Netbeans/C2/Developing-a-Sample-Web-Application/Kannada
From Script | Spoken-Tutorial
Time | Narration |
00:01 | ನಮಸ್ಕಾರ. |
00:02 | Netbeans IDE ನಲ್ಲಿ Developing Web Applications ಅನ್ನು ಪರಿಚಯಿಸುವ ಈ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:08 | ನಿಮಗೆ Netbeans ನೊಂದಿಗೆ ಕೆಲಸಮಾಡುವುದು ತಿಳಿದಿದೆ ಎಂದು ನಾವು ಭಾವಿಸುತ್ತೇವೆ. |
00:12 | ಇಲ್ಲದಿದ್ದರೆ, Netbeansಗೆ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು Spoken Tutorial ವೆಬ್ಸೈಟ್ ಅನ್ನು ನೋಡಿ. |
00:19 | ಮೊದಲನೆಯ ಟ್ಯುಟೋರಿಯಲ್ ಅನ್ನು ವೀಕ್ಷಿಸಿದ ನಂತರ, ನೀವು |
00:22 | Netbeans ನ ಇನ್ಸ್ಟಾಲ್ಲೇಶನ್ ಹಾಗೂ ಇಂಟರ್ಫೇಸ್ ಗಳನ್ನು ಈಗಾಗಲೇ ಚೆನ್ನಾಗಿ ತಿಳಿದಿರಬೇಕು. |
00:25 | ಹಿಂದಿನ ಟ್ಯುಟೋರಿಯಲ್, ಒಂದು ಹೊಸ ಪ್ರೊಜೆಕ್ಟ್ ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ಸಹ ನಿಮಗೆ ಕಲಿಸುತ್ತದೆ. |
00:29 | ಇದನ್ನು ಮಾಡಿತೋರಿಸಲು, ನಾನು:
Linux ಆಪರೇಟಿಂಗ್ ಸಿಸ್ಟಂ Ubuntu, ಆವೃತ್ತಿ 11.04 ಹಾಗೂ Netbeans IDE ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದ್ದೇನೆ. |
00:40 | ಈ ಟ್ಯುಟೋರಿಯಲ್ ನಲ್ಲಿ, 'ವೆಬ್-ಅಪ್ಲಿಕೇಶನ್'ಗಳನ್ನು ಡೆವಲಪ್ ಮಾಡಲು ನೆಟ್ಬೀನ್ಸ್ (Netbeans) ಅನ್ನು ಬಳಸುವುದರ ಬಗ್ಗೆ ನಿಮಗೆ ಹೇಳಲಾಗುತ್ತದೆ. |
00:45 | ನಾವು - |
00:46 | * ಒಂದು 'ವೆಬ್-ಅಪ್ಲಿಕೇಶನ್ ಪ್ರೊಜೆಕ್ಟ್' ಅನ್ನು ಸೆಟ್-ಅಪ್ ಮಾಡುವುದು |
00:49 | * 'ವೆಬ್-ಅಪ್ಲಿಕೇಶನ್ ಗಳ' ಸೋರ್ಸ್ ಫೈಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡುವುದು |
00:52 | * 'ಜಾವಾ ಪ್ಯಾಕೇಜ್' ಅನ್ನು ಮತ್ತು ಒಂದು 'ಜಾವಾ ಸೋರ್ಸ್ ಫೈಲ್' ಅನ್ನು ಕ್ರಿಯೇಟ್ ಮಾಡುವುದು |
00:56 | * Getter (ಗೆಟರ್) ಹಾಗೂ Setter (ಸೆಟರ್) ಮೆಥಡ್ ಗಳನ್ನು ಜನರೇಟ್ ಮಾಡುವುದು (ರಚಿಸುವುದು) |
00:59 | * ಡೀಫಾಲ್ಟ್ 'Java Server Pages' ಫೈಲನ್ನು ಎಡಿಟ್ ಮಾಡುವುದು |
01:02 | * 'JavaServer pages' ಫೈಲನ್ನು ರಚಿಸುವುದು ಹಾಗೂ |
01:05 | * ಕೊನೆಯದಾಗಿ, ನಮ್ಮ 'ವೆಬ್-ಅಪ್ಲಿಕೇಶನ್ ಪ್ರೊಜೆಕ್ಟ್' ಅನ್ನು ರನ್ ಮಾಡುವುದು ಇವುಗಳನ್ನು ನೋಡುವೆವು. |
01:08 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ: * Netbeans IDE |
01:13 | * Java Development Kit (JDK) ಆವೃತ್ತಿ 6 |
01:17 | * GlassFish Server Open Source Edition (ಗ್ಲಾಸ್ ಫಿಶ್ ಸರ್ವರ್ ಓಪನ್ ಸೋರ್ಸ್ ಎಡಿಶನ್) ಇವುಗಳು ಬೇಕು. |
01:20 | ಮೇಲೆ ಹೇಳಿದ ಎಲ್ಲವುಗಳನ್ನು, ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಿಂದ ಒಟ್ಟಾಗಿ ಡೌನ್ಲೋಡ್ ಮಾಡಬಹುದು. |
01:26 | ಈ ಟ್ಯುಟೋರಿಯಲ್, ಸರಳವಾದ ಒಂದು 'ವೆಬ್-ಅಪ್ಲಿಕೇಶನ್'ಅನ್ನು ಹೇಗೆ ರಚಿಸುವುದು, |
01:30 | ಒಂದು ಸರ್ವರ್ ಗೆ ಹೇಗೆ ಡಿಪ್ಲಾಯ್ ಮಾಡುವುದು (ಸಜ್ಜುಗೊಳಿಸುವುದು) |
01:32 | ಮತ್ತು ಬ್ರೌಸರ್ ನಲ್ಲಿ ಅದರ ನಿರೂಪಣೆಯನ್ನು ವೀಕ್ಷಿಸುವುದು ಇವುಗಳನ್ನು ಮಾಡಿತೋರಿಸುತ್ತದೆ. |
01:35 | ಅಪ್ಲಿಕೇಶನ್, ನಿಮ್ಮ ಹೆಸರನ್ನು ಇನ್ಪುಟ್ ಮಾಡಬೇಕೆಂದು ನಿಮ್ಮನ್ನು ಕೇಳಲು 'Java Server Pages' (JSP) ಅನ್ನು ಬಳಸಿಕೊಳ್ಳುತ್ತದೆ. |
01:42 | ಅದು, ನಂತರ HTTP ಸೆಶನ್ ಅವಧಿಯಲ್ಲಿ ಹೆಸರನ್ನು ಉಳಿಸಿಕೊಳ್ಳಲು JavaBeans ಘಟಕವನ್ನು ಬಳಸುತ್ತದೆ. |
01:48 | ಮತ್ತು, ನಂತರ ಎರಡನೆಯ 'JSP ಪೇಜ್' ನಲ್ಲಿ, ಔಟ್ಪುಟ್ ಅನ್ನು ಪಡೆದುಕೊಳ್ಳುತ್ತದೆ. |
01:51 | ಈಗ ನಾವು Netbeans ಗೆ ಹೋಗೋಣ ಮತ್ತು ನಮ್ಮ 'ವೆಬ್-ಅಪ್ಲಿಕೇಶನ್ ಪ್ರೊಜೆಕ್ಟ್' ಅನ್ನು ತಯಾರಿಸೋಣ. |
01:58 | File ಮೆನ್ಯು ನಿಂದ New Projectಅನ್ನು ಆಯ್ಕೆಮಾಡಿ. |
02:01 | Categories ನ ಅಡಿಯಲ್ಲಿ Java Web ಅನ್ನು ಆಯ್ಕೆಮಾಡಿ. |
02:04 | Projects ನ ಅಡಿಯಲ್ಲಿ, Web Application ಅನ್ನು ಆಯ್ಕೆಮಾಡಿ ಮತ್ತು Next ಅನ್ನು ಕ್ಲಿಕ್ ಮಾಡಿ. |
02:09 | ನಿಮ್ಮ ಪ್ರೊಜೆಕ್ಟ್ ಗೆ ಒಂದು ಹೆಸರನ್ನು ಕೊಡಿ. ನಾನು ನನ್ನ ಪ್ರೊಜೆಕ್ಟ್ ಅನ್ನು "HelloWeb" ಎಂದು ಹೆಸರಿಸುವೆನು. |
02:15 | ನಿಮ್ಮ ಕಂಪ್ಯೂಟರ್ ಮೇಲಿನ ಯಾವುದೇ ಡಿರೆಕ್ಟರಿಯನ್ನು Project Location ಗಾಗಿ ಸೂಚಿಸಿ. |
02:20 | Next ಅನ್ನು ಕ್ಲಿಕ್ ಮಾಡಿ. |
02:22 | Server and Settings ಪ್ಯಾನೆಲ್ ತೆರೆದುಕೊಳ್ಳುತ್ತದೆ. |
02:25 | ನಿಮ್ಮ ಅಪ್ಲಿಕೇಶನ್ ಗಾಗಿ ನೀವು ಬಳಸಬೇಕೆಂದಿರುವ Java ದ ಆವೃತ್ತಿಯನ್ನು ಆಯ್ಕೆಮಾಡಿ. |
02:29 | ಮತ್ತು, ನಿಮ್ಮ ಅಪ್ಲಿಕೇಶನ್ ಅನ್ನು ನಿಯೋಜಿಸಬೇಕಾದ ಸರ್ವರ್ ಅನ್ನು ಆಯ್ಕೆಮಾಡಿ. |
02:34 | Next ಅನ್ನು ಕ್ಲಿಕ್ ಮಾಡಿ. |
02:36 | Frameworks ಪ್ಯಾನೆಲ್ ನಲ್ಲಿ, |
02:38 | ಪ್ರೊಜೆಕ್ಟ್ ಅನ್ನು ಕ್ರಿಯೇಟ್ ಮಾಡಲು Finish ಅನ್ನು ಕ್ಲಿಕ್ ಮಾಡಿ. |
02:41 | IDE, 'HelloWeb' ಪ್ರೊಜೆಕ್ಟ್ ಫೋಲ್ಡರ್ ಅನ್ನು ಕ್ರಿಯೇಟ್ ಮಾಡುತ್ತದೆ. |
02:46 | ನಿಮ್ಮ ಎಲ್ಲ ಸೋರ್ಸ್ ಗಳನ್ನು ಮತ್ತು ಪ್ರೊಜೆಕ್ಟ್ ಮೆಟಾಡೇಟಾಅನ್ನು ಈ ಫೋಲ್ಡರ್ ಒಳಗೊಂಡಿದೆ. |
02:51 | ವೆಲ್ಕಮ್ ಪೇಜ್, index.jsp, ಮೇನ್ ವಿಂಡೋದಲ್ಲಿ 'Source Editor' ನಲ್ಲಿ ತೆರೆದುಕೊಳ್ಳುತ್ತದೆ. |
02:57 | ಇಲ್ಲಿ ಎಡಭಾಗದಲ್ಲಿ,Files ವಿಂಡೋದಲ್ಲಿ, ಪ್ರೊಜೆಕ್ಟ್ ನ ಫೈಲ್ ಸ್ಟ್ರಕ್ಚರ್ ಅನ್ನು |
03:05 | ಮತ್ತು Projects ವಿಂಡೋದಲ್ಲಿ ಅದರ ಲಾಜಿಕಲ್ ಸ್ಟ್ರಕ್ಚರ್ ಅನ್ನು ನೀವು ನೋಡಬಹುದು. |
03:10 | ಸೋರ್ಸ್ ಫೈಲ್ ಗಳನ್ನು ಕ್ರಿಯೇಟ್ ಮತ್ತು ಎಡಿಟ್ ಮಾಡುವುದು IDE ಮಾಡುವ ಅತ್ಯಂತ ಮುಖ್ಯ ಕೆಲಸವಾಗಿದೆ. |
03:15 | ಈಗ, Projects ವಿಂಡೋದಲ್ಲಿ, Source Packages ಎಂಬ ನೋಡ್ ಅನ್ನು ವಿಸ್ತರಿಸಿ. |
03:20 | 'Source Packages' ನೋಡ್, ಒಂದು ಖಾಲಿ 'default package' ನೋಡ್ ಅನ್ನು ಮಾತ್ರ ಹೊಂದಿರುವುದನ್ನು ಗಮನಿಸಿ. |
03.25 | 'Source Packages' ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು New > Java Class ಆರಿಸಿಕೊಳ್ಳಿ. |
03:32 | ನಿಮ್ಮ class ಗೆ ಒಂದು ಹೆಸರನ್ನು ಕೊಡಿ. ನಾನು class ಅನ್ನು "NameHandler" ಎಂದು ಹೆಸರಿಸುವೆನು. |
03:40 | ಮತ್ತು Package ಕೊಂಬೊ-ಬಾಕ್ಸ್ ನಲ್ಲಿ, "org.mypackage.hello" ಎಂದು ಟೈಪ್ ಮಾಡಿ |
03:54 | Finish ಅನ್ನು ಕ್ಲಿಕ್ ಮಾಡುತ್ತೇನೆ. |
03:57 | 'NameHandler.java' ಫೈಲ್, 'Source editor' ನಲ್ಲಿ ತೆರೆದುಕೊಳ್ಳುತ್ತದೆ. |
04:01 | ಈಗ, ನೇರವಾಗಿ class ಡಿಕ್ಲೆರೇಶನ್ ನ ಕೆಳಗೆ ಒಂದು 'String' (ಸ್ಟ್ರಿಂಗ್) ವೇರಿಯೇಬಲ್ ಅನ್ನು ನಾವು ಡಿಕ್ಲೇರ್ ಮಾಡೋಣ. |
04:07 | ನಾನು 'String name' ಎಂಬ ಒಂದು string ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡುವೆನು ಮತ್ತು |
04:12 | 'public NameHandler()' ಎಂಬ ಒಂದು 'ಕನ್ಸ್ಟ್ರಕ್ಟರ್' (constructor) ಅನ್ನು ಸಹ 'class' ಗೆ ಸೇರಿಸುವೆನು. |
04:23 | ಈಗ, ನಾನು 'ಕನ್ಸ್ಟ್ರಕ್ಟರ್' ನ ಒಳಗೆ name = null; ಎಂದು ಸಹ ಸೇರಿಸುತ್ತೇನೆ. |
04:30 | ನಂತರ ನಾವು, Getter (ಗೆಟರ್) ಮತ್ತು Setter (ಸೆಟರ್) ಮೆಥಡ್ ಗಳನ್ನು ರಚಿಸೋಣ. |
04:33 | 'Source Editor' ನಲ್ಲಿ 'name' ಫೀಲ್ಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ. ಕಾಂಟೆಕ್ಸ್ಚುಅಲ್ ಮೆನ್ಯುನಿಂದ, ಕ್ರಮವಾಗಿ 'Refactor' >> 'Encapsulate Fields' ಅನ್ನು ಆರಿಸಿಕೊಳ್ಳಿ. |
04:46 | 'ರಿ-ಫ್ಯಾಕ್ಟರಿಂಗ್' (Refactoring)- ಈಗಿರುವ ಕೋಡ್ ನ ಗಮನಿಸಬಹುದಾದ ವರ್ತನೆಯನ್ನು ಬದಲಾಯಿಸದೇ, ಅದರ ಸ್ಟ್ರಕ್ಚರ್ ಅನ್ನು ಸುಧಾರಿಸಲು ಇರುವ ಒಂದು ಶಿಸ್ತಿನ ತಂತ್ರಜ್ಞಾನ ಆಗಿದೆ. |
04:56 | ಸಂಕ್ಷಿಪ್ತವಾಗಿ, ವರ್ತನೆಯನ್ನು ಬದಲಾಯಿಸದೇ, ಕೋಡ್ ನ ಸ್ಟ್ರಕ್ಚರ್ ಅನ್ನು ನೀವು ಬದಲಾಯಿಸಬಹುದು. |
05:01 | 'Refactoring' ನೊಂದಿಗೆ, ನೀವು ಫೀಲ್ಡ್ ಗಳು, ಮೆಥಡ್ ಗಳು ಅಥವಾ ಕ್ಲಾಸ್ ಗಳನ್ನು, ಏನನ್ನೂ ಬದಲಾಯಿಸದೆ ಎಲ್ಲಿಯಾದರೂ ಸ್ಥಳಾಂತರಿಸಬಹುದು. |
05:08 | ನಾವು IDE ಗೆ ಹಿಂದಿರುಗೋಣ. |
05:11 | name ಫೀಲ್ಡ್ ಅನ್ನು ಪಟ್ಟಿ ಮಾಡುತ್ತ Encapsulate Fields ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
05:16 | ಡೀಫಾಲ್ಟ್ ಆಗಿ, Fields Visibility ಯನ್ನು "private" ಎಂದು |
05:20 | ಮತ್ತು Accessors Visibility ಯನ್ನು "public" ಎಂದು ಸೆಟ್ ಮಾಡಿರುವುದನ್ನು ಗಮನಿಸಿ. |
05:24 | class ವೇರಿಯೇಬಲ್ ಗಳಿಗಾಗಿ, 'ಆಕ್ಸೆಸ್ ಮಾಡಿಫೈಯರ್' (access modifier) ಅನ್ನು private ಎಂದು ನಿಗದಿಪಡಿಸಿರುವುದನ್ನು ಇದು ಸೂಚಿಸುತ್ತದೆ. |
05:30 | ಆದರೆ, getter ಮತ್ತು setter ಮೆಥಡ್ ಗಳನ್ನು 'public' ಮಾಡಿಫೈಯರ್ ಗಳೊಂದಿಗೆ ರಚಿಸಲಾಗುತ್ತದೆ. |
05:36 | Refactor ನ ಮೇಲೆ ಕ್ಲಿಕ್ ಮಾಡಿ. |
05:39 | name ಫೀಲ್ಡ್ ಗಾಗಿ, Getter ಹಾಗೂ Setter ಮೆಥಡ್ ಗಳನ್ನು ರಚಿಸಲಾಗಿದೆ. |
05:46 | class ವೇರಿಯೆಬಲ್ ಗಾಗಿ, ಮಾಡಿಫೈಯರ್ (modifier) ಅನ್ನು "private" ಎಂದು ಸೆಟ್ ಮಾಡಲಾಗಿದೆ. ಆದರೆ, getter ಹಾಗೂ setter ಮೆಥಡ್ ಗಳನ್ನು "public" ಮಾಡಿಫೈಯರ್ ನೊಂದಿಗೆ ರಚಿಸಲಾಗಿದೆ. |
05:56 | ಕೊನೆಯಲ್ಲಿ ನಿಮ್ಮ ಜಾವಾ 'class' ಹೀಗೆ ಕಾಣಬೇಕು. |
05:59 | ಆಮೇಲೆ, ನಾವು 'Default JavaServer Pages File' ಅನ್ನು ಎಡಿಟ್ ಮಾಡೋಣ. |
06:04 | ನಾವು 'Source editor' ನ ಮೇಲ್ತುದಿಯಲ್ಲಿ ತೋರಿಸಲಾದ 'index.jsp' ಫೈಲ್ ನ ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಮತ್ತೆ ಅದರತ್ತ ಗಮನಕೊಡೋಣ. |
06:11 | ಈಗ, ನಾವು Tools ಮೆನ್ಯು > Palette ಗೆ ಹೋಗಿ 'Palette manager' ಅನ್ನು ತೆರೆಯೋಣ ಮತ್ತು HTML/JSP code clips ನ ಮೇಲೆ ಕ್ಲಿಕ್ ಮಾಡೋಣ. |
06:21 | 'Palette manager' ತೆರೆದುಕೊಳ್ಳುತ್ತದೆ. |
06:26 | 'Palette manager' ನಲ್ಲಿ, HTML Forms ಆಯ್ಕೆಯನ್ನು ವಿಸ್ತರಿಸಿ. |
06:31 | Form ಐಟಂ ಅನ್ನು ಆಯ್ಕೆಮಾಡಿ. |
06:34 | ಇದನ್ನು ನಿಮ್ಮ Source Editor ನಲ್ಲಿ, h1 ಟ್ಯಾಗ್ ಗಳ ನಂತರ ಎಲ್ಲಿಯಾದರೂ ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ. |
06:42 | Insert Form ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
06:45 | ಸ್ಕ್ರೀನ್ ನ ಮೇಲೆ ತೋರಿಸಿದಂತೆ, |
06:49 | Action ಅನ್ನು "response.jsp" ಎಂದು, |
06:54 | Method ಅನ್ನು "GET" ಎಂದು, ವ್ಯಾಲ್ಯೂ ಗಳನ್ನು ನಿಗದಿಪಡಿಸೋಣ. |
06:56 | ಮತ್ತು, ನಾವು ನಮ್ಮ ಫಾರ್ಮ್ ಗೆ "Name Input Form" ಎಂದು ಒಂದು ಹೆಸರನ್ನು ಕೊಡೋಣ. |
07:04 | OK ಯನ್ನು ಕ್ಲಿಕ್ ಮಾಡಿ. |
07:07 | 'index.jsp' ಫೈಲ್ ಗೆ ಒಂದು HTML form ಅನ್ನು ಸೇರಿಸಲಾಗಿದೆ. |
07:13 | ಈಗ, Palette manager ನಿಂದ, ಒಂದು Text Input ಐಟಂ ಅನ್ನು ಆಯ್ಕೆಮಾಡಿ. ಇದನ್ನು, form ನ ಕ್ಲೋಸಿಂಗ್ ಟ್ಯಾಗ್ ಗಳ ಮೊದಲು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ. |
07:25 | Insert Text Input ಡೈಲಾಗ್-ಬಾಕ್ಸ್ ನಲ್ಲಿ, Name ಅನ್ನು "name" ಎಂದು, |
07:32 | Type ಅನ್ನು “text” ಎಂದು ಸೂಚಿಸಿ. |
07:34 | ಮತ್ತು OK ಮೇಲೆ ಕ್ಲಿಕ್ ಮಾಡಿ. |
07:36 | ಈಗ, form ಟ್ಯಾಗ್ ಗಳ ನಡುವೆ, ಒಂದು HTML input ಟ್ಯಾಗ್ ಅನ್ನು ಸೇರಿಸಲಾಗಿದೆ. |
07:41 | ನಾವು input ಟ್ಯಾಗ್ ನಿಂದ, ಖಾಲಿಇರುವ 'value' ಅಟ್ರಿಬ್ಯೂಟ್ ಅನ್ನು ತೆಗೆದುಹಾಕೋಣ. |
07:49 | ಈಗ, palette ನಿಂದ, Button ಐಟಂ ಅನ್ನು ಆಯ್ಕೆಮಾಡಿ. |
07:53 | ಕ್ಲೋಸಿಂಗ್ form ನ ಟ್ಯಾಗ್ ನ ಮೊದಲು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ. |
07:58 | Label ಅನ್ನು "OK" ಎಂದು, |
08:00 | Type ಅನ್ನು "submit" ಎಂದು ಕೊಡಿ |
08:03 | ಮತ್ತು ಇನ್ನೊಮ್ಮೆ OK ಮೇಲೆ ಕ್ಲಿಕ್ ಮಾಡಿ. |
08:05 | ಫಾರ್ಮ್ ನ ಟ್ಯಾಗ್ ಗಳಿಗೆ ಈಗ ಒಂದು HTML Button ಅನ್ನು ಸೇರಿಸಲಾಗಿದೆ. |
08:12 | ಮೊದಲನೆಯ input ಟ್ಯಾಗ್ ನ ಮುಂದೆ, ನಾವು "Enter your name" ಎಂದು ಟೆಕ್ಸ್ಟ್ ಅನ್ನು ಸೇರಿಸೋಣ. |
08:22 | ಮತ್ತು, ನಾವು h1 ಟ್ಯಾಗ್ ಗಳ ನಡುವಿನ ಡೀಫಾಲ್ಟ್ ಟೆಕ್ಸ್ಟ್ ಅನ್ನು ಬದಲಾಯಿಸೋಣ. |
08:28 | ನಾವು ಟೆಕ್ಸ್ಟ್ ಅನ್ನು "Entry form" ಎಂದು ಬದಲಾಯಿಸುವೆವು. |
08:34 | ಈಗ, ರೈಟ್-ಕ್ಲಿಕ್ ಮಾಡಿ. ಸಧ್ಯಕ್ಕೆ ನಾನು ಪ್ಯಾಲೆಟ್ ಮ್ಯಾನೇಜರ್ ಅನ್ನು (palette manager) ಕ್ಲೋಸ್ ಮಾಡುತ್ತೇನೆ. |
08:38 | ನಿಮ್ಮ Source Editor ನ ಒಳಗೆ ರೈಟ್-ಕ್ಲಿಕ್ ಮಾಡಿ. |
08:41 | ನಿಮ್ಮ ಕೋಡ್ ನ ಫಾರ್ಮ್ಯಾಟ್ ಅನ್ನು ಓರಣಗೊಳಿಸಲು, Format ಆಯ್ಕೆಯನ್ನು ಆರಿಸಿಕೊಳ್ಳಿ. |
08:46 | ಈಗ ನಿಮ್ಮ 'index.jsp' ಫೈಲ್ ಹೀಗೆ ಕಾಣಬೇಕು. |
08:49 | ಆಮೇಲೆ, ನಾವು ಒಂದು 'JavaServer Pages' ಫೈಲ್ ಅನ್ನು ಕ್ರಿಯೇಟ್ ಮಾಡೋಣ. |
08:53 | Projects ವಿಂಡೋದಲ್ಲಿ, HelloWeb ಪ್ರೊಜೆಕ್ಟ್ ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ, New > JSP ಯನ್ನು ಆರಿಸಿಕೊಳ್ಳಿ. |
09:01 | New JSP ಫೈಲ್ ವಿಝಾರ್ಡ್ ತೆರೆದುಕೊಳ್ಳುತ್ತದೆ. |
09:05 | ಫೈಲ್ ಅನ್ನು "response" ಎಂದು ಹೆಸರಿಸಿ ಮತ್ತು Finish ನ ಮೇಲೆ ಕ್ಲಿಕ್ ಮಾಡಿ. |
09:14 | 'Projects' ವಿಂಡೋದಲ್ಲಿ, 'index.jsp' ಫೈಲ್ ನ ಕೆಳಗೆ, 'response.jsp' ಫೈಲ್ ನೋಡ್ ಕಾಣುತ್ತಿರುವುದನ್ನು ಗಮನಿಸಿ. |
09:23 | ಮತ್ತು, ಈ ಹೊಸ ಫೈಲ್ 'Source Editor' ನಲ್ಲಿ ತೆರೆದುಕೊಳ್ಳುತ್ತದೆ. |
09:26 | ಮತ್ತೊಮ್ಮೆ Palette manager ಅನ್ನು ಓಪನ್ ಮಾಡಿ. |
09:35 | ಈಗ, JSP ಆಯ್ಕೆಯನ್ನು ವಿಸ್ತರಿಸಿ. |
09:39 | ಒಂದು Use Bean ಐಟಂ ಅನ್ನು ಆಯ್ಕೆಮಾಡಿ. ಇದನ್ನು body ಟ್ಯಾಗ್ ನ ಕೆಳಗೆ ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ. |
09:53 | Insert Use Bean ಡೈಲಾಗ್ ತೆರೆದುಕೊಳ್ಳುತ್ತದೆ. |
09:56 | ವ್ಯಾಲ್ಯೂಗಳನ್ನು ಹೀಗೆ ನಿಗದಿಪಡಿಸಿ- |
09:58 | ID ಯನ್ನು "mybean" ಎಂದು, |
10:01 | Class ಅನ್ನು "org.mypackage.hello.NameHandler". |
10:13 | Scope ಅನ್ನು “session” ಎಂದು ಸೆಟ್ ಮಾಡಿ |
10:15 | ಮತ್ತು OK ಮೇಲೆ ಕ್ಲಿಕ್ ಮಾಡಿ. |
10:18 | body ಟ್ಯಾಗ್ ನ ಕೆಳಗೆ, jsp:useBean ಟ್ಯಾಗ್ ನ್ನು ಸೇರಿಸಿರುವುದನ್ನು ಗಮನಿಸಿ. |
10:30 | ಜಾವಾ ದ JavaBeans ಗಳು (ಜಾವಾಬೀನ್ಸ್), ಪುನರ್ಬಳಕೆಯ (reusable) ಸಾಫ್ಟ್ವೇರ್ ಘಟಕಗಳಾಗಿವೆ. |
10:34 | ಅನೇಕ ಆಬ್ಜೆಕ್ಟ್ ಗಳನ್ನು ಒಂದೇ ಆಬ್ಜೆಕ್ಟ್ ನಲ್ಲಿ encapsulate (ಎನ್ಕ್ಯಾಪ್ಸುಲೇಟ್) ಮಾಡಲು ಇವುಗಳನ್ನು ಬಳಸಲಾಗುತ್ತದೆ. |
10:38 | ಇದರಿಂದ, ಪ್ರತ್ಯೇಕವಾಗಿ ಅನೇಕ ಆಬ್ಜೆಕ್ಟ್ ಗಳ ಬದಲಾಗಿ ಅವುಗಳನ್ನು ಒಂದೇ ಬೀನ್ ಆಬ್ಜೆಕ್ಟ್ ನಂತೆ ಪಾಸ್ ಮಾಡಬಹುದು. |
10:46 | ಈಗ, Palette manager ನಿಂದ, ಒಂದು Set Bean property ಐಟಂ ಅನ್ನು ಆಯ್ಕೆಮಾಡಿ. ಇದನ್ನು h1 ಟ್ಯಾಗ್ ಗಳ ಸ್ವಲ್ಪ ಮೊದಲು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ. |
11:03 | ಮತ್ತು OK ಮೇಲೆ ಕ್ಲಿಕ್ ಮಾಡಿ. |
11:12 | ಇಲ್ಲಿ, ಈಗ ಕಾಣಿಸಿಕೊಳ್ಳುವ jsp:setProperty ಟ್ಯಾಗ್ ನಲ್ಲಿ, ಖಾಲಿಇರುವ "value" ಅಟ್ರಿಬ್ಯೂಟ್ ಅನ್ನು ಡಿಲೀಟ್ ಮಾಡಿ. |
11:21 | ಮತ್ತು, name ಅಟ್ರಿಬ್ಯೂಟ್ ಅನ್ನು "mybean" ಎಂದು, Property ಯನ್ನು "name" ಎಂದು ಸೆಟ್ ಮಾಡಿ. |
11:30 | ಈಗ, h1 ಟ್ಯಾಗ್ ಗಳ ನಡುವೆ, ನಾವು ಟೆಕ್ಸ್ಟ್ ಅನ್ನು ಬದಲಾಯಿಸೋಣ. "Hello" ಕಾಮಾ ಸ್ಪೇಸ್ ಮತ್ತು ಒಂದು exclamation mark. |
11:40 | ಈಗ, Palette manager ನಿಂದ, Get Bean property ಐಟಂ ಅನ್ನು ಆಯ್ಕೆಮಾಡಿ. "Hello" ಟೆಕ್ಸ್ಟ್ ನ ನಂತರ, h1 ಟ್ಯಾಗ್ ಗಳ ನಡುವೆ ಇದನ್ನು ಡ್ರ್ಯಾಗ್ ಆಂಡ್ ಡ್ರಾಪ್ ಮಾಡಿ. |
11:51 | Get Bean Property ಐಟಂ ನಲ್ಲಿ, |
11:53 | Bean Name ಅನ್ನು "mybean" ಎಂದು |
11:57 | ಮತ್ತು Property Name ಅನ್ನು "name" ಎಂದು ಸೆಟ್ ಮಾಡಿ. |
11:59 | OK ಮೇಲೆ ಕ್ಲಿಕ್ ಮಾಡಿ. |
12:01 | jsp:getProperty ಟ್ಯಾಗ್ ಅನ್ನು ಈಗ h1 ಟ್ಯಾಗ್ ಗಳ ನಡುವೆ ಸೇರಿಸಿರುವುದನ್ನು ಗಮನಿಸಿ. |
12:07 | Source ಎಡಿಟರ್ ನ ಒಳಗೆ ರೈಟ್-ಕ್ಲಿಕ್ ಮಾಡಿ. ನಿಮ್ಮ ಕೋಡ್ ನ ಫಾರ್ಮ್ಯಾಟ್ ಅನ್ನು ಓರಣಗೊಳಿಸಬೇಕಿದ್ದರೆ, Format ನ ಮೇಲೆ ಕ್ಲಿಕ್ ಮಾಡಿ. |
12:16 | ಮುಂದಿನ ಹಂತವು, ನಮ್ಮ 'ವೆಬ್ ಅಪ್ಲಿಕೇಶನ್ ಪ್ರೊಜೆಕ್ಟ್' ಅನ್ನು ರನ್ ಮಾಡುವುದಾಗಿದೆ. |
12:20 | ನಾನು Palette manager ಅನ್ನು ಕ್ಲೋಸ್ ಮಾಡುತ್ತೇನೆ. |
12:26 | Projects ವಿಂಡೋದಲ್ಲಿ, "HelloWeb" ಪ್ರೊಜೆಕ್ಟ್ ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Run ಆಯ್ಕೆಯನ್ನು ಆರಿಸಿಕೊಳ್ಳಿ. |
12:32 | ನಿಮ್ಮ ಪ್ರೊಜೆಕ್ಟ್ ಅನ್ನು ರನ್ ಮಾಡಲು, ನೀವು ಟೂಲ್-ಬಾರ್ ನಿಂದ Run ಆಯ್ಕೆಯನ್ನು ಸಹ ಕ್ಲಿಕ್ ಮಾಡಬಹುದು. ಅಥವಾ, ನಿಮ್ಮ ಕೀಬೋರ್ಡ್ ಮೇಲಿನ F6 ಕೀಯನ್ನು ಒತ್ತಬಹುದು. |
12:41 | ನನ್ನ ಪ್ರೊಜೆಕ್ಟ್ ಅನ್ನು ರನ್ ಮಾಡಲು, ನಾನು ಟೂಲ್-ಬಾರ್ ಮೇಲಿನ ಬಟನ್ ಅನ್ನು ಆಯ್ಕೆಮಾಡುವೆನು. |
12:44 | ನೀವು ಒಂದು ವೆಬ್-ಅಪ್ಲಿಕೇಶನ್ ಅನ್ನು ರನ್ ಮಾಡಿದಾಗ, IDE, ಅಪ್ಲಿಕೇಶನ್ ಕೋಡ್ ಅನ್ನು ಬಿಲ್ಡ್ ಮಾಡಿ ಕಂಪೈಲ್ ಮಾಡುತ್ತದೆ. |
12:53 | ಸರ್ವರ್ ಅನ್ನು ಲಾಂಚ್ ಮಾಡುತ್ತದೆ ಮತ್ತು ಅಪ್ಲಿಕೇಶನ್ ಅನ್ನು ಸರ್ವರ್ ಗೆ ನಿಯೋಜಿಸುತ್ತದೆ. |
12:58 | ಮತ್ತು ಕೊನೆಯದಾಗಿ, ಅಪ್ಲಿಕೇಶನ್ ಅನ್ನು ಬ್ರೌಸರ್ ವಿಂಡೋದಲ್ಲಿ ಪ್ರದರ್ಶಿಸುತ್ತದೆ. |
13:02 | ಈ ಪ್ರಕ್ರಿಯೆಗಳನ್ನು ವೀಕ್ಷಿಸಲು, ನೀವು Window ಮೆನ್ಯುನಿಂದ output ವಿಂಡೋಅನ್ನು ಓಪನ್ ಮಾಡಬಹುದು ಮತ್ತು Output ಆಯ್ಕೆಯನ್ನು ಆರಿಸಿಕೊಳ್ಳಿ. |
13:10 | ನಿಮ್ಮ ಅಪ್ಲಿಕೇಶನ್ ಅನ್ನು ಯಶಸ್ವಿಯಾಗಿ ಬಿಲ್ಡ್ ಮಾಡಲಾಗಿದೆ ಎಂಬುದನ್ನು ನೀವು ನೋಡಬಹುದು. |
13:17 | ನಿಮ್ಮ ಡೀಫಾಲ್ಟ್ ಬ್ರೌಸರ್ ನಲ್ಲಿ 'index.jsp' ಪೇಜ್ ತೆರೆದುಕೊಳ್ಳುತ್ತದೆ. |
13:23 | ನಾನು ಇನ್ನೊಮ್ಮೆ ಪ್ರೊಜೆಕ್ಟ್ ಅನ್ನು ರನ್ ಮಾಡುತ್ತೇನೆ. |
13:27 | ಇದೋ, ಇಲ್ಲಿದೆ! ಇದು ನಿಮ್ಮ ಡೀಫಾಲ್ಟ್ ಬ್ರೌಸರ್ ನಲ್ಲಿ ತೆರೆದುಕೊಳ್ಳುತ್ತದೆ. |
13:32 | ಗಮನಿಸಿ: ಬ್ರೌಸರ್ ವಿಂಡೋ, ಕೆಲವು ಸಲ IDE ಸರ್ವರ್ ಔಟ್ಪುಟ್ ಅನ್ನು ಪ್ರದರ್ಶಿಸುವ ಮೊದಲೇ ತೆರೆದುಕೊಳ್ಳಬಹುದು. |
13:38 | ಈಗ ನಾವು ಬ್ರೌಸರ್ ನಲ್ಲಿ, ಟೆಕ್ಸ್ಟ್-ಬಾಕ್ಸ್ ನಲ್ಲಿ ಹೆಸರನ್ನು ಸೇರಿಸೋಣ. |
13:42 | ಉದಾಹರಣೆಗೆ- Ubuntu. ಮತ್ತು, OK ಮೇಲೆ ಕ್ಲಿಕ್ ಮಾಡಿ. |
13:46 | ಸರಳವಾದ ಶುಭಾಶಯದೊಂದಿಗೆ ಒಂದು 'response.jsp' ಪೇಜ್ ಕಂಡುಬರುತ್ತದೆ. |
13:52 | ಈಗ ಅಸೈನ್ಮೆಂಟ್ಅನ್ನು ನೋಡೋಣ. |
13:56 | ವೆಬ್-ಅಪ್ಲಿಕೇಶನ್ ಪ್ರೊಜೆಕ್ಟ್ ನ ವಿಸ್ತರಣೆ ಎಂದು- ಇನ್ನೂ ಎರಡು ಟೆಕ್ಸ್ಟ್-ಫೀಲ್ಡ್ ಗಳನ್ನು, ಅರ್ಥಾತ್, ಒಟ್ಟು ಮೂರು ಇನ್ಪುಟ್ ಟೆಕ್ಸ್ಟ್-ಫೀಲ್ಡ್ ಗಳನ್ನು ನಿಮ್ಮ ಅಪ್ಲಿಕೇಶನ್ ನಲ್ಲಿ ಸೇರಿಸಿ. |
14:06 | 'ಬೀನ್ ಪ್ರಾಪರ್ಟೀ'ಯನ್ನು (bean property) ಯನ್ನು ಸೆಟ್ ಮಾಡಲು, JavaBeans ಘಟಕವನ್ನು ಬಳಸಿ ಮತ್ತು |
14:09 | ಬ್ರೌಸರ್ ನಲ್ಲಿ ಅದರ ನಿರೂಪಣೆಯನ್ನು ವೀಕ್ಷಿಸಿ. |
14:12 | ಮತ್ತು ಕೊನೆಯದಾಗಿ, ಎರಡನೆಯ JSP ಪೇಜ್ ನಲ್ಲಿ ಔಟ್ಪುಟ್ ಅನ್ನು ಪುನಃ ಪಡೆದುಕೊಳ್ಳಿ. |
14:17 | ನಾನು ನನ್ನ ಅಸೈನ್ಮೆಂಟ್ ಅನ್ನು ಈಗಾಗಲೇ ತಯಾರಿಸಿದ್ದೇನೆ. |
14:21 | ನಾನು ನನ್ನ ಅಸೈನ್ಮೆಂಟ್ ಅನ್ನು ತೆರೆಯುತ್ತೇನೆ ಮತ್ತು IDE ಯಲ್ಲಿ ಅದನ್ನು ರನ್ ಮಾಡುತ್ತೇನೆ. |
14:30 | ನನಗೆ ಮೂರು ಇನ್ಪುಟ್ ಟೆಕ್ಸ್ಟ್ ಫೀಲ್ಡ್ ಗಳನ್ನು ಕೊಡಲಾಗಿದೆ. |
14:35 | ನಾನು ವಿವರಗಳನ್ನು ಸೇರಿಸಿ, OK ಮೇಲೆ ಕ್ಲಿಕ್ ಮಾಡುತ್ತೇನೆ. |
14:42 | ನನಗೆ ಈ ರೀತಿಯ ಔಟ್ಪುಟ್ ಸಿಗಬೇಕು. |
14:47 | ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
14:51 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
14:54 | ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
14:59 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: * ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
15:05 | * ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
15:09 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:
contact@spoken-tutorial.org |
15:16 | Spoken Tutorial ಪ್ರಕಲ್ಪವು Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
15:21 | ಇದು NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
15:28 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro |
15:40 | ಈ ಟ್ಯುಟೋರಿಯಲ್, IT for Change ಅವರ ಕೊಡುಗೆಯಾಗಿದೆ. |
15:43 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.
ವಂದನೆಗಳು. |