಟಾಬೇಸ್ ನಲ್ಲಿ ಒಂದು ಹೊಸ ಟೇಬಲ್ ಅನ್ನು ರಚಿಸುವೆನು ಮತ್ತು ಅದನ್ನು "people" ಎಂದು ಕರೆಯುವೆನು. |
03:30 | Number of fields ಇದು ತುಂಬ ಮುಖ್ಯವಾಗಿದೆ. |
03:33 | ನೀವು ಇದನ್ನು ಖಾಲಿ ಬಿಡುವಂತಿಲ್ಲ. |
03:35 | ನಿಮ್ಮ ಟೇಬಲ್ ನಲ್ಲಿ ಡಾಟಾ ದ ಪ್ರತಿ ಕಾಲಮ್ ಅನ್ನು ಸ್ಟೋರ್ ಮಾಡಲು ಈ ಫೀಲ್ಡ್ ಗಳ ಸಂಖ್ಯೆ ಅವಶ್ಯಕವಾಗಿದೆ. |
03:42 | ಉದಾಹರಣೆಗೆ, ನೀವು ರೆಕಾರ್ಡ್ ಗಳೊಂದಿಗೆ ವ್ಯವಹರಿಸುವಾಗ ಯಾವಾಗಲು ಮೊದಲನೆಯ ಫೀಲ್ಡ್ ಐ.ಡಿ. ಯಾಗಿರುತ್ತದೆ. ಮತ್ತು ಇದು ಒಂದು ಸಂಖ್ಯೆಯಾಗಿರುತ್ತದೆ. |
03:51 | ಮತ್ತು ಈ ಸಂಖ್ಯೆಯು ಪ್ರತಿಬಾರಿಯು ಒಂದೊಂದು ಹೆಚ್ಚುತ್ತಾ (ಇನ್ಕ್ರಿಮೆಂಟ್) ಹೋಗುತ್ತದೆ. |
03:56 | ಇದು ನೀವು ವಿಶಿಷ್ಟ ಸಂಖ್ಯೆಯಿಂದ ಪ್ರತ್ಯೇಕವಾಗಿ ಸ್ಟೋರ್ ಮಾಡಿದ ಪ್ರತಿ ರೆಕಾರ್ಡ್ ಅನ್ನು ಸೂಚಿಸಲು ನಿಮಗೆ ಸಹಾಯ ಮಾಡುತ್ತದೆ. |
04:02 | ಸಾಮಾನ್ಯವಾಗಿ ಇದನ್ನು primary key ಯಾಗಿ ಸೆಟ್ ಮಾಡುವೆವು. |
04:06 | ನಿಮಗೆ ಡಾಟಾಬೇಸ್ ಗಳ ಕುರಿತು ಮಾಹಿತಿಯಿಲ್ಲವಾದಲ್ಲಿ primary key ಗಳಂತಹ ಪದಗಳ ಅರ್ಥವನ್ನು ತಿಳಿದುಕೊಳ್ಳಿ. |
04:14 | ನಾನು ಸೆಕಂಡರಿ ಕೀ ಗಳೊಂದಿಗೆ ಇಲ್ಲಿ ವ್ಯವಹರಿಸುವುದಿಲ್ಲ, ಏಕೆಂದರೆ ಇದು ಈ mysql database ನಲ್ಲಿ ಸಾಕಷ್ಟು ಹೊಂದಿಕೊಳ್ಳುತ್ತದೆ. |
04:22 | ಡಾಟಾಬೇಸ್ ನ ಕುರಿತು ಸಾಮಾನ್ಯ ವಿಷಯಗಳನ್ನು ಓದಿ, ನೀವು Microsoft Access ಅಥವಾ ಬೇರೆ ಡಾಟಾಬೇಸ್ ಅನ್ನು ನೋಡಿ ತಿಳಿದುಕೊಳ್ಳಿ. |
04:29 | ನಾನು ಡಾಟಾಬೇಸ್ ನ ಗ್ರುಪ್ ಗಳನ್ನು ತಿಳಿದುಕೊಳ್ಳಲು ಸಲಹೆ ನೀಡುವೆನು. |
04:34 | ಫೀಲ್ಡ್ ಗಳ ಸಂಖ್ಯೆ - ನೀವು ಎಷ್ಟು ಡಾಟಾವನ್ನು ಸ್ಟೋರ್ ಮಾಡುವಿರಿ ಮತ್ತು ನೀವು ಯಾವ ರೀತಿಯ ಡಾಟಾವನ್ನು ಸ್ಟೋರ್ ಮಾಡುವಿರಿ ಎನ್ನುವುದನ್ನು ಅವಲಂಭಿಸಿರುತ್ತದೆ. |
04:39 | ನಾನು ಫೀಲ್ಡ್ ಗಳನ್ನು ರಚಿಸುವಾಗ ಸಾಮಾನ್ಯವಾಗಿ ಒಂದು ಖಾಲಿ ಡಾಕ್ಯುಮೆಂಟ್ ಅನ್ನು ತೆಗೆದುಕೊಳ್ಳುವೆನು. |
04:44 | ನಾನು ನನಗೆ ಬೇಕಾದ ಫೀಲ್ಡ್ ಗಳನ್ನು ರಚಿಸುವುದರ ಮೂಲಕ ಪ್ರಾರಂಭಿಸುವೆನು. |
04:47 | ಮೊದಲನೆಯದು ಯಾವಾಗಲೂ id ಆಗಿರುವುದು. |
04:50 | ಇದು ನಾನು ಪ್ರತಿ ರೆಕಾರ್ಡ್ ಅನ್ನು ರಚಿಸಿದಾಗ ತಂತಾನೆ ಹೆಚ್ಚುವರಿಯಾಗುವ ವ್ಯಾಲ್ಯುವಾಗಿದೆ. |
04:55 | ಇದು ಮೊದಲನೆಯ ರೆಕಾರ್ಡ್ ಗೆ 1 ಆಗಿರುವುದು ನಂತರದ ಡಾಟಾ ವನ್ನು ಸ್ಟೋರ್ ಮಾಡಿದಂತೆ ಇದು 2,3,4 ಆಗಿರುವುದು. |
05:00 | ಇದು ತುಂಬ ಉಪಯುಕ್ತವಾದ ಫೀಲ್ಡ್ ಆಗಿದೆ. |
05:02 | ನನ್ನ ಟೇಬಲ್ "people" ಆಗಿರುವುದರಿಂದ ನಾನು ಜನರ ಕುರಿತು ಕೆಲವು ಡಾಟಾವನ್ನು ಸ್ಟೋರ್ ಮಾಡುವೆನು. |
05:08 | ನಾನು ಮೊದಲಿಗೆ firstname ಎಂದು ಟೈಪ್ ಮಾಡುವೆನು, ನಂತರ ಕ್ರಮವಾಗಿ, lastname , age ಮತ್ತು gender ಎಂದು ಟೈಪ್ ಮಾಡುವೆನು. |
05:17 | ಇದನ್ನು ಸರಳವಾಗಿಡಲು ಇಲ್ಲಿಗೇ ಬಿಡೋಣ. |
05:20 | ಹಾಗಾಗಿ ನಾವು ಇಲ್ಲಿ 5 field ಗಳನ್ನು ಹೊಂದಿದ್ದೇವೆ. |
05:23 | ನಾನು ಇಲ್ಲಿಗೆ ಹಿಂದಿರುಗಿ, ಇಲ್ಲಿ 5 ಎಂದು ಟೈಪ್ ಮಾಡಿ Go ಅನ್ನು ಕ್ಲಿಕ್ ಮಾಡುವೆನು. |
05:28 | ಒಂದು ನಿಮಿಷದಲ್ಲಿ ಇಲ್ಲೊಂದು ಪಾಪ್ ಅಪ್ ಅನ್ನು ನೋಡಬಹುದು. |
05:31 | ಈಗ ನಿಮಗೆ ಕಾಣುವುದಿಲ್ಲ ಏಕೆಂದರೆ ನಾವು ಇನ್ನೂ ಫೀಲ್ಡ್ ನೇಮ್ ಗಳನ್ನುರಚಿಸಿಲ್ಲ. |
05:35 | ಇಲ್ಲಿ ನಮಗೆ ಒಂದು ಮಾದರಿಯಿದೆ. |
05:38 | ಇದಕ್ಕೆ ಹಲವಾರು ಆಯ್ಕೆಗಳಿವೆ. |
05:40 | Field ಇದು ಫೀಲ್ಡ್ ನ ಹೆಸರಾಗಿದೆ. |
05:42 | ಹಾಗಾಗಿ ಮೊದಲನೆಯದು "id" ಆಗಿರುತ್ತದೆ. |
05:45 | Type ನಾವು ಫೀಲ್ಡ್ ನಲ್ಲಿ ಭರ್ತಿಮಾಡುವ ಡಾಟಾದ ವಿಧ ಅಂದರೆ ಡಾಟಾ ಟೈಪ್ ಆಗಿದೆ. |
05:49 | ಇದರಲ್ಲಿ ಹೋಗುವ ಎಲ್ಲ ಡಾಟಾ ದ ಡಾಟಾ ಟೈಪ್ ಅನ್ನು ಇಲ್ಲಿ ಸೇರಿಸಬೇಕು. |
05:54 | "VARCHAR" ಅಂದರೆ ಸಾಮಾನ್ಯವಾದ ಡಾಟಾ ಟೈಪ್ ಆದ ವೇರಿಯೇಬಲ್ ಕ್ಯಾರಕ್ಟರ್ ಆಗಿದೆ. ಇದು ತುಂಬ ಉಪಯುಕ್ತವಾದುದು ಮತ್ತು ಇದಕ್ಕೆ ಲೆಂಥ್ (ಉದ್ದಳತೆ) ಅಗತ್ಯವಾಗಿದೆ. |
06:00 | ಇಲ್ಲಿ ನಾವು 25 ಅಕ್ಷರಗಳಷ್ಟು ಉದ್ದದ, ಅಥವಾ 50 ಅಕ್ಷರಗಳಷ್ಟು ಉದ್ದದ, |
06:02 | ಅಥವಾ 100 ಅಕ್ಷರಗಳಷ್ಟು ಉದ್ದದ |
06:04 | ಅಥವಾ 1 ಅಕ್ಷರವುಳ್ಳ ಡಾಟಾ ವನ್ನು ಸೇರಿಸಬಹುದು. |
06:07 | ಇಲ್ಲಿ ನಾವು ಕೇವಲ ಡಾಟಾ ಟೈಪ್ ಮತ್ತು ಸ್ಟೋರ್ ಮಾಡುವ ಡಾಟಾ ದ ಉದ್ದಳತೆಯನ್ನಷ್ಟೇ ಸೇರಿಸುತ್ತಿದ್ದೇವೆ. |
06:14 | ಇದು ಡಾಟಾ ವನ್ನು ಸೇರಿಸಲು ಸಹಾಯ ಮಾಡುತ್ತದೆ. ಉದಾಹರಣೆಗೆ firstname. |
06:17 | ಈಗ ಇಲ್ಲಿ ನಮ್ಮ Field ನ ಹೆಸರು "firstname" ಆಗಿರಲಿ ಮತ್ತು ಇಲ್ಲಿ ನಾನು "VARCHAR" ಅನ್ನು ಹೊಂದಿದ್ದೇನೆ. |
06:24 | ಇಲ್ಲಿ 500 ಅಕ್ಷರಗಳು ಎಂದು ಟೈಪ್ ಮಾಡುವಲ್ಲಿ ಯಾವುದೇ ಅರ್ಥವಿಲ್ಲ. ಹಾಗೆ ಮಾಡಿದರೆ ನಾವು ಅನಗತ್ಯವಾಗಿ ಹೆಚ್ಚಿನ ಡಾಟಾ ವನ್ನು ಬಳಸಿದಂತಾಗುತ್ತದೆ. |
06:32 | ಸಾಮಾನ್ಯವಾಗಿ ಹೆಸರು 25 ಅಕ್ಷರಗಳನ್ನು ಮೀರಿರುವುದಿಲ್ಲ. |
06:36 | ಅದನ್ನು ಮೀರಿದ್ದರೂ ಇದು 30 ಅಥವಾ 35 ಅಕ್ಷರಕ್ಕಿಂತ ಹೆಚ್ಚಿರುವುದಿಲ್ಲ. |
06:41 | ಆದರೆ ಈಗ ನಾನು "firstname" ಅನ್ನು 20 ರಿಂದ 25 ಅಕ್ಷರಗಳಷ್ಟು ಸ್ಟೋರ್ ಮಾಡುವುದರಿಂದ , ನಾನು ಇದನ್ನು 20 ಎಂದು ಮಾಡುವೆನು. |
06:48 | ನಮ್ಮ "id" ಒಂದು integer ಆಗಿರುತ್ತದೆ ಏಕೆಂದರೆ ಇದು ಒಂದು ಸಂಖ್ಯೆಯಾಗಿದೆ. |
06:53 | ಇದು ತಂತಾನೆ ಹೆಚ್ಚಳವಾಗುತ್ತದೆ. |
06:55 | ಇದು 1,2,3,4 ಆಗಿರುವುದು. |
06:57 | ಅಂದರೆ ನಾವು ಎಷ್ಟು ರೆಕಾರ್ಡ್ ಗಳನ್ನು ಬಳಸುವೆವೋ ಅಷ್ಟು. |
07:00 | ಮತ್ತು ಇಲ್ಲಿ ಇನ್ನು ಕೆಲವು ಆಯ್ಕೆಗಳಿವೆ. |
07:03 | ಇದು primary key ಆಗಿದೆ. |
07:05 | ನಾವು ಇಲ್ಲಿ ಇದನ್ನು ಆಯ್ಕೆ ಮಾಡುವೆವು. ಮತ್ತು Extra ಎಂಬಲ್ಲಿ ನಾವು auto ಅಂಡರ್ಸ್ಕೋರ್ increment ಅನ್ನು ಆಯ್ಕೆ ಮಾಡುವೆನು. |
07:11 | ಇದೊಂದು auto increment ಆಗಿದೆ. . |
07:13 | ಇದು ಈ ನಿರ್ದಿಷ್ಟವಾದ ಕಾರ್ಯವನ್ನು ಮಾಡುತ್ತದೆ , ಅಂದರೆ, |
07:16 | ನೀವು ಹೊಸ ರೆಕಾರ್ಡ್ ಅನ್ನು ನಮೂದಿಸುತ್ತಿದ್ದಂತೆ ಇದು ತಂತಾನೇ ಹೆಚ್ಚಳವಾಗುವುದು. |
07:21 | ಇಲ್ಲಿ "firstname" ಅನ್ನು ಹೊಂದಿದ್ದೇವೆ. |
07:23 | ನಂತರ "lastname" ಅನ್ನು ಹೊಂದಿದ್ದೇನೆ ಮತ್ತು ನಾನು ಇದನ್ನು 30 ಎಂದು ನಮೂದಿಸುವೆನು. |
07:27 | ನಾವು ಇನ್ನು ಏನನ್ನು ಹೊಂದಿದ್ದೇವೆ ??? |
07:29 | ಇಲ್ಲಿ ನಾವು "age" ಅನ್ನು ಹೊಂದಿದ್ದೇವೆ ಮತ್ತು ಇದು ಖಂಡಿತಾವಾಗಿ ಇಂಟೀಜರ್ ಆಗಿರುವುದು. ನಂತರ ನಾವು "gender" ಅನ್ನು ಹೊಂದಿದ್ದೇವೆ. |
07:34 | ಸರಿ. ನಾವು ಇದನ್ನು "age" ಬದಲು, "Date of birth" ಎಂದು ಮಾಡೋಣ. |
07:40 | ಇದು Date of Birth (dob) ಆಗಿದೆ. |
07:43 | ನಾನು ಇದನ್ನು DATE ಎಂದು ನಮೂದಿಸುವೆನು. |
07:45 | ಇಲ್ಲಿ ನಾನು date ಡಾಟಾಟೈಪ್ ಅನ್ನು ಹುಡುಕಲು ಪ್ರಯತ್ನಿಸುತ್ತಿದ್ದೇನೆ ಮತ್ತು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸುವೆನು. |
07:51 | ನಮ್ಮ date ಗೆ, Length ಅನ್ನು ಸೆಟ್ ಮಾಡುವ ಅಗತ್ಯವಿಲ್ಲ. |
07:54 | ಇದಕ್ಕೆ ಒಂದು ನಿರ್ದಿಷ್ಟ ಮಾದರಿಯಿದೆ. ಹಾಗಾಗಿ ಅದರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ. |
07:58 | ಈಗ ನಾನು "gender" ಅನ್ನು "VARCHAR" ಮತ್ತು ಇಲ್ಲಿ 1 ಅಕ್ಷರವೆಂದೂ ಸೆಟ್ ಮಾಡುವೆನು. |
08:05 | ಈಗ ನಾವು ಪುರುಷರಿಗೆ "M" ಎಂದೂ , ಸ್ತ್ರೀಯರಿಗೆ "F" ಎಂದೂ ಸ್ಟೋರ್ ಮಾಡಿಕೊಳ್ಳಬಹುದು. |
08:12 | ನಾವು ಇಲ್ಲಿಗೆ ಬಂದರೆ ಇಲ್ಲೆ ಅನೇಕ ಆಯ್ಕೆಗಳು ಇರುವುದನ್ನು ನಾವು ನೋಡಬಹುದು. |
08:16 | ನೀವು ಇಲ್ಲಿ ಇದರ ಬಗ್ಗೆ ಕಮೆಂಟ್ ಅನ್ನು ಸೇರಿಸಬಹುದು. |
08:19 | ಈ ಫೀಲ್ಡ್ ಏನನ್ನು ಸ್ಟೋರ್ ಮಾಡುತ್ತದೆ ಎಂದು ನೆನಪಿಸಿಕೊಳ್ಳಲು ಸಹಾಯವಾಗುತ್ತದೆ. |
08:22 | ಆದರೆ ಸಾಮಾನ್ಯವಾಗಿ ಫೀಲ್ಡ್ ಅನ್ನು ಹೆಸರಿಸುವಾಗ ನೀವು ಯಾವ ಡಾಟಾ ವನ್ನು ಸೇವ್ ಮಾಡುತ್ತೀರ ಅದಕ್ಕೆ ಹೊಂದುವಂತೆ ಹೆಸರಿಸಿ. |
08:28 | ಈಗ ನಾನು Save ಅನ್ನು ಕ್ಲಿಕ್ ಮಾಡುವೆನು. ಮತ್ತು ಇಲ್ಲಿ people ಎಂಬ ಟೇಬಲ್ ಕಾಣಿಸುತ್ತಿದೆ. |
08:35 | ಇದು ಇಲ್ಲಿ ಒಂದು ಕ್ವೈರಿ ಯನ್ನು ಕೇಳುತ್ತದೆ. |
08:38 | ನೀವು ನಾನು ಮೊದಲೇ ಹೇಳಿದಂತೆ ಕಮಾಂಡ್ ಲೈನ್ ಅನ್ನು ಬಳಸುವುದಾದರೆ ನೀವು ಇದನ್ನು ರಚಿಸಲು ಈ ರೀತಿಯಾಗಿ ಟೈಪ್ ಮಾಡಬೇಕಾಗುತ್ತದೆ. |
08:46 | ಆದರೆ ನಾವು ನಮ್ಮ ರೆಕಾರ್ಡ್ ಅನ್ನು ಸೇವ್ ಮಾಡಲು " ಗ್ರಾಫಿಕ್ ಯೂಸರ್ ಇಂಟರ್ ಫೇಸ್ " ಅನ್ನು ಬಳಸಿದ್ದೇವೆ. |
08:50 | ನಾವು ಇಲ್ಲಿ ಕೆಳಗೆ ಉದಾಹರಣೆಗೆ ನಮ್ಮ ಫೀಲ್ಡ್ ಗಳು, ಅವುಗಳ ವಿಧ(ಟೈಪ್) , ಕೊಲ್ಲೇಶನ್ ಅಟ್ಟ್ರಿಬ್ಯೂಟ್ ಗಳು, ನಲ್ ಡಾಟಾ ಮೊದಲಾದವುಗಳನ್ನು ನೋಡಬಹುದು. |
08:59 | ಸ್ಟೋರ್ ಆಗಿರುವ ಡಿಫಾಲ್ಟ್ ವ್ಯಾಲ್ಯು ಅಂದರೆ ಉದಾಹರಣೆಗೆ "Has the user registered?" ಎಂಬ ಒಂದು ಫೀಲ್ಡ್ ಇದ್ದರೆ, |
09:07 | ಅಥವಾ ನಿಮ್ಮ ಆಯ್ಕೆಯ ಯಾವುದಾದರೂ ಫೀಲ್ಡ್ ಗೆ ನೀವು ಡಿಫಾಲ್ಟ್ ಅನ್ನು ಬಳಸಬಹುದು. |
09:11 | ಉದಾಹರಣೆಗೆ ನಾನು ದಾಖಲಾದ ಎಲ್ಲರನ್ನೂ ಡಿಫಾಲ್ಟ್ ಆಗಿ ಪುರುಷರು ಅಥವಾ ಎಲ್ಲರನ್ನು ಡಿಫಾಲ್ಟ್ ಆಗಿ ಸ್ತ್ರೀಯರು ಎಂದೂ ಆಯ್ಕೆ ಮಾಡಬಹುದು, ಅದಕ್ಕಾಗಿ ನಾನು ಇಲ್ಲಿ "M" ಅಥವಾ "F" ಎಂದು ಟೈಪ್ ಮಾಡುವೆನು. |
09:21 | ಇಲ್ಲಿ ನಾವು ಆಟೊ ಇನ್ಕ್ರಿಮೆಂಟ್ ಮತ್ತು ಬೇರೆ ಕೆಲವು ಡಾಟಾ ಗಳನ್ನು ಹೊಂದಿದ್ದೇವೆ. ಅದರ ಬಗ್ಗೆ ಈ ಟ್ಯುಟೋರಿಯಲ್ ನಲ್ಲಿ ತಿಳಿಯುವುದು ಬೇಡ. |
09:28 | ಸರಿ. ಇಲ್ಲಿ ನಾವು ಟೇಬಲ್ ಅನ್ನು ರಚಿಸಿದ್ದೇವೆ. ಎರಡನೇ ಭಾಗದಲ್ಲಿ ನಾನು ಇದಕ್ಕೆ ಡಾಟಾ ವನ್ನು ಸೇರಿಸುವುದು ಹೇಗೆ ಮತ್ತು ಪಿ.ಎಚ್.ಪಿ ಯನ್ನು ಬಳಸಿ ಈ ಡಾಟಾ ವನ್ನು ಡಾಟಾಬೇಸ್ ನಿಂದ ನೋಡುವುದು ಹೇಗೆ ಎಂದು ತೋರಿಸುವೆನು. |
09:40 | ಎರಡನೆ ಭಾಗದಲ್ಲಿ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |