PHP-and-MySQL/C2/Loops-For-Statement/Kannada

From Script | Spoken-Tutorial
Jump to: navigation, search
Time Narration
00:00 for ಲೂಪ್ - ನಾವು ನಿರ್ದಿಷ್ಟಪಡಿಸಿದಷ್ಟು ಬಾರಿ ಕೋಡ್ ಬ್ಲಾಕ್ ಅನ್ನು ಪುನರಾವರ್ತಿಸುತ್ತದೆ. ಮತ್ತು ಇದು ಕೇವಲ ಕಂಡಿಷನ್ ಅಲ್ಲದೇ ಅದರ ಜೊತೆಗೆ ಪ್ರಾರಂಭದಲ್ಲಿ ಇನಿಷಿಯಲೈಝೇಷನ್ ಮತ್ತು ಕೊನೆಯಲ್ಲಿ ಇನ್ಕ್ರಿಮೆಂಟ್ ಸ್ಟೇಟ್ಮೆಂಟ್ ಅನ್ನೂ ಬಳಸುತ್ತದೆ. ಇದು ಫಾರ್ ಲೂಪ್ ನ ಮುಖ್ಯ ತತ್ವವಾಗಿದೆ.
00:18 ಹಾಗಾಗಿ ನೀವು ನಿಮ್ಮ ವೇರಿಯೇಬಲ್ ಅನ್ನು ಎಷ್ಟು ಹೆಚ್ಚಿಸುವಿರೋ ಅದು ನಿಮ್ಮ ವೇರಿಯೇಬಲ್ ಎಷ್ಟು ಬಾರಿ ಲೂಪ್ ಗೊಳಪಡುತ್ತದೆ ಎಂಬುದನ್ನು ನಿರ್ಧರಿಸುತ್ತದೆ.
00:38 ಹಾಗಾಗಿ ಇದನ್ನು ಬರೆಯುವುದು ಸ್ವಲ್ಪ ಕಠಿಣವಾಗಿದೆ. ಆದರೆ ಇದು ಉತ್ತಮವಾಗಿದೆ. ಇದು ಅದರ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತದೆ ಮತ್ತು ಇದು ಕಾಂಪ್ಯಾಕ್ಟ್ ಆಗಿದೆ.
00:43 ಈಗ ನಾವು for ಅನ್ನು ಬರೆಯೋಣ.
00:53 ಇಲ್ಲಿ ನಾವು ಕೋಡ್ ನ ಮೂರು ಭಾಗಗಳನ್ನೂ ಹೊಂದಿದ್ದೇವೆ. ನಮಗೆ ಬೇಕಾಗಿರುವುದು ಇಷ್ಟೇ. ಇಲ್ಲಿ ನೀವು ನಿಮ್ಮ ಕಂಟೆಂಟ್ ಅನ್ನು ಸೇರಿಸಬಹುದು.
01:03 ನಾನು ಈಗ ಇಲ್ಲಿ echo ಮಾಡುವೆನು ಮತ್ತು '$num' ಎನ್ನುವ ಒಂದು ವೇರಿಯೇಬಲ್ ಅನ್ನು ರಚಿಸೋಣ. ನಾವು ಇಲ್ಲಿ num ಅನ್ನು ಇಕೋ ಮಾಡಿದ್ದೇವೆ.
01:13 ಇಲ್ಲಿ $num =1 ಎಂದು ಬರೆಯೋಣ, ಇದು '= = 1' ಎಂದಲ್ಲ ಏಕೆಂದರೆ ನಾವು ವೇರಿಯೇಬಲ್ 'num' ಗೆ 1 ವ್ಯಾಲ್ಯುವನ್ನು ಕೊಡುತ್ತಿದ್ದೇವೆ.
01:22 ಇಲ್ಲಿ ನಾವು condition ಅನ್ನು ಹೊಂದಿದ್ದೇವೆ. ಉದಾಹರಣೆಗೆ $num <= 10 ಆಗಿರಲಿ,
01:31 ನಂತರ ನಾವು increment ವ್ಯಾಲ್ಯುಗಳನ್ನು ಹೊಂದಿದ್ದೇವೆ. ಹಾಗಾಗಿ ನಾವು num ++ ಎಂದು ಬರೆಯುವೆವು ಮತ್ತು ನಮ್ಮ ಲೂಪ್ ಸಿದ್ಧವಾಗಿದೆ.
01:37 ಹಾಗಾಗಿ ಈಗ for ಮತ್ತು ನಮ್ಮ ವೇರಿಯೇಬಲ್ $num=1 ಅನ್ನು ಇಲ್ಲಿ ಬರೆದಿದ್ದೇವೆ.
01:47 ನಂತರ - $num ಇದು (<=) 10 ಕ್ಕಿಂತ ಕಡಿಮೆ ಅಥವಾ ಸಮವಾಗಿದ್ದರೆ ಇದು ನಮ್ಮ ಕಂಡಿಷನ್ ಆಗಿದೆ. ಲೂಪ್ ಮುಂದುವರಿಯುತ್ತದೆ. ನಂತರ ನಾವು num ++ ಅನ್ನು ಹೊಂದಿದ್ದೇವೆ.
01:52 ಇಲ್ಲಿ ನೀವು , num ++ ಕೆಳಗಿರುವುದಕ್ಕಿಂತ ಇಲ್ಲಿರುವುದು ಉಪಯುಕ್ತವಾಗಿರುವುದನ್ನು ನೋಡಬಹುದು.
01:55 ಮತ್ತು ನಾವು ಇದನ್ನು ಮೇಲೆ ಡಿಕ್ಲೇರ್ ಮಾಡುವ ಅಗತ್ಯವಿಲ್ಲ.
01:59 ಇದನ್ನು ಇಲ್ಲಿ ಬ್ರ್ಯಾಕೆಟ್ ನೊಳಗೆ ಕೂಡ ಡಿಕ್ಲೇರ್ ಮಾಡಬಹುದು.
02:02 ನಾನು ಇಲ್ಲಿ line-break ಅನ್ನು ಮರೆತಿದ್ದೇನೆ.
02:07 ನಾನು ಇದರ ಕೊನೆಯಲ್ಲಿ ಲೈನ್ ಬ್ರೇಕ್ ಅನ್ನು ಸೇರಿಸುವೆನು.
02:10 Refresh ಮಾಡಿ.
02:12 ಈಗ ನಾವು ಇಲ್ಲಿ ಉತ್ತರವನ್ನು ಪಡೆಯುವೆವು.
02:17 ನೀವು ನಿಮ್ಮ ಲೂಪ್ ಅನ್ನು ಹತ್ತು ಬಾರಿ ಪಡೆಯುವಿರಿ.
02:25 ಇಲ್ಲಿ ಮೊದಲೇ ನಿರ್ದಿಷ್ಟ ಪಡಿಸಿದಂತೆ 'num' ಇದು 10 ಕ್ಕಿಂತ ಕಡಿಮೆ ಅಥವಾ ಸಮವಾಗಿರುವವರೆಗೂ ಲೂಪ್ ಮುಂದುವರಿಯುತ್ತದೆ.
02:28 ಅದರ ನಂತರ ಲೂಪ್ ತುಂಡರಿಸಲ್ಪಡುತ್ತದೆ ಮತ್ತು ನಂತರ ಉಳಿದ ಕೋಡ್ ಅನ್ನು ಮುಂದುವರಿಸಬಹುದು.
02:36 ಇದು ಸ್ವಲ್ಪ ಕಠಿಣವಾಗಿದ್ದರೂ ಒಮ್ಮೆ ಪ್ರಾಥಮಿಕ ವಿಷಯವನ್ನು ಸರಿಯಾಗಿ ಕಲಿತರೆ ನಂತರ ತುಂಬ ಸುಲಭವಾಗುವುದು. ಧನ್ಯವಾದಗಳು.

Contributors and Content Editors

Sandhya.np14