Netbeans/C2/Handling-Images-in-a-Java-GUI-Application/Kannada
From Script | Spoken-Tutorial
Time | Narration |
00:01 | ನಮಸ್ಕಾರ.
ಈ ಟ್ಶುಟೋರಿಯಲ್ ನಲ್ಲಿ, Netbeans IDE (ನೆಟ್ಬೀನ್ಸ್ IDE) ಅನ್ನು ಬಳಸಿ Handling Images in a Java GUI Application (ಹ್ಯಾಂಡಲಿಂಗ್ ಇಮೇಜಸ್ ಇನ್ ಎ ಜಾವಾ ಜಿಯುಐ ಅಪ್ಲಿಕೇಶನ್) ಅನ್ನು ಕಲಿಯಲು ನಿಮಗೆ ಸ್ವಾಗತ. |
00:10 | ನಿಮಗೆ Netbeans (ನೆಟ್ಬೀನ್ಸ್) ಅನ್ನು ಬಳಸುವ ಬಗ್ಗೆ ಪರಿಚಯ ಇದೆ ಎಂದು ಭಾವಿಸುತ್ತೇವೆ. |
00:15 | 'JFrame ಫಾರ್ಮ್ ' ನಲ್ಲಿ ಟೆಕ್ಸ್ಟ್-ಫೀಲ್ಡ್, ಬಟನ್, ಮೆನ್ಶೂ ಇತ್ಶಾದಿಗಳನ್ನು ಸೇರಿಸುವುದನ್ನು ಸಹ ತಿಳಿದಿರುವಿರಿ ಎಂದು ಭಾವಿಸುತ್ತೇವೆ. |
00:22 | ಇಲ್ಲದಿದ್ದರೆ, ದಯವಿಟ್ಟು Netbeans ಗೆ ಸಂಬಂಧಿತ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ದಲ್ಲಿ ನೋಡಬಹುದು. |
00:29 | ಈ ಟ್ಶುಟೋರಿಯಲ್ ನಲ್ಲಿ ನಾವು , ಹ್ಯಾಂಡಲಿಂಗ್ ಇಮೇಜ್ ಗಳ ಬಗ್ಗೆ ವಿವರವಾಗಿ ತಿಳಿಯುವೆವು. |
00:34 | ಮತ್ತು, ಒಂದು ಸ್ಯಾಂಪಲ್ 'GUI application' ನಲ್ಲಿ ಇವುಗಳ ಮೇಲೆ ಕೆಲಸ ಮಾಡುವೆವು. |
00:39 | ಇದನ್ನು ವಿವರಿಸಲು, ನಾನು 'Linux (ಲಿನಕ್ಸ್) ಆಪರೇಟಿಂಗ್ ಸಿಸ್ಟಂ Ubuntu' ಆವೃತ್ತಿ 11.04 ಹಾಗೂ 'Netbeans IDE' ಆವೃತ್ತಿ 7.1.1 ಇವುಗಳನ್ನು ಬಳಸುತ್ತೇನೆ. |
00:52 | ಸಾಮಾನ್ಯವಾಗಿ, ಜಾವಾ ಅಪ್ಲಿಕೇಶನ್ ನಲ್ಲಿ 'getResource ()' ಎಂಬ ಮೆಥಡ್ ಅನ್ನು ಬಳಸಿ ಇಮೇಜ್ ಗಳನ್ನು ಪಡೆಯುವುದು ಮತ್ತು ನಿರ್ವಹಿಸುವುದನ್ನು ಮಾಡಲಾಗುತ್ತದೆ. |
00:59 | ನಿಮ್ಮ ಅಪ್ಲಿಕೇಶನ್ ನಲ್ಲಿ, ಕೋಡ್ ಅನ್ನು ತಯಾರಿಸಲು ಮತ್ತು ಇಮೇಜ್ ಗಳನ್ನು ಸೇರಿಸಲು, IDE ಯ 'GUI ಬಿಲ್ಡರ್' ಅನ್ನು ಬಳಸುವುದರ ಬಗ್ಗೆ ನಾವು ಕಲಿಯುವೆವು. |
01:07 | ಹಾಗೂ ಇಮೇಜ್ ಅನ್ನು ಪ್ರದರ್ಶಿಸುವ ಒಂದು ಸರಳವಾದ 'Jframe' ಅನ್ನು 'Jlabel' ನೊಂದಿಗೆ ಕ್ರಿಯೇಟ್ ಮಾಡೋಣ. |
01:13 | ಈ ಟ್ಶುಟೋರಿಯಲ್ ನಲ್ಲಿ, ನಾವು - |
01:15 | ಅಪ್ಲಿಕೇಶನ್-ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು, |
01:18 | ಇಮೇಜ್ ಗಾಗಿ ಒಂದು 'ಪ್ಯಾಕೇಜ್' ಅನ್ನು (package) ಸೇರಿಸುವುದು, |
01:20 | 'ಲೇಬಲ್'ನ (Label) ಮೇಲೆ ಇಮೇಜ್ ಅನ್ನು ಪ್ರದರ್ಶಿಸುವುದು, |
01:22 | 'ಮೌಸ್-ಇವೆಂಟ್' ಮತ್ತು 'ಪಾಪ್-ಅಪ್' ಗಳನ್ನು ಕ್ರಿಯೇಟ್ ಮಾಡುವುದು, |
01:25 | ಅಪ್ಲಿಕೇಶನ್ ಅನ್ನು 'ಬಿಲ್ಡ್' ಹಾಗು 'ರನ್' ಮಾಡುವುದು ಇತ್ಯಾದಿಗಳನ್ನು ಕಲಿಯುವೆವು. |
01:28 | ಈಗ, ನಮ್ಮ ಸ್ಯಾಂಪಲ್ ಅಪ್ಲಿಕೇಶನ್ ಅನ್ನು ರಚಿಸಲು 'IDE' ಗೆ ಬದಲಾಯಿಸೋಣ. |
01:33 | 'File ಮೆನ್ಶೂ'ನಿಂದ, 'New Project' ಆರಿಸಿಕೊಳ್ಳಿ. |
01:37 | 'Categories' ನಲ್ಲಿ Java ಮತ್ತು Projects ನಲ್ಲಿ Java Application ಆರಿಸಿ, 'Next' ಮೇಲೆ ಕ್ಲಿಕ್ ಮಾಡಿ. |
01:46 | 'Project Name' ಫೀಲ್ಡ್ ನಲ್ಲಿ, 'ImageDisplayApp' ಎಂದು ಟೈಪ್ ಮಾಡಿ. |
01:54 | 'Create Main Class' ಎಂಬ ಚೆಕ್-ಬಾಕ್ಸ್ ಅನ್ನು ಖಾಲಿ ಮಾಡಿ. |
01:58 | 'Set as Main Project' ಎಂಬ ಚೆಕ್-ಬಾಕ್ಸ್, ಆಯ್ಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. |
02:03 | 'Finish' ಅನ್ನು ಕ್ಲಿಕ್ ಮಾಡಿ. ಈಗ ನಿಮ್ಮ IDE ನಲ್ಲಿ (ಐಡಿಇ) ಪ್ರಾಜೆಕ್ಟ್, ಕ್ರಿಯೇಟ್ ಆಗಿದೆ. |
02:08 | ಈ ವಿಭಾಗದಲ್ಲಿ, ನಾವು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿ ಒಂದು 'Jlabel' ಅನ್ನು ಫಾರ್ಮ್ ಗೆ ಸೇರಿಸುವೆವು. |
02:14 | ಮೊದಲು ನಾವು 'Jframe' ಫಾರ್ಮ್ ಅನ್ನು ಕ್ರಿಯೇಟ್ ಮಾಡೋಣ. |
02:17 | 'Projects' ವಿಂಡೋದಲ್ಲಿ, 'ImageDisplayApp' ಎಂಬ ನೋಡ್ ಅನ್ನು ವಿಸ್ತರಿಸಿ. |
02:23 | 'Source Packages' ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ' New >> Jframe Form' ಅನ್ನು ಆರಿಸಿಕೊಳ್ಳಿ. |
02:30 | 'Class Name' ಎಂಬ ಫೀಲ್ಡ್ ನಲ್ಲಿ, 'ImageDisplay' ಎಂದು ಟೈಪ್ ಮಾಡಿ. |
02:37 | 'Package' ಎಂಬ ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: 'org.me.myimageapp' |
02:45 | ಮತ್ತು 'Finish' ಮೇಲೆ ಕ್ಲಿಕ್ ಮಾಡಿ. |
02:48 | ಈಗ ನಾವು 'Jlabel' ಅನ್ನು ಸೇರಿಸೋಣ. |
02:52 | IDE ನ ಬಲ ಭಾಗದಲ್ಲಿರುವ ' Palette ' ದಲ್ಲಿ, ' Label' ಘಟಕವನ್ನು ಆಯ್ಕೆಮಾಡಿ ಮತ್ತು ಅದನ್ನು 'Jframe' ಗೆ ಎಳೆದುತನ್ನಿ. |
03:01 | ಸಧ್ಯಕ್ಕೆ ನಿಮ್ಮ ಫಾರ್ಮ್ ಹೀಗೆ ಕಾಣಬೇಕು. |
03:06 | ನೀವು ಅಪ್ಲಿಕೇಶನ್ ನಲ್ಲಿ, ಇಮೇಜ್ ಗಳನ್ನು ಅಥವಾ ಇತರ ರಿಸೊರ್ಸ್ ಗಳನ್ನು ಬಳಸಿದಾಗ, ಸಾಮಾನ್ಯವಾಗಿ ನೀವು 'ರಿಸೊರ್ಸ್' ಗಾಗಿ ಬೇರೊಂದು ಜಾವಾ ಪ್ಯಾಕೇಜ್ ಅನ್ನು ರಚಿಸುತ್ತೀರಿ. |
03:15 | ನಿಮ್ಮ ಲೋಕಲ್ ಫೈಲ್ ಸಿಸ್ಟಂ ದಲ್ಲಿ, ಒಂದು ಪ್ಯಾಕೇಜ್, ಒಂದು ಫೋಲ್ಡರ್ ಗೆ ಸಂಬಂಧಿಸಿರುತ್ತದೆ. |
03:19 | 'Projects' ವಿಂಡೋ ದಲ್ಲಿ, 'org.me.myimageapp' ಎಂಬ ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'New > Java Package' ಅನ್ನು ಆರಿಸಿಕೊಳ್ಳಿ. |
03:30 | 'New Package Wizard' ದಲ್ಲಿ, 'org.me.myimageapp'ಗೆ '.resources'ಅನ್ನು ಸೇರಿಸಿ. |
03:40 | ಆದ್ದರಿಂದ, ಹೊಸ ಪ್ಯಾಕೇಜ್ ಅನ್ನು ಈಗ 'org.me.myimageapp.resources' ಎಂದು ಕರೆಯಲಾಗುತ್ತದೆ. |
03:47 | 'Finish' ಮೇಲೆ ಕ್ಲಿಕ್ ಮಾಡಿ. |
03:49 | ನೀವು ಇಮೇಜ್ ಅನ್ನು ಸೇರಿಸಿದಾಗ, 'Projects' ವಿಂಡೋ ದಲ್ಲಿ, ಅದು ನಿಮಗೆ 'org.me.myimageapp.resources' ಪ್ಯಾಕೇಜ್ ನಲ್ಲಿ ಕಾಣಿಸಬೇಕು. |
03:59 | ಈ ಅಪ್ಲಿಕೇಶನ್ ನಲ್ಲಿ, ಇಮೇಜ್ ಅನ್ನು ' Jlabel ' ಕಾಂಪೊನೆಂಟ್ ಒಳಗೆ ಸೇರಿಸಲಾಗುತ್ತದೆ (ಎಂಬೆಡ್ ಮಾಡಲಾಗುತ್ತದೆ). |
04:04 | ಈಗ ನಾವು 'label' ಗೆ ಇಮೇಜ್ ಅನ್ನು ಸೇರಿಸೋಣ. |
04:08 | 'GUI designer' ನಲ್ಲಿ, ನಿಮ್ಮ 'ಫಾರ್ಮ್' ಗೆ ನೀವು ಸೇರಿಸಿದ 'label' ಅನ್ನು ಆಯ್ಕೆಮಾಡಿ. |
04:14 | 'Properties' ವಿಂಡೋದಲ್ಲಿ, 'Palette' ನ ಕೆಳಗೆ, ವಿಂಡೋದ ಬಲ ಭಾಗದಲ್ಲಿ, ಕೆಳಗೆ 'ಐಕಾನ್' ಎಂಬ ಪ್ರಾಪರ್ಟೀ ಕಡೆಗೆ ಸ್ಕ್ರೋಲ್ ಮಾಡಿ. |
04:23 | ellipsis (...) (ಎಲಿಪ್ಸಿಸ್) ಮೇಲೆ ಅಥವಾ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ. |
04:30 | icon Property ಎಂಬ ಡೈಲಾಗ್ ಬಾಕ್ಸ್ ನಲ್ಲಿ, 'Import to Project' ಮೇಲೆ ಕ್ಲಿಕ್ ಮಾಡಿ. |
04:34 | ಫೈಲ್ ಆಯ್ಕೆಮಾಡುವಲ್ಲಿ, ನೀವು ಬಳಸಲು ಬಯಸುವ ಇಮೇಜ್ ಅನ್ನು ಹೊಂದಿರುವ ಫೋಲ್ಡರ್ ಗೆ ಹೋಗಿ. |
04:42 | 'Next' ಮೇಲೆ ಕ್ಲಿಕ್ ಮಾಡಿ. |
04:45 | wizard ನ Select target folder ಪೇಜ್ ನಲ್ಲಿ, resources ಎಂಬ ಫೋಲ್ಡರ್ ಅನ್ನು ಆಯ್ಕೆಮಾಡಿ |
04:49 | ಮತ್ತು 'Finish' ಮೇಲೆ ಕ್ಲಿಕ್ ಮಾಡಿ. |
04:52 | 'Finish' ಅನ್ನು ಕ್ಲಿಕ್ ಮಾಡಿದ ನಂತರ, IDE ಯು ಇಮೇಜ್ ಅನ್ನು ನಿಮ್ಮ ಪ್ರಾಜೆಕ್ಟ್ ನಲ್ಲಿ ಕಾಪಿ ಮಾಡುತ್ತದೆ. |
04:57 | ಆದ್ದರಿಂದ, ನೀವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್' ಮಾಡಿದಾಗ, ಇಮೇಜ್ ಅನ್ನು ಡಿಸ್ಟ್ರಿಬ್ಯುಟ ಮಾಡಬಹುದಾದ ' JAR' ಪೈಲ್ ನಲ್ಲಿ ಸೇರಿಸಲಾಗುತ್ತದೆ. |
05:07 | ಇಲ್ಲಿ 'OK' ಅನ್ನು ಕ್ಲಿಕ್ ಮಾಡಿ. |
05:11 | ಮತ್ತು, ನಿಮ್ಮ project ನೋಡ್ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean and Build' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
05:18 | ನೀವು ಈಗ Files ಮೆನ್ಯು ಗೆ ಹೋಗಿ ಮತ್ತು build ಫೋಲ್ಡರ್ ಅಡಿಯಲ್ಲಿ, |
05:29 | dist ಫೋಲ್ಡರ್ ಕೆಳಗೆ, ನೀವು 'jar' ಫೈಲ್ ಅನ್ನು ನೋಡಬಹುದು. |
05:33 | ಇದು, ಇಮೇಜ್ ಅನ್ನು ತಲುಪಲು, 'imagedisplay' class ನಲ್ಲಿ ಕೋಡ್ ಅನ್ನು ತಯಾರಿಸುತ್ತದೆ. |
05:38 | ನಿಮ್ಮ ಫಾರ್ಮ್ ನ 'Design' view ನಲ್ಲಿ, ಲೇಬಲ್ ನಲ್ಲಿ, ಇದು ನಿಮ್ಮ ಇಮೇಜ್ ಅನ್ನು ಸಹ ಪ್ರದರ್ಶಿಸುತ್ತದೆ. |
05:43 | ಈ ಹಂತದಲ್ಲಿ, 'ಫಾರ್ಮ್' ಚೆನ್ನಾಗಿ ಕಾಣುವಂತೆ ಮಾಡಲು, ನೀವು ಕೆಲವು ಸರಳ ಕ್ರಿಯೆಗಳನ್ನು ಮಾಡಬಹುದು. |
05:48 | 'Properties' ವಿಂಡೋನಲ್ಲಿ, 'Text' ಎಂಬ ಪ್ರಾಪರ್ಟಿ ಯನ್ನು ಆರಿಸಿ, |
05:56 | ಮತ್ತು ' jLabel1' ಅನ್ನು ಡಿಲೀಟ್ ಮಾಡಿ. |
06:04 | ಆ ವ್ಯಾಲ್ಯು, 'GUI Builder' ನಿಂದ ಲೇಬಲ್ ಗಾಗಿ, ಡಿಸ್ಪ್ಲೇ ಟೆಕ್ಸ್ಟ್ ಎಂದು ಜನರೇಟ್ ಆಗಿತ್ತು. |
06:10 | ಆದಾಗ್ಯೂ, ಟೆಕ್ಸ್ಟ್ ನ ಬದಲಾಗಿ ಇಮೇಜ್ ಅನ್ನು ಡಿಸ್ಪ್ಲೇ ಮಾಡಲು ನೀವು ಲೇಬಲ್ ಅನ್ನು ಬಳಸುತ್ತಿರುವಿರಿ. |
06:15 | ಹಾಗಾಗಿ, ಈ ಟೆಕ್ಸ್ಟ್ ನ ಅಗತ್ಯವಿಲ್ಲ. |
06:18 | ಈಗ, 'ಲೇಬಲ್' ಅನ್ನು 'ಫಾರ್ಮ್' ನ ಮಧ್ಯದಲ್ಲಿರಿಸಲು ಅದನ್ನು ಎಳೆಯೋಣ. |
06:26 | 'GUI Designer' ನಲ್ಲಿ, ' Source' ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
06:30 | ಕೆಳಗೆ, 'Generated Code' ಎಂಬ ಸಾಲಿಗೆ ಸ್ಕ್ರೋಲ್ ಮಾಡಿ. |
06:33 | 'GUI Designer' ರಚಿಸಿದ ಕೋಡ್ ಅನ್ನು ಪ್ರದರ್ಶಿಸಲು, 'Generated Code' ಎಂಬ ಸಾಲಿನ ಎಡಗಡೆ ಇರುವ ಅಧಿಕ ಚಿಹ್ನೆಯನ್ನು (+) ಕ್ಲಿಕ್ ಮಾಡಿ. |
06:42 | ಇಲ್ಲಿ, ಇದು ಕೀಲೈನ್ ಆಗಿದೆ. |
06:49 | 'JLabel1' ನ ಐಕಾನ್ ಪ್ರಾಪರ್ಟಿ ಗಾಗಿ, ನೀವು 'Property editor' ಅನ್ನು ಬಳಸಿದ್ದರಿಂದ, 'IDE', 'setIcon' (ಸೆಟ್ ಐಕಾನ್) ಮೆಥಡ್ ಅನ್ನು ಜನರೇಟ್ ಮಾಡಿದೆ. |
06:57 | ಈ ಮೆಥಡ್ ನ ಪ್ಯಾರಾಮೀಟರ್, 'ImageIcon' (ಇಮೇಜ್ ಐಕಾನ್) ಎಂಬ ಯಾವುದೋ ಒಂದು ಕ್ಲಾಸ್ ನ ಒಳಗೆ ಇರುವ, 'getResource ()' ಎಂಬ ಮೆಥೆಡ್ ಗೆ ಕಾಲ್ ಅನ್ನು ಹೊಂದಿದೆ. |
07:10 | ಒಮ್ಮೆ ನಿಮ್ಮ ಇಮೇಜ್ ಅನ್ನು ಸೇರಿಸಿ ಆದಮೇಲೆ, ' Design ' ವ್ಯೂ ನಲ್ಲಿ ಇಮೇಜ್ ಮೇಲೆ ರೈಟ್ ಕ್ಲಿಕ್ ಮಾಡಿ. |
07:19 | Events > Mouse > mouseClicked ಮೇಲೆ ಕ್ಲಿಕ್ ಮಾಡಿ. |
07:24 | ಈ ವ್ಯೂ ಅನ್ನು, ' Source' ಮೋಡ್ ಗೆ ಬದಲಾಯಿಸಲಾಗಿದೆ. |
07:28 | 'mouse-click' ಮಾಡಿದಾಗ, ನಿಮ್ಮ ಕ್ರಿಯೆಯನ್ನು ಕಸ್ಟಮೈಸ್ ಮಾಡಲು, ಇಲ್ಲಿ ನೀವು ಕೋಡ್ ಅನ್ನು ಸೇರಿಸಬಹುದು. |
07:33 | GUI ನಲ್ಲಿ, ಇಮೇಜ್ ಅನ್ನು ಕ್ಲಿಕ್ ಮಾಡಿದಾಗ, ಒಂದು 'ಪಾಪ್-ಅಪ್' ಅನ್ನು ತೋರಿಸಲು, ನಾನು ಕೋಡ್ ನ ಕೆಲವು ಸಾಲುಗಳನ್ನು ಸೇರಿಸುತ್ತೇನೆ. |
08:00 | ಪಾಪ್-ಅಪ್ ಅನ್ನು ತೋರಿಸಲು, ಈಗ ನಾನು ಕೋಡ್ ನ ಕೆಲವು ಸಾಲುಗಳನ್ನು ಸೇರಿಸಿದ್ದೇನೆ. |
08:05 | ಮೊದಲು, ನಾನು 'ಪಾಪ್-ಅಪ್' ಗಾಗಿ, ಒಂದು ಹೊಸ 'Jframe' ಅನ್ನು ತಯಾರಿಸಿದ್ದೇನೆ. |
08:12 | ಮತ್ತು, ನಾನು 'defaultCloseOperation' ಅನ್ನು ಸೆಟ್ ಮಾಡಿದ್ದೇನೆ. |
08:15 | ಕೊನೆಯದಾಗಿ, 'ಪಾಪ್-ಅಪ್' ಗಾಗಿ ಟೆಕ್ಸ್ಟ್ ಅನ್ನು ಒದಗಿಸಿದ್ದೇನೆ. |
08:24 | ಕೋಡ್ ನ ಈ ಲೈನ್ ಗಳನ್ನು ಸೇರಿಸಿದ ನಂತರ, ಅಗತ್ಯವಿರುವ ಪ್ಯಾಕೇಜ್ ಗಳನ್ನು ಇಂಪೋರ್ಟ್ ಮಾಡೋಣ. ಇದನ್ನು ಫೈಲ್ ನ ಆರಂಭದಲ್ಲಿ, ಎರಡು ಸ್ಟೇಟ್ಮೆಂಟ್ ಗಳನ್ನು ಸೇರಿಸುವ ಮೂಲಕ ಮಾಡುತ್ತೇವೆ. |
08:36 | import javax.swing.*; |
08:45 | ಮತ್ತು import java.awt.*; ಗಳನ್ನು ಸೇರಿಸಿ. |
08:53 | ಇದು, ಈ ಪ್ರೋಗ್ರಾಂಗೆ ಅವಶ್ಯಕವಾದ 'ಪ್ಯಾಕೇಜ್' ಗಳನ್ನು ಇಂಪೋರ್ಟ್ ಮಾಡುತ್ತದೆ. |
08:59 | ಈಗ ನಾವು, ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ. |
09:02 | ಇಮೇಜ್ ಅನ್ನು ಪಡೆಯಲು ಮತ್ತು ಅದನ್ನು ಪ್ರದರ್ಶಿಸಲು ನಾವು ಕೋಡ್ ಅನ್ನು ಬರೆದಿದ್ದೇವೆ. |
09:07 | ಇಮೇಜ್ ಅನ್ನು ಆಕ್ಸೆಸ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು, ನಾವು ಅಪ್ಲಿಕೇಶನ್ ಅನ್ನು 'ಬಿಲ್ಡ್' ಮತ್ತು 'ರನ್ ' ಮಾಡೋಣ. |
09:12 | ಮೊದಲಿಗೆ, ನಾವು ಪ್ರೊಜೆಕ್ಟ್ ನ 'Main class' ಅನ್ನು ಸೆಟ್ ಮಾಡಬೇಕಾಗಿದೆ. |
09:16 | ನೀವು 'Main class' ಅನ್ನು ಸೆಟ್ ಮಾಡಿದಾಗ, ನಿಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡುವಾಗ, ಯಾವ ಕ್ಲಾಸ್ ಅನ್ನು ರನ್ ಮಾಡಬೇಕು ಎಂದು 'IDE'ಗೆ ತಿಳಿಯುತ್ತದೆ. |
09:21 | ಅಲ್ಲದೆ, ನೀವು ಅಪ್ಲಿಕೇಶನ್ ಅನ್ನು ಬಿಲ್ಡ್ ಮಾಡಿದಾಗ, ಅಪ್ಲಿಕೇಶನ್ ನ 'JAR' ಫೈಲ್ ನಲ್ಲಿಯ 'Main class' ಎಲಿಮೆಂಟ್ ಅನ್ನು ಜನರೇಟ್ ಮಾಡಲಾಗುತ್ತದೆ ಎಂದು ಇದು ಖಚಿತಪಡಿಸುತ್ತದೆ. |
09:33 | ಇಲ್ಲಿ, 'Projects' ವಿಂಡೋದಲ್ಲಿ, 'ImageDisplayApp' ಪ್ರಾಜೆಕ್ಟ್ 'ನೋಡ್'ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Properties ಅನ್ನು ಆಯ್ಕೆಮಾಡಿ. |
09:41 | 'Project Properties' ಎಂಬ ಡೈಲಾಗ್-ಬಾಕ್ಸ್ ನಲ್ಲಿ, ಎಡಭಾಗದಲ್ಲಿಯ Run ಎಂಬ category ಯನ್ನು ಆಯ್ಕೆಮಾಡಿ. |
09:47 | Browse ಬಟನ್ ಅನ್ನು ಕ್ಲಿಕ್ ಮಾಡಿ. ಅದು 'Main Class' ಫೀಲ್ಡ್ ನ ಪಕ್ಕದಲ್ಲಿದೆ. |
09:51 | 'org.me.myimageapp.ImageDisplay' ಅನ್ನು ಆಯ್ಕೆಮಾಡಿ ಮತ್ತು ' Select Main Class' ಅನ್ನು ಕ್ಲಿಕ್ ಮಾಡಿ. |
10:01 | ಇಲ್ಲಿ 'OK' ಎನ್ನಿ. |
10:05 | ಈಗ, 'Project' ನೋಡ್ ನ ಮೆಲೆ ರೈಟ್-ಕ್ಲಿಕ್ ಮಾಡಿ ಮತ್ತು 'Clean & Build' ಅನ್ನು ಆಯ್ಕೆಮಾಡಿ. |
10:11 | 'Files ' ವಿಂಡೋದಲ್ಲಿ, ಅಪ್ಲಿಕೇಶನ್ ನ Build ಪ್ರಾಪರ್ಟೀ ಗಳನ್ನು ನೀವು ವೀಕ್ಷಿಸಬಹುದು. |
10:20 | Build ಫೋಲ್ಡರ್, ಕಂಪೈಲ್ ಮಾಡಿದ 'ಕ್ಲಾಸ್' ಅನ್ನು ಒಳಗೊಂಡಿದೆ. |
10:23 | dist ಫೋಲ್ಡರ್, ಎಕ್ಸಿಕ್ಯುಟ್ ಮಾಡಬಹುದಾದ ಒಂದು JAR ಫೈಲ್ ಅನ್ನು ಹೊಂದಿರುತ್ತದೆ. ಈ ಜಾರ್ ಫೈಲ್, ಕಂಪೈಲ್ ಮಾಡಿದ 'ಕ್ಲಾಸ್' ಮತ್ತು 'ಇಮೇಜ್ ' ಅನ್ನು ಒಳಗೊಂಡಿದೆ. |
10:32 | ಈಗ ಟೂಲ್ ಬಾರ್ ನಿಂದ, 'Run' ಅನ್ನು ಆಯ್ಕೆಮಾಡಿ. |
10:34 | ನಮ್ಮ 'output' ವಿಂಡೋ, ಇಮೇಜ್ ನೊಂದಿಗೆ ತೆರೆಯುತ್ತದೆ. |
10:39 | ನಾನು ಈಗ ಈ ಇಮೇಜ್ ಮೇಲೆ ಕ್ಲಿಕ್ ಮಾಡುತ್ತೇನೆ. |
10:42 | ಮತ್ತು ನೀವು ಮೇಲ್ಭಾಗದಲ್ಲಿ ಪಾಪ್-ಅಪ್ ಅನ್ನು ನೋಡಬಹುದು. ಇದು ಇಮೇಜ್ ನ ವಿವರಗಳನ್ನು ತೋರಿಸುತ್ತದೆ. |
10:50 | ಈಗ, ಅಸೈನ್ಮೆಂಟ್ ಸಮಯ! |
10:54 | ಈ ಟ್ಯುಟೋರಿಯಲ್ ನಲ್ಲಿ ತೋರಿಸಿದಂತಹ, ನಾಲ್ಕು ಇಮೇಜ್ ಗಳನ್ನು ಹೊಂದಿರುವ ಮತ್ತೊಂದು GUI ಅನ್ನು ರಚಿಸಿ. |
11:01 | ಪ್ರತಿಯೊಂದು ಇಮೇಜ್ ಗಾಗಿ , ' keyboard event, mouse-motion event, mouse-click event, mouse-wheel event' ಮುಂತಾದ ವಿವಿಧ ಇವೆಂಟ್ ಗಳನ್ನು ಸೂಚಿಸಿ. |
11:12 | ನಾನು ಈಗಾಗಲೇ ಅಸೈನ್ಮೆಂಟ್ ಅನ್ನು ತಯಾರಿಸಿದ್ದೇನೆ. |
11:17 | ಅಸೈನ್ಮೆಂಟ್ ಪ್ರಾಜೆಕ್ಟ್ ಅನ್ನು ನಾವು 'ರನ್' ಮಾಡೋಣ. |
11:20 | ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಬೇಕು. |
11:26 | ನನ್ನ ಅಸೈನ್ಮೆಂಟ್ ಗಾಗಿ, ಇಲ್ಲಿ ನಾನು ಕೀಬೋರ್ಡ್-ಇವೆಂಟ್ ಗಳು ಮತ್ತು ಮೌಸ್-ಇವೆಂಟ್ ಗಳನ್ನು ರಚಿಸಿದ್ದೇನೆ. |
11:34 | ಸಂಕ್ಷಿಪ್ತವಾಗಿ, |
11:36 | ನಾವು ಒಂದು 'Jframe ' ಫಾರ್ಮ್ ಅನ್ನು ಕ್ರಿಯೇಟ್ ಮಾಡಿದ್ದೇವೆ. |
11:39 | ಇಮೇಜ್ ಗಾಗಿ, ಒಂದು ಪ್ಯಾಕೇಜ್ ಅನ್ನು ಸೇರಿಸಿದ್ದೇವೆ. |
11:41 | ಲೇಬಲ್ ನಲ್ಲಿ, ಇಮೇಜ್ ಅನ್ನು ಪ್ರದರ್ಶಿಸಿದ್ದೇವೆ. |
11:44 | ಮತ್ತು ಮೌಸ್-ಈವೆಂಟ್ ಗಳು ಮತ್ತು ಪಾಪ್-ಅಪ್ ಗಳನ್ನು ಸಹ ಕ್ರಿಯೇಟ್ ಮಾಡಿದ್ದೇವೆ. |
11:49 | ಸ್ಕ್ರೀನ್ ಮೇಲೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ. |
11:53 | ಈ ವೀಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
11:56 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋ ಅನ್ನು ಡೌನ್ಲೋಡ್ ಮಾಡಿ ನೋಡಬಹುದು. |
12:02 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
12:07 | ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. |
12:11 | ಹೆಚ್ಚಿನ ಮಾಹಿತಿಗಾಗಿ,
'contact@spoken-tutorial.org' ಅನ್ನು ಸಂರ್ಪಕಿಸಿ. |
12:19 | 'Spoken Tutorial' ಪ್ರಕಲ್ಪವು, 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
12:23 | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
12:30 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro. |
12:42 | ಈ ಟ್ಯುಟೋರಿಯಲ್, 'IT for Change' ಅವರ ಕೊಡುಗೆಯಾಗಿದೆ. |
12:46 | ಧನ್ಯವಾದಗಳು. |