Linux/C3/The-sed-command/Kannada

From Script | Spoken-Tutorial
Jump to: navigation, search


Time Narration
00:01 sed ಎಂದರೆ stream editor ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು sed ಕಮಾಂಡ ನ ಬಳಕೆಯನ್ನು
00:11 ಕೆಲವು ಉದಾಹರಣೆಗಳ ಮೂಲಕ ಕಲಿಯುವೆವು.
00:14 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
00:16 Ubuntu Linux OS 12.04 ನೇ ಆವೃತ್ತಿ ಮತ್ತು GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ.
00:26 ದಯವಿಟ್ಟು ಗಮನಿಸಿ: ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, GNU bash 4 ನೆಯ ಆವೃತ್ತಿ ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಬಳಕೆಯನ್ನು ಶಿಫಾರಸು ಮಾಡಲಾಗಿದೆ.
00:34 ಪೂರ್ವಾಪೇಕ್ಷಿತವಾಗಿ:
00:36 ನೀವು “Linux Terminal” ಬಳಕೆಯನ್ನು ತಿಳಿದಿರಬೇಕು.
00:39 ಸಂಬಂಧಿತ ಟ್ಯುಟೋರಿಯಲ್ಗಳಿಗಾಗಿ, ದಯವಿಟ್ಟು ಕೆಳಗಿನ ವೆಬ್ಸೈಟ್ಗೆ ಭೇಟಿ ನೀಡಿ:

http://spoken-tutorial.org

00:45 sed ನ ಪರಿಚಯದೊಂದಿಗೆ ನಾವು ಆರಂಭಿಸೋಣ:
00:48 sed, ಇದು ಒಂದು stream editor ಆಗಿದೆ .
00:51 sed , ಫೈಲ್ ನ ನಿರ್ದಿಷ್ಟ ಸ್ಥಳಗಳಲ್ಲಿ ಟೆಕ್ಸ್ಟ್ ಗಳ ಕೆಲವು ಪ್ಯಾಟರ್ನ್ ಗಳನ್ನು ಹುಡುಕುತ್ತದೆ.
00:58 ಕೆಲವು ಡಿಸ್ಪ್ಲೇ ಅಥವಾ ಹೊಂದಿಕೆಯಾಗುವ ಟೆಕ್ಸ್ಟ್ ನಲ್ಲಿ,
01:02 ಇದು ಇನ್ಸರ್ಶನ, ಸಬ್ಸ್ಟಿಟ್ಯೂಷನ್ ಮತ್ತು ಡೀಲಿಷನ್ ಮುಂತಾದ ಎಡಿಟಿಂಗ್ ಪಂಕ್ಷನ್ ಗಳನ್ನು ಮಾಡುತ್ತದೆ .
01:10 ನಾವು ಕೆಲವು ಉದಾಹರಣೆಗಳೊಂದಿಗೆ ಪ್ರಾರಂಭಿಸೋಣ.
01:13 sed' ಕಮಾಂಡ್ ಅನ್ನು ಬಳಸಿ, ಪ್ರಿಂಟ್ ಮಾಡುವುದನ್ನು ,ನಾವು ನೋಡೋಣ.
01:19 home directory ಯಲ್ಲಿ 'seddemo.txt' ಎಂಬ ಹೆಸರಿನ ಫೈಲ್ ಅನ್ನು ನಾನು ಹೊಂದಿದ್ದೇನೆ.
01:24 ಅದರ ಕಂಟೆಂಟ್ಸಗಳನ್ನು ನೋಡೋಣ.
01:26 ಈ ಫೈಲ್, roll no, name, stream, marks, pass or fail ಮತ್ತು stipend amount ಗಳಂತಹ ಹಲವು ನಮೂದನೆಗಳನ್ನು ಹೊಂದಿದೆ.
01:39 ಈಗ, ನಾವು ಫೈಲ್ ನ ಎರಡನೆಯ ಸಾಲನ್ನು ಪ್ರಿಂಟ್ ಮಾಡಬೇಕೆಂದರೆ,
01:44 ನಾವು ಟರ್ಮಿನಲ್ ಅನ್ನು ತೆರೆಯಬೇಕು. ಇದಕ್ಕಾಗಿ, ಕೀಬೋರ್ಡ್ ನಲ್ಲಿ Ctrl + Alt ಮತ್ತು T ಕೀಗಳನ್ನು ಏಕಕಾಲದಲ್ಲಿ ಒತ್ತಿರಿ.
01:53 ಈಗ ಟೈಪ್ ಮಾಡಿ:
01:55 sed space within single quotes ‘2p’ after the single quotes space seddemo.txt
02:03 Enter ಅನ್ನು ಒತ್ತಿರಿ.
02:06 2 ಇಲ್ಲಿ, ಎರಡನೆಯ ಸಾಲಿನ ಸ್ಥಳವನ್ನು ಸೂಚಿಸುತ್ತದೆ.
02:11 p , ಯು ಪ್ರಿಂಟ್ ಕ್ರಿಯೆಯನ್ನು ಸೂಚಿಸುತ್ತದೆ .
02:16 ಈಗ ಔಟ್ಪುಟ್ ಅನ್ನು ನೋಡಿ.
02:18 ಇದು ಸಂಪೂರ್ಣ ಫೈಲ್ ಅನ್ನು ತೋರಿಸುತ್ತದೆ. ಆದರೆ ಎರಡನೆಯ ಸಾಲು ಮಾತ್ರ ಎರಡು ಬಾರಿ ಪ್ರಿಂಟ್ ಆಗಿದೆ .
02:25 ಇದು p ಕ್ರಿಯೆಯ ,ಡೀಫಾಲ್ಟ್ ವರ್ತನೆಯಾಗಿದೆ.
02:29 ಎರಡನೇ ಸಾಲನ್ನು ಮಾತ್ರ ಪ್ರಿಂಟ್ ಮಾಡಲು ,
02:31 ಹೀಗೆ ಟೈಪ್ ಮಾಡಿ :
02:33 sed space -n space (Within single quotes) 2p after the single quotes space seddemo.txt
02:44 Enter ಅನ್ನು ಒತ್ತಿರಿ.
02:46 ಎರಡನೇಯ ಸಾಲು ಮಾತ್ರ, ಪ್ರಿಂಟ್ ಆಗಿರುವುದನ್ನು ನಾವು ನೋಡುತ್ತೆವೆ.
02:51 -n, ‘silent mode’ ಅನ್ನು ಪ್ರತಿನಿಧಿಸುತ್ತದೆ. ಇದು ಅನಗತ್ಯ ಔಟ್ಪುಟ್ ಅನ್ನು ತಡೆಹಿಡಿಯುತ್ತದೆ.
02:58 ನಮಗೆ ಎಡಿಟ್ ಅಥವಾ ಡಿಸ್ಪ್ಲೇ ಮಾಡಬೇಕಾಗಿರುವ stream ನಲ್ಲಿಯ ಲೋಕೇಶನ್ ಅನ್ನು ಕೊಡುತ್ತೇವೆ.
03:03 ನಾವು ಎರಡನೇಯ ಸಾಲನ್ನು ಆಯ್ಕೆಮಾಡಲು ಬಯಸುತ್ತೇವೆ.
03:07 p, ಇದು ನಾವು ತೆಗೆದುಕೊಳ್ಳಲು ಬಯಸುವ ಕ್ರಮವನ್ನು ಎಂದರೆ ಎರಡನೆಯ ಸಾಲನ್ನು ಪ್ರಿಂಟ್ ಮಾಡುವುದನ್ನು ಸೂಚಿಸುತ್ತದೆ.
03:12 ಮತ್ತು seddemo.txt ಎಂಬುದು ಫೈಲ್ ನ್ ಹೆಸರು ಆಗಿದೆ.
03:18 ಇದು sed command ನ ಸಿಂಟ್ಯಾಕ್ಸ್ ಆಗಿದೆ.
03:21 ಈಗ ನಾವು ಫೈಲ್ ನ ಕೊನೆಯ ಲೈನ್ ಅನ್ನು ಪ್ರಿಂಟ್ ಮಾಡೋಣ.
03:26 ನಾವು ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ.
03:29 ಈಗ ಟೈಪ್ ಮಾಡಿ  :
03:32 sed space -n space within single quotes (dollar) $p after the single quotes space seddemo.txt
03:42 Enter ಅನ್ನು ಒತ್ತಿರಿ. ಕೊನೆಯ ಸಾಲು, ಪ್ರಿಂಟ್ ಆಗಿರುವುದನ್ನು ನಾವು ನೋಡುತ್ತೇವೆ.
03:49 ನಾವು ಟೆಕ್ಸ್ಟ್- ಎಡಿಟರ್ ಗೆ ಹಿಂತಿರುಗೋಣ.
03:51 ನಮಗೆ 3 ರಿಂದ 6 ನೇಯ ನಮೂದುಗಳನ್ನು ಪ್ರಿಂಟ್ ಮಾಡಬೇಕಾಗಿದೆ ಎಂದುಕೊಳ್ಳಿ.
03:57 ಇದಕ್ಕಾಗಿ, ನಾವು ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡುವೆವು :
04:00 sed space -n space within single quotes 3 (comma) ,6p’ space seddemo.txt
04:14 Enter ಅನ್ನು ಒತ್ತಿರಿ.
04:16 ಮೂರನೆಯ ಸಾಲಿನಿಂದ ಆರನೇ ಸಾಲಿನವರಗೆ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲಾಗಿದೆ.
04:21 ಯಾವುದೇ ಕ್ರಿಯೆಯ ಮೊದಲು (!) (exclamation) ಚಿಹ್ನೆಯನ್ನು ಬಳಸಿ, ಆ ಕ್ರಿಯೆಯನ್ನು ರಿವರ್ಸ ಮಾಡಬಹುದು.
04:28 ಒಂದು ವೇಳೆ, ನಾವು 3 ರಿಂದ 6 ರ ಹೊರತುಪಡಿಸಿ ಎಲ್ಲಾ ಸಾಲುಗಳನ್ನು ಪ್ರಿಂಟ್ ಮಾಡಬೇಕೆಂದರೆ , ಹೀಗೆ ಟೈಪ್ ಮಾಡುತ್ತೇವೆ:

sed space -n space within single quotes ‘3 (comma) ,6 (exclamation mark) !p

04:44 after the single quotes space seddemo.txt
04:51 Enter ಅನ್ನು ಒತ್ತಿರಿ.
04:53 ಔಟ್ಪುಟ್ ಅನ್ನು ತೋರಿಸಲಾಗಿದೆ .
04:56 ನಾವು ಸ್ಲೈಡ್ ಗಳಿಗೆ ಹಿಂತಿರೋಗೋಣ.
04:58 Line addressing ಮತ್ತುcontext addressing.
05:03 ಇಲ್ಲಿಯವರೆಗೆ, ನಾವು ಕ್ರಿಯೆಯನ್ನು ತೆಗೆದುಕೊಳ್ಳಬೇಕಾದ ಸಾಲುಗಳನ್ನು ಫೈಲ್ನಲ್ಲಿ ಸೂಚಿಸಿದ್ದೇವೆ .
05:09 ಇದನ್ನು ಲೈನ್ ಸಂಖ್ಯೆಗಳಿಂದ ಸೂಚಿಸಲಾದ ಅಡ್ರೆಸ್
05:12 ಅರ್ಥಾತ್ line addressingಎಂದು ಕರೆಯಲಾಗುತ್ತದೆ.
05:15 ಇದು ಒಂದು ರೀತಿಯ ಅಡ್ರೆಸ್ಸಿಂಗ್ ಮಾಡುವ ವಿಧಾನವಾಗಿದೆ.
05:18 "context adressing " ಇದು, ಒಂದು ನಿರ್ದಿಷ್ಟ ವಿಷಯ ಅಥವಾ ಶಬ್ದವನ್ನು ಹೊಂದಿರುವ ಸಾಲುಗಳನ್ನು
05:22 ಅಡ್ರೆಸ್ ಮಾಡುವ ಇನ್ನೊಂದು ವಿಧಾನ ಆಗಿದೆ.
05:28 ಒಂದು ನಿರ್ದಿಷ್ಟ ಪದವನ್ನು ಹೊಂದಿರುವ ಸಾಲುಗಳಲ್ಲಿ, ಕ್ರಿಯೆಗಳನ್ನು ತೆಗೆದುಕೊಳ್ಳಲು ನಾವು context addressing ಅನ್ನು ಬಳಸುತ್ತೇವೆ.
05:36 Regular expressions ಗಳನ್ನು ಸಹ ನಾವು ಬಳಸಬಹುದು.
05:39 ನಾವು ಒಂದು ಉದಾಹರಣೆಯನ್ನು ನೋಡೋಣ.
05:42 ನಾವು ನಮ್ಮ ಟೆಕ್ಸ್ಟ್ ಎಡಿಟರ್ ಗೆ ಹಿಂತಿರುಗೋಣ.
05:44 ಒಂದು ವೇಳೆ, ನಾವು computers ಎಂಬ ಪದವನ್ನು ಹೊಂದಿರುವ ಸಾಲುಗಳನ್ನು ಪ್ರಿಂಟ್ ಮಾಡಲು ಬಯಸಿದರೆ,
05:50 ನಾವು ಟರ್ಮಿನಲ್ಗೆ ಹಿಂತಿರುಗೋಣ.
05:53 ಈಗ ಟೈಪ್ ಮಾಡಿ :sed space -n space within single quotes front slash (opening square bracket) [cC] (Closing Square bracket) omputers/p after the single quotesspace seddemo.txt
06:20 Enter ಅನ್ನು ಒತ್ತಿರಿ .
06:23 "computers" ಎಂಬ ಪದವನ್ನು ಹೊಂದಿರುವ ಸಾಲುಗಳನ್ನು ಇದು ತೋರಿಸುತ್ತದೆ.
06:28 ಸ್ಕ್ವೇರ್-ಬ್ರಾಕೆಟ್ಸ್ ಗಳಲ್ಲಿನ ಯಾವುದೇ ಒಂದು ಅಥವಾ ಎರಡೂ ಅಕ್ಷರಗಳನ್ನು ಹೊಂದಿಸಲು,
06:31 ನಾವು ಸ್ಕ್ವೇರ್ ಬ್ರಾಕೆಟ್ಸ್ ಗಳಲ್ಲಿ ಪ್ಯಾಟರ್ನ್ ಗಳನ್ನು ಬರೆಯುತ್ತೇವೆ.
06:36 ನಮಗೆ ಪ್ಯಾಟರ್ನ್ ಗಳನ್ನು ಹೊಂದಿಸಬೇಕಾಗಿದ್ದರೆ, ಪ್ಯಾಟರ್ನ್ ಅನ್ನು ಫ್ರಂಟ್ ಸ್ಲಾಶ್ಗಳ ನಡುವೆ ಟೈಪ್ ಮಾಡಬೇಕು.
06:43 w ಆಯ್ಕೆಯನ್ನು ಬಳಸಿ, ಅದನ್ನು ನಾವು ಫೈಲ್ನಲ್ಲಿ ಪ್ರಿಂಟ್ ಸಹ ಮಾಡಬಹುದು.
06:50 ಇದ್ದಕ್ಕಾಗಿ ಟೈಪ್ ಮಾಡಿ :
06:52 sed space -n space within single quotes front-slash (opening square bracket) [cC] (closing square bracket) omputers/w space computer_student.txt after the single quotes space seddemo.txt
07:18 Enter ಅನ್ನು ಒತ್ತಿರಿ.
07:21 ಈಗ ಎಲ್ಲಾ ಸರಿಹೊಂದುವ ಸಾಲುಗಳನ್ನು computer_student.txt ಫೈಲ್ ಗೆ ವರ್ಗಾಯಿಸಲಾಗುತ್ತದೆ.
07:27 computer_student ನ ಕಂಟೆಂಟ್ ಅನ್ನು ನಾವು ನೋಡೋಣ.
07:31 ಟೈಪ್ ಮಾಡಿ: cat space computer_student.txt
07:38 Enter ಅನ್ನು ಒತ್ತಿರಿ.
07:42 ನಾವು ನಮೂದುಗಳನ್ನು ನೋಡುತ್ತೇವೆ. ನಾವು ವಿಭಿನ್ನ ಫೈಲ್ಗಳಿಗೆ ಬರೆಯಬಹುದಾದ ಪ್ಯಾಟರ್ನ್ ಗಳನ್ನು ಸಹ ಹೊಂದಬಹುದು.
07:50 ನಾವು ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ.
07:52 ಟೈಪ್ ಮಾಡಿ : sed space -n space -e space (within single quotes) (front slash) ‘/electronics/w space electro.txt’ after the single quotes space -e space (within single quotes) (front slash) ‘/civil/w space civil.txt’ after the single quote space seddemo.txt
08:24 Enter ಅನ್ನು ಒತ್ತಿರಿ.
08:28 ಇಲ್ಲಿ ಹಲವಾರು ವಿಧಾನಗಳನ್ನು ಸೇರಿಸಲು -e' ಯನ್ನು ಬಳಸಲಾಗುತ್ತದೆ.
08:34 ಇದು electro.txt ಮತ್ತು civil.txt ಎಂಬ ಎರಡು ಫೈಲ್ ಗಳನ್ನು ರಚಿಸುತ್ತದೆ.
08:41 ಅವುಗಳಲ್ಲಿ ಇರುವುದನ್ನು ನೋಡಲು, ಹೀಗೆ ಟೈಪ್ ಮಾಡಿ:
08:43 cat space electro.txt .
08:49 ಇದು "electronics" ಎಂಬ ಪದದೊಂದಿಗೆ ಇರುವ ನಮೂದುಗಳನ್ನು ಪ್ರದರ್ಶಿಸುತ್ತದೆ.
08:54 ನಾವು civil ಎಂಬ ಫೈಲ್ನಲ್ಲಿ ಇರುವುದನ್ನು ನೋಡೋಣ.
08:58 ಇದ್ದಕೆ ಟೈಪ್ ಮಾಡಿರಿ: cat space civil.txt
09:01 Enter ಅನ್ನು ಒತ್ತಿರಿ.
09:03 ಇದು "civil" ಎಂಬ ಪದವನ್ನು ಹೊಂದಿರುವ ನಮೂದುಗಳನ್ನು ತೋರಿಸುತ್ತದೆ.
09:08 ನಾವು ಮತ್ತೊಂದು ಟ್ಯುಟೋರಿಯಲ್ ನಲ್ಲಿ ಇನ್ನೂ ಹೆಚ್ಚಿನ ಕಮಾಂಡ್ ಗಳನ್ನು ನೋಡುವೆವು.
09:12 ನಾನು ಅದೇ ಪ್ರೋಗ್ರಾಂ ಅನ್ನು ಬಳಸುತ್ತೇನೆ.
09:14 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
09:18 ನಾವು ನಮ್ಮ ಸ್ಲೈಡ್ ಗೆ ಹಿಂತಿರುಗೋಣ.
09:20 ಸಂಕ್ಷಿಪ್ತವಾಗಿ,
09:22 ಈ ಟ್ಯುಟೋರಿಯಲ್ ನಲ್ಲಿ, ನಾವು :
09:25 sed, ಸೆಡ್ ಅನ್ನು ಬಳಸಿ ಪ್ರಿಂಟ್ ಮಾಡಲು, ಲೈನ್ ಅಡ್ದ್ರೆಸ್ಸಿಂಗ್ ಮತ್ತು
09:27 Context ಅಡ್ದ್ರೆಸ್ಸಿಂಗ್ ಇವುಗಳನ್ನು ಕಲಿತಿದ್ದೇವೆ.
09:30 ಒಂದು ಅಸೈನ್ಮೆಂಟ್,
09:32 ಅದೇ ಟೆಕ್ಸ್ಟ್ ಫೈಲ್ seddemo.txt ಅನ್ನು ಬಳಸಿ,
09:35 6 ರಿಂದ 12 ನೇ ಸಾಲಿನ ರೆಕಾರ್ಡ್ ಗಳನ್ನು ಪ್ರಿಂಟ್ ಮಾಡಲು ಪ್ರಯತ್ನಿಸಿ.
09:40 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
09:42 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
09:46 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:51 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
09:53 * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
09:55 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:00 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
10:07 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
10:11 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:18 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

10:25 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಮತ್ತು ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Glorianandihal