Moodle-Learning-Management-System/C2/Courses-in-Moodle/Kannada
Time | Narration |
00:01 | Courses in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
ಕೋರ್ಸ್ ಅನ್ನು ತಯಾರಿಸುವುದು ಮತ್ತು ಅವುಗಳಲ್ಲಿ ಕ್ರಿಯೆಗಳನ್ನು ನಿರ್ವಹಿಸುವುದರ ಬಗ್ಗೆ ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:24 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ. |
00:38 | ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು. |
00:42 | ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:50 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಮೂಡಲ್ ನಲ್ಲಿ categories ಅನ್ನು ಕ್ರಿಯೇಟ್ ಮಾಡುವುದರ ಬಗ್ಗೆ ತಿಳಿದಿರಬೇಕು. |
00:56 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:03 | ಬ್ರೌಸರ್ ಗೆ ಬದಲಾಯಿಸಿ ಮತ್ತು ನಿಮ್ಮ moodle ಹೋಮ್-ಪೇಜ್ ಅನ್ನು ತೆರೆಯಿರಿ. XAMPP ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. |
01:11 | ನಿಮ್ಮ admin username ಮತ್ತು ಪಾಸ್ವರ್ಡ್ ಗಳೊಂದಿಗೆ ಲಾಗ್-ಇನ್ ಮಾಡಿ. |
01:16 | ಈಗ ನಾವು ‘Admin’ ಡ್ಯಾಶ್-ಬೋರ್ಡ್’ ನಲ್ಲಿದ್ದೇವೆ. |
01:19 | ಎಡಭಾಗದಲ್ಲಿ, ನ್ಯಾವಿಗೇಶನ್ ಮೆನ್ಯೂವನ್ನು ತೆರೆಯಲು drawer ಮೆನ್ಯೂ ಮೇಲೆ ಕ್ಲಿಕ್ ಮಾಡಿ. |
01:25 | ಇದರಲ್ಲಿ Site Administration ಮೇಲೆ ಕ್ಲಿಕ್ ಮಾಡಿ. |
01:29 | Courses ಟ್ಯಾಬ್ ಮೇಲೆ, ನಂತರ Manage courses and categories ಮೇಲೆ ಕ್ಲಿಕ್ ಮಾಡಿ. |
01:36 | ಇಲ್ಲಿ Mathematics ಎಂಬ ಒಂದೇ ಒಂದು ‘ಕ್ಯಾಟೆಗರಿ’ ಮತ್ತು |
01:41 | ನಾವು ಮೊದಲು ಕ್ರಿಯೇಟ್ ಮಾಡಿದ್ದ 1st Year Maths ಹಾಗೂ 2nd Year Maths ಎಂಬ ಎರಡು 'ಸಬ್ ಕ್ಯಾಟೆಗರಿ' ಗಳು ಮಾತ್ರ ಇರುವುದನ್ನು ಗಮನಿಸಿ. |
01:50 | ಈಗ ನಾವು Mathematics ನ ಅಡಿಯಲ್ಲಿ, ಒಂದು ಹೊಸ 'ಕೋರ್ಸ್' ಅನ್ನು ಕ್ರಿಯೇಟ್ ಮಾಡೋಣ. |
01:55 | ಇದಕ್ಕಾಗಿ, Create new course ಮೇಲೆ ಕ್ಲಿಕ್ ಮಾಡಿ. |
01:59 | Add a new course ಸ್ಕ್ರೀನ್ ನಲ್ಲಿ, ಎಲ್ಲಾ ಫೀಲ್ಡ್ ಗಳನ್ನು ನೋಡಲು, ಮೇಲೆ ಬಲಭಾಗದಲ್ಲಿ Expand All ಮೇಲೆ ಕ್ಲಿಕ್ ಮಾಡಿ. |
02:12 | Course full name ಟೆಕ್ಸ್ಟ್-ಬಾಕ್ಸ್ ನಲ್ಲಿ, Calculus ಎಂದು ಟೈಪ್ ಮಾಡುವೆವು. |
02:18 | Course short name ನಲ್ಲಿ, ನಾವು ಮತ್ತೆ Calculus ಎಂದು ಟೈಪ್ ಮಾಡುವೆವು. |
02:24 | breadcrumbs ನಲ್ಲಿ ಹಾಗೂ 'ಕೋರ್ಸ್' ಗೆ ಸಂಬಂಧಿತ ಇ-ಮೇಲ್ ಗಳಲ್ಲಿ, Course short name ಅನ್ನು ಬಳಸಲಾಗುವುದು. |
02:31 | ಇದು course full name ಗಿಂತ ಭಿನ್ನವಾಗಿರಬಹುದು. |
02:35 | ನಾವು ನೋಡುವಂತೆ, Course Category ಯು Mathematics ಆಗಿದೆ. |
02:40 | ಮುಂದಿನ ಆಯ್ಕೆಯು Course visibility ಆಗಿದೆ. ಡೀಫಾಲ್ಟ್ ಆಗಿ, Show ಅನ್ನು ಆಯ್ಕೆಮಾಡಲಾಗಿದೆ. |
02:48 | Visible ಸೆಟ್ಟಿಂಗ್, ಇತರ ಕೋರ್ಸ್‌ಗಳ ಜೊತೆಗೆ ಈ 'ಕೋರ್ಸ್' ಅನ್ನು ತೋರಿಸಲಾಗುತ್ತದೆಯೆ ಅಥವಾ ಇಲ್ಲವೇ ಎಂದು ನಿರ್ಧರಿಸುತ್ತದೆ. |
02:56 | ಅಡಗಿಸಲಾದ 'ಕೋರ್ಸ್', ಆ ಕೋರ್ಸ್ ಅನ್ನು ಅಸೈನ್ ಮಾಡಿದವರಿಗೆ, ಎಂದರೆ Admin, Course creator, Teacher, Manager ಇವರಿಗೆ ಮಾತ್ರ ಕಾಣಿಸುತ್ತದೆ. |
03:08 | ಸದ್ಯಕ್ಕೆ, ಈ ಸೆಟ್ಟಿಂಗ್ ಅನ್ನು ನಾವು ಹಾಗೆಯೇ ಬಿಡುವೆವು. |
03:12 | ನಂತರ Course start date ಇದೆ. |
03:16 | ಸೆಮೆಸ್ಟರ್ ಆರಂಭದ ದಿನದಂತಹ ಒಂದು ನಿರ್ದಿಷ್ಟ ದಿನಾಂಕದಂದು 'ಕೋರ್ಸ್' ಆರಂಭವಾಗುತ್ತಿದ್ದರೆ, ಅದನ್ನು start date ನಲ್ಲಿ ಆಯ್ಕೆಮಾಡಿ. |
03:25 | ಇದರರ್ಥ, start date ವರೆಗೆ ಈ 'ಕೋರ್ಸ್' ವಿದ್ಯಾರ್ಥಿಗಳಿಗೆ ಕಾಣಿಸುವುದಿಲ್ಲ. |
03:32 | ಡೀಫಾಲ್ಟ್ ಆಗಿ, Course end date ಅನ್ನು ಸಕ್ರಿಯಗೊಳಿಸಿ, ಕೋರ್ಸ್ ಅನ್ನು ಕ್ರಿಯೇಟ್ ಮಾಡಿದ ದಿನಾಂಕಕ್ಕೆ ಅದನ್ನು ಸೆಟ್ ಮಾಡಲಾಗಿದೆ. |
03:42 | ಚೆಕ್‌ಬಾಕ್ಸ್ ಕ್ಲಿಕ್ ಮಾಡಿ ಅದನ್ನು ನಿಷ್ಕ್ರಿಯಗೊಳಿಸುತ್ತೇನೆ. ಇದರರ್ಥ, ಈ ಕೋರ್ಸ್ ಎಂದಿಗೂ ಮುಗಿಯುವುದಿಲ್ಲ. |
03:51 | ಆದಾಗ್ಯೂ, 'ಕೋರ್ಸ್' ಗೆ ಅಂತಿಮ ದಿನಾಂಕವಿದ್ದರೆ, ನೀವು ಇಲ್ಲಿ ಚೆಕ್‌ಬಾಕ್ಸ್ ಅನ್ನು ಸಕ್ರಿಯಗೊಳಿಸಬಹುದು.
ನಂತರ ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ದಿನಾಂಕವನ್ನು ಆಯ್ಕೆ ಮಾಡಿ. |
04:02 | ದಯವಿಟ್ಟು ಗಮನಿಸಿ: ಆಯ್ದ end date ನಂತರ, ವಿದ್ಯಾರ್ಥಿಗಳಿಗೆ ಈ 'ಕೋರ್ಸ್' ಕಾಣಿಸುವುದಿಲ್ಲ.
ನಾನು ಇದನ್ನು ನಿಷ್ಕ್ರಿಯವಾಗಿಸುತ್ತೇನೆ. |
04:13 | Course ID number , Category ID number ನ ಹಾಗೆಯೇ ಇದೆ.
Course ID number ಒಂದು ಐಚ್ಛಿಕ ಫೀಲ್ಡ್ ಆಗಿದೆ. |
04:22 | ಇದು ಅಡ್ಮಿನ್ ಯೂಸರ್ ಗಳಿಗಾಗಿ, 'ಕೋರ್ಸ್' ಅನ್ನು ಆಫ್‌ಲೈನ್ ಕೋರ್ಸ್‌ಗಳೊಂದಿಗೆ ಗುರುತಿಸಲಿಕ್ಕಾಗಿ ಇರುತ್ತದೆ. |
04:28 | ಒಂದುವೇಳೆ ನಿಮ್ಮ ಕಾಲೇಜ್ ಕೋರ್ಸ್‌ಗಳಿಗಾಗಿ 'ಐಡಿ' ಗಳನ್ನು ಬಳಸುತ್ತಿದ್ದರೆ, ನೀವು ಆ course ID ಅನ್ನು ಇಲ್ಲಿ ಬಳಸಬಹುದು.
ಈ ಫೀಲ್ಡ್, ಇತರ ಮೂಡಲ್ ಬಳಕೆದಾರರಿಗೆ ಕಾಣಿಸುವುದಿಲ್ಲ. |
04:40 | ಈ ಫೀಲ್ಡ್, ಐಚ್ಛಿಕವಾಗಿದೆ ಮತ್ತು ವೆಬ್‌ಸೈಟ್‌ನಲ್ಲಿ ಎಲ್ಲಿಯೂ ಇದನ್ನು ಪ್ರದರ್ಶಿಸುವುದಿಲ್ಲ. ನಾನು ಇದನ್ನು ಖಾಲಿಯಾಗಿ ಇಟ್ಟುಬಿಡುತ್ತೇನೆ. |
04:49 | ಆಮೇಲೆ, Description ನ ಕೆಳಗೆ, ನಾವು Course Summary ಮತ್ತು Course Summary files ಎಂಬ 2 ಫೀಲ್ಡ್ ಗಳನ್ನು ನೋಡಬಹುದು. |
04:59 | Course summary- ಇದೊಂದು ಐಚ್ಛಿಕ ಆದರೆ ಮುಖ್ಯವಾದ ಫೀಲ್ಡ್ ಆಗಿದೆ. ಏಕೆಂದರೆ, user ನು (ಬಳಕೆದಾರ) ಹುಡುಕುವಾಗ, course summary ಟೆಕ್ಸ್ಟ್ ಅನ್ನು ಸಹ ಸ್ಕ್ಯಾನ್ ಮಾಡಲಾಗುತ್ತದೆ. |
05:13 | ಇಲ್ಲಿ Topic ಗಳ ಹೆಸರುಗಳನ್ನು ಪಟ್ಟಿ ಮಾಡುವುದು ಒಳ್ಳೆಯದು.
ಹೀಗೆ ಟೈಪ್ ಮಾಡಿ: Topics covered in this Calculus course are: Limits, Graph of a function, Factorial. |
05:29 | ಕೋರ್ಸ್ ಗಳ ಪಟ್ಟಿಯೊಂದಿಗೆ, Course summary ಯನ್ನು ಸಹ ಪ್ರದರ್ಶಿಸಲಾಗುತ್ತದೆ. |
05:35 | Course summary ಫೈಲ್ ಗಳನ್ನು, Course summary files ಫೀಲ್ಡ್ ನಲ್ಲಿಯೇ ಅಪ್ಲೋಡ್ ಮಾಡಬೇಕು. |
05:42 | ಡೀಫಾಲ್ಟ್ ಆಗಿ, jpg, gif ಹಾಗೂ png ವಿಧದ ಫೈಲ್ ಗಳನ್ನು ಮಾತ್ರ course summary files ಗಾಗಿ ಅನುಮತಿಸಲಾಗುತ್ತದೆ.
ನನಗೆ ಯಾವುದೇ ಫೈಲ್ ಅನ್ನು ಅಪ್‌ಲೋಡ್ ಮಾಡಬೇಕಾಗಿಲ್ಲ. ಆದ್ದರಿಂದ ಇದನ್ನು ಹಾಗೆಯೇ ಬಿಡುತ್ತೇನೆ. |
05:57 | ವಿದ್ಯಾರ್ಥಿಗಳಿಗಾಗಿ ಸಂಪನ್ಮೂಲಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾದ ವಿಧಾನವನ್ನು Course format ಸೂಚಿಸುತ್ತದೆ. |
06:06 | ಈ Format ಡ್ರಾಪ್‌ಡೌನ್‌ನಲ್ಲಿ, 4 ಆಯ್ಕೆಗಳಿವೆ -
Single Activity Format, Social Format, Topics Format ಮತ್ತು Weekly Format. |
06:20 | ಇಲ್ಲಿ ವಾರದಿಂದ ವಾರಕ್ಕೆ ನಡೆಯುವ ಕೋರ್ಸ್‌ಗಳು ಇವೆ. |
06:24 | ನಿಮ್ಮ ಕೋರ್ಸ್ ಹಾಗೆ ಇದ್ದರೆ, Weekly format ಅನ್ನು ಆಯ್ಕೆಮಾಡಿ. |
06:30 | ಕೋರ್ಸ್‌ನ ಪ್ರತಿಯೊಂದು ವಾರಕ್ಕಾಗಿ, ಮೂಡಲ್ start date ಮತ್ತು end date ಗಳೊಂದಿಗೆ ಒಂದು ವಿಭಾಗವನ್ನು ರಚಿಸುತ್ತದೆ. |
06:39 | Topic (ವಿಷಯ) ಗಳಿಗೆ ಅನುಸಾರವಾಗಿ ನಡೆಯುವ ಕೋರ್ಸ್‌ಗಳು ಇವೆ. ನಿಮ್ಮ ಕೋರ್ಸ್ ಹಾಗೆ ಇದ್ದರೆ, Topics format ಅನ್ನು ಆಯ್ಕೆಮಾಡಿ. |
06:49 | ಮೂಡಲ್, ಕೋರ್ಸ್‌ನ ಪ್ರತಿಯೊಂದು topic ಗಾಗಿ ಒಂದು ವಿಭಾಗವನ್ನು ರಚಿಸುತ್ತದೆ. |
06:55 | Topics format, ಈ ಫೀಲ್ಡ್ ಗಾಗಿ ಡೀಫಾಲ್ಟ್ ವ್ಯಾಲ್ಯೂ ಆಗಿದೆ. ನಾವು ಅದನ್ನು ಹಾಗೆಯೇ ಇಡುತ್ತೇವೆ. |
07:03 | ಡೀಫಾಲ್ಟ್ ಆಗಿ, ವಿಭಾಗಗಳ ಸಂಖ್ಯೆ 4 ಆಗಿದೆ. |
07:07 | ನಿಮ್ಮ ಕೋರ್ಸ್ ಅನ್ನು 4 ಕ್ಕಿಂತ ಹೆಚ್ಚು ಅಥವಾ ಕಡಿಮೆ topic ಗಳಲ್ಲಿ ವಿಂಗಡಿಸಿದ್ದರೆ, ಅದಕ್ಕೆ ಅನುಸಾರವಾಗಿ ಈ ಫೀಲ್ಡ್ ಅನ್ನು ಬದಲಾಯಿಸಿ.
ನಾನು ಈ ಸಂಖ್ಯೆಯನ್ನು 5 ಎಂದು ಮಾಡುತ್ತೇನೆ. |
07:20 | ಇತರ ಫಾರ್ಮ್ಯಾಟ್ ಗಳನ್ನು ನಾವು ನಂತರದ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸುತ್ತೇವೆ. |
07:25 | ಇನ್ನುಳಿದ ಆಯ್ಕೆಗಳನ್ನು ನಾವು ಹಾಗೆಯೇ ಬಿಡೋಣ.
ಪೇಜ್ ನ ಕೆಳಗೆ ಸ್ಕ್ರೋಲ್ ಮಾಡಿ ಮತ್ತು Save and display ಬಟನ್ ಮೇಲೆ ಕ್ಲಿಕ್ ಮಾಡಿ. |
07:36 | ನಮ್ಮನ್ನು Enrolled Users ಎಂಬ ಪೇಜ್ ಗೆ ಕಳಿಸಲಾಗಿದೆ. user enrollment ಬಗ್ಗೆ ನಾವು ನಂತರದ ಟ್ಯುಟೋರಿಯಲ್ ನಲ್ಲಿ ಕಲಿಯುತ್ತೇವೆ. |
07:46 | ಸದ್ಯಕ್ಕೆ, ನಾವು Mathematics ಕ್ಯಾಟೆಗರಿಯ ಅಡಿಯಲ್ಲಿ, ನಮ್ಮ ಮೊದಲ ಕೋರ್ಸ್ Calculus ಅನ್ನು ಯಶಸ್ವಿಯಾಗಿ ರಚಿಸಿದ್ದೇವೆ. |
07:56 | ನಾವು ಈ course ಪೇಜ್ ನಲ್ಲಿರುವಾಗ, ಎಡಭಾಗದಲ್ಲಿರುವ ಮೆನ್ಯೂ ಬದಲಾಗಿರುವುದನ್ನು ಗಮನಿಸಿ. |
08:03 | ಎಡಭಾಗದಲ್ಲಿರುವ ನ್ಯಾವಿಗೇಷನ್ ಮೆನ್ಯೂ, ನಾವು ರಚಿಸಿದ ಕೋರ್ಸ್ ಗೆ ಸಂಬಂಧಿಸಿದ ಮೆನ್ಯೂಗಳನ್ನು ಹೊಂದಿದೆ.
ಇವು Participants, Grades ಇತ್ಯಾದಿಗಳನ್ನು ಒಳಗೊಂಡಿವೆ. |
08:15 | ಎಡಗಡೆ, Calculus ಎಂಬ ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. |
08:20 | ಇಲ್ಲಿ 5 Topic ಗಳು ಕಾಣುತ್ತಿರುವುದನ್ನು ನಾವು ನೋಡಬಹುದು. ಇವುಗಳನ್ನು Topic 1, Topic 2 … ಹೀಗೆ ಹೆಸರಿಸಲಾಗಿದೆ.
ಈ ಮೊದಲು, ಸಂಖ್ಯೆ 5 ಅನ್ನು ನಾವು ಕೊಟ್ಟಿದ್ದೆವು ಎಂದು ನೆನಪಿಸಿಕೊಳ್ಳಿ. |
08:34 | ಪೇಜ್ ನ ಮೇಲಿನ ಬಲಭಾಗದಲ್ಲಿರುವ ಗೇರ್-ಐಕಾನ್ ಮೇಲೆ ಕ್ಲಿಕ್ ಮಾಡಿ. |
08:39 | ಆಮೇಲೆ Edit settings ಮೇಲೆ ಕ್ಲಿಕ್ ಮಾಡಿ.
ಈ ಕೋರ್ಸ್ ಅನ್ನು ಕ್ರಿಯೇಟ್ ಮಾಡಿದಾಗ, ನಾವು ಇದ್ದ ಪೇಜ್ ಅನ್ನೇ ಹೋಲುವ ಒಂದು ಪೇಜ್ ಅನ್ನು ಇದು ತೆರೆಯುತ್ತದೆ. |
08:51 | ಈ ಪೇಜ್ ನಲ್ಲಿ, ನಾವು ಹಿಂದಿನ ಸೆಟ್ಟಿಂಗ್‌ಗಳ ಬದಲಾವಣೆಗಳನ್ನು ಮಾಡಬಹುದು.
ನಾನು Course start date ಅನ್ನು 15th October 2017 ಗೆ ಬದಲಾಯಿಸುತ್ತೇನೆ. |
09:04 | ಪೇಜ್ ನ ಕೆಳಗೆ ಸ್ಕ್ರೋಲ್ ಮಾಡಿ ಮತ್ತು Save and display ಬಟನ್ ಮೇಲೆ ಕ್ಲಿಕ್ ಮಾಡಿ. |
09:11 | ಗೇರ್ ಮೆನ್ಯೂದ ಅಡಿಯಲ್ಲಿರುವ ಇತರ ಸಬ್-ಮೆನ್ಯೂಗಳನ್ನು ನಂತರ ನಾವು ಕಲಿಯುತ್ತೇವೆ. |
09:17 | ಈಗ ನಮ್ಮ ಕೋರ್ಸ್ ನ ರಚನೆಯನ್ನು ಸ್ವಲ್ಪ ಬದಲಾಯಿಸೋಣ. |
09:22 | Site administration ಮೇಲೆ ಕ್ಲಿಕ್ ಮಾಡಿ.
Courses ಮೇಲೆ, ಆನಂತರ Manage courses and categories ಮೇಲೆ ಕ್ಲಿಕ್ ಮಾಡಿ. |
09:31 | ನಾವು ಕ್ರಿಯೇಟ್ ಮಾಡಿದ ಕೋರ್ಸ್ ಅನ್ನು ನೋಡಲು, Mathematics ಕ್ಯಾಟೆಗರಿಯ ಮೇಲೆ ಕ್ಲಿಕ್ ಮಾಡಿ. ಕೋರ್ಸ್‌ನ ಬಲಭಾಗದಲ್ಲಿರುವ 3 ಐಕಾನ್‌ಗಳನ್ನು ಗಮನಿಸಿ. |
09:42 | ಐಕಾನ್‌ಗಳು ಏನಿವೆ ಎಂಬುದನ್ನು ನೋಡಲು ಅವುಗಳ ಮೇಲೆ ಕರ್ಸರ್ ಅನ್ನು ನಡೆದಾಡಿಸಿ. |
09:46 | ಗೇರ್-ಐಕಾನ್ ಕೋರ್ಸ್ ಅನ್ನು ಎಡಿಟ್ ಮಾಡಲು, delete ಅಥವಾ trash ಐಕಾನ್ ಕೋರ್ಸ್ ಅನ್ನು ಡಿಲೀಟ್ ಮಾಡಲು |
09:55 | ಮತ್ತು, ಕಣ್ಣಿನ ಐಕಾನ್ ಕೋರ್ಸ್ ಅನ್ನು ಮರೆಮಾಡಲು ಆಗಿದೆ. |
10:01 | ಅಡಗಿಸಲಾದ ಕೋರ್ಸ್ ಅನ್ನು ಸೂಚಿಸಲು ಕಣ್ಣಿನ ಐಕಾನ್ ಗೆ ಕ್ರಾಸ್ ಮಾಡಿರುತ್ತದೆ. |
10:07 | course settings ಅನ್ನು ಎಡಿಟ್ ಮಾಡಲು, ನಾವು ಕೋರ್ಸ್ ನ ಹೆಸರಿನ ಬಲಭಾಗದಲ್ಲಿರುವ ಗೇರ್ ಐಕಾನ್ ಮೇಲೆ ಕ್ಲಿಕ್ ಮಾಡಬಹುದು. |
10:14 | ನನಗೆ Course Summary ಯನ್ನು ಮಾರ್ಪಡಿಸಿ ಅದರಲ್ಲಿ ಈಗಿರುವ ವಿಷಯಗಳಿಗೆ Binomials ಅನ್ನು ಸೇರಿಸಬೇಕಾಗಿದೆ. ಉಳಿದ ಸೆಟ್ಟಿಂಗ್‌ಗಳು ಇದ್ದಹಾಗೇ ಇರಲಿ. |
10:25 | ಪೇಜ್ ನ ಕೆಳಗೆ ಸ್ಕ್ರೋಲ್ ಮಾಡಿ ಮತ್ತು ಈ ಬಾರಿ Save and return ಬಟನ್ ಮೇಲೆ ಕ್ಲಿಕ್ ಮಾಡಿ. |
10:34 | ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇಲ್ಲಿದೆ: Mathematics ಕ್ಯಾಟೆಗರಿಯ ಅಡಿಯಲ್ಲಿ, Linear Algebra ಎಂಬ ಒಂದು ಹೊಸ ಕೋರ್ಸ್ ಅನ್ನು ರಚಿಸಿ. |
10:44 | ಸಧ್ಯಕ್ಕೆ ಈ ಕೋರ್ಸ್ ಅನ್ನು ಅಡಗಿಸಿಡಿ. |
10:47 | course summary ಯಲ್ಲಿ ಕೆಳಗಿನ ವಿಷಯಗಳನ್ನು ನಮೂದಿಸಿ: Linear equations, Matrices ಮತ್ತು Vectors.
Save and Return ಬಟನ್ ಮೇಲೆ ಕ್ಲಿಕ್ ಮಾಡಿ. |
11:00 | ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ. ಅಸೈನ್ಮೆಂಟ್ ಅನ್ನು ಮಾಡಿದ ನಂತರ ಮತ್ತೆ ಮುಂದುವರಿಸಿ. |
11:06 | Mathematics ನ ಅಡಿಯಲ್ಲಿ, ನಾವು ಈಗ 2 ಕೋರ್ಸ್‌ಗಳನ್ನು ಹೊಂದಿದ್ದೇವೆ: Calculus ಹಾಗೂ Linear Algebra. |
11:14 | ಈಗ courses ನ ಬದಿಯಲ್ಲಿ ಒಂದು ಹೊಸ ಐಕಾನ್ ಕಾಣಿಸಿಕೊಂಡಿದೆ ಎಂಬುದನ್ನು ಗಮನಿಸಿ. |
11:20 | ಮೇಲೆ ಮತ್ತು ಕೆಳಗಿನ ಬಾಣದ ಚಿಹ್ನೆಗಳು, ಕೋರ್ಸ್‌ಗಳ ಕ್ರಮವನ್ನು ಹೊಂದಿಸಲು ಇರುತ್ತವೆ. |
11:26 | ಡ್ರ್ಯಾಗ್ ಮತ್ತು ಡ್ರಾಪ್ ಸೌಲಭ್ಯವನ್ನು ಬಳಸಿಕೊಂಡು, ನಾವು ಕ್ರಮವನ್ನು ಬದಲಾಯಿಸಬಹುದು.
Calculus ಕೋರ್ಸ್ ಅನ್ನು ನಾವು Linear Algebra ಕೋರ್ಸ್ ನ ಮೇಲ್ಗಡೆ ಸರಿಸೋಣ. |
11:36 | ಈ ಎರಡೂ ಕೋರ್ಸ್ ಗಳು 1 ನೇ ವರ್ಷದ ವಿದ್ಯಾರ್ಥಿಗಳಿಗಾಗಿ ಇವೆ.
ಆದ್ದರಿಂದ, ಅವುಗಳನ್ನು 1st Year Maths ಸಬ್-ಕ್ಯಾಟೆಗರಿ ಅಡಿಯಲ್ಲಿ ಸೇರಿಸೋಣ. |
11:47 | ಈ 2 ಕೋರ್ಸ್‌ಗಳನ್ನು ಆಯ್ಕೆಮಾಡಲು, ಅವುಗಳ ಎಡಗಡೆಯಿರುವ ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ. |
11:53 | ಆಮೇಲೆ Move selected courses to ಎಂಬ ಡ್ರಾಪ್-ಡೌನ್ ನಲ್ಲಿ, Mathematics / 1st year Maths ಅನ್ನು ಆಯ್ಕೆಮಾಡಿ. |
12:02 | ಮತ್ತು Move ಬಟನ್ ಮೇಲೆ ಕ್ಲಿಕ್ ಮಾಡಿ. |
12:04 | ನಮಗೆ -Successfully moved 2 courses into 1st year Maths ಎಂಬ ಮೆಸೇಜ್ ಸಿಗುತ್ತದೆ. |
12:14 | Mathematics ನ ಅಡಿಯಲ್ಲಿ, ಕೋರ್ಸ್‌ಗಳ ಸಂಖ್ಯೆ 0 (ಸೊನ್ನೆ) ಆಗಿದ್ದು, 1st year Maths ನ ಅಡಿಯಲ್ಲಿ 2 ಆಗಿರುವುದನ್ನು ಗಮನಿಸಿ. |
12:24 | 1st year Maths ಸಬ್-ಕ್ಯಾಟೆಗರಿ ಮೇಲೆ ಕ್ಲಿಕ್ ಮಾಡಿ. |
12:28 | ಈ ಸಬ್-ಕ್ಯಾಟೆಗರಿಯ ಅಡಿಯಲ್ಲಿ, ಪಟ್ಟಿ ಮಾಡಿರುವ ನಮ್ಮ ಕೋರ್ಸ್‌ಗಳನ್ನು ನಾವು ನೋಡಬಹುದು. |
12:33 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
12:38 | ಈ ಟ್ಯುಟೋರಿಯಲ್ ನಲ್ಲಿ ನಾವು:
ಕೋರ್ಸ್ ಅನ್ನು ತಯಾರಿಸುವುದು ಮತ್ತು ಕೋರ್ಸ್ ಗಳಲ್ಲಿ edit, move ಗಳಂತಹ ಕ್ರಿಯೆಗಳನ್ನು ಹೇಗೆ ನಿರ್ವಹಿಸುವುದು ಎಂದು ಕಲಿತಿದ್ದೇವೆ. |
12:50 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
Mathematicsನ ಕೆಳಗೆ, 2nd Year Maths ಎಂಬ ‘ಸಬ್ ಕ್ಯಾಟೆಗರಿ’ಗೆ, |
13:00 | Multivariable calculus ಮತ್ತು Advanced Algebra ಎಂಬ 2 ಕೋರ್ಸ್ ಗಳನ್ನು ಸೇರಿಸಿ. |
13:06 | ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Code files ಲಿಂಕ್ ಅನ್ನು ನೋಡಿ. |
13:12 | 15th October 2017 ಗೆ ಆರಂಭವಾಗುವಂತೆ ಕೋರ್ಸ್ ಗಳನ್ನು ಎಡಿಟ್ ಮಾಡಿ. |
13:18 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
13:26 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
13:36 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
13:40 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
13:53 | ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |