Moodle-Learning-Management-System/C2/Installing-Moodle-on-Local-Server/Kannada
Time | Narration |
00:01 | Installing Moodle on Local Server ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, Moodle ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು ಕಲಿಯುವೆವು. |
00:15 | Moodle ಇನ್ಸ್ಟಾಲ್ ಮಾಡಲು, ನೀವು ಇವುಗಳನ್ನು ಬೆಂಬಲಿಸುವ ಸಿಸ್ಟಂ ಹೊಂದಿರಬೇಕು:
Apache 2.x (ಅಥವಾ ಹೆಚ್ಚಿನ ಆವೃತ್ತಿ), |
00:23 | MariaDB 5.5.30 (ಅಥವಾ ಯಾವುದೇ ಹೆಚ್ಚಿನ ಆವೃತ್ತಿ) ಮತ್ತು PHP 5.4.4 + ( ಅಥವಾ ಯಾವುದೇ ಹೆಚ್ಚಿನ ಆವೃತ್ತಿ). |
00:36 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:44 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, |
00:53 | Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತೇನೆ. |
00:59 | ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು. |
01:03 | ಆದರೆ, Internet Explorer ಅನ್ನು ಮಾತ್ರ ಬಳಸಬಾರದು, ಇದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
01:11 | ಮೊದಲು, ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. |
01:16 | ಈ ಸರಣಿಯಲ್ಲಿನ ಹಿಂದಿನ ಟ್ಯುಟೋರಿಯಲ್ ಗಳನ್ನು ಸಹ ನೋಡಿ.
ಪೂರ್ವಾಪೇಕ್ಷಿತಗಳು ಲಭ್ಯವಿದೆ, ಡೇಟಾಬೇಸ್ ಅನ್ನು ಸರಿಯಾಗಿ ಸೆಟ್-ಅಪ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. |
01:27 | ನಮ್ಮ XAMPP ರನ್ ಆಗುತ್ತಿರಬೇಕು ಮತ್ತು ನಾವು username moodle-st ಯೊಂದಿಗೆ ಡೇಟಾಬೇಸ್ ಅನ್ನು ಸೆಟ್-ಅಪ್ ಮಾಡಿರಬೇಕು. |
01:37 | ಮೊದಲು, ವೆಬ್-ಬ್ರೌಸರ್ ಗೆ ಹೋಗಿ XAMPP ಅನ್ನು ಪ್ರಾರಂಭಿಸುತ್ತೇನೆ. |
01:42 | ಅಡ್ರೆಸ್-ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ: http colon double slash 127 dot 0 dot 0 dot 1 ಮತ್ತು Enter ಅನ್ನು ಒತ್ತಿ. |
01:56 | ಸ್ಕ್ರೀನ್ ನ ಮೇಲ್ಗಡೆ ಬಲಭಾಗದ ಮೆನ್ಯೂನಲ್ಲಿ, PHPinfo ಮೇಲೆ ಕ್ಲಿಕ್ ಮಾಡಿ. |
02:02 | ಈಗ Ctrl + F ಕೀಗಳನ್ನು ಒತ್ತಿ ಮತ್ತು DOCUMENT underscore ROOT ಅನ್ನು ಹುಡುಕಿ. |
02:10 | ಇದು Apache Environment ಟೇಬಲ್ ನಲ್ಲಿ ಇದೆ. |
02:14 | DOCUMENT underscore ROOT ನ ವ್ಯಾಲ್ಯೂ, slash opt slash lampp slash htdocs ಅಥವಾ slash var slash www ಆಗಿರುತ್ತದೆ. |
02:30 | ನನ್ನ ಮಷಿನ್ ನಲ್ಲಿ, ಅದು slash opt slash lampp slash htdocs ಆಗಿದೆ. |
02:37 | ಈ ಪಾಥ್ ಅನ್ನು ಗುರುತಿಸಿಕೊಳ್ಳಿಸಿ. ನಾವು 'ಮೂಡಲ್' ಅನ್ನು ಇಲ್ಲಿ ಇನ್ಸ್ಟಾಲ್ ಮಾಡಲಿದ್ದೇವೆ. |
02:43 | ಈಗ 'ಮೂಡಲ್' ಅನ್ನು ಡೌನ್ಲೋಡ್ ಮಾಡಲು ಪ್ರಾರಂಭಿಸೋಣ.
'ಮೂಡಲ್' ನ ಅಧಿಕೃತ ವೆಬ್ಸೈಟ್ ಆಗಿರುವ moodle.org ಗೆ ಹೋಗಿ. |
02:53 | ಮೇಲಿನ ಮೆನ್ಯೂನಲ್ಲಿ, Downloads ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ, ಇತ್ತೀಚಿನ ಬಿಡುಗಡೆಯ MOODLE 3.3+ ಬಟನ್ ಮೇಲೆ ಕ್ಲಿಕ್ ಮಾಡಿ. |
03:04 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, 'ಮೂಡಲ್' ನ ಇತ್ತೀಚಿನ ಸ್ಥಿರ ಆವೃತ್ತಿಯು 3.3 ಆಗಿತ್ತು.
ನೀವು ಪ್ರಯತ್ನಿಸಿದಾಗ ಅದು ಬೇರೆ ಆಗಿರಬಹುದು. |
03:15 | Download zip ಬಟನ್ ಮೇಲೆ ಕ್ಲಿಕ್ ಮಾಡಿ. ಇದು ನಮ್ಮ ಮಷಿನ್ ನಲ್ಲಿ, 'ಮೂಡಲ್' ಅನ್ನು ಡೌನ್ಲೋಡ್ ಮಾಡಲು ಪ್ರಾರಂಭಿಸುತ್ತದೆ. |
03:22 | ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ, ಇದು ನನ್ನ Downloads ಫೋಲ್ಡರ್ ನಲ್ಲಿದೆ. ಹೀಗಾಗಿ ನಾನು ಈ ಹಂತವನ್ನು ಬಿಟ್ಟುಬಿಡುತ್ತೇನೆ. |
03:30 | Ctrl + Alt + T ಕೀಗಳನ್ನು ಒಟ್ಟಿಗೆ ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ. |
03:36 | ಟರ್ಮಿನಲ್ ನಲ್ಲಿ, ಡಿರೆಕ್ಟರೀ ಯನ್ನು Downloads ಗೆ ಬದಲಾಯಿಸುತ್ತೇನೆ. |
03:40 | ಇದನ್ನು ಮಾಡಲು, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: cd space Downloads ಮತ್ತು Enter ಅನ್ನು ಒತ್ತಿ. |
03:48 | ನಿಮ್ಮ ಸಿಸ್ಟಂ ನಲ್ಲಿ, ನೀವು ಮೂಡಲ್ ಅನ್ನು ಡೌನ್ಲೋಡ್ ಮಾಡಿದ 'ಪಾಥ್' ಅನ್ನು ಟೈಪ್ ಮಾಡಬೇಕು. |
03:53 | ನೀವು ಆ ಡಿರೆಕ್ಟರೀಯಲ್ಲಿ ಬಂದಾಗ, ಅಲ್ಲಿರುವ ಫೈಲ್ ಗಳನ್ನು ಲಿಸ್ಟ್ ಮಾಡಲು ls ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
04:01 | ನನ್ನ Moodle ಇನ್ಸ್ಟಾಲ್ಲೇಶನ್ ಫೈಲ್ ಇಲ್ಲಿದೆ. ಇದರ ಹೆಸರು moodle hyphen latest hyphen 33 dot zip ಎಂದಿದೆ. |
04:11 | ಡೌನ್ಲೋಡ್ ಮಾಡುವಾಗ, ನೀವು ಅದಕ್ಕೆ ಬೇರೆ ಹೆಸರನ್ನು ಕೊಟ್ಟಿದ್ದರೆ (rename), ಆ ಫೈಲ್ ಅನ್ನು ನಿಮ್ಮ ಫೋಲ್ಡರ್ ನಲ್ಲಿ ಹುಡುಕಿ. |
04:19 | ಆಮೇಲೆ, ಈ 'ಝಿಪ್' ಫೈಲ್ ನಲ್ಲಿರುವುದನ್ನು moodle ಫೋಲ್ಡರ್ ನಲ್ಲಿ extract ಮಾಡಬೇಕು (ಹೊರಗೆತೆಗೆ). |
04:26 | 'ಕಮಾಂಡ್ ಪ್ರಾಂಪ್ಟ್' ನಲ್ಲಿ, ಹೀಗೆ ಟೈಪ್ ಮಾಡಿ: sudo space unzip space moodle hyphen latest hyphen 33 dot zip space hyphen d space slash opt slash lampp slash htdocs slash. Enter ಅನ್ನು ಒತ್ತಿ. |
04:51 | Ctrl + L ಒತ್ತಿ ಟರ್ಮಿನಲ್ ಅನ್ನು ತೆರವುಗೊಳಿಸೋಣ. |
04:56 | ಈಗ, ಹೀಗೆ ಟೈಪ್ ಮಾಡಿ: cd space slash opt slash lampp slash htdocs ಮತ್ತು Enter ಅನ್ನು ಒತ್ತಿ. |
05:06 | ಈ ಡಿರೆಕ್ಟರೀಯಲ್ಲಿರುವ ಫೈಲ್ ಗಳನ್ನು ಲಿಸ್ಟ್ ಮಾಡಲು, ls ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
05:12 | moodle ಎಂಬ ಹೊಸ ಫೋಲ್ಡರ್ ಅನ್ನು ಕ್ರಿಯೇಟ್ ಮಾಡಿರುವುದನ್ನು ನೀವು ನೋಡಬಹುದು. |
05:18 | moodle ಫೋಲ್ಡರ್ ನ owner ನಿಗೆ ಮತ್ತು group members ಗೆ read, write ಹಾಗೂ execute ಪರ್ಮಿಷನ್ ಗಳನ್ನು ಕೊಡೋಣ. |
05:27 | ಇದಕ್ಕಾಗಿ, ಹೀಗೆ ಟೈಪ್ ಮಾಡಿ: sudo space chmod space 777 space moodle slash ಮತ್ತು Enter ಅನ್ನು ಒತ್ತಿ. |
05:39 | ಕೇಳಿದರೆ, administrative ಪಾಸ್ವರ್ಡ್ ಅನ್ನು ಕೊಡಿ ಮತ್ತು Enter ಅನ್ನು ಒತ್ತಿ. |
05:45 | ಬ್ರೌಸರ್ ಗೆ ಹಿಂದಿರುಗಿ, ಹೀಗೆ ಟೈಪ್ ಮಾಡಿ: http colon double slash 127.0.0.1 slash moodle ಅಥವಾ http colon double slash localhost slash moodle |
06:06 | ಇಲ್ಲಿ ನನ್ನ localhost IP ಯನ್ನು ಟೈಪ್ ಮಾಡಿದ್ದೇನೆ. |
06:10 | ಈ IP, moodle ಅನ್ನು ಇನ್ಸ್ಟಾಲ್ ಮಾಡಿರುವ ಮಷಿನ್ ನ IP ಆಗಿರಬೇಕು.
ಗಮನಿಸಿ- ಹಿಂದೆ, moodle ಫೋಲ್ಡರ್ ನಲ್ಲಿಯೇ ನಾವು extract ಮಾಡಿದ್ದೆವು. |
06:23 | Enter ಅನ್ನು ಒತ್ತಿ. Moodle ಇನ್ಸ್ಟಾಲ್ಲೇಶನ್ ಪೇಜ್ ಅನ್ನು ನೀವು ನೋಡುವಿರಿ. |
06:29 | ಡೀಫಾಲ್ಟ್ ಆಗಿ, ನಾವು ಮೊದಲನೇ ಹಂತವಾದ Configuration ನಲ್ಲಿ ಇದ್ದೇವೆ.
ಗಮನಿಸಿ: Moodle ಅನ್ನು ಬಹು ಭಾಷೆಗಳಲ್ಲಿ ಇನ್ಸ್ಟಾಲ್ ಮಾಡಬಹುದು. |
06:40 | ಆದರೆ ನಾವು ಇಂಗ್ಲಿಷ್ ಭಾಷೆಗೆ ಮಾತ್ರ ಸೀಮಿತಗೊಳಿಸಲಿದ್ದೇವೆ.
ಹೀಗಾಗಿ, ಇಲ್ಲಿ English ಅನ್ನು ಆಯ್ಕೆಮಾಡಿ. Language ಡ್ರಾಪ್-ಡೌನ್ ಕೆಳಗೆ, Next ಬಟನ್ ಮೇಲೆ ಕ್ಲಿಕ್ ಮಾಡಿ. |
06:52 | ನಂತರ Paths ಎಂಬ ಪೇಜ್ ಇದೆ.
ಇಲ್ಲಿ Web address, Moodle directory ಹಾಗೂ Data directory ಗಳನ್ನು ವಿವರಿಸಲಾಗಿದೆ. |
07:02 | Web address- Moodle ಅನ್ನು ಇನ್ಸ್ಟಾಲ್ ಮಾಡಿದ ಮೇಲೆ ಅದನ್ನು ಆಕ್ಸೆಸ್ ಮಾಡಲು ಇರುವ URL ಆಗಿದೆ. |
07:08 | ಇದು, ನಾವು ಮೇಲೆ ನಮೂದಿಸಿದ URL ಆಗಿದ್ದು, ಅದನ್ನೇ ಇಲ್ಲಿ ತೋರಿಸಲಾಗಿದೆ: |
07:14 | Moodle directory ಫೋಲ್ಡರ್ ನಲ್ಲಿ, ಎಲ್ಲಾ Moodle ಕೋಡ್ ಲಭ್ಯವಿದೆ. |
07:20 | ಗಮನಿಸಿ - Web address ಮತ್ತು Moodle directory ಇವೆರಡೂ ಫೀಲ್ಡ್ ಗಳನ್ನು ಎಡಿಟ್ ಮಾಡಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ. |
07:31 | ಆಮೇಲೆ Data directory ಇದೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಅಪ್ಲೋಡ್ ಮಾಡಲಾದ ಫೈಲ್ ಗಳಲ್ಲಿ ಇರುವ ಎಲ್ಲವನ್ನೂ ಈ ಫೋಲ್ಡರ್ ನಲ್ಲಿ ಸ್ಟೋರ್ ಮಾಡಲಾಗುತ್ತದೆ. |
07:42 | ಈ ಫೋಲ್ಡರ್, read ಹಾಗೂ write ಪರ್ಮಿಷನ್ ಗಳನ್ನು ಹೊಂದಿರಬೇಕು. ಆದ್ದರಿಂದ ಫೈಲ್ ಗಳನ್ನು ಇಲ್ಲಿ ಸ್ಟೋರ್ ಮಾಡಬಹುದು. |
07:50 | ಆದಾಗ್ಯೂ, ಸೆಕ್ಯೂರಿಟಿ ಕಾರಣಗಳಿಗಾಗಿ, ಇದು ವೆಬ್ ನಲ್ಲಿ ನೇರವಾಗಿ ಆಕ್ಸೆಸ್ ಆಗಬಾರದು. |
07:57 | ಆದ್ದರಿಂದ, ಅದನ್ನು ಇನ್ಸ್ಟಾಲ್ಲೇಶನ್ ಫೋಲ್ಡರ್ ನ ಹೊರಗೆ ಇಡಬೇಕಾಗುತ್ತದೆ. |
08:03 | lampp ಫೊಲ್ಡರ್ ನ ಒಳಗೆ moodledata, ಡೀಫಾಲ್ಟ್ Data directory ಆಗಿದೆ. ಇದನ್ನು installer ಕ್ರಿಯೇಟ್ ಮಾಡಲು ಪ್ರಯತ್ನಿಸುತ್ತದೆ. |
08:11 | ಆದಾಗ್ಯೂ, ಇಲ್ಲಿ ಫೋಲ್ಡರ್ ಅನ್ನು ರಚಿಸಲು ಅನುಮತಿ ಇಲ್ಲ. ಆದ್ದರಿಂದ, ಈ ಫೋಲ್ಡರ್ ಅನ್ನು ನಾವೇ ರಚಿಸಿ, ಅಗತ್ಯವಿರುವ ಪರ್ಮಿಷನ್ ಗಳನ್ನು ಕೊಡಬೇಕು. |
08:23 | ಟರ್ಮಿನಲ್ ವಿಂಡೋಗೆ ಹೋಗಿ.
ಪ್ರಾಂಪ್ಟ್ ನಲ್ಲಿ, ಹೀಗೆ ಟೈಪ್ ಮಾಡಿ: sudo space mkdir space slash opt slash lampp slash moodledata ಮತ್ತು Enter ಅನ್ನು ಒತ್ತಿ. |
08:41 | ಈಗ, ಹೀಗೆ ಟೈಪ್ ಮಾಡಿ: sudo space chmod space 777 space slash opt slash lampp slash moodledata ಮತ್ತು Enter ಅನ್ನು ಒತ್ತಿ. |
08:57 | ಬ್ರೌಸರ್ ಗೆ ಹಿಂದಿರುಗಿ ಮತ್ತು Next ಬಟನ್ ಮೇಲೆ ಕ್ಲಿಕ್ ಮಾಡಿ. |
09:02 | ಆನಂತರ, database configuration ಪೇಜ್ ಬರುತ್ತದೆ.
ಡ್ರಾಪ್-ಡೌನ್ ನಿಂದ MariaDBಅನ್ನು ಆಯ್ಕೆಮಾಡಿ ಮತ್ತು Next ಬಟನ್ ಮೇಲೆ ಕ್ಲಿಕ್ ಮಾಡಿ. |
09:13 | Database Host ಹೆಸರನ್ನು localhost ಎಂದು ಕೊಡುತ್ತೇನೆ. |
09:18 | ಈಗ, ನಾವು Database name, username ಹಾಗೂ password ಗಳನ್ನು ನಮೂದಿಸಬೇಕು.
ಇವುಗಳನ್ನು ಹಿಂದೆ phpMyAdmin ನಲ್ಲಿ ಕ್ರಿಯೇಟ್ ಮಾಡಿದ್ದೆವು. |
09:30 | ನಾನು database name ಅನ್ನು moodle-st ಎಂದು (ಮೂಡಲ್ ಹೈಫನ್ ಎಸ್ ಟಿ), |
09:36 | database user-name ಅನ್ನು moodle-st ಎಂದು, |
09:41 | ಮತ್ತು ನನ್ನ database password ಅನ್ನು moodle-st ಎಂದು ನಮೂದಿಸುವೆನು. |
09:46 | Table Prefix ಮತ್ತು ಇತರ ಫೀಲ್ಡ್ ಗಳನ್ನು ಇದ್ದ ಹಾಗೇ ಇಡಿ ಮತ್ತು Next ಮೇಲೆ ಕ್ಲಿಕ್ ಮಾಡಿ. |
09:54 | ನಾವು terms and conditions ಪೇಜ್ ಅನ್ನು ನೋಡುತ್ತೇವೆ. |
09:59 | ಇಲ್ಲಿ ನೀವು ಲೈಸೆನ್ಸ್ ಅಗ್ರೀಮೆಂಟ್ ಅನ್ನು (ಪರವಾನಗಿ ಒಪ್ಪಂದ) ಓದಿ, ಅದನ್ನು ಒಪ್ಪಿಕೊಳ್ಳಬೇಕು.
ಟೆಕ್ಸ್ಟ್ ಅನ್ನು ಓದಿ, ನಂತರ Continue ಮೇಲೆ ಕ್ಲಿಕ್ ಮಾಡಿ. |
10:10 | ಆಮೇಲೆ Server Checks ಪೇಜ್ ಅನ್ನು ನೋಡುತ್ತೇವೆ.
Your server environment meets all minimum requirements ಎಂಬ ಮೆಸೇಜ್ ಅನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ. |
10:23 | ಇಲ್ಲಿ ತೋರಿಸಿರುವಂತೆ ನೀವು ಬೇರೆ ಎರರ್ ಗಳನ್ನು ಪಡೆಯಬಹುದು:
ಉತ್ತರಗಳಿಗೆ, ಈ ಟ್ಯುಟೋರಿಯಲ್ ನ Additional reading material ಲಿಂಕ್ ಅನ್ನು ನೋಡಿ. |
10:33 | Continue ಮೇಲೆ ಕ್ಲಿಕ್ ಮಾಡಿ. |
10:36 | ನಿಮ್ಮ ಇಂಟರ್ನೆಟ್ ವೇಗವನ್ನು ಅವಲಂಬಿಸಿ, ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
ನೀವು ಪೇಜ್ ಅನ್ನು ರಿಫ್ರೆಶ್ ಮಾಡಿದರೆ, ನಿಮಗೆ Site is being upgraded, please retry later ಎಂಬ ಎರರ್ ಮೆಸೇಜ್ ಸಿಗಬಹುದು. |
10:50 | ಹಾಗಿದ್ದಲ್ಲಿ, ದಯವಿಟ್ಟು ಸ್ವಲ್ಪ ಸಮಯದ ನಂತರ ರಿಫ್ರೆಶ್ ಮಾಡಿ. |
10:54 | ಇನ್ಸ್ಟಾಲ್ಲೇಶನ್ ಯಶಸ್ವಿಯಾದ ಮೆಸೇಜ್ ನಿಮಗೆ ಸಿಕ್ಕಾಗ, Continue ಅನ್ನು ಕ್ಲಿಕ್ ಮಾಡಿ. |
11:00 | ಮುಂದಿನ ಪೇಜ್, administrator configuration ಗಾಗಿ ಇದೆ. |
11:05 | Moodle Administrative ಪೇಜ್ ಗಾಗಿ, ನಿಮಗೆ ಬೇಕಾದ username ಅನ್ನು ನಮೂದಿಸಿ.
ನಾನು username ಅನ್ನು admin ಎಂದು ಕೊಡುತ್ತೇನೆ. |
11:15 | ಈಗ Moodle Administrator ಗಾಗಿ ಒಂದು ಪಾಸ್ವರ್ಡ್ ಅನ್ನು ಕೊಡಿ.
ಇಲ್ಲಿ ತೋರಿಸಿರುವಂತೆ, ಪಾಸ್ವರ್ಡ್ ಈ ನಿಯಮಗಳನ್ನು ಅನುಸರಿಸಬೇಕು. |
11:26 | ಪಾಸ್ವರ್ಡ್ ಅನ್ನು ನಮೂದಿಸಲು, Click to enter text ಲಿಂಕ್ ಮೇಲೆ ಕ್ಲಿಕ್ ಮಾಡಿ. |
11:32 | ನಾನು Spokentutorial1@ ಅನ್ನು, ನನ್ನ admin password ಎಂದು ನಮೂದಿಸುತ್ತೇನೆ. ಪಾಸ್ವರ್ಡ್ ಅನ್ನು ತೋರಿಸಲು Unmask ಐಕಾನ್ ಮೇಲೆ ಕ್ಲಿಕ್ ಮಾಡಿ. |
11:43 | ನಂತರದ ಬಳಕೆಗಾಗಿ, ನಿಮ್ಮ 'ಯೂಸರ್ ನೇಮ್' ಹಾಗೂ ಪಾಸ್ವರ್ಡ್ ಗಳನ್ನು ನೆನಪಿಟ್ಟುಕೊಳ್ಳಿ. |
11:49 | Email address ಒಂದು ಕಡ್ಡಾಯವಾದ ಫೀಲ್ಡ್ ಆಗಿದೆ.
ಇಲ್ಲಿ ನಾನು priyankaspokentutorial@gmail.com ಎಂದು ನಮೂದಿಸುತ್ತೇನೆ. |
11:59 | Select a country ಡ್ರಾಪ್-ಡೌನ್ ನಲ್ಲಿ, India ಅನ್ನು ಆಯ್ಕೆಮಾಡಿ.
timezone ಅನ್ನು Asia/Kolkata ಎಂದು ಆಯ್ಕೆಮಾಡಿ. |
12:08 | ನಾವು ಉಳಿದ ಫೀಲ್ಡ್ ಗಳನ್ನು ಅವುಗಳ ಡೀಫಾಲ್ಟ್ ವ್ಯಾಲ್ಯೂಗಳೊಂದಿಗೆ ಇಡುತ್ತೇವೆ. |
12:13 | ಕೆಳಗೆ ಸ್ಕ್ರೋಲ್ ಮಾಡಿ ಮತ್ತು Update Profile ಬಟನ್ ಮೇಲೆ ಕ್ಲಿಕ್ ಮಾಡಿ. |
12:18 | 'ಮೂಡಲ್', ಸಂಪನ್ಮೂಲವನ್ನು ಬಳಸುವ ಸಾಫ್ಟ್ವೇರ್ ಆಗಿದೆ. ಪ್ರತಿ ಹಂತವೂ ಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳಬಹುದು. |
12:27 | ಮುಂದಿನ ಪೇಜ್ ಲೋಡ್ ಆಗಲು ನಿರೀಕ್ಷಿಸಿ, ಪೇಜ್ ಅನ್ನು ಮುಚ್ಚಬೇಡಿ ಅಥವಾ ರಿಫ್ರೆಶ್ ಮಾಡಬೇಡಿ. |
12:34 | ಮುಂದಿನ ಸ್ಕ್ರೀನ್ Front page settings ಗಾಗಿ ಇದೆ.
ಜನರು ನಮ್ಮ ‘ಮೂಡಲ್ ಸೈಟ್’ ಅನ್ನು ಭೇಟಿ ಮಾಡಿದಾಗ, ಈ ಪೇಜ್ ಅನ್ನು ನೋಡುತ್ತಾರೆ. |
12:45 | Full Site Name ನಲ್ಲಿ Digital India LMS ಎಂದು ನಮೂದಿಸಿ. |
12:50 | Short name for site ನಲ್ಲಿ, ಮತ್ತೊಮ್ಮೆDigital India LMS ನಮೂದಿಸಿ.
ನ್ಯಾವಿಗೇಷನ್ ಬಾರ್ ನಲ್ಲಿ, ಇದು 'ಮೂಡಲ್ ಸೈಟ್'ನ ಹೆಸರು ಆಗಿ ಕಾಣಿಸುತ್ತದೆ. |
13:03 | Front Page Summary ಯನ್ನು ನಾವು ಸಧ್ಯಕ್ಕೆ ಖಾಲಿ ಬಿಡೋಣ.
timezone ಅನ್ನು Asia/Kolkata ಎಂದು ಆಯ್ಕೆಮಾಡಿ. |
13:11 | ಮುಂದಿನ ಡ್ರಾಪ್-ಡೌನ್ Self Registration ಆಗಿದೆ.
ಇದನ್ನು ಸಕ್ರಿಯಗೊಳಿಸಿದರೆ, ಹೊಸ ಯೂಸರ್ ತಮ್ಮನ್ನು ತಾವೇ ನೋಂದಾಯಿಸಬಹುದು. |
13:23 | ಡ್ರಾಪ್-ಡೌನ್ ನಿಂದ, Disable ಅನ್ನು ಆಯ್ಕೆಮಾಡಿ.
ನಂತರ no-reply address ಟೆಕ್ಸ್ಟ್-ಬಾಕ್ಸ್ ಇದೆ. |
13:31 | ಈ ಫೀಲ್ಡ್ ನಲ್ಲಿ ಡೀಫಾಲ್ಟ್ ವ್ಯಾಲ್ಯೂ noreply@localhost ಆಗಿದೆ.
ಇದು ಸರಿಯಾದ ಇಮೇಲ್- ಐ ಡಿ ಆಗಿಲ್ಲ. ಆದ್ದರಿಂದ ಇದನ್ನು noreply@localhost.com ಗೆ ಬದಲಾಯಿಸಿ. |
13:46 | 'ಮೂಡಲ್' ಗೆ ತೋರಿಸಲು ಯಾವುದೇ ಇಮೇಲ್ ID ಇಲ್ಲದಿರುವಾಗ, ಈ ಇಮೇಲ್ ID ಅನ್ನು From ವಿಳಾಸದಿಂದ ತೋರಿಸಲಾಗುತ್ತದೆ. |
13:55 | ಉದಾಹರಣೆಗೆ, ನನ್ನ ವಿಳಾಸವನ್ನು private ಎಂದು ಇಡಲು ನಾನು ಸೂಚಿಸಿದರೆ, ನನ್ನ ಪರವಾಗಿ ಕಳುಹಿಸಿದ ಎಲ್ಲಾ ಮೇಲ್ ಗಳು ಈ ಇಮೇಲ್ ID ಯನ್ನು ಹೊಂದಿರುತ್ತವೆ.
ಕೊನೆಯದಾಗಿ, Save Changes ಬಟನ್ ಮೇಲೆ ಕ್ಲಿಕ್ ಮಾಡಿ. |
14:10 | ನಾವು ಈಗ Moodle ಅನ್ನು ಬಳಸಲು ಸಿದ್ಧವಾಗಿದ್ದೇವೆ.
ನೀವು ಇಲ್ಲಿ ಹೊಸ ಸೈಟ್ ನ ಮುಂದಿನ ಪೇಜ್ ಅನ್ನು ನೋಡಬಹುದು. |
14:17 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ. ಸಂಕ್ಷಿಪ್ತವಾಗಿ, |
14:23 | ಈ ಟ್ಯುಟೋರಿಯಲ್ ನಲ್ಲಿ ನಾವು:
Moodle ಅನ್ನು, moodle.org ಯಿಂದ ಡೌನ್ಲೋಡ್ ಮಾಡಲು ಮತ್ತು ಲೋಕಲ್-ಸರ್ವರ್ ಮೇಲೆ ಅದನ್ನು ಇನ್ಸ್ಟಾಲ್ ಮಾಡಲು ಕಲಿತಿದ್ದೇವೆ. |
14:33 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ.
ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
14:41 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
14:51 | ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ: http://forums.spoken-tutorial.org |
15:00 | ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ.
ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ. |
15:10 | ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ನಲ್ಲಿ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇದೆ. |
15:15 | ದಯವಿಟ್ಟು ಇದಕ್ಕೆ ಸಂಬಂಧಿಸದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. |
15:21 | ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಕೆಯ ವಸ್ತುವಿನಂತೆ ಬಳಸಬಹುದು. |
15:31 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
15:45 | ಈ ಸ್ಕ್ರಿಪ್ಟ್, ಪ್ರಿಯಾಂಕಾ ಅವರ ಕೊಡುಗೆಯಾಗಿದೆ.
ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |