PERL/C3/Special-Variables-in-PERL/Kannada

From Script | Spoken-Tutorial
Jump to: navigation, search
Time
Narration
00:01 Special variables in Perl (ಸ್ಪೆಶಲ್ ವೇರಿಯೇಬಲ್ಸ್ ಇನ್ ಪರ್ಲ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ, ನಾವು:
  • 'ಗ್ಲೋಬಲ್ ಸ್ಪೆಶಲ್ ವೇರಿಯೇಬಲ್’ಗಳು
  • 'ಸ್ಪೆಶಲ್ ಕಮಾಂಡ್ ಲೈನ್ ವೇರಿಯೇಬಲ್’ಗಳು
  • 'ಗ್ಲೋಬಲ್ ಸ್ಪೆಶಲ್ ಕಾನ್ಸ್ಟಂಟ್'ಗಳು, ಇವುಗಳ ಬಗ್ಗೆ ಕಲಿಯುವೆವು.
00:13 ಈ ಟ್ಯುಟೋರಿಯಲ್ ಗಾಗಿ, ನಾನು:
  • Ubuntu Linux 12.04 (ಉಬಂಟು ಲಿನಕ್ಸ್) ಆಪರೇಟಿಂಗ್ ಸಿಸ್ಟಂ
  • Perl 5.14.2 ಮತ್ತು
  • gedit (ಜಿ-ಎಡಿಟ್) ಟೆಕ್ಸ್ಟ್-ಎಡಿಟರ್ ಗಳನ್ನು ಬಳಸುತ್ತಿದ್ದೇನೆ.

ನೀವು, ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು.

00:27 ಪೂರ್ವತಯಾರಿ ಎಂದು, ನಿಮಗೆ ಪರ್ಲ್ (Perl) ಪ್ರೊಗ್ರಾಮಿಂಗ್ ಬಗ್ಗೆ ತಿಳಿದಿರುವುದು ಅವಶ್ಯಕ.
00:32 ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ಮೇಲೆ ನೋಡಿ.
00:38 ‘ಸ್ಪೆಶಲ್ ವೇರಿಯೇಬಲ್’ಗಳೆಂದರೆ ಏನು?
00:41 ಸ್ಪೆಶಲ್ ವೇರಿಯೇಬಲ್ ಗಳು, ಮೊದಲೇ ಡಿಫೈನ್ ಮಾಡಲ್ಪಟ್ಟ ಹಾಗೂ ಪರ್ಲ್ ನಲ್ಲಿ ವಿಶೇಷ ಅರ್ಥವನ್ನು ಹೊಂದಿರುವ ವೇರಿಯೇಬಲ್ ಗಳಾಗಿವೆ.
00:46 ಇವುಗಳನ್ನು ಬಳಸುವ ಮುನ್ನ ಇನಿಶಿಯಲೈಸ್ ಮಾಡಬೇಕಾಗಿಲ್ಲ.
00:50 ’ಸರ್ಚ್’ನ ಫಲಿತಾಂಶಗಳನ್ನು, ಎನ್ವಿರಾನ್ಮೆಂಟ್ ವೇರಿಯೇಬಲ್ ಗಳನ್ನು ಮತ್ತು ’ಡಿ-ಬಗ್ಗಿಂಗ್’ಅನ್ನು ನಿಯಂತ್ರಿಸಲು ಫ್ಲಾಗ್ ಗಳನ್ನು ಇಡಲು ಇವುಗಳನ್ನು ಬಳಸಲಾಗುತ್ತದೆ.
00:58 ಮೊದಲು, 'ಗ್ಲೋಬಲ್ ಸ್ಪೆಶಲ್ ವೇರಿಯೇಬಲ್’ ಗಳ ಬಗ್ಗೆ ನಾವು ಕಲಿಯುವೆವು.
01:02 $_ : (ಡಾಲರ್ ಅಂಡರ್-ಸ್ಕೋರ್) ಇದು, ವ್ಯಾಪಕವಾಗಿ ಬಳಸಲ್ಪಡುವ ಒಂದು ಸ್ಪೆಶಲ್ ವೇರಿಯೇಬಲ್ ಆಗಿದೆ.
01:06 $_ : ಡಾಲರ್ ಅಂಡರ್-ಸ್ಕೋರ್, ಬಹಳಷ್ಟು ಫಂಕ್ಷನ್ ಗಳಿಗೆ ಮತ್ತು ಫ್ಯಾಟರ್ನ್ ಅನ್ನು ಹುಡುಕುವ ಸ್ಟ್ರಿಂಗ್ ಗಳಿಗೆ ಡೀಫಾಲ್ಟ್ ಪ್ಯಾರಾಮೀಟರ್ ಆಗಿರುತ್ತದೆ.
01:14 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, '$_’ (ಡಾಲರ್ ಅಂಡರ್-ಸ್ಕೋರ್) ಎಂಬ ವೇರಿಯೇಬಲ್ ನ ಬಳಕೆಯನ್ನು ನಾವು ತಿಳಿದುಕೊಳ್ಳೋಣ.
01:20 ನಾನು ಈಗಾಗಲೇ ಕ್ರಿಯೇಟ್ ಮಾಡಿರುವ 'special dot pl' ಎಂಬ ಫೈಲನ್ನು ಓಪನ್ ಮಾಡುತ್ತೇನೆ.
01:26 ಟರ್ಮಿನಲ್ ಗೆ ಹೋಗಿ, ಹೀಗೆ ಟೈಪ್ ಮಾಡಿ: 'gedit special dot pl ampersand' ಮತ್ತು 'Enter' ಅನ್ನು ಒತ್ತಿ.
01:32 'special dot pl' ಎಂಬ ಫೈಲ್, ಈಗ ’ಜಿ-ಎಡಿಟ್’ ('gedit') ನಲ್ಲಿ ಓಪನ್ ಆಗಿರುತ್ತದೆ. ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕೋಡ್ ಅನ್ನು ಟೈಪ್ ಮಾಡಿ. ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.
01:42 ಇಲ್ಲಿ ಎರಡು 'foreach' (ಫಾರ್ ಈಚ್) ಲೂಪ್ ಗಳಿರುತ್ತವೆ. ಈ ಎರಡೂ 'foreach' ಲೂಪ್ ಗಳು, ಒಂದೇ ಫಲಿತಾಂಶವನ್ನು (result) ಎಕ್ಸೀಕ್ಯೂಟ್ ಮಾಡುತ್ತವೆ.
01:49 ಲೂಪ್ ನ ಪ್ರತಿಯೊಂದು ಪುನರಾವರ್ತನೆಯಲ್ಲಿ, ಈಗಿನ (current) ಸ್ಟ್ರಿಂಗ್ ಅನ್ನು '$_' ನಲ್ಲಿ ಇಡಲಾಗುತ್ತದೆ
01:54 ಮತ್ತು ಡೀಫಾಲ್ಟ್ ಆಗಿ, ಇದು ಪ್ರಿಂಟ್ ಸ್ಟೇಟ್ಮೆಂಟ್ ನಿಂದ ಬಳಸಲ್ಪಡುತ್ತದೆ. '$_ (ಡಾಲರ್ ಅಂಡರ್-ಸ್ಕೋರ್)', '$color' ಎಂಬ ಒಂದು ಹೆಚ್ಚಿನ ವೇರಿಯೇಬಲ್ ನ ಬಳಕೆಯನ್ನು ಉಳಿಸುತ್ತದೆ.
02:03 ಫೈಲನ್ನು ಸೇವ್ ಮಾಡಲು 'Ctrl+S' ಒತ್ತಿ.
02:06 ಆಮೇಲೆ, ಟರ್ಮಿನಲ್ ಗೆ ಬದಲಾಯಿಸಿ. 'perl special dot pl' ಎಂದು ಟೈಪ್ ಮಾಡಿ Enter ಅನ್ನು ಒತ್ತಿ ಮತ್ತು ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸೀಕ್ಯೂಟ್ ಮಾಡಿ.
02:13 ಇಲ್ಲಿ, ಎರಡೂ 'foreach' ಲೂಪ್ ಗಳು ಒಂದೇ ಔಟ್ಪುಟ್ ಅನ್ನು ಕೊಡುತ್ತವೆ.
02:18 ಈಗ, '$_ (ಡಾಲರ್ ಅಂಡರ್-ಸ್ಕೋರ್) ವೇರಿಯೇಬಲ್' ಹೇಗೆ ಸೂಚ್ಯವಾಗಿದೆ ಎಂಬುದನ್ನು ತೋರಿಸಲು ನಾವು ಇನ್ನೊಂದು ಉದಾಹರಣೆಯನ್ನು ನೋಡೋಣ.

'special dot pl' ಫೈಲ್ ಗೆ ಹಿಂದಿರುಗಿ.

02:27 ಸ್ಕ್ರೀನ್ ಮೇಲೆ ತೋರಿಸಿದ ಕೋಡ್ ನ ಭಾಗವನ್ನು ಟೈಪ್ ಮಾಡಿ.
02:30 ಈ ಪ್ರೊಗ್ರಾಂ, 'first.txt' ಎಂಬ ಟೆಕ್ಸ್ಟ್ ಫೈಲನ್ನು ಒಂದೊಂದೇ ಸಾಲಿನಂತೆ ಓದುತ್ತದೆ (reads). ನಂತರ ಇದು ಎಲ್ಲ ಸಾಲುಗಳನ್ನು ಓದುವವರೆಗೆ 'DATA' ಫೈಲ್ ನಲ್ಲಿ ಲೂಪ್ ಮಾಡುತ್ತದೆ (ಪುನರಾವರ್ತಿಸುತ್ತದೆ).
02:40 'print $_ ' ಎಂಬ ವೇರಿಯೇಬಲ್, 'first.txt' ಎಂಬ ಫೈಲ್ ನ ಈಗಿನ ಲೈನ್ ನಲ್ಲಿರುವ ವಿಷಯಗಳನ್ನು ಪ್ರಿಂಟ್ ಮಾಡುತ್ತದೆ.

'while' ಲೂಪ್ ನಲ್ಲಿ, '$_' ನ ಬಳಕೆಯು ಸೂಚ್ಯವಾಗಿರುತ್ತದೆ.

02:51 ನಾವು ಇದರ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ಇನ್ನಷ್ಟು ನೋಡುವೆವು.
02:55 'ಆಟ್-ದ-ರೇಟ್ ಅಂಡರ್ಸ್ಕೋರ್' (@_), ಸಬ್-ರುಟೀನ್ ಪ್ಯಾರಾಮೀಟರ್ ಗಳನ್ನು ಸ್ಟೋರ್ ಮಾಡಲು ಬಳಸಲಾಗುವ ಒಂದು ಸ್ಪೆಶಲ್-ವೇರಿಯೇಬಲ್ ಆಗಿದೆ.
03:01 ಸಬ್-ರುಟೀನ್ ಗಾಗಿ, ಆರ್ಗ್ಯೂಮೆಂಟ್ ಗಳನ್ನು ಈ ಆರೇ-ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗುತ್ತದೆ.
03:06 'ಪಾಪ್/ಶಿಫ್ಟ್' ಗಳಂತಹ (pop/shift) ಆರೇ ಆಪರೇಶನ್ ಗಳನ್ನು, ಸಾಮಾನ್ಯ ಆರೇಗಳಲ್ಲಿ ಮಾಡುವಂತೆಯೇ ನಾವು ಈ ವೇರಿಯೇಬಲ್ ನ ಮೇಲೆ ಮಾಡಬಹುದು.
03:13 ಇದಕ್ಕಾಗಿ ನಾನು ಒಂದು ಉದಾಹರಣೆಯನ್ನು ತೋರಿಸುವೆನು. ಮತ್ತೊಮ್ಮೆ ನಾವು 'special dot pl' ಫೈಲ್ ಗೆ ಹಿಂದಿರುಗೋಣ.
03:19 ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕೋಡ್ ಅನ್ನು ಟೈಪ್ ಮಾಡಿ.
03:22 ಈ ಪ್ರೊಗ್ರಾಂ, ಎರಡು ಸಂಖ್ಯೆಗಳಲ್ಲಿ ದೊಡ್ಡ ವ್ಯಾಲ್ಯೂಅನ್ನು ಹಿಂದಿರುಗಿಸುವುದು (return).

'@_ (ಆಟ್ ದ ರೇಟ್ ಅಂಡರ್ಸ್ಕೋರ್)', ಡಾಲರ್ ’a’, ಡಾಲರ್ ’b’ ಎಂಬ ಎರಡು ಆರ್ಗ್ಯೂಮೆಂಟ್ ಗಳನ್ನು ಸ್ಟೋರ್ ಮಾಡುವ ಒಂದು ಲೋಕಲ್-ಆರೇ ಆಗಿದೆ.

03:35 ಎಂದರೆ, ಇದನ್ನು 'dollar underscore index of zero' ಹಾಗೂ 'dollar underscore index of one' ಗಳ ಅಡಿಯಲ್ಲಿ ಸ್ಟೋರ್ ಮಾಡಲಾಗುತ್ತದೆ.
03:43 ಪ್ರಿಂಟ್ ಸ್ಟೇಟ್ಮೆಂಟ್, ಕೊಟ್ಟಿರುವ ಎರಡು ಸಂಖ್ಯೆಗಳಲ್ಲಿ ದೊಡ್ಡದನ್ನು ಪ್ರಿಂಟ್ ಮಾಡುತ್ತದೆ.
03:47 ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ.
03:51 ಟರ್ಮಿನಲ್ ಗೆ ಬದಲಾಯಿಸಿ ಹಾಗೂ ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸೀಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ: 'perl special dot pl' ಮತ್ತು 'Enter' ಅನ್ನು ಒತ್ತಿ.
03:58 ಗರಿಷ್ಠ ವ್ಯಾಲ್ಯೂಅನ್ನು ಔಟ್ಪುಟ್ ನಂತೆ ತೋರಿಸಲಾಗುತ್ತದೆ. ಈಗ ನಾವು ಮುಂದೆ ನಡೆಯೋಣ.
04:02 'ಎನ್ವಿರಾನ್ಮೆಂಟ್ ವೇರಿಯೇಬಲ್’ಗಳನ್ನು, 'ಪರ್ಸೆಂಟೇಜ್' (%), ನಂತರ ದೊಡ್ಡಕ್ಷರಗಳಲ್ಲಿ ’ENV’ ಯಿಂದ ಪ್ರತಿನಿಧಿಸಲಾಗುತ್ತದೆ.
04:10 'ಎನ್ವಿರಾನ್ಮೆಂಟ್ ವೇರಿಯೇಬಲ್’ಗಳು, ಕೆಳಗೆ ಹೇಳಿದಂತಹ ಈಗಿನ 'ಎನ್ವಿರಾನ್ಮೆಂಟ್ ವೇರಿಯೇಬಲ್’ಗಳ ಒಂದು ಪ್ರತಿಯನ್ನು ಒಳಗೊಂಡಿರುತ್ತವೆ.
04:17 ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, '%ENV' ವೇರಿಯೇಬಲ್ ಅನ್ನು ನಾವು ತಿಳಿದುಕೊಳ್ಳೋಣ.
04:23 ನಾವು 'special dot pl' ಎಂಬ ಫೈಲ್ ಗೆ ಹಿಂದಿರುಗುವೆವು.
04:26 ಸ್ಕ್ರೀನ್ ನ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
04:30 ಫೈಲನ್ನು ಸೇವ್ ಮಾಡಲು 'Ctrl+S' ಅನ್ನು ಒತ್ತಿ. ಟರ್ಮಿನಲ್ ಗೆ ಬದಲಾಯಿಸಿ ಮತ್ತು ಪರ್ಲ್ ಸ್ಕ್ರಿಪ್ಟ್ ಅನ್ನು ಎಕ್ಸೀಕ್ಯೂಟ್ ಮಾಡಿ.
04:37 ಹೀಗೆ ಟೈಪ್ ಮಾಡಿ: 'perl special dot pl' ಮತ್ತು 'Enter' ಅನ್ನು ಒತ್ತಿ.
04:42 ನಾವು 'PWD' (ಪ್ರೆಸೆಂಟ್ ವರ್ಕಿಂಗ್ ಡಿರೆಕ್ಟರೀ), ಯೂಸರ್ ನೇಮ್, ಲ್ಯಾಂಗ್ವೇಜ್ ಗಳಂತಹ ಈಗಿನ ಎನ್ವಿರಾನ್ಮೆಂಟ್ ನ ವಿವರಗಳನ್ನು ನೋಡಬಹುದು.
04:51 ನಂತರ, ನಾವು 'ಡಾಲರ್ ಝೀರೋ' (dollar zero) ಎಂಬ ಇನ್ನೊಂದು ಸ್ಪೆಶಲ್-ವೇರಿಯೇಬಲ್ ನ ಬಗ್ಗೆ ನೋಡುವೆವು.
04:55 'ಡಾಲರ್ ಝೀರೋ' ('$0') ಎಂಬ ಸ್ಪೆಶಲ್ ವೇರಿಯೇಬಲ್, ಈಗ ಸಧ್ಯಕ್ಕೆ ಎಕ್ಸೀಕ್ಯೂಟ್ ಆಗುತ್ತಿರುವ ಪರ್ಲ್ ಪ್ರೊಗ್ರಾಂನ ಹೆಸರನ್ನು ಒಳಗೊಂಡಿದೆ.
05:02 ಇದನ್ನು ಸಾಮಾನ್ಯವಾಗಿ ಲಾಗಿಂಗ್ ಉದ್ದೇಶಕ್ಕಾಗಿ ಬಳಸಲಾಗುತ್ತದೆ.
05:05 ಉದಾಹರಣೆಗೆ: ನನ್ನ ಹತ್ತಿರ 'First.pl' ಎಂಬ ಫೈಲ್ ಇದೆ. ಇಲ್ಲಿ ತೋರಿಸಿದಂತೆ, ನಾನು ಇದರಲ್ಲಿ '$0 ' ವೇರಿಯೇಬಲ್ ಅನ್ನು ಬಳಸುತ್ತಿದ್ದೇನೆ.
05:14 ಎಕ್ಸೀಕ್ಯೂಟ್ ಮಾಡಿದಮೇಲೆ, ಇದು ಫೈಲ್ ನೇಮ್ 'First dot pl' ಅನ್ನು ಪ್ರಿಂಟ್ ಮಾಡುವುದು.
05:19 ಪರ್ಲ್, ಆರೇಯನ್ನು ಸಾರ್ಟ್ ಮಾಡುವ 'sort' ಎಂಬ ಒಂದು 'ಬಿಲ್ಟ್-ಇನ್-ಫಂಕ್ಷನ್' ಅನ್ನು ಹೊಂದಿದೆ.
05:24 ’ಕಂಪ್ಯಾರಿಸನ್ ಫಂಕ್ಷನ್’ (ಹೋಲಿಸುವ ಫಂಕ್ಷನ್), ’ನ್ಯೂಮೆರಿಕಲ್ ಕಂಪ್ಯಾರಿಸನ್ ಆಪರೇಟರ್’ ಅನ್ನು ಬಳಸಿ, ತನ್ನ ಪ್ಯಾರಾಮೀಟರ್ ಗಳನ್ನು ಹೋಲಿಸುವುದು.
05:30 ಇಲ್ಲಿ ತೋರಿಸಿದಂತೆ, ಈ ಆಪರೇಟರ್ ಅನ್ನು, 'ಲೆಸ್ಸರ್-ದ್ಯಾನ್ ಇಕ್ವಲ್-ಟು ಗ್ರೇಟರ್-ದ್ಯಾನ್' ಚಿಹ್ನೆಗಳಿಂದ ಪ್ರತಿನಿಧಿಸಲಾಗುವುದು.
05:38 ನಾವು ಇದಕ್ಕಾಗಿ ಒಂದು ಉದಾಹರಣೆಯನ್ನು ನೋಡೋಣ.
05:40 ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'gedit sort.pl ampersand' ಮತ್ತು 'Enter' ಅನ್ನು ಒತ್ತಿ.
05:47 'sort.pl' ಎಂಬ ಫೈಲ್, ಈಗ 'gedit' ಟೆಕ್ಸ್ಟ್-ಎಡಿಟರ್ ನಲ್ಲಿ ಓಪನ್ ಆಗಿದೆ. ಈ ಕೆಳಗಿನ ಕೋಡ್ ಅನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ.
05:56 ನಾನು ಕೋಡ್ ಅನ್ನು ವಿವರಿಸುತ್ತೇನೆ. ಮೊದಲನೆಯ ಸಾಲು, ಸಂಖ್ಯೆಗಳ ಒಂದು ಆರೇಯನ್ನು ಡಿಕ್ಲೇರ್ ಮಾಡುತ್ತದೆ.
06:02 ’ನ್ಯೂಮೆರಿಕಲ್ ಕಂಪ್ಯಾರಿಸನ್ ಆಪರೇಟರ್’, ಈ ಎರಡು ವ್ಯಾಲ್ಯೂಗಳನ್ನು ಸಂಖ್ಯೆಗಳಂತೆ ಹೋಲಿಸುವುದು.
06:08 'ಡಾಲರ್ a' ಮತ್ತು 'ಡಾಲರ್ b', ಸ್ಪೆಶಲ್ ಪ್ಯಾಕೇಜ್ ಲೋಕಲ್ ವೇರಿಯೇಬಲ್ ಗಳಾಗಿವೆ. ಇದರಲ್ಲಿ ಹೋಲಿಸಬೇಕಾದ ವ್ಯಾಲ್ಯೂಗಳನ್ನು ಲೋಡ್ ಮಾಡಲಾಗಿದೆ
06:16 ಮತ್ತು ಈ 'sort' ಎಂಬ ಫಂಕ್ಷನ್, ಸಂಖ್ಯೆಗಳನ್ನು ಏರಿಕೆಯ ಕ್ರಮದಲ್ಲಿ ಸಾರ್ಟ್ ಮಾಡುವುದು.
06:21 ನಾವು ಈಗ ಪ್ರೊಗ್ರಾಂಅನ್ನು ಸೇವ್ ಮಾಡಿ, ಎಕ್ಸೀಕ್ಯೂಟ್ ಮಾಡೋಣ.
06:25 ಟರ್ಮಿನಲ್ ಗೆ ಬದಲಾಯಿಸಿ, ಹೀಗೆ ಟೈಪ್ ಮಾಡಿ: 'perl sort.pl' ಮತ್ತು 'Enter' ಅನ್ನು ಒತ್ತಿ.
06:31 ಸಂಖ್ಯೆಗಳನ್ನು ಏರಿಕೆಯ ಕ್ರಮದಲಿ ಸಾರ್ಟ್ (sort) ಮಾಡಿರುವುದನ್ನು ನಾವು ನೋಡಬಹುದು.
06:35 'ಡಾಲರ್ ಎಕ್ಸ್ಕ್ಲಾಮೇಶನ್' (dollar exclamation) ಎಂಬ ಇನ್ನೊಂದು ಸ್ಪೆಶಲ್ ವೇರಿಯೇಬಲ್ ಅನ್ನು ನಾವು ನೋಡೋಣ.
06:39 'ಡಾಲರ್ ಎಕ್ಸ್ಕ್ಲಾಮೇಶನ್' ಅನ್ನು' ಸ್ಟ್ರಿಂಗ್' ಕಾಂಟೆಕ್ಸ್ಟ್ ನಲ್ಲಿ ಬಳಸಿದಾಗ, ಸಿಸ್ಟಂ, ಎರರ್ ಸ್ಟ್ರಿಂಗ್ ಅನ್ನು ರಿಟರ್ನ್ ಮಾಡುತ್ತದೆ. ಇಲ್ಲಿ, ಅದರ ಬಳಕೆಯ ಒಂದು ಉದಾಹರಣೆಯಿದೆ.
06:48 ಒಂದುವೇಳೆ 'hello.txt' ಎಂಬ ಫೈಲ್ ಇರದಿದ್ದರೆ, ಅದು ಎರರ್ ಮೆಸೇಜನ್ನು ಹೀಗೆ ಪ್ರಿಂಟ್ ಮಾಡುವುದು:

“Cannot open file for reading : No such file or directory”

06:59 ನಾವು ಈಗ 'ಡಾಲರ್ ಆಟ್ ದ ರೇಟ್' (dollar at the rate) ಎಂಬ ಇನ್ನೊಂದು ಸ್ಪೆಶಲ್ ವೇರಿಯೇಬಲ್ ಅನ್ನು ನೋಡೋಣ.
07:04 ಇದು ವ್ಯಾಪಕವಾಗಿ ಬಳಸಲಾಗುತ್ತಿರುವ ಇನ್ನೊಂದು ವೇರಿಯೇಬಲ್ ಆಗಿದೆ. 'eval' ಅಥವಾ 'require' ಕಮಾಂಡ್ ನಿಂದ ರಿಟರ್ನ್ ಮಾಡಲಾದ ಎರರ್ ಮೆಸೇಜನ್ನು ಇದು ಹಿಂದಿರುಗಿಸುತ್ತದೆ.
07:12 ಈ ಉದಾಹರಣೆಯು ಹೀಗೆ ಪ್ರಿಂಟ್ ಮಾಡುವುದು: “could not divide, Illegal division by zero”.
07:17 'ಡಾಲರ್ ಡಾಲರ್', ಇನ್ನೊಂದು ಸ್ಪೆಶಲ್ ವೇರಿಯೇಬಲ್ ಆಗಿದೆ. ಇದು, ಈ ಸ್ಕ್ರಿಪ್ಟ್ ಅನ್ನು ರನ್ ಮಾಡುತ್ತಿರುವ 'ಪರ್ಲ್ ಇಂಟರ್ಪ್ರಿಟರ್'ನ 'ಪ್ರೊಸೆಸ್ ಐ ಡಿ ' (process ID) ಯನ್ನು ಹೊಂದಿದೆ.
07:26 ಕಮಾಂಡ್-ಲೈನ್ ನ ಮೇಲೆ ಸೂಚಿಸಲಾದ ಎಲ್ಲ ಫೈಲ್ ಗಳಿಂದ ಪ್ರತಿಯೊಂದು ಸಾಲನ್ನು ಓದಲು, ಡೈಮಂಡ್ ಆಪರೇಟರ್ ಅನ್ನು ಬಳಸಲಾಗುತ್ತದೆ.
07:32 ಇದಕ್ಕಾಗಿ ನಾವು ಒಂದು ಉದಾಹರಣೆಯನ್ನು ನೋಡೋಣ.
07:35 ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'gedit commandline.pl ampersand ' ಮತ್ತು 'Enter' ಅನ್ನು ಒತ್ತಿ.
07:42 'commandline.pl' ಎಂಬ ಫೈಲ್, ಈಗ 'gedit' ನಲ್ಲಿ ಓಪನ್ ಆಗಿರುತ್ತದೆ.
07:46 ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕೋಡ್ ಅನ್ನು ಟೈಪ್ ಮಾಡಿ.
07:49 ಫೈಲನ್ನು ಸೇವ್ ಮಾಡಿ.
07:51 'sample dot txt' ಎಂಬ ಫೈಲ್ ನಲ್ಲಿ, ನನ್ನ ಹತ್ತಿರ ಇರುವ ಟೆಕ್ಸ್ಟ್ ಅನ್ನು ನಾನು ನಿಮಗೆ ತೋರಿಸುತ್ತೇನೆ.
07:56 ಈಗ ಪ್ರೊಗ್ರಾಂಅನ್ನು ಕಮಾಂಡ್-ಲೈನ್ ನಿಂದ ರನ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ: 'perl commandline dot pl space sample dot txt ' ಮತ್ತು 'Enter' ಅನ್ನು ಒತ್ತಿ.
08:07 ಇದು 'sample dot txt' ಎಂಬ ಫೈಲ್ ನಲ್ಲಿ ಇರುವ ಟೆಕ್ಸ್ಟ್ ಆಗಿದೆ.
08:11 ಯಾವುದೇ ಫೈಲ್ ಗಳನ್ನು ಸೂಚಿಸಿರದಿದ್ದರೆ, ಅದು ಸ್ಟಾಂಡರ್ಡ್-ಇನ್ಪುಟ್ ನಿಂದ, ಎಂದರೆ ಕೀಬೋರ್ಡ್ ನಿಂದ ಓದುತ್ತದೆ (ರೀಡ್ ಮಾಡುತ್ತದೆ).
08:17 'Perl', ಒಂದು ಆರೇ- 'ಆಟ್ ದ ರೇಟ್ ದೊಡ್ಡಕ್ಷರ A R G V ' ಎಂಬ ಸ್ಪೆಶಲ್ ವೇರಿಯೇಬಲ್ ಅನ್ನು ಹೊಂದಿದೆ. ಇದು ಕಮಾಂಡ್-ಲೈನ್ ನ ಎಲ್ಲ ವ್ಯಾಲ್ಯೂಗಳನ್ನು ಇಟ್ಟುಕೊಳ್ಳುತ್ತದೆ.
08:27 'ಆಟ್ ದ ರೇಟ್ ದೊಡ್ಡಕ್ಷರ A R G V ' ಎಂಬ ಆರೇಯನ್ನು ಬಳಸುವಾಗ, ವೇರಿಯೇಬಲ್ ಗಳನ್ನು ಡಿಕ್ಲೇರ್ ಮಾಡುವ ಅಗತ್ಯವಿಲ್ಲ.
08:33 ಕಮಾಂಡ್ ಲೈನ್ ನಿಂದ ವ್ಯಾಲ್ಯೂಗಳು, ಈ ವೇರಿಯೇಬಲ್ ನಲ್ಲಿ ತಾನಾಗಿಯೇ ಇರಿಸಲ್ಪಡುತ್ತವೆ.
08:37 ಈಗ ನಾವು 'ಗ್ಲೋಬಲ್ ಸ್ಪೆಶಲ್ ಕಾನ್ಸ್ಟಂಟ್’ಗಳನ್ನು (Global Special Constants) ನೋಡೋಣ.
08:41 'ಅಂಡರ್ಸ್ಕೋರ್ ಅಂಡರ್ಸ್ಕೋರ್ E N D (ಎಲ್ಲ ದೊಡ್ಡಕ್ಷರಗಳು) ಅಂಡರ್ಸ್ಕೋರ್ ಅಂಡರ್ಸ್ಕೋರ್', ಪ್ರೊಗ್ರಾಂನ ’ಲಾಜಿಕಲ್ ಎಂಡ್’ ಅನ್ನು ಸೂಚಿಸುತ್ತದೆ.
08:50 ಈ ಸ್ಪೆಶಲ್ ವೇರಿಯೇಬಲ್ ನ ನಂತರ ಬರುವ ಯಾವುದೇ ಟೆಕ್ಸ್ಟ್ ಅನ್ನು ಕಡೆಗಣಿಸಲಾಗುತ್ತದೆ.
08:55 'ಅಂಡರ್ಸ್ಕೋರ್ ಅಂಡರ್ಸ್ಕೋರ್ FILE (ದೊಡ್ಡಕ್ಷರಗಳಲ್ಲಿ) ಅಂಡರ್ಸ್ಕೋರ್ ಅಂಡರ್ಸ್ಕೋರ್' ಈ ಘಟ್ಟದಲ್ಲಿ ಬಳಸುವ ಪ್ರೊಗ್ರಾಂನ ಫೈಲ್ ನ ಹೆಸರನ್ನು ಸೂಚಿಸುತ್ತದೆ.
09:06 'ಅಂಡರ್ಸ್ಕೋರ್ ಅಂಡರ್ಸ್ಕೋರ್ LINE (ದೊಡ್ಡಕ್ಷರಗಳಲ್ಲಿ) ಅಂಡರ್ಸ್ಕೋರ್ ಅಂಡರ್ಸ್ಕೋರ್', ಈಗಿನ ಲೈನ್-ನಂಬರ್ ಅನ್ನು ಸೂಚಿಸುತ್ತದೆ.
09:13 'ಅಂಡರ್ಸ್ಕೋರ್ ಅಂಡರ್ಸ್ಕೋರ್ PACKAGE (ದೊಡ್ಡಕ್ಷರಗಳಲ್ಲಿ) ಅಂಡರ್ಸ್ಕೋರ್ ಅಂಡರ್ಸ್ಕೋರ್', ಕಂಪೈಲ್ ಮಾಡುವ ಸಮಯದಲ್ಲಿ ಈಗಿನ ಪ್ಯಾಕೇಜ್-ನೇಮ್ ಅನ್ನು ಅಥವಾ ಈಗಿನ ಪ್ಯಾಕೇಜ್ ಇಲ್ಲದಿದ್ದರೆ ಅನ್-ಡಿಫೈನ್ಡ್ ಎಂದು ಸೂಚಿಸುತ್ತದೆ.
09:25 'ಗ್ಲೋಬಲ್ ಸ್ಪೆಶಲ್ ಕಾನ್ಸ್ಟಂಟ್’ಗಳನ್ನು (Global Special Constants) ಹೇಗೆ ಬಳಸಲಾಗುವುದು ಎಂಬುದರ ಬಗ್ಗೆ ನಾವು ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ನೋಡುವೆವು.
09:30 ಟರ್ಮಿನಲ್ ಅನ್ನು ಓಪನ್ ಮಾಡಿ ಮತ್ತು ಹೀಗೆ ಟೈಪ್ ಮಾಡಿ: 'gedit specialconstant dot pl ampersand' ಮತ್ತು 'Enter' ಅನ್ನು ಒತ್ತಿ.
09:39 'specialconstant dot pl' ಎಂಬ ಫೈಲ್, ಈಗ 'gedit' ನಲ್ಲಿ ಓಪನ್ ಆಗಿರುತ್ತದೆ.
09:44 ಸ್ಕ್ರೀನ್ ನ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. ನಾನು ಈಗ ಕೋಡ್ ಅನ್ನು ವಿವರಿಸುತ್ತೇನೆ.
09:50 ವಿಶೇಷ ಅಕ್ಷರಗಳಾದ 'PACKAGE, FILE, LINE ' ಗಳು, ಪ್ರೊಗ್ರಾಂನ ಈ ಘಟ್ಟದಲ್ಲಿ ಕ್ರಮವಾಗಿ ಪ್ಯಾಕೇಜ್ ನೇಮ್, ಈಗಿನ ಫೈಲ್ ನೇಮ್ ಮತ್ತು ಲೈನ್ ನಂಬರ್ ಗಳನ್ನು ಪ್ರತಿನಿಧಿಸುತ್ತವೆ.
10:00 ನಾವು ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡೋಣ.
10:02 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl specialconstant.pl' ಮತ್ತು 'Enter' ಅನ್ನು ಒತ್ತಿ.
10:09 ನಾವು ನಮ್ಮ ಪ್ರೊಗ್ರಾಂನ ಈಗಿನ ಪ್ಯಾಕೇಜ್ ನ ಹೆಸರು, ಫೈಲ್ ನೇಮ್ ಮತ್ತು ಲೈನ್ ನಂಬರ್ ಗಳನ್ನು ನೋಡಬಹುದು.
10:15 ಇಲ್ಲಿಗೆ, ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,
10:19 ಈ ಟ್ಯುಟೋರಿಯಲ್ ನಲ್ಲಿ ನಾವು, ಪರ್ಲ್ (Perl) ನಲ್ಲಿ ಸಾಮಾನ್ಯವಾಗಿ ಬಳಸಲಾಗುವ ಕೆಲವು ಸ್ಪೆಶಲ್ ವೇರಿಯೇಬಲ್ ಗಳ ಬಗ್ಗೆ ಕಲಿತಿದ್ದೇವೆ.
10:25 ಒಂದು ಅಸೈನ್ಮೆಂಟ್ - ಕೆಳಗಿನ ಸಂಖ್ಯೆಗಳ ಆರೇಯನ್ನು, ಏರಿಕೆಯ ಮತ್ತು ಇಳಿಕೆಯ ಕ್ರಮದಲ್ಲಿ ಸಾರ್ಟ್ (sort) ಮಾಡಲು, ಒಂದು ಪರ್ಲ್ (Perl) ಸ್ಕ್ರಿಪ್ಟ್ ಅನ್ನು ಬರೆಯಿರಿ.
10:34 ಗಮನಿಸಿ: ಇಳಿಕೆಯ ಕ್ರಮಕ್ಕಾಗಿ (descending order), ಹೋಲಿಕೆಗಾಗಿ ಕೆಳಗಿನ ಕೋಡ್ ಅನ್ನು ಉಪಯೋಗಿಸಿ.
10:39 ‘while’ ಲೂಪ್ ಅನ್ನು ಬಳಸಿ, ಸಾರ್ಟ್ ಮಾಡಲಾದ ಫಲಿತಾಂಶವನ್ನು ಮತ್ತು ಸ್ಪೆಶಲ್ ವೇರಿಯೇಬಲ್ '$_' (ಡಾಲರ್ ಅಂಡರ್-ಸ್ಕೋರ್) ಅನ್ನು ಪ್ರಿಂಟ್ ಮಾಡಿ.
10:45 ಪ್ರೊಗ್ರಾಂಅನ್ನು ಸೇವ್ ಮಾಡಿ ಮತ್ತು ಎಕ್ಸೀಕ್ಯೂಟ್ ಮಾಡಿ.
10:47 ಈಗ ಫಲಿತಾಂಶವನ್ನು ಪರೀಕ್ಷಿಸಿ.
10:49 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
10:56 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:03 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ.
11:06 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:13 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
11:17 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14