Linux/C3/The-grep-command/Kannada

From Script | Spoken-Tutorial
Jump to: navigation, search
Time Narration
00:01 grep ಕಮಾಂಡ್ ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ .
00:05 ಈ ಟ್ಯುಟೋರಿಯಲ್ ನಲ್ಲಿ ನಾವು ,“'grep command “' ಬಗ್ಗೆ
00:09 ಕೆಲವು ಉದಾಹರಣೆಗಳ ಸಹಾಯದಿಂದ ಕಲಿಯುವೆವು.
00:11 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
00:15 'Ubuntu Linux OS 12.04 ನೇ ಆವೃತ್ತಿ ಮತ್ತು
00:20 GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ.
00:24 ದಯವಿಟ್ಟು ಗಮನಿಸಿ :ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು , GNU bash 4 ನೇ ಆವೃತ್ತಿ ಅಥವಾ ಅದಕ್ಕಿಂತ ಹೆಚ್ಚೇನ ಆವೃತ್ತಿಯನ್ನು ಬಯೆಕೆಯನ್ನು ಶಿಫಾರಸು ಮಾಡಲಾಗಿದೆ.
00:32 ಪೂರ್ವಾಪೇಕ್ಷಿತವಾಗಿ ,ನೀವು “Linux Terminal” ಬಳಕೆಯನ್ನು ತಿಳಿದಿರಬೇಕು.
00:36 ಸಂಬಂಧಿತ ಟ್ಯುಟೋರಿಯಲ್ಗಳಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಗೆ ಭೇಟಿ ನೀಡಿ:

http://spoken-tutorial.org

00:41 ಮೊದಲು ನಾವು regular expressions ಬಗ್ಗೆ ತಿಳೆಯೋಣ.
00:45 ರೆಗ್ಯುಲರ್ ಎಕ್ಸ್ಪ್ರೆಶನ್ಸ್ , ಪ್ಯಾಟರ್ನ್ ಹೊಂದಾಣಿಕೆಯ ತಂತ್ರಗಳಾಗಿವೆ .
00:50 ಒಂದು ಸಾಲಿನಲ್ಲಿ , ಪ್ಯಾರಾಗ್ರಾಫ್ ನಲ್ಲಿ ಅಥವಾ ಫೈಲ್ನಲ್ಲಿ , ಪ್ಯಾಟರ್ನ್ ಇರುವುದನ್ನು ನಾವು ಕಂಡುಹಿಡಿಯಲು  :
00:56 ಉದಾಹರಣೆಗೆ, ನಾವು 'grep ' ಕಮಾಂಡ್ ಅನ್ನು ಟೆಲಿಫೋನ್ ಡೈರೆಕ್ಟರಿಯಲ್ಲಿ ಫೋನ್ ಸಂಖ್ಯೆಯನ್ನು ಅಥವಾ
01:02 ಪ್ಯಾರಾಗ್ರಾಫ್ ಅಥವಾ ಸಾಲಿನಲ್ಲಿ ಕೀವರ್ಡ್ ಅನ್ನು ಹುಡುಕಲು ಬಳಸುತ್ತೇವೆ.

ನಾವು 'grep' ಬಗ್ಗೆ ತಿಳಿಯೋಣ.

01:11 ಒಂದಕ್ಕಿಂತ ಹೆಚ್ಚಿನ ಪ್ಯಾಟರ್ನ್ ಅನ್ನು : ಸಾಲಿನಲ್ಲಿ , ಪ್ಯಾರಾಗ್ರಾಫ್ನಲ್ಲಿ ಅಥವಾ ಫೈಲ್ನಲ್ಲಿ 'grep ಕಂಡುಹಿಡಿಯುತ್ತದೆ.
01:17 ಫೈಲ್ ನ ಹೆಸರನ್ನು ಉಲ್ಲೇಖಿಸದಿದ್ದಲ್ಲಿ, ಅಥವಾ ಫೈಲ್ ಕಾಣೆಯಾದಲ್ಲಿ,
01:23 ಪ್ಯಾಟರ್ನ್ ಗಳನ್ನು 'grep' , "ಸ್ಟ್ಯಾಂಡರ್ಡ್ ಇನ್ಪುಟ್" ನಲ್ಲಿ ಹುಡುಕುತ್ತದೆ.
01:30 grepdemo.txt ಎಂಬ ಡೆಮೊ ಫೈಲ್ ಅನ್ನು ಬಳಸಿಕೊಂಡು, ನಾನು grep ಬಳಕೆಯನ್ನು ವಿವರಿಸುತ್ತೇನೆ .
01:37 ಫೈಲ್ನ ಕಂಟೆಂಟ್ ಅನ್ನು ನಾವು ನೋಡೋಣ.
01:40 ಇದು 13 ನಮೂದನೆಗಳನ್ನು (entries) ಹೊಂದಿರುವ ಫೈಲ್ ಆಗಿದೆ.
01:44 ಪ್ರತಿಯೊಂದು ನಮೂದನೆಯು,6 ಫೀಲ್ಡ್ಸ್ (fields )ಗಳನ್ನು ಹೊಂದಿದೆ : roll number, name, stream, marks, ಮತ್ತು stipend amount.
01:52 ಈ ಫೀಲ್ಡ್ಸ್ (fields) ಗಳನ್ನು ಬಾರ್ ನಿಂದ ಬೇರ್ಪಡಿಸಲಾಗುತ್ತದೆ. ಇದನ್ನು delimiterಎಂದು ಕರೆಯಲಾಗುತ್ತದೆ.
01:56 'Grep' ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನಾವು ನೋಡೋಣ.
02:00 ಒಂದು ವೇಳೆ ನಾವು , grep ಕಮಾಂಡ್ ಅನ್ನು ಬಳಸಿ , computers stream ನಲ್ಲಿರುವ ವಿದ್ಯಾರ್ಥಿಗಳನ್ನು ನೋಡಬೇಕಾಗಿದ್ದರೆ:
02:07 ನಾವು terminal ಅನ್ನು ತೆರೆಯಬೇಕು.
02:10 ಇದಕ್ಕಾಗಿ , ಕೀಬೋರ್ಡ್ ನಲ್ಲಿ 'Ctrl + Alt ಮತ್ತು T' ಕೀಗಳನ್ನು ಏಕಕಾಲದಲ್ಲಿ ಒತ್ತಿರಿ.
02:16 ಈಗ 'Terminal' ನಲ್ಲಿ ಹೀಗೆ ಟೈಪ್ ಮಾಡಿ:
02:18 grep space (within double quotes) computers after the double quotes space grepdemo .txt
02:27 Enter ಅನ್ನು ಒತ್ತಿರಿ. ಇದು computers ಸ್ಟ್ರೀಮ್ ನಲ್ಲಿರುವವವರ ನಮೂದನೆಗಳ್ಳನು ಸೇರಿಸುತದೆ .
02:33 ಈಗ ಮೂಲ ಫೈಲ್ನೊಂದಿಗೆ ಫಲಿತಾಂಶವನ್ನು ಹೋಲಿಕೆ ಮಾಡಿ.
02:37 ಟೆಕ್ಸ್ಟ್ ಎಡಿಟರ್ಗೆ ಹಿಂತಿರುಗೋನಾ .
02:40 ಇಲ್ಲಿ Zubin ನನ್ನು ಸೇರಿಸಲಾಗಿಲ್ಲ ಎಂಬುದನ್ನು ನಾವು ನೋಡುತ್ತೇವೆ .
02:45 ಹೀಗೆ ಏಕೆ? 'Grep' ಸಣ್ಣ 'c ಪ್ಯಾಟರ್ನ್ ಹೊಂದಿರುವ "computers" ನ್ನು ಹುಡುಕಿದೆ.
02:52 ಆದರೆ Zubin ನ “Computers” ಸ್ಟ್ರೀಮ್ ಪ್ಯಾಟರ್ನ್ ಕ್ಯಾಪಿಟಲ್ "c" ಆಗಿದೆ .
02:57 ಪ್ಯಾಟರ್ನ್ ಹೊಂದಾಣಿಕೆಯೂ ಕೇಸ್ ಸೆನ್ಸಿಟಿವ್ ಆಗಿದೆ.
03:00 ಇದನ್ನು ಕೇಸ್ ಇನ್ಸೆನ್ಸಿಟಿವ್ ಮಾಡಲು , ನಾವು grep ಆಯ್ಕೆಯ ಜೊತೆಗೆ minus i (-i) ಆಯ್ಕೆಯನ್ನು ಬಳಸಬೇಕು .
03:06 ನಮ್ಮ ಟರ್ಮಿನಲ್ಗೆ ಹಿಂತಿರುಗಿ, ಹೀಗೆ ಟೈಪ್ ಮಾಡುವೆವು :grep space (minus) i space (within double quotes) “computers” after the double quotes space grepdemo.txt
03:20 Enter ಅನ್ನು ಒತ್ತಿರಿ. ಇದೀಗ ಎಲ್ಲಾ ನಾಲ್ಕು ನಮೂದನೆಗಳ್ಳು ಸೇರ್ಪಡೆ ಆಗುತವೆ.
03:25 ನಾವು ನೋಡಿದಂತೆ, 'grep' , ನಿರ್ದಿಷ್ಟ ಪ್ಯಾಟರ್ನ್ ಗೆ ಹೋಲಿಕೆಯಾಗುವ ,ಫೈಲ್ ಗಳಲ್ಲಿಯ ಸಾಲುಗಳನ್ನು ಮಾತ್ರ ಪಟ್ಟಿಮಾಡುತ್ತದೆ .
03:32 ನಾವು ಇದನ್ನು ಇದರ ವಿರುದ್ಧವಾಗಿಯೂ ಮಾಡಬಹುದು.
03:34 ನಾವು ಪ್ಯಾಟರ್ನ್ ಹೊಂದಿರದ ಸಾಲುಗಳನ್ನು ಸೇರಿಸಲು, "grep" ಅನ್ನು ಬಳಸಬಹುದು .
03:40 ಅದಕ್ಕಾಗಿ ನಾವು minus v ಆಯ್ಕೆಯನ್ನು ಹೊಂದಿರುತ್ತೇವೆ.
03:43 ಒಂದು ವೇಳೆ , ನಮಗೆ ವಿಫಲವಾದ ವಿದ್ಯಾರ್ಥಿಗಳ ನಮೂದನೆಗಳನ್ನು ಸೇರಿಸಬೇಕಾದರೆ,
03:48 ನಾವು ಈ ಫಲಿತಾಂಶವನ್ನು ಇನ್ನೊಂದು ಫೈಲ್ನಲ್ಲಿ ಸ್ಟೋರ್ ಮಾಡಬಹುದು.
03:52 ಇದಕ್ಕಾಗಿ ಹೀಗೆ ಟೈಪ್ ಮಾಡಿ : grep space minus iv space within double quotes pass after the double quotes space grepdemo.txt space greater than sign space notpass.txt
04:11 ’’’Enter’’’ ಅನ್ನು ಒತ್ತಿರಿ. ಫೈಲ್ನ ಕಂಟೆಂಟ್ ನೋಡಲು ಹೀಗೆ ಟೈಪ್ ಮಾಡಿ: cat space notpass.txt
04:20 Enter ಅನ್ನು ಒತ್ತಿರಿ. ನಿಮಗೆ ಔಟ್ಪುಟ್ ಅನ್ನು ತೋರಿಸಲಾಗಿದೆ .
04:24 ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ :
04:26 grep space minus i space' within double quotes fail after the double quotes space grepdemo.txt
04:37 ಮತ್ತು Enter ಅನ್ನು ಒತ್ತಿರಿ. ಇದು ವಿಭಿನ್ನವಾಗಿದೆ.
04:41 ಇದು ವಿಫಲವಾದ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ , ಆದರೆ ಅವರ ಫಲಿತಾಂಶವು ಅಪೂರ್ಣವಾಗಿರುತ್ತದೆ .
04:46 ಪಟ್ಟಿಮಾಡಿದ ನಮೂದನೆಗಳನ್ನು ಹೊಂದಿರುವ ಫೈಲ್ ಗಳ ಸಾಲಿನ ನಂಬರ್ ಅನ್ನು ನೋಡಲು, minus n ಆಯ್ಕೆಯನ್ನು ಬಳಸುತ್ತೇವೆ.
04:54 ನಾವು ಪ್ರಾಂಪ್ಟ್ ಅನ್ನು ಕ್ಲಿಯರ್ ಮಾಡೋಣ.
04:58 ಈಗ ಟೈಪ್ ಮಾಡಿ :grep space -in space within double quote "fail" after the double quotes space grepdemo.txt.
05:09 ”’Enter”’ ಅನ್ನು ಒತ್ತಿರಿ.
05:11 ಸಾಲಿನ ಸಂಖ್ಯೆಯನ್ನು ತೋರಿಸಲಾಗಿದೆ.
05:15 ಇಲ್ಲಿಯವರೆಗೆ ಒಂದೇ ಪದವನ್ನು ಹೊಂದಿದ ಪ್ಯಾಟರ್ನ್ ಗಳನ್ನು ನಾವು ನೋಡಿದೆವು .
05:18 ಬಹು-ಪದದ ಪ್ಯಾಟರ್ನ್ ಗಳನ್ನು ಸಹ ನಾವು ಹೊಂದಿರಬಹುದು.
05:21 ಇದಕ್ಕೆ ಪ್ಯಾಟರ್ನ್ಗಳು ಕ್ವೋಟ್ಸ ನ ಒಳಗೆ ಬರೆಯಬೇಕು.
05:24 ಟೈಪ್ ಮಾಡಿ : grep space minus i spacewithin double quotes ankit space saraf after the double quotes space grepdemo.txt
05:38 Enter ಅನ್ನು ಒತ್ತಿ.
05:40 Ankit Saraf'ನ ದಾಖಲೆಯನ್ನು ತೋರಿಸಿರುವುದನ್ನು ನಾವು ನೋಡುತ್ತೇವೆ.
05:44 ನಾವು ಪ್ಯಾಟರ್ನ್ಗಳನ್ನು ಬಹು ಫೈಲ್ಗಳಲ್ಲಿ ಸಹ ಕಾಣಬಹುದು.
05:48 ಅದಕ್ಕೆ ಟೈಪ್ ಮಾಡಿ : grep space minus i space within double quotes fail after double quotes space grepdemo.txt space notpass.txt
06:03 Enter ಅನ್ನು ಒತ್ತಿ . ನಿಮಗೆ ಔಟ್ಪುಟ್ ಅನ್ನು ತೋರಿಸಲಾಗಿದೆ .
06:07 ಒಂದಕ್ಕಿಂತ ಹೆಚ್ಚು ಫೈಲ್ಗಲ್ಲಿದಾಗ , ಯಾವ್ ಫೈಲ್ಗಳು , ಈ ಪ್ಯಾಟರ್ನ್ ಅನ್ನು ಹೊಂದಿವೆಯೋ , ಆ ಫೈಲ್ ಗಳ ಹೆಸರ್ ಅನ್ನು 'grep' ಬರೆಯುತ್ತದೆ .

'Grepdemo.txt' ಮತ್ತು 'notpass.txt' .

06:18 ಇವುಗಳು 'notpass.txt' ಫೈಲ್ ದಿಂದ ಮತ್ತು ಇವುಗಳು ' 'grepdemo.txt' ಫೈಲ್ ದಿಂದ ಬಂದ ರೆಕಾರ್ಡ್ ಗಳಾಗಿವೆ.
06:26 ಇವಾಗ , ನಮಗೆ ಕೇವಲnumber of matches ಅಥವಾ count ಬಗ್ಗೆ ತಿಳಿಯಬೇಕಾಗಿದ್ದರೆ ,
06:31 ನಾವು minus c ಆಯ್ಕೆಯನ್ನು ಹೊಂದಿರುತ್ತೇವೆ.
06:35 ಅದಕ್ಕೆ ಟೈಪ್ ಮಾಡಿ : grep space minus c spacewithin double quotes Fail with a capital F after the quotes space grepdemo.txt
06:48 Enter ಅನ್ನು ಒತ್ತಿ.
06:50 ಇದು ನಮಗೆ ಸರಿಹೊಂದುವ ಸಾಲುಗಳ count ಅನ್ನು ನೀಡುತ್ತದೆ.
06:55 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
06:59 ಸಂಕ್ಷಿಪ್ತವಾಗಿ :
07:01 ಈ ಟ್ಯುಟೋರಿಯಲ್ ನಲ್ಲಿ, ನಾವು :
07:03 ಒಂದು ಫೈಲ್ ಅನ್ನು ಕಂಟೆಂಟ್ಸ ನೋಡಲು, ಉದಾಹರಣೆಗೆ cat filename.
07:07 ನಿರ್ದಿಷ್ಟ ಸ್ಟ್ರೀಮ್ನ ನಮೂದುಗಳನ್ನು ಪಟ್ಟಿ ಮಾಡಲು, ಉದಾಹರಣೆಗೆ grep “computers” grepdemo.txt.
07:14 ಕೇಸ್ಗಳನ್ನು ನಿರ್ಲಕ್ಷಿಸಲು, ಉದಾಹರಣೆಗೆ grep -i “computers” grepdemo.txt.
07:21 ಪ್ಯಾಟರ್ನ್ಸ್ ಹೊಂದಿಕೆಯಾಗದಂತಹ ಸಾಲುಗಳು, ಉದಾಹರಣೆಗೆ , grep -iv “pass” grepdemo.txt.
07:30 ನಮೂದುಗಳೊಂದಿಗೆ ಲೈನ್ ಸಂಖ್ಯೆಗಳನ್ನು ಪಟ್ಟಿ ಮಾಡಲು, ಉದಾಹರಣೆಗೆ grep -in “fail” grepdemo.txt.
07:38 ಫಲಿತಾಂಶವನ್ನು ಮತ್ತೊಂದು ಫೈಲ್ನಲ್ಲಿ ಸ್ಟೋರ್ ಮಾಡಲು ,ಉದಾಹರಣೆಗೆ, grep -iv “pass” grepdemo.txt > notpass.txt.
07:50 ಮತ್ತು count ಅನ್ನು ತಿಳಿಯಲು, ಉದಾಹರಣೆಗೆ ' grep -c “Fail” grepdemo.txt ' ಕಲಿತಿದ್ದೇವೆ .
07:57 ಒಂದು ಅಸೈನ್ಮೆಂಟ್ ,-E, + and ? ನಂತಹ ಕೆಲವು ಇತರ ಕಮಾಂಡ್ ಗಳ್ಳನು ತಿಳಿಯಿರಿ .
08:04 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
08:06 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
08:10 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:14 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ
08:16 ಕಾರ್ಯಶಾಲೆಗಳನ್ನು ನಡೆಸುತ್ತದೆ.
08:19 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:23 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
08:30 ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
08:33 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:40 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

08:45 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕ Lohit P ಮತ್ತು ಪ್ರವಾಚಕಿ Gloria Nandihal .

ಧನ್ಯವಾದಗಳು.|-

Contributors and Content Editors

Glorianandihal