Moodle-Learning-Management-System/C2/Overview-of-Moodle/Kannada

From Script | Spoken-Tutorial
Jump to: navigation, search
Time
Narration
00:01 Overview of Moodle ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು: Learning Management Systems ನ (ಸಂಕ್ಷಿಪ್ತವಾಗಿ LMS ) ಪರಿಕಲ್ಪನೆ,
00:16 Moodle ಅನ್ನು ಒಂದು LMS ನಂತೆ,
00:19 ಇದನ್ನು ಯಾರು ಬಳಸಬಹುದು ಮತ್ತು Moodle ವೆಬ್ಸೈಟ್ ಗಳ ಉದಾಹರಣೆಗಳು ಇವುಗಳ ಬಗ್ಗೆ ಕಲಿಯುವೆವು.
00:26 Moodle ಅನ್ನು ರನ್ ಮಾಡಲು ಅವಶ್ಯವಿರುವ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಗಳು ಮತ್ತು
00:33 ಈ ಸರಣಿಯಲ್ಲಿ ವಿವರಿಸಲಾಗುವ ಪ್ರಮುಖ ವೈಶಿಷ್ಟ್ಯಗಳು, ಇವುಗಳ ಬಗ್ಗೆ ಸಹ ಕಲಿಯುವೆವು.
00:39 ಈ ಟ್ಯುಟೋರಿಯಲ್ ಅನ್ನು ಕಲಿಯುವವರು, ವೆಬ್ಸೈಟ್ ಅನ್ನು ಬ್ರೌಸ್ ಮಾಡುವ ಬಗ್ಗೆ ತಿಳಿದಿರಬೇಕು.
00:45 ಮೊದಲು Learning Management System ಅಥವಾ LMS ಎಂದರೆ ಏನು ಎಂದು ತಿಳಿದುಕೊಳ್ಳೋಣ.
00:53 LMS, ನಮಗೆ ಯಾವುದೇ eLearning content ಅನ್ನು ರಚಿಸಲು, ನಿರ್ವಹಿಸಲು ಮತ್ತು ತಲುಪಿಸಲು ಸಹಾಯ ಮಾಡುತ್ತದೆ.
01:01 ಉದಾಹರಣೆಗೆ: ಶೈಕ್ಷಣಿಕ ಕೋರ್ಸ್ ಗಳು ಮತ್ತು ತರಬೇತಿ ಕಾರ್ಯಕ್ರಮಗಳು.
01:07 ಇದು ನಮ್ಮ ಕೋರ್ಸ್ ಗಳನ್ನು ನಿರ್ವಹಿಸಲು ಸಹ ಸಹಾಯ ಮಾಡುತ್ತದೆ.
01:11 ವಿಷಯವನ್ನು ರಚಿಸುವುದು, ಎಡಿಟ್ ಮಾಡುವುದು, ವಿದ್ಯಾರ್ಥಿಗಳಿಗೆ ಆಕ್ಸೆಸ್ ಅನ್ನು ಕೊಡುವುದು, ಅವರು ಸಬ್ಮಿಟ್ ಮಾಡಿರುವುದನ್ನು ಗ್ರೇಡ್ ಮಾಡುವುದು..ಇತ್ಯಾದಿ.
01:21 'ಮೂಡಲ್' ಒಂದು ಪ್ರತಿಕ್ರಿಯಾಶೀಲ, ಉಚಿತ ಮತ್ತು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ.
01:27 ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ ಸಂಸ್ಥೆಗಳಿಂದ ಬಳಸಲಾಗುವ ಅತ್ಯಂತ ಜನಪ್ರಿಯ 'ಎಲ್ ಎಂ ಎಸ್ ' (LMS) ಗಳಲ್ಲಿ ಇದು ಒಂದು ಆಗಿದೆ.
01:33 ಇದರ ಸೆಕ್ಯೂರಿಟಿ ನಿಯಂತ್ರಣಗಳು ನಮ್ಮ ಡೇಟಾವನ್ನು ಸುರಕ್ಷಿತವಾಗಿ ಇಡುತ್ತದೆ.
01:39 ಇದು, ಶಿಕ್ಷಕರು ಮತ್ತು ಕಲಿಯುವವರಿಗೆ ಅಧಿಕಾರ ಕೊಡುವ ಕೆಲವು ಪ್ರಬಲವಾದ ವೈಶಿಷ್ಟ್ಯಗಳನ್ನು ಹೊಂದಿದೆ.
01:47 ಇದನ್ನು ಬಳಸಲು ಸುಲಭವಾಗುವಂತೆ, 'ಮೂಡಲ್', ವಿವರವಾದ ಡೊಕ್ಯೂಮೆಂಟೇಶನ್ ಅನ್ನು ಸಹ ಒದಗಿಸುತ್ತದೆ.
01:54 'ಮೂಡಲ್' ಬಳಕೆದಾರರ ಸಮುದಾಯ ಮತ್ತು ಫೋರಮ್ ನ ಸಹಾಯವು ತುಂಬಾ ಸಕ್ರಿಯವಾಗಿವೆ.
02:00 'ಮೂಡಲ್' ನಲ್ಲಿ ಲಭ್ಯವಿರುವ ಉಚಿತ ಪ್ಲಗ್-ಇನ್ ಗಳು ಇದನ್ನು ವೈಶಿಷ್ಟ್ಯಪೂರ್ಣವಾಗಿಸುತ್ತವೆ.
02:06 ಎಲ್ಲಾ ಸಾಧನಗಳಲ್ಲಿ ಮೂಡಲ್ ಅನ್ನು ನ್ಯಾವಿಗೇಟ್ ಮಾಡುವುದು ಸುಲಭವಾಗಿದೆ;

'ಕೋರ್ಸ್' ಮತ್ತು ಸೈಟ್ ಗಳ ಮಟ್ಟದಲ್ಲಿ ಚಟುವಟಿಕೆ ಮತ್ತು ಭಾಗವಹಿಸುವಿಕೆಯನ್ನು ಕುರಿತು ವಿವರವಾದ ವರದಿಗಳನ್ನು ಹೊಂದಿದೆ.

02:18 ಒಟ್ಟಿಗೆ ಮತ್ತು ವೈಯಕ್ತಿಕವಾಗಿ ಕಲಿಯಲು ಸಹಾಯ ಮಾಡುತ್ತದೆ.
02:23 ಇದಕ್ಕಾಗಿ- ಫೋರಂಗಳು, ಪೀರ್ ಅಸೆಸ್ಮೆಂಟ್ ಗಳು, ಗ್ರುಪ್ ಮ್ಯಾನೇಜ್ಮೆಂಟ್, ಲರ್ನಿಂಗ್ ಪಾಥ್ ಗಳು ಇತ್ಯಾದಿಗಳನ್ನು ಬಳಸಬಹುದು.
02:32 Moodle LMS ಅನ್ನು ಯಾರು ಬಳಸಬಹುದೆಂದು ನೋಡೋಣ:
02:36 ಯೂನಿವರ್ಸಿಟಿ, ಕಾಲೇಜ್, ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳಂತಹ ಶೈಕ್ಷಣಿಕ ಸಂಸ್ಥೆಗಳು,
02:44 ಉದ್ಯೋಗ ತರಬೇತಿ ಮತ್ತು ಓರಿಯಂಟೇಶನ್ ಗಾಗಿ ವ್ಯಾಪಾರಗಳು,
02:49 ಆಸ್ಪತ್ರೆ ಮತ್ತು ಆರೋಗ್ಯ ರಕ್ಷಣೆ ತರಬೇತಿ ಕಾರ್ಯಕ್ರಮಗಳು ಮತ್ತು
02:53 ಯಾವುದೇ eLearning ಆಧಾರಿತ ಸಂಸ್ಥೆ.
02:57 'ಮೂಡಲ್' ಅನ್ನು ಬಳಸಿ ನಿರ್ಮಿಸಲಾದ ಕೆಲವು ವೆಬ್ಸೈಟ್ಗಳನ್ನು ನೋಡೋಣ.
03:02 ಇಂತಹ ಕಾಲೇಜುಗಳು,
03:05 ಇಂತಹ ಖಾಸಗಿ ವಿಶ್ವವಿದ್ಯಾಲಯಗಳು,
03:09 ಇಂತಹ ತರಬೇತಿ ಸಂಸ್ಥೆಗಳು,
03:13 ಇಂತಹ ತರಬೇತಿ ಸಂಸ್ಥೆಗಳು,
03:17 ಆನ್ಲೈನ್ ನಲ್ಲಿ ತಮ್ಮ ಕೋರ್ಸ್ ಗಳನ್ನು ಕೊಡಲು ಬಯಸುವ ಶಿಕ್ಷಕರು ಇತ್ಯಾದಿ.
03:24 ಈ ಕೆಳಗಿನ URL, 'ಮೂಡಲ್' ನ ಬಳಕೆಯ ಅಂಕಿಅಂಶಗಳ ವಿವರಗಳನ್ನು ಹೊಂದಿದೆ.
03:30 ಇಲ್ಲಿ, ವಿವಿಧ ರಾಷ್ಟ್ರಗಳಿಂದ ನೋಂದಾಯಿತ ಮೂಡಲ್ ವೆಬ್ಸೈಟ್ ಗಳನ್ನು ನೀವು ಪರಿಶೀಲಿಸಬಹುದು.
03:40 Moodle ಅನ್ನು ಇನ್ಸ್ಟಾಲ್ ಮಾಡಲು, ನಮಗೆ: Apache web-server,
03:46 MySQL, MariaDB ಅಥವಾ PostgreSQL ಗಳಂತಹ ಡೇಟಾಬೇಸ್

ಮತ್ತುPHP ಇವುಗಳು ಬೇಕು.

03:54 'ಮೂಡಲ್', ಸಂಪನ್ಮೂಲಗಳನ್ನು ಕಬಳಿಸುವ ಒಂದು ಸಾಫ್ಟ್ವೇರ್ ಆಗಿದೆ.
03:58 'ಮೂಡಲ್' ಅನ್ನು ರನ್ ಮಾಡಲು ಶಿಫಾರಸು ಮಾಡಲಾದ ಹಾರ್ಡ್ವೇರ್ ಗಳು:
04:02 'ಡಿಸ್ಕ್ ಸ್ಪೇಸ್': Moodle ಕೋಡ್ ಗಾಗಿ 200 MB ಮತ್ತು ವಿಷಯವನ್ನು ಶೇಖರಿಸಿಡಲು ಸ್ಥಳಾವಕಾಶ ಬೇಕು. ಆದಾಗ್ಯೂ, ಕನಿಷ್ಠ 5GB ವಾಸ್ತವಿಕವಾಗಿ ಬೇಕು.
04:15 ಪ್ರೊಸೆಸ್ಸರ್ (processor) : ಕನಿಷ್ಠ 1 ಗಿಗಾ-ಹರ್ಟ್ಝ್ (Gigahertz), ಆದರೆ 2 Gigahertz 'ಡ್ಯುಅಲ್ ಕೋರ್' (dual core) ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಉತ್ತಮ.
04:23 ಮೆಮರಿ (Memory): ಕನಿಷ್ಠ 512 MB, ಆದರೆ 1GB ಅಥವಾ ಅದಕ್ಕಿಂತ ಹೆಚ್ಚು ಇದ್ದರೆ ಉತ್ತಮ.
04:31 'ಸಿಸ್ಟಮ್' ಮೇಲಿನ ನಿರೀಕ್ಷಿತ ಲೋಡ್ ಅನ್ನು ಆಧರಿಸಿ, ಈ ಅವಶ್ಯಕತೆಗಳು ಬದಲಾಗಬಹುದು.
04:37 ಉದಾಹರಣೆಗೆ: courses ಗಳ ಸಂಖ್ಯೆ ಮತ್ತು ಏಕಕಾಲದಲ್ಲಿ ನಿರೀಕ್ಷಿತ 'ಲಾಗ್ ಇನ್' ಗಳು.
04:44 ಈ ಸರಣಿಯ ತಯಾರಿಕೆಯ ಸಮಯದಲ್ಲಿ, Moodle 3.3 ಇತ್ತೀಚಿನ ಸ್ಥಿರ (stable) ಆವೃತ್ತಿಯಾಗಿತ್ತು.
04:50 ಲಭ್ಯವಿರುವ ಇತ್ತೀಚಿನ ಸ್ಥಿರ ಆವೃತ್ತಿಯೊಂದಿಗೆ ಕೆಲಸ ಮಾಡುವುದನ್ನು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ.
04:57 Moodle 3.3 ಗಾಗಿ ಈ ಕೆಳಗಿನವುಗಳು ಅವಶ್ಯಕವಾಗಿವೆ:
05:01 Apache 2.x (ಅಥವಾ ಹೆಚ್ಚಿನ ಆವೃತ್ತಿ),

MariaDB 5.5.30 (ಅಥವಾ ಯಾವುದೇ ಹೆಚ್ಚಿನ ಆವೃತ್ತಿ) ಮತ್ತು

05:11 PHP 5.4.4 (ಅಥವಾ ಯಾವುದೇ ಹೆಚ್ಚಿನ ಆವೃತ್ತಿ).
05:17 ಈ ಸರಣಿಗಾಗಿ, ನಾವು ಈ ಕೆಳಗಿನ OS ಮತ್ತು ಸಾಫ್ಟ್ವೇರ್ ಅನ್ನು ಬಳಸಿದ್ದೇವೆ:

Ubuntu Linux OS 16.04,

05:26 XAMPP 5.6.30 ದ ಮೂಲಕ ಪಡೆದ Apache, MariaDB ಮತ್ತು PHP ಹಾಗೂ

Moodle 3.3

05:36 ಈ ಮೂಡಲ್ ಸರಣಿಯನ್ನು 2 ಭಾಗಗಳಾಗಿ ವಿಂಗಡಿಸಲಾಗಿದೆ -
05:41 ಒಂದು ಭಾಗವು 'ಮೂಡಲ್ ಸೈಟ್ ಅಡ್ಮಿನಿಸ್ಟ್ರೇಟರ್ಸ್' (Moodle site administrators) ಗಾಗಿ ಮತ್ತು ಇನ್ನೊಂದು ಶಿಕ್ಷಕರಿಗಾಗಿ (teachers).
05:48 Moodle site Administrators: ಸರ್ವರ್ ಮೇಲೆ Moodleಅನ್ನು ಇನ್ಸ್ಟಾಲ್ ಮಾಡುವುದು,
05:54 ಇನ್ಸ್ಟಿಟ್ಯೂಟ್ ಮಾರ್ಗದರ್ಶನಗಳ ಪ್ರಕಾರ course categories ಅನ್ನು ತಯಾರಿಸುವುದು ಮತ್ತು

ಅನೇಕ 'ಕೋರ್ಸ್' ಗಳಿಗಾಗಿ, courses ಹಾಗೂ 'ಯೂಸರ್ ಅಕೌಂಟ್' ಗಳನ್ನು ನಿರ್ವಹಿಸುವುದು.

06:04 'ಮೂಡಲ್ ಸೈಟ್ ಅಡ್ಮಿನಿಸ್ಟ್ರೇಟರ್ಸ್' ಗಾಗಿ, ಈ ಸರಣಿಯಲ್ಲಿ ವಿವರಿಸಿರುವ ಕೆಲವು ಪ್ರಮುಖ ವೈಶಿಷ್ಟ್ಯಗಳ ನಸುನೋಟ ಇಲ್ಲಿದೆ.
06:14 Getting ready for Moodle installation ಟ್ಯುಟೋರಿಯಲ್, 'ಲೋಕಲ್ ಹೋಸ್ಟ್' ಮೇಲೆ ಪ್ಯಾಕೇಜ್ ಗಳನ್ನು ಹೇಗೆ ಪರಿಶೀಲಿಸುವುದು ಮತ್ತು ಡೇಟಾಬೇಸ್ ಅನ್ನು ಸೆಟ್-ಅಪ್ ಮಾಡುವುದರ ಬಗ್ಗೆ ವಿವರಿಸುತ್ತದೆ.
06:29 Installing Moodle on Local Server ಎಂಬ ಟ್ಯುಟೋರಿಯಲ್, Moodle ಅನ್ನು ಹೇಗೆ ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡುವುದೆಂದು ವಿವರಿಸುತ್ತದೆ.
06:39 Moodle ನಲ್ಲಿ, Admin’s dashboard ಎಂಬ ಟ್ಯುಟೋರಿಯಲ್- Admin Dashboard, ವಿವಿಧ block ಗಳು, profile page ಮತ್ತು preferences ಅನ್ನು ಹೇಗೆ ಎಡಿಟ್ ಮಾಡುವುದೆಂದು ವಿವರಿಸುತ್ತದೆ.
06:53 Blocks in Admin's Dashboard ಎಂಬ ಟ್ಯುಟೋರಿಯಲ್ - blocks ಅನ್ನು ಹೇಗೆ ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹಾಗೂ
07:05 Front page ಅನ್ನು ಹೇಗೆ ಸೆಟ್ ಮಾಡುವುದು ಎಂದು ವಿವರಿಸುತ್ತದೆ.
07:08 Categories in Moodle ಎಂಬ ಮುಂದಿನ ಟ್ಯುಟೋರಿಯಲ್ ನಲ್ಲಿ, ನಾವು categories & subcategories ಅನ್ನು ಕ್ರಿಯೇಟ್ ಮಾಡಲು ಕಲಿಯುವೆವು.
07:19 Courses in Moodle ಎಂಬ ಟ್ಯುಟೋರಿಯಲ್ ನಲ್ಲಿ, ನಾವು course ಅನ್ನು ಕ್ರಿಯೇಟ್ ಮಾಡಿ ಅದನ್ನು ಕಾನ್ಫಿಗರ್ ಮಾಡಲು ಕಲಿಯುವೆವು.
07:28 Users in Moodle ಎಂಬ ಟ್ಯುಟೋರಿಯಲ್,-

user ಅನ್ನು ಹೇಗೆ ಸೇರಿಸುವುದು,

07:36 user ನ ಪ್ರೊಫೈಲ್ ಅನ್ನು ಎಡಿಟ್ ಮಾಡುವುದು,

ಮತ್ತು users ಅನ್ನು ದೊಡ್ಡ ಪ್ರಮಾಣದಲ್ಲಿ ಅಪ್ಲೋಡ್ ಮಾಡುವುದರ ಬಗ್ಗೆ ವಿವರಿಸುತ್ತದೆ.

07:43 User Roles in Moodle ಎಂಬ ಟ್ಯುಟೋರಿಯಲ್, ಬಳಕೆದಾರರಿಗೆ ವಿವಿಧ ಪಾತ್ರಗಳನ್ನು ನಿಯೋಜಿಸುವುದನ್ನು ವಿವರಿಸುತ್ತದೆ.
07:52 ಉದಾಹರಣೆಗೆ: secondary admin role, teacher role ಮತ್ತು student role.
08:00 Moodle site administrators ಗಾಗಿ, ಈ ಸರಣಿಯಲ್ಲಿ ಮುಂದೆ ಇನ್ನೂ ಹಲವು ಟ್ಯುಟೋರಿಯಲ್ ಗಳು ಇವೆ.
08:07 ಈಗ ನಾವು ಶಿಕ್ಷಕರಿಗಾಗಿ ಇರುವ ಟ್ಯುಟೋರಿಯಲ್ ಗಳಿಗೆ ಹೋಗುವೆವು.
08:11 ಶಿಕ್ಷಕರು- ತಮ್ಮ ಕೋರ್ಸ್ ಗಾಗಿ ವಿಷಯವನ್ನು ಅಪ್ಲೋಡ್ ಮಾಡಲು ಮತ್ತು ಎಡಿಟ್ ಮಾಡಲು,
08:17 ವಿದ್ಯಾರ್ಥಿಗಳ ಪ್ರಗತಿಯನ್ನು ನಿರ್ಣಯಿಸಲು ಅಸೈನ್ಮೆಂಟ್ ಮತ್ತು ಕ್ವಿಝ್ ಗಳನ್ನು (quizzes) ತಯಾರಿಸಲು ಮತ್ತು
08:22 ವಿದ್ಯಾರ್ಥಿಗಳನ್ನು ತಮ್ಮ 'ಕೋರ್ಸ್' ಗೆ ಸೇರಿಸಿ ಅವರೊಂದಿಗೆ ಸಂಪರ್ಕಿಸಲು ಜವಾಬ್ದಾರರಾಗಿರುತ್ತಾರೆ.
08:27 ಈಗ, ಶಿಕ್ಷಕರಿಗಾಗಿ ಇರುವ ಈ ಸರಣಿಯಲ್ಲಿ ವಿವರಿಸಿದ ಕೆಲವು ಪ್ರಮುಖ ವೈಶಿಷ್ಟ್ಯಗಳ ನಸುನೋಟವನ್ನು ನಾನು ತೋರಿಸುತ್ತೇನೆ.
08:34 Teacher’s dashboard in Moodle ಟ್ಯುಟೋರಿಯಲ್ -

'ಟೀಚರ್ಸ್ ಡ್ಯಾಶ್-ಬೋರ್ಡ್' (teachers’ dashboard), ಪ್ರೊಫೈಲ್ ಅನ್ನು ಎಡಿಟ್ ಮಾಡುವುದು ಮತ್ತು preferences ಅನ್ನು ಎಡಿಟ್ ಮಾಡುವುದು ಇವುಗಳನ್ನು ವಿವರಿಸುತ್ತದೆ.

08:46 Course Administration in Moodle ಟ್ಯುಟೋರಿಯಲ್ - course ಸೆಟ್ಟಿಂಗ್ ಗಳನ್ನು ಹೇಗೆ ಕಾನ್ಫಿಗರ್ ಮಾಡುವುದು
08:53 ಮತ್ತು course ನಲ್ಲಿ, Activities ಹಾಗೂ Resources ಗಳನ್ನು ನಿರ್ವಹಿಸುವುದನ್ನು ವಿವರಿಸುತ್ತದೆ.
08:59 Formatting course material in Moodle ಟ್ಯುಟೋರಿಯಲ್ - ಡೀಫಾಲ್ಟ್ Moodle text editor ನಲ್ಲಿ, ಫಾರ್ಮ್ಯಾಟ್ ಮಾಡುವ ವಿವಿಧ ಆಯ್ಕೆಗಳು
09:10 ಮತ್ತು ಹೆಚ್ಚಿನ course material ಅನ್ನು ಸೇರಿಸುವುದರ ಬಗ್ಗೆ ವಿವರಿಸುತ್ತದೆ.
09:15 Uploading and Editing Resources in Moodle ಟ್ಯುಟೋರಿಯಲ್ - URL resource ಅನ್ನು ಮತ್ತು book resource ಅನ್ನು ಹೇಗೆ ಅಪ್ಲೋಡ್ ಮಾಡುವುದು ಮತ್ತು ಆ ರಿಸೋರ್ಸಸ್ ಗಳನ್ನು ಎಡಿಟ್ ಮಾಡುವುದರ ಬಗ್ಗೆ ವಿವರಿಸುತ್ತದೆ.
09:29 ಈ ಸರಣಿಯಲ್ಲಿಯ ಮುಂದಿನ ಟ್ಯುಟೋರಿಯಲ್ Forums and Assignments in Moodle ಆಗಿದೆ.
09:34 ಈ ಟ್ಯುಟೋರಿಯಲ್ ನಲ್ಲಿ, ನಾವು:

Moodleನಲ್ಲಿ ವಿವಿಧ ರೀತಿಯ forums ಗಳು,

09:39 ಚರ್ಚೆಗಾಗಿ ಫೋರಂ ಅನ್ನು (ವೇದಿಕೆಯನ್ನು) ಹೇಗೆ ಸೇರಿಸುವುದು ಮತ್ತು ಅಸೈನ್ಮೆಂಟ್ ಗಳನ್ನು ಹೇಗೆ ತಯಾರಿಸುವುದು ಇವುಗಳ ಬಗ್ಗೆ ಕಲಿಯುವೆವು.
09:48 Question bank in Moodle ಎಂಬ ಟ್ಯುಟೋರಿಯಲ್ ನಲ್ಲಿ, questionsCategories ಅನ್ನು ಹೇಗೆ ತಯಾರಿಸುವುದು ಮತ್ತು ಪ್ರಶ್ನೆಗಳನ್ನು question bank ಗೆ ಹೇಗೆ ಸೇರಿಸುವುದೆಂದು ಕಲಿಯುವೆವು.
09:58 Quiz in Moodle ಟ್ಯುಟೋರಿಯಲ್:

Quiz ಅನ್ನು ತಯಾರಿಸಲು ಮತ್ತು Question bank ನಿಂದ ಪ್ರಶ್ನೆಗಳನ್ನು Quiz ನಲ್ಲಿ ಸೇರಿಸಲು ನಮಗೆ ಕಲಿಸುವುದು.

10:12 Enroll Students and Communicate in Moodle ಎಂಬ ಟ್ಯುಟೋರಿಯಲ್ ನಲ್ಲಿ, ನಾವು:

'ಕೋರ್ಸ್' ಗೆ 'CSV ಫೈಲ್' ಮೂಲಕ ಅಪ್ಲೋಡ್ ಮಾಡಲಾದ ವಿದ್ಯಾರ್ಥಿಗಳನ್ನು ದಾಖಲಿಸಲು,

10:25 ಕೋರ್ಸ್ ಗಳಲ್ಲಿ ಗ್ರುಪ್ ಗಳನ್ನು ಮಾಡಲು ಮತ್ತು ವಿದ್ಯಾರ್ಥಿಗಳಿಗೆ ಮೆಸೇಜ್ ಗಳನ್ನು ಮತ್ತು ನೋಟ್ಸ್ ಗಳನ್ನುಕಳಿಸಲು ಕಲಿಯುವೆವು.
10:31 ಈ ಸರಣಿಯಲ್ಲಿ ಆಮೇಲೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಇನ್ನೂ ಹೆಚ್ಚು ಟ್ಯುಟೋರಿಯಲ್ ಗಳು ಇರುತ್ತವೆ.
10:37 ಈಗ, ಸಂಕ್ಷಿಪ್ತವಾಗಿ-

ಈ ಟ್ಯುಟೋರಿಯಲ್ ನಲ್ಲಿ ನಾವು: 'ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಂ (LMS)' ನ ಪರಿಕಲ್ಪನೆ,

10:48 ಒಂದು LMS ನಂತೆ ಮೂಡಲ್,

ಮೂಡಲ್ ಅನ್ನು ಯಾರು ಬಳಸಬಹುದು? ಮತ್ತು ಮೂಡಲ್ ವೆಬ್ಸೈಟ್ ಗಳ ಉದಾಹರಣೆಗಳು ಇವುಗಳ ಬಗ್ಗೆ ಕಲಿತಿದ್ದೇವೆ.

10:57 'ಮೂಡಲ್' ಅನ್ನು ರನ್ ಮಾಡಲು ಅವಶ್ಯವಿರುವ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ಗಳು ಮತ್ತು 'ಮೂಡಲ್' ಸರಣಿಯಲ್ಲಿ ವಿವರಿಸಿದ ಪ್ರಮುಖ ವೈಶಿಷ್ಟ್ಯಗಳ ಅವಲೋಕನ ಇವುಗಳ ಬಗ್ಗೆ ಸಹ ಕಲಿತಿದ್ದೇವೆ.
11:10 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ಇದನ್ನು ವೀಕ್ಷಿಸಿ.
11:18 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
11:28 ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ? ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ.
11:35 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ.

11:45 ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ.
11:51 ದಯವಿಟ್ಟು ಇದಕ್ಕೆ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
11:59 ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಕೆಯ ವಸ್ತುವಿನಂತೆ ಬಳಸಬಹುದು.
12:05 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
12:18 ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14